Author: admin
ಈ ಬಾರಿಯ ಪ್ರತಿಷ್ಠಿತ ರಂಗ ಚಾವಡಿ 2022 ಪ್ರಶಸ್ತಿಗೆ ಸಾಹಿತಿ ಜಾನಪದ ವಿದ್ವಾಂಸರಾದ ಮುದ್ದು ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ನವಂಬರ್ 20 ರಂದು ಭಾನುವಾರ ಸಂಜೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಮುದ್ದು ಮೂಡುಬೆಳ್ಳೆ ಅವರು ಬಹುಮುಖ ಪ್ರತಿಭಾವಂತರು ಹಾಗೂ ಬೇರೆ ಬೇರೆ ರಂಗಗಳಲ್ಲಿ ಸೇವೆ ಸಲ್ಲಿಸಿ ಗಮನ ಸೆಳೆದವರು ಹಾಗೂ ಸೆಳೆಯುತ್ತಿರುವವರು. ಸುಮಾರು 16ರ ಪ್ರಾಯದಿಂದಲೇ ಕೆಲಸ ಮತ್ತು ಶಿಕ್ಷಣ – ಜೊತೆಗೆ ನಡೆದು ಬಂತು. ತುಳು ನಾಡು, ಹುಬ್ಬಳ್ಳಿ, ಬೆಂಗಳೂರು, ಮುಂಬೈ – ಮುಂತಾಡೆದೆ ನೌಕರಿ ಮಾಡಿದವರು. ಸರಕಾರದ ನ್ಯಾಯಾಂಗ ಹಾಗೂ ಪ್ರಸಾರ ಇಲಾಖೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ಬಳಿಕ ಮಂಗಳೂರು ವಿಶ್ವವಿದ್ಯಾಲಯದ ಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿ ಗಮನಾರ್ಹ ಸೇವೆ ಸಲ್ಲಿಸಿದವರು. ಇಂಥ ಸಾಧಕನ ಬಗ್ಗೆ ಒಂದು ಕಿರುಪರಿಚಯ ಇಲ್ಲಿದೆ. ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಕತೆಗಾರರಾಗಿ ಗುರುತಿಸಿಕೊಂಡಿದ್ದ ಮುದ್ದು ಮೂಡುಬೆಳ್ಳೆ ಅವರು ಕಲೆ (ನಾಟಕ ಸಂಗೀತ) ಹಾಗೂ…
ಬಂಟರು ಸಂಘಟನಾತ್ಮಕವಾಗಿ, ಧಾರ್ಮಿಕವಾಗಿಯೂ ಬಲಶಾಲಿಯಾಗಿದ್ದರೂ ಸಮಾಜದಲ್ಲಿ ಪರಸ್ಪರ ಸ್ಪರ್ಧಾ ಮನೋಭಾವ ಕಡಿಮೆಯಾಗಬೇಕು. ಒಗ್ಗಟ್ಟು ಹೆಚ್ಚಾಗಬೇಕು. ಇದಕ್ಕಾಗಿ ಹಿರಿಯರ ಸಮ್ಮುಖದಲ್ಲಿ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ರೂಪಿಸಬೇಕಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಸುರತ್ಕಲ್ ಬಂಟರ ಸಂಘದ 22 ನೇ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಅಭಿನಂದನೆ, ಸಹಾಯ ಹಸ್ತ ಮತ್ತು ವಿದ್ಯಾರ್ಥಿ ವೇತನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸುರತ್ಕಲ್ ಬಂಟರ ಸಂಘ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಾ ಬಂದಿದೆ. 25ನೇ ವರ್ಷದ ಹೊಸ್ತಿಲಲ್ಲಿರುವ ಸಂಘ ಇನ್ನಷ್ಟು ಸಮಾಜಮುಖಿ ಸೇವೆ ಮಾಡುತ್ತಾ ಸಮಾಜದ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಲಿ. ಬಂಟರ ಸಂಘಗಳು ಇಂದು ದೇಶ ವಿದೇಶದಲ್ಲಿ ಕೂಡಾ ಇವೆ. ಆದರೆ ಇದೆಲ್ಲವನ್ನು ಒಂದೇ ವೇದಿಕೆಯಡಿ ತರುವ ಕೆಲಸ ನಡೆಯಬೇಕು. ಬಂಟರ ಸಮಾಜ ಎಲ್ಲೂ ಎಡವದಂತೆ ಎಚ್ಚೆತ್ತುಕೊಂಡು ಸಮಾಜದ ಪ್ರತಿಯೊಂದು ಕುಟುಂಬಕ್ಕೂ ಆಸರೆಯಾಗಬೇಕು” ಎಂದು ಐಕಳ ಹರೀಶ್ ಶೆಟ್ಟಿ ಶುಭ…
ಮುಂಬಯಿ ಬಂಟರ ಸಂಘದ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಹಾಗೂ ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆ ಯು ಜಂಟಿಯಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು.
ಮುಂಬಯಿ ಬಂಟರ ಸಂಘದ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಹಾಗೂ ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆ ಯು ಜಂಟಿಯಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು. ಈ ಸಂಧರ್ಭದಲ್ಲಿ ಮುಲುಂಡ್ ಬಂಟ್ಸ್ ನ ಮಾಜಿ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿ, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಅಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಮುಲುಂಡ್ ಬಂಟ್ಸ್ ನ ಅಧ್ಯಕ್ಷ ವಸಂತ್ ಎನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. Blood Donation Camp organised by Andheri Bandra Region along with Bunts Sangha’s SM Shetty Group of Institution.
ಬಂಟ ಸಮಾಜದ ಸಾಧಕರ ಕೀರ್ತಿ ವಿವಿಧ ಕ್ಷೇತ್ರಗಳಲ್ಲಿ ಜಗಜ್ಜಾಹೀರಾಗಿದ್ದು, ಇವರು ಪ್ರವೇಶಿಸಿದ ಕ್ಷೇತ್ರಗಳ ಪ್ರತಿಷ್ಠೆಯನ್ನೂ ಹೆಚ್ಚಿಸಿ ನಮ್ಮ ಸಮಾಜ ಇಂದು ವಿಶ್ವಮಾನ್ಯ ಎನಿಸಿದ್ದರೆ ಅದರ ಹಿಂದೆ ನಮ್ಮವರ ಛಲ, ಪರಿಶ್ರಮ, ಏಕಾಗ್ರತೆಗಳ ಅರಿವಾಗದಿರದು. ಇಂಥಹ ಸಾಧಕರ ಸಾಲಿಗೆ ಸೇರ್ಪಡೆಯಾಗಿ ರಾಸಾಯನಿಕ ಉತ್ಪನ್ನಗಳ ಕ್ಷೇತ್ರ ಸಂಬಂಧಿ ಕೈಗಾರಿಕೋದ್ಯಮದಲ್ಲಿ ಪ್ರಸಿದ್ಧಿ ಪಡೆದ ಬೊಲ್ಯಗುತ್ತು ವಿವೇಕ್ ಶೆಟ್ಟರ ಹೆಸರು ಅತೀ ಗೌರವ ಭಾವದಿಂದ ಉಲ್ಲೇಖಿಸಲ್ಪಡುತ್ತದೆ. ಶ್ರೀಯುತರು ಯಾವುದೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ಜನರ ಸ್ವಾಸ್ಥ್ಯ ಕೆಡದಂತೆ ರಾಸಾಯನಿಕ ಪದಾರ್ಥಗಳ ಉತ್ಪಾದನೆಗೆ ನವೀನ ರೀತಿಯ ತಂತ್ರಜ್ಞಾನವನ್ನು ಬಳಸುವುದರ ಮೂಲಕ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಪ್ರಾಶಸ್ತ್ಯ ನೀಡುವ ಮಾನವ ಕಾಳಜಿಯಿಂದ ಗುರುತಿಸಿಕೊಂಡಿದ್ದಾರೆ. ಮಂಗಳೂರಿನ ಬಹು ಪ್ರತಿಷ್ಠಿತ ಬೊಲ್ಯಗುತ್ತು ಮನೆತನದಲ್ಲಿ ಜನ್ಮ ತಾಳಿದ ವಿವೇಕ್ ಶೆಟ್ಟರು ಬಾಲ್ಯದ ದಿನಗಳಲ್ಲೇ ಮುಂಬಯಿ ನಗರ ಸೇರಿಕೊಂಡರು. ಇಲ್ಲಿಯೇ ಶಿಕ್ಷಣ ಪಡೆದು ಓರ್ವ ಉನ್ನತ ಶಿಕ್ಷಣ ಪಡೆದ ಯುವಕನಾಗಿ ತನ್ನ ಕನಸುಗಳಿಗೆ ಸಾಕಾರ ರೂಪ ಕೊಡಬಹುದಾದ ಅನುಭವ ಸಂಪತ್ತನ್ನು ವಿವಿಧ ಮೂಲಗಳಿಂದ ಸಂಪಾದಿಸಿಕೊಂಡರು. ಮುಂಬಯಿಯಲ್ಲಿ ಅಮೇರಿಕಾ…
ದೇವರ ಸ್ವಂತ ನಾಡಾದ ಕೇರಳ ರಾಜ್ಯದ ಉತ್ತರ ಭಾಗದ ತುಳುನಾಡಿನಲ್ಲಿ ಕುಂಬಳೆ ಸೀಮೆ ಪ್ರಸಿದ್ಧವಾದುದು. ಈ ಸೀಮೆಯ ಉದ್ದಗಲಕ್ಕೂ ತುಳುನಾಡಿನ ರಾಜದೈವಗಳೆಂದು ಪ್ರಖ್ಯಾತವಾದ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಹಲವು ದೈವಸ್ಥಾನಗಳು ಕಾಣಸಿಗುತ್ತವೆ. ಬೆಳೆಂಜದ ಕಿನ್ನಿಗೋಳಿ ಮಾಡವು ಇಂತಹ ಕಾರಣಿಕ ದೈವಸ್ಥಾನಗಳಲ್ಲಿ ಒಂದಾಗಿದೆ. ಬಹಳ ವರ್ಷಗಳ ಹಿಂದೆ ಬಾರಕೂರಿನ ರಾಜನಿಗೆ ಮಕ್ಕಳಿಲ್ಲದೆ ಆತ ತನ್ನ ಸೊಸೆಯನ್ನು ಅಳಿಯ ಸಂತಾನ ಪದ್ಧತಿಯ ಪ್ರಕಾರ ರಾಣಿಯನ್ನಾಗಿ ನೇಮಿಸುತ್ತಾನೆ. ಆಕೆ ಹಲವು ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾಳೆ. ಅವಳ 9 ಮಕ್ಕಳಲ್ಲಿ ಒಬ್ಬಳು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಇತರರೆಲ್ಲ ಯುದ್ಧದಲ್ಲಿ ಮಡಿಯುತ್ತಾರೆ. ಸೋಲಿನಿಂದ ಅವಮಾನಿತರಾಗಿ ಆ ಮೂವರು ಕಾಶಿಯಾತ್ರೆ ಕೈಗೊಳ್ಳುತ್ತಾರೆ. ಕಾಶಿ ವಿಶ್ವನಾಥನನ್ನು ಒಲಿಸಿಕೊಂಡು ಪೂಮಾಣಿ – ಕಿನ್ನಿಮಾಣಿ, ದೈಯಾರೆ ಎಂಬ ಹೆಸರನ್ನು ಪಡೆದು, ಕಾರಣಿಕ ಶಕ್ತಿಯನ್ನು ಗಳಿಸಿ ಅಲ್ಲಿಂದ ದಕ್ಷಿಣಕ್ಕೆ ಪ್ರಯಾಣ ಬೆಳೆಸುತ್ತಾರೆ. ಹಾಗೆ ಭಗಂಡ ಕ್ಷೇತ್ರ (ಭಾಗಮಂಡಲ)ಕ್ಕೆ ತಲುಪಿ ಕಾವೇರಮ್ಮನ ದರ್ಶನ ಪಡೆದು ಘಟ್ಟ ಇಳಿದು ಬರುತ್ತಾರೆ. ಬರುತ್ತಿರುವಾಗ…
ತುಳುನಾಡಿನ ಸಮಗ್ರ ಆಸ್ಮಿತೆಯ ಅವಲೋಕನಕ್ಕಾಗಿ ಎಲ್ಲಾ ಜಾತಿ, ಧರ್ಮದವರನ್ನು ಒಳಗೊಂಡ ಪ್ರತ್ಯೇಕ ತುಳು ಭಾಷಾ ಕೇಂದ್ರ ತುಳುನಾಡಿನಲ್ಲೇ ಸ್ಥಾಪನೆಯಾಗಬೇಕಾದ ಅಗತ್ಯತೆಯಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ಆಶಿಸಿದರು. ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್, ತುಳು ಪರಿಷತ್ ಮಂಗಳೂರು ಕರಾವಳಿ ಲೇಖಕಿಯರ ವಾಚಕಿಯರ ಸಂಘ, ರೋಶನಿ ನಿಲಯದ ಕನ್ನಡ ಸಂಘ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ಸ್ ಸಂಸ್ಥೆಯ ಸಹಯೋಗದೊಂದಿಗೆ ರೋಶನಿ ನಿಲಯದಲ್ಲಿ ಆಯೋಜಿಸಲಾದ ‘ನೆಲಮೂಲದ ನಡೆ: ಶೋಧ – ಸ್ವಾದ’ ಎಂಬ ರಾಜ್ಯ ಮಟ್ಟದ ವಿಚಾರಗೋಷ್ಠಿ ಹಾಗೂ ಡಾ. ಇಂದಿರಾ ಹೆಗ್ಗಡೆ ಅವರು ಬರೆದ ‘ಅತಿಕಾರೆ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೊಂಕಣಿ ಭಾಷೆಯ ಕುರಿತಂತೆ ಆಳವಾದ ಅಧ್ಯಯನಕ್ಕೆ ಪೂರಕವಾಗುವ ಭಾಷಾ ಕೇಂದ್ರವಿದೆ. ಆದರೆ ತುಳುನಾಡಿನಲ್ಲಿ ತುಳುವಿಗೆ ಬೇಕಾಗಿರುವ ತುಳು ಭಾಷಾ ಕೇಂದ್ರ ಇಲ್ಲದಿರುವುದು ಆಶ್ಚರ್ಯ ತಂದಿದೆ. ತುಳು ಅಕಾಡೆಮಿ ಸಹಿತ ವಿವಿಧ ಪ್ರಕಾರಗಳು ಇದ್ದರೂ ತುಳು ಭಾಷಾ ಕೇಂದ್ರ ಇಂದಿನ ಅಗತ್ಯವಾಗಿದೆ. ತುಳುನಾಡಿನಲ್ಲಿ…
ಜಿಲ್ಲಾ ಪಂಚಾಯತ್ ಉಡುಪಿ, ಸ್ವಚ್ಛ ಭಾರತ್ ಮಿಷನ್, ಕಟಪಾಡಿ ಗ್ರಾಮ ಪಂಚಾಯತ್, ಡಾ. ಶ್ರೀ ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ ವತಿಯಿಂದ ಇಂದು ದಿನಾಂಕ 01-10-2023 ರಂದು ಕಟಪಾಡಿ ಪೇಟೆ ಬಳಿ ಹಮ್ಮಿಕೊಳ್ಳಲಾದ “ಸ್ವಚ್ಛತಾ ಹೀ ಸೇವಾ ಅಭಿಯಾನ”ಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಬಿ ಶೆಟ್ಟಿ, ಉಪಾಧ್ಯಕ್ಷರಾದ ಸುಗುಣಾ, ಕಟಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಮತಾ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಸ್ಥಳೀಯರು ಉಪಸ್ಥಿತರಿದ್ದರು.
ಬಂಟರ ಚಾವಡಿ ಪರ್ಕಳ( ರಿ) ಇದರ ವಾರ್ಷಿಕ ಮಹಾಸಭೆಯು ಪರ್ಕಳ ಸುರಕ್ಷಾ ಸಭಾಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಬಂಟರ ಚಾವಡಿಯ ಚಾವಡಿಯ ಅಧ್ಯಕ್ಷರಾದ ಶ್ರೀ ತಾರನಾಥ್ ಹೆಗ್ಡೆಯವರು ವಹಿಸಿದ್ದರು. ಸಂಘದ ಗೌರವಾಧ್ಯಕ್ಷರಾದ ಶ್ರೀ ಜಯರಾಜ್ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಧ್ಯಕ್ಷರಾದ ವಸಂತ ಶೆಟ್ಟಿ ಚೆನ್ನಿಬೆಟ್ಟು, ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೇಬೆಟ್ಟು, ಕೋಶಾಧಿಕಾರಿ ದಿನಕರ್ ಶೆಟ್ಟಿ ಹೆರ್ಗ, ಸಂಘಟನಾ ಕಾರ್ಯದರ್ಶಿ ಶುಭಕರ್ ಶೆಟ್ಟಿ ಮತ್ತು 5 ಘಟಕಗಳ ಅಧ್ಯಕ್ಷರು ವೇದಿಕೆಯಲ್ಲಿ ಆಸೀನರಾಗಿದ್ದರು. ಕುಮಾರಿ ಅನುಷ ಪ್ರಾರ್ಥನೆ ಮಾಡಿದರು. ಕಾರ್ಯಧ್ಯಕ್ಷರಾದ ವಸಂತ ಶೆಟ್ಟಿ ಚೆನ್ನಿಬೆಟ್ಟು ಸಭೆಗೆ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೇಬೆಟ್ಟು ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಪೂರ್ವಧ್ಯಕ್ಷರಾದ ಶಿವರಾಮ ಶೆಟ್ಟಿಯವರು ಸಂಘದ ಧ್ಯೇಯೋದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು. ಕೋಶಾಧಿಕಾರಿ ದಿನಕರ ಶೆಟ್ಟಿಯವರು 2022-23ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ಮತ್ತು ಅದಕ್ಕೆ ಸಭೆಯ ಸದಸ್ಯರ ಅನುಮೋದನೆಯನ್ನು ಪಡೆದುಕೊಂಡರು. ಹಾಜರಿದ್ದ ಸದಸ್ಯರ ಅನುಮತಿ ಮೇರೆಗೆ…
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ಅಬುದಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿಯವರು ಶಾಸಕ ಅಶೋಕ್ ಕುಮಾರ್ ರೈಯವರನ್ನು ಜು. 29 ರಂದು ಪುತ್ತೂರು ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ, ಗೌರವಿಸಿದರು. ಉದ್ಯಮಿ ಜಯಕುಮಾರ್ ರೈ ಮಿತ್ರಂಪಾಡಿ, ಉಪ್ಪಿನಂಗಡಿ – ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಪುತ್ತೂರು ಜನ್ಮ ಫೌಂಡೇಶನ್ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು, ರಿತೇಶ್ ಮಂಗಳೂರು, ರಾಕೇಶ್ ರೈ ಕುದ್ಕಾಡಿಯವರುಗಳು ಉಪಸ್ಥಿತರಿದ್ದರು.
ದುಬಾಯಿ ಫಾರ್ಚೂನ್ ಹೋಟೆಲು ಸಮೂಹಗಳ ವತಿಯಿಂದ ರಕ್ತದಾನ ಶಿಬಿರ ಉದಾತ್ತ ಉದ್ದೇಶಕ್ಕಾಗಿ ಒಗ್ಗೂಡುವುದು ಬದ್ಧತೆ ತೋರಿಸುತ್ತದೆ : ಪ್ರವೀಣ್ ಶೆಟ್ಟಿ ವಕ್ವಾಡಿ
ಮುಂಬಯಿ (ಆರ್ಬಿಐ), ಮೇ.22: ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ದುಬಾಯಿ ವರ್ಷಂಪ್ರತಿಯಂತೆ ಇಂದಿಲ್ಲಿ ಸೋಮವಾರ (ಮೇ.22) ಬೆಳಿಗ್ಗೆ ಗಲ್ಫ್ ರಾಷ್ಟ್ರವಾದ ದುಬಾಯಿ ನಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು. ಕರ್ನಾಟಕ ಕರಾವಳಿಯ ಉಡುಪಿ ಕುಂದಾಪುರ ಮೂಲತಃ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಕಾರ್ಯಾಧ್ಯಕ್ಷ ಪ್ರವೀಣ್ಶೆ ಟ್ಟಿ ವಕ್ವಾಡಿ ತನ್ನ ಹೆಮ್ಮೆಯ ಪೋಷಕರಾದ ನಾರಾಯಣ ಶೆಟ್ಟಿ ಮತ್ತು ಸರೋಜಿನಿ ಶೆಟ್ಟಿ ಅವರ ವಿವಾಹ ವಾರ್ಷಿಕೋತ್ಸವದ ಶುಭಾವಸರದಿ ಫಾರ್ಚ್ಯೂನ್ ಸಮೂಹವು 11ನೇ ವರ್ಷದ ಕಾರ್ಯಕ್ರಮವನ್ನಾಗಿಸಿ ಡಿಹೆಚ್ಎ ಸ್ಥಳೀಯ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಮತ್ತು ರಕ್ತನಿಧಿಯ ಸಹಯೋಗದೊಂದಿಗೆ ರಕ್ತದಾನ ಶಿಬಿರ-2023 ನಡೆಸಿತು. ಪ್ರವೀಣ್ ಶೆಟ್ಟಿ ಸ್ವತಃ ರಕ್ತದಾನಗೈದು ಶಿಬಿರದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ ಶ್ಲಾಘನೆ ವ್ಯಕ್ತಪಡಿಸಿ ಮಾತನಾಡಿ “ನಮ್ಮ ರಕ್ತದಾನ ಶಿಬಿರಕ್ಕೆ ಪಡೆದ ಅಗಾಧ ಪ್ರತಿಕ್ರಿಯೆಯಿಂದ ನಾವು ರೋಮಾಂಚನ ಗೊಂಡಿದ್ದೇವೆ. ನಮ್ಮ ತಂಡದ ಸದಸ್ಯರು, ಪ್ರೋತ್ಸಹಕರು ಮತ್ತು ಸ್ಥಳೀಯ ಸಮುದಾಯವು ಇಂತಹ ಉದಾತ್ತ ಉದ್ದೇಶಕ್ಕಾಗಿ ಒಗ್ಗೂಡುವುದನ್ನು ಕಂಡು ಹೃದಯಸ್ಪರ್ಶಿಯಾಗಿದೆ. ಈ ಕಾರ್ಯಕ್ರಮವು ಕಾರ್ಪೊರೇಟ್…