Author: admin
ಅದೃಷ್ಟ ಮತ್ತು ಪ್ರಯತ್ನ ಜತೆ ಜತೆಯಾಗಿರುತ್ತದೆ. ಕೆಲವೊಮ್ಮೆ ಪ್ರಯತ್ನವಿಲ್ಲದೇ ಅದೃಷ್ಟ ಖುಲಾಯಿಸಿ ಬಿಡುತ್ತದೆ. ಇನ್ನು ಕೆಲವೊಮ್ಮೆ ಒಂದಷ್ಟು ಪ್ರಯತ್ನ ಪಟ್ಟರೂ ಗೆಲುವು ನಮ್ಮದಾಗುವುದಿಲ್ಲ. ಆದರೆ ನಮ್ಮ ಪ್ರಯತ್ನದಲ್ಲಿ ಸೋಲದೆ ಸತತ ಪ್ರಯತ್ನ ಪಟ್ಟರೆ ಯಶಸ್ಸು ನಮ್ಮದಾಗಬಹುದು. ಚಿನ್ನದ ಗಣಿಗಾರಿಕೆಯ ಕೆಲಸ ಆರಂಭಿಸಿದ ವ್ಯಕ್ತಿಯೊಬ್ಬ ತಿಂಗಳುಗಟ್ಟಲೆ ಚಿನ್ನದ ಹೊಸ ನಿಕ್ಷೇಪಕ್ಕಾಗಿ ದುಡಿದ. ಆದರೆ ಎಷ್ಟು ಆಳಕ್ಕೆ ಅಗೆದರೂ ಚಿನ್ನದ ಅದಿರು ಕಾಣಿಸಲಿಲ್ಲ. ಸುಸ್ತಾಗಿ ಸೋತು ಹೋದ. ತನ್ನಿಂದ ಆಗದು ಎಂದು ಕೈ ಚೆಲ್ಲಿ ಕುಳಿತ. ಸೋತು ತನ್ನ ಕೆಲಸವನ್ನು ನಿಲ್ಲಿಸಿದ. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ಇನ್ನೊಬ್ಬ ಗಣಿಗಾರಿಕೆಯ ವ್ಯಕ್ತಿಗೆ ತನ್ನ ವಸ್ತುಗಳನ್ನು ಮಾರಿ ಹೊರಟು ಹೋದ. ಅರ್ಧ ಅಗೆದು ಬಿಟ್ಟ ಹೊಂಡವನ್ನು ಮತ್ತಷ್ಟು ಅಗೆಯುವಂತೆ ಅಲ್ಲಿನ ತಂತ್ರಜ್ಞ ಹೊಸದಾಗಿ ಬಂದವನಿಗೆ ಹೇಳಿದ. ಮೂರು ಅಡಿಗಳಷ್ಟು ಅಗೆದರೆ ಚಿನ್ನದ ಆದಿರು ಇದೆ ಎಂದ ಹೊಸದಾಗಿ ಬಂದಾತ. ಅಗೆಯಲು ಆರಂಭಿಸಿದ. ಸುಮಾರು ಮೂರು ನಾಲ್ಕು ಅಡಿಗಳಷ್ಟು ಅಗೆಯುವಷ್ಟರಲ್ಲಿ ಅವನಿಗೆ ಚಿನ್ನದ ನಿಕ್ಷೇಪ ಕಾಣಿಸಿತು.…
ಬ್ರಹ್ಮಾವರ ಜ. 16: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ವಿಜ್ಞಾನ ಮಾದರಿ, ಚಿತ್ರಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮೇಳವನ್ನು ಆಯೋಜಿಸಲಾಗಿತ್ತು. ಕಟಪಾಡಿಯ ಎಸ್.ವಿ.ಕೆ. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ವೇತಾ ಪ್ರಶಾಂತ್ ಶೆಟ್ಟಿ ‘ಸೈನ್ಕ್ವೆಸ್ಟ್’ ಉದ್ಘಾಟಿಸಿ ಮಾತನಾಡಿ ವಿಜ್ಞಾನವು ವಾಸ್ತವದಲ್ಲಿ ನಡೆಯುವ ಒಂದು ಮ್ಯಾಜಿಕ್. ಇದು ಮಾನವರಿಗೆ ದೊರೆತ ಒಂದು ವರವಾಗಿದ್ದು ಎಂದಿಗೂ ಇದನ್ನು ಕಳೆದುಕೊಳ್ಳಬಾರದೆಂದು ಹೇಳಿ ವಿದ್ಯಾರ್ಥಿಗಳ ವಿಜ್ಞಾನ ಮಾದರಿಯನ್ನು ಪ್ರಶಂಸಿದರು. ಹಿರಿಯಡ್ಕ, ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕಲಾ ಶಿಕ್ಷಕರಾದ ಮೋಹನ್ ಕಡಬ ‘ಜಿ ಎಮ್ ಸ್ಟ್ರೋಕ್ಸ್’ ಚಿತ್ರ ಸಂತೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿ ಮಕ್ಕಳು ತಮ್ಮ ಭಾವನೆಗಳನ್ನು, ರೇಖೆ ಮತ್ತು ಬಣ್ಣದ ಮೂಲಕ ಪ್ರದರ್ಶಿಸಲು ಚಿತ್ರಕಲೆಯು ಒಂದು ಉತ್ತಮ ಮಾಧ್ಯಮವೆಂದರು. ಕ್ಯಾನ್ವಸ್ ಮೇಲೆ ಅಕ್ಷರವನ್ನು ಬರೆದು ಅದಕ್ಕೆ ಮರದ ರೂಪವನ್ನು ಕೊಟ್ಟು ಸುಂದರವಾದ ಚಿತ್ರವನ್ನು ಬಿಡಿಸುವ ಮೂಲಕ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಕ್ಕಳ ಮನಸ್ಸಿನ…
ವಿಮರ್ಶೆಯು ಸಾಹಿತ್ಯದ ಸಹೃದಯತೆ, ಸಂವೇದನೆಯನ್ನು ವಿಸ್ತರಿಸುವ ಸಕಾರಾತ್ಮಕ ವಿಶ್ಲೇಷಣೆಯಾಗಿರಬೇಕು. ಪೂರ್ವಾಗ್ರಹ ಮನಃಸ್ಥಿತಿ ಇಟ್ಟುಕೊಂಡು ವಿಮರ್ಶೆ ಮಾಡಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು. ಲೇಖಕಿ, ಸಂಶೋಧಕಿ ಇಂದಿರಾ ಹೆಗ್ಡೆ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಎಚ್. ಎಸ್. ಪಾರ್ವತಿ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ವಿಮರ್ಶೆ ಶ್ರೇಷ್ಠತೆಯ ಸೊಕ್ಕು ಆಗಬಾರದು ಶೋಧವಾಗಬೇಕು. ವಿಮರ್ಶೆಯ ವಿವೇಕ ಇರಬೇಕು. ಈ ಶ್ರೇಷ್ಠತೆಯ ಸೊಕ್ಕಿಗೂ ವರ್ಣಾಶ್ರಮ ಪದ್ಧತಿಗೂ ಇರುವ ಸಂಬಂಧವೇನು ಎಂಬುದರ ಶೋಧವೂ ಆಗಬೇಕು ಎಂದು ವಿಶ್ಲೇಷಿಸಿದರು. ಎಚ್. ಎಸ್. ಪಾರ್ವತಿ ಅವರು ಅನುವಾದಕರು, ಕಾದಂಬರಿಕಾರ್ತಿ. ಅವರನ್ನು ಜನಪ್ರಿಯ ಸಾಹಿತಿ ಎಂದು ಸಾಹಿತ್ಯ ಲೋಕ ಗುರುತಿಸಿದೆ. ಜನಪ್ರಿಯ ಸಾಹಿತಿಗಳು ನಿರ್ಲಕ್ಷ್ಯಕ್ಕೆ ಒಳಗಾದವರು. ನಿರ್ಲಕ್ಷ್ಯ ಮಾಡುವ ಬದಲು ಕನ್ನಡ ಕಟ್ಟುವ ಪ್ರಕ್ರಿಯೆಯಲ್ಲಿ ಅವರ ಕೊಡುಗೆಯನ್ನು ಗುರುತಿಸಬೇಕು ಎಂದು ತಿಳಿಸಿದರು. ಇಂದಿರಾ ಹೆಗ್ಡೆ ಅವರು ಲೇಖಕಿಯಾಗಿ, ಸಂಶೋಧಕಿಯಾಗಿ ಸ್ಥಳೀಯ ಸಂಸ್ಕೃತಿಗೆ ಮಹತ್ವ ತಂದುಕೊಟ್ಟವರು. ಸ್ಥಳೀಯತೆ ಇಲ್ಲದೇ ರಾಷ್ಟ್ರೀಯತೆಯೂ ಇಲ್ಲ, ಅಂತಾರಾಷ್ಟ್ರೀಯತೆಯೂ ಇಲ್ಲ ಎಂದು ಹೇಳಿದರು. ಕರ್ನಾಟಕ…
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗವು ಖ್ಯಾತ ಸಂಘಟಕ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ‘ಸಾರ್ವಭೌಮ’ ಗೌರವ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 10ರಂದು ಶನಿವಾರ ಮಧ್ಯಾಹ್ನ 2 ರಿಂದ ವಿಶ್ವವಿದ್ಯಾಲಯದ ಕಲೀನಾ ಕ್ಯಾಂಪಸ್ಸಿನಲ್ಲಿರುವ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಮಾನ್ಯ ಸುನಿಲ್ ಕುಮಾರ್ ಅವರು ಈ ಗೌರವ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಂಬಯಿಯ ಗಣ್ಯರ ಉಪಸ್ಥಿತಿಯಲ್ಲಿ ಈ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ಗೌರವಾನ್ವಿತ ಅತಿಥಿಗಳಾಗಿ ಸದಾಶಿವ ಶೆಟ್ಟಿ, ಕೂಳೂರು ಕನ್ಯಾನ (ಆಡಳಿತ ನಿರ್ದೇಶಕರು, ಹೇರಂಬ ಇಂಡಸ್ಟ್ರೀಸ್), ಆನಂದ ಶೆಟ್ಟಿ (ಆಡಳಿತ ನಿರ್ದೇಶಕರು, ಆರ್ಗಾನಿಕ್ ಕೆಮಿಕಲ್ಸ್), ಸುಧಾಕರ ಹೆಗ್ಡೆ (ಆಡಳಿತ…
ಪುಣೆ ಬಂಟರ ಸಂಘದ ಉತ್ತರ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾಗಿ ನಾರಾಯಣ ಹೆಗ್ಡೆ, ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಪ್ರೇಮಾ ಅರ್ ಶೆಟ್ಟಿ
ಪುಣೆಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬಂಟರ ಸಂಘ ಪುಣೆ ಇದರ ಉತ್ತರ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ನಾರಾಯಣ ರಾಜೀವ್ ಹೆಗ್ಡೆಯವರು ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾದರು. ಜನವರಿ 13 ರಂದು ಪುಣೆ ಬಂಟರ ಭವನದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ಅಧ್ಯಕ್ಷತೆಯಲ್ಲಿ ಸಂಘದ ಮಹಾಸಭೆಯು ಜರಗಿತು. ಈ ಸಂದರ್ಭದಲ್ಲಿ ಉತ್ತರ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ನೂತನ ಸಮಿತಿಯನ್ನು ಆಯ್ಕೆ ಮಾಡಿ ಅಧಿಕೃತವಾಗಿ ಘೋಷಿಸಲಾಯಿತು. 2024 – 26 ರ ಸಾಲಿಗೆ ಉತ್ತರ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರುಗಳಾಗಿ ಉದಯ ಎಚ್ ಶೆಟ್ಟಿ ಕಳತ್ತೂರು, ವಸಂತ್ ಅರ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸನ್ನ ಎಸ್ ಶೆಟ್ಟಿ, ಕೊಶಾಧಿಕಾರಿಯಾಗಿ ಸಂತೋಷ್ ಅರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಯೋಗೇಶ್ ಪಿ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಗಣೇಶ್ ಎನ್ ಶೆಟ್ಟಿ, ಸಮಿತಿಯ ಪ್ರಧಾನ ಸಲಹೆಗಾರರಾಗಿ ರಾಜಾರಾಂ…
ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ಸಮಾಜ ಭಾಂದವರಿಗಾಗಿ ನಡೆಯುವ 11ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ 3 ರವಿವಾರದಂದು ವಿವಿಧ ಕ್ರೀಡಾ ಆಟೋಟ ಸ್ಪರ್ದೆಗಳೊಂದಿಗೆ ಪುಣೆಯ ಸಾಳುಂಕೆ ವಿಹಾರ್ ರೋಡ್ ನ ಬ್ಯಾಂಕ್ ಆಫ್ ಮಹಾರಾಷ್ಟ್ರ ಲೇನ್, ವಾನ್ವೋರಿಯಲ್ಲಿರುವ ರೇಸ್ ಸ್ಪೋರ್ಟ್ಸ್ ಕ್ರೀಡಾ ಸಂಕುಲದಲ್ಲಿ ಜರಗಲಿರುವುದು. ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಗಣೇಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ ಗಂಟೆ 8.30 ಕ್ಕೆ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ ಜರಗಲಿದೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೊಂಡ್ವಾ ಪರಿಸರದ ಪುಣೆ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಸ್ಥಾಯಿ ಸಮಿತಿಯ ಸದಸ್ಯೆ ಶ್ರೀಮತಿ ನಂದಾ ಲೋನ್ಕರ್ ರವರು ಆಗಮಿಸಲಿದ್ದಾರೆ. ಗೌರವ ಅತಿಥಿಯಾಗಿ ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕೋಶಾಧಿಕಾರಿ ಶ್ರೀಮತಿ ಶಮ್ಮಿ ಎ ಹೆಗ್ಡೆಯವರು ಆಗಮಿಸಲಿದ್ದಾರೆ. ಅಸೋಸಿಯೇಷನ್ ಕ್ರೀಡಾ ಕಾರ್ಯಾಧ್ಯಕ್ಷ ಶ್ರೀ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಅಸೋಸಿಯೇಷನ್ ನ ಮಹಿಳಾ ವಿಭಾಗ, ಯುವ…
ಬಂಟ್ವಾಳ ಬಂಟರ ಸಂಘದ ಯುವ ವಿಭಾಗದ ವತಿಯಿಂದ ದೀಪಾವಳಿ ಪ್ರಯುಕ್ತ ಜರಗುವ 2 ನೇ ವರ್ಷದ ‘ಬೊಲ್ಪುದ ಐಸಿರ -2’ ಅದ್ದೂರಿ ಕಾರ್ಯಕ್ರಮದ ಸಂಚಾಲಕರಾಗಿ ವಿಕ್ರಮ್ ಶೆಟ್ಟಿ ಸರಪಾಡಿ ಆಯ್ಕೆಯಾಗಿದ್ದಾರೆ. ನವೆಂಬರ್ 11 ರಂದು ಸಂಜೆ 5ಕ್ಕೆ ಬಂಟ್ವಾಳ ಬಂಟರ ಸಂಘದಲ್ಲಿ ದೀಪಾವಳಿ ಪ್ರಯುಕ್ತ ಜರಗುವ ಬೊಲ್ಪುದ ಐಸಿರ 2 ಅದ್ದೂರಿ ಕಾರ್ಯಕ್ರಮದಲ್ಲಿ ದೇಶ ಹಾಗೂ ರಾಜ್ಯದ ಪ್ರಮುಖ ಕಲಾವಿದರ ಭಾಗವಹಿಸುವಿಕೆಯಲ್ಲಿ ವಿವಿಧ ಕಾರ್ಯಕ್ರಮ ಜರುಗಲಿದೆ. ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಡಿ. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷರಾದ ನಿಶಾನ್ ಆಳ್ವ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ. ಬಂಟರ ಸಂಘದ ಯುವ ವಿಭಾಗ ನಡೆಸಿಕೊಡುವ ಈ ಕಾರ್ಯಕ್ರಮದ ಸ್ವಾಗತ ಸಮಿತಿ ಸಂಚಾಲಕರಾಗಿ, ವೇದಿಕೆ ಸಮಿತಿ, ಆಹಾರ ಸಮಿತಿ, ಸುಡುಮದ್ದು ಸಮಿತಿ, ಕೌಂಟರ್ ಸಮಿತಿ ಎಂಬ ಹಲವು ಸಮಿತಿ ರಚಿಸಲಾಗಿದೆ. ಆಮಂತ್ರಣ ಪತ್ರಿಕೆ ಬಿಡುಗಡೆಯಲ್ಲಿ ಚಂದ್ರಹಾಸ ಶೆಟ್ಟಿ, ನಿಶಾನ್ ಆಳ್ವ, ತರುಣ್ ಶೆಟ್ಟಿ, ಗೋಕುಲ್ ಭಂಡಾರಿ, ದೀಪಕ್ ಶೆಟ್ಟಿ ಹಾಗೂ…
ಯು.ಎ.ಇ ಬಂಟ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ಯುಎಇಯ ತುಳು ಕನ್ನಡಿಗರ ಜನಾನುರಾಗಿದ್ದ ದಿ. ದೇವೇಶ್ ಆಳ್ವರವರ ಸಂತಾಪ ಸೂಚಕ ಕಾರ್ಯಕ್ರಮವು ಜ.14 ರಂದು ನಗರದ ಬರ್ ದುಬೈಯ ಫಾರ್ಚೂನ್ ಅಟ್ರ್ಯೂಂ ಹೋಟೆಲ್ ರೂಫ್ ಟವರ್ ನಲ್ಲಿ ನಡೆಯಿತು. ಡಿ.30 ರಂದು ದುಬಾಯಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದೇವೇಶ್ ಆಳ್ವರವರ ಯುಎಇಯಲ್ಲಿ ಇರುವ ನೂರಾರು ಆತ್ಮೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತ್ಮೀಯ ಮಿತ್ರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಮೊದಲಿಗೆ ಯುಎಇಯ ಬಂಟ್ಸ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮಾತನಾಡುತ್ತಾ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿ ದೇವರ ಪಾದ ಸೇರಿದ ದೇವೇಶ್ ರವರು ನಮ್ಮ ಮುಂದೆ ಈಗಲೂ ಇದ್ದಾರೆ. 2001 ರಂದು ದುಬಾಯಿಗೆ ಬಂದು ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಊರಿನ ಯುವಕರಿಗೆ ಉದ್ಯೋಗದಾತರಾಗಿದ್ದರು. ಯುಎಇ ಬಂಟ್ಸ್ ಸಂಘದ ಪ್ರಧಾನ ಕಾರ್ಯದರ್ಶಿಯಾದ ಮೇಲೆ ಹಲವಾರು ಕಾರ್ಯಕ್ರಮಗಳ ಯಶಸ್ವಿಗೆ ಕಾರಣಕರ್ತರಾಗಿದ್ದರು. ಬಂಟ ಕ್ರೀಡಾ ಅಭಿಮಾನಿಗಳಿಗೆ…
ಸುಳ್ಯ ತಾಲೂಕಿನ ಬೆಳ್ಳಾರೆಯ ಬಜನಿಗುತ್ತು ನಿವಾಸಿ ಜಗನ್ನಾಥ್ ರೈಯವರು ಸುಪರಿಂಡೆಂಟ್ ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿದ್ದಾರೆ. ಜಗನ್ನಾಥ ರೈಯವರು ಬಜನಿಗುತ್ತು ರಾಮಯ್ಯ ರೈ ಹಾಗೂ ಕುಸುಮಾವತಿ ದಂಪತಿಯ ಪುತ್ರ. ಬೆಳ್ಳಾರೆ ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ಎಸ್ಎಸ್ಎಲ್ ಸಿ ವಿದ್ಯಾಭ್ಯಾಸ ಮುಗಿಸಿ, ನಂತರ ಪಿಯುಸಿ ಹಾಗೂ ಡಿಗ್ರಿ ವಿದ್ಯಾಭ್ಯಾಸವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು. 1996 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇರ್ಪಡೆಗೊಂಡ ಜಗನ್ನಾಥ್ ರೈಯವರು, ನಂತರ ಇನ್ಸ್ ಪೆಕ್ಟರ್, ಸರ್ಕಲ್ ಇನ್ಸ್ ಪೆಕ್ಟರ್ ಆಗಿ ತದನಂತ ಡಿವೈಎಸ್ಪಿ ಯಾಗಿ ಸಿಸಿಬಿ ಎಸಿಪಿಯಾಗಿ, ಇದೀಗ ಬೆಂಗಳೂರಿನ ಗುಪ್ತಚಾರ ವಿಭಾಗದ ಎಸ್ಪಿಯಾಗಿ ಪದೋನ್ನತಿ ಹೊಂದಿದ್ದಾರೆ.
ಐಲೇಸಾ-ದಿ ವಾಯ್ಸ್ ಆಫ್ ಓಷನ್ ಸಂಸ್ಥೆಯಿಂದ ಅರ್ಥಪೂರ್ಣ ದ್ವಿತೀಯ ಹುಟ್ಟುಹಬ್ಬ ಆಚರಣೆ ಕಾವ್ಯ ಬೆಳಕನ್ನು ಚೆಲ್ಲುವ ಸಾಧನವಾಗಲಿ : ಸುಬ್ರಾಯ ಚೊಕ್ಕಾಡಿ
ಮುಂಬಯಿ (ಆರ್ ಬಿ ಐ), ಸೆ.08: `ಮನಸ್ಸಿಗೆ ವಯಸ್ಸಾಗಬಾರದು, ದೇಹಕ್ಕೆ ವಯಸ್ಸಾಗೋದು ಸಹಜ, ಚಿಂತನ ಮಂಥನದಿಂದ ಮನಸ್ಸನ್ನು ಸದಾ ಯೌವನವಾಗಿಡಲು ಸಾದ್ಯವಿದೆ. ಕವನಗಳು, ಸುಲಭ ತುತ್ತಿನಲ್ಲಿ ಜೀರ್ಣವಾಗಬೇಕೆಂದೇನಿಲ್ಲ, ಕವನವನ್ನು ಅರ್ಥೈಸಿ ಕೊಳ್ಳುವುದಕೊಸ್ಕರ, ಅದನ್ನ ಮತ್ತೆಮತ್ತೆ ಓದಬೇಕೆನ್ನುವ ಮನೋಭಿಲಾಷೆ ಹುಟ್ಟು ಹಾಕಿದರೆ, ಕವನದ ಮಂಥನ ಸಾಧ್ಯವಾಗುತ್ತದೆ. ಕಾವ್ಯ ಬರೇ ಕನ್ನಡಿಯಲ್ಲಿರುವ ಪ್ರತಿಬಿಂಬವಷ್ಟೆ ಆಗದೆ, ಅದು ಸಮಾಜಕ್ಕೆ ಬೆಳಕನ್ನು ಚೆಲ್ಲುವ ಸಾಧನವಾದರೆ ಅದೇ ಕಾವ್ಯದ ಸಾರ್ಥಕತೆ’ ಎಂದು ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ನಾಡಿನ ಶ್ರೇಷ್ಠ ಕವಿ ಸುಬ್ರಾಯ ಚೊಕ್ಕಾಡಿ ನುಡಿದರು. ಐಲೇಸಾ-ದಿ ವಾಯ್ಸ್ ಆಫ್ ಓಷನ್ (ರಿ). ಡಿಜಿಟಲ್ ಸಂಸ್ಥೆ ತನ್ನ ಎರಡನೇ ಹುಟ್ಟುಹಬ್ಬದ ಶುಭಾವಸರದಲ್ಲಿ ಕಳೆದ ಭಾನುವಾರ ಸುಳ್ಯ ಹಳೇ ಗೇಟು ಅಲ್ಲಿನ ಚೊಕ್ಕಾಡಿ ಅವರ `ಪ್ರಕೃತಿ’ ನಿವಾಸ, ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ಇಲ್ಲಿ ಆಯೋಜಿಸಿದ್ದ `ವಯೋ ಸಮ್ಮಾನ್’ ವಿಶಿಷ್ಟ ಗೌರವ ಸ್ವೀಕರಿಸಿ ಚೊಕ್ಕಾಡಿ ಮಾತನಾಡಿದರು. ಐಲೇಸಾ ತಂಡವು ಸುಬ್ರಾಯ ಚೊಕ್ಕಾಡಿ ಅವರ 83ನೆ ವಯೋನಡಿಗೆಯ ಸ್ಮರಣಾರ್ಥ, ಕಾವ್ಯ…