Author: admin

ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿಯ 7 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಮನೋರಂಜನೆಯಂಗವಾಗಿ “ಸುಧನ್ವಾರ್ಜುನ “ಯಕ್ಷಗಾನ ಪ್ರದರ್ಶನವು ಫೆ.12 ರಂದು ರವಿವಾರ ಸಂಜೆ ಗಂಟೆ 3 ರಿಂದ ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ನ ದಿ . ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪುಣೆ ಕನ್ನಡ ಸಂಘದ ಅಧ್ಯಕ್ಷರಾದ ಕುಶಲ್ ಹೆಗ್ಡೆ, ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಸುಭಾಷ್ ಶೆಟ್ಟಿ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಕಡ್ತಲ, ಬಂಟ್ಸ್ ಅಸೋಸಿಯೇಷನ್ ಪುಣೆ ಮಾಜಿ ಅಧ್ಯಕ್ಷರಾದ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ, ತುಳುಕೂಟದ ಗೌರವಾಧ್ಯಕ್ಷರಾದ ತಾರಾನಾಥ ಕೆ ರೈ ಮೇಗಿನಗುತ್ತು, ಶ್ರೀ ಗುರುದೇವಾ ಸೇವಾ ಬಳಗದ…

Read More

ಜಗತ್ತಿನಲ್ಲೇ ಪಶ್ಚಿಮ ಘಟ್ಟಗಳೆಂದರೆ ಅದು ಜೀವವೈವಿಧ್ಯದ ಆಗರ. ಇಲ್ಲಿರುವ ಜೀವಸಂಕುಲಗಳ ವೈವಿಧ್ಯತೆ ಪ್ರಪಂಚದ ಬೇರೆಲ್ಲೂ ಕಂಡುಬರುವುದಿಲ್ಲ. ಅದೇ ರೀತಿ ಇಲ್ಲಿನ ಸಸ್ಯ ಸಂಕುಲಗಳ ವೈವಿಧ್ಯತೆ ಕೂಡ. ಪಶ್ಚಿಮಘಟ್ಟಗಳ ದಟ್ಟವಾದ ಶೋಲಾ ಅರಣ್ಯಗಳ ಮಧ್ಯೆ ಮಧ್ಯೆ ಕಂಡುಬರುವ Montane grassland ಅನ್ನುವ ವಿಶಿಷ್ಟ ಬಗೆಯ ಹುಲ್ಲುಗಾವಲುಗಳ ಈ ವ್ಯವಸ್ಥೆ ತುಂಬಾ ಅಪರೂಪದ ಭೂಲಕ್ಷಣವಾಗಿದೆ. ದಟ್ಟಾರಣ್ಯದ ಮಧ್ಯೆ ಅಲ್ಲಲ್ಲಿ ಹುಲ್ಲುಗಾವಲುಗಳು ಕಂಡುಬರುವುದರಿಂದ ಇದನ್ನು ಭೂ ವಿಜ್ಞಾನಿಗಳು ಶೋಲಾ ಮೊಸಾಯಿಕ್ ಅಂತ ಕರೆಯುತ್ತಾರೆ. ಬಹುಶಃ ನಮ್ಮ ಕೊಯ್ಲದ ಸುಮಾರು ಏಳುನೂರು ಎಕರೆಯಷ್ಟು ವಿಶಾಲವಾದ ಈ ಹುಲ್ಲುಗಾವಲು ಕೂಡ ಪಶ್ಚಿಮ ಘಟ್ಟದ ಈ ಶೋಲಾ ಮೊಸಾಯಿಕ್ ನ ಭಾಗವೇ. ಕೊಯ್ಲದ ಈ ಹುಲ್ಲುಗಾವಲೀಗ ನಾಗರಿಕ ಸಮಾಜದ ಮಧ್ಯೆಯೇ ಇರುವುದರಿಂದ ಮತ್ತು ಸರ್ವಋತು ರಸ್ತೆಗಳು, ವಿದ್ಯುಚ್ಛಕ್ತಿ ಇತ್ಯಾದಿ ಎಲ್ಲಾ ಆಧುನಿಕ ಸೌಲಭ್ಯಗಳೂ ಇರುವ ಸ್ಥಳವಾದುದರಿಂದ ಅಧ್ಯಯನ ಕೇಂದ್ರ ಸ್ಥಾಪನೆಗೆ ಅತ್ಯಂತ ಸೂಕ್ತವಾದ ಜಾಗವಾಗಿದೆ. ಇಲ್ಲಿ ಈಗ ಪಶುವೈದ್ಯಕೀಯ ಕಾಲೇಜು ಹೇಗೂ ಸ್ಥಾಪನೆಯಾಗಿರುವುದರಿಂದ ಇದನ್ನೊಂದು ಉನ್ನತ ಅಧ್ಯಯನ ಕೇಂದ್ರವನ್ನಾಗಿ, ತೋಟಗಾರಿಕಾ,…

Read More

ಮೋಕ್ಷ ಕ್ರಿಯೇಷನ್ಸ್ ಲಾಂಛನದಲ್ಲಿ ಭಾಸ್ಕರ ನಾಯ್ಕ್ ನಿದೇಶನ, ನಿರ್ಮಾಣದಲ್ಲಿ ತಯಾರಾದ ಕುದ್ರು ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಕುದ್ರು ಸಿನಿಮಾದ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿದೆ. ಕುದ್ರು ಸಿನಿಮಾದಲ್ಲಿ ಉತ್ತಮ ಸಂದೇಶವುಳ್ಳ ಕತೆಯಿದೆ.‌ ಮತ್ತೊಂದು ಕರಾವಳಿ ಭಾಗದ ಚಿತ್ರ ಕನ್ನಡ ಹಾಗೂ ತುಳು ಭಾಷೆಯಲ್ಲಿ ಕುದ್ರು ಎಲ್ಲೆಡೆ ಸದ್ದು ಮಾಡುತ್ತಿದೆ. “ಕುದ್ರು” ವಿನ ಮೂರನೇ ಹಾಡು ಉಡುಪಿ ಹಾಗೂ ಮಲೆನಾಡು ಪ್ರದೇಶದ ಸುಂದರ ಪರಿಸರದಲ್ಲಿ ಚಿತ್ರಿಕರಿಸಿದ ಗೀತೆಯಾಗಿದೆ. “ಉಡಾಯಿಸು” ಅನ್ನುವ ಗೀತೆಯನ್ನು ಕಾಲೇಜು ಹುಡುಗರಿಗಾಗಿ ಚಿತ್ರೀಕರಿಸಿದ ಹಾಡು. ಕಾಲೇಜ್ ನಲ್ಲಿ ಕ್ಲಾಸ್ ಬಂಕ್ ಮಾಡಿ ಎಂಜಾಯ್ ಮಾಡುವ ಗೀತೆಯಿದು. ಕಲ್ಯಾಣಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ. ನೀರಿನಿಂದ ಸುತ್ತುವರೆದ ದ್ವೀಪವನ್ನು ತುಳುವಿನಲ್ಲಿ “ಕುದ್ರು” ಎನ್ನುತ್ತಾರೆ. ಈ ಚಿತ್ರದ ಕಥೆಯನ್ನು ಭಾಸ್ಕರ ನಾಯ್ಕ್ ಬರೆದಿದ್ದು, ಅವರೇ ನಿರ್ದೇಶಕರಾಗಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. “ಕುದ್ರು” ದ್ವೀಪದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮೂರು ಪಂಗಡದವರು ವಾಸಿಸುತ್ತಿರುತ್ತಾರೆ. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಈ ರೀತಿಯಲ್ಲಿ ಚಿತ್ರದ ಕಥೆ ಸಾಗುತ್ತದೆ.…

Read More

ದೇವದಾಸ್ ಕಾಪಿಕಾಡ್ ಕಥೆ ಸಂಭಾಷಣೆ ಬರೆದು ಅರ್ಜುನ್ ಕಾಪಿಕಾಡ್ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿದ “ರಾಪಟ” ತುಳು ಚಿತ್ರದ ಯುಎಇ ರಾಷ್ಟ್ರದಲ್ಲಿ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು. ದುಬೈನ ಮಾರ್ಕೊ ಪೋಲೊ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಯುಎಇಯ ಉದ್ಯಮಿಗಳು, ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿ ಪ್ರಮುಖರು ಉಪಸ್ಥಿತರಿದ್ದರು. ದೀಪ ಬೆಳಗಿಸುವ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ನಾಯಕ ನಟ ಅರ್ಜುನ್ ಕಾಪಿಕಾಡ್, ಸಚಿನ್ ಶೆಟ್ಟಿ (ಶಟರ್ ಬಾಕ್ಸ್ ಫಿಲ್ಮ್ಸ್), ಸಂದೀಪ್ ಕುಮಾರ್ (Production Manger) ಉಪಸ್ಥಿತರಿದ್ದರು. ಅರ್ಜುನ್ ಕಾಪಿಕಾಡ್ ಮಾತನಾಡುತ್ತಾ “ಹಿರಿಯವರ ಆರ್ಶಿವಾದೊಂದಿಗೆ ಒಂದು ಒಳ್ಳೆಯ ಚಿತ್ರವನ್ನು ನಿರ್ದೇಶನ ಮಾಡಿ ತುಳುನಾಡಿನ ಜನರಿಗೆ ನೀಡಲಿದ್ದೇವೆ. ಒಳ್ಳೆಯ ಚಿತ್ರವನ್ನು ತುಳುವರು ಕೈ ಬಿಡಲ್ಲ ಎಂಬ ಧೈರ್ಯದಿಂದ ರಾಪಟ ಎಂಬ ಚಿತ್ರವನ್ನು ಸಪ್ಟೆಂಬರ್ 9 ಮತ್ತು 10 ರಂದು ಯುಎಇಯ ತುಳುವರಿಗೆ ಪ್ರದರ್ಶಿಸಲಿದ್ದೇವೆ. ಎಲ್ಲರೂ ಚಿತ್ರವನ್ನು ನೋಡಿ ಈ ಚಿತ್ರವನ್ನು ಗೆಲ್ಲಿಸಬೇಕೆಂದು” ವಿನಂತಿಸಿದರು.…

Read More

ವಿದ್ಯಾಗಿರಿ: ದಕ್ಷಿಣ ಕೊರಿಯಾದ ಜಿಯೋಲ್ಲಾದಲ್ಲಿ ಆಗಸ್ಟ್ 2 ರಿಂದ 12ರ ವರೆಗೆ 25ನೇ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ನಡೆಯಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 8 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆಳ್ವಾಸ್‍ನ 8 ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 48 ಸ್ಕೌಟ್ಸ್ ಮತ್ತು ಗೈಡ್ಸ್‍ಗಳು ಭಾಗವಹಿಸಲಿದ್ದಾರೆ. ಆಳ್ವಾಸ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಅನನ್ಯ, ಹತ್ತನೇಯ ತರಗತಿ ವಿದ್ಯಾರ್ಥಿಗಳಾದ ಮನುಜ ನೇಹಿಗ, ಸನ್ಮತ್ ಆಚಾರ್ಯ, ಚಿರಾಗ್ ಆಚಾರ್ಯ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಶಾಂಭವಿ, ಮನುಶ್ರಿ ಆನಂದ ಮೆಟ್ಟಿ, ಪವನಾ ಡಿ.ಜಿ ಮತ್ತು ಪೂರ್ಣಚಂದ್ರ ಎಂ ಪಾಲ್ಗೊಳ್ಳಲಿದ್ದಾರೆ. ಜಾಂಬೂರಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಆಳ್ವಾಸ್‍ನ ಸ್ಕೌಟ್ ಮಾಸ್ಟರ್ ಪ್ರಕಾಶ ಎಚ್. ವಿದ್ಯಾರ್ಥಿಗಳ ತಂಡದೊಂದಿಗೆ ತೆರಳಲಿದ್ದಾರೆ.

Read More

ಪಟ್ಲ ಫೌಂಡೇಶನ್ನಿನ ಸಕ್ರಿಯ ಘಟಕಗಳಲ್ಲಿ ಒಂದಾಗಿರುವ ಸುರತ್ಕಲ್ ಘಟಕದ 3 ನೇ ವರ್ಷದ ಕಾರ್ಯಕ್ರಮವು ಸುರತ್ಕಲ್ ಬಂಟರ ಸಂಘದ ಆವರಣದಲ್ಲಿ ಅಧ್ಯಕ್ಷರಾದ ಸುಧಾಕರ ಪೂಂಜರ ಅಧ್ಯಕ್ಷತೆಯಲ್ಲಿ ಜರಗಿತು. ಸುರತ್ಕಲ್ ಪರಿಸರದಲ್ಲಿ ಯಕ್ಷಗಾನದಲ್ಲಿ ವಿಶಿಷ್ಟ ಸಾಧನೆಗೈದ ಮೂರು ಮಂದಿ ಹಿರಿಯ ಕಲಾವಿದರಾದ ಸೇಸಪ್ಪ ಶೆಟ್ಟಿಗಾರ್, ಶಂಕರ್ ಜೆ ಶೆಟ್ಟಿ, ವೆಂಕಟರಮಣ ಐತಾಳ್ ಇವರನ್ನು ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಕು.ಬಿಂದ್ಯಾ ಇವರು ವಾಚಿಸಿದರು. ಇತ್ತೀಚೆಗೆ ರಂಗಸ್ಥಳದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಸುರತ್ಕಲ್ ಘಟಕದ ಸದಸ್ಯರಾದ ಲೀಲಾಧರ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ಇವರು ರೂ 1-00 ಲಕ್ಷದ ಮೊತ್ತವನ್ನು ನೀಡಿ ಯಕ್ಷಧ್ರುವ ಪಟ್ಲ ಫೌಂಡೇಶನಿನ ಟ್ರಸ್ಟಿಯಾದರು. ಈರ್ವರನ್ನೂ ಕೇಂದ್ರೀಯ ಸಮಿತಿಯ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಶಾಲು ಹೊದಿಸಿ ಅಭಿನಂದಿಸಿದರು. ಅತಿಥಿಗಳಾದ ಶ್ರೀಕಾಂತ ಶೆಟ್ಟಿ ಬಾಳ, ಮತ್ತು ರವೀಂದ್ರ ರಾವ್ ಇವರು ತಮ್ಮ ಮಾತುಗಳಲ್ಲಿ…

Read More

ನವೀಕರಣಗೊಂಡಿರುವ ಕೊಡಗು ಜಿಲ್ಲಾ ಬಂಟರ ಶಾಂತಿ ಧಾಮ ನಿರ್ವಹಣಾ ಸಮಿತಿಗೆ ಹಸ್ತಾಂತರಿಸಲಾಯಿತು. ನಗರದ ಸ್ಟೋನ್ ಹಿಲ್ ನಲ್ಲಿರುವ ಶಾಂತಿ ಧಾಮದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಕೊರಗಪ್ಪ ರೈ, ಜಯಕೃಷ್ಣ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಐತಪ್ಪ ರೈ ಅವರುಗಳು ಶಾಂತಿಧಾಮ ನಿರ್ವಹಣಾ ಸಮಿತಿಯ ಎಚ್ ಪ್ರಭಾಕರ್ ರೈ, ಶೇಷಪ್ಪ(ಪುಟ್ಟು) ರೈ, ಅರುಣ್ ಶೆಟ್ಟಿ ಅವರಿಗೆ ದಾಖಲಾತಿ ಪುಸ್ತಕ ಹಾಗೂ ರಶೀದಿ ಪುಸ್ತಕವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಕೊರಗಪ್ಫ ರೈ, ಶಾಂತಿ ಧಾಮವನ್ನು ನವೀಕರಣಗೊಳಿಸಿ ಸ್ವಚ್ಛಂದವಾಗಿಸಬೇಕೆಂದು ಹಲವು ವರ್ಷಗಳ ಕನಸಾಗಿತ್ತು. ಜಗದೀಶ್ ರೈ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅದು ಈಡೇರಿದೆ. ಮುಂದೆ ಇದರ ನಿರ್ವಹಣೆಗೆ ಸಮಾಜದ ಎಲ್ಲರೂ ಸಹಕಾರ ನೀಡಬೇಕೆಂದರು. ಬಂಟ ಸಮಾಜ ಸಾಮಾಜಿಕವಾಗಿ ಹಿಂದೆ ಮುಂದಿನ ದಿನದಲ್ಲಿ ಅತ್ತುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದವರನ್ನು ಮುನ್ನೆಲೆಗೆ ತರಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಂಘಟನಾತ್ಮಕ ವಿಚಾರದಲ್ಲಿ ಆಸಕ್ತಿ ವಹಿಸಬೇಕೆಂದು ಕಿವಿಮಾತು ಹೇಳಿದರು. ಬಿ.ಬಿ ಐತಪ್ಪ ರೈ ಮಾತನಾಡಿ, ಬಂಟರ ಶಾಂತಿ…

Read More

ದೇವರ ಕೆಲಸದಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿಸಿಕೊಂಡರೆ ತನ್ನ ಅಭಿವೃದ್ಧಿಯೊಂದಿಗೆ ದೇಗುಲ, ಊರು ಅಭಿವೃದ್ಧಿಯಾಗಲಿದೆ ಎಂಬುದಕ್ಕೆ ಅವಿಭಜಿತ ದ.ಕ. ಜಿಲ್ಲೆಯಲ್ಲೇ ಕಡಿಯಾಳಿ ದೇಗುಲ ಮಾದರಿಯಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಧ್ವಜಸ್ತಂಭ ಪ್ರತಿಷ್ಠಾಪನೆ, ಧೂಳಿಮಂಡಲ ಸೇವೆ, ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್‌ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ. ನಿತ್ಯಾನಂದ ಕಾಮತ್‌, ಉಡುಪಿ ಪವನ್‌ ಮೋಟಾರ್ಸ್ ನ ಸುಭಾಶ್‌ ಚಂದ್ರ ಹೆಗ್ಡೆ, ನಗರಸಭೆ ಸದಸ್ಯ ಗಿರೀಶ್‌ ಎಂ. ಅಂಚನ್‌, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ರಾಮಚಂದ್ರ ಸನಿಲ್‌, ಭಾರತಿ ಚಂದ್ರಶೇಖರ್‌, ಅರ್ಚಕ ಕೆ. ರತ್ನಾಕರ ಉಪಾಧ್ಯಾಯ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ…

Read More

ಒಬ್ಬ ಕ್ರೀಡಾ ಸಾಧಕನಿಗೆ ಆಸಕ್ತಿ, ತಾಳ್ಮೆ, ಕಠಿಣ ಪರಿಶ್ರಮ ಎಲ್ಲದಕ್ಕೂ ಮಿಗಿಲಾಗಿ ಕೆಳಕ್ಕೆ ಬಿದ್ದಾಗ ಮತ್ತೆ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿ ಮುನ್ನುಗ್ಗುವ ಛಲ ಅತೀ ಮುಖ್ಯ. ತಮ್ಮ ರೈಲ್ವೇ ಇಲಾಖೆಯ ಹುದ್ದೆಯೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನೇ ಬರೆಯುತ್ತಿರುವ ಬಂಟ ಸಮಾಜದ ಹೆಮ್ಮೆಯ ಗರಿ ಕೆ.ವಿ ಹರೀಶ್ ಶೆಟ್ಟಿಯವರು 01-06-1978 ರಂದು ಕೆ.ವಿ ವಿಶ್ವನಾಥ ಶೆಟ್ಟಿ ಮತ್ತು ಯಶೋಧ ವಿ ಶೆಟ್ಟಿ ದಂಪತಿಗಳ ಪುತ್ರನಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಲಿಗನಹಳ್ಳಿಯಲ್ಲಿ ಜನಿಸಿದರು. ಹರೀಶ್ ಶೆಟ್ಟರು ಒಂದರಿಂದ ಐದನೇ ತರಗತಿವರೆಗಿನ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಯಾಲ್ತಡ್ಕದಲ್ಲಿ ಪೂರ್ಣಗೊಳಿಸಿ ಸುಭೋಧ ಪ್ರೌಢಶಾಲೆ ಪಾಣಾಜೆಯಲ್ಲಿ ತಮ್ಮ ಪ್ರೌಢ ಶಿಕ್ಷಣ ಪಡೆದು ಪಿಯುಸಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪಡೆದರು. ಬಾಲ್ಯದಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರಿಗೆ ಕಾಲೇಜು ಶಿಕ್ಷಣದ ಸಂದರ್ಭದಲ್ಲಿ ದೊರೆತ ಪ್ರೋತ್ಸಾಹ ಹಾಗೂ ತರಬೇತಿಯಿಂದ ಕ್ರೀಡಾ ಸಾಧನೆಗೆ ಮತ್ತಷ್ಟು ಪ್ರೇರಣೆ ದೊರೆತಂತಾಯಿತು. ಆ ಸಂದರ್ಭದಲ್ಲಿ ತರಭೇತಿ ನೀಡಲು ಕಾಲೇಜಿಗೆ ಆಗಮಿಸುತ್ತಿದ್ದ ಪ್ರೇಮನಾಥ…

Read More

ಭಾರತದ ಪ್ರಾಚೀನ ಸಾಂಪ್ರದಾಯಿಕ ಮೈನವಿರೇಳಿಸುವ ಕ್ರೀಡೆ ‌ಮಲ್ಲಕಂಬದಲ್ಲಿ ಜನಸಾಮಾನ್ಯರಿಗೆ ಆಸಕ್ತಿ ಹೆಚ್ಚುತ್ತಿದ್ದು ದೇಹಕ್ಕೆ ಉತ್ತಮ ವ್ಯಾಯಾಮ ನೀಡುವ ದೇಸಿಕ್ರೀಡೆ ನಶಿಸಿ ಇತಿಹಾಸದ ಪುಟ ಸೇರುವ ಹಂತ ತಲುಪದಿರಲಿ ಎಂದು ಇತರ ಕ್ರೀಡೆಗಳ ಅಬ್ಬರದಲ್ಲಿ‌ ಮಲ್ಲಕಂಬ ನಶಿಸಿ ಹೋಗದಂತೆ ಕ್ರೀಡಾ ಪಟುಗಳು ಇತ್ತೀಚಿಗೆ ಶ್ರಮಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಅದರೊಂದಿಗೆ ಹೆಮ್ಮೆಯಿಂದ ಮಲ್ಲಕಂಬ ಸ್ಪರ್ಧೆ ನೋಡಿ ಚಪ್ಪಾಳೆ ‌ಹಾಕುವ ಸುಂದರ ಅವಕಾಶವು ಕ್ರೀಡಾ ಸಮಿತಿಗಳು‌ ನೀಡುತ್ತಿದೆ. ಆಟಗಾರರಲ್ಲಿ ಹೊಸ ಬರವಸೆ ಹಾಗೂ ಸ್ಪೂರ್ತಿ ತುಂಬಿವ ಈ‌ ಕ್ರೀಡೆ ಕೇಂದ್ರ ,ರಾಜ್ಯ ‌ಸರಕಾರ,ಭಾರತೀಯ ಕ್ರೀಡಾ ‌ಪ್ರಾಧಿಕಾರ ಕ್ರೀಡಾ ಕೂಟದಲ್ಲಿ ಮಲ್ಲ ಕಂಬ ಕಡ್ಡಯಾವಾಗಿ ಸೇರಿಸಿದರೆ ಈ ಸ್ಥಳೀಯ ಕ್ರೀಡಾ ಕೌಶಲ್ಯ ಪ್ರೇಕ್ಷಕರಿಗೆ ನೋಡ ಸಿಗಲಿದೆ. ಮಲ್ಲಕಂಬ ಮಲ್ಲಕಂಬ ಹಾಗೂ ಮಲ್ಲ ಹಗ್ಗ ಎಂಬ ಎರಡು ವಿವಿಧ ಕ್ರೀಡೆಗಳಿದ್ದು. ಮಲ್ಲಕಂಬ ಪಟುಗಳ ಕಸರತ್ತು ಪ್ರೇಕ್ಷಕರನ್ನು ರೋಮಾಂಚನಗೊಳಿಸುವ ದೈಹಿಕ ಕಸರತ್ತಿನ ಪ್ರದರ್ಶನ.ನೆಲದ ಮೇಲೆ ನೇರವಾಗಿ ನಿಲ್ಲಿಸಿದ ಹರಳೆಣ್ಣೆ ಹಾಕಿದ ನಯವಾದ ಕಂಬ ಹತ್ತಿ ವಿವಿಧ ದಿಕ್ಕಿನಲ್ಲಿ ‌ನಿರ್ದಿಷ್ಟ ಭಂಗಿಯಲ್ಲಿ…

Read More