Author: admin
ಸ್ವಸ್ಥ ಸಮಾಜ ನಿರ್ಮಾಣದ ಪರಿಕಲ್ಪನೆ ಅವಶ್ಯ: ಆಳ್ವ ಮೂಡುಬಿದಿರೆ: ಮಾನವ ಬದುಕಿನುದ್ದಕ್ಕೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಅಧ್ಯಕ್ಷ ಡಾ. ಎಂ .ಮೋಹನ ಆಳ್ವ ಹೇಳಿದರು ಮೂಡುಬಿದಿರೆಯ ಬಂಟರ ಸಂಘದ ಮಹಿಳಾ ಘಟಕದ ವತಿಯಿಂದ ಭಾನುವಾರ ಪಟ್ಟಣದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಎಲ್ಲ ಜಾತಿ ಸೇರಿದರೆ ಸಮಾಜ. ಮನುಷ್ಯ ದಾನ ಧರ್ಮದ ಮೂಲಕ ಸ್ವಸ್ಥ ಸಮಾಜ ನಿರ್ಮಿಸುವ ಪರಿಕಲ್ಪನೆ ಹೊಂದಿರಬೇಕು. ಬಡವ- ಶ್ರೀಮಂತ ಎನ್ನುವ ಅಂತರ ಕಡಿಮೆಗೊಳಿಸುವುದರತ್ತ ಪ್ರತಿಯೊಬ್ಬರೂ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು. ಇಂದು ಯುವ ಪೀಳಿಗೆ ಮೊಬೈಲ್ ಗೆ ಜೋತು ಬಿದ್ದು ಸಮಾಜಮುಖಿ ಜೀವನದಿಂದ ಪ್ರತ್ಯೇಕವಾಗಿದ್ದಾರೆ ಕೂಡುಕಟುಂಬದ ಮೂಲಕ ಸಂಸ್ಕಾರ ಪರಿಚಯಿಸಬೇಕಾಗಿದೆ. ಆಗ ಮಾತ್ರ ವ್ಯಕ್ತಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಉಪನ್ಯಾಸ ನೀಡಿ, ಬದಲಾದ ಕಾಲಘಟ್ಟದಲ್ಲಿ ಆಟಿಡೊಂಜಿ ದಿನ ಅನೇಕ ಬಗೆಯಲ್ಲಿ…
ರೂಪೇಶ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ “ಸರ್ಕಸ್” ತುಳು ಸಿನಿಮಾ ಶುಕ್ರವಾರ ಬೆಳಗ್ಗೆ ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಚಿತ್ರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಅವರು, “ತುಳು ಸಿನಿಮಾಕ್ಕೆ ಸಣ್ಣ ಮಾರುಕಟ್ಟೆ ಇದ್ದರೂ ಇಷ್ಟು ದೊಡ್ಡ ರೀತಿಯಲ್ಲಿ ತುಳುವರು ಪ್ರೋತ್ಸಾಹ ನೀಡುತ್ತಿರುವುದು ಖುಷಿಯ ವಿಚಾರ ಎಂದರು. ತುಳು ಚಿತ್ರರಂಗಕ್ಕೆ ಕೆ.ಎನ್. ಟೇಲರ್ ಅವರಂತಹ ಹಿರಿಯರಿಂದ ಇಂದಿನ ಯುವ ಕಲಾವಿದರ ತನಕ ನೂರಾರು ಮಂದಿ ದುಡಿದಿದ್ದಾರೆ. ಅವರೆಲ್ಲರ ಶ್ರಮದಿಂದ ತುಳು ಸಿನಿಮಾಗಳು ತುಳುವರ ಪ್ರೀತಿಯನ್ನು ಗಳಿಸಿದೆ. ಸಿನಿಮಾವನ್ನು ನೋಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿ” ಎಂದರು. ಬಳಿಕ ಮಾತಾಡಿದ ಭೋಜರಾಜ್ ವಾಮಂಜೂರು, “ಸರ್ಕಸ್ ಸಂಪೂರ್ಣ ಮನೋರಂಜನಾತ್ಮಕ ಚಿತ್ರ. ಗಿರಿಗಿಟ್ ಬಳಿಕ ಮತ್ತೊಮ್ಮೆ ಅದೇ ತಂಡದ ಮೂಲಕ ನಾವೆಲ್ಲರೂ ಜೊತೆಯಾಗಿ ನಟಿಸಿದ್ದೇವೆ ಎಂದರು. ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮಾತಾಡಿ, “ಸರ್ಕಸ್ ಚಿತ್ರ ತುಳುನಾಡಿನಲ್ಲಿ ಸಕ್ಸಸ್ ಆಗಲಿ. ಇನ್ನಷ್ಟು ತುಳು…
ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಭಾರತ ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ರಾಷ್ಟ್ರವಾಗಿದೆ. ಈ ಮೂಲಕ ಭಾರತ ತನ್ನ ನೆರೆಯ ರಾಷ್ಟ್ರ ಚೀನವನ್ನು ಹಿಂದಿಕ್ಕಿದೆ. ಭೌಗೋಳಿಕ ವಿಸ್ತೀರ್ಣದಲ್ಲಿ ವಿಶ್ವದಲ್ಲಿ ಏಳನೇ ಸ್ಥಾನ ಹೊಂದಿರುವ ಭಾರತ ಈಗ 142.86 ಕೋಟಿ ಜನರನ್ನು ಹೊಂದುವ ಮೂಲಕ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ಅವಲೋಕಿ ಸಿದಾಗ ಭಾರತದ ಪಾಲಿಗೆ ಇದೊಂದು ಧನಾತ್ಮಕ ಬೆಳವಣಿಗೆಯಾಗಲಿ, ಹೆಮ್ಮೆಯ ವಿಷಯವೇನಲ್ಲ. ಹಾಗೆಂದು ಇದು ದೇಶದ ಪಾಲಿಗೆ ಬಲುದೊಡ್ಡ ಹೊರೆ ಎಂದು ಭಾವಿಸಿ ಆತಂಕ ಪಡುವ ಪರಿಸ್ಥಿತಿಯೇನೂ ಸೃಷ್ಟಿಯಾಗಿಲ್ಲ. ಕಾರಣ ದೇಶದ ಒಟ್ಟಾರೆ ಜನಸಂಖ್ಯೆಯನ್ನು ಪರಿಗಣಿಸಿದಾಗ 25.40ಕೋಟಿ ಜನರು 15-24 ವರ್ಷದೊಳಗಿನವರಾಗಿದ್ದಾರೆ. ಇದು ದೇಶದ ಪಾಲಿಗೆ ಆಶಾದಾಯಕ ಮತ್ತು ಇಷ್ಟೊಂದು ಬೃಹತ್ ಪ್ರಮಾಣದ ಯುವ ಸಮುದಾಯವನ್ನು ಹೊಂದಿರುವುದು ಹೆಮ್ಮೆಯ ಸಂಗತಿಯೇ. ಸದ್ಯ ಇಡೀ ವಿಶ್ವದ ಜನಸಂಖ್ಯೆಯಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಬಹುತೇಕ ದೇಶಗಳಲ್ಲಿ ಜನನ ಪ್ರಮಾಣ ಇಳಿಕೆಯಾಗುತ್ತಲೇ ಬಂದಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ವಿಚಾರದಲ್ಲಿ ಭಾರತವೂ…
ಐತಿಹಾಸಿಕ ಹಿನ್ನೆಲೆಯಿದ್ದು,ಸುಮಾರು 2200 ವರ್ಷದ ಇತಿಹಾಸವಿರುವ ಶಿರ್ವ ಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನದಲ್ಲಿ ಎಲ್ಲೂರು ಸೀಮೆಯ ಆಗಮ ಪಂಡಿತ ವೇ|ಮೂ|ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ,ವೇ|ಮೂ| ಕುತ್ಯಾರು ಕೇಂಜ ಭಾರ್ಗವ ತಂತ್ರಿ ಮತ್ತು ವೇ|ಮೂ| ರಘುಪತಿ ಗುಂಡು ಭಟ್ ಅವರ ಪೌರೋಹಿತ್ಯದಲ್ಲಿ ಬ್ರಹ್ಮಕಲಶಾಭಿಷೇಕವು ಸೋಮವಾರ ನಡೆಯಿತು. ಸೋಮವಾರ ಪುಣ್ಯಾಹ,ಗಣಯಾಗ,ಬ್ರಹ್ಮಕಲಶ ಪ್ರತಿಷ್ಠೆ,ಪ್ರಧಾನ ಯಾಗ, 8-45ರ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಾಶಾಭಿಷೇಕ,ಮಹಾಪೂಜೆ ನಡೆದು ಸಾನಿಧ್ಯಕ್ಕೆ ಸಂಬಂಧಪಟ್ಟ ನಾಗಬನದಲ್ಲಿ ತನುತಂಬಿಲ ಸೇವೆ ನಡೆಯಿತು. ಸಂಪ್ರದಾಯದಂತೆ ಮಧ್ಯಾಹ್ನ ಧ್ವಜಾರೋಹಣ ನಡೆದು ದೈವ ಸಂದರ್ಶನ,ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು. ರಾತ್ರಿ ನಂದಿಗೋಣ ಮತ್ತು ದೈವ ಬಬ್ಬರ್ಯನ ನೇಮ ನಡೆದು ಮಂಗಳವಾರ ಬೆಳಿಗ್ಗೆ ನೀಚ ದೈವದ ನೇಮ ನಡೆಯಿತು. ದೈವಸ್ಥಾನದ ಮೊಕ್ತೇಸರ ಮಟ್ಟಾರು ಅರಂತಡೆ ಎಂ. ಗಿರೀಶ್ ಹೆಗ್ಡೆ, ಆಡಳಿತ ಮಂಡಳಿಯ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಶಿರ್ವ ನಡಿಬೆಟ್ಟು ಮನೆತನದ ಚಂದ್ರಶೇಖರ ಹೆಗ್ಡೆ, ಬರೊಡಾದ ಉದ್ಯಮಿ ಶಶಿಧರ…
ಕನ್ನಡ ಕರಾವಳಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಗಾಧ ಮತ್ತು ಅನನ್ಯ. ಆಧುನಿಕ ವೈದ್ಯವಿಜ್ಞಾನದ ಜೊತೆಜೊತೆಗೆ ಆಯುರ್ವೇದ ವಿಜ್ಞಾನದ ಬೆಳವಣಿಗೆ ಮತ್ತು ವಿಸ್ತಾರ ಅಷ್ಟೇ ವೇಗವಾಗಿ ಸಾಗಿದೆ. ಆಯುರ್ವೇದ ವೈದ್ಯ ವಿಜ್ಞಾನದ ಅಭ್ಯಾಸ, ಅನ್ವೇಷಣೆ, ಮಾನಕೀಕರಣ,ಪ್ರಯೋಗಶೀಲತೆ ಹಾಗೂ ವೃತ್ತಿಪರತೆ ಸಾವಿರಸಾವಿರ ಸಂಖ್ಯೆಯ ರೋಗಿಗಳ ಮೊಗದಲ್ಲಿ ನಗು ಹೊಮ್ಮಿಸಿದೆ. ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಆಯುರ್ವೇದ ವೃತ್ತಿಪರ ಸಂಸ್ಥೆಗಳನ್ನು ಹೊರತುಪಡಿಸಿ ಅಲೋಪತಿ ನರ್ಸಿಂಗ್ ಹೋಮ್ ಗಳಂತೆ ಸುಸಜ್ಜಿತ ಖಾಸಗಿ ಆಯುರ್ವೇದ ಆಸ್ಪತ್ರೆಗಳು ರಾಜ್ಯದಲ್ಲಿ ಕೇವಲ ಬೆರಳೆಣಿಕೆಯಷ್ಟು. ಆರ್ಥಿಕ ಸವಾಲುಗಳನ್ನು ಎದುರಿಸಿ ದೂರಗಾಮಿ ಸ್ಥಿರತೆಯನ್ನು ಕಾಪಾಡಿಕೊಂಡು ಉನ್ನತ ಸೇವಾತತ್ಪರತೆಯನ್ನು ಮೆರೆಯುವುದು ನಿಜಕ್ಕೂ ಕಠಿಣ. ಹಾಗಾಗಿಯೇ ಏನೋ ಬಡ ಮಧ್ಯಮವರ್ಗದ ಜನರಿಗೆ ಆಯುರ್ವೇದ ಔಷಧ, ಚಿಕಿತ್ಸೆ, ಶುಶ್ರೂಷೆ ಮರೀಚಿಕೆಯಾಗಿದ್ದು ಮಾತ್ರವಲ್ಲದೆ ಆಯುರ್ವೇದದ ಬಗೆಗಾಗಿನ ಪ್ರಚಾರ ಪ್ರಸಾರ ತೀರಾ ನೀರಸವಾಯಿತು. ಲಾಭಾನಾಂ ಶ್ರೇಯಃ ಆರೋಗ್ಯಮ್ – ಬದುಕಿನಲ್ಲಿ ಸಂಪಾದಿಸುವ ಎಲ್ಲಾ ಲಾಭಗಳಿಗಿಂತ ಆರೋಗ್ಯ ಸಂಪಾದನೆ ಶ್ರೇಷ್ಠ ಲಾಭ. ಆಯುರ್ವೇದ ಜೀವನ ಪದ್ಧತಿ ಸಾರ್ವಕಾಲಿಕ ಮತ್ತು ಸರ್ವಮಾನ್ಯ. ಆರೋಗ್ಯ…
ನಾವೆಲ್ಲ ಹುಟ್ಟುತ್ತಲೇ ಮಾತೃ ಋಣ, ಪಿತೃ ಋಣ ಹಾಗೂ ಸಮಾಜದ ಋಣವನ್ನು ಕೂಡಿಕೊಂಡೇ ಹುಟ್ಟುತ್ತೇವೆ. ಈ ಋಣಗಳನ್ನು ನಮ್ಮ ಜೀವಮಾನದಲ್ಲಿ ತೀರಿಸಲು ಸಾಧ್ಯವಿಲ್ಲ. ಕಿಂಚಿತ್ ಪ್ರಮಾಣದಲ್ಲಿಯಾದರೂ ಋಣಭಾರವನ್ನು ಹಗುರ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾದುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಈ ದೆಸೆಯಲ್ಲಿ ಕೆಲವರಾದರೂ ಪ್ರಯತ್ನ ಶೀಲರಾಗಿ ಸತತ ಸಂಘರ್ಷಗಳಿಂದ ಇಂಥ ಪಥದಲ್ಲಿ ಅಗ್ರೇಸರರಾಗಿ ಸಮಾಜದಲ್ಲಿ ಗುರುತಿಸಿ ಕೊಂಡಿರುವುದಷ್ಟೇ ಅಲ್ಲದೇ ತಮ್ಮ ಮಾತಾಪಿತರ ಹಾಗೂ ಹುಟ್ಟಿದ ಊರಿನ ಹೆಸರನ್ನು ಗೌರವದಿಂದ ಆಡಿಕೊಳ್ಳುವಂತೆ ಸಾಧನೆ ಮಾಡಿದವರನ್ನು ನೆನೆಸಿ ಕೊಂಡರೆ ಹೆಮ್ಮೆಯೆನಿಸುತ್ತದೆ. ಇಂಥವರ ಸಾಲಿನಲ್ಲಿ ನಿಸ್ಸಂಶಯವಾಗಿ ಹೆಸರಿಸಬಹುದಾದ ಹೆಸರು ಕಾರ್ಕಳ ತಾಲೂಕಿನ ಅಜೆಕಾರು ಮೂಲದ ಸಂಘಟಕ, ಸಮಾಜಸೇವಕ, ಜನಪರ ಕಾಳಜಿಯ ಸ್ನೇಹಜೀವಿ ಶ್ರೀ ವಿಜಯ್ ಶೆಟ್ಟಿ ಅವರದ್ದು. ಕಾರ್ಕಳ ತಾಲೂಕಿನ ಅಜೆಕಾರು ಕೊರಗ ಶೆಟ್ಟಿ ಹಾಗೂ ಶ್ರೀಮತಿ ಸರಸ್ವತಿ ಕೆ ಶೆಟ್ಟಿ ದಂಪತಿಗಳಿಗೆ ಆರನೇ ಪುತ್ರನಾಗಿ ಜನಿಸಿದ ವಿಜಯ್ ಶೆಟ್ಟಿ ಅವರು ಅಜೆಕಾರು ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಹಾಗೂ ಅಜೆಕಾರು ಜ್ಯೋತಿ ಹೈಸ್ಕೂಲ್ ನಲ್ಲಿ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದ್ರೆ ಆಶ್ರಯದಲ್ಲಿ ನ.17 ರಂದು ಸಂಜೆ 6.30 ಕ್ಕೆ ಮೂಡುಬಿದ್ರೆ ಸ್ಕೌಟ್ ಗೈಡ್ ಕನ್ನಡಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ ಡಾ.ನಾಡೋಜ ಹಂಪನಾ ವಿರಚಿತ ಚಾರುವಸಂತ ದೇಸೀ ಕಾವ್ಯದ ರಂಗರೂಪದ ಪ್ರದರ್ಶನವನ್ನು ಎರಡನೇ ಬಾರಿಗೆ ಏರ್ಪಡಿಸಲಾಗಿದೆ. ಈಗಾಗಾಲೇ ಬೆಂಗಳೂರು, ಮೈಸೂರು, ಗೌರಿಬಿದನೂರು, ತುಮಕೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ ಮುಂತಾದೆಡೆ ಅಪಾರ ಜನಮೆಚ್ಚುಗೆ ಪಡೆದ ಈ ನಾಟಕವನ್ನು ಪ್ರಸಿದ್ಧ ರಂಗನಿರ್ದೇಶಕ ಡಾ.ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದು ಸಾಹಿತಿ ಡಾ.ನಾ.ದಾಮೋದರ ಶೆಟ್ಟಿಯವರು ರಂಗರೂಪ ನೀಡಿದ್ದಾರೆ. ಬಹುಜನರ ಅಪೇಕ್ಷೆಯ ಮೇರೆಗೆ ಈ ಪ್ರದರ್ಶನವನ್ನು ಮತ್ತೆ ಮೂಡುಬಿದ್ರೆಯಲ್ಲಿ ಏರ್ಪಡಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ನಡೆಯುವ ಈ ನಾಟಕ ನೋಡಲು ಪ್ರವೇಶ ಉಚಿತವಾಗಿದೆ ಯೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಪರಿಶುದ್ಧವಾದ ಬಿಳುಪು ಶುಭ್ರ ವರ್ಣದ ಸುಂದರ ಕೋಮಲ ಸುಗಂಧಯುಕ್ತ ಮನಸೂರೆಗೊಳ್ಳುವ ಸುವಾಸನಾಭರಿತ ಉಡುಪಿ ಶಂಕರಪುರ ಮಲ್ಲಿಗೆಯ ಸೌಂದರ್ಯ ಅವರ್ಣನೀಯ. ಬೆಳ್ಳಿ ನೊರೆಗಳು ಹಸಿರು ಪ್ರಕೃತಿಯನ್ನು ಅಪ್ಪಿಕೊಂಡಂತೆ ಇರುವ ಮಲ್ಲಿಗೆಯ ತೊಟ್ಟು ಹಾಗೂ ತನ್ನ ಪರಿಮಳದಿಂದ ಎಲ್ಲರನ್ನೂ ಸ್ವಾಗತಿಸುವ ಮಲ್ಲಿಗೆಯ ಸೌಂದರ್ಯಕ್ಕೆ, ಸುಂದರತೆಗೆ ಪ್ರತೀಕವಾಗಿ ಜಿ.ಐ ಮಾನ್ಯತೆ ಹೊಂದಿದೆ. ಭೌದ್ಧಿಕ ಆಸ್ತಿ ಹಕ್ಕಿನಡಿ ನೊಂದಣಿಯಾದ ಉಡುಪಿ ಮಲ್ಲಿಗೆ ಬೌಗೋಳಿಕ ಸೂಚ್ಯಂಕದ ಪಟ್ಟಿಯಲ್ಲಿ ಸ್ಥಾನ ಪಡೆದು ಟ್ಯಾಗ್ ಹೊಂದಿದ್ದು ಘಮ ಘಮಿಸುವ ಪರಿಮಳದೊಂದಿಗೆ ಕಣ್ಣಿಗೆ ಮನಸ್ಸಿಗೆ ತಂಪನ್ನು ಮೂಗಿಗೆ ಕಂಪನ್ನು ನೀಡುವ ಉಡುಪಿ ಮಲ್ಲಿಗೆ 700 ರಿಂದ 800 ಹೂವುಗಳು ಸೇರಿದರೆ ಒಂದು ಚೆಂಡು. ನಾಲ್ಕು ಚೆಂಡು ಸೇರಿದರೆ ಒಂದು ಅಟ್ಟಿ, ಒಂದು ಅಟ್ಟಿಯಲ್ಲಿ ಸರಾಸರಿ 3 ಸಾವಿರ ಹೂವಿರುತ್ತದೆ. ಭೌಗೋಳಿಕ ಸೂಚನೆ ಜಿ ಐ ಒಂದು ನಿರ್ದಿಷ್ಟ ಸ್ಥಳ ಪ್ರದೇಶಕ್ಕೆ ಅನುರೂಪವಾಗಿ ಕೆಲವು ವಸ್ತುಗಳಿಗೆ ಬಳಸುವ ಚಿಹ್ನೆ ಅಥವಾ ಮಾನ್ಯತೆ. ಸಂಪ್ರದಾಯಕ ವಿಶೇಷತೆಗಳನ್ನು ಹೊಂದಿರುವ ವಿಶ್ವ ವಾಣಿಜ್ಯ ಸಂಸ್ಥೆ ಸದಸ್ಯರಾಗಿ ನೊಂದಣಿ ಮತ್ತು…
ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗುವ ಯುವಕ ಯುವತಿಯರ ಸಂಖ್ಯೆ ಜಾಸ್ತಿಯಾಗಿದೆ. ಬಹಳಷ್ಟು ಯುವ ಜನರಲ್ಲಿ ಗಾಂಜಾ ಬಗ್ಗೆ ಇದು ಆರೋಗ್ಯಕರ, ಇದು ಸೃಜನಶೀಲತೆ ಹೆಚ್ಚಿಸುವ ದ್ರವ್ಯ ಎಂಬ ಅಪನಂಬಿಕೆಗಳು ಇವೆ. ಬಾಂಗ್ ತಿಂದಾಗ ಅಥವಾ ಗಾಂಜಾ ಸೇದಿದಾಗ “ಟೆಟ್ರಾ ಹೈಡ್ರೋ ಕ್ಯಾನಬಿನೋಲ್ “ಎಂಬ ಒಂದು ಆಕ್ಟಿವ್ ಪ್ರಿನ್ಸಿಪಲ್ ಮನುಷ್ಯನ ಮೆದುಳು ಮತ್ತು ದೇಹದ ಮೇಲೆ ಕೆಲಸ ಮಾಡುತ್ತದೆ. ಗಾಂಜ ತೆಗೆದುಕೊಂಡ ಕೂಡಲೇ ಮನಸ್ಸಿಗೆ ಆರಾಮವಾಗುತ್ತದೆ ಮತ್ತು ಖುಷಿ ಸಿಗುತ್ತದೆ. ಆದ್ದರಿಂದಲೇ ಯುವಕರು ಇದನ್ನು ಇಷ್ಟ ಪಡುತ್ತಾರೆ. ಆದರೆ ಅದನ್ನು ತೆಗೆದುಕೊಂಡ ಕೂಡಲೇ ಮನಸ್ಸಿಗೆ ಒಂದು ರೀತಿಯ ಕನ್ಫ್ಯೂಷನ್, ಸುಸ್ತು, ನೆನಪಿನ ಶಕ್ತಿಯ ಕೊರತೆ, ಏಕಾಗ್ರತೆಯ ಕೊರತೆ, ಗಮನ ಕೊಡಲು ಆಗದೆ ಇರುವುದು, ಒಂದು ರೀತಿಯ ಹೆದರಿಕೆ ಭಯ ಮತ್ತು ಸುತ್ತಮುತ್ತಲು ನಡೆಯುತ್ತಿರುವ ವಿಷಯಗಳಿಗೆ ಪ್ರತಿಕ್ರಿಯಿಸಲು ಕಷ್ಟವಾಗುವುದು ಇವೆಲ್ಲ ಉಂಟಾಗುತ್ತದೆ. ಇನ್ನು ಕೆಲವರಲ್ಲಿ ಸಂಶಯ ಪ್ರವೃತ್ತಿ, ವಿಚಿತ್ರ ಭ್ರಮೆಗಳು ಹಾಗೂ ಶೂನ್ಯದಲ್ಲಿ ಕಣ್ಣಿಗೆ ವಿಚಿತ್ರ ಆಕೃತಿಗಳು ಕಾಣುವುದು ಅಥವಾ…
ಜಾಗತಿಕ ತಾಪವು ಸರಾಸರಿ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೆ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಜಾಗತಿಕ ಉಷ್ಣಾಂಶವು ಸರಾಸರಿ 1.23 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳ ಕಂಡಿದೆ. ಇದು ಅಪಾಯಕಾರಿ ಮಟ್ಟ ತಲುಪುವುದನ್ನು ತಡೆಯಬೇಕಿದೆ. ಇದಕ್ಕಾಗಿ ದೇಶದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ತಲಾ 10 ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ರಮವನ್ನು ಕೇಂದ್ರ ಸರಕಾರ ತುರ್ತಾಗಿ ಹಮ್ಮಿಕೊಳ್ಳಬೇಕು. ಈ ಬಗ್ಗೆ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ತಿಳಿಸಿದೆ. ಒಕ್ಕೂಟದ ಸದಸ್ಯ ಬೆನೆಡಿಕ್ಟ್ ಫೆರ್ನಾಂಡಿಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ವಿವಿಧ ಶಾಲಾ ಕಾಲೇಜುಗಳಲ್ಲಿ 26.5 ಕೋಟಿ ನೋಂದಾಯಿತ ವಿದ್ಯಾರ್ಥಿಗಳಿದ್ದಾರೆ.ವಿದ್ಯಾರ್ಥಿಗಳು ತಲಾ 10 ಗಿಡಗಳನ್ನು ನೆಟ್ಟರೂ ದೇಶದಲ್ಲಿ ವರ್ಷಕ್ಕೆ 270 ಕೋಟಿ ಗಿಡಗಳನ್ನು ಬೆಳೆಸಬಹುದು. ಅದರಲ್ಲಿ ಶೇ. 30ರಷ್ಟು ಗಿಡಗಳು ಉಳಿದರೂ 80 ಕೋಟಿ ಗಿಡಗಳನ್ನು ಬೆಳೆಸಿದಂತಾಗುತ್ತದೆ ಎಂದರು. ನಂದಿಗುಡ್ಡೆ: ಮರ ಕಡಿಯದಂತೆ ತಡೆಯಾಜ್ಞೆ ಮಂಗಳೂರಿನ ನಂದಿಗುಡ್ಡೆಯಲ್ಲಿ ರಸ್ತೆ ಅಭಿವೃದ್ಧಿ…