Author: admin

ಬ್ರಹ್ಮಾವರ ಡಿ. 28: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ  ಡಿ. 28 ರಿಂದ 30 ರವರೆಗೆ ಮೂರು ದಿನಗಳ ಬೃಹತ್ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರು, ಲೇಖಕರು ಹಾಗೂ ಕಾದಂಬರಿಕಾರರಾದ ಶ್ರೀಮತಿ ಸೌಮ್ಯ ಪುತ್ರನ್‍ರವರು ರಿಬ್ಬನ್ ಕತ್ತರಿಸುವ ಮೂಲಕ ಪುಸ್ತಕ ಮೇಳವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾವು ಸ್ವತಂತ್ರವಾಗಿ ಬದುಕಲು ಮತ್ತು ಬದುಕುವ ದಾರಿಯನ್ನು ಕಂಡುಕೊಳ್ಳಲು ಶಿಕ್ಷಣ ಬೇಕು. ಉತ್ತಮವಾದ ಓದುವ ಹವ್ಯಾಸವನ್ನು ಇಟ್ಟುಕೊಂಡವರು ಮಾತ್ರ ಉತ್ತಮ ಲೇಖಕರಾಗಲು ಸಾಧ್ಯ. ಬರವಣಿಗೆಯ ಮೂಲಕ ಮನುಷ್ಯನ ಮನಸ್ಸಿನ ಭಾವನೆಯನ್ನು ಅಕ್ಷರಗಳ ಮೂಲಕ ಬಿತ್ತರಿಸಲು ಸಾಧ್ಯ. ಅದರ ಜೊತೆಗೆ ಪುಸ್ತಕಗಳನ್ನು ಓದುವುದರಿಂದ ನಮ್ಮಲ್ಲಿ ನಾವು ಧನಾತ್ಮಕ ಗುಣಗಳನ್ನು ಹೆಚ್ಚಿಸಿಕೊಳ್ಳಬಹುದು ಹಾಗಾಗಿ ಮೊಬೈಲ್‍ಗಳಿಗೆ ಮಾರುಹೋಗದೆ ಪುಸ್ತಕವನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಿ ಎಂದರು. ಹಾಗೆಯೆ ದಸರಾ ರಜೆಯಲ್ಲಿ ಜಿ ಎಮ್ ಶಾಲೆಯಲ್ಲಿ ಹಮ್ಮಿಕೊಂಡ “ಬುಕ್ ರಿವ್ಯೂ” ಬಗ್ಗೆ ಪ್ರಶಂಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಇಂದಿನ…

Read More

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗ ಮೂರನೇ ವರ್ಷದ ‘ದಿ ಎಂಪೋರಿ-ಯಂ 3’’ ಫುಡ್ ಫೆಸ್ಟ್‍ನ್ನು ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿಸಿಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಉಡುಪಿಯ ಉಜ್ವಲ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಪಿ ಶೆಟ್ಟಿ, ‘ಆಹಾರ ಉದ್ಯಮ ಇಂದು ಬಹು ಬೇಡಿಕೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಪ್ರತಿ ರಾಜ್ಯವು ತನ್ನ ವೈಶಿಷ್ಟ್ಯಪೂರ್ಣ ಆಹಾರ ಪದ್ಧತಿಯಿಂದ ಜನರನ್ನು ಸೆಳೆಯುತ್ತಿದೆ. ನಮ್ಮ ಕರಾವಳಿಯಲ್ಲೂ ವಿವಿಧ ಬಗೆಯ ಆಹಾರ ಪದ್ಧತಿಯನ್ನು ಕಾಣಬಹುದು. ಆಹಾರ ಉದ್ಯಮದಲ್ಲಿ ತೊಡಗಿರುವ ಹೋಟೇಲ್‍ಗಳು ಆ ನೆಲೆದ ಸಂಸ್ಕøತಿಯನ್ನು ಬಿಂಬಿಸುವ ವಾತಾವರಣವನ್ನು ಹೋಟೇಲ್‍ಗಳಲ್ಲಿ ನಿರ್ಮಿಸಲು ಒತ್ತು ನೀಡಬೇಕು. ಜನರು ಆಕರ್ಷಿತರಾಗುವಂತೆ ಉದ್ಯಮವನ್ನು ಬೆಳೆಸಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಈ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು, ಉತ್ತಮ ರೀತಿಯ ಸೇವೆಯನ್ನು ನೀಡಿದರೆ ಅತ್ಯಂತ ಲಾಭಾದಾಯಕ ವ್ಯಾವಹಾರವಾಗಿದೆ ಎಂದರು. ಈ ಆಹಾರ ಮೇಳದಲ್ಲಿ ಬಂದ ಲಾಭಂಶದಲ್ಲಿ ಒಂದು ಭಾಗವನ್ನು ಸಾಮಾಜಿಕ ಕಾರಣಕ್ಕೆ ಬಳಸಲಾಗುವುದು…

Read More

ಸಂಪ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ, ಆರ್ಯಾಪು ಗ್ರಾಮದ ಸಂಪ್ಯ ಕಂಬಳತ್ತಡ್ಡ ನಿವಾಸಿ ಸೀತಾರಾಮ ಶೆಟ್ಟಿ (47) ಆ.23ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ನೈತ್ತಾಡಿಯ ಕಲ್ಲಗುಡ್ಡೆಯಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ ಅನ್ನು ಲೀಸ್‌ ಆಧಾರದಲ್ಲಿ ನಡೆಸುತ್ತಿದ್ದ ಸೀತಾರಾಮ ಶೆಟ್ಟಿ ಅವರು ಬುಧವಾರ ಬೆಳಗ್ಗೆ ರೆಸ್ಟೋರೆಂಟ್‌ಗೆ ಬಂದಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ತತ್‌ಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಪುತ್ತೂರು ಯುವ ಬಂಟರ ಸಂಘದ ಅಧ್ಯಕ್ಷರಾಗಿ, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷರಾಗಿದ್ದ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

Read More

ಗುರುಪ್ರಸಾದ್ ಹೆಗ್ಡೆ ನಮ್ಮವರು, ನಮ್ಮೂರಿನವರು. ರಂಗಭೂಮಿ, ಸಿನಿಮಾದ ಬಗ್ಗೆ ಆಸಕ್ತಿ ಬೆಳೆಸಿ ಪಡುಬಿದ್ರೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಗುರು ಹೆಗ್ಡೆಯಾಗಿ ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸು ಗಳಿಸುತ್ತಾರೆ. ಯಾವುದೇ ಪಾತ್ರಕ್ಕೂ ಜೀವ ತುಂಬುವ ಕಲಾವಿದರಾಗಿ ಬೆಳೆಯುತ್ತಾರೆ. ಈಗ ನಟನಿಂದ ಸಿನಿಮಾ ನಿರ್ಮಾಣಕ್ಕೆ ಭಡ್ತಿ ಪಡೆದಿದ್ದಾರೆ. ಮುಂದೊಂದು ದಿನ ನಿರ್ದೇಶಕನಾಗಿ ಬೆಳೆಯಬೇಕು ಎಂಬ ಹಂಬಲ, ತುಡಿತವೂ ಇದೆ. ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿಯವರೊಂದಿಗೆ ಅಮರ್ಥ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ. ಗುರು ಹೆಗ್ಡೆ- ಇವರದ್ದು ಕನ್ನಡ ಧಾರಾವಾಹಿ ಹಾಗೂ ಸಿನೆಮಾ ರಂಗದಲ್ಲಿ ಪರಿಚಿತ ಹೆಸರು. ಪಡುಬಿದ್ರಿ ಮೂಲದ ಗುರುಪ್ರಸಾದ್‌ ಹೆಗ್ಡೆ ಅವರು ಸಿನಿಮಾ ರಂಗಕ್ಕೆ ಸೇರಿದ ಬಳಿಕ ಹೆಸರನ್ನು ಗುರು ಹೆಗ್ಡೆ ಎಂದು ಬದಲಾಯಿಸಿಕೊಂಡರು. ಅವರ ಪರಿಶ್ರಮ, ನಟನಾ ಕೌಶಲ ಹಾಗೂ ಅದೃಷ್ಟದಿಂದಾಗಿ ಯಶಸ್ಸು ಕೈ ಹಿಡಿಯಿತು. ಈಗ ಇವರು ಸಿನಿಮಾ ನಿರ್ಮಾಪಕರಾಗಲು ಮುಂದಾಗಿದ್ದು, ಮುಂಬಯಿಯ ಖ್ಯಾತ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರ…

Read More

ಹೂಡಿಕೆಯ ಬಗೆಗಿನ ಜಾಗೃತಿ ಯಶಸ್ವಿ ಜೀವನದ ಪ್ರಮುಖ ಅಂಗ. ಸಕಾಲದಲ್ಲಿ ತೆಗೆದುಕೊಳ್ಳುವ ಹೂಡಿಕೆಯ ನಿರ್ಧಾರಗಳು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಮಯವೇ ಹಣವಿದ್ದಂತೆ, ನಮ್ಮಲ್ಲಿನ ಉಳಿತಾಯ ಸರಿಯಾದ ಸಮಯದೊಂದಿಗೆ ನಷ್ಟ ಅನಿಶ್ಚಿತತೆಯನ್ನು ಎದಿರಿಸುವ ಮನೋಭಾವದೊಂದಿಗೆ ವಿವಿಧ ಹೂಡಿಕೆಗಳ ಆಳವಾದ ಅರಿವಿನೊಂದಿಗೆ ತೊಡಗಿದರೆ ಒಬ್ಬ ವ್ಯಕ್ತಿ ಶಕ್ತಿಯಾಗಿ ಬದಲಾಗಲು ಸಾಧ್ಯ ಎಂದು ಪ್ರೊ ಸುರೇಶ್ ರೈ ಕೆ ನುಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಶಾಸ್ತ್ರ ಶಿಕ್ಷಕರ ಸಂಘ (ಮುಕ್ತ) ಸಹಯೋಗದಲ್ಲಿ ಏರ್ಪಡಿಸಿದ “ಹೂಡಿಕೆದಾರರ ಜಾಗೃತಿಯ ಒಂದು ದಿನದ ಕಾರ್ಯಕ್ರಮ” ಉದ್ಘಾಟಿಸಿ ಪ್ರೊ ಸುರೇಶ್ ರೈ ಕೆ ಮಾತನಾಡಿದರು. ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಬಿಂದು ಟಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿ, ಪ್ರಸ್ತಾವಿಕ ಮಾತುಗಳನ್ನಾಡಿ ಗಣ್ಯರನ್ನು ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರಘು…

Read More

ಸಜ್ಜನ ಪ್ರಾಮಾಣಿಕ ರಾಜಕಾರಣಿಯಾದ ಕಾಂಗ್ರೆಸ್ ಪಕ್ಷವನ್ನು ಮುನ್ನೆಡಿಸಿ ಕಾರ್ಕಳ ಜನರ ಮನಸ್ಸಿನಲ್ಲಿ ಉಳಿದ ಧೀಮಂತ ನಾಯಕ ದಿ.ಗೋಪಾಲ ಭಂಡಾರಿಯವರ ಪ್ರತಿಮೆ ನಿರ್ಮಾಣಕ್ಕೆ ನನ್ನ ಮೊದಲ ಆದ್ಯತೆ ಎಂದು ಕಾರ್ಕಳ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು. ಅವರು ಎ.18 ರಂದು ಹೆಬ್ರಿ ಮೇಲ್ಪೇಟೆ ದಿ.ಪ್ರಸನ್ನ ಬಲ್ಲಾಳ ಅವರ ನಿವಾಸದಲ್ಲಿ ಆರಂಭಗೊಂಡ ಚುನಾವಣಾ ಪ್ರಚಾರ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ಆಡಂಬರ ಇಲ್ಲ ಅಬ್ಬರದ ಪ್ರಚಾರ, ಸದ್ದು ಗದ್ದಲದಿಂದ ಮಾತ್ರ ಅಭಿವೃದ್ಧಿಯಲ್ಲ. ಸತ್ಯ ಧಮ೯, ಪ್ರಮಾಣಿಕತೆ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವುದು ಮುಖ್ಯ.ಈ ಬಾರಿ ಕಾರ್ಕಳ ಜನ ಬದಲಾವಣೆ ಬಯಸಿದ್ದಾರೆ ಎನ್ನುವುದು ಜನಬೆಂಬಲದಿಂದ ಗೊತ್ತಾಗುತ್ತಿದೆ. ಒಂದು ಬಾರಿ ಅವಕಾಶ ಕೊಡಿ. ಅಭಿವೃದ್ಧಿ ಏನು ಎಂಬುವುದನ್ನ ಮಾಡಿ ತೋರಿಸುತ್ತೇನೆ. ಈಗಾಗಲೇ ನಿಮ್ಮೆಲ್ಲ ಆಶೀರ್ವಾದ ಹಾಗೂ ಕಾರ್ಕಳ ಕಾಂಗ್ರೆಸ್ ನ ಹಿರಿಯರ ಮಾರ್ಗದರ್ಶನದಲ್ಲಿ ಯಾವುದು ಆಡಂಬರವಿಲ್ಲದೆ ನಾಮಪತ್ರ ಸಲ್ಲಿಸಿದ್ದೇನೆ ಎಂದರು. ಸತ್ಯ ಧರ್ಮದ ಮತಯಾಚನೆ :…

Read More

ಮಂಗಳೂರು ಹೊರವಲಯದ ದೇರಳಕಟ್ಟೆಯ ಎ. ಬಿ. ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಿರೀಕ್ಷಾ ಶೆಟ್ಟಿ ಅವರು ಸಲ್ಲಿಸಿದ ಮಹಾ ಪ್ರಬಂಧಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿದೆ. ಡಾ. ನಿರೀಕ್ಷಾ ಶೆಟ್ಟಿ ಅವರು ಎ. ಬಿ. ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನ ವೈಸ್ ಪ್ರಿನ್ಸಿಪಾಲ್ ಡಾ. ಮಿತ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ‘ಅಸೋಸಿಯೇಷನ್ ಆಫ್ ವಿಟಮಿನ್ ಡಿ ರಿಸೆಪ್ಟರ್ ಜೀನ್ ಪಾಲಿ ಮಾರ್ಪಿಸಮ್ ಆಂಡ್ ಆಂಟಿಮೈಕ್ರೋಬಿಯಲ್ ಪೆಪೈಡ್ ಎಲ್ ಎಲ್ -37 ಇನ್ ಡೆಂಟಲ್ ಕೇರೀಸ್’ ಎನ್ನುವ ಮಹಾಪ್ರಬಂಧವನ್ನು ಮಂಡಿಸಿದ್ದರು. ಇದಕ್ಕೆ ಮಾನ್ಯತೆ ನೀಡಿರುವ ನಿಟ್ಟೆ ವಿಶ್ವವಿದ್ಯಾನಿಲಯವು ಎ.15 ರಂದು ಪಿ ಎಚ್ ಡಿ ಪದವಿ ನೀಡಿದೆ. ಡಾ. ನೀರಿಕ್ಷಾ ಶೆಟ್ಟಿ ಅವರು 2018ರಿಂದ ಎ. ಬಿ. ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಬಿ. ಡಿಎಸ್ ಮತ್ತು ಎಂ.…

Read More

ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು, ನಿಸ್ವಾರ್ಥ ಸಮಾಜಸೇವೆ ಮೂಲಕ ಜನಮನ ಗೆದ್ದಿರುವ ಉದ್ಯಮಿಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಮಾಲಕರಾಗಿರುವ ಚೇತನ್‌ಕುಮಾರ್ ಶೆಟ್ಟಿಯವರು ಪ್ರಮುಖರಾಗಿದ್ದಾರೆಂಬುವುದು ಸಮಸ್ತ ಬಂಟ ಸಮಾಜಕ್ಕೆ ಸಂತಸದ ಸಂಗತಿ. ಎಚ್. ದಯಾನಂದ ಶೆಟ್ಟಿ ಮತ್ತು ನಾಗರತ್ನ ಡಿ. ಶೆಟ್ಟಿ ದಂಪತಿಗಳ ಸುಪುತ್ರರಾಗಿರುವ ಚೇತನ್‌ಕುಮಾರ್ ಶೆಟ್ಟಿಯವರು ಹೇರೂರಿನ ಎಚ್.ಪಿ. ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಕಲಿತರು. ಬ್ರಹ್ಮಾವರದ ಹಂಗಾರಕಟ್ಟೆ ಚೇತನಾ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಓದಿದರು. ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದರು. ಕಾಲೇಜ್ ದಿನಗಳಲ್ಲೇ ನಾಯಕತ್ವದ ಗುಣಗಳನ್ನು ಹೊಂದಿದ್ದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಪ್ರತಿನಿಧಿ ಕೂಡಾ ಆಗಿದ್ದರು. ಇವರ ಅಣ್ಣ ಜೀವನ್‌ಕುಮಾರ್ ಶೆಟ್ಟಿಯವರು ಉಡುಪಿಯಲ್ಲಿ ಚಾಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಬ್ರಹ್ಮಾವರದಲ್ಲಿ ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮೂಲಕ ಉತ್ತಮ ಗುಣಮಟ್ಟದ ವಸತಿ ಸಮುಚ್ಚಯ ಹಾಗೂ ಇದರ ನಿರ್ಮಾಣ ಗುತ್ತಿಗೆದಾರರಾಗಿ ಗುರುತಿಸಿಕೊಂಡಿರುವ ಚೇತನ್‌ಕುಮಾರ್ ಶೆಟ್ಟಿಯವರು ಸರಳ ಸಜ್ಜನಿಕೆ,…

Read More

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿರುವ ಆಳ್ವಾಸ್ ಶಿಕ್ಷಣ ಫೌಂಡೇಷನ್ (ಎಇಎಫ್) ಕ್ಯಾಂಪಸ್‌ನಲ್ಲಿ ಡಿಸೆಂಬರ್‌ 21 ರಿಂದ 27 ವರೆಗೆ ಭಾರತದ ಮೊದಲ ಅಂತಾರಾಷ್ಟ್ರೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಜಾಂಬೂರಿ ನಡೆಯಲಿದೆ. ಈ ಜಾಂಬೂರಿಯಲ್ಲಿ 50,000 ಸ್ಕೌಟ್ಸ್ ಹಾಗೂ ಗೈಡ್ ಗಳು ಸೇರಿದಂತೆ ಒಟ್ಟು 63,000 ಮಂದಿ ಭಾಗವಹಿಸಲಿದ್ದಾರೆ. 10 ದೇಶಗಳಿಂದ 10,000 ಮಂದಿ ತರಬೇತಿ ನೀಡುವವರು ಹಾಗೂ 3,000 ಮಂದಿ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇದೇ ಮೊದಲು ಎನ್ನಲಾಗಿದೆ. ಈ ಕಾರ್ಯಕ್ರಮದ ಕುರಿತು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. “ಈ ಜಾಂಬೂರಿಯಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಮೇಳಗಳು ಇರಲಿವೆ. ಕೃಷಿ ಮೇಳ, ವಿಜ್ಞಾನ ಮೇಳ, ಆಹಾರ ಮೇಳ ಸೇರಿದಂತೆ ವಿವಿಧ ಮೇಳಗಳು ಇರಲಿವೆ. ಸುಮಾರು ಏಳು ಎಕರೆ ಪ್ರದೇಶದಲ್ಲಿ ಈ ಮೇಳ ನಡೆಯಲಿದೆ. 42 ಬಗೆಯ ಸಾಹಸ ಕಸರತ್ತುಗಳು ಇರಲಿವೆ. ತೋಟಗಾರಿಕಾ…

Read More

ಮಂಗಳೂರು: ಮ್ಯಾಕ್ಸ್ ಕ್ರಿಯೇಷನ್ ಲಾಂಛನದಲ್ಲಿ “ಪ್ರೊಡಕ್ಷನ್ ನಂಬರ್ 1” ಚಿತ್ರಕ್ಕೆ ಮುಹೂರ್ತ ಸಮಾರಂಭವು ಹರೇಕಳ ಸಂಪಿಗೆದಡಿ ಅರ್ಧನಾರೀಶ್ವರ ದೇವಸ್ಥಾನದಲ್ಲಿ ನೆರವೇರಿತು. ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಚಿತ್ರಕ್ಕೆ ಕ್ಲಾಫ್ ಮಾಡಿದರು. ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಕೆಮರಾ ಚಾಲನೆ ಮಾಡಿದರು. ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಸ್ವರಾಜ್ ಶೆಟ್ಟಿ ಉತ್ತಮ ಕಲಾವಿದ. ಮೊದಲ ಬಾರಿ ಕಥೆ ಚಿತ್ರಕತೆ ನಿರ್ದೇಶನದ ಜವಾಬ್ದಾರಿಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ನಮ್ಮ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ” ಎಂದರು. ಬಳಿಕ ಮಾತಾಡಿದ ಪ್ರಕಾಶ್ ಪಾಂಡೇಶ್ವರ್ ಅವರು, “ಸ್ವರಾಜ್ ಅನ್ನುವ ಪ್ರತಿಭೆ ಪೂರ್ಣ ಪ್ರಮಾಣದಲ್ಲಿ ಈ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ್ದಾರೆ. ಅವರಿಗೆ ಶುಭ ಹಾರೈಕೆಗಳು” ಎಂದರು. ಚಿತ್ರದ ನಿರ್ಮಾಪಕ ಭಾಗ್ಯರಾಜ್ ಶೆಟ್ಟಿ ಮಾತನಾಡಿ, “ಕನ್ನಡಿಗರು ಸಹಕಾರ ನೀಡಬೇಕು. ಚಿತ್ರದ ಕಥೆ ಸೊಗಸಾಗಿದ್ದು ತುಳುನಾಡಿನ ಹಲವಾರು ಕಲಾವಿದರು ಬಣ್ಣ ಹಚ್ಚಲಿದ್ದಾರೆ” ಎಂದರು. ಚಿತ್ರ…

Read More