Author: admin
ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್ ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದು ಮುಂದಿನ ಏಪ್ರಿಲ್ 16 ರಂದು ಸಂಘದ ರಜತ ಮಹೋತ್ಸವದ ಭವ್ಯ ಸಮಾರಂಭವು ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಇವರ ನೇತೃತ್ವದಲ್ಲಿ ದಿನಪೂರ್ತಿ ನಡೆಯಲಿದ್ದು ಮಾರ್ಚ್ 23 ರಂದು ಚಿಂಚ್ವಾಡ್ ನಲ್ಲಿರುವ ಸಂಘದ ಮಿನಿ ಸಭಾಗೃಹದಲ್ಲಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ, ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ, ಕೆ. ಪದ್ಮನಾಭ ಶೆಟ್ಟಿ, ವಿಜಯ್ ಶೆಟ್ಟಿ ಕಟ್ಟಣಿಗೆ ಮನೆ ಬೋರ್ಕಟ್ಟೆ, ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಬೆಳ್ಳಂಪಳ್ಳಿ, ಗೌರವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು ,ಶಿಕ್ಷಣ ಮತ್ತು ಸಮಾಜಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿಜಯ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿ ಸಂಘದ ಸದಸ್ಯರಾದ ಅವಿನಾಶ್ ಶೆಟ್ಟಿ ಮಂದಾಡಿಗುತ್ತು, ಸಂತೋಷ್ ಕಡಂಬ, ನಿಧೀಶ್ ಶೆಟ್ಟಿ ನಿಟ್ಟೆ, ಕಿರಣ್…
ಮುಂಬಯಿಯ ಹಿರಿಯ ಕವಿ, ಸಾಹಿತಿ, ಪತ್ರಕರ್ತ ಕೋಡು ಭೋಜ ಶೆಟ್ಟಿಯವರು ಮುಲುಂಡ್ ಪಶ್ಚಿಮದ ಸಿಟಿ ಆಫ್ ಜೋಯ್ಸ್ ಇದರ ಹುರಾ ಅಪಾರ್ಟ್ಮೆಂಟ್ ನ ಸ್ವಗೃಹದಲ್ಲಿ ವಯೋಸಹಜ ಅಸ್ವಸ್ಥತೆಯಿಂದ ನಿಧನರಾದರು. ಓರ್ವ ಸಾಹಿತಿ, ನಾಟಕಕಾರ, ನಿರ್ದೇಶಕ, ಹೋಟೆಲು ಉದ್ಯಮಿಯಾಗಿ ಜನಾನುರಾಗಿಯಾಗಿದ್ದ ಮೃತರು ಸಾಮಾಜಿಕ ಕಾಳಜಿಯುಳ್ಳವರಾಗಿದ್ದು ಜನಪರ ಸೇವೆಯಲ್ಲಿ ನಿರತರಾಗಿದ್ದರು. ಸುಮಾರು 500 ಕ್ಕೂ ಮಿಕ್ಕಿ ಕತೆ, ಕವಿತೆ, ಲೇಖನಗಳನ್ನು ರಚಿಸಿದ್ದು ಹಾಸ್ಯ ಕವಿ ಎಂದೇ ಪ್ರಸಿದ್ದರಾಗಿದ್ದರು. ಇವರು ಸುಮಾರು 30 ಕ್ಕೂ ಅಧಿಕ ನಾಟಕಗಳನ್ನು ರಚಿಸಿದ್ದು ಅವುಗಳಲ್ಲಿ ಸುಮಾರು 15 ನಾಟಕಗಳು ಪ್ರಕಾಶಿತಗೊಂಡಿದ್ದವು. ಇವರು ರಚಿಸಿದ ಕಪ್ಪು ನೆತ್ತೆರ್ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆ ಗೌರವ ಪ್ರಾಪ್ತಿಯಾಗಿತ್ತು. ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರ ವಾಣಿ ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಭೋಜ ಶೆಟ್ಟರು ಪತ್ನಿ, ಎರಡು ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಭೋಜ ಶೆಟ್ಟಿಯವರ ನಿಧನಕ್ಕೆ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,…
ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಮನವಿ ಪತ್ರವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಬಿಡುಗಡೆ ಮಾಡಿದರು. ಒಕ್ಕೂಟದ ಮೂಲಕ ಈ ಧಾರ್ಮಿಕ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಐಕಳ ಹರೀಶ್ ಶೆಟ್ಟಿ ನುಡಿದರು. ಈ ಸಂದರ್ಭದಲ್ಲಿ ವೇದವ್ಯಾಸ ಉಡುಪ, ಮುಂಬಯಿ ಸಮಿತಿ ಗೌರವಾಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಮಾಗಂದಡಿ, ನಿತಿನ್ ಶೆಟ್ಟಿ ದೇವಸ್ಯ ಕೊಡೆತ್ತೂರುಗುತ್ತು, ಶ್ರೀಧರ ಆಳ್ವ ಮಾಗಂದಡಿ, ಶ್ರೀ ಜಯರಾಮ ಮುಕ್ಕಾಲ್ದಿ, ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬ್ರಹ್ಮಕಲಶದ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಮೋಹನ್ ಶೆಟ್ಟಿ ಮೂಡು ದೇವಸ್ಯ, ಬ್ರಹ್ಮಕಲಶ ಸಮಿತಿಯ ಕೋಶಾಧಿಕಾರಿ ಶೈಲೇಶ್ ಅಂಚನ್ ಉಪಸ್ಥಿತರಿದ್ದರು.
‘ಕರ್ನಾಟಕದಲ್ಲಿ ಪರಿಶುದ್ಧವಾದ ಕನ್ನಡ ಭಾಷೆಯನ್ನು ಬಳಸುವ ಒಂದು ಕಲಾಪ್ರಕಾರವಿದ್ದರೆ ಅದು ಯಕ್ಷಗಾನ ಮಾತ್ರ. ಕಳೆದ ಹತ್ತು ವರ್ಷಗಳಿಂದ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಪ್ರತಿ ನವೆಂಬರ್ ತಿಂಗಳಲ್ಲಿ ನಡೆಸುತ್ತಿರುವ ಯಕ್ಷಗಾನ ತಾಳಮದ್ದಳೆಯ ನುಡಿ ಹಬ್ಬ ಕನ್ನಡ ಜನತೆಗೆ ಯಕ್ಷಾಂಗಣದ ಮಹೋನ್ನತ ಕೊಡುಗೆ. ಅದಕ್ಕಾಗಿ ಈ ಬಾರಿ ಹನ್ನೊಂದನೇ ಸಪ್ತಾಹವು ಕಲಾಭಿಮಾನಿಗಳ ಪ್ರೋತ್ಸಾಹದಿಂದ ಯಶಸ್ವಿಯಾಗಲಿ’ ಎಂದು ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ನವೆಂಬರ್ 19 ರಿಂದ 25 ರವರೆಗೆ ಮಂಗಳೂರಿನಲ್ಲಿ ಆಯೋಜಿಸಿದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023: ಶ್ರೀಹರಿ ಚರಿತ್ರೆ’ ಸರಣಿಯ ಕರೆಯೋಲೆಯನ್ನು ಕದ್ರಿ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಮಹೇಶ್ ಮೋಟರ್ಸ್ ಮಾಲಕ ಎ.ಕೆ.ಜಯರಾಮ ಶೇಖ ಶುಭ ಹಾರೈಸಿದರು. ಯಶಸ್ಸಿಗೆ ಪ್ರಾರ್ಥನೆ: ಬಳಿಕ ದೇವರ ಮುಂದೆ ಆಮಂತ್ರಣ ಪತ್ರಿಕೆಯನ್ನಿರಿಸಿ…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸಿಎನ್ ಜಿ ಉತ್ಪಾದನೆ ಘಟಕವನ್ನು ತನ್ನ ಒಡ್ಡೂರು ಫಾರ್ಮ್ಸ್ ನಲ್ಲಿ ಆರಂಭಿಸಿದ್ದು, ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಈ ಕುರಿತು ಒಡ್ಡೂರು ಫಾರ್ಮ್ಸ್ ನಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿ ಶಾಸಕ ರಾಜೇಶ್ ನಾಯ್ಕ್, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ಅನುಷ್ಠಾನಗೊಂಡಿದ್ದು, ಶೀಘ್ರ ಕೇಂದ್ರ ಸಚಿವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಶಾಸಕ ರಾಜೇಶ್ ನಾಯ್ಕ್ ಮಾರ್ಗದರ್ಶನದಲ್ಲಿ ಅವರ ಪುತ್ರ ಉನ್ನತ್ ಆರ್. ನಾಯ್ಕ್ ಘಟಕದ ಉಸ್ತುವಾರಿ ನೋಡಿಕೊಳ್ಳಲಿದ್ದು ರೀಟ್ಯಾಪ್ ಸೊಲ್ಯೂಷನ್ ಸಂಸ್ಥೆ ಇದರ ಪೂರ್ತಿ ನಿರ್ವಹಣೆ ಮಾಡಲಿದೆ. ಸುಮಾರು 60 ಸೆಂಟ್ಸ್ ಜಮೀನಿನಲ್ಲಿ ಘಟಕ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆ ಆರಂಭಗೊಂಡಿದೆ. ಸದ್ಯಕ್ಕೆ ನಗರ ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ಹಸಿ ತ್ಯಾಜವನ್ನು ಬಳಸಿಕೊಂಡು ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆ ಮಾಡಲಾಗುತ್ತಿದ್ದು, ಇದರ ಮಾರಾಟಕ್ಕಾಗಿ ಪೆಸೊ (ಪೆಟ್ರೋಲಿಯಂ ಮತ್ತು…
“ತುಳುನಾಡು” ಪರಶುರಾಮ ಸೃಷ್ಟಿ ಎಂಬುದು ಲೋಕ ಪ್ರತೀತಿ. ದ್ರಾವಿಡ ಮೂಲದ ಜನರು ಹೆಚ್ಚಾಗಿ ವಾಸಿಸುತ್ತಿರುವ ತುಳುನಾಡಿನಲ್ಲಿ ಬಂಟರು ಮೂಲ ಹಾಗೂ ಪ್ರಮುಖ ಪಂಗಡದವರಾಗಿ ಕಂಡು ಬರುತ್ತಾರೆ. ಬಂಟರ ಮಾತೃಭಾಷೆ ತುಳು. ತುಳುನಾಡಿನ ಬಲಿಷ್ಟ ಕುಲ ಕುಟುಂಬದವರಾಗಿ ಬಂಟರು ಹಲವಾರು ಪೌರುಷಗಳನ್ನು ಮೆರೆದಿದ್ದಾರೆ. ಬಂಟರು ತುಳುನಾಡಿನ ರಕ್ಷಣೆಗಾಗಿ ಪರಶುರಾಮರ ಆಣತಿಯಂತೆ ನೆಲೆನಿಂತ “ನಾಗವಂಶಿ ಕ್ಷತ್ರಿಯರು” ಎಂದು ತಿಳಿದುಬರುತ್ತದೆ. ತುಳು ನಾಡಿನ ಬಂಟರು ನಾಗವಂಶಿ ಕ್ಷತ್ರಿಯರಾಗಿದ್ದು ನಾಗಬ್ರಹ್ಮ ದೇವರನ್ನು ಮೂಲ ಮತ್ತು ಕುಲ ದೇವರಾಗಿ ನಂಬುತ್ತಾರೆ. ತುಳು ನಾಡಿನಲ್ಲಿ ನಾಗರಪಂಚಮಿ ಬಹಳ ವಿಶೇಷವಾದ ಹಾಗೂ ಪರ್ವಗಳ ಸಾಲಿನಲ್ಲಿ ಬರುವ ಪ್ರಥಮ ಹಬ್ಬ. ಇದಲ್ಲದೆ ತುಳುನಾಡಿನ ಬಂಟರು ನಾಗಮಂಡಲ, ಆಶ್ಲೇಷ ಬಲಿ, ದಕ್ಕೆದ ಬಲಿ ಎಂಬಿತ್ಯಾದಿ ವಿಶೇಷ ನಾಗದೇವರ ಆರಾಧನೆಗಳನ್ನು ಮಾಡುತ್ತಾರೆ. ನಾಗರ ಪಂಚಮಿಯಂದು ಎಲ್ಲಾ ಕುಲ ಕುಟುಂಬದವರು ಮೂಲದ ನಾಗದೇವರಿಗೆ ಹಾಲೆರೆಯುತ್ತಾರೆ. ವಿಶೇಷವಾಗಿ ಬಂಟರ ಮೂಲಸ್ಥಾನಗಳಿಗೆ ಆದಿ ಎಂದು ಹೇಳುತ್ತಾರೆ. ಇದರಿಂದ ಬಂಟರ ಮೂಲಸ್ಥಾನ ತುಳುನಾಡು ಎಂಬುದಕ್ಕೆ ಪೂರ್ಣ ಸ್ಪಟೀಕರಣ ಸಿಕ್ಕಂತಾಗುತ್ತದೆ. ಹಲವಾರು ಸಹಸ್ರ…
ಉಡುಪಿ ಸಮೀಪದ ಕಾಪು ಹೊಸ ಮಾರಿಗುಡಿಯ ಅಭಿವೃದ್ಧಿ ಕಾರ್ಯ ಭರಪೂರವಾಗಿ ನಡೆಯುತ್ತಿದ್ದು ಇದರ ಯಶಸ್ವಿಗಾಗಿ ಅಂತರಾಷ್ಟ್ರೀಯ ಘಟಕವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಬೋಸ್ಟನ್ನಲ್ಲಿ ಉದ್ಘಾಟಿಸಲಾಯಿತು. ದೇವಾಲಯಗಳ ನಾಡು ‘ತುಳುನಾಡ್’ ತನ್ನ ಕಿರೀಟಕ್ಕೆ ಮತ್ತೊಂದು ಸೇರ್ಪಡೆಯಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ದಾರವಾಗುತ್ತಿದ್ದು ಹದಿನೇಳನೇ ಶತಮಾನದ ಕೆಳದಿ ಅರಸರ ಕಾಲದ ಬೇರುಗಳನ್ನು ಹೊಂದಿರುವ ಐತಿಹಾಸಿಕ ದೇವಾಲಯವನ್ನು ಭರಪೂರವಾಗಿ ನವೀಕರಿಸಲಾಗುತ್ತಿದೆ. ದೇವಿಯ ಭಕ್ತರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ ಮತ್ತು ಹೊಯ್ಸಳ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯದ ಜೀರ್ಣೋದ್ಧಾರಕ್ಕೆ ಸಹಾಯ ಮಾಡಲು 18 ಕ್ಕೂ ಹೆಚ್ಚು ದೇಶಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಒಂಬತ್ತು ಸದಸ್ಯರ ಯು ಎಸ್ ಎ ಸಮಿತಿಯನ್ನು ಶ್ರೀ ಭಾಸ್ಕರ್ ಶೇರಿಗಾರ್ ದೀಪ ಬೆಳಗಿಸುವ ಮೂಲಕ ಧಾರ್ಮಿಕ ಸಮಾರಂಭದಲ್ಲಿ ಉದ್ಘಾಟಿಸಿದರು. ಶೈಲಶ್ರೀ ಶೇರಿಗಾರ್, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ವಾಸುದೇವ ಶೆಟ್ಟಿ, ಅಮೇರಿಕಾ ಸಮಿತಿಯ ಸದಸ್ಯರಾದ ಶ್ರೀ ಶರತ್ ಅಮೀನ್ ಮತ್ತು ಬೋಸ್ಟನ್ ತುಳುಕೂಟದ ಸಂಸ್ಥಾಪಕ ಅಧ್ಯಕ್ಷರು, ಬೋಸ್ಟನ್ ಕನ್ನಡ…
ಭಾರತ ಸಹಿತ ಏಷ್ಯಾ ಖಂಡದಲ್ಲಿ ಪ್ರಸಕ್ತ ವರ್ಷ ತಾಪಮಾನ ಒಂದೇ ಸಮನೆ ಹೆಚ್ಚುತ್ತಿದ್ದು ಆತಂಕಕಾರಿ ಸ್ಥಿತಿಯನ್ನು ತಲುಪಿದೆ. ಭಾರತವಂತೂ ಕಂಡರಿಯದಂಥ ಸುಡುಬಿಸಿಲಿನಿಂದ ಕಂಗೆಟ್ಟಿದೆ. ತಾಪಮಾನ ಹೆಚ್ಚಳದ ಜತೆಜತೆಯಲ್ಲಿ ಉಷ್ಣಹವೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದು ದೇಶದ ಸರಿಸುಮಾರು ಶೇ. 90ರಷ್ಟು ಪ್ರದೇಶ ಉಷ್ಣಹವೆಯ ಅಪಾಯದಲ್ಲಿದ್ದು ಇದನ್ನು ಅಪಾಯಕಾರಿ ವಲಯ ಎಂದು ಗುರುತಿಸಲಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈಗ ದೇಶದ ಬಹುತೇಕ ಭಾಗಗಳು ಬಿಸಿಲಿನ ಝಳದಿಂದ ತತ್ತರಿಸುತ್ತಿದ್ದು ಹಲವೆಡೆ ಬಿಸಿಲಿನ ತೀವ್ರತೆಯ ಕಾರಣದಿಂದ ಜನರು ಸಾವನ್ನಪ್ಪುತ್ತಿರುವ ಬಗೆಗೆ ವರದಿಯಾಗುತ್ತಿದೆ. ಇದೇ ವೇಳೆ ರಬಿ ಋತುವಿನ ಬೆಳೆಗಳ ಮೇಲೆ ಈ ವಿಪರೀತ ಬಿಸಿಲು ಮತ್ತು ಧಗೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಇಳುವರಿ ಕುಂಠಿತವಾಗಿದೆ. ಅಕಾಲಿಕ ಮಳೆ ಮತ್ತು ತಾಪಮಾನ ಹೆಚ್ಚಳ ರೈತಾಪಿ ವರ್ಗ ಮತ್ತು ಜನಸಾಮಾನ್ಯರ ಮೇಲೆ ತೀವ್ರತೆರನಾದ ಪರಿಣಾಮವನ್ನು ಬೀರತೊಡಗಿದೆ. ದಿನಗೂಲಿ ಕಾರ್ಮಿಕರ ಮೇಲಂತೂ ಬಿಸಿಲಿನ ಝಳ ನೇರ ಪರಿಣಾಮವನ್ನು ಬೀರಿದೆ. ಇದೇ ವೇಳೆ ನಿರ್ಮಾಣ ಕಾಮಗಾರಿಗಳಿಗೂ ಇದು ಹೊಡೆತ ನೀಡಿದ್ದು ನಿರೀಕ್ಷಿತ…
ರಿಷಬ್ ಶೆಟ್ಟಿ ಮಾತ್ರವಲ್ಲದೆ ತುಳುನಾಡಿನ ಸಮಸ್ತ ಚಿತ್ರ ನಿರ್ದೇಶಕ ನಿರ್ಮಾಪಕರಿಗೆ ನನ್ನದೊಂದು ವಿನಂತಿ. ಕಾಂತಾರ ಸಿನಿಮಾದಂತಹ ಚಿತ್ರ ಮೇಲ್ನೋಟಕ್ಕೆ ಉತ್ತಮವಾಗಿ ಕಂಡು ಬಂದರೂ. ಇಂದು ಬೀದಿ ಬೀದಿಗಳಲ್ಲಿ ಕಾಂತಾರ ಸಿನಿಮಾದ ದೃಶ್ಯಗಳು ಮನರಂಜನೆಗೆ ಒಳಗಾಗಿರುವುದು ಕಂಡಾಗ ನನ್ನಂತಹ ದೈವ ಭಕ್ತರಿಗೆ ತುಂಬಾ ಬೇಸರವಾಗುವುದು ಸಹಜ. ಮೇಲಿಂದ ಮೇಲೆ ದೈವಗಳಿಗೆ ಅವಮಾನ ಆಗುತ್ತಿದ್ದರೂ ತುಳುವರು ಸಹಿಸಿಕೊಂಡಿರುವುದು ನಮ್ಮ ದುರಾದೃಷ್ಟ. ಬೆರ್ಮರೆ ಸೃಷ್ಠಿ ! ತುಳುನಾಡಿನ ದೈವಾರಾಧನೆ ನೇಮ ಕೋಲಗಳಂತಹ ಆಚರಣೆಗಳಿಗೆ ಇರುವ ಮಹತ್ವ ಪ್ರಪಂಚದ ಬೇರೆ ಯಾವುದೇ ಆಚರಣೆಗೆ ಇಷ್ಟೊಂದು ಮಹತ್ವ ಇಲ್ಲಾ ಎಂದರೆ ತಪ್ಪಾಗಲಾರದು. ಹೇಗೆಂದರೆ ಸಿನಿಮಾದಲ್ಲಿ ಬಂದ ದೈವಗಳ ದೃಶ್ಯ ಇಂದು ದೇಶದಾದ್ಯಂತ ವೇದಿಕೆಗಳಲ್ಲಿ ಆಕರ್ಷಣೆ ಮತ್ತು ಮನರಂಜನೆಗಾಗಿ ಮೊದಲ ಆಯ್ಕೆ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿ. ಕಾಂತಾರ ಸಿನಿಮಾ ಒಂದು ದೈವಗಳನ್ನು ದೇಶದಾದ್ಯಂತ ಪರಿಚಯಿಸುವ ಸಿನಿಮಾ ಆದರೂ ಅದರಿಂದ ಸಾಧಕಕ್ಕಿಂತಲೂ ಬಾಧಕ ಫಲಿತಾಂಶ ದೈವಾರಾಧಕರ ಮುಂದೆ ಇರುವುದು ಸತ್ಯ ಸಂಗತಿ. ನಮ್ಮ ತುಳುನಾಡಿನ ದೈವ ಸಂಸ್ಕ್ರತಿಯನ್ನು ಹೊರಗಿನವರಿಗೆ ಪರಿಚಯಿಸುವ ಕಾರ್ಯ…
ಒಂದೇ ದಿನದ ಎರಡು ಪ್ರದರ್ಶನದಲ್ಲಿ ಯುಎಇಯ ಐದು ಸಾವಿರ ತುಳುವರು ನೋಡಿದ ನಾಟಕ “ಶಿವದೂತೆ ಗುಳಿಗೆ” ವೀಕ್ಷಕರನ್ನು ವಿಸ್ಮಿತರನ್ನಾಗಿಸಿತು. ಉದ್ ಮೇತದ ಅಲ್ ನಸರ್ ಲ್ಯಾಂಡ್ ನ ಆಡಿಟೋರಿಯಂನ ಸಭಾಂಗಣದಲ್ಲಿ ಮಾರ್ಚ್ 19 ರಂದು ಕಲಾ ಸಂಗಮ ಕಲಾವಿದರು ಕುಡ್ಲ ಅಭಿನಯಿಸಿದ “ಶಿವದೂತೆ ಗುಳಿಗೆ” ನಾಟಕದ 423 ಮತ್ತು 424 ನೇ ಪ್ರದರ್ಶನಕ್ಕೆ ಜನ ಜಾತ್ರೆಯಾಗಿತ್ತು. ಮಧ್ಯಾಹ್ನ 2.30 ಮತ್ತು ಸಂಜೆ 6.30 ಕ್ಕೆ ಪ್ರದರ್ಶನವಾದ ನಾಟಕದ ಎರಡು ಪ್ರದರ್ಶನಕ್ಕೆ ಯುಎಇಯಲ್ಲಿ ಎಲ್ಲಾ ರಾಜ್ಯದಲ್ಲಿರುವ ತುಳುವರು ಆಗಮಿಸಿ ನಾಟಕದ ಯಶಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾದರು. ಆರಂಭದಿಂದ ಅಂತ್ಯದವರೆಗೂ ಕೂತುಹಲ ಸೃಷ್ಟಿಸಿ, ಅಬ್ಬರದ ವೇದಿಕೆ, ಕಣ್ಮನ ಸೆಳೆಯುವ ಬೆಳಕು, ಮೈ ರೋಮಾಂಚನಗೊಳ್ಳುವ ಧ್ವನಿ, ತೆಂಬೆರೆಯ ಸದ್ದು, ಪಾಡ್ದನದ ಕಂಪನ, ಇಂಪಿನ ಜೊತೆಗೆ ಹುರುಪು ತಂಬುವ ಸಂಗೀತ ದೊಂದಿಗೆ “ಶಿವದೂತೆ ಗುಳಿಗೆ” ನಾಟಕ ಮೂಡಿಬಂತು. ತುಳುನಾಡಿನ ಕಾರಣಿಕದ ಶಕ್ತಿ ಗುಳಿಗೆ ದೈವದ ಹುಟ್ಟು ಬದುಕು ಶಕ್ತಿಯ ಕಥೆಯೊಂದಿಗೆ ನಾಟಕ ಸಾಗುತ್ತವೆ. ಅಲ್ಲದೆ ತುಳುವ ಮಣ್ಣಿನ ನಂಬಿಕೆಗಳ…