Author: admin
ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ವೇದಿಕೆಯಲ್ಲಿ ಅಮರ್ ಕೋಟೆ ಸ್ವಯಂ ಅಪೇಕ್ಷ ಇಲ್ಲದವ ಸ್ವಯಂ ಸೇವಕ
ಮೂಡುಬಿದಿರೆ: ‘ಸ್ವಯಂ (ವೈಯಕ್ತಿಕ) ಕುರಿತು ಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವವನೇ ಸ್ವಯಂ ಸೇವಕ’ ಎಂದು ಜವನೆರ್ ಬೆದ್ರ ಪ್ರತಿಷ್ಠಾನದ ಅಧ್ಯಕ್ಷ ಅಮರ್ ಕೋಟೆ ಹೇಳಿದರು. ಆಳ್ವಾಸ್ ಕಾಲೇಜು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಬುಧವಾರ ‘ಅಭಿವ್ಯಕ್ತಿ ವೇದಿಕೆ’ಯ 2024ನೇ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಶರೀರ ಇರುವುದೇ ಪರೋಪಕಾರ ಮಾಡಲು. ದೇಹವು ಸಮಾಜ ಸೇವೆ ಮಾಡಿದಾಗ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಾಜ ಸೇವೆಯಲ್ಲಿ ದೊಡ್ಡದು, ಸಣ್ಣದು ಎಂಬುದಿಲ್ಲ. ಅಸಹಾಯಕರೊಬ್ಬರಿಗೆ ರಸ್ತೆ ದಾಟಲು ಕೈ ಹಿಡಿದು ನೆರವು ನೀಡುವುದು, ಬಸ್ನಲ್ಲಿ ಹಿರಿಯರಿಗೆ ಕುಳಿತುಕೊಳ್ಳಲು ಅನುವು ಮಾಡುವುದೂ ಮಾದರಿ ಸಮಾಜಸೇವೆ ಎಂದು ವಿವರಿಸಿದರು. ಭಗವತ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ, ಲಾಭದ ನಿರೀಕ್ಷೆ ಇಲ್ಲದೇ ನಾವು ನಮ್ಮ ಕರ್ಮಗಳನ್ನು ಮಾಡಬೇಕು. ಮುಂದೊಂದು ದಿನ ಪ್ರತಿಫಲ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು. ಸೇವೆ ಮಾಡಲು ಸಮೂಹವೇ ಬೇಕಾಗಿಲ್ಲ. ನಮ್ಮ ಸಾಮಥ್ರ್ಯ, ಇತಿಮಿತಿಯಲ್ಲಿ ಸಾಧ್ಯವಾದಷ್ಟು ಸೇವೆ ಮಾಡಬೇಕು. ಬದ್ಧತೆಯಿಂದ ಸೇವೆ ಮಾಡಿದರೆ,…
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಭಕ್ತ ಕನಕದಾಸರ ಕನಕ ಜಯಂತಿ ಆಚರಣೆ ಕಾರ್ಯಕ್ರಮ ದಿನಾಂಕ 30-11-2023 ರಂದು ಸಂಜೆ 4.30ಕ್ಕೆ ಸರಿಯಾಗಿ ಎಂ.ಜಿ.ಎಂ ಕಾಲೇಜು ಬಳಿಯಿರುವ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ವೀಕ್ಷಕರಾದ ಪ್ರ್ಯಾಂಕಿ ಡಿಸೋಜ ವಹಿಸಿದರು. ತಾಲೂಕು ಅದ್ಯಕ್ಷ ಕೃಷ್ಣ ಕುಮಾರ್ ರವರು ಕನಕದಾಸರ ಕುರಿತ ಜೀವನ ಚರಿತ್ರೆ ವಿಸ್ತಾರವಾಗಿ ವಿವರಿಸಿ ಗುಣಗಾನ ಮಾಡಿದರು. ಮುಖಂಡರುಗಳಾದ ಉಡುಪಿ ತಾಲೂಕು ಉಪಾಧ್ಯಕ್ಷ ಜಯರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ರೋಷನ್ ಡಿಸೋಜ, ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಪಾಂಗಳ, ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಅಟೋ ಮಾಲಕರ ಮತ್ತು ಚಾಲಕರ ಘಟಕದ ಅಧ್ಯಕ್ಷ ಅನಿಲ್ ಪೂಜಾರಿ, ಮಹಿಳಾ ಗೌರವ ಅಧ್ಯಕ್ಷೆ ಗುಣವತಿ, ಕೋಶಾಧಿಕಾರಿ ಸುನಂದಾ ಟೀಚರ್, ಮುಖಂಡರುಗಳಾದ ಗುಲಾಬಿ, ಸಾದನಾ, ಹೇಮಾ, ನಳಿನಿ, ಸುಕನ್ಯಾ, ಗೌತಮ್…
ತ್ರಿರಂಗ ಸಂಗಮ ಮುಂಬಯಿ ಪ್ರಥಮ ವರ್ಷದ ವಾರ್ಷಿಕೋತ್ಸವ ಮತ್ತು ಯಶಸ್ವಿ ಸಂಘಟಕ ಕರ್ನೂರು ಮೋಹನ್ ರೈಯವರ ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ “ತ್ರಿರಂಗ ಮೋಹನ ಸುವರ್ಣ ಸಂಭ್ರಮ” ಕಾರ್ಯಕ್ರಮವು ಅಕ್ಟೋಬರ್ 8 ರಂದು ದುಬೈನಲ್ಲಿ ಯಶಸ್ವಿಯಾಗಿ ಜರುಗಿತು. ದುಬೈಯ ಎಮಿರೇಟ್ಸ್ ಸ್ಕೂಲ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಎಇಯ ತುಳು ಕನ್ನಡಿಗರು ಮತ್ತು ಮಹಾರಾಷ್ಟ್ರದ ರಾಜ್ಯದಿಂದ ತುಳು ಕನ್ನಡಿಗರು ಉಪಸ್ಥಿತರಿದ್ದರು. ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಬಿ ವಿವೇಕ್ ಶೆಟ್ಟಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಭವಾನಿ ಶಿಪ್ಪಿಂಗ್ ನ ಸಿಎಮ್ ಡಿ ಕುಸುಮೋಧರ ಶೆಟ್ಟಿಯವರು ಮುಖ್ಯ ಅತಿಥಿಯಾಗಿದ್ದರು. ಮುಂಬಯಿಯ ಪ್ರಸಿದ್ದ ಜ್ಯೋತಿಷಿ ಅಶೋಕ್ ಪುರೋಹಿತ್ ಆಶೀರ್ವಚನವಿತ್ತರು. ಎಮ್ ಸಿ ಎ ಯ ಮಾಜಿ ಜೊತೆ ಕಾರ್ಯದರ್ಶಿ ಡಾ.ಪಿ ವಿ ಶೆಟ್ಟಿ, ಯುಎಇ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್ ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಯುಎಇಯ…
ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ರಮಾನಾಥ ಹೆಗ್ಡೆ (72) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 31 ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ರಾಮಕೃಷ್ಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಸಾಧಿಸಬೇಕು ಎಂಬ ಛಲ ಅಛಲವಾಗಿರಲು ಸಾಧನೆಯ ಶಿಖರದ ಪಯಣ ಸುಖಕರವಾಗಿಸುತ್ತದೆ ಅನ್ನುವುದಕ್ಕೆ ಸಾಕ್ಷಿಯಾಗಿ ನಿಂತವರು ಮಹೇಶಣ್ಣ. ‘ಯಾರು ಕೇಳಲಿ ಎಂದು ನಾನು ಹಾಡುವುದಲ್ಲ’ ಎಂಬ ಡಾ.ಜಿ ಎಸ್ ಶಿವರುದ್ರಪ್ಪನವರ ಸ್ಪೂರ್ತಿದಾಯಕ ಕವಿವಾಣಿಯಂತೆ ಅದ್ಯಾರೋ ನನ್ನ ಗುರುತಿಸಿ ಮಾನ ಸಮ್ಮಾನ ಮಾಡುತ್ತಾರೆ? ಪ್ರಚಾರದ ಅಬ್ಬರದಲ್ಲಿ ನನ್ನ ಮುಳುಗಿಸುತ್ತಾರೆ? ಎಂದು ಮಹೇಶಣ್ಣ ಸಮಾಜ ಸೇವೆಗೆ ಇಳಿದವರಲ್ಲ. ತನ್ನಷ್ಟಕ್ಕೆ ತನ್ನಿಷ್ಟಕ್ಕೆ ಎಂಬಂತೆ ಕ್ಷಣ ಕ್ಷಣವೂ ನೊಂದವರ ಬದುಕಿಗೆ ನಂದಾ ದೀಪವಾದವರು. ಕಲಿಯಬೇಕು ಎಂಬ ಆಸೆ ಹೊತ್ತ ಬಡ ಮಕ್ಕಳ ಭವಿಷ್ಯ ರೂಪಿಸುವಲ್ಲಿಯೇ ತನ್ನ ನೋವುಗಳನ್ನು ಮರೆತು ಅಲ್ಲಿ ಖುಷಿಯನ್ನು ಕಂಡು ಕೊಂಡವರು. ಬಂಟರ ಸಂಘದ ಎಸ್ ಎಮ್ ಶೆಟ್ಟಿ ಶಾಲಾ ಕಾಲೇಜಿನಲ್ಲಿ ಶಿಕ್ಷಣ ಬಯಸಿದ ಬಂಟರ ಮಕ್ಕಳೊಂದಿಗೆ ಇನ್ನಿತರ ಜಾತಿ ಪಂತದವರ ಮಕ್ಕಳಿಗೂ ಅಲ್ಲಿ ಕಲಿಯಲು ಪ್ರೋತ್ಸಾಹಿಸಿದರು. ಮಾತ್ರವಲ್ಲ ಅವರಿಗೆ ಧನ ಸಹಾಯದ ಅಗತ್ಯ ಕಂಡು ಬಂದಾಗ ಉದಾರ ದಾನಿಯಾದರು. ಇತ್ತೀಚೆಗೆ ನಾನು ನನ್ನ ಮಕ್ಕಳೊಂದಿಗೆ ಇಲ್ಲೇ ಪರಿಸರದ ಒಂದು ಹೋಟೆಲಿಗೆ ಊಟಕ್ಕೆ ಹೋಗಿದ್ದೆ. ಕೆಲವು…
“ಐಕಳ ಹರೀಶ್ ಶೆಟ್ಟಿಯವರು ಹೊರನಾಡಿನ ಪ್ರತಿಸೂರ್ಯ. ಮುಂಬೈನ ತುಳು ಕನ್ನಡಿಗರ ಧೀಮಂತ ನಾಯಕ. ಅವರು ತಾರಾಮೌಲ್ಯ ಇರುವ ಕೆಲವೇ ಕೆಲವು ಸಂಘಟಕರಲ್ಲಿ ಒಬ್ಬರು. ಕ್ರಿಯಾಶೀಲ, ಚಿಂತನಶೀಲ, ಸಹನಶೀಲ ಮತ್ತು ಆಧ್ಯಾತ್ಮಶೀಲಗಳನ್ನು ಮೈಗೂಡಿಸಿಕೊಂಡ ಮಹಾನಾಯಕ. ಇಂತಹ ಅಪರೂಪದ ದಣಿವರಿಯದ ಚೇತನ, ಸಂಘಟನ ಸೀಮಾಪುರುಷ, ಸಾಹಸಪುರುಷನನ್ನು ಗೌರವಿಸುವುದು ವಿಶ್ಕವಿದ್ಯಾಲಯದ ಕರ್ತವ್ಯ ಎಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂಬುದಾಗಿ ಮುಂಬೈ ವಿಶ್ಕವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಆದ ಡಾ ಜಿ ಎನ್ ಉಪಾಧ್ಯ ಅವರು ಅಭಿಪ್ರಾಯಪಟ್ಟರು. ಐಕಳ ಒಂದು ಸಣ್ಣ ಊರು. ತಮ್ಮ ಕರ್ತೃತ್ವ ಶಕ್ತಿಯಿಂದ ಐಕಳ ಇಂದು ವಿಶ್ವದ ಸಾಂಸ್ಕೃತಿಕ ನಕಾಶೆಯಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದೆ. ಸಹಕಾರ, ಸಮಾಜಸೇವೆ ಒಂದು ಮಹೋನ್ನತ ತತ್ವ ಎಂದು ದೀನದಲಿತರ ಏಳಿಗೆಗೆ ಶ್ರಮಿಸುತ್ತಿರುವ ಐಕಳ ಹರೀಶ್ ಶೆಟ್ಟಿಯವರು ನಾಡಿಗೆ ಮಾದರಿ ಎಂದು ಡಾ. ಜಿ ಎನ್ ಉಪಾಧ್ಯ ಅವರು ನುಡಿದರು. ಅವರು ಸೆಪ್ಟೆಂಬರ್ 10 ರಂದು ಸಾಂತಕ್ರೂಜ್ ಕಲೀನಾ ಕ್ಯಾಂಪಸ್ ನ ಮುಂಬೈ ವಿಶ್ಕವಿದ್ಯಾನಿಲಯದ ಕವಿ ಕುಸುಮಾಗ್ರಜ ಮರಾಠಿ…
ವಿದ್ಯೆಯ ಜತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಜೀವನ ಹಸನಾಗಲಿದೆ. ಭವಿಷ್ಯವನ್ನು ಉನ್ನತೀಕರಣಗೊಳಿಸುವಲ್ಲಿ ಕ್ರೀಡೆ ಒಳ್ಳೆ ರೀತಿಯಾದ ಮಾರ್ಗದರ್ಶಿ ಸೂತ್ರವನ್ನು ಒದಗಿಸಿಕೊಡುತ್ತದೆ ಎಂದು ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಹೇಳಿದರು. ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ನಡೆದ 28 ನೇ ವರ್ಷದ ಅಂಬಾ ಪ್ರೀಮಿಯರ್ ಲೀಗ್, ರಾಘು ಟ್ರೋಫಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಕ್ಲಾಡಿ ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಶೆಟ್ಟಿ ಯಳೂರು ಮಾತನಾಡಿ, ಕ್ರಿಕೆಟ್ ಎನ್ನುವುದು ಕೇವಲ ಪಂದ್ಯಾಟಕ್ಕೆ ಮಾತ್ರ ಸೀಮಿತವಾಗಿರಿಸದೆ ಅಂಬಾ ಕ್ರಿಕೆಟರ್ಸ್ ತಂಡ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರವನ್ನು ನೀಡುತ್ತಾ ಬಂದಿದೆ ಎಂದು ಶ್ಲಾಘೀಸಿದರು. ಮಂಜಯ್ಯ ಶೆಟ್ಟಿ ಪಾತ್ರಿಗಳು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಘುರಾಮ ಶೆಟ್ಟಿ, ಅಜಿತ್, ಅಮರ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ಹಣಿನಮಕ್ಕಿ, ಸತೀಶ್ ದೇವಾಡಿಗ, ಜೀವನ್ ಶೆಟ್ಟಿ, ಸುತನ್ ಶೆಟ್ಟಿ ಉಪಸ್ಥಿತರಿದ್ದರು. ವಿಘ್ನೇಶ ಸ್ವಾಗತಿಸಿದರು. ಅಜಿತ್ ವಂದಿಸಿದರು.
ಬಂಟರ ಸಂಘ ಮುಂಬಯಿ ಇದರ 2023-26 ರ ಮೂರು ವರ್ಷಗಳ ಅವಧಿಗೆ ನವೆಂಬರ್ 30 ರಂದು ಸಂಜೆ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ಟಿ ಭಂಡಾರಿ ಸಭಾಗೃಹದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಬಂಟರ ಸಂಘ ಮುಂಬಯಿಯ 31ನೇ ನೂತನ ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಈಗಾಗಲೇ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಾಬಾ ಗ್ರೂಪ್ ಆಫ್ ಕಂಪನಿಯ ಆಡಳಿತ ನಿರ್ದೇಶಕ ಮಹೇಶ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ. ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಸಿಎ ರಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಉದ್ಯಮಿ ಗಿರೀಶ್ ಶೆಟ್ಟಿ, ತೆಳ್ಳಾರ್, ಜೊತೆ ಕೋಶಾಧಿಕಾರಿಯಾಗಿ ಉದ್ಯಮಿ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಮತ್ತು ಯುವ ವಿಭಾಗದ ಕಾರ್ಯಧ್ಯಕ್ಷರಾಗಿ ಸವಿನ್ ಜೆ. ಶೆಟ್ಟಿಯವರು ಮುಂದಿನ 3 ವರ್ಷಗಳ ಅವಧಿಗೆ ಆಯ್ಕೆಯಾದರು. ವೇದಿಕೆಯಲ್ಲಿ ನಿರ್ಗಮನ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಉಪಾಧ್ಯಕ್ಷ ರತ್ನಾಕರ…
ಯಾವಾಗ ಗಂಡ-ಹೆಂಡತಿ, ಮಕ್ಕಳೇ ಪರಿವಾರ ಎಂಬ ಸಂಸ್ಕೃತಿ ಹುಟ್ಟಿತೋ ಅಲ್ಲಿಂದ ಮದುವೆಯಲ್ಲಿ ಸ್ವಾರ್ಥ ಪ್ರಾರಂಭವಾಗಿ ಪರಿವಾರದ ಘನತೆ ಹಾಗೂ ಸಂಸ್ಕಾರ ಮಾಯವಾಯಿತು. ತಂದೆ- ತಾಯಿ; ಅಕ್ಕ-ತಂಗಿ; ಅಣ್ಣ-ತಮ್ಮ; ಸೋದರ ಮಾವ -ಅತ್ತೆ ಹೀಗೆ ಇವರೊಡನಿದ್ದ ಅನ್ಯೋನ್ಯತೆ ಮಾಯವಾಗಿ ಪರಿವಾರ ಎಂಬ ಮೂಲ ಸಂಸ್ಕಾರಯುತ ಪದ್ಧತಿ ಸವಕಳಿಯಾಯಿತು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಂಪಾದನೆಗಾಗಿ ಬೋಧನೆ ವಿನಹ ವಿಶಾಲ ತಿಳುವಳಿಕೆಗೆ ಆಸ್ಪದ ಇಲ್ಲ. ಎಲ್ಲಿ ದೂರದೃಷ್ಠಿ, ತ್ಯಾಗ, ಸಮರ್ಪಣಾ ಮನೋಭಾವನೆ ಇರುತ್ತದೆಯೋ ಅಲ್ಲಿ ಪರಿವಾರದ ಬೇರುಗಳು ಬಲವಾಗಿರುತ್ತದೆ. ಸಂಸಾರದ ದೀರ್ಘ ಬಾಳಿಕೆಗೆ ಬುನಾದಿ ಈ ಅನುಭವ ಸಂಪನ್ನ ಪರಿವಾರದಿಂದ ಸಾಧ್ಯ ಹಾಗೂ ಅದರ ಅವಶ್ಯವಿದೆ. ಇಂದು ಅಂತಹ ವಾತಾವರಣವೇ ಇಲ್ಲವಾಗಿದೆ. ಕೇವಲ ಸೊಬಗು, ಪ್ರಲೋಭನೆ, ಸಂಭ್ರಮ ಆಕರ್ಷಣೆಗಳಿಗೆ ಒಳಗಾಗಿ ತಮ್ಮ ಬದುಕನ್ನು ಪರಿವಾರದಿಂದ ದೂರ ಮಾಡಿಕೊಳ್ಳುತ್ತಾ ಸಮಸ್ಯೆಗೆ ಒಳಗಾಗಲು ಸಮೃದ್ಧ ಪರಿವಾರದ ಮಾರ್ಗದರ್ಶನದ ಕೊರತೆಯು ಕಾರಣ ಎಂದು ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ದಿನಾಂಕ 02.07.2023 ರವಿವಾರ ಕನ್ನಡ ವೆಲ್ಫೇರ್ ಸೊಸಾಯಿಟಿ ಸಭಾಗೃಹ ಫಾಟ್ಕೋಪರ್ ಇಲ್ಲಿ…
ಚಿಕ್ಕಂದಿನಿಂದಲೇ ವಿಜಯಕುಮಾರ್ ಶೆಟ್ಟಿ ಅವರು ಬಹುಮುಖ ಪ್ರತಿಭಾವಂತರು. ಇವರು ನಮ್ಮೂರಿನವರು ಎಂಬುದಕ್ಕೆ ಹೆಮ್ಮೆಯಾಗುತ್ತದೆ. ಅದ್ಭುತ ನಟನಾಗಿರುವ ವಿಜಯಕುಮಾರ್ ಶೆಟ್ಟಿಯವರು ಚಿತ್ರರಂಗದ ಹೀರೋ ಆಗಿ ಮೆರೆಯಬೇಕಿತ್ತು. ಆದರೆ ನಾಟಕ ರಂಗವನ್ನೇ ನೆಚ್ಚಿಕೊಂಡ ವಿಜಯಕುಮಾರ್ ಶೆಟ್ಟಿ ಅವರು ಕಲಾಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಸಾಮಾನ್ಯ. ಕಲಾ ಜಗತ್ತು ಎಂಬ ಕಲಾ ಸಂಸ್ಥೆಯನ್ನು ಸ್ಥಾಪನೆ ಮಾಡಿ ಕಳೆದ 44 ವರ್ಷಗಳಿಂದ ನಿಸ್ವಾರ್ಥವಾಗಿ ಕಲಾ ಸೇವೆಯನ್ನು ಮಾಡುತ್ತಾ ಬಂದಿರುವರು. ಅದೆಷ್ಟೋ ಕಲಾವಿದರನ್ನು ರೂಪುಗೊಳಿಸಿ ಅವರನ್ನು ಕಲಾಕ್ಷೇತ್ರಕ್ಕೆ ಪರಿಚಯಿಸಿದ ಕೀರ್ತಿ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಸಲ್ಲುತ್ತದೆ. ಕಲಾಕ್ಷೇತ್ರದಲ್ಲಿ ಸಾಧನೆಯ ಮೂಲಕ ಈಗಾಗಲೇ ಲಿಮ್ಕಾ ಬುಕ್ ಆಫ್ ದಾಖಲೆಗೆ ವಿಜಯಕುಮಾರ್ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ 70ರ ಹರೆಯದಲ್ಲಿ ಗಿನ್ನಿಸ್ ದಾಖಲೆಗೆ ಪ್ರಯತ್ನ ಶೀಲರಾಗಿದ್ದಾರೆ. ಇದರಲ್ಲಿ ಅವರಿಗೆ ಜಯವಾಗಲಿ. ನಮ್ಮ ನಾಡಿನ ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರ ಸೇವೆ ಹಾಗೂ ಸಾಧನೆಯನ್ನು ಮಾಡಿರುವ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಮುಂದಿನ ದಿನಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸುವಂತಾಗಲಿ ಎಂಬುದೇ…