ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ್ ಶೆಟ್ಟಿಯವರ ನೇತೃತ್ವದಲ್ಲಿ ಪ್ರತೀ ವರ್ಷ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊಡಲ್ಪಡುವ ಧನ ಸಹಾಯ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ಬಂಟ ಬಂಧುಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವಾರ್ಷಿಕ ವಿಧವಾ ವೇತನ, ಮತ್ತು ಮಾನಸಿಕ ಅಸ್ವಸ್ಥೆಯಲ್ಲಿರುವ ಯಾ ವಿಕಲಾಂಗ ಚೇತನರಿಗೆ ಆರ್ಥಿಕ ಧನ ಸಹಾಯ ವಿತರಣೆಯು ಜೂನ್ ತಿಂಗಳಲ್ಲಿ ನಡೆಯಲಿದೆ.
ಆ ಪ್ರಯುಕ್ತ ಅರ್ಜಿ ವಿತರಣೆಯು ಬಂಟರ ಸಂಘ ಮುಂಬಯಿ ಇದರ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿಯವರ ಸಮಕ್ಷಮದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದಗುತ್ತು ಇವರ ಮುಂದಾಳಾತ್ವದಲ್ಲಿ ಮಾರ್ಚ್ 23ರ ಶನಿವಾರದಂದು ಹೋಟೆಲ್ ಕ್ರೌನ್ ಬಿಸಿನೆಸ್, ಗೋಲ್ಡನ್ ನೆಸ್ಟ್ ಸರ್ಕಲ್ ಬಳಿ, ಮೀರಾ -ಭಾಯಂದರ್ ರೋಡ್ ಇಲ್ಲಿ ಸಂಜೆ 6:00 ರಿಂದ 7ರ ತನಕ ನಡೆಯಲಿರುವುದು.
ಇದರ ಲಾಭವನ್ನು ಪಡೆಯಲಿಚ್ಛಿಸುವ ಸಮಾಜ ಬಾಂಧವರು ಸಮಯಕ್ಕೆ ಸರಿಯಾಗಿ ಹಾಜರಿದ್ದು ಸಹಾಯ ಧನ ವಿತರಣೆಯ ಲಾಭವನ್ನು ಪಡೆದುಕೊಳ್ಳಬಹುದು. ಅರ್ಜಿಯನ್ನು ಪಡೆಯಲಿಚ್ಛಿಸುವ ಸಮಾಜ ಬಾಂಧವರು ತಮ್ಮ ಗುರುತು ಪತ್ರ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮನೆಯ ವಿದ್ಯುತ್ ಬಿಲ್ ಪ್ರತಿ, ಮಕ್ಕಳ ಇತ್ತೀಚಿನ ಶಾಲಾ ದಾಖಲೆ (ಮಾರ್ಕ್ಸ್ ಕಾರ್ಡ್), ಭಾವ ಚಿತ್ರ, ವಿಧವಾ ವೇತನ ಮತ್ತು ವಿಕಲಾಂಗ ಚೇತನದ ಲಾಭ ಪಡೆಯಲಿಚ್ಛಿಸುವಸಮಾಜ ಬಾಂಧವರು ಸಂಬಂಧ ಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು. ಅರ್ಜಿ ಪಡೆಯಲಿಚ್ಛಿಸುವ ಅರ್ಜಿದಾರರು ಬಂಟರ ಸಂಘ ಮುಂಬಯಿ ಇದರ ಸದಸ್ಯತ್ವವನ್ನು ಹೊಂದಿರಬೇಕು. ಮಾತ್ರವಲ್ಲದೆ ಸದಸ್ಯತನದ ಪ್ರತಿಯನ್ನು ಅರ್ಜಿಯಲ್ಲಿ ಲಗತ್ತೀಕರೀಸತಕ್ಕದು. ಅರ್ಜಿಯನ್ನು ಕೇವಲ ವಿದ್ಯಾರ್ಥಿಗಳಿಗೆ, ವಿಧವೆಯವರಿಗೆ, ವಿಕಲಾಂಗ ಚೇತನರಿಗೆ ಸ್ವತಃ ಯಾ ಅವರವರ ಮಾತಾ ಪಿತರ ಯಾ ಪೋಷಕರಿಗೆ ಮಾತ್ರ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು (9967325878), ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು (9223481670), ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು (9819200707)ಕ್ಕೆ ಸಂಪರ್ಕಿಸಬಹುದು.