Author: admin

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ತುಳುನಾಡಿನ ಮಣ್ಣಿನ ಆಚರಣೆ ನಡೆದಿದೆ. ಆಟಿ ಅಮಾವಾಸ್ಯೆಯ ದಿನವಾದ ಸೋಮವಾರ ಮುಂಜಾನೆ 6 ರಿಂದ 8 ವರೆಗೆ ದೆಹಲಿಯ ಕರ್ನಾಟಕ ಸಂಘದ ಬಳಿಯ ಹಾಳೆ ಮರದ ತೊಗಟೆಯ ಕಷಾಯ ಮತ್ತು ಮೆಂತ್ಯೆ ಗಂಜಿಯ ವ್ಯವಸ್ಥೆನ್ನು ಮಾಡಲಾಗಿತ್ತು. ನೆರೆದ ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಮದ್ದು ಸೇವಿಸಿ ತಮ್ಮ ಆರೋಗ್ಯವರ್ಧನೆಯನ್ನು ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಷಾಯ ಸೇವಿಸುವ ಮೂಲಕ ಮಾಡಿದ ಪೋರ್ಟೀಸ್ ಆಸ್ಪತ್ರೆಯ ಆಂಕಾಲಜೀ ವಿಭಾಜದ ಮುಖ್ಯಸ್ಥರು, ಕ್ಯಾನ್ಸರ್‍ ಸರ್ಜನ್ ಡಾ. ಬಿ. ನಿರಂಜನ್ ನಾಯ್ಕ್ ಅವರು ಮಾತನಾಡಿ ಆಟಿ ಅಮವಾಸ್ಯೆಯ ದಿನ ಹಾಳೆ ಮರದ ಕಷಾಯದಿಂದ ಆಗುವ ಉಪಯೋಗಗಳನ್ನು ನೆರೆದವರಿಗೆ ತಿಳಿಸಿ ಇಂತಹ ಸದುಪಯೋಗವನ್ನು ದೆಹಲಿಯಲ್ಲಿದ್ದೂ ಆಚರಿಸಲು ಅನುವು ಮಾಡಿದ ಆಯೋಜಕರನ್ನು ಪ್ರಶಂಸಿಸಿದರು. ಈ ಹಾಳೆ ಮರದ ತೊಗಟಿನ ಕಷಾಯ ಮತ್ತು ಮೆಂತ್ಯೆ ಗಂಜಿಯ ವ್ಯವಸ್ಥೆಯನ್ನು ಮಂಗಳೂರು ಮೂಲದ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರು ಉಚಿತವಾಗಿ ಹಂಚುವ ಮೂಲಕ ತಮ್ಮ ತಾಯ್ನಾಡಿನ ಆಚರಣೆಯನ್ನು ದೆಹಲಿಯಲ್ಲಿ ಪರಿಚಯಿಸಿದರು. ಕಾರ್ಯಕ್ರಮದಲ್ಲಿ…

Read More

ಒಂಜಿ ಪೆರಿಯೆರ್ನ ಬಾಯಿಡ್ ಕೇಂಡಿನ ಸಾಧಾರಣ ಸೊನ್ಪ ಸೊನ್ಪತ್ತೈನ್ ವರ್ಸೊರ್ದುಲ ದುಂಬು ನಡತಿನ ಕತೆ. ತುಲುನಾಡ್ಡ್ ಅವ್ವೊಂಜಿ ಕಾಲೊಡು ಸತ್ಯದ ಜೂವೊಲು ಧರ್ಮದ ನರಮಾನಿಲು ಬದ್ಕ್ ಬಾರೊಂದು ಇತ್ತಿನ ಕಾಲೊಗೆ.. ಆನಿದ ಕಾಲೊಡು ಧರ್ಮ ಮೀರಿನಾಯಗ್ ಮೂಜಿ ದಿನೊತ ಔಸ ಧರ್ಮೊಡ್ ನಡತಿನಾಯಗ್ ಸಾರ ದಿನೊತ ಔಸಗೆ.. ಆ ಕಾಲೊಡು ತುಲುನಾಡ ಮಣ್ಣ ಸತ್ಯ ಎಂಚ ಇತ್ತುಂಡು ಪಂಡ ಕಾಂಡೆ ಪಂಡಿನವು ಮಧ್ಯಾಹ್ನದ ದೊಂಬು ನೆತ್ತಿಗ್ ಬೂರೊಡ್ಡ ದುಂಬು ಪಂಡಿ ನಾಲಯಿ ದೊಂಡೆಡ್ ಕುಲ್ಲೊಡ್ಡ ದುಂಬು ಪಲಿತ್ ಬರೊಂದು ಇತ್ತುಂಡುಗೆ.. ಅಂಚಿನ ಒಂಜಿ ಕಾಲೊಡು ಒಂಜಿ ಪೊರ್ತುದ ಬಂಜಿ ದಿಂಜೊಡಾಂಡ ಕೋಲು ಕಾರ್ ಮುರ್ಕುನ ಕೆಸರ್ ದಿಂಜಿನ ತಾರುನ ಕಂಡೊಗು ಜಪ್ಪೊಡುಗೆ.. ಕಾಯುನ ದೊಂಬುಡು ನುಂಗೊಂದು ಬೂರುನ ಬರ್ಸೊಡು ಬೊದುಲೊಡುಗೆ.. ಅಲ್ಪ ನೆತ್ತೆರ್ ಬೆಗರ್ ಆವೊಡುಗೆ.. ಬೆಗರ್ ಬಾರ್ ಆವೊಡುಗೆ.. ಬಾರ್ ಬೆಯಿತ್ ಬೆಯಿತಿನೆ ಬರಕಲೊಡು ಉಜ್ಜೆರ್ಡ್ ಗುದು ಗುದುದು ಮಡಿ ಆದ್ ಅರಿ ಆವೊಡುಗೆ.. ಅರಿ ಮಣ್ಣ ಕರೊಟು ಅರ್ಲುನ…

Read More

ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಬಾರಕೂರಿಗೆ ಹೋಗುವ ಮುಖ್ಯರಸ್ತೆಯಲ್ಲಿ ದೊಡ್ಡ ಸೇತುವೆಗಿಂತ ಮುನ್ನ ಸಿಗುವ ಸಣ್ಣ ಸೇತುವೆಯ ಪೂರ್ವಕ್ಕೆ ಮಟಪಾಡಿ ಶೆಟ್ಟರ ಕುದ್ರುವಿನ ಗದ್ದೆ ಮಧ್ಯದಲ್ಲಿ ಬೊಬ್ಬರ್ಯನ ಸನ್ನಿಧಾನವಿದೆ. ಶೆಟ್ಟರಕುದ್ರಿನಲ್ಲಿ ಒಂದಿಷ್ಟು ಬಂಟರ ಮನೆಗಳಿದ್ದು ಅವರೇ ಆಡಳಿತೆದಾರರು. ನೂರು ವರ್ಷಗಳ ಹಿಂದೆ ಶೆಟ್ಟರು ಬ್ರಹ್ಮಾವರಕ್ಕೆ ಹೋಗುವುದು ಗದ್ದೆಯ ಅಂಚುಕಟ್ಟಿನಲ್ಲಿ ನಡೆದುಕೊಂಡು. ವಾಪಸು ಬರುವಾಗ ಕತ್ತಲೆಯಾದರೆ ನೆನಪಾಗುವುದು ಬೊಬ್ಬರ್ಯ. “ಓ ಬೊಬ್ಬರ್ಯ, ಮನೆಗೆ ಹೋಯ್ಕಲೆ ಮಾರಾಯ” ಎನ್ನುತ್ತಿದ್ದರಂತೆ. ಬೊಬ್ಬರ್ಯ ಎರಡು ಸೂಡಿ (ದೊಂದಿ- ಸೂಟೆ)ಗಳನ್ನು ಕಳುಹಿಸುತ್ತಿದ್ದನೋ, ಆತನೇ ಸೂಡಿಯಾಗಿ ಬರುತ್ತಿದ್ದನೋ ನಮ್ಮ ಮಂದಬುದ್ಧಿಗೆ ಅರ್ಥ ವಾಗದ್ದು. ಶೆಟ್ಟರು ಮನೆ ಸೇರುತ್ತಿದ್ದರು. ಇದನ್ನು ತಮ್ಮ ಸೋದರಮಾವ ದಿ| ಶೀನಪ್ಪ ಶೆಟ್ಟಿಯವರು ಹೇಳಿರುವು ದನ್ನು ಹಿರಿಯರಾದ ಕರುಣಾಕರ ಶೆಟ್ಟಿಯವರೂ, ತಾಯಿ ದಿ| ರತ್ನಾವತಿ ಶೆಟ್ಟಿಯವರು ಹೇಳುತ್ತಿದ್ದುದನ್ನು ಬ್ರಹ್ಮಾವರ ತಾ.ಪಂ. ಮಾಜಿ ಉಪಾಧ್ಯಕ್ಷ ಸುಧೀರ್‌ಕುಮಾರ್‌ ಶೆಟ್ಟಿಯವರೂ ನೆನಪು ಮಾಡುತ್ತಾರೆ. ಜೀವಂತ ಸಾಕ್ಷಿಗಳು 50 ವರ್ಷಗಳ ಹಿಂದಿನ ಘಟನೆ. ಮಾರ್ಟಿನ್‌ ಲೋಬೋ ಬೊಬ್ಬರ್ಯ ಕಟ್ಟೆ ಪಕ್ಕದಲ್ಲಿದ್ದ ಬಾವಿಯಿಂದ ನೀರು ತರು…

Read More

ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರ ಜಯಘೋಷದೊಂದಿಗೆ ಮೂಡುಬಿದಿರೆ ಪೇಟೆಯಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್‌ ಮುಖಂಡ ಮಿಥುನ್‌ ಎಂ. ರೈ ಅವರು ಸೋಮವಾರ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸ್ವರಾಜ್‌ ಮೈದಾನದಲ್ಲಿ ನಡೆದ ಬಹಿರಂಗ ಸಮಾವೇಶದ ಬಳಿಕ ಮಿಥುನ್‌ ಅವರು ತೆರೆದ ವಾಹನದಲ್ಲಿ ಕಾರ್ಯಕರ್ತರತ್ತ ಕೈ ಬೀಸುತ್ತಾ, ನಮಸ್ಕರಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು. ಮಿಥುನ್‌ ಅವರ ಅಚ್ಚುಮೆಚ್ಚಿನ ಪಿಲಿ ನಲಿಕೆ ತಂಡಗಳು ಮತ್ತು ಚೆಂಡೆ ಬಳಗ ಜತೆಯಾಗಿದ್ದು, ಮೆರವಣಿಗೆಯ ರಂಗು ಹೆಚ್ಚಿಸಿತು. ಬಾವುಟಗಳನ್ನು ಬೀಸುತ್ತಾ ಸಾಗಿದ ಕಾರ್ಯತರ್ಕರ ಉದ್ಘೋಷ ಮುಗಿಲು ಮುಟ್ಟಿತ್ತು. ಪೇಟೆಯ ನಿಶ್ಮಿತಾ ಟವರ್ಸ್‌ ವರೆಗೆ ಸಾಗಿದ ಮೆರವಣಿಗೆ ವಾಪಸು ಆಡಳಿತ ಸೌಧದವರೆಗೆ ಬಂತು. ಇದಕ್ಕೂ ಮುನ್ನ ಕ್ಷೇತ್ರ ವ್ಯಾಪ್ತಿಯ ಕಟೀಲು ದುರ್ಗಾಪರಮೇಶ್ವರಿರೀ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನ, ಅಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಬಹಿರಂಗ ಸಭೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌…

Read More

ಹೊಸದುರ್ಗ-ರಂಗ ಸುಹಾಸ ಟ್ರಸ್ಟ್ (ರಿ)ಸಾಣೇಹಳ್ಳಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ತರಬೇತಿ 1995-96 ನೆ ಸಾಲಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಅಭಿನಂದನಾ ಪುರಸ್ಕಾರ ಕಾರ್ಯಕ್ರಮ ಹಿರೇಮಗಳೂರಿನ ಎಲ್.ಜೆ.ಎಂ ಸಭಾಂಗಣದಲ್ಲಿ ಜರುಗಿತು. 1995-96 ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಪಡೆದು ಪ್ರತಿಷ್ಠಿತ ಎಂ‌.ಆರ್.ಪಿ.ಎಲ್ ಶಾಲೆಯ ಕ್ರೀಡಾ ತರಬೇತುದಾರರಾಗಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿ,1987 ರಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಹಲವಾರು ಕ್ರೀಡಾಕೂಟಗಳನ್ನು ಸಂಘಟಿಸಿ,ಅನೇಕ ಕ್ರೀಡಾಪಟುಗಳ ಬದುಕನ್ನು ರೂಪಿಸಿ,ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಮತ್ತು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ ಇವರಿಗೆ “ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ” ನೀಡಿ ಗೌರವಿಸಲಾಯಿತು. ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡೆ ಜೀವನದ ಅಮೂಲ್ಯ ಆಸ್ತಿ. ಕ್ರೀಡೆಯಿಂದ ಜೀವನ ಕೌಶಲ್ಯವನ್ನು ಕಲಿಯುತ್ತೇವೆ.ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತೇವೆ ಎಂದರು…

Read More

ತುಳುನಾಡಿನ ಸಂಸ್ಕೃತಿಗೆ ಬಲ ತುಂಬಿದ ಕೀರ್ತಿ ಇಲ್ಲಿನ ಗರಡಿಗಳಿಗೆ ಸಲ್ಲುತ್ತದೆ. ಅಧರ್ಮ ವಿರುದ್ಧ ಧರ್ಮದ ಕೀರ್ತಿ ಅರಳಿಸಿದವರು ತುಳುನಾಡಿನ ವೀರರಾದ ಕೋಟಿ ಚೆನ್ನಯರು. ತುಳುನಾಡಿನ ಜನರು ಸದಾ ಕ್ರಿಯಾಶೀಲರು ಎನ್ನುವುದು ಇಲ್ಲಿನ ಧರ್ಮಕಾರ್ಯವೇ ಸಾಕ್ಷಿ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ “ಕಂಕನಾಡಿ ಗರಡಿ-150’ರ ಸಂಭ್ರಮದ ಮೂರನೇ ದಿನವಾದ ರವಿವಾರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಕ್ಷೇತ್ರ ಹೊರನಾಡು ದೇವಾಲಯದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಮಾತನಾಡಿ, ದೇವರು-ದೈವ ಮತ್ತು ಮನುಷ್ಯ ಸಂಬಂಧ ಒಟ್ಟಾದಾಗ ಜೀವನ ಪರಿಪೂರ್ಣತೆ ಕಾಣಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿ ಧರ್ಮಯುಕ್ತವಾಗಿ ಜೀವನ ನಡೆಸಿ, ಪಡೆದ ಸಂಪತ್ತನ್ನು ಉತ್ತಮ ಕಾರ್ಯಕ್ಕೆ ವಿನಿಯೋಗಿಸಿ ಆತ್ಮತೃಪ್ತಿ ಕಾಣುವಂತಹ ಮೋಕ್ಷಗಾಮಿಯಾದಾಗ ಬದುಕು ಸಾರ್ಥಕ್ಯ ಕಾಣುತ್ತದೆ. ಧರ್ಮದ ವ್ಯಾಖ್ಯಾನ ಇಂತಹ ದೈವ-ದೇವರ ಗುಡಿ ಗೋಪುರದಲ್ಲಿ ಕಾಣಲು ಸಾಧ್ಯ ಎಂದರು. ಉದ್ಯಮಿ ರೋಹಿತ್‌ ಸನಿಲ್‌ ಅಧ್ಯಕ್ಷತೆ…

Read More

ಎನ್ ಎನ್ ಎಂ ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಿಸಿರುವ ಮಯೂರ್ ಆರ್ ಶೆಟ್ಟಿ ನಿರ್ದೇಶನದ ಪಿಲಿ ತುಳು ಚಲನಚಿತ್ರ ಫೆಬ್ರವರಿ 10 ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ. ಭರತ್ ಭಂಡಾರಿಯವರು ನಾಯಕ ನಟನಾಗಿ ಹಾಗೂ ನಾಯಕಿಯಾಗಿ. ಸ್ವಾತಿ ಶೆಟ್ಟಿ. ಚಿತ್ರದಲ್ಲಿ ಅಭಿನಯಿಸಿದ್ದಾರೆ, ಇತ್ತೀಚಿಗೆ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು ಬಹು ಜನರ ಮೆಚ್ಚುಗೆ ಪಡೆದಿದೆ, ಚಿತ್ರದ ಬಗ್ಗೆ ಭರವಸೆ ಹುಟ್ಟಿಸಿದೆ. ಛಾಯಾಗ್ರಹಣ ಮತ್ತು ನಿರ್ದೇಶನ ಮಯೂರ್ ಆರ್ ಶೆಟ್ಟಿ, ಆತ್ಮಾನಂದ ರೈ ನಿರ್ಮಾಪಕರಾಗಿದ್ದು, ಭರತ್ ರಾಮ್ ರೈ ಸಹ ನಿರ್ಮಾಪಕರಾಗಿದ್ದಾರೆ, ಮಣಿಕಾಂತ್ ಕದ್ರಿಯವರ ಸಂಗೀತ ಸಾರಥ್ಯದಲ್ಲಿ ಅಧ್ಭುತವಾದ ನಾಲ್ಕು ಹಾಡುಗಳಿದ್ದು, ಪಟ್ಲ ಸತೀಶ್ ಶೆಟ್ಟಿ, ನಿಹಾಲ್, ಅನುರಾಧ ಭಟ್, ಕಲಾವತಿ, ಉಜ್ವಲ ಆಚಾರ್, ಮುಂತಾದವರು ಹಾಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿಯವರ ಕಂಠ ಸಿರಿಯಲ್ಲಿ ಮೂಡಿ ಬಂದ ಶೀರ್ಷಿಕೆ ಗೀತೆಯು ಬಿಡುಗಡೆಗೊಂಡಿದ್ದು ಎಲ್ಲಾ ಕಡೆ ಸದ್ದು ಮಾಡುತ್ತಿದೆ, ಜನವರಿ ತಿಂಗಳಲ್ಲಿ ಚಿತ್ರದ ಎಲ್ಲಾ ಹಾಡುಗಳು ಬಿಡುಗಡೆಗೊಳ್ಳಲಿದೆ. ಪೆಭ್ರವರಿ ತಿಂಗಳಲ್ಲಿ ತುಳುನಾಡು ಮಾತ್ರವಲ್ಲದೆ, ಅರಬ್ ರಾಷ್ಟ್ರಗಳಲ್ಲಿ…

Read More

ಕನ್ನಡ ಸಂಘ ಬಹ್ರೈನ್‌ ವತಿಯಿಂದ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.18ರಂದು ಅದ್ದೂರಿಯಾಗಿ ಆಚರಿಸಲಾಯಿತು. ಇಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕನ್ನಡ ಭವನದಲ್ಲಿ ದೇಶಭಕ್ತಿಯ ಅಭಿಮಾನದೊಂದಿಗೆ, ಜನ ಸಮೂಹದಲ್ಲಿ ಉತ್ಸಾಹ ತುಂಬುವಂತೆ “ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕನ್ನಡ ಭವನದ ಆಶಾ ಪ್ರಕಾಶ್‌ ಶೆಟ್ಟಿ ಸಭಾಂಗಣದಲ್ಲಿ ದೇಶಭಕ್ತಿಯು ತುಂಬಿತುಳುಕುತ್ತಿತ್ತು. ಸಂಘದ ಸದಸ್ಯರು ಮತ್ತು ಮಕ್ಕಳು, ಒಟ್ಟಾಗಿ ದೇಶಭಕ್ತಿಯ ಹಾಡುಗಳಿಗೆ ಆಕರ್ಷಕ ನೃತ್ಯ -ಗಾಯನ ಪ್ರದರ್ಶನಗಳನ್ನು ನೀಡಿದರು. ಈ ಕಾರ್ಯಕ್ರಮವು ಮಾತೃಭೂಮಿಯ ಬಗ್ಗೆ ಭಾರತೀಯರಲ್ಲಿ ಆಳವಾಗಿ ಬೇರೂರಿರುವ ಪ್ರೀತಿಯನ್ನು ಪ್ರದರ್ಶಿಸುವುದರೊಂದಿಗೆ, ನೆರೆದಿದ್ದ ಮುನ್ನೂರಕ್ಕೂ ಮಿಕ್ಕಿದ ಪ್ರೇಕ್ಷಕರಿಗೆ ಸಾಂಸ್ಕೃತಿಕ ರಸದೌತಣವನ್ನೂ ನೀಡಿತು. ವಿಶೇಷವಾಗಿ ಅಮೆರಿಕದ ಫಿಲಡೆಲ್ಫಿಯಾದಿಂದ ಅದರ ಕಲಾ ನಿರ್ದೇಶಕಿ ವಿಜಿ ರಾವ್‌ ನೇತೃತ್ವದ ಹೆಸರಾಂತ “ತ್ರಿ ಅಕ್ಷ ‘ ನಾಟ್ಯ ತಂಡದ 8 ಮಂದಿ ಪ್ರತಿಭಾನ್ವಿತ ಕಲಾವಿದರಿಂದ ಅಮೋಘವಾದ ಶಾಸ್ತ್ರೀಯ ನೃತ್ಯದ ಪ್ರದರ್ಶನವು ಪ್ರೇಕ್ಷಕರನ್ನು ಆಕರ್ಷಿಸಿತು. ಗಾಯಕಿ ಪ್ರತಿಮಾ ಅರುಣ್‌ ಶೆಟ್ಟಿ ಅವರ ನಿರ್ದೇಶನದಲ್ಲಿ ದೇಶಭಕ್ತಿಗಾಯನ ಸುಂದರವಾಗಿ ಮೂಡಿಬಂತು. ಸಂಘದ ಅಧ್ಯಕ್ಷರಾದ ಅಮರನಾಥ ರೈ ಹಾಗೂ ಪದಾಧಿಕಾರಿಗಳು…

Read More

ಬಂಟರ ಸಂಘ ಇಂದು ಬಲಿಷ್ಠಗೊಳ್ಳಲು ಪ್ರಾದೇಶಿಕ ಸಮಿತಿಗಳು ಮುಖ್ಯ ಕಾರಣವಾಗಿದೆ. ಪ್ರತಿ ಸಮಿತಿಗಳು ಅರ್ಥ ಪೂರ್ಣ ಕಾರ್ಯಕ್ರಮಗಳನ್ನು ಮಾಡಿ ಸ್ಥಳೀಯ ಬಂಟ ಬಂಧುಗಳಿಗೆ ವಿವಿಧ ರೀತಿಯಲ್ಲಿ ಸಹಕಾರವಾಗಿದೆ. ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಅಪಾರವಾದ ಶ್ರಮವಹಿಸಿ ಸಮಿತಿಯನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಎಲ್ಲಾ ಕಾರ್ಯಕ್ರಮಗಳೆಲ್ಲವೂ ಸಮಯದ ಒಳಗಡೆ ನಡೆಯುವಂತೆ ಮಹತ್ವವಾದ ಜವಾಬ್ದಾರಿಯನ್ನು ಪದಾಧಿಕಾರಿಗಳು ವಹಿಸಬೇಕು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ ನುಡಿದರು. ಅವರು ಜು. 16 ರಂದು ಆದಿತ್ಯವಾರ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದ ಲೀಲಾವತಿ ಶ್ಯಾಮ ಶೆಟ್ಟಿ (ಬಾಬಾಸ್ ಗ್ರೂಪ್) ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಒಂಭತ್ತು ಪ್ರಾದೇಶಿಕ ಸಮಿತಿಗಳಲ್ಲಿ ಒಂದಾದ ಅಂಧೇರಿ-ಬಾಂದ್ರ ಪ್ರಾದೇಶಿಕ ಸಮಿತಿಯ 18 ನೇಯ ವಾರ್ಷಿಕ ಸ್ನೇಹ ಸಮ್ಮಿಲನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಪ್ರಾದೇಶಿಕ ಸಮಿತಿ ಸಮಿತಿಯು ಮಹೇಶ್ ಶೆಟ್ಟಿ ಅವರ ಕಾರ್ಯಧ್ಯಕ್ಷತೆಯಲ್ಲಿ ಪ್ರಾರಂಭಗೊಂಡವು. ಆ ಸಂದರ್ಭದಲ್ಲಿ ನಾನು ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೆ. ಅಂದು ಸುಮಾರು 5000ಕ್ಕೂ ಮಿಕ್ಕಿ…

Read More

ಬಂಟ್ವಾಳದಲ್ಲಿರುವ ಈ ಭವ್ಯ ಮಂದಿರ ನಿರ್ಮಾಣದ ಹಿಂದಿರುವ ಪ್ರೇರಕ ಶಕ್ತಿ ಶ್ರೀ ಗೋವಿಂದ ಮಹಾಸ್ವಾಮಿಗಳು. ಕೇರಳದ ಮಡಿವಂತ ಬ್ರಾಹ್ಮಣ ಕುಲಕ್ಕೆ ಸೇರಿದ್ದ ಗೋವಿಂದ ಸ್ವಾಮಿಗಳು ಗಣೇಶಪುರಿಗೆ ಹೋಗಿ ನಿತ್ಯಾನಂದ ಸ್ವಾಮಿಗಳನ್ನು ಕಂಡು, ನಾನು ಸ್ವಾಮಿ ಆಗುತ್ತೇನೆ, ದೀಕ್ಷೆ ಕೊಡಿ ಎಂದಾಗ ನಿತ್ಯಾನಂದರು ಗೋವಿಂದ ಸ್ವಾಮಿಗಳನ್ನು ಅಡಿಯಿಂದ ಮುಡಿಯವರಿಗೆ ನೋಡಿದರಂತೆ. ನಿನ್ನಲ್ಲಿ ಬ್ರಾಹ್ಮಣ್ಯದ ಮೇಲರಿಮೆಯಿದೆ. ಜೀವರಲ್ಲಿ ಭೇದವೆಣಿಸುವ ಮಡಿ ಮೈಲಿಗೆ ಇದೆ. ಅದನ್ನು ತ್ಯಜಿಸದೆ ಸಾಧನೆ ಸಾಧ್ಯವಿಲ್ಲ. ಸ್ವಲ್ಪ ಕಾಲ ಮೀನಿನ ಹೋಟೆಲ್ ನಲ್ಲಿ ಕೆಲಸ ಮಾಡಿ ಬಾ ಎಂದು ಕಳುಹಿಸಿದರಂತೆ! ಕೊಂಚವೂ ಸಂಕೋಚ ಪಡದೆ ಗುರುಗಳ ಆದೇಶವನ್ನು ಶಿರಸಾ ವಹಿಸಿ ಗೋವಿಂದ ಭಟ್ರು ಗಣೇಶ ಪುರಿಯಲ್ಲಿರುವ ಮಾಂಸದಡುಗೆಯ ಹೊಟೇಲೊಂದರಲ್ಲಿ ಕೆಲಸ ಮಾಡಿದರು. ಎಂಜಲು ಎತ್ತಿದರು. ಮುಸುರೆ ತೊಳೆದರು ಮಾಂಸದಡುಗೆ ಬೇಯಿಸಿದರು. ಅಜ್ಜನ ಪರೀಕ್ಷೆಯಲ್ಲಿ ಸೈ ಎನಿಸಿಕೊಂಡರು. ದೀಕ್ಷೆ ಕೊಟ್ಟ ನಂತರ ಬಂಟ್ವಾಳಕ್ಕೆ ಹೊರಡು ಎಂದು ನಿತ್ಯಾನಂದರ ಆದೇಶವಾಯಿತು. ಗೋವಿಂದ ಸ್ವಾಮಿಗಳು ಬಂಟ್ವಾಳಕ್ಕೆ ಬಂದರು ಭಕ್ತರ ಪಾಲಿಗೆ ಭಾಗ್ಯ ದೇವತೆಯಾಗಿ. ಎಲ್ಲಿಯ ಕೇರಳ?…

Read More