Author: admin

ಹೊಸತನ್ನು ಕಲಿಯುವ, ಸಾಧಿಸುವ ಹಂಬಲವಿರುವವರಿಗೆ ಕೃತಕ ಬುದ್ಧಿಮತ್ತೆ ಹೊಸ ಹೊಸ ಉದ್ಯೋಗಾವಕಾಶ ನೀಡಬಲ್ಲುದು ಎಂದು ನಿಟ್ಟೆ ಜಸ್ಟಿಸ್ ಕೆ. ಎಸ್. ಹೆಗ್ಡೆ ಮ್ಯಾನೇಜ್ ಮೆಂಟ್ ಸಂಸ್ಥೆಯ ಪ್ಲೇಸ್ ಮೆಂಟ್ ಮತ್ತು ಅಡ್ಮಿಷನ್ ಮುಖ್ಯಸ್ಥ ಗುರುಪ್ರಶಾಂತ್ ಭಟ್ ಹೇಳಿದರು. ಕುಂತಳನಗರ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಂಘದ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ನಡೆಯುತ್ತಿರುವ ಕಂಪ್ಯೂಟರ್ ಸಾಕ್ಷಾತ್ಕಾರ ತರಬೇತಿ ಕಾರ್ಯಕ್ರಮದ 11ನೇ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ 12ನೇ ಬ್ಯಾಚಿನ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಂಬಯಿ ಉದ್ಯಮಿ ಮಧುಕರ ಶೆಟ್ಟಿ, ಬೆಳ್ಮಣ್ ಹ್ಯುಮ್ಯಾನಿಟಿ ಸಂಸ್ಥೆಯ ನವೀನ್, ಮೈಸ್ ಸಂಸ್ಥೆಯ ಆಡಳಿತಾಧಿಕಾರಿ ಗಾಯತ್ರಿ…

Read More

ಬಂಟ ಸಮಾಜದಲ್ಲಿ ಹುಟ್ಟಿ ಬಡತನದ ಬೇಗುದಿಯಲ್ಲಿ ದಿನ ಕಳೆಯುತ್ತಿರುವ ಬಡಕುಟುಂಬ ಪ್ರಸ್ತುತ ಕಟಪಾಡಿ ಏಣಗುಡ್ಡೆ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶ್ರೀ ಚಂದ್ರಶೇಖರ ಶೆಟ್ಟಿ ಮತ್ತು ಶ್ರೀಮತಿ ಮೂಕಾಂಬಿಕಾ ಶೆಟ್ಟಿ ದಂಪತಿಗಳು ಬದುಕಿನ ಕ್ಷಣಕ್ಷಣವೂ ಕಷ್ಟದಲ್ಲಿ ಕಾಲ ಕಳೆಯುತ್ತಿತ್ತು. ಈ ಕುಟುಂಬ ಪರಿಸರದ ಮನೆಗಳಲ್ಲಿ ಕೂಲಿ ನಾಲಿ ಮಾಡಿಕೊಂಡು ಕಷ್ಟದ ಬದುಕನ್ನು ಕಟ್ಟಿಕಕೊಂಡಿದ್ದರು. ಹೀಗಿರುವಾಗ ಚಂದ್ರಶೇಖರ ಶೆಟ್ಟಿ ಅವರು ಬೇರೆಯವರ ಮನೆಯಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ಬಿದ್ದು ಮೊಣಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ಬಲುದೊಡ್ಡ ಶಸ್ತ್ರಚಿಕಿತ್ಸೆ ಮಾಡಬೇಕಾದ ಸಂದರ್ಭ ಒದಗಿ ಬಂತು. ಅಂತೂ ಇಂತೂ ಇದ್ದವರನ್ನು ಕಾಡಿ-ಬೇಡಿ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿರುವ ಕುಟುಂಬದ ಪರಿಸ್ಥಿತಿಯನ್ನು ಕಂಡವರು ಈ ವಿಷಯ ಮತ್ತು ಪರಿಸ್ಥಿತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟರ ಗಮನಕ್ಕೆ ತಂದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಹರೀಶ್ ಶೆಟ್ಟರು ಮನೋಹರ ಶೆಟ್ಟಿ ತೋನ್ಸೆ ಇವರನ್ನು ಸಂಪರ್ಕಿಸಿ ಸಂತ್ರಸ್ತರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ತಿಳಿಸಿದರು. ಮನೋಹರ್ ಶೆಟ್ಟಿಯವರು…

Read More

ಪುತ್ತೂರು ತಾಲೂಕು ಯುವ ಬಂಟರ ಸಂಘದ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಬಂಟರ ಸಂಘ ಪುತ್ತೂರು ತಾಲೂಕು ಇವರ ಮಾರ್ಗದರ್ಶನದಲ್ಲಿ ಮಹಿಳಾ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘ ಪುತ್ತೂರು ತಾಲೂಕು ಇವರ ಸಹಕಾರದೊಂದಿಗೆ ದಿವಂಗತ ಅಗರಿ ಜೀವನ್ ಭಂಡಾರಿ ಸ್ಮರಣಾರ್ಥ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಪುತ್ತೂರ್ದ ಬಂಟ ಜವನೆರೆ ಗೊಬ್ಬು, ಬಂಟ್ಸ್ ಪ್ರೀಮಿಯರ್ ಲೀಗ್ 2024 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ ನಡೆದ ಸಮಾರಂಭದಲ್ಲಿ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ತೆಂಗಿನಕಾಯಿ ಒಡೆದು ಧ್ವಜಾರೋಹಣ ನಡೆಸಿ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟ್ಸ್ ಪ್ರೀಮಿಯರ್ ಲೀಗ್ ನ ಸಿಇಒ ದಯಾನಂದ್ ರೈ ಕೋರ್ಮಂಡ ಕ್ರೀಡಾಪಟುಗಳಿಗೆ ಪ್ರಮಾಣವಚನ ಭೋದಿಸಿದರು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕ್ಕಾನ ಸದಾಶಿವ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿ.…

Read More

ಕವರ್ ಪನ್ನಗ ಸುರುಕು ನಮನ ತರೆಕ್ ಬರ್ಪಿನಿ ಮದಿಮೆಗ್ ಮುಯ್ಯಿ ದೀಪಿನ ಕವರ್. ಐಡ್ದ್ ಬೊಕ್ಕ ಪೋಸ್ಟ್ ಕವರ್, ತಲೆಂಬುದ ಕವರ್, ಇಂಚಪ ಮೊಬೈಲ್ ದ ಕವರ್. ಉಂದು ಪೂರಾ ಪೊದಿಕೆ (ಕನ್ನಡ ಹೊದಿಕೆ)ಲು, ಇಂಗ್ಲೀಷ್ ದ ಕವರುಲು (Cover), ಯಾನ್ ಪನರೆ ಪಿದಾಡ್ದ್ ದಿನಿ ತುಲುತ ಬೊಕ್ಕೊಂಜಿ ಕವರ್ ದ ಬಗೆಟ್. ದುಂಬು “ಕಂಚಿ” ಲೆತ್ತೊಂದು ಇತ್ತೆರ್ಗೆ. ಮದಿಮಾಯೆ/ಲ್ ಎದುರುಡು ಅರಿವಾನೊಡು ಅರಿ ದೀವೊಂದು ಇತ್ತೆರ್. ತರೆಕ್ ರಡ್ಡ್ ಅರಿ ಪಾಡುನು ಪಂಡ ಸೇಸೆ (ಕನ್ನಡದ ಅಕ್ಷತೆ ಕಾಳು‌) ಪಾಡುನು. ಪಂಡ ಪೆರಿಯಾಕ್ಲು ಆಶೀರ್ವಾದ ಮಲ್ಪುನು. “ಮುತ್ತುಡು ಸೇಸೆ ಪಾಡಿಯೆರ್ ಪಕಲೊಡು ಆರತಿ ಮಲ್ತೆರ್” ಪಂದ್ ಪಾಡ್ದನೊಡು ಪನ್ಪುಂಡು. (ಕನ್ನಡೊಡು ಮುತ್ತಿನಾರತಿ). ಅಂಚೆನೆ ಆ ಅರಿತ ತಬುಕು (ಅರಿವಾನ)ದ ಬರಿಟ್ ಕಾಲಿ ಅರಿವಾನ ದೀವೊಂದು ಇತ್ತೆರ್ ಗೆ, ಐಕ್ ಕಂಚಿ ಪನ್ಪಿನಿ. ಆ ಅರಿವಾನೊಗು ಉಡುಗಿರೆ (ಎಚ್ಚಾದ್ ದೊಡ್ಡು) ಪಾಡುವೆರ್, ಮದಿಮೆಗ್ ಬತ್ತಿನಗುಲು. ಅವ್ವೆನ್ ಸಬೆಟ್ ಲೆತ್ತ್ ಪನ್ಪೆರ್, ಏರ್…

Read More

ಮಲಾಡ್ ಪೂರ್ವದ ತುಳು ಕನ್ನಡಿಗರು ಒಗ್ಗಟ್ಟಾಗಿ ಬೆಳೆದು ನಿಲ್ಲುವುದಕ್ಕೆ ಶ್ರೀ ವರಮಹಾಲಕ್ಷ್ಮಿ ಸಮಿತಿ ಪೂರಕ ಶಕ್ತಿಯಾಗಿದೆ. ಪರಿಸರದ ತುಳು ಕನ್ನಡಿಗರಲ್ಲಿ ಸಮಾಜ ಸೇವೆಯೊಂದಿಗೆ ಧಾರ್ಮಿಕ ಜಾಗೃತಿಯನ್ನು ಮೂಡಿಸಿ, ಒಗ್ಗಟ್ಟಿನಿಂದ ಜಾತಿ, ಭಾಷೆಯನ್ನು ಬದಿಗೊತ್ತಿ ಶಿಸ್ತು ಬದ್ದವಾಗಿ ಎಲ್ಲಾ ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಇದು ಪೂಜಾ ಸಮಿತಿಯ 14 ವರ್ಷಗಳ ಸೇವಾ ಕಾರ್ಯಗಳ ಸಾಧನೆಯಾಗಿದೆ. ಪರಿಸರದ ಜನ ಸಾಮಾನ್ಯರೊಡನೆ ಪ್ರೀತಿ ವಿಶ್ವಾಸ ಗಳಿಸಿ ಅವರನ್ನೂ ಒಗ್ಗೂಡಿಸುವುದೇ ಒಂದು ಸಾಧನೆ. ಪ್ರತಿಯೊಬ್ಬನ ಬದುಕು ಧರ್ಮದ ಹಾದಿಯಲ್ಲಿ ನಡೆಯಲು ಪೂಜಾ ಕಾರ್ಯಗಳು ಪ್ರೇರಣಾ ಶಕ್ತಿಯಾಗಿದೆ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಶೆಟ್ಟಿ ಅವರು ನುಡಿದರು. ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ೧೪ ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ತಾ. ಅ. ೨೭ ರಂದು ಉತ್ಕರ್ಷ ವಿದ್ಯಾಮಂದಿರದ ಸಭಾಗ್ರಹ ದಪ್ತರಿ ರೋಡ್ ಮಲಾಡ್ ಪೂರ್ವ ಮುಂಬಯಿ ಇಲ್ಲಿ ಜರಗಿದ್ದು ಈ ಸಂಧರ್ಭದಲ್ಲಿ ನಡೆದ ಸಭಾ…

Read More

ದಿನಾಂಕ 10/09/2022 ರ ಶನಿವಾರ ಅಪರಾಹ್ನ 2 ಗಂಟೆಯಿಂದ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಲೋಕಾರ್ಪಣೆಗೊಳ್ಳಲಿರುವ ಶ್ರೇಷ್ಠ ಸಂಘಟಕರೂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ “ಸಾರ್ವಭೌಮ ಗ್ರಂಥ” ಬಿಡುಗಡೆ ಸಮಾರಂಭದ ಪೂರ್ವಭಾವಿ ಸಭೆ, ಬಂಟರ ಸಂಘ ಮುಂಬಯಿಯ ಸಮಾಜ ಕಲ್ಯಾಣ ಎನೆಕ್ಸ್ ಕಟ್ಟಡದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಗುರು ಜಿ ಎನ್ ಉಪಾಧ್ಯ, ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ಡಾ.ಪೂರ್ಣಿಮ ಶೆಟ್ಟಿ, ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ ಮತ್ತು ಪತ್ರಕರ್ತರಾದ ದಿನೇಶ್ ಕುಲಾಲ್ ರವರು ಉಪಸ್ಥಿತರಿದ್ದರು.

Read More

ಇನ್ನಾ ಬಂಟರ ಸಂಘದ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಮೂಡಬಿದಿರೆ ಯುವ ಬಂಟರ ಸಂಘದ ಮಹಿಳೆಯರ ತ್ರೋಬಾಲ್ ಹಾಗೂ ಪುರುಷರ ವಾಲಿಬಾಲ್ ತಂಡವು ಭಾಗವಹಿಸಿ, ವಾಲಿಬಾಲ್ ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಕ್ರೀಡಾಕೂಟದಲ್ಲಿ ಮೂಡಬಿದರೆ ಯುವ ಬಂಟರ ಸಂಘದ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾದ ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಡಾ. ವಿನಯ್ ಆಳ್ವ, ಉಪಾಧ್ಯಕ್ಷರಾದ ಭರತ್ ಶೆಟ್ಟಿ, ರಮೇಶ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾದ ಆದರ್ಶ ಶೆಟ್ಟಿ, ಸುಕುಮಾರ್ ಶೆಟ್ಟಿ, ಅತಿಥ್ ಶೆಟ್ಟಿ, ದೀಪಕ್ ಶೆಟ್ಟಿ, ಸುಕೇಶ್ ಶೆಟ್ಟಿ ಕೇಮಾರು, ರಾಜೇಶ್ ಶೆಟ್ಟಿ, ನವೀನ್ ಶೆಟ್ಟಿ ಉಪಸ್ಥಿತರಿದ್ದರು.

Read More

ಚಿಣ್ಣರ ಬಿಂಬದ 21ನೇಯ ವರ್ಷದ ಮಕ್ಕಳ ಉತ್ಸವವು ಜನವರಿ 7 ರಂದು ಭಾನುವಾರ ಮಧ್ಯಾಹ್ನ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಂಗಣದಲ್ಲಿ ಚಿಣ್ಣರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ಮುಂಬಯಿ ಸಂಸದರಾದ ಗೋಪಾಲ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕನ್ನಡ ಮಾಧ್ಯಮದಲ್ಲಿ ಕಲಿಯದ ಮಕ್ಕಳಿಗೆ ಕನ್ನಡ ಕಲಿಸಿ, ಇಂತಹ ಕಾರ್ಯಕ್ರಮವನ್ನು ಪ್ರಕಾಶ್ ಭಂಡಾರಿ ಅವರ ನೇತೃತ್ವದಲ್ಲಿ ಅವರ ಪತ್ನಿ ಮಕ್ಕಳು ಮತ್ತು ತಂಡದ ಎಲ್ಲಾ ಸದಸ್ಯರ ಸಹಾಯದಿಂದ ನಡೆಸುತ್ತಿದ್ದು ಪ್ರತಿ ವರ್ಷ ಸುಮಾರು ೭೦೦೦ ಮಕ್ಕಳಿಗೆ ತರಬೇತಿಯನ್ನು ನೀಡುತ್ತಿರುವುದು ಸುಲಭ ಸಾಧ್ಯವಲ್ಲ. ನಾನು ತಿಂಗಳಿಗೆ ಸುಮಾರು 250 ಕಾರ್ಯಕ್ರಮ ಅಂದರೆ ವರ್ಷಕ್ಕೆ 3000 ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಅದರಲ್ಲಿ 50 ಕಾರ್ಯಕ್ರಮಗಳಲ್ಲಿ ಮುಖ್ಯವೆಂದು ಭಾವಿಸುತ್ತೇನೆ. ಅದರಲ್ಲಿ ಪ್ರಥಮ ಆದ್ಯತೆ ಈ ಕಾರ್ಯಕ್ರಮವಾಗಿದೆ. ಕಳೆದ 21 ವರ್ಷಗಳಿಂದ ಪ್ರಕಾಶ್ ಭಂಡಾರಿಯವರಿಗೆ ಸಹರಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಸಂಸ್ಥೆಯ 25ನೇ ವರ್ಷಾಚರಣೆಯು ದೊಡ್ಡ…

Read More

ಪುಣೆ ;ಶ್ರೀ ಗುರು ದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ 20 ನೇ ವಾರ್ಷಿಕೋತ್ಸವವು ನವೆಂಬರ್ 26 ರವಿವಾರದಂದು ಅಪರಾನ್ಹ ಘಂಟೆ 2.00 ರಿಂದ ಬಾಣೆರ್ ನಲ್ಲಿರುವ ಬಂಟರ ಭವನದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಸಭಾಂಗಣದಲ್ಲಿ ವಿವಿದ ಧಾರ್ಮಿಕ ,ಸಾಂಸ್ಕ್ರತಿಕ ,ಹಾಗೂ ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಜರಗಲಿದೆ ..ಶ್ರೀಗುರುದೇವ ದತ್ತ ಸಂಸ್ಥಾನಮ್,,ಶ್ರೀ ದತ್ತಗುರು ವೀರಾಂಜನೇಯ ಸ್ವಾಮಿ ಕ್ಷೇತ್ರ ಓಡಿಯೂರಿನ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾದ್ವಿಶ್ರೀ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತಿಯಿರುವರು . ದಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪಾದುಕಾಪೂಜೆ , ಗುರುವಂದನೆ ,ಹಾಗೂ ದಾರ್ಮಿಕ ಸಭಾ ಕಾರ್ಯಕ್ರಮ, ಈ ದಾರ್ಮಿಕ ಸಭೆಯಲ್ಲಿ ಓಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ,ಮತ್ತು ಸಾದ್ವಿ ಶ್ರೀ ಮಾತಾನಂದಮಯಿಯವರು ದಿವ್ಯ ಉಪಸ್ಥಿತಿತರಿದ್ದು ಜನ ಮಾನಸಕ್ಕೆ ಅಶಿರ್ವಚನದ ಮೂಲಕ ಜ್ಞಾನ ಸಂದೇಶ ನೀಡಲಿದ್ದಾರೆ. ಮುಖ್ಯ ಅಥಿತಿ ಗಳಾಗಿ ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳೆಪ್ಪಾಡಿ…

Read More

ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ದಶಮಾನೋತ್ಸವ ಸಂಭ್ರಮದ ಪೂರ್ವಭಾವಿ ಸಮಾಲೋಚನಾ ಸಭೆಯು ಬಂಟರ ಯಾನೆ ನಾಡವರ ಮಾತೃ ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶೆಡ್ಡೆ ಹೊಸಲಕ್ಕೆ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಧಕರಿಗೆ ಸಮ್ಮಾನ, ವಾರ್ಷಿಕ ಮಹಾಸಭೆ, ಯುವ ಸಂಭ್ರಮ, ವಿದ್ಯಾರ್ಥಿ ವೇತನ ವಿತರಣೆ, ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮವು ಜು.16ರಂದು ಬೆಳಗ್ಗೆ 9.30ರಿಂದ ವಾಮಂಜೂರು ಚರ್ಚ್ ಸಭಾಭವನದಲ್ಲಿ ನಡೆಯಲಿದೆ. ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಸುಮಾರು 25ಕ್ಕೂ ಮಿಕ್ಕಿ ಬಂಟರ ಸಂಘದ ಕಲಾವಿದರಿಂದ ನೃತ್ಯ ಸ್ಪರ್ಧಾ ಸಮ್ಮಿಲನ ಯುವ ಸಂಭ್ರಮ – 2023 ಕಾರ್ಯಕ್ರಮ ಜರಗಲಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ವಿವಿಧ ಬಂಟರ ಸಂಘದ ಅಧ್ಯಕ್ಷರಿಂದ ಕಾರ್ಯಕ್ರಮದ ರೂಪು ರೇಷೆಯನ್ನು…

Read More