Author: admin
ಮುಂಬಯಿ, ಡಿ.10: ಸಾರ್ವಜನಿಕ ವಲಯ, ಸಂಘ-ಸಂಸ್ಥೆಗಳಲ್ಲಿ ಸೋಲು-ಗೆಲುವು, ಸವಾಲುಗಳೆಲ್ಲವೂ ಸಾಮಾನ್ಯವಾಗಿದ್ದು, ಇವೆಲ್ಲವನ್ನು ಚಾಣಾಕ್ಷತನದಿಂದ ಎದುರಿಸಿದಾಗಲೇ ಸಾಧನೆ ಸಿದ್ಧಿ ಸಾಧ್ಯ. ಸ್ವಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸಲು ಸ್ವಸಮಾಜದ ಸಂಸ್ಥೆಗಳು ಆಧಾರ ಸ್ತಂಭಗಳಾಗಿವೆ. ಆದುದರಿಂದ ನಾವು ಮಾತೃಸಂಸ್ಥೆಗಳಲ್ಲಿ ಸಕ್ರೀಯರಾಗಿಸಿ ತಮ್ಮತನ, ಅಸ್ಮಿತೆಯನ್ನು ನಿರ್ಣಾಯಕವಾಗಿಸಬೇಕು. ನಮ್ಮ ಜನರ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಅಶಕ್ತರನ್ನು ಸಮರ್ಥರನ್ನಾಗಿಸಲು ಬಂಟರು ಶ್ರಮಿಸಬೇಕು ಎಂದು ಬಂಟ್ಸ್ ಸಂಘ ಬೆಂಗಳೂರು ಸಂಸ್ಥಾಪಕ, ಅಧ್ಯಕ್ಷ ಮುರಳೀಧರ ಹೆಗ್ಡೆ ತಿಳಿಸಿದರು. ಗುಜರಾತ್ ಅಹಮದಾಬಾದ್ನ ಗುಜರಾತ್ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಮೂವತ್ತು ಸಂವತ್ಸರ ಸೇವಾ ಸಂಭ್ರಮದಲ್ಲಿನ ಬಂಟ್ಸ್ ಸಂಘ ಅಹಮದಾಬಾದ್ (ರಿ.) ಗುಜರಾತ್ ಸಂಸ್ಥೆ ತ್ರಿದಶಮನೋತ್ಸವ ಸಂಭ್ರಮಿಸಿದ್ದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಬೆಳಗಿಸಿ ಸಮಾರಂಭಮಕ್ಕೆ ಚಾಲನೆಯನ್ನೀಡಿ ಹೆಗ್ಡೆ ಮಾತನಾಡಿದರು. ಬಿಎಸ್ಎ ಅಧ್ಯಕ್ಷ ನಿತೇಶ್ ಎಸ್.ಶೆಟ್ಟಿ ಶಿರ್ವಾಕೋಡು ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಆದರ್ಶ್ ಬಿ.ಶೆಟ್ಟಿ, ಮುಲುಂಡ್…
ಬ್ಯಾಂಕಿಂಗ್ ಉದ್ಯಮದ ಉಗಮ ಸ್ಥಾನ, ತೊಟ್ಟಿಲು, ತವರೂರು ಎಂದೇ ಖ್ಯಾತಿ ಪಡೆದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕಿಂಗ್ ದಿಗ್ಗಜರುಗಳಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರು ಅವಿಸ್ಮರಣೀಯ. ಒಬ್ಬ ವ್ಯಕ್ತಿ ಸಮಾಜಕ್ಕೆ ಸಲ್ಲಿಸಿದ ಮಹತ್ವದ ಸೇವೆಯನ್ನು ಮುಂದಿನ ಜನಾಂಗ ನೆನಪಿನಲ್ಲಿಟ್ಟುಕೊಳ್ಳಬೇಕು. ವೈಜ್ಞಾನಿಕವಾಗಿಯೂ ಇದೊಂದು ಪ್ರಬುದ್ಧ ಸಿದ್ಧಾಂತವೆಂದರೂ ತಪ್ಪಾಗಲಾರದು. ಸಮಸ್ತ ಬಂಟ ಸಮಾಜ ಅವರನ್ನು ಸ್ಮರಿಸುವುದು ನಿಜಕ್ಕೂ ಔಚಿತ್ಯಪೂರ್ಣ. 1962 ರಿಂದ 1979ರವರೆಗೆ ವಿಜಯ ಬ್ಯಾಂಕ್ನ ಅಧ್ಯಕ್ಷರಾಗಿ ಅನೇಕ ಸಾಧನೆಗಳನ್ನು ಮಾಡಿ ಬ್ಯಾಂಕ್ಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮಹಾನ್ ಚೇತನ. ಇಂದು ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ದೊಂದಿಗೆ ವಿಲೀನವಾದರೂ ಸುಂದರಾಮ ಶೆಟ್ಟಿ ಹೆಸರು ಬ್ಯಾಂಕ್ನೊಂದಿಗೆ ಅಚ್ಚಳಿಯದೇ ಉಳಿದಿದೆ. ರಾಜಮರ್ಜಿಯ ಸಮೃದ್ಧ ಮನೆತನದಲ್ಲಿ ಹುಟ್ಟಿದರೂ ಕೆಳವರ್ಗದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಹೃದಯ ಸುಂದರರಾಮ ಶೆಟ್ಟಿ ಅವರಿಗಿತ್ತು. ಅವರಿಗೆ ಬ್ಯಾಂಕ್ನ ಲಾಭವನ್ನು ಹೆಚ್ಚಿಸುವುದೊಂದೇ ಉದ್ಯಮದ ಉದ್ದೇಶವಾಗಿರಲಿಲ್ಲ. ಉದ್ಯಮವು ಸಮಾಜದ ಅನೇಕರಿಗೆ ಉದ್ಯೋಗಾವಕಾಶಗಳನ್ನು ನೀಡುವುದರೊಂದಿಗೆ ಸಾಮಾಜಿಕ ಹಿತಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಸ್ಥಾಪಿಸಲ್ಪಡಬೇಕು…
ಸಿಎ ಸುರೇಂದ್ರ ಕೆ ಶೆಟ್ಟಿಯವರು ಮುಂಬಯಿ ನಗರದ ಉದ್ಯಮಿಗಳು, ಸಂಘಟಕರು ಹಾಗೂ ಕಲಾವಿದರಿಗೆ ಚಿರಪರಿಚಿತರು. ಎಲ್ಲರೊಂದಿಗೂ ಸುಲಭವಾಗಿ ಬೆರೆಯುವ ಸುಖ ಕಷ್ಟ ವಿಚಾರಿಸುವ ಸಜ್ಜನ. ಆದರೆ ಶಿಸ್ತಿನ ಸಿಪಾಯಿ. ವಿದ್ಯಾರ್ಥಿ ದೆಸೆಯಿಂದಲೇ ಕುಶಾಗ್ರಮತಿಯಾಗಿದ್ದ ಕಾರಣ ಆ ಕಾಲಕ್ಕೆ ತುಂಬಾ ಜಟಿಲವೆಂಬ ಭಾವನೆಯಿದ್ದ ಸಿಎ ಪದವಿಯನ್ನು ನಿರಾಯಾಸವಾಗಿ ಗಳಿಸಿದ ಮೇಧಾವಿ. ಸಾಹಿತ್ಯ ಸಂಸ್ಕೃತಿ ಪ್ರೇಮಿ, ಯಕ್ಷಗಾನ ಕಲೋಪಾಸಕ, ಹವ್ಯಾಸಿ ಕಲಾವಿದ. ಕವಿ ಮುದ್ದಣನ ಜನ್ಮಭೂಮಿ ಹಾಗೂ ಆದಿ ಆಲಡೆ ಇರುವ ಪುಣ್ಯಭೂಮಿ ನಂದಳಿಕೆ ಕ್ಷೇತ್ರ ಸುರೇಂದ್ರ ಶೆಟ್ಟಿ ಅವರ ತೀರ್ಥರೂಪರ ಮನೆತನ ಇರುವ ಸ್ಥಳ. ಇಲ್ಲಿನ ಕೊರಗಬೆಟ್ಟು ಕುಟ್ಟಿ ಲೋಕಯ್ಯ ಶೆಟ್ಟಿ ಹಾಗೂ ಬೇಲಾಡಿ ತಂಕರ ಬೆಟ್ಟು ಮನೆತನದ ಶ್ರೀಮತಿ ಕೃಷ್ಣಿ ಕೆ ಶೆಟ್ಟಿ ದಂಪತಿಯರ ಮುದ್ದಿನ ಮಗನಾಗಿ ಜನಿಸಿದ ಸುರೇಂದ್ರ ಶೆಟ್ಟರು ಎಳವೆಯಿಂದಲೇ ಉತ್ತಮ ಶಿಸ್ತನ್ನು ಪಾಲಿಸಿಕೊಂಡು ಬರುತ್ತಾ ಕ್ರಮೇಣ ಓರ್ವ ಬಹುಮುಖ ಪ್ರತಿಭೆಯ ವಿದ್ಯಾರ್ಥಿ ಎಂಬಂತೆ ಶಾಲಾ ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಗುರುತಿಸಿಕೊಂಡರು. ತನ್ನ ಉದ್ಯೋಗದಲ್ಲಿ ಶಿಸ್ತು, ಸಮಯಪ್ರಜ್ಞೆ, ಸಕಾಲಿಕ…
ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಿಸಾನ್ ಘಟಕದ ಕಾರ್ಯಾಧ್ಯಕ್ಷರಾಗಿ ಮುಂಬಯಿಯ ಸಮಾಜ ಸೇವಕ, ಕಾಂಗ್ರೆಸ್ ಪಕ್ಷದ ನಾಯಕ ಸುರೇಶ್ ಶೆಟ್ಟಿ ಯೆಯ್ಯಾಡಿಯವರನ್ನು ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆದೇಶ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಾರಾಷ್ಟ್ರ ಪ್ರಭಾರಿ ಪ್ರಕಾಶ್ ಗಾಳೆ ಅವರ ಶಿಫಾರಸ್ಸಿನ ಮೇರೆಗೆ ಮಹಾರಾಷ್ಟ್ರ ಪ್ರದೇಶ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾನಾ ಪಾಟೋಲೆ ನಿಯಕ್ತಿಗೊಳಿಸಿದ್ದಾರೆ. ಸುರೇಶ್ ಶೆಟ್ಟಿ ಯೆಯ್ಯಾಡಿ ಈ ಮೊದಲು ಮುಂಬಯಿಯ ವಿಭಾಗೀಯ ಕಾಂಗ್ರೆಸ್ ಸಮಿತಿಯಲ್ಲಿ ಬ್ಲಾಕ್ ಕಾರ್ಯದರ್ಶಿಯಾಗಿ, ಬ್ಲಾಕ್ ಉಪಾಧ್ಯಕ್ಷರಾಗಿ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಪರ್ಯಾವರಣ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಹಾಗೂ ಇಂಟಕ್ ನ ರಾಜ್ಯ ಉಪಾಧ್ಯಕ್ಷರಾಗಿ ಪಕ್ಷದಲ್ಲಿ ಕೆಲಸವನ್ನು ಮಾಡಿರುತ್ತಾರೆ. ಕರ್ನಾಟಕದಲ್ಲಿ ನಡೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಕ್ರಿಯವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ದುಡಿದವರಾಗಿದ್ದಾರೆ. ಮುಂಬಯಿಯಲ್ಲೂ ಜಾತಿ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ಫು, ಕನ್ನಡ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ…
ಬದುಕೆಂಬ ಗಾಡಿಗೆ ಇಂಧನವಾಗಿ ನಿನಗೇನು ಬೇಕು? ಹಣ, ಅಂತಸ್ತು, ಅಧಿಕಾರ, ಸಂಬಂಧ? ಇಷ್ಟಾದರೆ ಸಾಕೇ? ಇನ್ನೂ ಏನಾದರೂ ಬೇಕೇ ಮುನ್ನಡೆಸಲು? ವೃದ್ಧರೊಬ್ಬರಿಗೆ ಕನಸಿನಲ್ಲಿ ಬಂದ ದೇವರು ಕೇಳಿದ ಪ್ರಶ್ನೆ ಇದು. ಆ ಕ್ಷಣದಲ್ಲಿ ವಿಚಿತ್ರ ಎನಿಸಿತು ವೃದ್ಧರಿಗೆ. ಹೌದಲ್ಲ, ನನಗೆ ಇನ್ನೇನು ಬೇಕು? ಉತ್ತರ ಸಿಗಲಿಲ್ಲ. ದೇವರಲ್ಲಿ ನಾಳೆ ಉತ್ತರಿಸುತ್ತೇನೆ, ಒಂದು ದಿನ ಸಮಯ ಕೊಡು ಎಂದು ಮನವಿ ಮಾಡಿದರು. ದೇವರು ತಥಾಸ್ತು ಎಂದ. ಈ ಅಜ್ಜ ಅದ್ಭುತವಾಗಿ ಬದುಕಿದವ. ಮಕ್ಕಳು, ಮೊಮ್ಮಕ್ಕಳು, ಅವರ ಮಕ್ಕಳು ಹೀಗೆ ಎಲ್ಲರನ್ನೂ ನೋಡಿದ್ದರು. ಎಲ್ಲರ ಬದುಕನ್ನೂ, ಬೆಳವಣಿಗೆಯನ್ನೂ ಕಣ್ತುಂಬಿಕೊಂಡಿದ್ದರು. ದುಃಖ, ಸುಖ, ಸಂತೋಷ ಎಲ್ಲವೂ ಮಿಶ್ರವಾಗಿತ್ತು. ಎಲ್ಲವನ್ನೂ ಸ್ವಾಭಾವಿಕ ಎಂಬುವಂತೆ ಸ್ವೀಕರಿಸಿದ್ದರು. ಹಾಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳದೇ ಬದುಕಿದವರು. ಬೆಳಗ್ಗೆ ಎದ್ದವರೇ ತಮ್ಮ ಬದುಕಿನ ಕ್ಷಣಗಳನ್ನೆಲ್ಲ ನೆನಪಿಸಿಕೊಂಡರು. ಎಲ್ಲವೂ ಚೆನ್ನಾಗಿಯೇ ಕಾಣುತ್ತಿದ್ದವು. ಎಲ್ಲ ಸುಖವೂ ಸಿಕ್ಕಿದೆಯಲ್ಲ. ಇನ್ನೇನೂ ಬಾಕಿ ಇಲ್ಲ ಎನಿಸಿತು. ಇವೆಲ್ಲವನ್ನೂ ಪಡೆದ ಬಗೆಯನ್ನು ನೆನಪಿಗೆ ತಂದುಕೊಳ್ಳತೊಡಗಿದರು. ಎಲ್ಲವೂ ಸಿನೆಮಾ ಎಂಬಂತೆ ಕಣ್ಣು…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ ಬುಧವಾರ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಬಂಟರ ಮಾತೃ ಸಂಘದ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರುಗಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಸುಧೀರ್ ಶೆಟ್ಟಿ ಅವರು, “ಕೈಯಲ್ಲಿ ಹಣ ಇಲ್ಲದೆ ಇದ್ದಾಗಲೂ ಸಾಲ ಮಾಡಿಯಾದರೂ ನಮ್ಮ ಸಮಾಜದ ಜನರ ಕಣ್ಣೀರು ಒರೆಸುವ ಸಂಘ ಇದ್ದರೆ ಅದು ಬಂಟರ ಸಂಘಗಳ ಒಕ್ಕೂಟ ಮಾತ್ರ. ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜದ ನೊಂದವರ ಕಣ್ಣೀರು ಒರೆಸುವ ಈ ಕಾರ್ಯ ಶ್ರೇಷ್ಠವಾದದ್ದು. ಮನುಷ್ಯ ಜನ್ಮ ಯಾವಾಗಲು ದೊಡ್ಡದು ನಮ್ಮ ಜೀವನ ನಿಂತ ನೀರಾಗಬಾರದು ಸದಾ ಹರಿಯುತ್ತ ಚಲನಶೀಲವಾಗಿರಬೇಕು. ಹೃದಯ ಶ್ರೀಮಂತಿಕೆಯ ಗುಣ ಇಂದು ಐಕಳ ಹರೀಶ್…
ನಮ್ಮ ಆರ್ಥಿಕತೆಯನ್ನು ಮುಂದುವರಿದ ರಾಷ್ಟ್ರಗಳು ಅಭ್ಯಸಿಸುವಂತೆ ಬೆಳೆದ ಭಾರತ ಒಂದು ಕಾಲದಲ್ಲಿ ಸಾಲ ಮಾಡಿ, ಚಿನ್ನದ ಗಣಿಯನ್ನೇ ಅಡವಿಟ್ಟು ಆಹಾರ ಮೂಲಸೌಕರ್ಯ ಒದಗಿಸಬೇಕಾದ ಸ್ಥಿತಿಯಿತ್ತು. ಮುಂದಿನ ಪ್ರಜೆಗಳಾದ ನೀವು ಅದೃಷ್ಟವಂತರು ಎಂದು ಸಿ.ಎ. ತುಕಾರಾಮ್ ರೈ ಬೆಂಗಳೂರು ನುಡಿದರು. ಅವರು ಕರ್ನಾಟಕ ಪ್ರೌಢಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ ಇವುಗಳ ಜಂಟಿ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ವಕೀಲರಾದ ಜತ್ತನಕೋಡಿ ಶ್ರೀ ಶಂಕರ್ ಭಟ್ ಮಾತನಾಡಿ, ಬಾಲ್ಯದ 14 ವರ್ಷದ ಬದುಕು, ಜೀವನ ಏನೆಂದು ತಿಳಿಸುತ್ತದೆ. ನಿರಂತರವಾದ ಅಭ್ಯಾಸ ಮತ್ತು ಸ್ಥಿರತೆ ಇದ್ದಾಗ ಜೀವನ ಸುಗಮ ಎಂದು ಶುಭ ಹಾರೈಸಿದರು. ಧ್ವಜಾರೋಹಣಗೈದ ಸಿ.ಹಿ. ಪ್ರಾ. ಶಾಲೆ ಅನಂತಾಡಿಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಮತ್ತು ಸಹ ಶಿಕ್ಷಕಿ ಸುನೀತಾ ಬಹುಮಾನ ವಿತರಣೆ ಮಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸ. ಪ. ಪೂ. ಕಾಲೇಜು ನಾರ್ಶಾ ಮೈದಾನದ ಶಿಕ್ಷಕರಾದ ಶ್ರೀ. ಗೋಪಾಲಕೃಷ್ಣ ನೇರಳಕಟ್ಟೆ, ಮಾಣಿ…
“ಯೋಗ್ಯತೆ ಎನ್ನುವುದು ಹೇಳಿಕೊಳ್ಳುವುದಲ್ಲ, ತೋರಿಸಿಕೊಳ್ಳುವುದೂ ಅಲ್ಲ. ನಾವು ಆಡುವ ಒಳ್ಳೆಯ ಮಾತು ಹಾಗೂ ಮಾಡುವ ಒಳ್ಳೆಯ ಕಾರ್ಯ ಬೇರೆಯವರ ಅನುಭವಕ್ಕೆ ಬರುವಂತಹದ್ದು. ಅದೇ ನಿಜವಾದ ಯೋಗ್ಯತೆ”. ಶ್ರೀಯುತ ಜಯರಾಮ ಎಂ ಶೆಟ್ಟಿಯವರ ಜೀವನದಲ್ಲಿ ಈ ಮಾತು ನೂರಕ್ಕೆ ನೂರು ಸತ್ಯ. ಮೂಲತಃ ಕಲ್ಲಮುಂಡ್ಕೂರಿನವರಾದ ಇವರು ಓರ್ವ ಯಶಸ್ವಿ ಉದ್ಯಮಿಯಾಗಿ ರೂಪುಗೊಳ್ಳಲು ಅವರ ಶ್ರಮ, ಅನುಭವ, ಬುದ್ಧಿ ಮತ್ತೆ ಹಾಗೂ ಸಂಘಟನಾ ಚಾತುರ್ಯ ಕಾರಣವಾಗಿದೆ. ಶ್ರೀಯುತ ಮಂಜಯ್ಯ ಶೆಟ್ಟಿ ಮತ್ತು ರುಕ್ಮಿಣಿ ಶೆಟ್ಟಿ ದಂಪತಿಗಳ ಸುಪುತ್ರರಾಗಿ 4-7-1966ರಲ್ಲಿ ಕಲ್ಲಮುಂಡ್ಕೂರು ಕೆಳಗಿನ ಮನೆಯಲ್ಲಿ ಜನಿಸಿದರು. ಪ್ರಾಥಮಿಕ ಶಾಲೆ ನಿಡ್ಡೋಡಿಯ ಸತ್ಯನಾರಾಯಣ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಕಲ್ಲ ಮುಂಡ್ಕೂರಿನ ಸರ್ವೋದಯ ಪ್ರೌಢಶಾಲೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಪಡೆದರು. ಆಗ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲವೆಂದು ಮುಂಬಾಯಿಗೆ ತೆರಳಿದ ಶ್ರೀಯುತರು ಅಲ್ಲಿ ದುಡಿಮೆಯ ಒಟ್ಟಿಗೆ ಪಿ.ಯು.ಸಿ. ಯನ್ನು ಮುಗಿಸಿ 3 ವರುಷಗಳ ನಂತರ ಊರಿಗೆ ತೆರಳಿದರು. ನಂತರ ಕಿನ್ನಿಗೋಳಿಯಲ್ಲಿ 3 ವರ್ಷ ದಿನಸಿ ವ್ಯಾಪಾರ ನಡೆಸಿದರು. ಹೀಗೆ ತೀರ…
ಹೊಸ ಜೀವ ಹೊಸ ಭಾವ ಹೊಸ ವೇಗ ತೋರುತಿದೆ, ಅಳುವ ಕಡಲೊಳು ಬಂತು ನಗೆ ಹಾಯಿಯ ದೋಣಿ ಮನುಜರೆದೆ ಬನದಲ್ಲಿ ಭಾವ ಕುಸುಮವು ಅರಳಿ ಓಡಲುರಿಯ ತಣಿಸಲು ತವಕದಲಿ ಸಾಗಿಹರು. ಇದು ಎಂ. ವೀರಪ್ಪ ಮೊಯ್ಲಿಯವರ ಶ್ರೀ ರಾಮಾಯಣ ಮಹಾನ್ವೇಷಣಂನಲ್ಲಿ ಬರುವ ಸಾಲುಗಳು. ಈ ಕವನದ ಸಾಲುಗಳಂತೆ ಅಯೋಧ್ಯೆಯ ರಾಮ ಮಂದಿರದಲ್ಲಿ 500 ವರ್ಷಗಳ ನಂತರ ಜ. 22 ರಂದು ಪುನರಪಿ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ದೇಶದ ಎಲ್ಲೆಡೆ ಉತ್ಸವದ ಉತ್ಸಾಹ, ಸಾಮುದಾಯಿಕತೆ ಮತ್ತು ಅನನ್ಯತೆಯ ನೆಲೆಯಲ್ಲಿ ರೂಪು ತಾಳುವ ಸಾಂಸ್ಕೃತಿಕ ವೈಭವವನ್ನು ಆಚರಿಸುತ್ತಾ ಶುಭ ಯಾತ್ರೆಯೊಂದಿಗೆ ರಾಮ ಭಕ್ತಿಯನ್ನು ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ ಘಾಟ್ಕೋಪರ್ ಪೂರ್ವ ಪಂತನಗರದ ಕನ್ನಡ ವೆಲ್ಫೇರ್ ಸೊಸೈಟಿಯು ಕೂಡಾ ಅಧ್ಯಕ್ಷರಾದ ನವೀನ್ ಶೆಟ್ಟಿ ಇನ್ನ ಬಾಳಿಕೆಯವರ ನೇತೃತ್ವದಲ್ಲಿ ಜ. 20 ರಂದು ರಾಮಲಲ್ಲಾನ ಶೋಭಾ ಯಾತ್ರೆಯನ್ನು ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ಪುಷ್ಪಾಲಂಕೃತವಾದ ರಜತ ರಥದಲ್ಲಿ ಎಳೆಯ ಮಕ್ಕಳಿಂದ ರಾಮ, ಲಕ್ಷ್ಮಣ, ಸೀತೆಯವರ ವೇಷ…
‘ಆನಂದ ಸ್ವರೂಪ’ ಉದ್ಘಾಟನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಣ್ಣನೆ ‘ಆಳ್ವಾಸ್: ರಾಜ್ಯದ ಶೈಕ್ಷಣಿಕ ಮಿನುಗು ನಕ್ಷತ್ರ’
ವಿದ್ಯಾಗಿರಿ (ಮೂಡುಬಿದಿರೆ):‘ಆಳ್ವಾಸ್’ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಮಿನುಗು ನಕ್ಷತ್ರ. ಅದಕ್ಕೆ ‘ಆನಂದ ಸ್ವರೂಪ’ ವನ್ನು ಆಳ್ವರು ನೀಡಿದ್ದಾರೆ; ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಬಣ್ಣಿಸಿದರು. ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಆಳ್ವಾಸ್ ಪ್ರಾಥಮಿಕ ಶಾಲೆ ‘ಆನಂದ ಸ್ವರೂಪ’ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೂಡುಬಿದಿರೆಗೆ ಸಾಂಸ್ಕøತಿಕ ಹಾಗೂ ಶಿಕ್ಷಣ ಕಾಶಿ ಎಂಬ ಬಿರುದನ್ನು ತಂದವರು ಡಾ.ಎಂ. ಮೋಹನ ಆಳ್ವರು. ಮೌಲ್ಯಾಧಾರಿತ, ನೈತಿಕ, ಗುಣಮಟ್ಟದ ಶಿಕ್ಷಣವನ್ನು ಮಾದರಿಯಾಗಿ ನೀಡುತ್ತಿದ್ದಾರೆ ಎಂದರು. ಮಹಾತ್ಮಗಾಂಧೀಜಿ ‘ರಾಮರಾಜ್ಯ’ದ ಕನಸನ್ನು ನನಸು ಮಾಡಲು ಕೇವಲ ಭದ್ರತೆ, ಅಭಿವೃದ್ಧಿ ಮತ್ತಿತರ ಕಾರ್ಯಗಳಿಂದಲೇ ಸಾಧ್ಯವಿಲ್ಲ. ಉತ್ತಮ ಮನಸ್ಸುಗಳನ್ನು ಕಟ್ಟಬೇಕು. ಪ್ರತಿ ವ್ಯಕ್ತಿಯನ್ನು ಮೌಲ್ಯಯುತ ವಾಗಿರೂಪಿಸಬೇಕು. ಅದಕ್ಕೆ ಮೌಲ್ಯಾಧಾರಿತ, ನೈತಿಕ, ಗುಣಮಟ್ಟದ ಶಿಕ್ಷಣ ಬಹುಮುಖ್ಯ. ಅಂತಹ ವ್ಯಕ್ತಿ ನಿರ್ಮಾಣದಿಂದಲೇ ರಾಷ್ಟ್ರ ನಿರ್ಮಾಣ ಸಾಧ್ಯ. ಆ ಮಾದರಿ ಕಾರ್ಯವನ್ನು ಆಳ್ವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಕೇವಲ ಉಳ್ಳವರಿಗೆ ಮಾತ್ರವಲ್ಲ, ವಂಚಿತರಿಗೂ ಅವಕಾಶ ಕಲ್ಪಿಸುವ ಅವರ ಮನಸ್ಸು ಆಳ್ವಾಸ್…














