Author: admin
ಪುಣೆ ಬಂಟರ ಸಂಘದ ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ವತಿಯಿಂದ ಪುಣೆ ಗ್ರಾಮೀಣ ಭಾಗದ ನಸರಾಪುರದ ಮಾವುಲಿ ಅನಾಥಾಶ್ರಮದ ಮಕ್ಕಳಿಗೆ ಮಾರ್ಚ್ ೨೯ ರಂದು ಮಧ್ಯಾಹ್ನದ ಊಟ ಮತ್ತು 2 ತಿಂಗಳಿಗೆ ಬೇಕಾದಷ್ಟು ಆಹಾರದ ಸಾಮಾಗ್ರಿಯನ್ನು ನೀಡಲಾಯಿತು. ಈ ಸಂದರ್ಭದ ಲ್ಲಿ ಊರೂರು ತಿರುಗುತ್ತ ಕೀರ್ತನೆ ಮಾಡಿ ಮಕ್ಕಳನ್ನು ಪಾಲನೆ ಮಾಡುವಂತಹ ಮಹಾರಾಜ್ ಗುರೂಜಿಯನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿ ಮಹಿಳಾ ಸಮಿತಿಯ ಅಧ್ಯಕ್ಷೆ ಯಶೋಧಾ ಜಿ ಶೆಟ್ಟಿ, ಪುಣೆ ಬಂಟರ ಸಂಘದ ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ವಸಂತ್ ಎ ಶೆಟ್ಟಿ ಮತ್ತು ಸಮಿತಿಯ ಸದಸ್ಯರು, ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಇಂತಹ ಪುಣ್ಯ ಕಾರ್ಯಕ್ರಮನ್ನು ಮಾಡಿದ್ದಕ್ಕಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಸಮಿತಿಯ ಎಲ್ಲಾ ಸದಸ್ಯರಿಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿಯವರು…
ಪುತ್ತೂರಿನ ದರ್ಬೆಯಲ್ಲಿರುವ ಉಷಾ ಪಾಲಿ ಕ್ಲಿನಿಕ್ ನಲ್ಲಿ ಡಾ.ಶ್ರೇಷ್ಠ ಆಳ್ವ ರವರು ಏ.3ರಿಂದ ಪ್ರತಿದಿನ ಬೆಳಗ್ಗೆ 10.30 ರಿಂದ ಸಂಜೆ 5 ರ ತನಕ ಸೇವೆಗೆ ಲಭ್ಯವಿದ್ದಾರೆ. ಇವರು ಜನರಲ್ ಪ್ರಾಕ್ಟಿಷನರ್ ನೆಲೆಯಲ್ಲಿ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ನೀಡಲಿದ್ದಾರೆ. ಅನಂತಾಡಿ ಗ್ರಾಮದ ಗಂಗಾಧರ ಆಳ್ವ ಹಾಗೂ ನವೀನಾ ಆಳ್ವಾರವರ ಪುತ್ರಿಯಾದ ಡಾ.ಶ್ರೇಷ್ಠ ಆಳ್ವರವರು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮಾಣಿ ಬಾಲ ವಿಕಾಸ ಇಂಗ್ಲೀಷ್ ಮೀಡಿಯಂ ಶಾಲೆ, ಪಿಯುಸಿಯನ್ನು ಪುತ್ತೂರಿನ ಅಂಬಿಕಾ ಪಿಯು ಕಾಲೇಜು, ಎಂ. ಬಿ. ಬಿ. ಎಸ್ ಪದವಿಯನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂರೈಸಿ ಕೊಡಗಿನ ಸುಲರ್ಬಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದರು.
ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಕುಂದಾಪುರ ಭಾಷಾ ಅಕಾಡೆಮಿ ರಚನೆಯ ಅಗತ್ಯವನ್ನು ಹೇಳಿ ಅಕಾಡೆಮಿ ಸ್ಥಾಪನೆಗೆ ಯತ್ನಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಅವರು ಮಾಧ್ಯಮದ ಜತೆ ಮಾತನಾಡಿ, ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಪೀಠ ರಚನೆಗೆ ಆದೇಶ ಆಗಿದೆ. ಅಲ್ಲಿ ಶೈಕ್ಷಣಿಕ, ಸಂಶೋಧನೆ ಮೊದಲಾದ ಅಧ್ಯಯನಾತ್ಮಕ ಚಟುವಟಿಕೆಗಳು ನಡೆಯಲಿವೆ. ಇದು ಕುಂದಾಪುರ ಭಾಷೆಯ ಕುರಿತು ಮುಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸಿಕೊಡಲಿದೆ. ಇದರ ಜತೆಗೆ ಅಕಾಡೆಮಿ ರಚನೆಯಾದರೆ ಸಂಶೋಧನೆ, ಪ್ರಕಟನೆ ಜತೆಗೆ ಕಲೆ, ಸಂಸ್ಕೃತಿಯ ಪ್ರಸಾರಕ್ಕೂ ಕೊಡುಗೆ ನೀಡಿದಂತಾಗುತ್ತದೆ. ಸಚಿವರ ಕ್ಷೇತ್ರದಲ್ಲೇ ಹೆಬ್ರಿಯಲ್ಲಿ ಕುಂದಾಪುರ ಕನ್ನಡ ಮಾತನಾಡುವವರು ಇದ್ದಾರೆ. ಬ್ರಹ್ಮಾವರದಿಂದ ಬೈಂದೂರಿನವರೆಗೆ ಕುಂದಾಪುರ ಭಾಷೆ ಮಾತನಾಡುವವರು ಇದ್ದಾರೆ. ಆದ್ದರಿಂದ ಅಕಾಡೆಮಿ ರಚನೆಯಿಂದ ಈ ಭಾಗದ ಭಾಷೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಚುನಾವಣೆ ಘೋಷಣೆಗೆ ಮುನ್ನವೇ ಅಕಾಡೆಮಿ ರಚನೆ ನಿರ್ಧಾರ ಘೋಷಿಸಲು ಮನವಿ ಮಾಡುವುದಾಗಿ ಹೇಳಿದ ಅವರು, ಹಲವು ಪ್ರಥಮಗಳಿಗೆ ಹೆಸರಾದ ಕುಂದಾಪುರಕ್ಕೆ ಪ್ರತ್ಯೇಕ ಭಾಷಾ…
ಕನ್ನಡದಲ್ಲಿ ವಾದ, ಪ್ರತಿವಾದ ಹಾಗೂ ತೀರ್ಪುಗಳ ಮೇಲೆ ಅಭಿಪ್ರಾಯ ಮಂಡಿಸಿದ ಸರಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್)ರಿಗೆ ನೀಡಲಾಗುವ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿಗೆ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಭಾಜನರಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನ್ಯಾಯಾಧೀಶರು, ಸರಕಾರಿ ಅಭಿಯೋಜಕರು ಹಾಗೂ ವಕೀಲರಿಗೆ ನೀಡುವ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ ಕೋವಿಡ್ ಕಾರಣಕ್ಕಾಗಿ 2 ವರ್ಷದಿಂದ ನಡೆದಿರಲಿಲ್ಲ. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಪ್ರಕಾಶ್ಚಂದ್ರ ಅವರು 2019-20ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದು ಆ ವೇಳೆ ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾಗಿದ್ದರು.2019-20ನೇ ಹಾಗೂ 2020-21ನೇ ಸಾಲಿನ ಪ್ರಶಸ್ತಿ ಪ್ರದಾನ ರವಿವಾರ ಬೆಂಗಳೂರು ವಿಧಾನಸೌಧದಲ್ಲಿ ಜರಗಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ. ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ ಪಾಲಿಟೆಕ್ನಿಕ್‍ಗೆ ಸ್ಪಂದಿಸಿದ ನಳೀನ್‍ಕುಮಾರ್ ಕಟೀಲ್ ಎರ್ಮಾಳ್ ಹರೀಶ್ ಶೆಟ್ಟಿ ಪ್ರಯತ್ನಕ್ಕೆ ಸಂದ ಫಲ ಎಂದ ನಿಯೋಗ
ಮುಂಬಯಿ (ಆರ್ ಬಿ ಐ), ಡಿ.25: ಮಂಗಳೂರು ಅಲ್ಲಿನ ಕರ್ನಾಟಕ ಪಾಲಿಟೆಕ್ನಿಕ್‍ಗೆ (ಕೆಪಿಟಿ) ಇತ್ತೀಚಿಗೆ ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಭೇಟಿ ನೀಡಿ ಕೆಲವೊಂದು ಉಪಕರಣ, ಕಟ್ಟಡ ನವೀಕರಣ ಮತ್ತು ಸರಕಾರದ ಸವಲತ್ತುಗಳು ಅಲಭ್ಯವಾಗುತ್ತಿರುವುದರ ಬಗ್ಗೆ ಮಾಹಿತಿ ಪಡೆದಿದ್ದರು. ಕೆಪಿಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ (ಬಿಇ) ಇವರನ್ನು ಭೇಟಿಯಾದ ಎರ್ಮಾಳ್ ಹರೀಶ್ ಅಲ್ಲಿನ ಕುಂದು ಕೊರತೆಗಳನ್ನು ಗಮನಿಸಿದ್ದು ಬಳಿಕ ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ವಿಷಯವನ್ನು ಮನವರಿಸಿದ್ದರು. ಶೀಘ್ರಗತಿಯಲ್ಲಿ ಗಮನ ಸೆಳೆದು ಕೆಪಿಟಿ ಸವಲತ್ತುಗಳ ಬಗ್ಗೆ ತಿಳಿದು ಸ್ಪಂದಿಸಿದ ಮಂಗಳೂರು ಸಂಸದರೂ, ರಾಜ್ಯಾಧ್ಯಕ್ಷರಾದ ಕಟೀಲ್ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರಕಾರದ ಗಮನ ಸೆಳೆದು ತಕ್ಷಣವೇ ಹಣ ಬಿಡುಗಡೆ ಮಾಡಿಸಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತರಾದ ಎರ್ಮಾಳು ಹರೀಶ್ ಪ್ರಯತ್ನಕ್ಕೆ ಪ್ರಾಂಶುಪಾಲ ಹರೀಶ್ ಅಭಿವಂದಿಸಿದ್ದು ಈ ಮೂಲಕ ಕೆಪಿಟಿ ಅಭಿವೃದ್ಧಿಯ ಕನಸು ನೆರವೇರಿದಂತಾಗಿದೆ ಎಂದರು. ನಿಯೋಗದಲ್ಲಿ ಕರುಣಾಕರ್ ಶೆಟ್ಟಿ ಮಾಳ ಮತ್ತಿತರರು ಉಪಸ್ಥಿತರಿದ್ದರು.
ಕೃಷಿ ಪ್ರಧಾನ ತೌಳವ ಸಂಸ್ಕೃತಿಯ, ಧಾರ್ಮಿಕ ಐಸಿರಿಯ, ಧರ್ಮದೇವತೆಗಳ ಆಡುಂಬೊಲದ ತುಳುನಾಡಿನಲ್ಲಿ (ಕರಾವಳಿ ಪ್ರದೇಶ) ‘ಪರತ್ ನಿಗಿಪೆರೆ ಬುಡಯ’ (ಹಳೆಯದನ್ನು ಹೊಸಕಿ ಹಾಕಲು ಬಿಡೆವು) ಎಂಬ ದೈವಗಳ ಅಭಯದ ನುಡಿಯೊಂದಿದೆ. ಆರ್ಥಿಕ ಸಂಕಷ್ಟಗಳು ಎಷ್ಟೇ ಬರಲಿ, ಹೇಗೇ ಇರಲಿ ಅವೆಲ್ಲವನ್ನೂ ಮೀರಿ ಶ್ರದ್ಧೆ, ಭಕ್ತಿ, ನಿಷ್ಠೆಯ ಮೂಲ ಮಂತ್ರವಾಗಿ ಮನೆತನದ ಪೂರ್ವಜರಿಂದ ಅನೂಚಾನವಾಗಿ ನಡೆದು ಬಂದಿರುವ ಅನನ್ಯ ಹಿನ್ನೆಲೆಯ ಸಾಂಪ್ರದಾಯಿಕ ಕಂಬಳಗಳನ್ನು ದೈವ-ದೇವತೆಗಳ ಕಟ್ಟುಕಟ್ಟಳೆಯ ಆರಾಧನೆಯೊಂದಿಗೆ, ಗೌಜಿ, ಗದ್ದಲವಿಲ್ಲದ ಧಾರ್ಮಿಕ ಆಚರಣೆಗಳೊಂದಿಗೆ ಈಗಲೂ ಸರಳವಾಗಿ ಆಚರಿಸುತ್ತ ಬಂದಿರುವುದು ದಕ್ಷಿಣದ ಈ ಸಿರಿನಾಡಿನ ಸಾಂಸ್ಕೃತಿಕ ಹಿರಿಮೆ, ದೈವಗಳ ಮಹಿಮೆ, ಜನಪದರ ಭಕ್ತಿಪಂಥದ ಗರಿಮೆ. ರೈತನೆಂದರೆ ‘ಅನ್ನಬ್ರಹ್ಮ’. ಅನ್ನ ಕೊಡುವ ಭೂಮಿಯನ್ನು ಹಸನುಗೊಳಿಸುವ ಕೋಣಗಳೇ ಅವನ ಬದುಕಿನ ಜೀವಾಳ. ವರ್ಷವಿಡೀ ಗದ್ದೆಯ ನಂಟಿಗೆ ಅಂಟಿಕೊಂಡಿರುವ ಆತನ ಆನಂದ, ಉಲ್ಲಾಸಕ್ಕೆ ಹುಟ್ಟಿಕೊಂಡ ಕಂಬಳ ಉತ್ಸವದ ಸುತ್ತ ಈ ಮಣ್ಣಿನ ಜೀವನಾಡಿಯಂತಿರುವ ಜನಪದ ನಂಬಿಕೆಗಳ ದಟ್ಟಐತಿಹ್ಯಗಳಿವೆ. ಮಾನವ ಸಂತಾನ ಪ್ರಕ್ರಿಯೆಯ ಮೇಲೆ ಫಲ ಬೀರುವ ಪ್ರಾಕೃತಿಕ ನಿಷೇಧಗಳಿವೆ.…
ಪಠ್ಯ ಚಟುವಟಿಕೆಗಳೊಂದಿಗೆ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುವಲ್ಲಿ ಭಾರತ್ ಸ್ಕೌಟ್ಸ್ – ಗೈಡ್ಸ್ ನ ರೋವರ್ ಮತ್ತು ರೇಂಜರ್ ವಿಭಾಗ ಅವಕಾಶ ಕಲ್ಪಿಸುತ್ತದೆ. ಆದ ಕಾರಣ ತಾವೆಲ್ಲರೂ ತಮ್ಮ ವಿದ್ಯಾರ್ಥಿಗಳನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಭಾರತ್ ಸ್ಕೌಟ್ಸ್ – ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ ಅವರು ಕರೆ ನೀಡಿದರು. ಅವರು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ಲಾಲ್ ಬಾಗ್ ನಲ್ಲಿರುವ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ, ಉಪನ್ಯಾಸಕಿಯರುಗಳ ರೋವರ್ ಮತ್ತು ರೇಂಜರ್ ಮಾಹಿತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಉದ್ಘಾಟಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಡಿ ಜಯಣ್ಣ,…
ಭಾರತಿಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಮಾಸದ ಶ್ರಾವಣದಲ್ಲಿ ಮಾತ್ರ ಬಾಗಿಲು ತೆಗೆದು ಪೂಜೆ ಸಲ್ಲಿಸುವ ದೇವಾಲವೊಂದಿದೆ. ಮುಂಬಯಿಯ ವಿಲೇಪಾರ್ಲೆಯಲ್ಲಿನ ಪುರುಷೋತ್ತಮ ದೇವಾಲಯವಿದು. ಮತ್ತೆ ಈ ದೇವಾಲಯದ ಬಾಗಿಲು ತೆರೆಯುವುದು ಮುಂದಿನ ಮೂರು ವರ್ಷಗಳ ನಂತರ. ಈ ಸಲ ಜುಲೈ18 ರಿಂದ ಅಗಸ್ಟ್ 16 ರವರೆಗೆ ಇಲ್ಲಿ ದೇವರಿಗೆ ಅಧಿಕ ಮಾಸದ ಶ್ರಾವಣ ತಿಂಗಳಲ್ಲಿ ಪೂಜೆ, ಅಭಿಷೇಕ, ಹಾಗೂ ಭಕ್ತರಿಗೆ ದರ್ಶನ ಸಿಗುತ್ತದೆ. ಪುರುಷೋತ್ತಮ ಮಾಸವು ಎಲ್ಲಾ ತಿಂಗಳುಗಳಿಗಿಂತ ಭಿನ್ನವಾಗಿರುತ್ತದೆ. ಏಕೆಂದರೆ ಇದು ಪ್ರತಿ ವರ್ಷ ಬರುವುದಿಲ್ಲ. ಮೂರು ವರ್ಷಕ್ಕೊಮ್ಮೆ ಮಾತ್ರ ಬರುವುದರಿಂದ ಈ ಮಾಸದಲ್ಲಿ ವಿಶೇಷವಾಗಿ ವಿಷ್ಣು, ಸೂರ್ಯ ಮತ್ತು ಶಿವ ಈ ಮೂರು ದೇವರನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಪುರುಷೋತ್ತಮ ಮಂದಿರ್ ಜಾನಾ ಹೇ ಅಂತ ನಮ್ಮ ಬಿಲ್ಡಿಂಗ್ ಮಹಿಳಾ ಮಣಿಗಳು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುವುದನ್ನು ಕೇಳಿಸಿಕೊಂಡ ನಾನು ಎಲ್ಲಿ ಏನು ಅಂತ ವಿಚಾರಿಸಿದಾಗ ಮುಂಬಯಿಯ ವಿಲೆಪಾರ್ಲೆ ಪಶ್ಚಿಮದಲ್ಲಿ ರೈಲು ನಿಲ್ದಾಣದಿಂದ ಕೇವಲ 40 ನಿಮಿಷಗಳ ಅಂತರದಲ್ಲಿ…
“ಸೃಜನಾ” ಈ ಹೆಸರು ಸಂಸ್ಥೆಗೆ ನಿಜವಾಗಿಯೂ ಸಾರ್ಥಕ. ಸೃಷ್ಟಿಯಲ್ಲಿ ಸ್ತ್ರೀ ಇಲ್ಲದಿದ್ದರೆ ಸೃಷ್ಟಿ ಸಾಧ್ಯವಾಗುವುದಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ, ಪುರುಷರಿಬ್ಬರ ರಚನೆ ಬೇರೆ, ಆನುವಾದಕ ಬೇರೆ, ಆದರೆ ಅದರಲ್ಲಿ ಸಾಮರಸ್ಯವಿದೆ. ಹೆಣ್ಣು ಮಕ್ಕಳಿಗೆ ಶಾಸ್ತ್ರದಲ್ಲಿ ಕೊಟ್ಟ ಸ್ಥಾನ ಮೊದಲಾಗಿದೆ. ಅದು ಮಾತೃಭಾವವೂ ಹೌದು. ನಮ್ಮ ವೇದ ಪುರಾಣದಲ್ಲಿ ಕೂಡಾ ಸ್ತ್ರೀ ಪುರುಷರ ಬಗ್ಗೆ ಚಿಂತನೆ ಮಾಡಿದೆ ಹೊರತು ಬರೇ ಪುರುಷರ ಚಿಂತೆ ಮಾಡಿಲ್ಲ. ಸ್ತ್ರಿ ಇಲ್ಲದಿದ್ದರೆ ಪುರುಷ ಅರ್ಧ, ಹಾಗೆನೇ ಪುರುಷ ಇಲ್ಲದಿದ್ದರೆ ಸ್ತ್ರೀ ಅರ್ಧ. ಇದು ನಮ್ಮ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಎಂದು ಬಹುಭಾಷಾ ಪಂಡಿತ ನಾಗರಹಳ್ಳಿ ಪ್ರಹ್ಲಾದಾಚಾರ್ಯ ತಿಳಿಸಿದರು. ಜೂನ್ 10 ರ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಮೊದಲ ಮಹಡಿಯ ಕಿರು ಸಭಾಗೃಹದಲ್ಲಿ ಮುಂಬಯಿ ಕನ್ನಡ ಲೇಖಕಿಯರ ಬಳಗ ಸೃಜನಾ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಗೋಷ್ಠಿಯನ್ನು ಉದ್ಘಾಟಿಸಿ ಪ್ರಹ್ಲಾದಾಚಾರ್ಯ ಮಾತನಾಡಿದರು. ಸೃಜನಾ ಸಂಚಾಲಕಿ ಪದ್ಮಜಾ ಮಣ್ಣೂರ ಮಾರ್ಗದರ್ಶನದಲ್ಲಿ…
ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಆಡಲು ಪುಣೆಗೆ ಆಗಮಿಸಿರುವ ಕರ್ನಾಟಕದ ರಾಜ್ಯ ಬ್ಯಾಡ್ಮಿಂಟನ್ ತಂಡ ಪುಣೆ ಬಂಟರ ಭವನಕ್ಕೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ನೇತೃತ್ವದ ಆಡಳಿತ ಸಮಿತಿಯು ನಮ್ಮ ತಾಯ್ನಾಡಿನ ಕ್ರೀಡಾ ತಾರೆಯರನ್ನು ಶಾಲು ಹೊದಿಸಿ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು. ಈ ಸಂಧರ್ಭ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಪದಾಧಿಕಾರಿಗಳಾದ ರವಿ ಕೆ ಶೆಟ್ಟಿ ಕಾಪು, ಕಿಶೋರ್ ಹೆಗ್ಡೆ, ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ ಸಿ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ ಮತ್ತಿತರರು ಉಪಸ್ತಿತರಿದ್ದರು.