Author: admin
ಈ ಚಿತ್ರವನ್ನು ಯಾವುದರ ಜೊತೆ ಹೋಲಿಕೆ ಮಾಡ್ಬೇಕು ಅಂದ್ರೂ ಒಂದೇ ಒಂದು ಚಿತ್ರನೂ ನೆನಪಾಗಲ್ಲ. ಅಲ್ಲಿವರೆಗೆ ಈ ಸಿನೆಮಾ ಮನಸ್ಸನ್ನು ಆವರಿಸಿಕೊಂಡಿದೆ. ಸಿನಿಮಾ ಮುಗಿದು ಆದ್ರೂ ಕಾಂತಾರದ ಗಗ್ಗರದ ಶಬ್ಧ ಇನ್ನೂ ಹಾಗೆ ಬಡಿತಾನೇ ಇದೆ. ನಾವು ತುಳುವರು ನಮಗೆ ಈ ಮಣ್ಣಿನ ಕಾರ್ಣಿಕದ ಅನುಭವ ಇದೆ. ನಾವು ನಮ್ಮ ಎಲ್ಲಾ ಕಾರ್ಯಗಳ ಆರಂಭದಲ್ಲಿ ಮೊದಲು ನೆನೆಸಿ ನಮಿಸುವುದೇ ದೈವಗಳನ್ನು ನಂತರ ದೇವರು. ಕಾರಣ ಈ ಮಣ್ಣಿನಲ್ಲಿರೋ ಪ್ರತಿಮನೆತನದಲ್ಲೂ ದೈವಗಳಿಗೇ ಆರಾಧ್ಯ ಸ್ಥಾನ, ಕಾರಣ ಈ ಮಣ್ಣೆ ದೈವಗಳ ಭೂಮಿ ಹಾಗಾಗಿ ದೈವಗಳ ಕೋಲಗಳನ್ನು ತೀರ ಹತ್ತಿರದಿಂದ ನೋಡಿದವರಿಗೆ, ಅಥವಾ ನಮ್ಮ ನಂಬಿಕೆಗಳ ಬಗ್ಗೆ ಅಧ್ಯಯನ ಮಾಡಿದವರಿಗೆ ನಮ್ಮ ದೈವಗಳ ಹಿನ್ನೆಳೆ ಬಗ್ಗೆ ಚೆನ್ನಾಗೇ ಗೊತ್ತಿರುತ್ತದೆ. ನಡೆಯಲ್ಲಿ ನಿಂತು ತನ್ನ ಮಕ್ಕಳಿಗೆ ಅಭಯ ನೀಡಿ ಜೊತೆಗೆ ಬರುವ ಹಾಗೆ ದೈವದ ಮುಂದೆ ನಿಂತು ಕೊಟ್ಟ ಮಾತಿಗೆ ತಪ್ಪಿ ನಡೆದರೆ ತಲತಲಾಂತರದ ವರೆಗೆ ಶಿಕ್ಷೆ ನೀಡುವ ದೈವಗಳು ತುಳುನಾಡಿನ ನಮ್ಮ ಜೀವನದ ಒಂದು…
ಕಳೆದ ಹದಿನಾಲ್ಕು ವರ್ಷಗಳಿಂದ ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಗಣೇಶ್ ಪುರಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶ್ರೀ ನಿತ್ಯಾನಂದ ಸೇವಾ ಸಂಸ್ಥೆಯು 15 ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಪಾದಯಾತ್ರೆಯನ್ನು ಫೆಬ್ರವರಿ 3ರಂದು ಹಮ್ಮಿಕೊಂಡಿದೆ. ಅಂದು ಸಾಯಂಕಾಲ 6 ಗಂಟೆಯಿಂದ ಮೀರಾ ಭಾಯಂದರ್ ರಸ್ತೆಯಲ್ಲಿರುವ ಶ್ರೀ ಗಣೇಶ್ ಜೈ ಅಂಬಿ ಮಾತಾ ಮಂದಿರದಿಂದ (ಶುಭಂ ಹೋಟೆಲ್ ಸಮೀಪ) ಧಾರ್ಮಿಕ ವಿಧಿ ವಿಧಾನ, ಭಜನೆ ಹಾಗೂ ಮಂಗಳಾರತಿಯೊಂದಿಗೆ ‘ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ (ಶ್ರೀ ಕ್ಷೇತ್ರ ಗಣೇಶಪುರಿ)ಪಾದಯಾತ್ರೆ ಹೊರಡಲಿದೆ. ಈ ಪಾದಯಾತ್ರೆ ಕಾರ್ಯಕ್ರಮದಲ್ಲಿ ಬೇವಿನಕೊಪ್ಪ ಶ್ರೀ ವಿಜಯಾನಂದ ಸ್ವಾಮೀಜಿ ಹಾಗೂ ಸಾಣೂರು ಸಾಂತಿಂಜ ಜನಾರ್ಧನ ಭಟ್ ಉಪಸ್ಥಿತರಿದ್ದು, ಆಶೀರ್ವದಿಸಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಜನವರಿ 31ರ ಒಳಗೆ ಮೊಬೈಲ್ ಕ್ರಮಾಂಕ 9869703998, 9833850224, 9588111177, 9702368777 ಅಥವಾ 8369544002 ರಲ್ಲಿ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ. ಹಿರಿಯ ನಾಗರಿಕರಿಗೆ ವಾಹನದ ವ್ಯವಸ್ಥೆ ಮಾಡಲಾಗುವುದು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ…
ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ಸಮಾಜ ಬಾಂಧವರಿಗಾಗಿ ಬಾಕ್ಸ್ ಕ್ರಿಕೆಟ್ ಕೂಟವು ಡಿ 9 ಶನಿವಾರದಂದು ಪುಣೆಯ ಮುಂದ್ವಾ ಪ್ರೀ ಕಿಕ್ ಪುಟ್ಬಾಲ್ ಗ್ರೌಂಡ್ ನಲ್ಲಿ ನಡೆಯಿತು. ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ ಹೆಗ್ಡೆಯವರು ಬಾಕ್ಸ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಕ್ರೀಡಾ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಬಾಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಪುಣೆಯ ವಿವಿಧ ಭಾಗದ ಪುಣೆ ಬಂಟ್ಸ್ ಯೂಥ್, ಸಾಯಿ ಕ್ರಿಕೆಟರ್ಸ್, ದೇಹು ರೋಡ್ ಎ, ಫಿನಿಕ್ಸ್ ಸೇವೆನ್, ಬಂಟ್ಸ್ ಅಸೋಸಿಯೇಷನ್, ಎರ್ಮಾಲ್ ಬಂಟ್ಸ್, ಇನ್ಟಿ ಡಿಬೇಲ್ಸ್, ಬಂಟ್ಸ್ ಅಸೋಸಿಯೇಷನ್ ಯೂತ್, ದೇಹು ರೋಡ್ ಬಿ, ಕಟೀಲ್ ನಂದಿನಿ, ಟೀಂ ಕಾಂತರ, ರೈಸಿಂಗ್ ಸ್ಟಾರ್ಸ್, ಟಿ. ಕೆ ಚಾಂಪಿಯನ್ಸ್, ಟೀಂ ಆರ್. ಕೆ, ಕಟೀಲ್ ಸ್ಟಾರ್ಸ್, ಬಂಟ್ಸ್ ಅಸೋಸಿಯೇಷನ್ ವಾರಿಯರ್ಸ್, ಸೇರಿದಂತೆ 16 ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯಾಟವು ನಡೆಯಿತು. ಫೈನಲ್ ಪಂದ್ಯಾಟವು ದೇಹು ರೋಡ್ ಎ ಮತ್ತು ಬಂಟ್ಸ್…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಉಡುಪಿಯಲ್ಲಿ ನಡೆಯುವ ವಿಶ್ವ ಬಂಟರ ಸಮ್ಮೇಳನಕ್ಕೆ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಆಗಮಿಸಲಿದ್ದಾರೆ. ಅಕ್ಟೋಬರ್ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನ ಮತ್ತು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಸಮ್ಮೇಳನ ನಡೆಯಲಿದ್ದು, ಸಚಿವ ನಿತಿನ್ ಗಡ್ಕರಿ ಅವರು ಅಕ್ಟೋಬರ್ 29 ರಂದು ವಿಶ್ವಬಂಟರ ಸಮ್ಮೇಳನಕ್ಕೆ ಉಡುಪಿಗೆ ಆಗಮಿಸಲಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.28 ರಂದು ಆಗಮಿಸಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ಸಮ್ಮೇಳನ ಜರಗಲಿದ್ದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮುಂಬಯಿ ಸಂಸದ ಗೋಪಾಲ ಶೆಟ್ಟಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮೊದಲಾದವರು ಭಾಗವಹಿಸಲಿದ್ದಾರೆ. ಅಲ್ಲದೇ ಬಾಲಿವುಡ್ ನಟ ಸುನಿಲ್ ಶೆಟ್ಟಿ, ರಿಷಬ್ ಶೆಟ್ಟಿ ಸಹಿತ…
ಪ್ರಪಂಚದಾದ್ಯಂತ ತನ್ನ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಪ್ರಸಿದ್ದಿ ಪಡೆದ ದೇಶವೆಂದರೆ ಅದು ನಮ್ಮ ಭಾರತ. ಭಾರತೀಯರಾಗಿ ನಮಗೆಲ್ಲರಿಗೂ ಬಹಳಷ್ಟು ಹೆಮ್ಮೆತರುವ ವಿಷಯವಿದು. ಭಾರತ ಎಂದ ಕೂಡಲೇ ವಿದೇಶಿಯರ ಮನದಲ್ಲಿ ಮೂಡುವುದು ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ, ಸಂಸ್ಕೃತಿ, ವಿವಿಧ ಹಬ್ಬಗಳು, ಮನ ಸೆಳೆಯುವ ಮೆರವಣಿಗೆಗಳು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ವಿವಿಧ ಧರ್ಮದ ಜನರು ತಮ್ಮದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಶಾಂತಿಯುತವಾಗಿ ವಾಸಿಸುತ್ತಾರೆ. ವಿವಿಧ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಆಚಾರ-ವಿಚಾರ, ಉಡುಪು ಇತ್ಯಾದಿಗಳನ್ನು ಹೊಂದಿದ್ದಾರೆ. “ಅತಿಥಿ ದೇವೋ ಭವ” ಎಂಬ ಮಾತಿನಂತೆ ನಮ್ಮ ಮನೆಗೆ, ನಮ್ಮಲ್ಲಿಗೆ ಬಂದವರು ನಮ್ಮ ಪಾಲಿಗೆ ದೇವರಂತೆ, ದೇವರಿಗೆ ಸಲ್ಲುವ ಮರ್ಯಾದಿ, ಗೌರವ ಅವರಿಗೂ ಸಿಗುತ್ತದೆ. ಇನ್ನು ನಮ್ಮ ಪಾಲಿಗೆ ಹಿರಿಯರ ಆಶೀರ್ವಾದ ಎಂದರೆ ದೇವರ ವರಕ್ಕೆ ಸಮಾನ. ಯಾವುದೇ ಶುಭಕಾರ್ಯ ಪ್ರಾರಂಭಗೊಳ್ಳುವ ಮೊದಲು ದೇವರ ಬಳಿಕ ಹಿರಿಯರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಪರರನ್ನೂ ತನ್ನಂತೆಯೇ ಗೌರವದಿಂದ ಕಾಣುವುದು ಪ್ರತೀ…
ಉಡುಪಿಯಲ್ಲಿ ನಡೆದ 22 ನೇ ರಾಜ್ಯ ಶಾಟ್ ಕೋರ್ಸ್ ಚಾಂಪಿಯನ್ ಶಿಪ್ -2023 ಈಜು ಸ್ಪರ್ಧೆಯಲ್ಲಿ ಅತಿವೇಗದ ಈಜುಗಾರ ಎಂಬ ಗರಿಮೆ ಪಡೆದು ಬೆಂಗಳೂರಿನಲ್ಲಿ ನಡೆಯಲಿರುವ ದಕ್ಷಿಣ ವಲಯ ಈಜು ಸ್ಪರ್ಧೆಗೆ ರಿಲೇ ಸಹಿತ 8 ವಿಭಾಗಗಳಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ಚಿಂತನ್ ಶೆಟ್ಟಿಯವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಸನ್ಮಾನಿಸಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಚಿರಾಗ್ ಶೆಟ್ಟಿಯವರ ತಾಯಿ, ಒಕ್ಕೂಟದ ಆಡಳಿತಾಧಿಕಾರಿ ಶ್ರೀ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ರಾಷ್ಟೀಯ ವಿಚಾರ ಸಂಕಿರಣ ಹಾಗೂ ಡಾ.ಪೂರ್ಣಿಮಾ ಶೆಟ್ಟಿ ಅವರ ಕೃತಿಗಳ ಲೋಕಾರ್ಪಣೆ
ಮುಂಬಯಿ:- ಮುಂಬಯಿ:- ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ನಾಡೋಜ ಪ್ರೊ.ಕಮಲಾ ಹಂಪನಾ ಪ್ರತಿಷ್ಠಾನ, ಬೆಂಗಳೂರು ಹಾಗೂ ಸಪ್ನ ಬುಕ್ ಹೌಸ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಸಂಭ್ರಮ, ರಾಷ್ಟೀಯ ವಿಚಾರ ಸಂಕಿರಣ ಹಾಗೂ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ಸೆಪ್ಟೆಂಬರ್ 24ರಂದು ಶನಿವಾರ ಮುಂಬಯಿ ವಿಶ್ವವಿದ್ಯಾಲಯ, ಕಲಿನಾ ಕ್ಯಾಂಪಸ್ಸಿನ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಕನ್ನಡ ವಿಭಾಗದ ಮೂರು ಪ್ರಕಟಣೆಗಳು ಬಿಡುಗಡೆಗೊಳ್ಳುತ್ತಿರುವುದು ಸಂತೋಷವನ್ನು ತಂದಿದೆ. ಕನ್ನಡ ವಿಭಾಗ ಕನ್ನಡ, ಇಂಗ್ಲಿಷ್, ಮರಾಠಿ, ತುಳು ಹೀಗೆ ಬೇರೆ ಬೇರೆ ಭಾಷೆಗಳ ಇದುವರೆಗೆ 90 ಕೃತಿಗಳನ್ನು ಪ್ರಕಟಿಸಿದೆ. ಬಹುಭಾಷಾ ನೆಲೆಯಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ಪೂರ್ಣಿಮಾ ಶೆಟ್ಟಿ ಅವರ ಎರಡು ಕೃತಿಗಳು ಪುತ್ತೂರು, ಕತಾರ್ ಹಾಗೂ ಇಂದು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಬಿಡುಗಡೆಗೊಳ್ಳುತಿದೆ. ಈ ರವಿತೇಜ ಕೃತಿಯನ್ನು ಇಂಗ್ಲಿಷ್ ಜಾಯಮಾನಕ್ಕೆ ಒಗ್ಗುವಂತೆ ಮಿಥಾಲಿ…
ಬೆಂಗಳೂರು ವಿಶ್ವವಿದ್ಯಾನಿಲಯದ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳ ನಾಲ್ಕನೇ ಸೆಮಿಸ್ಟರ್ ಗೆ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಬರೆದ ಲೇಖನ ಪಠ್ಯ ಪುಸ್ತಕದಲ್ಲಿ ಸೇರ್ಪಡೆ
ಬೆಂಗಳೂರು ವಿಶ್ವವಿದ್ಯಾನಿಲಯವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸ್ನಾತಕ ಪದವಿ ತರಗತಿಗಳಿಗೆ ಭಾಷಾ ಪಠ್ಯಪುಸ್ತಕಗಳನ್ನು ಅಧ್ಯಯನ ಕೇಂದ್ರದ ನಿರ್ದೇಶಕರ ನೇತೃತ್ವದಲ್ಲಿ ಪಠ್ಯಪುಸ್ತಕ ಸಿದ್ದಪಡಿಸಿದ್ದು ಅದರಲ್ಲಿ ಬಿ.ಎಸ್. ಡಬ್ಲ್ಯೂ (ಬ್ಯಾಚುಲರ್ ಓಫ್ ಸೋಶಿಯಲ್ ವರ್ಕ್) ವಿದ್ಯಾರ್ಥಿಗಳ ನಾಲ್ಕನೇ ಸೆಮಿಸ್ಟರ್ ಗೆ ಸಮಾಜ ಕಾರ್ಯ ಕನ್ನಡ ಭಾಷಾ ಪಠ್ಯದಲ್ಲಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಬರೆದ ಕುಂದಾಪುರದ ಕಂಪು ಶಿರ್ಷಿಕೆಯ ಲೇಖನ ಪಠ್ಯರೂಪದಲ್ಲಿ ಪಾಠ ಪುಸ್ತಕದಲ್ಲಿ ಸೇರ್ಪಡೆಗೊಂಡಿದೆ. ಕನ್ನಡ ಅಧ್ಯಯನ ಕೇಂದ್ರ, ಸ್ನಾತಕ ಅಧ್ಯಯನ ಮಂಡಳಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ರಾಜ್ಯ ಪಠ್ಯ ಕ್ರಮಗಳ ಸಮಿತಿಯ ನಿರ್ದೇಶನಗಳ ಅನುಸಾರ ಈ ಪಠ್ಯ ಪುಸ್ತಕದ ಸಿದ್ದತೆ ನಡೆದಿದೆ. ಸಾಹಿತ್ಯ, ಸಂಸ್ಕ್ರತಿ ಮತ್ತು ರಾಷ್ಟ್ರೀಯ ಮನೋಭಾವವನ್ನು ಇಂದಿನ ಶಿಕ್ಷಣ ವ್ಯವಸ್ಥೆಯು ಕಟ್ಟಿಕೊಡಬೇಕೆಂಬ ನಿಟ್ಟಿನಲ್ಲಿ ವಿಷಯಾದಾರಿತ ಪಠ್ಯ ಪುಸ್ತಕಗಳನ್ನು ತಯಾರಿಸಿದೆ. ಈ ಪಠ್ಯ ಪುಸ್ತಕದಲ್ಲಿ 1)ಮಾಧ್ಯಮ ವಿಭಾಗ, 2)ಪ್ರಾದೇಶಿಕತೆ ವಿಭಾಗ, 3) ಜೀವನ ಚರಿತ್ರೆ ವಿಭಾಗ, 4) ಸಂಕೀರ್ಣ ವಿಭಾಗ ಎಂಬ ಈ ನಾಲ್ಕು ವಿಭಾಗಗಳಿವೆ. ಪ್ರಾದೇಶಿಕತೆ…
ಮುಂಬಯಿಯ ಜನಪ್ರಿಯ ಸಂಘಟಕ, ಸಮಾಜ ಸೇವಕ ಶ್ರೀ ಗಿರೀಶ್ ಶೆಟ್ಟಿ ಇನ್ನ ಕಾಚೂರು ಬಂಟರ ಸಂಘ ಮುಂಬಯಿಯ ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡಿರುವುದು ಹೆಮ್ಮೆಯ ವಿಷಯ ಹಾಗೂ ಇದೊಂದು ಅತ್ಯಂತ ಅರ್ಹ ಆಯ್ಕೆಯೂ ಹೌದು. ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಕರು ತಮ್ಮ ಸ್ವಜಾತಿ ಬಾಂಧವರ ಸಾಮಾಜಿಕ ಕಾಳಜಿಯ ಬಂಟರ ಸಂಘ ಮುಂಬಯಿ ಇದರ ಸದಸ್ಯತ್ವ ಪಡೆದು ಕ್ರಮೇಣ ತಮ್ಮ ಸಂಘಟನಾ ಸಾಮರ್ಥ್ಯ, ಪ್ರತಿಭಾ ವಿಶೇಷತೆಗಳನ್ನು ಮೆರೆಯುತ್ತಿರುವುದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ ಎನ್ನಬಹುದು. ಶ್ರೀ ಯುತ ಗಿರೀಶ್ ಶೆಟ್ಟರು ಬಿಕಾಂ ಜಿಡಿಸಿಎ ಎಲ್.ಎಲ್.ಬಿ ಪದವಿ ವಿಭೂಷಿತರು. ದಿವಂಗತ ರಾಘು ಕೆ ಶೆಟ್ಟಿ ಪಡುಕುಡೂರು ಹಾಗೂ ಶ್ರೀಮತಿ ಶಾರದಾ ರಾಘು ಶೆಟ್ಟಿ ದಂಪತಿಯ ಸುಪುತ್ರ ಗಿರೀಶ್ ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾವಂತ ಹಾಗೂ ಕ್ರಿಯಾಶೀಲ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದರು. ಆಟ ಪಾಠಗಳಲ್ಲಿ, ಇನ್ನಿತರ ಚಟುವಟಿಕೆಗಳಲ್ಲಿ ಮುಂದಿದ್ದು ತನ್ನ ಅಭ್ಯಾಸವನ್ನೂ ಸಮಾಂತರವಾಗಿ ಕಾಯ್ದುಕೊಂಡು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಪಡೆದು ಪ್ರತಿಷ್ಠಿತ…
“ಸಿನಿಮಾ ಗೆದ್ದಿರುವುದು ಒಬ್ಬನಿಂದಲ್ಲ. ನನ್ನ ಇಡೀ ತಂಡ ಇದಕ್ಕಾಗಿ ರಾತ್ರಿ ಹಗಲು ಶ್ರಮವಹಿಸಿ ದುಡಿದಿದೆ. ಹೆಚ್ಚಿನವರು ಭಾಷೆಯ ಮೇಲೆ ಪ್ರೀತಿಯಿಟ್ಟು ತುಳು ಸಿನಿಮಾ ಮಾಡುತ್ತಾರೆ, ಆದರೆ ಬಿಡುಗಡೆ ವೇಳೆ ಅವಸರ ಮಾಡುತ್ತಾರೆ. ಇದರಿಂದ ಒಳ್ಳೆಯ ಸಿನಿಮಾಗಳು ಕೂಡ ಸೋಲುತ್ತಿರುವುದು ವಿಷಾದದ ಸಂಗತಿ. ಆದ್ದರಿಂದ ಸಿನಿಮಾ ಬಿಡುಗಡೆ ವೇಳೆ ಪೈಪೋಟಿ ಬೇಡ”. “ನನ್ನ ಜೀವನದ ಪ್ರತಿಯೊಂದು ಘಟ್ಟದಲ್ಲೂ ಪತ್ರಕರ್ತ ಮಿತ್ರರು ನನ್ನ ಜೊತೆ ನಿಂತು ಪ್ರೋತ್ಸಾಹ ಮಾಡಿರುವ ಕಾರಣ ದೇಶ ವಿದೇಶಗಳಲ್ಲಿ ಸರ್ಕಸ್ ಸಿನಿಮಾ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರದ ನಿರ್ಮಾಪಕರು ಹಾಕಿರುವ ಬಂಡವಾಳ ವಾಪಾಸ್ ಬಂದಿದೆ. ಇದಕ್ಕಾಗಿ ಪ್ರತಿಯೊಬ್ಬ ಪ್ರೇಕ್ಷಕನಿಗೂ ಧನ್ಯವಾದಗಳು. ಗಿರಿಗಿಟ್, ಗಮ್ಜಾಲ್, ಸರ್ಕಸ್ ಮೂರೂ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಪ್ರಸನ್ನ ಶೆಟ್ಟಿ ಬೈಲೂರು ಅವರು ನನ್ನ ಬೆನ್ನೆಲುಬು. ಅವರಿಗೆ ನಾನು ಥ್ಯಾಂಕ್ಸ್ ಹೇಳಬೇಕು” ಎಂದು ಸರ್ಕಸ್ ಚಿತ್ರ ನಿರ್ದೇಶಕ ರೂಪೇಶ್ ಶೆಟ್ಟಿ ಹೇಳಿದರು. ಅವರು ತಮ್ಮ ನಿರ್ದೇಶನ ಮತ್ತು ಅಭಿನಯದ “ಸರ್ಕಸ್” ತುಳು ಸಿನಿಮಾ ಜೂನ್ 23ರಂದು ವಿಶ್ವದಾದ್ಯಂತ…















