Author: admin

ಬೆಳಗ್ಗಿನ ತಿಂಡಿ ಮಾಡುವುದು ಎಲ್ಲರಿಗೂ ಒಂದು ಟಾಸ್ಕ್. ಪ್ರತಿ ಬಾರಿ ನೀವು ಡಿಫರೆಂಟ್ ಆಗಿ ಏನಾದರೂ ಟ್ರೈ ಮಾಡಬೇಕು ಎಂದುಕೊಂಡರೆ ಇಲ್ಲಿದೆ ಒಂದು ಹೊಸ ರುಚಿ. ನೀವು ಸಾಮಾನ್ಯವಾಗಿ ಇಡ್ಲಿ ಮಾಡುವಾಗ ಒಂದು ಹೆಚ್ಚಿನ ಸಾಮಾಗ್ರಿಯನ್ನು ಹಾಕಿದರೆ ಇಡ್ಲಿಯ ಸ್ವಾದವನ್ನೇ ಬದಲಿಸಬಹುದು. ಹೌದು ನೀವೊಮ್ಮೆ ಸಬ್ಬಕ್ಕಿ ಇಡ್ಲಿ (Sago Idli) ಮಾಡಿ ಡಿಫರೆಂಟ್ ರುಚಿಯನ್ನು ಆನಂದಿಸಿ. ಬೇಕಾಗುವ ಪದಾರ್ಥಗಳು: ಇಡ್ಲಿ ರವೆ/ ಅಕ್ಕಿ ರವೆ – 1 ಕಪ್ ಸಬ್ಬಕ್ಕಿ – ಮುಕ್ಕಾಲು ಕಪ್ ಹುಳಿ ಮೊಸರು – ಒಂದೂವರೆ ಕಪ್ ನೀರು – 1 ಕಪ್ ತುರಿದ ತೆಂಗಿನಕಾಯಿ – ಕಾಲು ಕಪ್ ಅಡುಗೆ ಸೋಡಾ – ಕಾಲು ಟೀಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ಒಗ್ಗರಣೆಗೆ: ಸಾಸಿವೆ – ಅರ್ಧ ಟೀಸ್ಪೂನ್ ಮುರಿದ ಗೋಡಂಬಿ – 10 ಹಸಿರು ಮೆಣಸಿನಕಾಯಿ – 2 ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ…

Read More

ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯಿಂದ ಆಗಸ್ಟ್ 15 ರಂದು ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದಲ್ಲಿ ಸಂಜೆ ಅಜೆಕಾರು ಕಲಾಭಿಮಾನ ಬಳಗ ಮುಂಬಯಿ ಇವರ ತವರೂರ ನಾಮಾಂಕಿತ ಕಲಾವಿದರ ಕೂಡುವಿಕೆಯಲ್ಲಿ “ನಳ ದಮಯಂತಿ” (ತುಳು) – “ಶ್ರೀರಾಮ ದರ್ಶನ” (ಕನ್ನಡ) ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ನಿಟ್ಟೆ ಎಂಜಿ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಮುಂಬಯಿ ಬಂಟರ ಸಂಘದ ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್ ಪಯ್ಯಡೆ, ಹಿರಿಯ ಹೋಟೆಲ್ ಉದ್ಯಮಿ ಕೃಷ್ಣ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಎಸ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಕೆ ಪ್ರೇಮನಾಥ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ, ಜೊತೆ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ, ಜೊತೆ ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ, ಹಿರಿಯ ಸಲಹೆಗಾರ ಮನೋಹರ ಎನ್. ಶೆಟ್ಟಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜ ಎ ಶೆಟ್ಟಿ,…

Read More

ತಾ 23.07.2023 ರಂದು ಸಾಂತಕ್ರೂಸ್ ಪೇಜಾವರ ಮಠದಲ್ಲಿ ಜರುಗಿದ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಅವರ ಕಲಾಜಗತ್ತು ಬಳಗದ ವತಿಯಿಂದ ನಡೆದ ಆಟಿಯ ಗೌಜಿ, ಗಮ್ಮತ್ತು ಕಾರ್ಯಕ್ರಮವು ನೆರೆದವರ ಮನಸೂರೆಗೊಂಡಿತು ಎಂಬುದಕ್ಕೆ ನಿರಂತರ ಕರತಾಡನವೇ ಸಾಕ್ಷಿಯಾಗಿತ್ತು. ಕಾರ್ಯಕ್ರಮದ ಚಾಲನೆಯೇ ಒಂದು ವಿನೂತನ ಕಲ್ಪನೆಯಾಗಿತ್ತು. ನಮ್ಮ ತುಳುನಾಡಿನ ಎಲ್ಲಾ ಬಗೆಯ ತರಕಾರಿಗಳನ್ನು ವೇದಿಕೆ ಮೇಲೆ ತಂದು ಅವುಗಳನ್ನು, ಅದರಲ್ಲೂ ದೊಡ್ಡ ಹಲಸಿನ ಹಣ್ಣನ್ನು ಕೊಯ್ದು ಕಾರ್ಯಕ್ರಮ ಶುರು ಮಾಡಿದ್ದು ಒಂದು ವಿನೂತನ ಪ್ರಯೋಗವಾಗಿತ್ತು. ಬಹುಷಃ ಇಂತಹ ಆಲೋಚನೆಗಳು ವಿಜಯ್ ಕುಮಾರ್ ಶೆಟ್ಟಿಯಂತವರಿಗೆ ಮಾತ್ರ ಮಾಡಲು ಸಾಧ್ಯ. ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ, ಸುವಾಸನೆ ಭರಿತ, ದೇಹಕ್ಕೆ ಅಗತ್ಯವಾದ ಎಲ್ಲಾ ಬಗೆಯ ಶಕ್ತಿಗಳನ್ನು ನೀಡುವ ತರಕಾರಿಗಳನ್ನು ಒಟ್ಟು ಮಾಡಿ ಅದನ್ನು ಅಲ್ಲಿಯೇ ಶುಚಿ ಮಾಡಿ, ಅಡುಗೆ ತಯಾರಿಸಿ ಅದನ್ನು ಅಥಿತಿ, ಅಭ್ಯಗತರಿಗೆ ಉಣ ಬಡಿಸಿದ ಪರಿ ಸಾಮಾನ್ಯರ ಕಲ್ಪನೆಗೆ ಮೀರಿದ್ದಾಗಿತ್ತು. ಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ಈ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಕಲಾಜಗತ್ತು ಹಾಗೂ…

Read More

ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜೂನ್ 18 ರಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದ್ದು ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಜೂ. 8 ರಂದು ಜರಗಿತು. ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ‘ಸಹಕಾರ ರತ್ನ ‘ ಸವಣೂರು ಕೆ. ಸೀತಾರಾಮ ರೈ ಯವರು ಆಮಂತ್ರಣ ಪತ್ರವನ್ನು ಅನಾವರಣಗೊಳಿಸಿದ್ದು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆ ಗುತ್ತು, ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಮಾತೃ ಸಂಘದ ನೀರ್ದೇಶಕರುಗಳಾದ…

Read More

“ನಂಬಿಕೆ ವಿಶ್ವಾಸ ಬಲ ನಮ್ಮಲ್ಲಿದ್ದರೆ ಬದುಕು ಚೆನ್ನಾಗಿ ಸಾಗುತ್ತದೆ. ನಂಬಿಕೆ ಬೇಕು ಆದರೆ ಮೂಢನಂಬಿಕೆ ಬೇಡ. ತುಳುನಾಡಿನ ಮಣ್ಣಿನಲ್ಲಿ ನಾಗದೇವರ ಇರುವಿಕೆ ಬಗ್ಗೆ ನಂಬಿಕೆ ಮಣ್ಣಲ್ಲಿ ಬೆರೆತುಹೋಗಿದ್ದು ಬಾಳ ತೊತ್ತಾಡಿಯಂತಹ ಧಾರ್ಮಿಕ ಕೇಂದ್ರಗಳು ಪುನರುಜ್ಜೀವನಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ” ಎಂದು ಒಡಿಯೂರು ಶ್ರೀ ದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬಾಳ ತೊತ್ತಾಡಿ ನಾಗಬ್ರಹ್ಮ ಸ್ಥಾನದಲ್ಲಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು. “ಕಡಲಿಗೆ ಕಸ ತ್ಯಾಜ್ಯ ಎಸೆದರೆ ವಾಪಾಸ್ ಬರುತ್ತದೆ, ಅದೇ ಚಿನ್ನ ಎಸೆದರೆ ಬರುವುದಿಲ್ಲ ಯಾಕೆಂದರೆ ಒಳ್ಳೆಯದನ್ನು ಕಡಲು ಸ್ವೀಕರಿಸುತ್ತದೆ. ನಮ್ಮ ಜೀವನ ಕೂಡ ಹಾಗೆ ನಮಗೆ ಬೇಕಾದ್ದನ್ನು ಮಾತ್ರ ಸ್ವೀಕರಿಸಿ ಬೇಡವಾದ್ದನ್ನು ತಿರಸ್ಕರಿಸಬೇಕು” ಎಂದರು. ವೇದಿಕೆಯಲ್ಲಿ ಮುಂಬೈ ಸಮಿತಿ ಅಧ್ಯಕ್ಷರು ಕುಶಾಲ್ ಭಂಡಾರಿ ಐಕಳ ಬಾವ, ಬ್ರಹ್ಮಶ್ರೀ ಪಾಂಗಾಳ ಅನಂತ ಪದ್ಮನಾಭ ತಂತ್ರಿಗಳು, ಉದ್ಯಮಿ ಜೆ.ಡಿ ವೀರಪ್ಪ, ಡಾ| ರೋಹಿತ್, ರವೀಂದ್ರನಾಥ ಜಿ. ಶೆಟ್ಟಿ, ಕಳತ್ತೂರು, ಮುಂಬೈ ಸಮಿತಿ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್…

Read More

ಘಮಘಮ ಪರಿಮಳ ಬೀರುವ ಗುಲ್ವಾಡಿ ಸಣ್ಣಕ್ಕಿಯ ಅನ್ನವನ್ನು ಯಾರೆಲ್ಲಾ ಉಂಡಿದ್ದೀರಿ? ಊಟ ಮಾಡಿದವರಿಗಷ್ಟೇ ಗೊತ್ತು ಅದರ ರುಚಿ ಹಾಗೂ ಸುವಾಸನೆ. ಕರಾವಳಿಯ ನೆಲದಲ್ಲಿ ಅತ್ಯಂತ ವಿಶಿಷ್ಟವಾಗಿ ಬೆಳೆಯುತ್ತಿದ್ದ ಸುವಾಸನೆಯೇ ಪ್ರಧಾನವಾದ ಗುಲ್ವಾಡಿ ಸಣ್ಣಕ್ಕಿ ಭತ್ತದ ಬೇಸಾಯ ಈಗ ಇತಿಹಾಸದ ಪುಟ ಸೇರಿದೆ. ಕಲೆ, ಸಾಹಿತ್ಯ, ಕೃಷಿ ಸಂಸ್ಕೃತಿಯ ತವರೂರೆಂದೇ ಖ್ಯಾತಿ ಪಡೆದ ಗುಲ್ವಾಡಿ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಕರ್ನಾಟಕಕ್ಕೆ ಪ್ರಸಿದ್ಧಿ ತಂದುಕೊಟ್ಟ ಮೊಟ್ಟಮೊದಲ ಪ್ರತಿಷ್ಠಿತ ಸಾಮಾಜಿಕ ಕಾದಂಬರಿ “ಇಂದಿರಾ ಬಾಯಿ”ಯ ಕಾದಂಬರಿಕರ್ತ ಗುಲ್ವಾಡಿ ವೆಂಕಟರಾಯರು, ತರಂಗ ಸಂಪಾದಕ ಹಾಗೂ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರ ಕೌಟುಂಬಿಕ ನೆಲೆಯೂ ಆಗಿದೆ. ಈ ಗುಲ್ವಾಡಿಯ ದಾಸರಬೆಟ್ಟು ಎಂಬ ಪ್ರದೇಶದ ಮಣ್ಣಿನಲ್ಲಿ ಮಾತ್ರ ಹಿಂದೆ ಅತ್ಯಂತ ಪರಿಮಳ ಭರಿತ ಈ ಸಣ್ಣಕ್ಕಿಯ ಭತ್ತ ಸೊಗಸಾಗಿ ಬೆಳೆಯುತ್ತಿತ್ತು. ಅವರ ಗದ್ದೆಬಯಲಿಗೆ ತಾಗಿಕೊಂಡಂತೆಯೇ ಇದ್ದಂಥ ನಮ್ಮ ಕರ್ಕಿ ಬೈಲಿನಲ್ಲೂ ಕೂಡಾ ನಮ್ಮ ತಂದೆ ಬಿ. ರಾಮಣ್ಣ ಹೆಗ್ಡೆಯವರು ಸುಮಾರು ವರ್ಷಗಳ ಕಾಲ ಗುಲ್ವಾಡಿ ಸಣ್ಣಕ್ಕಿ…

Read More

ದೈವ, ದೇವರ ಬಗ್ಗೆ ನಂಬಿಕೆ ಇದ್ದರೆ ಧರ್ಮ ಉಳಿಯುತ್ತದೆ. ಬದುಕು ಉತ್ತಮವಾಗಿ ನಡೆಯಲು ದೈವ, ದೇವರ ಬಗ್ಗೆ ನಂಬಿಕೆ ಮುಖ್ಯ ಎಂದು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ 150 ವರ್ಷ ಪ್ರಯುಕ್ತ ಮಾ. 7ರ ವರೆಗೆ ನಡೆಯಲಿರುವ “ಕಂಕನಾಡಿ ಗರಡಿ 150-ನಮ್ಮೂರ ಸಂಭ್ರಮ’ ಸೋಮವಾರದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ತನ್ನ ಬದುಕಿನ ಉದ್ಧಾರದಂತೆಯೇ ಇನ್ನೊಬ್ಬರ ಬದುಕಿನ ಬಗ್ಗೆಯೂ ಕಾಳಜಿ ಹೊಂದುವುದು ಧರ್ಮ. ನಮ್ಮ ಬದುಕಿನ ನಿಯಂತ್ರಣಕ್ಕೆ ಧರ್ಮದ ಅಗತ್ಯವಿದೆ. ಧರ್ಮದ ಹಿಂದೆ ದೈವ, ದೇವರ ಬಗ್ಗೆ ನಂಬಿಕೆ ಇರಬೇಕು ಎಂದರು. ದೀಪ ಪ್ರಜ್ವಲನೆಗೈದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೆಟ್ಟಿ ಮಾತನಾಡಿ, ಕಂಕನಾಡ ಗರಡಿ ಕಾರಣಿಕ, ಪ್ರಸಿದ್ಧ ಕ್ಷೇತ್ರವಾಗಿದೆ. 150 ವರ್ಷಗಳ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು. ಬಹುಭಾಷಾ ಚಲನಚಿತ್ರ ನಟ ಸುಮನ್‌ ತಲ್ವಾರ್‌ ಮಾತನಾಡಿ, ದೇವರು, ದೈವದ ಶಕ್ತಿ ಇಲ್ಲದೆ ಸಾಧನೆ ಸಾಧ್ಯವಿಲ್ಲ.…

Read More

ಸಶಸ್ತ್ರ ಸೀಮಾಬಲ್‌ನಲ್ಲಿ ಭೋಪಾಲ್‌ನಲ್ಲಿ ಸೇವಾ ನಿರತರಾಗಿದ್ದ ಮಂಗಳೂರು ಶಕ್ತಿನಗರದ ನಿವಾಸಿ ಹವಾಲ್ದಾರ್‌ ಮುರಳೀಧರ್‌ ರೈ (37) ಅವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರವಿವಾರ ಭೋಪಾಲ್‌ನಲ್ಲಿ ಮಲಗಿದಲ್ಲೇ ಅವರಿಗೆ ಹೃದಯಾಘಾತವಾಗಿದ್ದು, ಸೋಮವಾರ ಬೆಳಗ್ಗೆ ಜತೆಗಿದ್ದವರು ಕರೆದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಊರಿಗೆ ಬರುವವರಿದ್ದರು ಮುರಳೀಧರ್‌ ರೈ ಅವರು 2007ರಲ್ಲಿ ಕಾನ್‌ಸ್ಟೆಬಲ್‌ ಆಗಿ ಸಶಸ್ತ್ರ ಸೀಮಾ ಬಲ್‌ಗೆ ಸೇರಿದ್ದರು. ರವಿವಾರ ರಾತ್ರಿ ವೀಡಿಯೋ ಕಾಲ್‌ ಮೂಲಕ ಪತ್ನಿ ಜತೆ ಮಾತನಾಡಿದ್ದರು. ಫೆ. 5ರಂದು ನಡೆಯಲಿದ್ದ ತಾಯಿಯ ನಿಧನದ ಮೊದಲ ವರ್ಷದ ಕಾರ್ಯಕ್ರಮಕ್ಕಾಗಿ ಎರಡು ವಾರದ ರಜೆಯಲ್ಲಿ ಮಂಗಳವಾರ ಹೊರಟು ಬುಧವಾರ ಊರಿಗೆ ಬರುವವರಿದ್ದರು. ಅವರು ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರ ಭೋಪಾಲ್‌ನಿಂದ ವಿಮಾನದ ಮೂಲಕ ಮುರಳೀಧರ್ ಅವರ ಮೃತದೇಹವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. ಡಿಸಿ ರವಿ ಕುಮಾರ್‌ ಎಂ.ಆರ್‌., ಜಿ.ಪಂ. ಸಿಇಒ ಡಾ| ಕುಮಾರ್‌, ಸಹಾಯಕ ಆಯುಕ್ತ ಮದನ್‌ ಮೋಹನ್‌…

Read More

ನಾನು ನನ್ನದು ಎಂಬ ಸ್ವಾರ್ಥವಿಲ್ಲದೇ ನಾವು ನಮ್ಮದು ಎಂಬ ಭಾವನೆ ಮೂಡಿಸುವ ಸಂಸ್ಥೆ ಚಿಣ್ಣರಬಿಂಬ- ಶೇಖರ್ ಪೂಜಾರಿ ಮುಂಬಯಿ:- ಇನ್ನು ಮುಂದೆ ಚಿಣ್ಣರ ಬಿಂಬದ ಬಳಗದಲ್ಲಿ ನಾವೂ ಇರುತ್ತೇವೆ, ನಾವೂ ಕೂಡಾ ಚಿಣ್ಣರ ಬಿಂಬದ ಕುಟುಂಬದಂತೆ ನಾವೂ‌ ನಿಮ್ಮ ಜೊತೆಗೆ ಇರುತ್ತೇವೆ. ಚಿಣ್ಣರ ಬಿಂಬ ಇದರ 2023-2024ನೇ ಸಾಲಿನ ಸಾಕಿನಾಕ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವು    ಸೆಪ್ಟೆಂಬರ್ 3 ರಂದು ಭಾನುವಾರ ಮಧ್ಯಾಹ್ನ ಸಮತ ವಿದ್ಯಾ ಮಂದಿರ್ ಸಾಕಿನಾಕದಲ್ಲಿ ಸುಂದರವಾಗಿ ಜರುಗಿತು. ಉದ್ಘಾಟಕರಾದ ರಾಜು ಮೆಂಡನ್, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೊತೆಯಲ್ಲಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಮುಖ್ಯ ಅತಿಥಿಯಾಗಿ ಆಗಮಿಸಿದ ದಿನೇಶ್ ದೇವಾಡಿಗ, ಕೇಂದ್ರ ಸಮಿತಿಯ ಸದಸ್ಯರಾದ ರಮೇಶ್ ರೈ, ಸವಿತಾ ಶೆಟ್ಟಿ, ಅನಿತಾ ಶೆಟ್ಟಿ, ವಲಯ ಮುಖ್ಯಸ್ಥೆ ದೇವಿಕಾ ಶೆಟ್ಟಿ, ರಾಜವರ್ಮ ಜೈನ್, ಶಿಬಿರ ಮುಖ್ಯಸ್ಥೆ ಉಷಾ ಶೇರುಗಾರ್ ವೇದಿಕೆಯಲ್ಲಿದ್ದರು. ಚಿಣ್ಣರ ಬಿಂಬಕ್ಕೆ ಈಗ ಇಪ್ಪತ್ತು ವರುಷ …

Read More

ಹಲವು ವರ್ಷಗಳಿಂದ ಸಮಾಜಮುಖಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಮೀರಾ ರೋಡಿನ ಹೆಸರಾಂತ ಸಂಸ್ಥೆ ನವತರುಣ ಮಿತ್ರ ಮಂಡಳಿಯ ಪದಗ್ರಹಣ ಕಾರ್ಯಕ್ರಮವು ಜು. 29ರ ಶನಿವಾರದಂದು ನಡೆಯಲಿದೆ. ಇಲ್ಲಿನ ಭಾರತ ರತ್ನ ಗಾನ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಸಭಾಂಗಣದಲ್ಲಿ ಸಂಜೆ 4 ರಿಂದ ನಡೆಯಲಿರುವ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆಯಲಿದೆ. ಈ ಪ್ರಯುಕ್ತ ಹೇರಂಜಾಲು ಯಕ್ಷ ಬಳಗ ಹಾಗೂ ಟೀಮ್ ಉತ್ಸಾಹಿ ಬೆಂಗಳೂರು ಕಲಾವಿದರಿಂದ ಶ್ರೀ ಶ್ರೀನಿವಾಸ ಕಲ್ಯಾಣ ಎಂಬ ಕನ್ನಡ ಯಕ್ಷಗಾನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಹೆರಂಜಾಲು ಗೋಪಾಲ್ ಗಾಣಿಗ, ಪಲ್ಲವ ಗಾಣಿಗ ಹೆರಂಜಾಲು, ಮದ್ದಳೆಯಲ್ಲಿ ಅನುರುದ್ಧ ಹೆಗಡೆ ವರ್ಗಾಸರ, ಚೆಂಡೆಯಲ್ಲಿ ಸುಜನ್ ಹಾಲಾಡಿ, ಮುಮ್ಮೇಳದಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್ಯ, ಶ್ರೀಧರ ಭಟ್ ಕಾಸರಗೋಡು, ಪ್ರಕಾಶ್ ಮೊಗವೀರ ಕಿರಾಡಿ, ವೆಂಕಟೇಶ ಹೆಗಡೆ, ನಾಗಶ್ರೀ ಜಿ.ಎಸ್. ನಿಹಾರಿಕ ಭಟ್, ಶ್ರೀಕಾಂತ್ ರಟ್ಟಾಡಿ, ಸುಶಾಂತ್ ಶೆಟ್ಟಿ ಅಚ್ಲಾಡಿ, ನಾಗಭೂಷಣ್ ನಾಯ್ಕ್ ಮೊದಲಾದವರು ರಂಜಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ – ತುಳು…

Read More