Author: admin
ಮಹಿಳೆ ಮೂಕವಾದರೆ ಲೋಕವೂ ಲೂಟಿ ಮಾಡಿತು : ನಳಿನಾ ಪ್ರಸಾದ್ ಮುಂಬಯಿ (ಆರ್‍ಬಿಐ), ಮಾ.05: ಪರಿಪೂರ್ಣ ಅರ್ಪಣೆಯ ಸಂಸ್ಕಾರಯುತ ಜೀವನ ಮಹಿಳೆಯದ್ದಾಗಿದೆ. ಸದಾ ಸಮರ್ಪಣಾ ಭಾವನೆಯ ಸ್ತ್ರೀಯರು ಮಾನವತೆಯ ಪರಿಪಾಠವಾಗಿದ್ದಾರೆ. ಇಂತಹ ನಾರಿಶಕ್ತಿಯ ಆತ್ಮಸ್ಥೆರ್ಯ ಸಾಂಪ್ರದಾಯಿಕವಾಗಬೇಕು. ಮಿತ್ಯವನ್ನು ಭಗ್ನಗೊಳಿಸಲು ಮತ್ತು ಸತ್ಯವನ್ನು ನಗ್ನಗೊಳಿಸಲು ಸ್ತ್ರೀಯರು ತಮ್ಮ ಆತ್ಮಧ್ಯೇಯ ಬಲವಾಗಿಸಬೇಕು. ಮಹಿಳೆಯರು ಮೂಕವಾದರೆ ಲೋಕವೂ ಲೂಟಿ ಮಾಡಿತು ಜೋಕೆ ಎಂದು ಬೃಹನ್ಮುಂಬಯಿಯಲ್ಲಿನ ಪ್ರತಿಭಾನ್ವಿತ ಕಂಠದಾನ ಕಲಾವಿದೆ ನಳಿನಾ ಪ್ರಸಾದ್ ತಿಳಿಸಿದರು. ಮಮೂರವರ್ಮ ಸಾಂಸ್ಕøತಿಕ ಪ್ರತಿಷ್ಠಾನ(ರಿ.) ಮುಂಬಯಿ ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಸಂಜೆ ಫಾಟ್ಕೋಪರ್ ಪೂರ್ವದ ಪಂತ್‍ನಗರ್‍ನಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿ ಸಭಾಗೃಹದಲ್ಲಿ `ತವರು ಮನೆಯ ಬಾಂಧವ್ಯ’ ಮಹಿಳಾ ಸ್ನೇಹ ಸಮ್ಮಿಲನ ಆಯೋಜಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಳಿನಾ ಪ್ರಸಾದ್ ಮಾತನಾಡಿದರು. ನಳಿನಾ ಪ್ರಸಾದ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಸ್ತ್ರೀಶಕ್ತಿ ಫೌಂಡೇಶನ್ ವಿೂರಾ ಭಯಂದರ್ ಇದರ ಕಾರ್ಯಾಧ್ಯಕ್ಷೆ ಶಾಲಿನಿ ಶೆಟ್ಟಿ ಮತ್ತು ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗಧ್ಯಕ್ಷೆ…
ಚಿಣ್ಣರ ಬಿಂಬ ಮುಂಬಯಿ ಇದರ ಮೀರಾರೋಡ್ ಶಿಬಿರದ ಮಕ್ಕಳ ಪ್ರತಿಭಾನ್ವೇಷಣೆ ಸ್ವರ್ಧೆ ಆ.13 ರಂದು ಮಧ್ಯಾಹ್ನ ಭಾಯಂದರ್ ಪೂರ್ವದ ನ್ಯೂ ಸೈಂಟ್ ಅಗ್ನೇಸ್ ಹೈಸ್ಕೂಲ್ ಸಭಾಗೃಹದಲ್ಲಿ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಶಿಬಿರದ ಮಕ್ಕಳ ಭಜನೆಯೊಂದಿಗೆ ಪ್ರತಿಭಾ ಸ್ವರ್ಧೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಭಾಷಣ, ಭಾವಗೀತೆ, ಜಾನಪದ ಗೀತೆ, ಏಕಪಾತ್ರಾಭಿನಯ, ಛದ್ಮವೇಷ ಹಾಗೂ ಪಾಲಕರಿಗಾಗಿ ದೇಶ ಭಕ್ತಿಗೀತೆ ಸ್ವರ್ಧೆ ನಡೆಯಿತು. ಶಿಬಿರ ಮುಖ್ಯಸ್ಥೆ ವೀಣಾಕ್ಷಿ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್ ಎಂ.ಶೆಟ್ಟಿ ಸಿದ್ಧಕಟ್ಟೆ ಮಾತನಾಡಿ, ಚಿಣ್ಣರ ಬಿಂಬ ಸಂಸ್ಥೆ ಮಕ್ಕಳ ಭವಿಷ್ಯಕ್ಕೆ ಉತ್ತಮ ಆಡಿಪಾಯ ಹಾಕಿ ಕೊಡುತ್ತಿದೆ. ಪಾಲಕರು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಸಂಸ್ಥೆಗೆ ಚಿಣ್ಣರಿಗೆ ನನ್ನಿಂದಾಗುವ ಅಳಿಲ ಸೇವೆ ಸದಾ ಇದೆ ಎಂದರು. ಕಾರ್ಯಕ್ರಮವನ್ನು ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ನ ಕಾರ್ಯಧ್ಯಕ್ಷ ಡಾ. ಅರುಣೋದಯ ರೈ…
ಕರಾವಳಿ ಮೂಲದ ಸಾಕಷ್ಟು ಕಲಾವಿದರು ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದು ಜಗತ್ತಿನ ಗಮನ ಸೆಳೆದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇದೀಗ ಮಂಗಳೂರು ಮೂಲದ ಮತ್ತೊಂದು ಪ್ರತಿಭಾವಂತರ ತಂಡ ಹೊಸ ಚಿತ್ರಕ್ಕೆ ಕೈಹಾಕಿದೆ. ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗ್ಡೆ ನಿರ್ಮಾಣದಲ್ಲಿ ‘ಅಮರ್ಥ’ ನೂತನ ಕನ್ನಡ ಚಿತ್ರದ ಸ್ಕ್ರಿಪ್ಟ್ ಪೂಜೆ ಮತ್ತು ಮುಹೂರ್ತ ಸಮಾರಂಭ ಸಹಿಹಿತ್ಲು ಶ್ರೀ ಭಗವತಿ ಕ್ಷೇತ್ರದಲ್ಲಿ ನಡೆಯಿತು. ವಿನಯ್ ಪ್ರೀತಮ್ ನಿರ್ದೇಶನದಲ್ಲಿ ಸಿನಿಮಾ ತಯಾರಾಗುತ್ತಿದ್ದು, ಕ್ಯಾಮರಾಮ್ಯಾನ್ ಆಗಿ ಗುರುಪ್ರಶಾಂತ್ ರೈ, ನಿರ್ಮಾಣ ವಿನ್ಯಾಸಕರಾಗಿ ಪ್ರಶಾಂತ್ ಆಳ್ವ ಕಲ್ಲಡ್ಕ, ಕಲಾ ನಿರ್ದೇಶಕರಾಗಿ ಸಂತೋಷ್ ವೇಣೂರು, ಸಂಗೀತ ನಿರ್ದೇಶಕರಾಗಿ ಶಿನೋಯ್ ಜೋಸೆಫ್, ಸಂಕಲನಕಾರರಾಗಿ ಗಣೇಶ್ ನಿರ್ಚಾಲ್ ಕೆಲಸ ಮಾಡಲಿದ್ದಾರೆ. ತಾರಾಗಣದಲ್ಲಿ ರಾಜ್ ದೀಪಕ್, ಮೇಘನಾ ರಾಜ್, ಕೃತಿ ಶೆಟ್ಟಿ, ರೂಪ ವರ್ಕಾಡಿ, ನಮಿತಾ, ಶೈಲಾಶ್ರೀ, ಮಂಜುಭಾಷಿಣಿ, ಗೋಪಿನಾಥ್ ಭಟ್, ರಘು ಪಾಂಡೇಶ್ವರ್, ಉಷಾ ಭಂಡಾರಿ, ರವಿ ಭಟ್, ಮಂಜುನಾಥ ಹೆಗಡೆ, ಮಧು ಹೆಗಡೆ, ಅಶ್ವಿನಿ…
ಸದ್ಯ ದೇಶದಲ್ಲಿರುವ ಅಮೆಜಾನ್ ಮತ್ತು ಪ್ಲಿಪ್‌ಕಾರ್ಟ್‌ನಂಥ ಇ ಕಾಮರ್ಸ್ ವೇದಿಕೆಗಳಿಗೆ ಪ್ರತಿಯಾಗಿ ಕೇಂದ್ರ ಸರ್ಕಾರವೇ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್(ಓಎನ್‌ಡಿಸಿ) ಎಂಬ ಪ್ರತಿ ವೇದಿಕೆಯೊಂದನ್ನು ಸೃಷ್ಟಿಸಿದ್ದು, ಈಗ ಅದರಡಿಯಲ್ಲಿ ನಾನಾ ಇ ಕಾಮರ್ಸ್ ವೇದಿಕೆಗಳು ಆರಂಭವಾಗುತ್ತಿವೆ. 2022ರ ಏಪ್ರಿಲ್‌ನಲ್ಲೇ ಇದರ ಐಡಿಯಾ ಮೊಳಕೆಯೊಡೆದಿದ್ದು, ಈಗ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿದೆ. ಹಾಗಾದರೆ, ಏನಿದು ಓಎನ್‌ಡಿಸಿ? ಏಕೆ ಇದಕ್ಕಿಷ್ಟು ಮಹತ್ವ? ಇಲ್ಲಿದೆ ಮಾಹಿತಿ.. ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಮಾರ್ಕೆಟ್ ಎಂಬುದು ಓಎನ್‌ಡಿಸಿಯ ವಿಸೃತ ರೂಪ. ಸರಕು ಮತ್ತು ಸೇವೆಗಳನ್ನು ವರ್ತಕರಿಗೆ ಮಾರಾಟಕ್ಕೆ ಮತ್ತು ಗ್ರಾಹಕರಿಗೆ ಖರೀದಿಗೆ ಅವಕಾಶ ಮಾಡಿಕೊಡುವುದೇ ಈ ಓಎನ್‌ಡಿಸಿಯ ಧ್ಯೇಯ. ಕೇಂದ್ರ ಸರ್ಕಾರದ ಅಧೀನದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಒಎನ್‌ಡಿಸಿ ತನ್ನದೇ ವಿಶೇಷ ಇ- ವ್ಯವಸ್ಥೆ, ತಂತ್ರಗಳನ್ನು ಒಳಗೊಂಡಿದೆ. ಅಲ್ಲದೇ ನಿರ್ದಿಷ್ಟ ವಸ್ತುವಿಗೆ ಬೇಡಿಕೆ ಹೆಚ್ಚಾದಾಗ ಈ ನೆಟ್‌ವರ್ಕ್ ಜಾಲ ಖರೀದಿದಾರ ಮತ್ತು ಮಾರಾಟಗಾರನ ನಡುವಿನ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತದೆ. ಇದು ಒಂದು ಜಾಲವಾಗಿದ್ದು, ಮುಕ್ತವಾದ, ಎಲ್ಲವನ್ನೂ ಒಳಗೊಂಡ,…
ಕಾರ್ಕಳದಲ್ಲಿ ಬಿಜೆಪಿ ಭ್ರಷ್ಟಾಚಾರ ಹಾಗೂ ದರ್ಪ ರಾಜಕೀಯದಿಂದ ಬೇಸತ್ತ ಜನ ಬದಲಾವಣೆ ಬಯಸಿದ್ದು ದಕ್ಷ ಹಾಗೂ ಪ್ರಮಾಣಿಕ ಜನ ಸೇವಕ ಮುನಿಯಾಲು ಉದಯ ಶೆಟ್ಟಿ ಅವರನ್ನು ಜನ ಬೆಂಬಲಿಸುತ್ತಿದ್ದು ಪ್ರತಿಯೊಂದು ಕಡೆ ನಡೆಯುವ ಪ್ರಚಾರ ಸಭೆಗಳಲ್ಲಿ ಸೇರುತ್ತಿರುವ ಜನ ಸಾಗರವೇ ಸಾಕ್ಷಿಯಾಗಿದ್ದು ಬಹುಮತದಿಂದ ಉದಯಕುಮಾರ್ ಶೆಟ್ಟಿ ಅವರ ಗೆಲುವು ಖಚಿತವಾಗಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು. ಅವರು ಮೇ 6 ರಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಹೆಬ್ರಿ ಬಸ್ ತಂಗುದಾಣದ ವಠಾರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾರ್ಕಳ ಜನತೆಯ ಗೆಲುವು: ಸಮಾಜ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವುದು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಿಜವಾಗ ಅಭಿವೃದ್ಧಿ ಎಂದು ತಿಳಿದ ಉದಯಕುಮಾರ್ ಶೆಟ್ಟಿ ಅವರ ಅಭಿವೃದ್ಧಿ ಪರ ಚಿಂತನೆ ಕಾರ್ಕಳಕ್ಕೆ ವರದಾನವಾಗಲಿದೆ. ಉತ್ಸವ ಅಬ್ಬರದ ಪ್ರಚಾರದಿಂದ ಜನರ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಅಹಂ ಇಲ್ಲದೆ ಸಾಮಾನ್ಯ ಕಾರ್ಯಕರ್ತನನ್ನು ತಲುಪಬೇಕು ಆಗ…
ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್ ಇದರ ರಜತ ಸಂಭ್ರಮದಲ್ಲಿ ಭಾಗವಹಿಸಿರುವುದು ಬಹಳಷ್ಟು ಸಂತೋಷ ನೀಡಿದೆ. ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ಸಂಸ್ಥೆ ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ಅಭಿನಂದನೀಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಸಂಘ ಸಂಸ್ಥೆಗಳ ಮೂಲಕ ಆಗಬೇಕಾಗಿದೆ. ಇದು ಈ ಸಂಘದಿಂದ ಆಗುತ್ತಿದೆ, ಇದುವೇ ನಿಜವಾದ ಆಧ್ಯಾತ್ಮ ಎಂದು ಸಾಂದೀಪನಿ ಸಾಧನಾಶ್ರಮ ಕೇಮಾರು ಇಲ್ಲಿನ ಪೂಜ್ಯರಾದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಎ. ೧೬ ರಂದು ಚಿಂಚ್ವಾಡ್ ರಾಮಕೃಷ್ಣ ಮೋರೆ ಸಭಾಗೃಹದಲ್ಲಿ ನಡೆದ ಪಿಂಪ್ರಿ- ಚಿಂಚ್ವಾಡ್ ಬಂಟರ ಸಂಘದ ರಜತ ಮಹೋತ್ಸವವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಪ್ರತಿಯೋಬ್ಬರ ಆತ್ಮದಲ್ಲಿ ದೇವರಿದ್ದಾನೆ, ಅವನನ್ನು ಸಾಕ್ಷಾತ್ಕರಿಸುವುದು ನಮ್ಮ ಆದ್ಯತೆಯಾಗಬೇಕು. ಇಂದು ವಿಜ್ಞಾನ, ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಆದರೆ ಮನುಷ್ಯ ಸಂಬಂಧಗಳು ಅಷ್ಟೇ ಹಾಳಾಗುತ್ತಿವೆ. ಇದು ಇಂದಿನ ದುರಂತ ಸತ್ಯವಾಗಿದೆ. ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ…
ಕುಂದಾಪುರ ಕ್ಷೇತ್ರದ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ನಾಮಪತ್ರ ಸಲ್ಲಿಸುವುದರ ಮೂಲಕ ಅಧಿಕೃತವಾಗಿ ಅಭ್ಯರ್ಥಿ ಸ್ಥಾನಕ್ಕೆ ಚುನಾವಣೆ ಸ್ಪರ್ಧಿಸಲು ಅಣಿಯಾಗಿದ್ದಾರೆ. ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಆಸೆ ಮತ್ತು ಆಕಾಂಕ್ಷೆಗಳೊಂದಿಗೆ ವಿಶೇಷವಾದಂತಹ ಅಭಿವೃದ್ಧಿಯೊಂದಿಗೆ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಂದಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಕಣಕ್ಕಿಳಿದಿದ್ದಾರೆ. ಇದು ಕುಂದಾಪುರದ ಜನರ ಹೆಗ್ಗಳಿಕೆಗೆ ಪಾತ್ರವಾದ ಮೊಳಹಳ್ಳಿ ಜಯರಾಮ್ ಹೆಗ್ಡೆ ಮತ್ತು ರತ್ನಮ್ಮ ದಂಪತಿಗಳ ಪುತ್ರರಾಗಿ ಮೊಳಹಳ್ಳಿಯಲ್ಲಿ ಜನಿಸಿದ ಇವರು ಮೊಳಹಳ್ಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹಾಗೂ ಮೊಳಹಳ್ಳಿ ಗಣೇಶ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಮತ್ತು ಇನ್ನಿತರ ಸಂಘಟನೆಯ ಕಾರ್ಯಕ್ರಮ ಇವರು ಬೆಳೆಸಿಕೊಂಡು ಸಂಘಟನಾತ್ಮಕ ಶಕ್ತಿಯನ್ನು ಹೊಂದಿ ಇದೀಗ ರಾಜಕೀಯಕ್ಕೆ ಧುಮುಕಿರುವುದು ವಿಶೇಷ ಮತ್ತು ಪ್ರಸ್ತುತ ಎಂದೆನಿಸುತ್ತಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ ಹೆಗ್ಡೆ ಅವರು ಏ 13 ರಂದು ಗುರುವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಮೊದಲು ಕುಂದಾಪುರ ಶಾಸ್ತ್ರಿವೃತ್ತದಲ್ಲಿ ಕಾಂಗ್ರೆಸ್ ಬಹಿರಂಗ ಸಭೆ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಸಭಾಪತಿ…
ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಸುರತ್ಕಲ್ ಘಟಕ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವಹಿಸಿದ್ದರು. ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸುಧಾಕರ ಎಸ್ ಪೂಂಜ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಹಾಬಲ ಪೂಜಾರಿ ಕಡಂಬೋಡಿ ಪುನರಾಯ್ಕೆಗೊಂಡರು. ಸಂಚಾಲಕರಾಗಿ ವಿನಯ ಆಚಾರ್ಯ ಹೊಸಬೆಟ್ಟು ಉಪಾಧ್ಯಕ್ಷರಾಗಿ ಎಮ್ ಜಿ ರಾಮಚಂದ್ರ ರಾವ್, ಲೀಲಾಧರ ಶೆಟ್ಟಿ ಕಟ್ಲ, ರವಿ ಶೆಟ್ಟಿ, ಪಿ. ಕೃಷ್ಣಮೂರ್ತಿ ಸುರತ್ಕಲ್, ನಾರಾಯಣ ಶೆಟ್ಟಿ ಕಟ್ಲ, ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ ಚೇಳ್ಯಾರು, ಜೊತೆ ಕಾರ್ಯದರ್ಶಿಗಳಾಗಿ ಗುಣಶೇಖರ್ ಶೆಟ್ಟಿ, ಜಯ ದೇವಾಡಿಗ, ಸುಧಾಕರ ಶೆಟ್ಟಿ ಕಟ್ಲ, ಸತೀಶ್ ಶೆಟ್ಟಿ ಬಾಳಿಕೆ, ಅನಂತ್ ರಾಜ್ ಶೆಟ್ಟಿಗಾರ್, ಮಹಾಬಲ ಭಂಡಾರಿ, ರಾಮಚಂದ್ರ ಕುಳಾಯಿ, ಪ್ರದೀಪ್ ಶೆಟ್ಟಿ ಬಾಳಿಕೆ, ಅಶ್ವಿತ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ನಾಗರಾಜ್ ಕಡಂಬೋಡಿ, ಪುಷ್ಪರಾಜ್ ಶೆಟ್ಟಿ…
ಎರಡು ವರ್ಷಗಳಿಗೊಮ್ಮೆ ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ನಡೆಯುವಂತಹ ಢಕ್ಕೆಬಲಿ ಎಂಬ ಸೇವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಏಳು ಉತ್ಸವಗಳಲ್ಲಿ ಒಂದು. ಏಕೆಂದರೆ ಇಲ್ಲಿ ಯಾವುದೇ ವಿಕೃತಿಗಳಿಲ್ಲದ ಸೊಬಗಿನ ಪ್ರಕೃತಿ ಇದೆ. ಸಂಜೆಯಾಗುತ್ತಿದ್ದಂತೆ ಅಲಂಕಾರ ಪ್ರಾರಂಭವಾಗುತ್ತದೆ. ನಡು ಇರುಳಲ್ಲಿ ನಿಸರ್ಗ ಪೂರ್ಣ ಸೊಬಗಿನಿಂದ ವಿಜೃಂಭಿಸುತ್ತದೆ. ಆಗ ಕಟ್ಟುಕಟ್ಟಳೆಗಳು ನೆರವೇರುತ್ತದೆ. ಬೆಳಗಾಗುತ್ತಿದ್ದಂತೆ ಆರಾಧನೆ ಮುಗಿಯುತ್ತದೆ. ಪ್ರಕೃತಿ ಮತ್ತೆ ಅಲಂಕರಣಗಳನ್ನು ಕಳಚಿಕೊಂಡು ನೈಜ ಸ್ಥಿತಿಗೆ ಬರುತ್ತದೆ. ಇಂತಹ ರೂಪಾoತರವು ಆರಾಧನಾ ಪರ್ವದಲ್ಲಿ ಮಾತ್ರ ಕಾಣಬಹುದಾದ ಇಲ್ಲಿಯ ವೈಶಿಷ್ಟ. ಇದೇ ಬರುವ ಫೆಬ್ರವರಿ 11 ರಂದು ಶನಿವಾರ ಪಡುಬಿದ್ರಿ ಶ್ರೀ ಖಡ್ಗೆಶ್ವರಿ ಬ್ರಹ್ಮಸ್ಥಾನದಲ್ಲಿ ಶ್ರೀಮತಿ ಮತ್ತು ಶ್ರೀ ಉಮೇಶ್ ಶೆಟ್ಟಿ ಪೇಟೆಮನೆ ಹಾಗೂ ಕುಟುಂಬಸ್ಥರಿಂದ ಢಕ್ಕೆಬಲಿ ಸೇವೆಯು ಶ್ರೀ ಸನ್ನಿಧಿಯ ಪ್ರೇರಣೆಯಂತೆ ಜರುಗಲಿದೆ. ಅದೇ ದಿನ ಮದ್ಯಾಹ್ನ ಗಂಟೆ 12.30 ರಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕೂಡ ನಡೆಯಲಿದೆ. ಬಳಿಕ ಗಂಟೆ 4 ಕ್ಕೆ ದೇವಸ್ಥಾನದಿಂದ ಫಲಪುಷ್ಪ ತಾಂಬೂಲ…
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯು ಸೆಪ್ಟೆಂಬರ್ 10 ಬೆಳಿಗ್ಗೆ ಗಂಟೆ 10.00ಕ್ಕೆ ಮೂಡಬಿದಿರೆಯ ಸೃಷ್ಠಿ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ. ನೂತನ ಕಂಬಳ ಜಿಲ್ಲಾ ಸಮಿತಿ ರಚನೆ ಹಾಗೂ 2023-24 ನೇ ಋತುವಿನ ವಿವಿಧ ಕಂಬಳದ ದಿನಾಂಕಗಳನ್ನು ಅದೇ ದಿನ ನಿರ್ಧರಿಸಲಾಗುವುದು. ಕಂಬಳ ವ್ಯವಸ್ಥಾಪಕರು, ಕೋಣಗಳ ಯಜಮಾನರು, ತೀರ್ಪುಗಾರರು, ಓಟಗಾರರು, ಕಂಬಳ ಸಹಕಾರಿ ವರ್ಗದವರು ಭಾಗವಹಿಸುವಂತೆ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.