Author: admin
ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಅವರು ಜಿಲ್ಲಾ ಧಾರ್ಮಿಕ ಪರಿಷತ್ ಸಮಿತಿಯ ಸದಸ್ಯರಾಗಿ ಮುಂದಿನ 4 ವರ್ಷಗಳವರೆಗೆ ಕರ್ನಾಟಕ ಸರಕಾರದಿಂದ ನೇಮಕಗೊಂಡಿದ್ದಾರೆ. ಇವರು ಶ್ರೀ ಶರಭೇಶ್ವರ ದೇವಸ್ಥಾನ ಸರಪಾಡಿಯ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದಾರೆ. ಮಾತ್ರವಲ್ಲದೇ ಬಿ.ಸಿ.ರೋಡು ಪೊಲೀಸ್ ಲೈನ್ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಆಡಳಿತ ಸೇವಾ ಟ್ರಸ್ಟ್ (ರಿ.) ನ ಗೌರವ ಅಧ್ಯಕ್ಷರಾಗಿದ್ದಾರೆ. ಬಂಟ್ವಾಳ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಜಗನ್ನಾಥ ಚೌಟ ಆಯ್ಕೆಗೆ ಬಂಟರ ಸಂಘ ಮುಂಬಯಿಯ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಮಾಣಿ ಗುತ್ತು ಶಿವಪ್ರಸಾದ್ ಆರ್ ಶೆಟ್ಟಿ, ಕಲ್ಲಾಜೆ ಗುತ್ತು ಸುಹಾಸ್ ಆರ್ ರೈ, ಬಂಟರ ಸಂಘ ಮುಂಬಯಿಯ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
ಪೆರಾರ ಮುಂಡಬೆಟ್ಟು ಮೂಲದ ಅಕ್ಷಯಾ ತನ್ನ ಎಳವೆಯಿಂದಲೇ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದು ಬೆಳೆಯುತ್ತಿದ್ದಂತೆ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಪ್ರಸ್ತುತ ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹಾಯಕ ಪ್ರಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಈಕೆ ಬಹುಮುಖ ಪ್ರತಿಭೆಯ ಮೇಧಾವಿಯಾಗಿದ್ದು ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಛಾಪು ಮೂಡಿಸಿದ್ದು ಈಗಾಗಲೇ ನಾಡಿನ ಹೆಸರಾಂತ ಸಾಹಿತ್ಯ ವಿಮರ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಕ್ರೋ ಬಯಾಲಜಿಯಲ್ಲಿ ವಿಜ್ಞಾನ ಪದವಿ, ಕನ್ನಡ ಸಾಹಿತ್ಯದ ಎಂ.ಎ ಸ್ನಾತಕೋತ್ತರ ಶಿಕ್ಷಣ ಪಡೆದ ಧೀಮಂತೆ. ಅಷ್ಟಕ್ಕೇ ಸಾಲದೆಂಬಂತೆ ಮಾನವ ಸಂಪನ್ಮೂಲ ವಿಷಯ ಕುರಿತು ಎಂ.ಬಿ.ಎ ವ್ಯಾಸಂಗವನ್ನೂ ಪೂರ್ತಿಗೊಳಿಸಿದ್ದು ಪ್ರಾಧ್ಯಾಪಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಜನಮೆಚ್ಚಿದ ಸಾಹಿತಿಯಾಗಿ ಗಮನೀಯ ಸಾಧನೆಗೈದ ಅಕ್ಷಯಾ ಅವರ ಅರ್ಹತೆಯನ್ನು ಗುರುತಿಸಿ ಇದೀಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಗೌರವ ಸದಸ್ಯೆಯಾಗಿಯೂ ಆಯ್ಕೆ ಮಂಡಳಿ ಆರಿಸಿದ್ದು…
ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾಗಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಅವರನ್ನು ನೇಮಕಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಕೆ.ಪಿ ಹೇಮಂತರಾಜು ಆದ್ದೇಶಿಸಿದ್ದಾರೆ. ಆದೂರು ಏಳ್ನಾಡುಗುತ್ತು ಕಿಟ್ಟಣ್ಣ ರೈ ಮತ್ತು ಮೇಗಿನಗುತ್ತು ಸುಂದರಿ ರೈ ದಂಪತಿಯರ ಪುತ್ರನಾಗಿರುವ ಶಿವನಾಥ ರೈ ಮೇಗಿನಗುತ್ತು ಅವರು ಕಲ್ಪಣೆ ಸರ್ವೆ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ವೆ ಎಸ್ ಜಿಎಂ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣ ಪಡೆದಿರುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಇವರು ಭಕ್ತಕೂಡಿ ಶ್ರೀರಾಮ ಭಜನಾ ಮಂದಿರದಲ್ಲಿ 14 ವರ್ಷಗಳ ಕಾಲ ಅಧ್ಯಕ್ಷರಾಗಿ, ಮಂದಿರ ಪುನರ್ ನಿರ್ಮಾಣದ ರೂವಾರಿಯಾಗಿ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಸರಕಾರಿ ಪ್ರೌಢಶಾಲೆ ಕಲ್ಪಣೆ ಸರ್ವೆ ಇದರ ಕಾರ್ಯಾಧ್ಯಕ್ಷರಾಗಿ, ಬೆಳ್ಳಿ ಹಬ್ಬದ ಅಧ್ಯಕ್ಷರಾಗಿ ರಂಗಮಂದಿರ ನಿರ್ಮಾಣ ಹಾಗೂ ಶಾಲಾ ಅಭಿವೃದ್ಧಿ…
“ಕೀರ್ತಿಕಾಮನೆ ಬೆನ್ನ ಹಿಡಿದು ಹೋದರೆ ಮನುಜ ತಂತಿ ಮೇಲಿನ ಆಟ, ಅದು ದೊಂಬರಾಟ ; ಹೂ ಅರಳಿ ನಗುವಂತೆ ಇರಲಿ ಸಹಜತೆ ಮನದಿ ದೂರವಿರು ಹೊಗಳಿಕೆಗೆ” – ಮುದ್ದು ರಾಮ ಒಬ್ಬೊಬ್ಬರ ಬದುಕು ಒಂದೊಂದು ರೀತಿ. ಒಬ್ಬರದು ಗಳಿಸಬೇಕು ಗಳಿಸಿದನ್ನು ಉಳಿಸಬೇಕು ಅದೇ ಬದುಕು ಅನ್ನುವುದಾದರೆ, ಇನ್ನೊಬ್ಬರದ್ದು ದುಡಿಯಬೇಕು ದುಡಿ ದುಡಿದು ಗಂಟು ಕಟ್ಟಿ ನನ್ನ ಕುಟುಂಬದವರ ಜೀವನ ಹಸನುಗೊಳಿಸಬೇಕು. ಮತ್ತೊಬ್ಬರದ್ದು ದುಡಿಯುತ್ತಿರಬೇಕು ದುಡಿ- ದುಡಿಯುತ್ತಾ ಬದುಕು ಕೊನೆಯಾಗಲಿ ಅನ್ನುವುದಾದರೆ, ಬೆರಳೆಣಿಕೆಯ ಜನರ ವಿಚಾರ ಮಾತ್ರ ಬೇರೆಯದೇ ಆಗಿರುತ್ತದೆ. ನಾನು ಶ್ರಮಿಕನಾಗಬೇಕು ನನಗಾಗಿಯಲ್ಲ ನನ್ನವರಿಗಾಗಿಯೂ ಅಲ್ಲ, ಕೇವಲ ನನ್ನ ಸುತ್ತ-ಮುತ್ತಲ ಸಮಾಜಕ್ಕಾಗಿ ದುಡಿಯಬೇಕು ಅನ್ನುವವರ ಒಂದು ವರ್ಗ ಇರುತ್ತದೆ. ಆ ವರ್ಗಕ್ಕೆ ಸೇರಿದವರ ಚಿಂತನೆಯೂ ನಮ್ಮ ಊಹೆಗೆ ನಿಲುಕದಾಗಿರುತ್ತದೆ. ಈ ಭೂಮಿಯಲ್ಲಿನ ಋಣ ಚಿರ ನಿದ್ರೆಗೆ ಜಾರುವ ತನಕ. ಇರುವಷ್ಟು ಕಾಲ ಕಷ್ಟ – ನೊಂದವರ ಬದುಕನ್ನು ಸಾಂತ್ವನಿಸಬೇಕು. ನಮ್ಮ ಆಸು-ಪಾಸಿನ ಸಮಾಜ ಪ್ರಗತಿ ಕಾಣಬೇಕು, ಊರು ಅಭಿವೃದ್ಧಿಯಾಗಬೇಕು, ಅಲ್ಲಿನ ಮಕ್ಕಳು…
ಬಂಟ್ಸ್ ಕತಾರ್ ವರ್ಣರಂಜಿತ ಮೆಗಾ ಸಾಂಸ್ಕೃತಿಕ ಪ್ರದರ್ಶನವು ಡಿಪಿಎಸ್ ಸಭಾಂಗಣದಲ್ಲಿ ನೆರೆದವರನ್ನು ಮಂತ್ರಮುಗ್ಧಗೊಳಿಸಿತು. ಬಂಟ್ಸ್ ಕತಾರ್ ನೂತನ ಆಡಳಿತ ಸಮಿತಿಯ ಅಡಿಯಲ್ಲಿ ಆಯೋಜಿಸಲಾದ ಮೆಗಾ ಕಲ್ಚರಲ್ ಶೋ-2024 ಅದ್ದೂರಿಯಾಗಿ ವರ್ಣರಂಜಿತ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರದರ್ಶಿಸಿತು. ಪ್ರಸಿದ್ಧ ಗಾಯಕರಾದ ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತಾವ್ರೋ ಮತ್ತು ಸರಿಗಮಪ ಖ್ಯಾತಿಯ ಸಾನ್ವಿ ಶೆಟ್ಟಿ ಅವರ ಲೈವ್ ಸಂಗೀತ ಕಾರ್ಯಕ್ರಮವು ಸುಂದರ ಸಂಜೆಯಲ್ಲಿ ಸಂಗೀತ ಲೋಕವನ್ನು ಸೃಷ್ಟಿಸಿತು. ಬಂಟ್ಸ್ ಕತಾರ್ ಸದಸ್ಯರಿಂದ ಯಕ್ಷಗಾನ “ನಾಟ್ಯ ವೈಭವ”, ವಿಶೇಷವಾಗಿ ಬಂಟ್ಸ್ ಕತಾರ್ನ ಸಣ್ಣ ಪುಟ್ಟ ತಂಡಗಳು ಚೆಲುವು ಮತ್ತು ವೃತ್ತಿಪರ ಸೊಬಗನ್ನು ಹೊರಹಾಕಿದವು. ಮೋಹನ್ ಎಡನೀರು ಮತ್ತು ಸಚಿನ್ ಎಡನೀರ್ ಅವರು ಬಹರೈನ್ ನಿಂದ ಆಗಮಿಸಿ ಯಕ್ಷಗಾನ ತಂಡಕ್ಕೆ ವೇಷಭೂಷಣ ಮತ್ತು ಮೇಕಪ್ ನೊಂದಿಗೆ ಸಹಾಯ ಮಾಡಿದರು. ಬಂಟ್ಸ್ ಕತಾರ್ ಸದಸ್ಯರು ಮತ್ತು ದೋಹಾ ಡ್ಯಾನ್ಸಿಂಗ್ ಸ್ಕ್ವಾಡ್ ತಂಡವು ಉತ್ಸಾಹಭರಿತ ಸಿನಿ ನೃತ್ಯ ಪ್ರದರ್ಶನಗಳು ಮತ್ತು ಆಕರ್ಷಕವಾದ ಅರೆ-ಶಾಸ್ತ್ರೀಯ ನೃತ್ಯಗಳೊಂದಿಗೆ ಸಭೆಯನ್ನು ರಂಜಿಸಿತು. ಕಿಕ್ಕಿರಿದ ಡಿಪಿಎಸ್…
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಪ್ರೊಫೆಸರ್ ಅಕ್ಷಯ ಆರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಅಕ್ಷಯ ಆರ್ ಶೆಟ್ಟಿ ಅವರು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜ್ ನ ಪ್ರಾಧ್ಯಾಪಕಿ. ಬಜಪೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೆರ್ಗ, ಹಿಡಿ ಅಕ್ಕಿಯ ಧ್ಯಾನ ಸಹಿತ ಹಲವು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಜೊತೆಗೆ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದ ಲೇಖನಗಳನ್ನೂ ಅವರು ಬರೆದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾ.17ರಂದು ಮುಂಬಯಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಪನ್ವೆಲ್ ಮಹಾನಗರ ಪಾಲಿಕೆಯ ನಗರಸೇವಕ ಹಾಗೂ ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ನಂದಾವರ ಇದರ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಸಂತೋಷ್ ಜಿ ಶೆಟ್ಟಿ ದಲಂದಿಲ ಇವರ ನೇತೃತ್ವದಲ್ಲಿ ನವಿ ಮುಂಬಯಿಯ ನ್ಯೂ ಪನ್ವೆಲ್ ಪೂರ್ವದ ಭಗತ್ ವಾಡಿಯ ಹೋಟೆಲ್ “ಸ್ಪೈಸ್ ವಾಡಿ” ಇಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತುಳು ಕನ್ನಡಿಗ ಅಭಿಮಾನಿಗಳೊಂದಿಗೆ ಸಮಾಲೋಚನೆ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪನ್ವೆಲ್ ಪರಿಸರದಲ್ಲಿ ಹಾಗೂ ಮುಂಬಯಿಯ ವಿವಿಧ ಸಮುದಾಯದ ಅನೇಕ ಗಣ್ಯರು ಉಪಸ್ಥಿತರಿದ್ದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಅಭಿನಂದನಾ ಪೂರ್ವಕವಾಗಿ ಸ್ವಾಗತಿಸಿದರು. ಸ್ವಾಗತಿಸುತ್ತಾ ಪ್ರಾಥಮಿಕ ಮಾತುಗಳನ್ನಾಡಿದ ನಗರಸೇವಕ ಸಂತೋಷ್ ಜಿ ಶೆಟ್ಟಿ ಅವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಭರವಸೆಯ ವ್ಯಕ್ತಿಯೊಬ್ಬರು ಇಂದು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ನಮ್ಮೆಲ್ಲರ ಸೌಭಾಗ್ಯ. ಮಿಲಿಟರಿಯಲ್ಲಿ ದೇಶ ರಕ್ಷಣೆಯ ಸೇವೆಗೈದು…
ಬದುಕೆಂಬ ಪಾತ್ರೆಯಲ್ಲಿ ಪ್ರೀತಿಯೊಂದನ್ನು ಬಿಟ್ಟು ಬೇರೇನನ್ನು ತುಂಬಿಸಿದರೂ ಅದು ನಮಗೇ ಮಾರಕ. ಬೇಡದ ನಕಾರಾತ್ಮಕ ಭಾವನೆಗಳಿಂದ ತುಂಬಿರುವ ಪಾತ್ರೆಯನ್ನು ಬರಿದಾಗಿಸಿ ಅದರಲ್ಲಿ ಪ್ರೀತಿ ತುಂಬಿಸೋಣ, ಪ್ರೀತಿಯನ್ನೇ ಇತರರಿಗೂ ಹಂಚೋಣ. ಐದು ವರ್ಷದ ಪುಟ್ಟ ಹುಡುಗನೊಬ್ಬ ತನ್ನ ಮೂರು ವರ್ಷದ ಪುಟಾಣಿ ತಂಗಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಮುಂದೆ ಮುಂದೆ ಹೋಗುತ್ತಿದ್ದ ಹುಡುಗನಿಗೆ ತಂಗಿಯ ಹೆಜ್ಜೆ ನಿಧಾನವಾಗಿದ್ದು ಗೊತ್ತಾಯಿತು. ಆತ ತಿರುಗಿ ನೋಡಿದ. ತಂಗಿ ಯಾವುದೋ ಅಂಗಡಿ ಮುಂದೆ ನಿಂತು ಏನನ್ನೋ ತದೇಕವಾಗಿ ನೋಡುತ್ತಿದ್ದಳು. ಆತ ಹಿಂದಕ್ಕೆ ಬಂದು ನೋಡಿದ. ಅದೊಂದು ಗೊಂಬೆಗಳ ಅಂಗಡಿ. ‘ನಿಂಗೇನು ಬೇಕು?’ ಎಂದು ಅಣ್ಣ ಕೇಳಿದ. ಆ ಪುಟ್ಟ ಹುಡುಗಿ ಅಂಗಡಿಯಲ್ಲಿದ್ದ ದೊಡ್ಡ ಗೊಂಬೆಯತ್ತ ಬೊಟ್ಟು ಮಾಡಿ ತೋರಿಸಿ ‘ಅದು ಬೇಕು’ ಎಂದಳು. ಹುಡುಗ ಒಬ್ಬ ಜವಾಬ್ದಾರಿಯುತ ದೊಡ್ಡಣ್ಣನಂತೆ ಆಕೆಯ ಕೈ ಹಿಡಿದುಕೊಂಡು ಅಂಗಡಿಯತ್ತ ನಡೆದು ಆ ಗೊಂಬೆಯನ್ನೆತ್ತಿ ಅವಳ ಕೈಯಲ್ಲಿಟ್ಟ. ಖುಷಿಗೆ ಆಕೆಯ ಕಣ್ಣುಗಳರಳಿದವು. ಅಂಗಡಿಯ ಮಾಲೀಕ ಇವೆಲ್ಲವನ್ನು ಅಚ್ಚರಿಯಿಂದ ನೋಡುತ್ತಿದ್ದ. ಆ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಮತ್ತು ಬಂಟರ ಸಂಘ ಸುರತ್ಕಲ್ ಇದರ ಸಂಯುಕ್ತ ಆಶ್ರಯದಲ್ಲಿ “ಎಸ್ಸೆಸ್ಸೆಲ್ಸಿ ನಂತರ ಮುಂದೇನು” ವಿಚಾರದ ಕುರಿತು ಮಾಹಿತಿ ಕಾರ್ಯಕ್ರಮ ಶನಿವಾರ ಸಂಜೆ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು, “ಈಗಿನ ಪಠ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 100 ಅಂಕ ಗಳಿಸುವುದು ಕಷ್ಟವಲ್ಲ, ಆದರೆ ಮುಂದೆ ಬರಲಿರುವ ಪಿಯು ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಅತ್ಯಮೂಲ್ಯವಾಗಿದೆ. ಎನ್ ಸಿ ಆರ್ ಸಿಲೆಬಸ್ ನಲ್ಲಿ ಎಷ್ಟು ಅಂಕ ಪಡೆದರೂ ಮೆಡಿಕಲ್, ಡೆಂಟಲ್ ಅಥವಾ ಬೇರೆ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ. ಮೆಡಿಕಲ್ ಸೀಟ್ ಪಡೆಯಬೇಕಾದರೆ ನೀಟ್ ನಂತಹ ಪೂರಕ ಪರೀಕ್ಷೆಗೆ ಹಾಜರಾಗಬೇಕು. ಮಕ್ಕಳಿಗೆ ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಒಂದನೇ ತರಗತಿಯಿಂದಲೇ ಪೂರಕ ಪರೀಕ್ಷೆ ತರಬೇತಿ ಆರಂಭವಾಗುತ್ತದೆ. ಇದು ಬೆಳೆಯುತ್ತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ನಮ್ಮ ಇಡೀ ದೇಶದಲ್ಲಿ ಇರುವುದು ಅಂದಾಜು ಎರಡೂವರೆ ಲಕ್ಷ ಸಿಎ, ಸಿಎಸ್…
ಕನ್ನಡ ವೆಲ್ಫೇರ್ ಸೊಸೈಟಿಯ ಜನಪ್ರಿಯತೆಯ ಹಿನ್ನಲೆಯಲ್ಲಿ ಸೊಸೈಟಿಯ ಮಹಿಳೆಯರ ಪಾತ್ರ ಮಹತ್ತರವಾಗಿದೆ. ನಮ್ಮ ಈ ಸಂಘದಲ್ಲಿ ಮಹಿಳೆಯರು ಎಲ್ಲಾ ಸಮಾಜಪರ ಸೇವಾ ಕಾರ್ಯಗಳಲ್ಲಿ ಸದಾ ಸಕ್ರಿಯವಾಗಿ ಕೆಲಸ ಮಾಡುವುದರಿಂದ ಸಂಸ್ಥೆಯು ಸದಾ ಕ್ರಿಯಾಶೀಲವಾಗಿರುವಂತಾಗಿದೆ. ನಮ್ಮ ಸಂಸ್ಥೆಯು ಮಹಿಳೆಯರ ಯಾವುದೇ ಕಾರ್ಯಕ್ರಮಕ್ಕೂ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಅವರ ಆತ್ಮ ವಿಶ್ವಾಸವು ಹೆಚ್ಚಿಸಬೇಕು ಎಂಬುದೇ ಕನ್ನಡ ವೆಲ್ಫೇರ್ ಸೊಸೈಟಿಯ ಉದ್ದೇಶವಾಗಿದೆ ಹಾಗೂ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ನ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ತಮ್ಮಅಭಿಮತವನ್ನು ವ್ಯಕ್ತಪಡಿಸಿದರು. ಅವರು ಮಾ.14ರ ಗುರುವಾರದಂದು ಸಂಜೆ ಘಾಟ್ಕೋಪರ್ ಪೂರ್ವದ ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗದ ಆಶ್ರಯದಲ್ಲಿ ಘಾಟ್ಕೋಪರ್ ಪೂರ್ವದಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿಯ ಮಹೇಶ್ ಎಸ್. ಶೆಟ್ಟಿ (ಬಾಬಾ ಗ್ರೂಪ್ ) ಆಡಿಟೋರಿಯಂನಲ್ಲಿ ಜರಗಿದ ಜಾಗತಿಕ ಮಹಿಳಾ ದಿನಾಚರಣೆಯ…















