ಬ್ರಹ್ಮಾವರ ಮೇ 23: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಸಂಸ್ಥೆಯ ಶಿಕ್ಷಕರಿಗೆ ನೂತನ ಪಠ್ಯಕ್ರಮ ‘ಓರಿಯೆಂಟ್ ಬ್ಲ್ಯಾಕ್ಸ್ವಾನ್’ ಕುರಿತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಅಂತರಾಷ್ಟ್ರೀಯ ಮಟ್ಟದ ತರಬೇತುದಾರ ಜಾನ್ ನೌಗ್ಸಾರಿಯಾ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ನೂತನ ಪಠ್ಯಕ್ರಮದ ಗುರಿ, ಉದ್ದೇಶ, ಬೋಧನೆ, ಕಲಿಕಾ ಉಪಕರಣಗಳು ಮತ್ತು ಮೌಲ್ಯಮಾಪನದ ಕುರಿತು ತರಬೇತಿ ನೀಡಿದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಇಂದು ಶಾಲೆಗಳಲ್ಲಿವಿವಿಧ ಪ್ರಕಾಶನ ಪುಸ್ತಕಗಳನ್ನು ಪಠ್ಯಕ್ರಮದಲ್ಲಿ ಬಳಸುತ್ತಿದ್ದು ಶಿಕ್ಷಕರಿಗೆ ಅವುಗಳ ಬೋಧನೆಯ ಅರಿವಿದ್ದರೆ ಮಾತ್ರ ಮಕ್ಕಳಲ್ಲಿ ಪರಿಪೂರ್ಣ ಕಲಿಕೆ ಸಾಧ್ಯ, ಜಿ ಎಮ್ ಅತ್ಯಾಧುನಿಕ ಪಠ್ಯಕ್ರಮದ ಜೊತೆಗೆ ಶಿಕ್ಷಕರಿಗೆ ಪರಿಣಾಮಕಾರಿ ಬೋಧನೆಯ ತರಬೇತಿಯನ್ನು ನೀಡುತ್ತಿದೆ ಎಂದರು. ಕಾರ್ಯಾಗಾರದಲ್ಲಿ ‘ಓರಿಯೆಂಟ್ ಬ್ಲ್ಯಾಕ್ಸ್ವಾನ್’ ನ ಚೇತನ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.