ಪ್ರಥಮ ಹಂತದಲ್ಲಿ ಸುಮಾರು 30 ಕೋ. ರೂ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ದಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾ.2, 2025 ರಂದು ಜರುಗಲಿರುವ ಮಾರಿಯಮ್ಮ ದೇವಿಯ ಪುನಃ ಪ್ರತಿಷ್ಠೆ ಸಹಿತ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಮಂಗಳವಾರ ಪ್ರಧಾನ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕ ಮೇ, ಮೂ ಶ್ರೀನಿವಾಸ ತಂತ್ರಿ ಕಲ್ಯ ಅವರ ಉಪಸ್ಥಿತಿಯಲ್ಲಿ ನೂತನ ಗರ್ಭಗುಡಿಯಲ್ಲಿ ಗೋನಿವಾಸ ಧಾರ್ಮಿಕ ಕಾರ್ಯಕ್ರಮ ಜರಗಿದವು.
ಕಳೆದ ಎ.9 ರಂದು ಕಾಪು ಮಾರಿಯಮ್ಮ, ಉಚ್ಚಂಗಿ ದೇವಿಯ ನಿರ್ಮಾಣ ಹಂತದ ನೂತನ ಗರ್ಭಗುಡಿಯಲ್ಲಿ ಸಾನಿಧ್ಯ ವೃದ್ಧಿಗಾಗಿ ಪ್ರಾಚೀನ ಸಪ್ರದಾಯದಂತೆ ಭೂಕರ್ಷನ ಖನನ ಹರಣ, ದಾಹ, ಪೂರಣ ಸಹಿತ ನವಧಾನ್ಯಗಳಿಂದ ಬೀಜ ಪವನ ನಡೆಸಲಾಗಿದ್ದು ಅದರ ಮುಂದುವರಿದ ಭಾಗವಾಗಿ ಮೊಳಕೆಯೊಡೆದಿರುವ ನವಧಾನ್ಯಗಳನ್ನು ಗೋವುಗಳಿಂದ ಮೇಯಿಸುವ ಕಾರ್ಯಕ್ರಮವೇ ಗೋನಿವಾಸವಾಗಿದ್ದು ಏಕಕಾಲದಲ್ಲಿ ಕರುಗಳ ಸಹಿತ ಒಂಬತ್ತು ಗೋವುಗಳನ್ನು ಕೊಳಲು ವಾದನದೊಂದಿಗೆ ನಿರ್ಮಾಣ ಹಂತದ ಗರ್ಭಗುಡಿಯವರೆಗೆ ಕರೆದೊಯ್ದು ಅಲ್ಲಿ ಸಾಮೂಹಿಕ ಗೋಪೂಜೆ ನಡೆಸಿ, ಬಳಿಕ ವಾಸ್ತವ್ಯ (ಗೋನಿವಾಸ)ಕ್ಕಾಗಿ ಒಳಗೆ ಬಿಡಲಾಯಿತು.
ಶಾಸಕ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಕಾಪು ಬೀಡು, ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ. ಮತ್ತು ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್ ಕೆ., ಜ್ಯೋತಿಷ್ಯ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ ಮಡುಂಬು, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ ಉದ್ಯಮಿ ಸದಾನಂದ ಶೆಟ್ಟಿ ಪುಣೆ, ವೈ ಪ್ರಪುಲ್ಲ ಶೆಟ್ಟಿ ಎಲ್ಲೂರುಗುತ್ತು, ಉಮಾಕೃಷ್ಣ ಶೆಟ್ಟಿ ಮುಂಬೈ, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಮನೋಹರ್ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ್ ಸುಂದರ್ ಶೆಟ್ಟಿ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪುಣೆ ಸಮಿತಿ ಉಪಾಧ್ಯಕ್ಷ ಮಾಧವ ಶೆಟ್ಟಿ ಪಾದೂರು ಹೊಸಮನೆ, ದಿನೇಶ್ ಶೆಟ್ಟಿ ಕಳತ್ತೂರು, ಉದಯ್ ಶೆಟ್ಟಿ ಕಳತ್ತೂರು, ವಸಾಯಿ ದಹಾಣು ವಲಯದ ಮುಖ್ಯ ಸಂಚಾಲಕ ರಮೇಶ್ ವಿ. ಶೆಟ್ಟಿ ಮುಂಬಯಿ, ಮೀರಾ ಬಾಯಂದರ್ ವಲಯದ ಮುಖ್ಯ ಸಂಚಾಲಕ ಕಿಶೋರ್ ಶೆಟ್ಟಿ ಕುತ್ಯಾರು, ವಾರ್ಡ್ ಸಮಿತಿ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯ ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ ವಂದಿಸಿದರು. ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು.