ಗುರುಪುರ : ಸೇವಾ ಬ್ರಿಗೇಡ್(ರಿ) ಗುರುಪುರ ಇದರ ವತಿಯಿಂದ ಭಾನುವಾರ(ಆ. 14) ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಎದುರಿನ ಬಂಡಿ ಗದ್ದೆಯಲ್ಲಿ ಆಯೋಜಿಸಲಾದ `ಆಟಿದ್ ಕೆಸರ್ಡೊಂಜಿ ದಿನ’ ಕಾರ್ಯಕ್ರಮವನ್ನು ಶ್ರೀ ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು ಅವರು ತುಳುನಾಡಿನ ಸಂಪ್ರದಾಯದಂತೆ ಕಳಸೆಯ ಮೇಲಿಟ್ಟ ತೆಂಗಿನ ಗೊನೆ ಅರಳಿಸಿ, ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಚಂದ್ರಹಾಸ ಕೌಡೂರು ಮಾತನಾಡಿ, ಊರಿನ ದೈವಸ್ಥಾನದ ಗದ್ದೆಯಲ್ಲಿ ಆಟಿಡ್ ಕೆಸರ್ಡೊಂಜಿ ದಿನ ಕಾರ್ಯಕ್ರಮ ನಡೆಯುತ್ತಿರುವುದು ಎಲ್ಲರಿಗೂ ಖುಷಿಯ ವಿಷಯ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದರೂ, ಸ್ಪರ್ಧಾಳುಗಳು ಅದನ್ನು ಸಮಾನವಾಗಿ ಅನುಭವಿಸುತ್ತ ತುಳುನಾಡಿನ ಹಿರಿತನ ಮೆರೆಯಬೇಕು ಎಂದರು.
ದೈವಸ್ಥಾನದ ಧೂಮಾವತಿ ಪಾತ್ರಿ ತನಿಯಪ್ಪ ಪೂಜಾರಿ, ವಿಲಾಸ್ ಶೆಟ್ಟಿ ಮರಂಕರಿಯ, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಚಂದ್ರಹಾಸ ಕಾವ, ಉಮೇಶ್ ಶೆಟ್ಟಿ, ಕೃಷ್ಣ ಸಾಲ್ಯಾನ್, ಸತೀಶ್ ಕಾವ, ವಿನಯ್ ಸುವರ್ಣ, ಜಗದೀಶ್ ಶೆಟ್ಟಿ ಕಾರಮೊಗರು, ಬ್ರಿಗೇಡ್ನ ಗೌರವಾಧ್ಯಕ್ಷರಾದ ಪುರಂದರ ಮಲ್ಲಿ ಹಾಗೂ ರಮಾನಂದ ಶೆಟ್ಟಿ, ಅಧ್ಯಕ್ಷ ಶ್ಯಾಮ ಆಚಾರ್ಯ, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ, ಜಲಜಾ, ಗುರುಪುರ ಪಂಚಾಯತ್ ಸದಸ್ಯರಾದ ಜಿ. ಎಂ. ಉದಯ ಭಟ್, ಸಚಿನ್ ಅಡಪ, ರಾಜೇಶ್ ಸುವರ್ಣ, ಸುನಿಲ್ ಪೂಜಾರಿ ಜಲ್ಲಿಗುಡ್ಡೆ, ನಳಿನಿ ಶೆಟ್ಟಿ, `ಅಬತರ’ ತುಳು ಚಲನಚಿತ್ರದ ಕಲಾವಿದರ ತಂಡ, ಬ್ರಿಗೇಡ್ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಊರ ಪರವೂರ ನಾಗರಿಕರು ಪಾಲ್ಗೊಂಡಿದ್ದರು.
`ಆಟಿಡ್ ಕೆಸರ್ಡೊಂಜಿ ದಿನ’ದ ಅಂಗವಾಗಿ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಹಗ್ಗ ಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ಕೆಸರು ಗದ್ದೆಯಲ್ಲಿ ಓಟ, ಸಂಗೀತ ಕುರ್ಚಿ, ಮತ್ತಿತರ ಆಟೋಟ-ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ತುಳುನಾಡಿನ ಖಾದ್ಯದೊಂದಿಗೆ ಗಂಜಿ ಊಟ ಏರ್ಪಡಿಸಲಾಗಿತ್ತು. ಸಂಜೆ ಬಹುಮಾನ ವಿತರಣೆಯೊಂದಿಗೆ ಸಮಾರೋಪ ಸಮಾರಂಭ ನಡೆಯಿತು.
———
ಪೋಟೊ:
ಜಿಯುಆರ್-ಆ-14-ಆಟಿ ದಿನ
ಜಿಯುಆರ್-ಆ-14-ಆಟಿ ದಿನ(ಉದ್ಘಾಟನೆ)-1
ಜಿಯುಆರ್-ಆ-14-ಆಟಿ ದಿನ(ಉದ್ಘಾಟನೆ)-2
ಜಿಯುಆರ್-ಆ-14-ಆಟಿ ದಿನ(ಉದ್ಘಾಟನೆ)-3
ಜಿಯುಆರ್-ಆ-14-ಆಟಿ ದಿನ(ಹಗ್ಗ ಜಗ್ಗಾಟ)