Author: admin
ನಿರಂತರ ಸಮಾಜೋಮುಖಿ ಕಾರ್ಯಗಳನ್ನೇ ತನ್ನ ಉಸಿರಾಗಿಸಿಕೊಂಡ ಪಡುಬಿದ್ರಿಯ ಆದ್ಯಾ ಫೌಂಡೇಷನ್ ವತಿಯಿಂದ ಶ್ರೀಯುತ ರಾಕೇಶ್ ಅಜಿಲ ನೇತೃತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಪಡುಬಿದ್ರಿ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಉದ್ಯೋಗ ಮೇಳದ ಉದ್ಘಾಟನೆಯನ್ನು ಸರಳ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ಮೊಕ್ತೇಸರರಾದ ಜಿತೇಂದ್ರ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಸ್ಥಳೀಯ ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಅಶೋಕ ಪೂಜಾರಿ, ಗೀತಾ ಪ್ರಭಾಕರ್, ಶೋಭಾ ಜೆ. ಶೆಟ್ಟಿ, ಸಂದೇಶ್ ಶೆಟ್ಟಿ, ಮಕರಂದ್ ಸಾಲ್ಯಾನ್, ಪತ್ರಕರ್ತ ಸುರೇಶ್ ಎರ್ಮಾಳ್, ನಾಗರಾಜ್ ವರ್ಕಾಡಿ ಉಪಸ್ಥಿತರಿದ್ದರು.
ಬಂಟ ಸಮಾಜದ ಹೆಮ್ಮೆಯ ಸುಪುತ್ರ ಸರ್ವ ಸಮಾಜದ ಏಳಿಗೆಗೆ ಮಹಾನ್ ಕೊಡುಗೆ ನೀಡಿ ಪ್ರಾತಃ ಸ್ಮರಣೀಯರು ಆಗಿರುವ ಶ್ರೀ ಸುಂದರರಾಮ್ ಶೆಟ್ಟಿಯವರ ನೆನಪಿನಲ್ಲಿ ಸುಂದರ್ ರಾಮ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಮತ್ತು ಮುಲ್ಕಿ ಬಂಟರ ಸಂಘ ಜಂಟಿಯಾಗಿ ನೀಡುವ ಸುಂದರರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಈ ಸಮಾರಂಭವು ಮುಲ್ಕಿ ಬಂಟರ ಸಭಾ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ ಯ ನಿಕಟ ಪೂರ್ವ ಅಧ್ಯಕ್ಷರಾದ ಮುಡ್ಕುರು ಶ್ರೀ ರತ್ನಾಕರ ಶೆಟ್ಟಿ,ಶ್ರೀ ಸುಚರಿತ ಶೆಟ್ಟಿ, ಮುಲ್ಕಿ ಬಪ್ಪನಾಡು ದೇವಸ್ಥಾನದ ಮೊಕ್ತೇಸರ ಶ್ರೀ ಮನೋಹರ್ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷರು ಶ್ರೀಪುರುಷೋತ್ತಮ ಶೆಟ್ಟಿ, ಗೌರವ ಅಧ್ಯಕ್ಷರು ಶ್ರೀ ಸಂತೋಷ್ ಕುಮಾರ್ ಹೆಗ್ಡೆ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಶುಭಾಶಂಸನೆ ಶ್ರೀ ಕುದಿ…
ಮಂಗಳೂರು ನಗರದಿಂದ ಕೇವಲ 10 ಕಿ. ಮೀ, ದೂರದ ಮಂಗಳೂರು – ಕಾರ್ಕಳ ರಾಷ್ಟೀಯ ಹೆದ್ದಾರಿ ಹಾದು ಹೋಗುವ ವಾಮಂಜೂರಿನ ತಿರುವೈಲು ಪರಿಸರದ ಆಕರ್ಷಕ ಕಣಿವೆ ಪ್ರದೇಶದ ಪ್ರಕೃತಿ ರಮಣೀಯ ಸೌಂದರ್ಯದ ನಡುವೆ ಕಳೆದ 25 ವರ್ಷಗಳಿಂದ ರಾರಾಜಿಸುತ್ತಿರುವ ಮಾತ್ರವಲ್ಲದೇ, ಸಹಸ್ರ ಸಹಸ್ರ ವಿದ್ಯಾರ್ಥಿಗಳ ಉಜ್ಜಲ ಭವಿಷ್ಯಕ್ಕೆ ಬುನಾದಿ ಹಾಕಿಕೊಟ್ಟ ಜಾಣು ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಆಡಳಿತದಲ್ಲಿರುವ ಅಮೃತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬೆಳ್ಳಿ ಹಬ್ಬ ಸಮಾರಂಭ ಜನವರಿ 18 ರಂದು ನಡೆಯಲಿದೆ. ಹಾಗೆಯೇ ಮೂರು ಅಂತಸ್ತಿನ ಸಕಲ ಸೌಕರ್ಯಗಳುಳ್ಳ ಸುಸಜ್ಜಿತ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ಜನವರಿ 17 ರಂದು ಸಂಜೆ 5ರಿಂದ 10 ರ ತನಕ ಬಹಳ ವಿಜೃಂಭಣೆಯಿಂದ ನಡೆಯಲಿದೆ. 1925 ರಲ್ಲಿ ಶ್ರೀ ಕ್ಷೇತ್ರ ಅಮೃತೇಶ್ವರ ದೇವಸ್ಥಾನದ ಸುತ್ತಮುತ್ತದ ನೂರಾರು ಮಕ್ಕಳಿಗಾಗಿ ಸರಕಾರದಿಂದ ಸ್ಥಾಪಿಸಲ್ಪಟ್ಟ ಪ್ರಾಥಮಿಕ ಶಾಲೆ ನಂತರ 1963 ರಲ್ಲಿ ವಾಮಂಜೂರು ಪದವಿಗೆ ಸ್ಥಳಾಂತರಗೊಂಡು ತಿರುವೈಲು ಪರಿಸರದ ಮಕ್ಕಳು…
ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಮಹಾರಾಷ್ಟ್ರ ಇದರ 4ನೇ ಮಹಾರಾಷ್ಟ್ರ ರಾಜ್ಯ ಮಾಸ್ಟರ್ಸ್ ಗೇಮ್ಸ್ ಚಾಂಪಿಯನ್ ಶಿಪ್ ನಲ್ಲಿ ಮ್ಯಾರಥಾನ್ ಪಟು, ರಾಷ್ಟೀಯ ಅಂತಾರಾಷ್ಟ್ರೀಯ ಮಟ್ಟದ ಅತ್ಲೀಟ್, ತುಳು – ಕನ್ನಡಿಗ ಶಿವಾನಂದ ಶೆಟ್ಟಿ ಚಿನ್ನ ಗೆದ್ದಿದ್ದಾರೆ. ನ.19 ರಂದು ನಾಸಿಕ್ ನ ಮೀನಾ ತಾಯಿ ಠಾಕ್ರೆ ಮೈದಾನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ 45 ವರ್ಷ ಮೇಲ್ಪಟ್ಟವರ 5 ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕ ಜಯಿಸಿರುವ ಶಿವಾನಂದ ಶೆಟ್ಟಿ 2024ರ ಫೆಬ್ರವರಿಯಲ್ಲಿ ಗೋವಾದಲ್ಲಿ ನಡೆಯಲಿರುವ 6ನೇ ವಾರ್ಷಿಕ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್ ಗೆ ಆಯ್ಕೆಯಾಗಿದ್ದಾರೆ. ಇವರು ನ.19 ರಂದು ಮುಂಬಯಿಯಲ್ಲಿ ನಡೆದ ಡಬ್ಲ್ಯೂಎನ್ ಐ ನೇವಿ ಹಾಫ್ ಮ್ಯಾರಥಾನ್ ನಲ್ಲಿ 46-59 ವಯೋಮಿತಿಯ ವಿಭಾಗದಲ್ಲಿ 3ನೇ ಸ್ಥಾನ, ನ. 26 ರಂದು ನವಿಮುಂಬಯಿಯಲ್ಲಿ ನಡೆದ ನವಿಮುಂಬಯಿ ಎನ್ ಎಂಎಂಸಿಎಸ್ ಹಾಫ್ ಮ್ಯಾರಥಾನ್ 42-50 ವಯೋಮಿತಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಸ್ವರ್ಧೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸಿದ್ದರು. ನ.5…
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಮತ್ತು ಶಾಸಕಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಂಟ ಸಮಾಜದ ಉದಯ ಕುಮಾರ್ ಶೆಟ್ಟಿ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ. ಉದಯ ಕುಮಾರ್ ಶೆಟ್ಟಿ ಈ ಹಿಂದೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ, ಶಾಸಕಾಂಗ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈಗ ಹೆಚ್ಚುವರಿ ಕಾರ್ಯದರ್ಶಿಯಾಗಿ ಭಡ್ತಿ ಪಡೆದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕರ್ನಾಟಕದ ಅಧಿಕಾರಿಯೊಬ್ಬರು ಕಾನೂನು ಸಚಿವಾಲಯದ ಉನ್ನತ ಹುದ್ದೆಗೇರಿದಂತಾಯಿತು. ಪ್ರಸ್ತುತ ಅವರು ಗುಜರಾತ್ ನ ರಾಷ್ಟೀಯ ರಕ್ಷಾ ವಿವಿ ಆಡಳಿತ ಮಂಡಳಿಯ ಎಕ್ಸ್ – ಆಫಿಷಿಯೋ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 2003 ಬ್ಯಾಚ್ ನ ಭಾರತೀಯ ಕಾನೂನು ಸೇವೆಗೆ ಸೇರಿದ ಶೆಟ್ಟಿಯವರು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದವರು. ಉದಯ ಕುಮಾರ್ ಶೆಟ್ಟಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಎಲ್ಎಲ್ ಬಿ ಮಾಡಿ ನಂತರ ಬೆಂಗಳೂರು ವಿವಿಯಿಂದ ಕಾರ್ಮಿಕ ಕಾನೂನುಗಳಲ್ಲಿ ಎಲ್ ಎಲ್…
ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾಗಿರುವ ಚೇತನ್ ಶೆಟ್ಟಿ ಕೋವಾಡಿ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಮಂಗಳೂರಿನ ಥಿಯೋಲಾಜಿಕಲ್ ಸಂಶೋಧನಾ ಕೇಂದ್ರದ ಮೂಲಕ ಪ್ರಸಿದ್ಧ ಅಂಕಣ ಬರಹಗಾರ, ಲೇಖಕ, ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ ನರೇಂದ್ರ ರೈ ದೇರ್ಲ ಅವರ ಮಾರ್ಗದರ್ಶನದಲ್ಲಿ “ಕರ್ನಾಟಕ ಕರಾವಳಿಯ ಪ್ರಾದೇಶಿಕ ಅಧ್ಯಯನದ ವಿಭಿನ್ನ ಪ್ರವೃತ್ತಿಗಳು” ಎಂಬ ವಿಷಯದ ಕುರಿತು ಸಿದ್ಧಪಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪದವಿ ನೀಡಲಾಗಿದೆ. ಇವರು 2014ರಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ “ಗ್ರಾಮ ಚರಿತ್ರೆ ಕೋಶ” ಯೋಜನೆಗೆ ಹಿರಿಯ ಜಾನಪದ ವಿದ್ವಾಂಸ ಪ್ರೊ. ಎ.ವಿ. ನಾವಡ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ತಾಲೂಕಿನ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ನಿರತರಾಗಿರುವ ಇವರಿಗೆ ನೇಶನ್ ಬಿಲ್ಡರ್, ಯುವರತ್ನ ಪ್ರಶಸ್ತಿಗಳು ಲಭಿಸಿವೆ. ಇವರು ಕ್ರೋಢ ಬೈಲೂರು ಕೆಳಮನೆ…
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಆಳ್ವಾಸ್ಗೆ ಸಮಗ್ರ ಪ್ರಶಸ್ತಿ, ಆಳ್ವಾಸ್ನ ರಾಕೇಶ್, ದುರ್ಗಾ ವೈಯಕ್ತಿಕ ಚಾಂಪಿಯನ್
ಮೂಡುಬಿದಿರೆ:ಎಲ್ಲ 10 ಕೂಟ ದಾಖಲೆಗಳನ್ನು ಬರೆದ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಇಲ್ಲಿನ ಸ್ವರಾಜ್ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘21ನೇ ಅಂತರ ಕಾಲೇಜು ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2023-24’ರ ಪುರುಷ ಮತ್ತು ಮಹಿಳಾ ಚಾಂಪಿಯನ್‍ಗಳ ಸಹಿತ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆಳ್ವಾಸ್ ಆಯುರ್ವೇದ ವೈದ್ಯಕೀಯಕಾಲೇಜಿನ ಆತಿಥ್ಯದಲ್ಲಿ ಮೂರು ದಿನ ನಡೆದ ಕ್ರೀಡಾಕೂಟದಲ್ಲಿ ಆಳ್ವಾಸ್ ಅಲೈಡ್ ಹೆಲ್ತ್‍ಸೈನ್ಸಸ್‍ನ ರಾಕೇಶ್ ಹಾಗೂ ದುರ್ಗಾ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದರು. 20 ಚಿನ್ನ, 9 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಜಯಿಸಿ, ಒಟ್ಟು 144 ಅಂಕ ಪಡೆದ ಆಳ್ವಾಸ್ ಅಲೈಡ್ ಹೆಲ್ತ್‍ಸೈನ್ಸಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಪುರುಷರ ವಿಭಾಗದಲ್ಲಿ 11 ಚಿನ್ನ, 7 ಬೆಳ್ಳಿ ಹಾಗೂ 4 ಕಂಚಿನ ಪದಕಗಳ ಮೂಲಕ 91 ಅಂಕಗಳನ್ನು ಪಡೆದ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‍ಸ್ ಕಾಲೇಜು ಪ್ರಶಸ್ತಿ ಎತ್ತಿ…
“ಕೊಡುವುದನ್ನು ಮುಕ್ತ ಹೃದಯದಿಂದ ಕೊಡುತ್ತಿರೋಣ, ಬರುವುದು ತಾನಾಗಿಯೇ ಬರುತ್ತದೆ. ಅದು ಪ್ರೀತಿಯಾಗಲಿ, ಸಂಪತ್ತಾಗಲಿ, ಗೌರವವಾಗಲಿ” ಕೆ.ಎಂ. ಶೆಟ್ಟಿ ಎಂದೇ ಖ್ಯಾತರಾಗಿರುವ ಶ್ರೀಯುತ ಕರುಣಾಕರ ಎಂ. ಶೆಟ್ಟಿ ಉದ್ಯಮ ರಂಗದಲ್ಲಿ ದೇಶದಲ್ಲೇ ಚಿರಪರಿಚಿತರಾದವರು. 1975 ರಲ್ಲಿ ‘ವಿ.ಕೆ. ಇಂಜಿನಿಯರ್’ ಎಂಬ ಹೆಸರಿನಿಂದ ಉದ್ಯಮರಂಗಕ್ಕೆ ಪಾದರ್ಪಣೆ ಮಾಡಿದ ಕೆ.ಎಂ. ಶೆಟ್ಟಿಯವರು ಟೂಲ್ ರೂಂ ವರ್ಕ್ ಶಾಪ್ ಯಂತ್ರೋಪಕರಣಗಳ ಮೂಲಕ ತಮ್ಮ ಕಾರ್ಯಗಾರವನ್ನು ಪ್ರಾರಂಭಿಸಿದರು. ಉದ್ಯಮ ರಂಗದಲ್ಲಿ ಉತ್ತಮ ಗುಣಮಟ್ಟದ ಇಂಜೆಕ್ಷನ್ ಮೌಲ್ಡಿಂಗ್ ಉಪಕರಣಗಳನ್ನು ಉತ್ಪಾದಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡರು. ಉದ್ಯಮ ರಂಗದ ಈ ಯಶಸ್ಸು ಅವರು ವಿ.ಕೆ. ಗ್ರೂಪ್ ಆಫ್ ಕಂಪೆನೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಇದನ್ನು ದೇಶ ವಿದೇಶಗಳಲ್ಲಿ ಈ ಕಾರ್ಯಗಾರಗಳ ಶಾಖೆ ಸ್ಥಾಪನೆ ಮಾಡಿ ವಿಸ್ತರಿಸಲು ಸಾಧ್ಯವಾಯಿತು. ಕೆ.ಎಂ. ಶೆಟ್ಟಿಯವರು ಈ ಸಂಸ್ಥೆಗಳ ಕಾರ್ಯಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ಈ ಸಂಸ್ಥೆಗಳನ್ನು ಪ್ರಗತಿಯತ್ತ ಮುನ್ನಡೆಸಿದರು. ಈಗ ಈ ಕಂಪೆನಿಯಲ್ಲಿ ಗೃಹೋಪಯೋಗಿ ಇಲೆಕ್ಟ್ರಿಕಲ್ ವಸ್ತುಗಳಾದ ಮಿಕ್ಸರ್ಸ್, ಗ್ರೈಂಡರ್ಸ್, ಆಹಾರ ಸಂಸ್ಕರಣ ಉಪಕರಣ,…
ಮುತ್ತು ಗೋಪಾಲ್ ಫಿಲಂಸ್ ಲಾಂಛನದಲ್ಲಿ ಸತೀಶ್ ಪೂಜಾರಿ ನಿರ್ಮಾಣದಲ್ಲಿ ತಯಾರಾದ ಗಬ್ಬರ್ ಸಿಂಗ್ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ ಅಡ್ಯಾರ್ ನಲ್ಲಿ ನಡೆದ ಶಿವದೂತೆ ಗುಳಿಗೆ ನಾಟಕದ 555 ನೇ ಪ್ರದರ್ಶನ ಸಮಾರಂಭದಲ್ಲಿ ಜರಗಿತು. ಸಿನಿಮಾ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಪೋಸ್ಟರ್ ಬಿಡುಗಡೆಗೊಳಿಸಿದರು. ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಎಂಎನ್ ರಾಜೇಂದ್ರ ಕುಮಾರ್, ಕನ್ಯಾನ ಸದಾಶಿವ ಶೆಟ್ಟಿ, ವಿಜಯಕುಮಾರ್ ಕೊಡಿಯಾಲ್ ಬೈಲ್, ನಿರೂಪಕಿ ಅನುಶ್ರೀ, ಗಣ್ಯರಾದ ಶಶಿಧರ ಶೆಟ್ಟಿ ಬರೋಡ, ಪದ್ಮರಾಜ್ ಆರ್. ಬಿ. ನಾಗರಾಜ ಶೆಟ್ಟಿ, ಕುಮಾರ ಎನ್. ಬಂಗೇರ, ಹರೀಶ್ ಬಂಗೇರ, ಪ್ರಕಾಶ್ ಪಾಂಡೇಶ್ವರ, ಆರ್.ಕೆ. ನಾಯರ್, ಮನೋಹರ ಪ್ರಸಾದ್, ಕಾಸರಗೋಡು ಚಿನ್ನಾ, ಮತ್ತಿತರರು ಉಪಸ್ಥಿತರಿದ್ದರು. ಗಬ್ಬರ್ ಸಿಂಗ್ ಸಿನಿಮಾದಲ್ಲಿ ಅಭಿನಯಿಸಿರುವ ಶರಣ್ ಶೆಟ್ಟಿ, ಭೋಜರಾಜ ವಾಂಮಜೂರು, ಗಿರೀಶ್ ಎಂ ಶೆಟ್ಟಿ ಕಟೀಲು, ಉದಯ ಆಳ್ವ, ಸಂಭಾಷಣೆಕಾರ ಮಧು ಶೆಟ್ಟಿ ಸುರತ್ಕಲ್, ಶಿಲ್ಪಾ ಆರ್ ಶೆಟ್ಟಿ ಮೊದಲಾದವರು…
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ 2ನೇ ದಿನವೂ ಆಳ್ವಾಸ್ ಪಾರಮ್ಯ ಮೂಡುಬಿದಿರೆ
ಇಲ್ಲಿನ ಸ್ವರಾಜ್ ಮೈದಾನದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ನಡೆಯುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘21ನೇ ಅಂತರ ಕಾಲೇಜುವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2023-24’ನ ಎರಡನೇ ದಿನವಾದ ಬುಧವಾರವೂ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‍ಸ್‍ನ ಕ್ರೀಡಾಪಟುಗಳು ಪಾರಮ್ಯ ಮೆರೆದಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ ಪುರುಷರ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‍ಸ್ 70 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮೂಲ್ಕಿಯ ಸೈಂಟ್ ಅನ್ಸ್ ಕಾಲೇಜು 13 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‍ಸ್ 38 ಅಂಕಗಳೊಂದಿಗೆ ಪ್ರಥಮ ಸ್ಥಾನ ಮುಂದುವರೆಸಿದರೆ, ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್‍ಸ್ 19 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‍ಸ್ ಕಾಲೇಜು ಪುರುಷರ ವಿಭಾಗದಲ್ಲಿ 9 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಪಡೆದರೆ, ಮಹಿಳಾ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‍ಸ್ ಕಾಲೇಜು 5…