Author: admin
ಗಣಪನ ಹಬ್ಬವನ್ನು ಆಚರಿಸಲು ದೇಶಾದ್ಯಂತ ದಿನಗಣನೆ ಆರಂಭವಾಗಿದೆ. ಈಗಾಗಲೇ ಗಣೇಶನ ವಿಗ್ರಹಗಳ ತಯಾರಿಕೆ ಮತ್ತು ಮಾರಾಟ ಪ್ರಕ್ರಿಯೆ ಬಿರುಸುಗೊಂಡಿದೆ. ಗಣೇಶನ ಹಬ್ಬದ ಆಚರಣೆ ವೇಳೆ ಪರಿಸರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸರಕಾರ ಮತ್ತು ವಿವಿಧ ಪರಿಸರಸ್ನೇಹಿ ಸಂಘಟನೆಗಳು ಸಾರ್ವಜನಿಕರಿಗೆ ಈಗಾಗಲೇ ಕರೆ ನೀಡಿವೆ. ಈ ನಿಟ್ಟಿನಲ್ಲಿ ಜನರು ಹೆಚ್ಚಿನ ಆಸಕ್ತಿ ತೋರಬೇಕಿದೆ. ಗಣಪನ ಹಬ್ಬ ಎಂದಾಕ್ಷಣ ಮನೆಮನೆಗಳಲ್ಲಿ ಗಣಪತಿಯ ವಿಗ್ರಹವನ್ನು ಕೂರಿಸಿ ಭಕ್ತಿಯಿಂದ ಪೂಜಿಸಿ ಸಂಭ್ರಮಿಸುವುದು ವಾಡಿಕೆ. ಆದರೆ ಕಳೆದ ಕೆಲವು ವರ್ಷಗಳಿಂದೀಚೆಗೆ ಮಣ್ಣಿನ ವಿಗ್ರಹದ ಬದಲಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ವಿಗ್ರಹಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ಪೂಜಿಸಿ ಅದನ್ನು ಜಲಮೂಲಗಳಲ್ಲಿ ವಿಸರ್ಜಿಸುವ ಕಾರ್ಯ ನಡೆಯುತ್ತಿದೆ. ಈ ಪಿಒಪಿ ವಿಗ್ರಹಗಳು ಹಗುರವಾಗಿರುವುದರಿಂದ ಮತ್ತು ಹೆಚ್ಚಿನ ಆಕರ್ಷಣೆಯನ್ನು ಹೊಂದಿರುವುದರಿಂದ ಈ ವಿಗ್ರಹಗಳತ್ತ ಜನರು ಸಹಜವಾಗಿಯೇ ಆಕರ್ಷಿತರಾಗುತ್ತಿದ್ದಾರೆ. ಆದರೆ ಈ ಪಿಒಪಿ ವಿಗ್ರಹಗಳು ಪರಿಸರಕ್ಕೆ ಮಾರಕವಾಗಿದ್ದು ಜೀವಜಂತುಗಳ ಪ್ರಾಣಕ್ಕೇ ಕುತ್ತು ತರುತ್ತವೆ. ಈ ವಿಗ್ರಹಗಳ ತಯಾರಿ ಮತ್ತು ಮಾರಾಟವನ್ನು…
ಕುಂತಳ ನಗರದ ಗ್ರಾಮೀಣ ಬಂಟರ ಸಂಘದ ಡೆವಲೆಪ್ಮೆಂಟ್ ಸೆಂಟರ್ನಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಉಚಿತವಾಗಿ ಡಿಜಿಟಲ್ ಸಾಕ್ಷರತೆ, ಕೌಶಲ್ಯ ಅಭಿವೃದ್ಧಿ, ಉದ್ಯೋಗಾಧಾರಿತ ತರಬೇತಿ ನೀಡುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಇದರ ಸಿಲ್ಕ್ ಡೆವಲಪ್ ಮೆಂಟ್ ಸೆಂಟರ್ ನ ಸೇವೆಯು ಮಕ್ಕಳ ಭವಿಷ್ಯವನ್ನು ಕಟ್ಟಿಕೊಳ್ಳಲು ಪರಿಣಾಮಕಾರಿ ಹಾಗೂ ಮಾದರಿ ಯೋಜನೆಯಾಗಿದೆ ಎಂದರು. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಟ್ರಸ್ಟ್ ವತಿಯಿಂದ ಈಗಾಗಲೇ 200 ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗಿದೆ. ರೈತರಿಗಾಗಿ ಕೃಷಿ ಮೇಳ ಮತ್ತು ಉದ್ಯೋಗ ಮೇಳವನ್ನು ಎರಡನೇ ಬಾರಿಗೆ ಆಯೋಜಿಸಲಾಗುತ್ತದೆ ಎಂದರು. ವೇದಿಕೆಯಲ್ಲಿ ಕೆ.ವಿ.ಕೆ ಬ್ರಹ್ಮಾವರದ ನಿರ್ದೇಶಕ, ಹಿರಿಯ ವಿಜ್ಞಾನಿ ಡಾ. ಧನಂಜಯ್ ಬಿ., ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಜೆಡಿಎಸ್…
ಪ್ರಕೃತಿಯ ರಮಣೀಯ ಸೌಂದರ್ಯದ ಮಧ್ಯೆ ಮೊಳಹಳ್ಳಿ ಎಂಬ ಪುಟ್ಟ ಊರು. ಸದಾ ಕಾಲ ಒಂದಲ್ಲ ಒಂದು ಕೊಡುಗೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ನೀವು ಮೊಳಹಳ್ಳಿ ಗ್ರಾಮದಲ್ಲಿ ಗುರುತಿಸಬಹುದು. ಆರೋಗ್ಯ ಕ್ಷೇತ್ರ, ಕೃಷಿ ಕ್ಷೇತ್ರ, ಉದ್ಯಮ ಕ್ಷೇತ್ರ, ಪತ್ರಿಕೋದ್ಯಮ ಕ್ಷೇತ್ರ, ಶಿಕ್ಷಣ ಕ್ಷೇತ್ರ ಹೀಗೆ ವಿವಿಧ ಕ್ಷೇತ್ರವಾರು ಗಣನೀಯ ಸೇವೆ ಸಲ್ಲಿಸಿದವರು ಗ್ರಾಮ ಮಟ್ಟದಲ್ಲಿ ಇದುವರೆಗೂ ಒಂದಲ್ಲ ಒಂದು ಸಾಧನೆಯನ್ನು ಕೈಗೊಂಡಿದ್ದಾರೆ. ಅದೇ ರೀತಿ ಮೊಳಹಳ್ಳಿಯ ಹುಟ್ಟೂರಿನಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ಪ್ರತೀ ವರ್ಷ ಕೊಡುವಂತಹ ಉಚಿತ ನೋಟ್ ಬುಕ್ ವಿತರಣಾ ಸಮಾರಂಭ ಇತ್ತೀಚಿಗೆ ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರುಗಿತು. ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ತಮ್ಮ ತಂದೆಯ ನೆನಪಿಗಾಗಿ ಪಂಚಾಯತ್ ವ್ಯಾಪ್ತಿಗೆ ಬರುವಂತಹ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಕೊಡುವಂತಹ ಕಾರ್ಯಕ್ರಮ ಹಲವು ವರ್ಷಗಳಿಂದ…
ಮುಂಬಯಿ, (RBI) ಮೇ.26: ಗುಜರಾತ್ ರಾಜ್ಯದ ದಾದ್ರಾ ಮತ್ತು ನಗರ ಹವೇಲಿ ವ್ಯಾಪ್ತಿಯ ಸಿಲ್ವಾಸ ನಗರಪಾಲಿಕೆಯ ಅಧ್ಯಕ್ಷೆ (ಮೇಯರ್) ಆಗಿ ತುಳು ಕನ್ನಡತಿ ರಜನಿ ಗೋವಿಂದ ಶೆಟ್ಟಿ ಸರ್ವಾನುಮತದಿಂದ ಚುನಾಯಿತರಾಗಿದ್ದಾರೆ. ಚುನಾವಣಧಿಕಾರಿ ಕಲೆಕ್ಟರ್ ಭಾನುಪ್ರಭ, ಬಿಜೆಪಿ ಅಧ್ಯಕ್ಷ ದೀಪೇಶ್ ತಂದೆಲ್, ಮಾಜಿ ಮೇಯರ್ ರಾಕೇಶ್ ಚವಾಣ್, ಮಾಜಿ ಉಪ ಮೇಯರ್ ಅಜಯ್ ದೇಸಾಯಿ ಇವರ ಸಮ್ಮಖದಲ್ಲಿ ಆಯ್ಕೆ ಪ್ರಕ್ರಿಯೆ ನೇರವೇರಿತು. ದಕ್ಷಿಣ ಕನ್ನಡ ಮಂಗಳೂರು ಮಣ್ಣುಗುಡ್ಡೆ ಮೂಲತಃ ದಿ| ನಾರಾಯಣ ತಿಮ್ಮಪ್ಪ ಶೆಟ್ಟಿ ಅವರ ಸುಪುತ್ರಿ, ಕಾರ್ಕಳ ತಾಲೂಕಿನ ಕಾಂತವರ ಹೊಸಮನೆ ಹಾಗೂ ನಾಮಾಂಕಿತ ಸಮಾಜ ಸೇವಕ ಗೋವಿಂದ ಶೆಟ್ಟಿ ಅವರ ಪತ್ನಿ, ಮಕ್ಕಳಾದ ತರುಣ್ ಮತ್ತು ಪುಣ್ಯ ಅವರೊಂದಿಗೆ ಸುಖ ಸಂಸಾರ ನಡೆಸುತ್ತಿರುವ ಇವರು ಸುಮಾರು ಕಳೆದ ಐದು ವರ್ಷಗಳಿಂದ ಇಲ್ಲಿನ ಕಾನ್ವೆಲ್ ಪಂಚಾಯತ್ನಲ್ಲಿ ಪಂಚಾಯತಿ ಅಧ್ಯಕ್ಷೆ (ಸರ್ಪಂಚ್) ಆಗಿದ್ದು, ಕಳೆದ ಎರಡುವರೆ ವರ್ಷಗಳಿಂದ ದಾದ್ರಾ ನಗರ ಹವೇಲಿ ಮಹಾ ನಗರ ಪಾಲಿಕೆಯ ಮೇಲ್ವಿಚಾರಕಿಯಾಗಿ ಆಗಿ ಕಾರ್ಯನಿರ್ವಾಹಿಸುತ್ತಿದ್ದರು. ತನ್ನ ಕಾರ್ಯಾವದಿಯಲ್ಲಿ…
ತಮಿಳುನಾಡು ರಾಜ್ಯದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (ಪಿಸಿಎ) ಮಾಡಿರುವ ತಿದ್ದುಪಡಿಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಎತ್ತಿಹಿಡಿದಿದೆ. ಆ ಮೂಲಕ ಜಾನಪದ ಕ್ರೀಡೆ ಜಲ್ಲಿಕಟ್ಟುಗೆ ಅನುಮತಿ ನೀಡಿದೆ. ಇದೇ ವೇಳೆ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಸಾಂವಿಧಾನಿಕ ಪೀಠವು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಂಬಳ ಮತ್ತು ಎತ್ತಿಮ ಬಂಡಿ ಓಟವನ್ನು ಅನುಮತಿಸುವ ಕಾನೂನನ್ನು ಎತ್ತಿಹಿಡಿದಿದೆ. ಈ ಮೂಲಕ ಕರಾವಳಿ ಕರ್ನಾಟಕದ ಕ್ರೀಡೆ ಕಂಬಳ ಆಯೋಜನೆಗೆ ಇದ್ದ ಆತಂಕ ದೂರವಾಗಿದೆ. “ಎಲ್ಲಾ ಮೂರು ತಿದ್ದುಪಡಿ ಕಾಯಿದೆಗಳು ಮಾನ್ಯವಾದ ಶಾಸನಗಳಾಗಿವೆ. ಎಲ್ಲಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಕ್ಷಮ ಅಧಿಕಾರಿಗಳು ತಿದ್ದುಪಡಿ ಮಾಡಿದ ಕಾನೂನಿನ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ಜವಾಬ್ದಾರರಾಗಿರುತ್ತಾರೆ” ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಜಲ್ಲಿಕಟ್ಟುವಿನಲ್ಲಿ ಪ್ರಾಣಿಗಳ ಹಕ್ಕುಗಳು ಹಾಗೂ ಕ್ರೌರ್ಯ ತಡೆ (ಪಿಸಿಎ) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು 2014ರ ಮೇನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದಾದ ಬಳಿಕ ಕಂಬಳಕ್ಕೂ…
ಪ್ರಜ್ವಲ್ ಫಿಲಂಸ್ ನಿರ್ಮಾಣದ ಕೀರ್ತನ್ ಭಂಡಾರಿ ರಚಿಸಿ ನಿರ್ದೇಶಿಸುತ್ತಿರುವ “ಗಜಾನನ ಕ್ರಿಕೆಟರ್ಸ್” ತುಳು ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಸೋಮವಾರ ಸಂಜೆ ಲಾಲ್ ಭಾಗ್ ನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಂಡರ್ ಆರ್ಮ್ ಕ್ರಿಕೆಟ್ ಜಗತ್ತನ್ನು ತೆರೆದಿಡುವಂತಹ ಪ್ರಯತ್ನವನ್ನು ಈ ಚಿತ್ರತಂಡ ಮಾಡುತ್ತಿದ್ದು ಚಿತ್ರವು ಹಾಸ್ಯಮಯ ಕಥಾಹಂದರವನ್ನು ಹೊಂದಿದ್ದು ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿರುತ್ತದೆ, ಕ್ರಿಕೆಟ್ ಪ್ರೇಮಿಗಳಿಗೆ ಮನೋರಂಜನೆ ನೀಡುವಂತಹ ಹಲವಾರು ಸನ್ನಿವೇಶಗಳು ಚಿತ್ರದಲ್ಲಿದೆ ಎಂದು ಹಾಗೂ ಚಿತ್ರದ ಚಿತ್ರೀಕರಣವು ಮೇ 18ರಿಂದ ಮಂಗಳೂರಿನಾದ್ಯಂತ ನಡೆಯಲಿದ್ದು ಅತೀ ಶೀಘ್ರದಲ್ಲಿ ಬೆಳ್ಳಿತರೆಗೆ ಬರಲಿದೆ. ನಾನು ಚಿತ್ರದ ಕಥೆಯನ್ನು ಒಪ್ಪಿಕೊಂಡು ಅದರ ಭಾಗವಾಗಿದ್ದೇನೆ ಎಂದು ತುಳು ರಂಗಭೂಮಿಯ ಹಿರಿಯ ನಟ ಭೋಜರಾಜ್ ವಾಮಂಜೂರ್ ಹೇಳಿದರು. ಚಿತ್ರದ ನಾಯಕ ನಟನಾಗಿ ವಿನೀತ್ ಕುಮಾರ್ ನಟಿಸುತ್ತಿದ್ದು ಇವರಿಗೆ ನಾಯಕಿಯರಾಗಿ ಅನ್ವಿತಾ ಸಾಗರ್ ಹಾಗೂ ಸಮತ ಅಮೀನ್ ಜೊತೆಯಾಗಲಿದ್ದಾರೆ. ತಾರಾಗಣದಲ್ಲಿ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು,…
ಬಂಟರ ಸಂಘ ಅಹ್ಮದಾಬಾದ್ ಗುಜರಾತಿನ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಾರಾಯಣ ರೈ ಅವರು ಪುತ್ತೂರಿನಲ್ಲಿ ಕೊನೆಯುಸಿರೆಳೆದರು. ವಿಜಯಾ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿ ಹೊಂದಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಸದಾ ಹಸನ್ಮುಖಿಯಾಗಿ ನೇರ ನಡೆ ನುಡಿ ಹೊಂದಿದ್ದ ಸಮಾಜ ಸೇವಕ ನಾರಾಯಣ ರೈ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
1) 83ನೇ ಅಖಿಲ ಭಾರತ ಅಂತರ್ ವಿವಿ ಮಹಿಳಾ ಅಥ್ಲೆಟಿಕ್ಸ್ ಕ್ರೀಡಾಕೂಟ. 2) ಮಂಗಳೂರು ವಿವಿ ಗಳಿಸಿದ 7 ಪದಕಗಳು ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆ. 3) 7ನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್ಸ್. 4) ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಂಗಳೂರು ವಿವಿಯ 33 ಕ್ರೀಡಾಪಟುಗಳ ತಂಡದಲ್ಲಿ 26 ಕ್ರೀಡಾಪಟುಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು. ವಿದ್ಯಾಗಿರಿ: ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ಮುಕ್ತಾಯಗೊಂಡ 83ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಮಹಿಳಾ ಕ್ರೀಡಾಕೂಟದಲ್ಲಿ 56 ಅಂಕಗಳನ್ನು ಪಡೆದ ಮಂಗಳೂರು ವಿಶ್ವವಿದ್ಯಾಲಯವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಪದಕ ಪಡೆದ ಎಲ್ಲ ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. 2 ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟು ಏಳು ಪದಕಗಳನ್ನು ಆಳ್ವಾಸ್ ಕಾಲೇಜಿನ ಆರು ವಿದ್ಯಾರ್ಥಿನಿಯರು ಪಡೆದಿದ್ದಾರೆ. ಈ ಪೈಕಿ ಅಂಜಲಿ ಸಿ. ಎರಡು ಪದಕಗಳನ್ನು ಪಡೆದುಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಭವಾನಿ ಯಾದವ್ ಉದ್ದ ಜಿಗಿತದಲ್ಲಿ ಚಿನ್ನ,…
ಬಿಲ್ಲು ಹಾಗೂ ಬಾಣ ಒಂದಕ್ಕೊಂದು ಸಂಬಂಧ ಇದ್ದಂತೆ, ಭಗವಂತ ಬಿಲ್ಲಾದರೆ, ಭಕ್ತರು ಬಾಣದಂತೆ. ಬಿಲ್ಲನ್ನು ಹೇಗೆ ಬೇಕಾದರೂ ಭಾಗಿಸಬಹುದು. ಆದರೆ ಬಾಣವನ್ನು ಗುರಿಯ ಕಡೆಗೆ ಇಡಬೇಕು. ಭಕ್ತರಾದ ನಾವು ಭಗವಂತನ ಪುಣ್ಯ ಕಾರ್ಯಕ್ಕಾಗಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಬಾಣದ ಗುರಿಯಂತೆ, ದಾನಿಗಳ ನೆರವಿನಿಂದ ಹಾಗೂ ಭಕ್ತರ ಸಹೃದಯದಿಂದ ಸಹಕಾರವನ್ನು ನೀಡಿದಲ್ಲಿ ಕ್ಷೇತ್ರದ ಜೀರ್ಣೋದ್ದಾರ ಸಾಧ್ಯವೆಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ನಡೆದ ಶ್ರೀ ಪಾಡಾಂಗರೆ ಭಗವತೀ ಮಾತೆಯ ಹಾಗೂ ವೀರಪುತ್ರ ದೈವದ ಗರ್ಭಗುಡಿಗೆ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗೋಪಾಲ ಬಂದ್ಯೋಡು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯ, ಶ್ರೀ ಕೇಶವ ಕಾರ್ನವರು, ಶ್ರೀ ನಾರಾಯಣ ಭಗವತೀ ಪೂಜಾರಿ, ಜೀರ್ಣೋದ್ಧಾರ ಸಮಿತಿ…
ಚಿಣ್ಣರ ಬಿಂಬ ಮುಂಬಯಿ ಇದರ ಭಾಯಂದರ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ವರ್ಧೆಯು ಆ. 27 ರಂದು ಬೆಳಗ್ಗೆ 9.30 ರಿಂದ ಭಾಯಂದರ್ ಪೂರ್ವದ ಶಕ್ತಿನಗರ ಸೈಂಟ್ ಆಗ್ನೇಸ್ ಹೈಸ್ಕೂಲ್ ಸಭಾಗ್ರಹದಲ್ಲಿ ನಡೆಯಲಿದೆ. ಮಕ್ಕಳ ಪ್ರತಿಭಾ ಸ್ವರ್ಧೆ ಕಾರ್ಯಕ್ರಮವನ್ನು ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ನ ಕಾರ್ಯಧ್ಯಕ್ಷ ಅರುಣೋದಯ ಎಸ್.ರೈ ಬಿಳಿಯೂರುಗುತ್ತು ಉದ್ಘಾಟಿಸಲಿದ್ದಾರೆ. ಮೀರಾ- ಭಾಯಂದರ್ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿ ಮೀರಾ- ಭಾಯಂದರ್ ಜತೆ ಕೋಶಾಧಿಕಾರಿ ರಮೇಶ ಎಂ.ಶೆಟ್ಟಿ ಸಿದ್ದಕಟ್ಟೆ, ಎಂಬಿಆರ್ ಗ್ಲೋಬಲ್ ಸರ್ವಿಸಸ್ ಪೈ. ಲಿ. ಮೈಂಡ್ ಸ್ಪೇಸ್ ನ ಸ್ಥಾಪಕ ವಿಜಯ್ ಬಾಲಕೃಷ್ಣ ರಾವ್, ಕರ್ನಾಟಕ ಮಹಾಮಂಡಲ ಮೀರಾ – ಭಾಯಂದರ್ ಸ್ಥಾಪಕ ಚಂದ್ರಶೇಖರ ವಿ. ಶೆಟ್ಟಿ, ಅರುಣ್ ಕಾಮರ್ಸ್ ಕ್ಲಾಸಸ್ ಭಾಯಂದರ್ ಸ್ಥಾಪಕ ಅರುಣ್ ಟಿ. ಪಕ್ಕಳ, ಮಾಟುಂಗಾ ಲಯನ್ಸ್ ಪಯೋನಿಯರ್ ಇಂಗ್ಲಿಷ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ…