Author: admin

ದಿವಂಗತ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್ ಅವರ ಆಪ್ತರಲ್ಲಿ ಓರ್ವ ಮುಂಬಯಿಯ ಯುವ ಹೋಟೆಲ್ ಉದ್ಯಮಿ ಆದರ್ಶ್ ಶೆಟ್ಟಿ ಹಾಲಾಡಿ ಅವರದ್ದು ವಿಶೇಷ ವ್ಯಕ್ತಿತ್ವ. ಸಣ್ಣ ಪ್ರಾಯದಲ್ಲೇ ಹೋಟೆಲ್ ಉದ್ಯಮ ಪ್ರಾರಂಭಿಸಿ ಯಶಸ್ವೀಯಾಗಿ ಸಮಾಜಸೇವೆ ಮಾಡುತ್ತಾ ಬರುತ್ತಿರುವ ಆದರ್ಶ್ ಶೆಟ್ಟರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ನಮ್ಮ ಫೇಸ್ಬುಕ್ ಪೇಜನ್ನು ಲೈಕ್ ಮಾಡಿ ಪ್ರೋತ್ಸಾಹಿಸಿ.

Read More

ಬಂಟರ ಸಂಘ (ರಿ) ಸುರತ್ಕಲ್ ಇದರ ವತಿಯಿಂದ ವಸತಿ ಯೋಜನೆಯಡಿ ಕಾಟಿಪಳ್ಳ – ಕೃಷ್ಣಾಪುರ ಗ್ರಾಮದ ನಿವಾಸಿ ಸೂರಜ್ ಶೆಟ್ಟಿ ಅವರಿಗೆ ಕಟ್ಟಿ ಕೊಡಲಾಗುವ ಮನೆಗೆ ಭೂಮಿ ಪೂಜೆ ನೆರವೇರಿಸಲಾಯಿತು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಭೂಮಿ ಪೂಜೆ ನೆರವೇರಿಸಿದರು. ಸುರತ್ಕಲ್ ಬಂಟರ ಸಂಘದಿಂದ ಈಗಾಗಲೇ ಐದಾರು ಮನೆಗಳನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕಟ್ಟಿಕೊಡಲಾಗಿದೆ. ಸಮಾಜ ಬಾಂಧವರು ಮತ್ತು ದಾನಿಗಳು ನೆರವಿನ ಸಹಕಾರ ನೀಡಿದಾಗ ಇಂತಹ ಸಮಾಜ‌ಮುಖಿ ಕೆಲಸ ಕಾರ್ಯಗಳನ್ನು ನೆರವೇರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು. ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ವಸತಿ ಸಮಿತಿಯ ಸಂಚಾಲಕ ದೇವೇಂದ್ರ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಮಾಜಿ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಕಾಂತ್ ಶೆಟ್ಟಿ ಬಾಳ, ಪುಷ್ಪರಾಜ ಶೆಟ್ಟಿ ಮದ್ಯ, ಮಹಿಳಾ ವೇದಿಕೆಯ ಅಧ್ಯಕ್ಷೆ ಭವ್ಯಾ ಶೆಟ್ಟಿ, ಕಾರ್ಪೋರೇಟರ್ ಲಕ್ಷ್ಮೀ ದೇವಾಡಿಗ, ನಿರ್ದೇಶಕರಾದ ಸುಜಾತ…

Read More

ದ್ವೀಪದ ಅನಿವಾಸಿ ಬಂಟ ಸಮುದಾಯದ ಒಕ್ಕೂಟವಾದ “ಬಂಟ್ಸ್ ಬಹರೈನ್” ಸಂಘಟನೆ ಇದೀಗ ಯಶಸ್ವಿಯಾಗಿ ಎರಡು ದಶಕಗಳನ್ನು ಪೂರ್ಣಗೊಳಿಸಿದ್ದು ಇದೀಗ ಸಂಘಟನೆಯ ಇಪ್ಪತ್ತನೇ ವಾರ್ಷಿಕೋತ್ಸವಕ್ಕೆ ಕ್ಷಣಗಣನೆ ಪ್ರಾಂಭವಾಗಿದೆ. ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಾ ದ್ವೀಪದ ಬಂಟ ಬಾಂಧವರನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಸಂಘಟನೆಯ ಪ್ರಸಕ್ತ ಅಧ್ಯಕ್ಷರಾಗಿ ಸೌಕೂರು ಅರುಣ್ ಶೆಟ್ಟಿಯವರು ಕಾರ್ಯನಿರ್ವಹಿಸುತ್ತಿದ್ದು ಇವರ ಸಾರಥ್ಯದಲ್ಲಿ ಇದೆ ನವೆಂಬರ್ ತಿಂಗಳ 10ನೇ ತಾರೀಖಿನ ಶುಕ್ರವಾರದಂದು ಬೆಳಗ್ಗೆ 10:30ಕ್ಕೆ ಇಲ್ಲಿನ ಪಂಚತಾರಾ ಹೋಟೆಲ್ ”ಕ್ರೌನ್ ಪ್ಲಾಜಾ” ದ ಸಭಾಂಗಣದಲ್ಲಿ ಇಪ್ಪತ್ತನೆಯ ವಾರ್ಷಿಕೋತ್ಸವವನ್ನು ಅದ್ದೊರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂಟ ಸಮುದಾಯದ ಸಾಧಕರಾದ ಸಮಾಜ ಸೇವಕರೂ, ಕಾಪು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ ಆಗಿರುವ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ನಾಡಿನ ಖ್ಯಾತ ಮೂಳೆ ತಜ್ಞ ಹಾಗೂ ಮುಂಬಯಿಯ ದೀಪಕ್ ಹಾಸ್ಪಿಟಲ್ ನ ಆಡಳಿತ ನಿರ್ದೇಶಕರಾಗಿರುವ ಡಾಕ್ಟರ್ ಭಾಸ್ಕರ್ ಶೆಟ್ಟಿಯವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸಿ…

Read More

ವಿದ್ಯಾಗಿರಿ: ‘ಮಾತು ಸಕಾರಾತ್ಮಕ ಆಗಿರಲಿ’ ಎಂದು ‘ಸ್ಮೈಲ್ ಮೇಕರ್’ ಕಾರ್ಪೊರೇಟ್ ನಮ್ಯ ಕೌಶಲಗಳ ತರಬೇತುದಾರರಾದ ಶೋಭಾ ಜಿ. ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‍ಆರ್‍ಡಿ) ವಿಭಾಗವು ಗುರುವಾರ ಹಮ್ಮಿಕೊಂಡ ‘ಪದಗಳ ಶಕ್ತಿ’ – ಸಾಫ್ಟ್ ಸ್ಕಿಲ್ಸ್ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನಾವು ಬಳಸುವ ಪದಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಒಂದು ಪದವು ನಮ್ಮ ವ್ಯಕ್ತಿತ್ವವನ್ನು ವೃದ್ಧಿಸಬಹುದು ಅಥವಾ ಕೆಡಿಸಬಹುದು. ಮಾತನಾಡುವಾಗ ಪದಪ್ರಯೋಗ ಹಾಗೂ ಧ್ವನಿ ಬಗ್ಗೆ ಎಚ್ಚರ ಇರಲಿ ಎಂದರು. ವಿದ್ಯಾರ್ಥಿಗಳಲ್ಲಿ ತಮ್ಮಲ್ಲಿರುವ ಸಾಮಾಥ್ರ್ಯವನ್ನು ಗುರುತಿಸಲು ಹೇಳಿದ ಅವರು, ಸಂವಹನ ಸಂಬಂದಿತ ಚಟುವಟಿಕೆಗಳನ್ನು ನಡೆಸಿದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಬಳಕೆಯ ಪದಗಳ ಮೇಲೆ ನಮ್ಮ ಕೌಶಲವು ಮೃದು ಅಥವಾ ಕಠಿಣವೇ ಎಂಬುದನ್ನು ಅಂದಾಜಿಸಲಾಗುತ್ತದೆ. ಜ್ಞಾನವು ಶಕ್ತಿಯಾಗಿದ್ದು, ಸದ್ವಿನಿಯೋಗಿಸಬೇಕು ಎಂದರು. ಕಾರ್ಯಗಾರದಲ್ಲಿ ಶ್ರೀ ಧವಲಾ ಕಾಲೇಜು, ಶ್ರೀ ಮಹಾವೀರ ಕಾಲೇಜು ಹಾಗೂ ಆಳ್ವಾಸ್‍ನ ಬಿಬಿಎ ಹಾಗೂ ಬಿಎಚ್‍ಆರ್‍ಡಿ ವಿಭಾಗದ…

Read More

ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಅ.02 ರಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿ ಸತ್ಯ, ಶಾಂತಿ ಮತ್ತು ಅಹಿಂಸೆಯ ಪ್ರತಿಪಾದಕ, ಸರ್ವ ಧರ್ಮ ಸಮನ್ವಯದ ಜತ್ಯಾತೀತ ಭಾರತಕ್ಕೆ ಮುನ್ನುಡಿ ಬರೆದ ಮಹಾನ್ ಮಾನವತಾವಾದಿ ಗಾಂಧೀಜಿಯವರು ಗ್ರಾಮಗಳನ್ನು ಸುವರ್ಣ ಗ್ರಾಮವನ್ನಾಗಿಸಬೇಕು ಎಂಬ ಕನಸನ್ನು ಕಂಡಿದ್ದರು. ಆ ನಿಟ್ಟಿನಲ್ಲಿ ನಾವೆಲ್ಲರೂ ಗ್ರಾಮಗಳ ಅಭಿವೃದ್ಧಿಗೆ, ಉತ್ತಮ ಶಿಕ್ಷಣ, ಸ್ವಚ್ಛತೆ ಹಾಗೂ ಉತ್ತಮ ಪರಿಸರ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಂದೇಶ ಅವರ ತತ್ವಗಳು ನಮಗೆಲ್ಲರಿಗೂ ಆದರ್ಶವಾಗಿದೆ. ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ನಾಯಕರನ್ನು ಸ್ಮರಿಸುವುದು, ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಶಾಲಾ ಶಿಕ್ಷಕರು ಮಹಾನ್ ನಾಯಕರ ಸಾಧನೆ ಹಾಗೂ ಅವರು ದೇಶಕ್ಕೆ…

Read More

ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ‌ ನಗರದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಗೆ ಕಡೆಂಜ ಅಶೋಕ್ ಕುಮಾರ್ ಚೌಟ ಚಾಲನೆ ನೀಡಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದ.ಕ. ಜಿಲ್ಲಾ ಸಂಚಾಲಕ ಬಿ.ನಾಗರಾಜ್ ಶೆಟ್ಟಿ, ಕಾಸರಗೋಡು ಜಿಲ್ಲಾ ಸಂಚಾಲಕ ಸಂಜೀವ ಶೆಟ್ಟಿ, ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ಸಿ.ಎ. ರಾಮ ಮೋಹನ್ ರೈ, ಸಂಜೀವ ಶೆಟ್ಟಿ ಸಂಪಿಗೇಡಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಮಿಥುನ್ ರೈ, ಸಿಎ ಶಾಂತಾರಾಮ ಶೆಟ್ಟಿ, ವಸಂತ ಶೆಟ್ಟಿ, ಕೃಷ್ಣಪ್ರಸಾದ್ ರೈ, ಸುಧಾಕರ ಎಸ್ ಪೂಂಜ, ಬಿ ಶೇಖರ ಶೆಟ್ಟಿ, ಉಲ್ಲಾಸ್ ಶೆಟ್ಟಿ,…

Read More

ಕರ್ತವ್ಯವನ್ನು ಮಾಡುವವರನ್ನು ದೇವರು ಯಾವಾಗಲು ಹರಸುತ್ತಾನೆ ಅದರಂತೆ ಐಕಳ ಹರಿಶ್ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದುಕೊಂಡು ಅತ್ಯುತ್ತಮ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇಂತಹ ಕೆಲಸಕ್ಕೆ ದೇವರ ಆಶೀರ್ವಾದ ಇದೆ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಹೇಳಿದರು. ಅವರು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ಆಕ್ಟೋಬರ್ 28 ಮತ್ತು 29 ರಂದು ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ನಡೆಯಲಿರುವ ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ಕೊಡುವ ಕೆಲಸ ನಡೆಯುತ್ತಿದ್ದು ಇದು ನಿರಂತರವಾಗಿರಲಿ, ಸತ್ಕರ್ಮಗಳ ಮೂಲಕ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಜಾಗತಿಕ ಬಂಟರ ಸಂಘ…

Read More

ಮಾಧ್ಯಮದಲ್ಲಿ ಧನಾತ್ಮಕ ಚಿಂತನೆ ಅವಶ್ಯ ವಿದ್ಯಾಗಿರಿ: ‘ಮಾಧ್ಯಮ ಕ್ಷೇತ್ರದಲ್ಲಿ ಧನಾತ್ಮಕ ಚಿಂತನೆಯು ಇಂದಿನ ಅವಶ್ಯವಾಗಿದೆ. ನೀವು ಸಮಾಜಕ್ಕೆ ಕೊಡುಗೆ ನೀಡುವಂತವರಾಗಬೇಕು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಗುರುವಾರ ಪಿ.ಜಿ ಸೆಮಿನಾರ್‍ಹಾಲ್ ನಲ್ಲಿ ಹಮ್ಮಿಕೊಳ್ಳಲಾದ ‘ಫೀರ್ ಮಿಲೇಂಗೆ’ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವೃತ್ತಿ ಜೀವನದಲ್ಲಿ ನೈತಿಕತೆ ಮುಖ್ಯ. ಯಾವುದೇ ಸಂಬಂಧ ಅಥವಾ ಕೆಲಸ ನಿರ್ವಹಿಸುವಾಗ ನಿರೀಕ್ಷೆ ರಹಿತ ಮನೋಭಾವ ಹೊಂದಿರಬೇಕು. ಆಗ ಯಶಸ್ಸು ಸಾಧ್ಯ ಎಂದರು. ಎಲ್ಲರನ್ನೂ ಪ್ರೀತಿಸಿ ಗೌರವಿಸುವ ಡಾ. ಎಂ. ಮೋಹನ ಆಳ್ವರ ಗುಣವು ಅವರ ಯಶಸ್ವಿಗೆ ಮೂಲ. ಪ್ರತಿಯೊಬ್ಬರು ಅನನ್ಯ ವ್ಯಕ್ತಿತ್ವದೊಂದಿಗೆ ಸಮಾಜದಲ್ಲಿ ಒಗ್ಗಟ್ಟಿನಿಂದ ಬದುಕುವ ಮನಸ್ಥಿತಿ ಹೊಂದಿರಬೇಕು. ಪತ್ರಿಕೋದ್ಯಮ ವಿಭಾಗದಲ್ಲಿರುವ ‘ಜೀವಕಳೆ’ ನನಗೆ ಇಷ್ಟ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರೀತಿ, ವಿಶ್ವಾಸದಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಖುಷಿ ನೀಡಿದೆ.…

Read More

ಇತ್ತೀಚಿನ ದಿನಗಳಲ್ಲಿ ನಾಲ್ಕು ತಲೆಮಾರು ಕಾಣುವಂತದ್ದೇ ವಿಶೇಷವಾಗಿದ್ದರೆ, ನಮ್ಮ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಪ್ರತಿಷ್ಠಿತ ಕೂಕನಾಡು ಮನೆಯ ಅವಿಭಕ್ತ ಕುಟುಂಬವು ಐದು ತಲೆಮಾರು ಕಂಡಿದೆ. ಕೂಕನಾಡು ಕೃಷಿ ಕುಟುಂಬದಲ್ಲಿ ಕೊಣ್ಕೆ ನಾಗಯ್ಯ ಶೆಟ್ಟಿ ಮತ್ತು ತುಂಗಮ್ಮ ಶೆಡ್ತಿಯವರ ಮಗಳಾಗಿ ಪುಟ್ಟಮ್ಮ ಶೆಡ್ತಿಯವರು 1931 ರಲ್ಲಿ ಜನಿಸಿರುತ್ತಾರೆ. ಇವರು ತನ್ನ 12ನೇ ವಯಸ್ಸಿಗೆ ಸಾಲಗೆದ್ದೆ ಶಿವರಾಮ ಶೆಟ್ಟಿಯವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇವರಿಬ್ಬರಿಗೆ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ಶ್ರೀಮತಿ ಜಲಜಾಕ್ಷಿ ಶೆಟ್ಟಿ 1947 ರಲ್ಲಿ ಜನಿಸಿದ್ದು, 1964 ರಲ್ಲಿ ಹರ್ಕೂರು ಪಟೇಲರ ಮನೆ ಚಂದ್ರಶೇಖರ ಶೆಟ್ಟಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಶ್ರೀ ಚಂದ್ರಶೇಖರ ಶೆಟ್ಟಿಯವರು ಉತ್ತಮ ಅದ್ಯಾಪಕರು ಅಲ್ಲದೇ ಉತ್ತಮ ನಾಟಕ ಮತ್ತು ಯಕ್ಷಗಾನ ಪಾತ್ರದಾರಿಯಾಗಿದ್ದು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು, ಜನಾನುರಾಗಿಯಾಗಿದ್ದರು. ನಂತರ ಮುಖ್ಯೋಪಾಧ್ಯಾಯರಾಗಿ ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗಳಿಗೆ ಎರಡು ಹೆಣ್ಣು ಮತ್ತು ಒಬ್ಬ ಮಗ. ಹಿರಿಯ ಮಗಳು…

Read More

ಭಾರತೀಯರು ಆಚರಿಸುವ ಹಬ್ಬ ಹರಿದಿನಗಳು ಇಹ-ಪರ ಉನ್ನತಿಯ ಹಿನ್ನಲೆಯುಳ್ಳವು. ಹಿಂದೂ ಹಬ್ಬಗಳಲ್ಲಿ ಉಪವಾಸ, ಸಂಯಮ, ಮನೋನಿಯಂತ್ರ ಣ ನಿಷ್ಠೆಯಿಂದ ಆಚರಿಸುವುದನ್ನು ಕಾಣಬಹುದು. ಶಿವಭಕ್ತಿಯೊಂದಿಗೆ ವಿಷಕಂಠನ ಜಪಕ್ಕೆ ವೈಜ್ಞಾನಿಕ ಆಯಾಮವು ಇದ್ದು ಭಕ್ತರ ಇಷ್ಟಕೋರಿಕೆಯನ್ನು ನೆರವೇರಿಸುವ ಮಂಗಳ ಸ್ವರೂಪಿ ಶಿವಧ್ಯಾನ ಮಹಾಶಿವರಾತ್ರಿ ಆಚರಣೆಯ ಹಿಂದಿನ ಪ್ರತೀತಿ. ಪ್ರಕೃತಿ ಪುರುಷ ಲೀಲಾ ಫಲಶೃತಿಯಿಂದಲೆ ಈ ಜಗತ್ತು ನಿರ್ಮಾಣವಾಗಿ ಜಗತ್ತಿನ ಮಾತಾಪಿತರೆನಿಸಿದ ಶಿವ – ಪಾವರ್ತಿಯರ ಆರಾಧನಾ ದಿನವೆ ಮಹಾಶಿವರಾತ್ರಿ. ಈ ದಿನದಂದು ಮಹಾಶಿವನಿಗೆ ಒಂದುದಳ ಬಿಲ್ವಪತ್ರೆ ಅರ್ಪಿಸಿದರೆ ತೃಪ್ತನಾದ ಶಿವನ ಪೂರ್ಣಾನುಗೃಹ ಸಿಗುತ್ತದೆ ಎಂಬ ನಂಬಿಕೆ. ತನ್ನ ದೇಹದ ಅರ್ಧಭಾಗವನ್ನೆ ಹೆಂಡತಿಗೆ ಬಿಟ್ಟು ಕೊಡುವಷ್ಟು ಸಮಾನತೆ ಪ್ರತಿಪಾದಕ ಶಿವ ಪಾರ್ವತಿದೇವಿಯನ್ನು ವಿವಾಹವಾದ ದಿನವಿದು. ಕೈಲಾಸದಿಂದ ಭೂಮಿಗೆ ಶಿವನು ಆಗಮಿಸಿ ಸಕಲ ಇಷ್ಟಾರ್ಥ ಪೂರೈಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ನಾಲ್ಕು ವೇದಗಳನ್ನು ಕದ್ದು ಸಮುದ್ರದಲ್ಲಿ ಅಡಗಿ ಕುಳಿತ ಸೋಮಾಕಾಸುರನನ್ನು ವಧಿಸಲು ವಿಷ್ಣುವು ಮತ್ಸ್ಯ ವತಾರತಳೆದು ನಾಲ್ಕು ವೇದಗಳನ್ನು ನಾಲ್ಕು ಮಕ್ಕಳಂತೆ ಮಾಡಿ ಹಿಡಿದು ಕೊಂಡು ‌ಮೇಲೆ ಬರುವಾಗ…

Read More