ತುಳು ಭಾಷೆಯ ಉಳಿವಿಗಾಗಿ ಮತ್ತು ಔನ್ನತ್ಯಕ್ಕಾಗಿ ಅಮೆರಿಕಾದ ಎಲ್ಲಾ ತುಳುವರನ್ನು ಸೇರಿಸಿಕೊಂಡು ಸ್ಥಾಪನೆಯಾದ ಆಲ್ ಅಮೆರಿಕಾ ತುಳು ಅಸೋಸಿಯೇಷನ್ AATA ಎಂದಿನಂತೆ ಈ ವರ್ಷದ ಬಿಸು ಆಚರಣೆಯನ್ನು ಎಪ್ರಿಲ್ 21ನೇ ತಾರೀಕು ಆದಿತ್ಯವಾರದಂದು ಹಮ್ಮಿಕೊಂಡಿದೆ. ಡಿಜಿಟಲ್ ವರ್ಚುಯಲ್ ವೇದಿಕೆಯಲ್ಲಿ ನಡೆಯುವ ಈ ಬಿಸು ಪರ್ಬ ಕಾರ್ಯಕ್ರಮ ಅಮೇರಿಕಾದ ಸಮಯ ಬೆಳಿಗ್ಗೆ 11:00 ಗಂಟೆಗೆ ನಡೆಯಲಿದ್ದು ಭಾರತದಲ್ಲಿ ತುಳುವರು ರಾತ್ರಿ 8.30 ರ ಸಮಯದಲ್ಲಿ YOUTUBE ನ ನೇರಪ್ರಸಾರದಲ್ಲಿ https://www.aa tana.org/bisu _parba_2024 ಮೂಲಕ ನೋಡಬಹುದಾಗಿದೆ.
ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಕ್ಷೇತ್ರ ಇವರ ಶುಭ ಅಶೀರ್ವಚನದೊಂದಿಗೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ NETK ಮತ್ತು ಕಲಾತರಂಗಿಣಿ ಸ್ಥಾಪಕರಾದ ಹಾಗೂ AATA ಸಂಸ್ಥೆಯ ಮಹಾಪೋಷಕರಾದ ಅಮೆರಿಕಾದ ಹೆಮ್ಮೆಯ ತುಳುವ ಡಾ. ಸುಧಾಕರ್ ರಾವ್ ಮತ್ತು ತುಳು ಸಂಗೀತ ಸಾಹಿತ್ಯ ಅಭಿವೃದ್ಧಿಗಾಗಿ ಹುಟ್ಟಿಕೊಂಡ ಸಂಸ್ಥೆ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ಇದರ ಸ್ಥಾಪಕ ಸದಸ್ಯರಾದ ತುಳು ಕನ್ನಡ ಸಾಹಿತಿ ಶಾಂತಾರಾಮ್ ವಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿದೇಶದಲ್ಲಿರುವ ತುಳು ಯುವಕ ಯುವತಿಯರಿಗೆ ಸಹಾಯಕವಾಗಲೆಂದು ವಿವಾಹ ವೇದಿಕೆಯೊಂದನ್ನು ಬಿಡುಗಡೆಗೊಳಿಸಲು ಸಂಸ್ಥೆ ತಯಾರಿ ಮಾಡಿಕೊಂಡಿದೆ.
ಸಭಾ ಕಾರ್ಯಕ್ರಮದ ನಂತರ ಅಮೇರಿಕಾ ಮತ್ತು ಕೆನಡಾ ದೇಶದ ತುಳುವರು ಸೇರಿ ತುಳುವ ಸಂಸ್ಕೃತಿ ಬಿಂಬಿಸುವ ಸುಮಾರು ಎರಡು ಗಂಟೆಗಳ ಕಾಲ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು AATA ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್ ತಿಳಿಸಿದ್ದಾರೆ.
ದೇಶ ವಿದೇಶದ ಎಲ್ಲಾ ತುಳುವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತುಳು ಭಾಷೆಯ ಬೆಳವಣಿಗೆಯಲ್ಲಿ ಸಹಕರಿಸಬೇಕೆಂದು ಆಟ ಸಂಸ್ಥೆಯ ಉಪಾಧ್ಯಕ್ಷರುಗಳಾದ ಶಿರಿಶ್ ಶೆಟ್ಟಿ, ಸುದರ್ಶನ್ ಶೆಟ್ಟಿ, ಮಹಾ ಕಾರ್ಯದರ್ಶಿ ಪೂಜಾ ಶೆಟ್ಟಿ, ಖಜಾಂಜಿ ಸಂತೋಷ್ ಶೆಟ್ಟಿ, ಜತೆ ಕಾರ್ಯದರ್ಶಿ ರಂಜನಿ ಅಸೈಗೋಳಿ, ಸಹ ಖಜಾಂಜಿ ಸುದೀಪ್ ಹೆಬ್ಬಾರ್, ಸಾಂಸ್ಕೃತಿಕ ಕಾರ್ಯದರ್ಶಿ ವಿವಸ್ವಾನ್ ಶೆಟ್ಟಿ, ಯುವ ರಾಯಭಾರಿ ಆರ್ಯಮಾನ್ ಶೆಟ್ಟಿ ಮತ್ತು ಚೇರ್ ಪರ್ಸನ್ ಮೋಹನ್ ಚಂದ್ರ ಕೆಪಿ ಹಾಗೂ ಭಾಸ್ಕರ್ ಶೇರಿಗಾರ್ ಮನವಿ ಮಾಡಿಕೊಂಡಿದ್ದಾರೆ.