Author: admin
ಪ್ರಕೃತಿಯ ಮಡಿಲಲ್ಲಿ ರಮಣೀಯವಾಗಿ ಕಂಗೊಳಿಸುವ ತಾಣ ಕಾಂಬೋಡಿ ಒಳಗುಡ್ಡೆ ದೈವಸ್ಥಾನ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕಾಂಬೋಡಿ ಒಳಗುಡ್ಡೆ ದೈವಸ್ಥಾನದ ಎತ್ತರದ ಗುಡ್ಡದಲ್ಲಿ ನೆಲೆನಿಂತು, ಭಕ್ತರ ಇಷ್ಟಾರ್ಥವನ್ನು ಕರುಣಿಸುತ್ತಾ ಕೂರಿಯಾಳ ಗ್ರಾಮಕ್ಕೆ “ದೈವಲ ಯಾನೇ, ದೇವೆರ್ಲ ಯಾನೇ” ಎಂಬ ಅಭಯವನ್ನಿತ್ತು, ಗ್ರಾಮದ ಜನರನ್ನು ಪೊರೆಯುವ ದೈವ “ಶ್ರೀ ಉಗ್ಗೆದಲ್ತಾಯ”. ಜನಪದದ ಆಯ ಮತ್ತು ದೈವದ ಸಂಧಿ-ಪಾಡ್ದನದ ಆಯದಲ್ಲಿ ನೋಡಿದಾಗ, ಈ ದೈವ ಕೂರಿಯಾಳ ಗ್ರಾಮದಲ್ಲಿ ನೆಲೆಗೊಂಡ ಐತಿಹ್ಯ, ದೈವದ ಪ್ರಸರಣೆ ಮತ್ತು ದೈವದ ಕಲೆ ಕಾರಣಿಕಗಳು ಹೀಗಿವೆ. ಸುಮಾರು ೯೦೦ ವರ್ಷಗಳ ಹಿಂದಿನ ಕಥೆ. ಮೊಗರನಾಡು ಸೀಮೆಯ ಜತ್ತಣ್ಣ ಬಾರಿ ಬಲ್ಲಾಳ ಎಂಬ ಜೈನ ಅರಸರು ತಮ್ಮ ಬೀಡಿನಲ್ಲಿ, ತಾವು ನಿತ್ಯ ಆರಾಧಿಸುತ್ತಾ ಬಂದ ದೈವ-ದೇವರ ಕೃಪೆಯಿಂದ ಬಹಳ ಚೆನ್ನಾಗಿ ರಾಜ್ಯಭಾರ ಮಾಡಿಕೊಂಡು ಬರುತ್ತಿದ್ದರು. ಆದರೆ ಅವರಿಗೆ ಒಂದು ಕೊರಗಿತ್ತು. ಮದುವೆಯಾಗಿ ಅನೇಕ ವರ್ಷಗಳು ಉರುಳಿದರೂ, ಅವರಿಗೆ ಮಕ್ಕಳಾಗಳಿಲ್ಲ. ಆ ನೋವು ಅವರನ್ನು ಯಾವಾಗಲೂ ಕಾಡುತ್ತಿತ್ತು. ಒಂದು…
ಭೂಮಿಯ ತಾಪಮಾನ ಇತ್ತೀಚೆಗೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು ಅದರಲ್ಲೂ ದಕ್ಷಿಣ ಕನ್ನಡದ ತಾಪಮಾನ ದಾಖಲೆಯ ಗರಿಷ್ಠ ಉಷ್ಣತೆ 39.5 ಡಿಗ್ರಿ ಸೆಲ್ಸಿಯಸ್ ಮಾರ್ಚ್ ಒಂದರಂದು ದಾಖಲಾಗಿದೆ. ದಿನೆ ದಿನೆ ತಾಪಮಾನ ಏರಿಕೆ ಕಂಡು ಬರುತ್ತಿದ್ದು ಕರಾವಳಿಗರು ಬಿಸಿಗಾಳಿ, ನೆತ್ತಿ ಸುಡುವ ಬಿಸಿಲ ಹೊಡೆತ್ತಕ್ಕೆ ತತ್ತರಿಸಿ ಕಂಗಾಲಾಗಿದ್ದಾರೆ. ಈಗಿಂದಲೇ ಪ್ರಾಕೃತಿಕ ಸಮತೋಲನ ಕಾಯ್ದು ಕೊಳ್ಳುವತ್ತ ಚಿತ್ತಹರಿಸಬೇಕಾದ ಅಗತ್ಯವಿದೆ. ದಿನದಿಂದ ದಿನಕ್ಕೆ ಹವಾಮಾನ ವೈಪರೀತ್ಯವೂ ಜನಜೀವನದ ಮೇಲೆ ಅಡ್ಡ ಪರಿಣಾಮ ಬೀರಿದೆ. ತಾಪಮಾನ ಏರಿಕೆಯ ಹದಗೆಟ್ಟ ವಾತಾವರಣದ ಪರಿಣಾಮದಿಂದ ಪರಿಸರ ಸಂರಕ್ಷಿಸದಿದ್ದರೆ ಆಪತ್ತು ಕಟ್ಟಿಟ್ಟ ಬುತ್ತಿ. ಪ್ರಕೃತಿಯ ಸಮತೋಲನಕ್ಕೆ ಪರಿಸರ ರಕ್ಷಣೆ ಪೂರಕ. ಪರಿಸರವನ್ನು ನಾವು ಅವಲಂಬಿಸಿದ್ದೇವೆಯೆ ಹೊರತು ಅದು ನಮ್ಮನ್ನು ಅವಲಂಬಿಸಿಲ್ಲ ಎಂಬುದನ್ನು ಮೊದಲು ಗಮನಿಸಿಕೊಳ್ಳಬೇಕು. ಭೂರಮೆಯ ಒಡಲು ವಿಸ್ಮಯಗಳ ಆಗರ ಆದರೆ ಮಾನವನ ಅತಿ ಆಸೆಯಿಂದ ಪ್ರಕೃತಿಯ ಮೇಲಿನ ವಿಧ್ವಂಸಕ ಕೃತ್ಯಗಳು ಮಿತಿ ಮೀರಿ ಅಕ್ರಮಣವಾಗುತ್ತಿದ್ದು ಎಲ್ಲವನ್ನು ಸಹಿಸಿಕೊಂಡ ಭೂಮಿ ಜೀವರಾಶಿಗಳನ್ನು ಕಾಪಾಡಿಕೊಂಡು ಬರುತ್ತಿದೆಯಾದರೂ ಒಂದಲ್ಲ ಒಂದು ರೂಪದಲ್ಲಿ ಆಕ್ರಮಿಸಿ…
ಯಕ್ಷಗಾನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ತೆಂಕು ಮತ್ತು ಬಡಗುತಿಟ್ಟಿಗೆ ಸಮಾನ ಪ್ರೇಕ್ಷಕರು ಇರುವ ಜಾಗ ಉಡುಪಿ. ಇಂತಹ ಕೇಂದ್ರ ಸ್ಥಾನದಲ್ಲಿ ಮೊದಲ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣ. ಕಾಲಕ್ಕೆ ತಕ್ಕಂತೆ ಯಕ್ಷಗಾನ ಕ್ಷೇತ್ರದಲ್ಲೂ ಮಾರ್ಪಾಡು ಅವಶ್ಯ. ಆದರೆ ಬದಲಾವಣೆಗಳು ಯಕ್ಷಗಾನದ ಮೂಲಸತ್ವಕ್ಕೆ ಧಕ್ಕೆಯಾಗದೆ ರೀತಿಯಲ್ಲಿ ನಿರ್ದಿಷ್ಟ ಚೌಕಟ್ಟಿನಲ್ಲಿರಬೇಕು ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು. ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಸಾಧಕರನ್ನು ಸಮ್ಮಾನಿಸಿ ಅವರು ಆಶೀರ್ವಚನ ನೀಡಿದರು. ವೇದ, ಪುರಾಣ, ಇತಿಹಾಸ ಭಾರತೀಯ ಸಂಸ್ಕೃತಿಯ ಜೀವಾಳ. ಇದು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತಗೊಳ್ಳದೆ ಯಕ್ಷಗಾನ ಮಾಧ್ಯಮ ಜನಸಾಮನ್ಯರಿಗೆ ತಲುಪುವಂತಾಗಿದೆ. ಪೌರಾಣಿಕ ಪಾತ್ರಗಳ ಚಿತ್ರಣಗಳನ್ನು ಕಣ್ಣಿಗೆ ಕಟ್ಟುವಂತೆ ಮೂಡಿಸುವ ಜವಾಬ್ದಾರಿ ಕಲಾವಿದರಿಗಿದೆ ಎಂದರು. ಯಕ್ಷಗಾನ ಕಲಾವಿದರು ಶಿಲ್ಪಿಯಂತೆ ವಿಗ್ರಹ ಸುಂದರವಾಗಿ ಮೂಡಲು ಶಿಲ್ಪಿಯಲ್ಲಿ ಅಸಾಧಾರಣ ಪ್ರತಿಭೆ ಇರಬೇಕು. ಕಲಾವಿದರು ಎಷ್ಟು ಪಾತ್ರ ಮಾಡಿದರೂ ವಿಭಿನ್ನತೆ ಇರುತ್ತದೆ. ಹೀಗಾಗಿ ಯಕ್ಷಗಾನ ಜೀವಂತ ಕಲೆಯಾಗಿದೆ. ಸರಕಾರ, ಸಂಘ-ಸಂಸ್ಥೆಗಳ ವತಿಯಿಂದ ಕಲೆಗೆ…
ದೇಶದ ವಿವಿಧ ಭಾಷಿಕ ಸಮುದಾಯಗಳಿಗೆ ಹೋಲಿಸಿದರೆ ಕನ್ನಡ ಭಾಷಿಕ ಸಮುದಾಯದಲ್ಲಿ ಔದ್ಯಮಿಕ ಮನಸ್ಸುಗಳು ಕಡಿಮೆ ಎಂಬ ಮಾತು ಇದೆ. ಒಂದು ಹಂತದ ಮಟ್ಟಿಗೆ ಇದು ನಿಜವೂ ಹೌದು. ಆದರೆ, ಅಚ್ಚ ಕನ್ನಡದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿ ನಾಡಿನ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು ರಾಮ ನಾಗಪ್ಪ ಶೆಟ್ಟಿ. ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ, ಆರ್ ಎನ್ ಶೆಟ್ಟಿ ಅವರ ಹುಟ್ಟೂರು. ಇಂದು ಅದು ನಾಡಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ಆರ್ ಎನ್ ಶೆಟ್ಟಿ ಅವರ ಕರ್ತೃತ್ವ ಶಕ್ತಿ. ಆರ್.ಎನ್. ಶೆಟ್ಟಿ ಸಮೂಹದ ಮೂಲಕ ಆರ್ ಎನ್ ಶೆಟ್ಟಿ ಅವರು ಉದ್ಯೋಗವನ್ನೂ ನೀಡಿದರು, ಆ ಸಮೂಹದ ಮೂಲಕ ದುಡಿದ ಹಣವನ್ನು ಸಮಾಜಕ್ಕೆ ದಾನದ ರೂಪದಲ್ಲಿಯೂ ಕೊಟ್ಟರು. ಕನ್ನಡ ನಾಡಿನಲ್ಲಿ ಉದ್ಯಮಿಯಾಗಿ, ಉದ್ಯೋಗಶೀಲ ವ್ಯಕ್ತಿಯಾಗಿ, ಉದ್ಯೋಗದಾತರಾಗಿ, ಉದ್ಯೋಗಾರ್ಹತೆ ನೀಡಬಲ್ಲ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವವರಾಗಿ, ವಾಸ್ತುಶಿಲ್ಪಿಯಾಗಿ ದೊಡ್ಡ ಹೆಸರು ಮಾಡಿದವರು ಆರ್ ಎನ್…
ಬ್ರಹ್ಮಾವರ ನ. 10: ಮಕ್ಕಳು ದೇವರ ಅದ್ಭುತ ಸೃಷ್ಟಿ. ನಮ್ಮ ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಶಿಸ್ತಿನಿಂದ ಪ್ರಯತ್ನಪಟ್ಟರೆ ಎಲ್ಲವನ್ನೂಸಾಧಿಸಬಹುದು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಫಲಿತಾಂಶವು ಅತ್ಯುತ್ತಮವಾಗಿರುತ್ತದೆ ಎಂದು ದೀಪಾ ಭಂಡಾರಿಯವರು ಹೇಳಿದರು. ಅವರು ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಚಿಣ್ಣರ ಹಬ್ಬವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಈ ಜಗತ್ತಿನಲ್ಲಿ ಮಕ್ಕಳನ್ನು ಅವರ ನಗುವನ್ನು ಇಷ್ಟಪಡದವರು ಯಾರೂ ಇಲ್ಲ. ಇಂದು ಮಕ್ಕಳೆಲ್ಲರೂ ವರ್ಣ, ಚಿತ್ತಾರಗಳ ಬಟ್ಟೆಗಳಲ್ಲಿ ಕಾಮನಬಿಲ್ಲಿನಂತೆ ಪ್ರಕಾಶಿಸುತ್ತಿದ್ದಾರೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಕ್ಕಳಿಗೆಲ್ಲ ಶುಭ ಹಾರೈಸಿ ಪ್ರತಿಯೊಬ್ಬರಲ್ಲೂ ಒಂದು ಮಗುವಿನ ಮನಸ್ಸಿರುತ್ತದೆ ಆದರೆ ಕೆಲಸದ ಒತ್ತಡದಲ್ಲಿ ಅದನ್ನು ಅಭಿವ್ಯಕ್ತಿಪಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳೆಲ್ಲರೂ ತಮ್ಮ ಬಾಲ್ಯವನ್ನು ಅಹ್ಲಾದಿಸಬೇಕು. ಜೊತೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದರು. ಶಾಲಾ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರತಿಭಾ ಪ್ರದರ್ಶನ…
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಕುಶಾಲನಗರ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಉದ್ಯಮಿ, ಪೂರ್ಣಶ್ರೀ ಫರ್ನಿಚರ್ಸ್ ಮಾಲೀಕ ರವೀಂದ್ರ ವಿ. ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಅಮೃತರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆ ನಡೆಯಿತು. ಕಾರ್ಯದರ್ಶಿಯಾಗಿ ಕೆ. ಎಸ್. ನಾಗೇಶ್ ಆಯ್ಕೆಯಾಗಿದ್ದಾರೆ. ರವೀಂದ್ರ ರೈ ಅವರು ಈ ಮೊದಲು ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಅಪ್ರತಿಮ ಪ್ರತಿಭೆಯನ್ನು ಮೈಗೂಡಿಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ ಛಲಗಾರ, ಸರ್ವಧರ್ಮ ಕಲಾಭಿಮಾನಿಗಳ ಆಂತರ್ಯವನ್ನು ಮುಟ್ಟಿ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡು ಕಲಾಮಾತೆಯ ಸೇವೆಗೈಯುತ್ತಿರುವ ನಿಷ್ಠಾವಂತ ಕಲಾವಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ. ತನ್ನ ತಂದೆಯಿಂದಲೇ ಬಳುವಳಿಯಾಗಿ ಬಂದ ಕಲೆಗೆ ನಿಷ್ಠಾವಂತನಾಗಿ ನಿಂತು ಸಾಧನೆಯ ಶಿಖರವೇರಿ ಸಾಧಕರಿಗೆ ಸ್ಪೂರ್ತಿ ನಮ್ಮ ಇವತ್ತಿನ ಸಾಧಕರ ಹಾದಿಯ ಅತಿಥಿ. ಇವರ ಜೀವನವು ಬಾಲ್ಯದಿಂದಲೇ ಸುಖೀ ಕುಟುಂಬವಾಗಿದೆ. ಯಾವುದೇ ಕಷ್ಟಗಳಿಂದ ಸೋತವರಲ್ಲ ಇನ್ನೊಬ್ಬರನ್ನು ಸೋಲೋಕು ಬಿಟ್ಟವರಲ್ಲ ಆತ್ಮೀಯ ಮನಸ್ಸಿನ ಅದ್ಭುತ ಸಾಧಕ. ಯಕ್ಷಗಾನ, ಸಾಹಿತ್ಯ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿಯವರು ವಿರಳ ಪಂಕ್ತಿಗೆ ಸೇರಿದ ಓರ್ವ ಬಹುಶ್ರುತ ವಿದ್ವಾಂಸರು. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಇರ್ದೆ ಬೆಟ್ಟಂಪಾಡಿಯಲ್ಲಿ ದಿ| ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ರೈ ದಂಪತಿಯ ಎಂಟು ಮಂದಿ ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದರು.…
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ವತಿಯಿಂದ ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಗೌರವಾಭಿನಂದನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಸ್ಥಾಪಕಾಧ್ಯಕ್ಷರಾದ ಕೆ. ಸದಾನಂದ ಶೆಟ್ಟಿ, ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೋಹನ್ ಆಳ್ವ, ಡಾ. ಭಾಸ್ಕರ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಶೆಟ್ಟಿ, ಕೆ.ಎಂ.ಎಫ್ ಅಧ್ಯಕ್ಷರಾದ ಸುಚರಿತ ಶೆಟ್ಟಿ, ವೇಣುಗೋಪಾಲ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮಿ ಶೆಟ್ಟಿ, ನಿತೀಶ್ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಕಾರ್ಯಾಧ್ಯಕ್ಷರಾದ ದೇವಿಚರಣ್ ಶೆಟ್ಟಿ, ರಾಜಗೋಪಾಲ್ ರೈ ಹಾಗೂ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣಗೊಂಡು, ಬೇಸಗೆ ರಜೆಯು ಮುಗಿಯುತ್ತಿದೆ. ಮೇ 29ರಿಂದ 2023-24ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿದ್ದು, ಇದಕ್ಕೆ ಬೇಕಾದ ಸಿದ್ಧತೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಯಿಂದ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಗತಿಗಳು ಆರಂಭದ ದಿನದಿಂದಲೇ ಪಠ್ಯಪುಸಕ್ತ ಹಾಗೂ ಸಮವಸ್ತ್ರ ವಿತರಣೆಗೂ ಬೇಕಾದ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕ ಹಾಗೂ ಸಮವಸ್ತ್ರದ ಬಟ್ಟೆಗಳನ್ನು ಬಿಇಒಗಳ ಮೂಲಕ ತಲುಪಿಸುವ ಕಾರ್ಯವೂ ಆಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ದಿನ ಸಂಭ್ರಮ ಮೇ 29ರಂದು ಶೈಕ್ಷಣಿಕ ತರಗತಿ ಆರಂಭವಾಗುವುದರಿಂದ ಅಂದು ಪಠ್ಯದ ಚಟುವಟಿಕೆಗಿಂತ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉಡುಪಿ ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಲ್ಲೂ ಅಂದು ಮಕ್ಕಳಿಗೆ ಬಿಸಿಯೂಟದ ಜತೆಗೆ ಸಿಹಿ ಹಂಚಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಾಯಸ ಅಥವಾ ಸ್ಥಳೀಯವಾಗಿ ಲಭ್ಯವಾಗುವ ಯಾವುದಾದರು ಒಂದು ಸ್ವೀಟ್ ಮಕ್ಕಳಿಗೆ ನೀಡಲಾಗುತ್ತದೆ. ಇದರ ಜತೆಗೆ ಮಕ್ಕಳನ್ನು ವಿನೂತನ ರೀತಿಯಲ್ಲಿ ಶಾಲೆಗೆ ಸ್ವಾಗತಿಸಲು, ಶಾಲೆಯ ಪ್ರವೇಶದ್ವಾರಕ್ಕೆ ತಳಿರು…
ಕೊಟ್ಟಾರ ಚೌಕಿಯ ಮಾಲೆಮಾರ್ ಬಳಿ ಭಾರ್ಗವಿ ಬಿಲ್ಡರ್ಸ್‌ನಿಂದ ನಿರ್ಮಾಣಗೊಂಡಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡ “ಕೈಲಾಶ್’ ಪ್ರಾಜೆಕ್ಟ್‌ನಲ್ಲಿ ಗುಣನಾಥನ ಮೋಕ್‌ಅಪ್ ಫ್ಲ್ಯಾಟ್‌ನ ಉದ್ಘಾಟನೆ ನೆರವೇರಿತು. ಮುಂಬೈ ಮತ್ತು ಮಂಗಳೂರಿನ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್‌ಗಳ ಚೇರ್‌ವೆುನ್ ಮತ್ತು ಆಡಳಿತ ನಿರ್ದೇಶಕ ರವಿ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿ, ಗ್ರಾಹಕರ ಕನಸಿಗೆ ಅನುಗುಣವಾಗಿ ಗುಣಮಟ್ಟದ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಲ್ಲಿ ಹೆಸರು ಮಾಡಿರುವ ಭಾರ್ಗವಿ ಬಿಲ್ಡರ್ಸ್‌ನಿಂದ ನಿರ್ಮಾಣವಾಗಿರುವ ಕೈಲಾಶ್ ಪ್ರಾಜೆಕ್ಟ್‌ನಲ್ಲಿ ಗುಣನಾಥನ ಫ್ಲ್ಯಾಟ್ ಅತ್ಯಂತ ಆಕರ್ಷಕವಾಗಿ ಮೂಡಿಬಂದಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರು ಮಾತನಾಡಿ, ಐಷಾರಾಮಿ ಹಾಗೂ ಗುಣಮಟ್ಟದ ಫ್ಲಾಟ್‌ಗಳನ್ನು ನಿರ್ಮಿಸುವಲ್ಲಿ ಭಾರ್ಗವಿ ಬಿಲ್ಡರ್ಸ್ ಮುಂಚೂಣಿಯಲ್ಲಿದ್ದು, ಪ್ರತ್ಯೇಕ ಹಾಗೂ ಮನ ಸೆಳೆಯುವ ದೇವರ ಕೋಣೆ, ಡೈನಿಂಗ್ ಹಾಲ್‌ನೊಂದಿಗೆ ನಿರ್ಮಾಣವಾಗಿರುವ ಫ್ಲ್ಯಾಟ್ ವಿಶಾಲವಾಗಿದೆ ಎಂದರು. ಭಾರ್ಗವಿ ಬಿಲ್ಡರ್ಸ್‌ನ ಮಾಲಕರಾದ ಭಾಸ್ಕರ್ ಗಡಿಯಾರ್, ಭಾರ್ಗವಿ ಗಡಿಯಾರ್, ಪ್ರಾಜೆಕ್ಟ್ ಮುಖ್ಯಸ್ಥರಾದ ಮಂಗಳ್‌ದೀಪ್ ಮತ್ತು ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು. ನಟಿ ಸೌಜನ್ಯ ಹೆಗ್ಡೆ ಅವರು…