Author: admin
ಹಸಿರೇ ಉಸಿರು ಎನ್ನುವುದು ಕೇವಲ ಘೋಷ ವಾಕ್ಯವಲ್ಲ ಮನುಕುಲದ ಅಸ್ತಿತ್ವದ ಅಧಾರವಾಗಿದೆ. ಪರಿಸರ ಸಂರಕ್ಷಣೆ ಎಂದರೆ ವರ್ಷಕ್ಕೊಮ್ಮೆ ಸಸಿ ನೆಡುವ ದಿನವಲ್ಲ ವರ್ಷದ 365 ದಿನವೂ ಈ ಕಾಯಕ ನಿರಂತರವಾಗಿರಬೇಕು ಎಂದು ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ನುಡಿದರು. ಅವರು ಬಂಟರ ಸಂಘ ಸುರತ್ಕಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಧ್ಯ ಹಾಗೂ ಗ್ರಾಮ ಸೇವಾ ಸಂಘ ಮಧ್ಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಧ್ಯ ಶಾಲೆಯಲ್ಲಿ ನಡೆದ ಉಚಿತ ಸಸಿ ವಿತರಣಾ ಮತ್ತು ಸಾವಯವ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾನವನು ಅಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಮನುಷ್ಯ ತನ್ನ ಅಭಿವೃದ್ದಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಈ ಬಗ್ಗೆ ನಾವು ಜಾಗೃತರಾಗಬೇಕಿದೆ ಎಂದರಲ್ಲದೆ ಈ ನಿಟ್ಟಿನಲ್ಲಿ ಬಂಟರ ಸಂಘ ಸುರತ್ಕಲ್ ಪ್ರತಿ ವರ್ಷ ಇಂತಹ ಕಾರ್ಯಕ್ರಮ…
ಗುರಿ ಎನ್ನುವುದು ಒಂದು ಯೋಚನೆಯಲ್ಲ, ಅದು ಒಂದು ಪ್ರಯತ್ನ. ಸುಮ್ಮನೆ ಯೋಚಿಸಿಕೊಂಡು ಕೂರುವ ಬದಲು ಸತತ ಪ್ರಯತ್ನ ಪಡಬೇಕು ಆಗ ಗುರಿ ತಲುಪಲು ಸಾಧ್ಯವಾಗುತ್ತದೆ. ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಉದಯ ಶೆಟ್ಟಿ ಅವರು ಅಂತರಾಷ್ಟ್ರೀಯ ಮಟ್ಟದ ಅಪ್ರತಿಮ ಪ್ರತಿಭಾವಂತ ಕ್ರೀಡಾಪಟು. ಜುಲೈ ಒಂದರಂದು 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯ ಸಮೀಪದ ಮಣಿಪುರ ಗ್ರಾಮದವರು. ಬೆಳಿಯೂರು ಬಂಟಕಲ್ಲು ಕೋಡಿಬೆಟ್ಟು ಸದಾಶಿವ ಶೆಟ್ಟಿ ಮತ್ತು ಗಿರಿಜಾ ಶೆಟ್ಟಿ ದಂಪತಿಗಳ ಪುತ್ರರಾದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಣಿಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಅಲೆವೂರು ನೆಹರೂ ಹೈಸ್ಕೂಲಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಕೆ.ಎಲ್. ಇ. ನಲ್ಲಿ ಪೂರೈಸಿದರು. ಮುಂಬೈಯ ಕೆ.ಪಿ.ಬಿ. ಹಿಂದುಜಾ ಕಾಲೇಜಿನಲ್ಲಿ 1983ರಲ್ಲಿ ತಮ್ಮ ಬಿಕಾಂ ಪದವಿಯನ್ನು ಪಡೆದರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶ್ರೀ ಉದಯ ಶೆಟ್ಟಿಯವರು ತಮ್ಮ ಶಾಲಾ ಶಿಕ್ಷಣದಲ್ಲಿ ಕ್ರಿಕೆಟ್, ವಾಲಿಬಾಲ್, ಅಥ್ಲೆಟಿಕ್ಸ್…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಜೂನ್ 15 ರಿಂದ ಯುರೋಪ್ ಯಕ್ಷಗಾನ ಅಭಿಯಾನ ನಡೆಯಲಿದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯಕ್ಷಗಾನ ಅಭಿಯಾನದಲ್ಲಿ ರಾಜ ವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀ ವೇಷ, ಹಾಸ್ಯ ವೇಷಗಳು ರಾರಾಜಿಸಲಿದೆ ಎಂದರು. ಯುರೋಪ್ ದೇಶದ ವಿವಿಧ ಭಾಗಗಳಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜೂನ್ ತಿಂಗಳಲ್ಲಿ ಲಂಡನ್, ಮಿಡ್ಲ್ಯಾಂಡ್, ದುರಾಅಮ್, ಲೀಡ್ಸ್, ಎಡಿನ್ ಬಗ್೯, ಸ್ಕಾಟ್ಲಂಡ್ ಮೊದಲಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಪ್ರವಾಸದ ನೇತೃತ್ವ ವಹಿಸಿರುವ ಪಣಂಬೂರು ವಾಸು ಐತಾಳ್ ತಿಳಿಸಿದರು. ಆಗೋಸ್ಟ್ ತಿಂಗಳಲ್ಲಿ ಫ್ರಾನ್ಸ್, ಪ್ಯಾರಿಸ್, ಫ್ರಾಂಕ್ ಫಟ್೯, ಮುನಿಚ್, ಜರ್ಮನಿ, ಬಿಲ್ಲಿಂಗಾಮ್, ದುರಾಹಮ್ ಮೊದಲಾದ ಕಡೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಪಣಂಬೂರು ವಾಸು ಐತಾಳ್ USA ಇವರ ನೇತೃತ್ವದಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತರೊಂದಿಗೆ ಪ್ರೋ ಎಂ ಎಲ್ ಸಾಮಗ, ಪದ್ಮನಾಭ…
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮೇ 29 ರಂದು ಸೋಮವಾರ ಸಂಜೆ 3.00 ಗಂಟೆಗೆ ಮುಲ್ಕಿ ಬಳಿಯ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿ, ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿಯವರು ವಹಿಸಲಿದ್ದಾರೆ. ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿಯವರು ದೀಪ ಪ್ರಜ್ವಲನೆಗೈಯಲಿದ್ದಾರೆ. ಸಮಾಜ ಕಲ್ಯಾಣ ಕಾರ್ಯಕ್ರಮದ ಉದ್ಘಾಟನೆಯನ್ನು ಎಂಆರ್ ಜಿ ಗ್ರೂಪ್ ನ ಚೇಯರ್ ಮೆನ್ ಪ್ರಕಾಶ್ ಶೆಟ್ಟಿ ನೆರವೇರಿಸಲಿದ್ದಾರೆ. ಒಕ್ಕೂಟದ ಪೋಷಕರಾದ ಆನಂದ ಶೆಟ್ಟಿ ತೋನ್ಸೆ, ಪ್ರವೀಣ್ ಭೋಜ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ರವಿನಾಥ್ ಶೆಟ್ಟಿ ಅಂಕಲೇಶ್ವರ್, ವಕ್ವಾಡಿ ಪ್ರವೀಣ್ ಶೆಟ್ಟಿ ದುಬೈ, ಎಂ ಕರುಣಾಕರ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಅಂಕಣಕಾರ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಸತೀಶ್ ಶೆಟ್ಟಿ ಉಡುಪಿ, ಡಾ…
ಪುಣೆ ತುಳು ಕೂಟ ಯುವ ವಿಬಾಗ ಬಾಕ್ಸ್ ಕ್ರಿಕೆಟ್ ಪಂದ್ಯಾಟ ವೈಷ್ಣವಿ ಎ ತಂಡ ಚಾಂಪಿಯನ್ ಯುವಕರಿಗೆ ಪ್ರೋತ್ಸಾಹ ನೀಡುವುದು ಕ್ರೀಡಾಭಿಮಾನಿಗಳಾದ ನಮ್ಮ ಕರ್ತವ್ಯ -ಪ್ರವೀಣ್ ಶೆಟ್ಟಿ ಪುತ್ತೂರು ಪುಣೆ ; ಪುಣೆಯಲ್ಲಿ ನೆಲೆಸಿರುವ ತುಳು ಕನ್ನಡಿಗ ಯುವ ಜನತೆಯ ಒಗ್ಗಟಿಗೆ ಹೇಳಿಮಾಡಿಸಿದಂತಹ ಕೂಟ ಈ ಬಾಕ್ಸ್ ಕ್ರಿಕೆಟ್ ,ತುಳುಕೂಟ ಪುಣೆ ಪ್ರತಿ ವರ್ಷ ಇಂತಹ ಕ್ರೀಡಾ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತಿದೆ ನಾನು ಕೂಡ ಇದನ್ನು ಕಂಡವ ,ಇಲ್ಲಿ ಜಾತಿ ಮತ ಬೇದ,ಬಡವ ಬಲ್ಲಿದ ಎಂಬ ಪ್ರಶ್ನೆಯೇ ಬರದೆ ಯುವಕ ಯುವತಿಯರು ಸೇರಿಕೊಂಡು ಕ್ರೀಡಾ ಸ್ಪೂರ್ತಿಯಿಂದ ಆಡುವ ಆಟ ನೋಡಲು ಬಹಳ ಸುಂದರವಾಗಿದೆ ,ಪರಿಚಯ ಇಲ್ಲದ ನಮ್ಮ ತುಳು ಭಾಂಧವರು ಕೂಡಾ ಸೇರುತ್ತಾರೆ ,ಅದ್ದರಿಂದ ಇಲ್ಲಿ ಪರಿಚಯ ಮಿತ್ರತ್ವ ,ಬೆಳೆದು ಅದು ಒಬ್ಬರಿಗೊಬ್ಬರು ಕಷ್ಟ ಸುಖಗಳನ್ನು ಹೇಳಿಕೊಂಡು ಸಹಾಯ ಹಸ್ತ ನೀಡುವ ವರೆಗೆ ಹೋಗುತ್ತದೆ. ಜೀವನದಲ್ಲಿ ನಾವು ಒಬ್ಬರಿಗೊಬ್ಬರು ಮಾನವೀಯ ದೃಷ್ಟಿಯಿಂದ ಸಹಾಯ ಮಾಡುವುದು ದೇವರ ಕೆಲಸವೆಂದೇ ತಿಳಿಯಬೇಕು . …
ಪುಣೆ ಬಂಟರ ಸಂಘದ ವತಿಯಿಂದ ಸಂಘದ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಎ.೧೪ ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಬಿಸು ಪರ್ಬ, ಜಾಗತಿಕ ಬಂಟರ ದಿನಾಚರಣೆ ಹಾಗೂ ಭವನದ ೫ ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭವನದ ಆರತಿ ಶಶಿಕಿರಣ್ ಶೆಟ್ಟಿ ಚಾವಡಿಯಲ್ಲಿ ಬೆಳಗ್ಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಸಾಯಿಬಾಬಾ ಹಾಗೂ ನಿತ್ಯಾನಂದ ಸ್ವಾಮಿಗಳ ಅಭಿಷೇಕ ಆರತಿಯನ್ನು ಮಾಡಲಾಯಿತು. ಬಿಸು ಕಣಿಯನ್ನು ಪೂಜಿಸಲಾಯಿತು . ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಭವನದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಹಾರಾರ್ಪಣೆ ಮಾಡಲಾಯಿತು. ಬಂಟ ಗೀತೆಯನ್ನು ಮೊಳಗಿಸಿ ಗೌರವ ಸಲ್ಲಿಸಲಾಯಿತು. ನಂತರ ನಡೆದ ಕಾನೂನು ಮಾಹಿತಿ ಕಾರ್ಯಾಗಾರ ನಡೆದಿದ್ದು ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಪ್ರಸಿದ್ಧ ವಕೀಲರಾದ ಪ್ರಸಾದ್ ಕುಲಕರ್ಣಿ, ಅಡ್ವೊಕೇಟ್ ದೀಪಕ್ ಕುಲಕರ್ಣಿ, ಅಡ್ವೊಕೇಟ್ ಹರಿಪ್ರಸಾದ್ ಶೆಟ್ಟಿ, ಅಡ್ವೊಕೇಟ್ ಶಶಿ ಶೆಟ್ಟಿ ಹಾಗೂ ಪುಣೆ…
ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿಯವರು ಬರೆದಿರುವ ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್‌ನಿಂದ ಪ್ರಕಟಿಸಲಾದ ಉಡುಪಿ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ನಮ್ಮ ಉಡುಪಿ ಕೃತಿಯನ್ನು ಮಾರ್ಚ್ 19ರಂದು ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಸ್ಥಾಪಕ ಉಪಾಧ್ಯಕ್ಷ ಎಎಸ್‌ಎನ್ ಹೆಬ್ಬಾರ್, ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಸಂಸ್ಥೆ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲ್, ರಜತ ಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್ ಶರೀಫ್, ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು. ನಮ್ಮ…
ಸಾವಿತ್ರಿ ಸತ್ಯವಾನ್ ಟ್ರಸ್ಟ್ ನ ಸಂಸ್ಥಾಪಕಿ ಡಾ.ಮಮತಾ ಹೆಗ್ಡೆ ಅವರು ಈ ಬಾರಿಯ ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಚುನಾವಣಾ ಆಕಾಂಕ್ಷಿಯಾಗಿದ್ದಾರೆ. ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ನೌಕರಿಗಾಗಿ ಸ್ವರ್ದಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ಪರೀಕ್ಷಾ ಪೂರ್ವ ತರಬೇತಿಯ ವ್ಯವಸ್ಥೆಯನ್ನು ನಮ್ಮ ಕ್ಷೇತ್ರದಲ್ಲಿ ಸರ್ಕಾರಿ/ಖಾಸಗಿ ಸಹಭಾಗಿತ್ವದೊಂದಿಗೆ ತೆರೆಯಲು ಶ್ರಮಿಸುತ್ತೇನೆ. ಈ ಮೂಲಕ ಕ್ಷೇತ್ರದ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳಲಿ, ಬ್ಯಾಂಕ್, ರೈಲ್ವೆ ಹಾಗೂ ಇನ್ನಿತರ ಇಲಾಖೆಗಳಲ್ಲಿ ಕೆಲಸ ದೊರಕಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಡಾ.ಮಮತಾ ಹೆಗ್ಡೆ ಹೇಳಿದ್ದಾರೆ.
ನಮ್ಮ ಜೀವನದ ತೇರನ್ನು ಎಳೆಯಲು ಈ ಮಾಯ ನಗರಿಗೆ ಬಂದಿದ್ದು, ಇಲ್ಲಿ ನಾವು ನಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಿದ್ದು ನಮ್ಮ ಜನ್ಮ ಭೂಮಿಯನ್ನು ನೆನಪಿಸುತ್ತ ಹಳೆ ಬೇರು ಜೊತೆ ಹೊಸ ಬೇರನ್ನು ಸೇರಿಸಿ ಜಾತಿ ಮತ, ಬಡವ ಶ್ರೀಮಂತ ನೆಂಬ ಬೇದವಿಲ್ಲದೆ, 6,000 ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ತಿಳಿಯಪಡಿಸುವುದಕ್ಕೆ ಚಿಣ್ಣರ ಬಿಂಬ ಮಕ್ಕಳ ಸಂಸ್ಥೆಯನ್ನು ಕಟ್ಟಿದ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಅವರು ಈ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ ಅವರಿಗೆ ಮತ್ತು ಅವರ ತಂಡಕ್ಕೆ ಅಭಿನಂದನೀಯ. ಚಿನ್ನರ ಬಿಂಬದ ಕಲಾವಿದರು ಭವಿಷ್ಯವಿದೆ ಮುಂದೆ ಖ್ಯಾತ ಕಲಾವಿದರಾಗುತ್ತಾರೆ ಎಂಬುದು ಇಂದು ನಡೆದ ಕಲಾಪ್ರಕಾರಗಳೇ ಸಾಕ್ಷಿಯಾಗಿದೆ . ಚಿನ್ನರಲ್ಲಿ ಕನ್ನಡವನ್ನು ಬೆಳಿಸಿ ಉಳಿಸುವ ಈ ಸಂಸ್ಥೆಗೆ ಕರ್ನಾಟಕ ಸರಕಾರ ಅನುದಾನ ನೀಡದೇ ಇರುವುದು ತುಂಬಾ ಖೇದಕರ ಸಂಗತಿ, ಸರಕಾರ ಮುಂದಿನ ದಿನಗಳಲ್ಲಿ ಚಿಣ್ಣರ ಬಿಂಬ ವನ್ನು ಗುರುತಿಸಿ ಅನುದಾನ ದೊಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು, ಈ ಸಂಸ್ಥೆಯು 25ನೇ ವರ್ಷವನ್ನು…
ಗುರುಪುರ ಬಂಟರ ಮಾತೃ ಸಂಘದ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಬಂಟ ಯುವಕರನ್ನು ಸಂಘಟಿಸುವ ದೃಷ್ಟಿಯಿಂದ ಯುವ ಬಂಟರ ಸಭೆಯು ದಿನಾಂಕ 26-06-22 ರವಿವಾರ ತೆಂಕುಳಿಪಾಡಿ ಗ್ರಾಮದ ವಿನಯ ಶೆಟ್ಟಿ ಮನೆಯಲ್ಲಿ ಯುವ ವಿಭಾಗದ ಅಧ್ಯಕ್ಷರಾದ ದೀಪಕ್ ಶೆಟ್ಟಿ ಲಿಂಗ ಮಾರ್ ಗುತ್ತು ಇವರ ನೇತ್ರತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಗ್ರಾಮದ ಹೆಚ್ಚಿನ ಯುವಕರು ಆಸಕ್ತಿಯಿಂದ ಭಾಗವಹಿಸಿದರು. ಈ ಸಭೆಯಲ್ಲಿ ಸಂಘದ ವಾರ್ಷಿಕ ಸಮಾವೇಶ ವಿದ್ಯಾರ್ಥಿ ವೇತನ ಹಾಗೂ ಸಂಘದ ನಿವೇಶನ ಖರೀದಿ, ಸಂಪನ್ಮೂಲ ಕ್ರೂಡಿಕರಣ ,ಸಮಾಜದ ಸಂಘಟನೆಬಗ್ಗೆ ಮಾಹಿತಿ ನೀಡಲಾಯಿತು.ಎಲ್ಲಾ ಯುವಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ,ಸಂಚಾಲಕರಾದ ಚಂದ್ರಹಾಸ್ ಶೆಟ್ಟಿ ನಾರಳ, ಕೋಶಾಧಿಕಾರಿ ಜಯರಾಮ್ ಶೆಟ್ಟಿ ವಿಜೇತ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರಿಮತಿ ಇಂದಿರಾಕ್ಷಿ ಶೆಟ್ಟಿ,ಸುದರ್ಶನ್ ಶೆಟ್ಟಿ ,ಜಯರಾಂ ರೈ, ಕೃಷ್ಣಕಾಂತ್ ಶೇಣವ, ಪ್ರಖ್ಯಾತ ಶೆಟ್ಟಿ,ಅನೂಪ್ ಶೆಟ್ಟಿ,ಮನೋಜ್ ರೈ,ಶಿವರಾಜ್ ರೈ,ಶಿವಪ್ರಸಾದ್, ನರೇಶ್ ಶೆಟ್ಟಿ, ಹಿರಿಯರಾದ ಶಂಕರ್ ಶೆಟ್ಟಿ,ನಿತ್ಯಾನಂದ ಮಲ್ಲಿ ಗ್ರಾಮಗಳ ಹಿರಿಯರು,ಯುವಕರು ಭಾಗವಹಿಸಿದ್ದರು.