Author: admin
ಜೀವನದಲ್ಲಿ ಉನ್ನತ ಧ್ಯೇಯ, ಕಠಿಣ ಪರಿಶ್ರಮ, ಸಾಧನೆಯ ಛಲ, ನಡೆ ನುಡಿಯಲ್ಲಿ ಪ್ರಾಮಾಣಿಕತೆ ಇವುಗಳು ಜೀವನದ ಯಶಸ್ಸಿನ ಗುಟ್ಟು ಎನ್ನುವುದು ಸರ್ವೇಸಾಮಾನ್ಯವಾದ ಮಾತು. ಆದರೆ ಇದೆಲ್ಲವನ್ನೂ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು ಮುನ್ನಡೆದು ಸಾಧಕರಾಗಿ ಕಾಣಸಿಗುವವರು ವಿರಳ. ಇಂತಹ ಸಾಲಿನಲ್ಲಿ ವಿಶೇಷವಾಗಿ ಕಂಡುಬರುವ ಡೊಂಬಿವಲಿ, ಥಾಣೆ, ಮುಂಬಯಿ ಪರಿಸರದಲ್ಲಿ ಸಮಾಜಸೇವಕರಾಗಿ, ಜನಾನುರಾಗಿಯಾಗಿ ತುಳು ಕನ್ನಡಿಗರಲ್ಲಿ ಅನ್ಯೋನ್ಯತೆಯೊಂದಿಗೆ ಬೆರೆತು ಬಾಳುವ, ಯಾವುದೇ ಪ್ರಚಾರವನ್ನು ಬಯಸದೇ, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ವ್ಯಕ್ತಿತ್ವವೆಂದರೇ ಅದು ಅಡ್ವೋಕೇಟ್ ಸುರೇಶ್ ಶ್ಯಾಮ ಶೆಟ್ಟಿಯವರು. ಎಡಗೈಯ್ಯಲ್ಲಿ ನೀಡಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವ ಮನೋಧರ್ಮವನ್ನು ರೂಡಿಸಿಕೊಂಡು ಯಾರೇ ನೆರವಿಗೆ ಬಂದರೂ ತನ್ನಿಂದಾದ ಸಹಾಯ ಮಾಡಿ ಪರೋಪಕಾರ ಧರ್ಮದಲ್ಲಿ ಧನ್ಯತೆಯನ್ನು ಕಾಣುವ ಇವರ ಮುಖದಲ್ಲಿ ಸದಾ ಮಂದಹಾಸ, ಮೃದು ಮಾತು ಎಲ್ಲರನ್ನೂ ಸ್ನೇಹಭಾವದಿಂದ ಕಾಣುವ ಇವರ ಸ್ವಭಾವ ಎಂತಹವರನ್ನೂ ಆಕರ್ಷಿಸದೆ ಇರದು. ಸಾಂತೂರ್ ಬಾಳಿಕೆ ಶ್ಯಾಮ ಶೆಟ್ಟಿಯವರ ಸುಪುತ್ರರಾಗಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರು ಉಡುಪಿ ಜಿಲ್ಲೆಯಲ್ಲಿ ಮುಗಿಸಿ ಡಿಗ್ರೀ ಹಾಗೂ…
ಬದುಕಿನ ಮೂಲ ಸಂಸ್ಕೃತಿಯಾಗಿರುವ ಕೃಷಿ ಮತ್ತು ಮಣ್ಣಿನ ಗುಣವನ್ನು ಮುಂದಿನ ಯುವ ಪೀಳಿಗೆಗೆ ಅರ್ಥವತ್ತಾಗಿ ಪರಿಚಯಿಸುವ ಕಾರ್ಯ ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಿದೆ ಎಂದು ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ಬಂಟರ ಸಂಘ ಸುರತ್ಕಲ್ ವತಿಯಿಂದ ನಡೆದ ಕೃಷಿ, ತೋಟಗಾರಿಕೆ ಮತ್ತು ಪಶು ಇಲಾಖೆ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ನಡೆದ ಸಾರ್ವಜನಿಕ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಬೆನ್ನುಲುಬು ಕೃಷಿಕರಾಗಿದ್ದು ಕೇಂದ್ರ ಮತ್ತು ರಾಜ್ಯ ಸರಕಾರ ಕೃಷಿಕರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಅದರ ಸೌಲಭ್ಯಗಳನ್ನು ಸಾರ್ವಜನಿಕರು ಪಡೆಯಬೇಕು ಎಂದರಲ್ಲದೆ ಬಂಟರ ಸಂಘವು ಈ ನಿಟ್ಟಿನಲ್ಲಿ ಕೃಷಿಗೆ ಅತ್ಯಂತ ಮಹತ್ವ ನೀಡಿದ್ದು ಶ್ಲಾಘನೀಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಕ್ಕಾರ್ ಸಿರಿ ಕುರಲ್ ರೈತ ಸಂಸ್ಥೆಯ ಅಧ್ಯಕ್ಷ ಸದಾಶಿವ ಶೆಟ್ಟಿ ಎಕ್ಕಾರು,…
ಕಡಂದಲೆ ಎಂದರೆ ನೆನಪಾಗುತ್ತಾರೆ ಹೆಸರಾಂತ ಸಾಹಿತಿಗಳು, ರಾಜಕಾರಣಿಗಳು, ಗುತ್ತಿನ ಗತ್ತಿನ ಬಂಟ ಮನೆತನದ ಉದ್ಯಮಿಗಳು, ಶಿಕ್ಷಣ ತಜ್ಞರು. ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತ ತುಳುನಾಡಿನ ಪವಿತ್ರ ನೆಲ ತುಳುವ ತುಂಡರಸರು ವೈಭವದಿಂದ ಆಳಿದ ನೆಲ. ಇಲ್ಲಿನ ಕಡಂದಲೆ ಪರಾರಿ ಎಂಬ ಕೂಡು ಕುಟುಂಬದ ಬಂಟರ ಐತಿಹಾಸಿಕ ಹಿನ್ನೆಲೆಯ ಸದಸ್ಯರೆಲ್ಲರೂ ಮೇಧಾವಿಗಳು, ಕಾನೂನು ಜ್ಞಾನವುಳ್ಳ ನ್ಯಾಯ ತೀರ್ಮಾನ ಸಮರ್ಥರು, ಪರಿಶ್ರಮಿಗಳು, ಕೃಷಿ ಬೇಸಾಯ ನಿರತರು, ಕೆಲವರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಅಂಥಹ ಪ್ರತಿಷ್ಠಿತ ಕುಟುಂಬದಲ್ಲಿ ಜನ್ಮ ತಾಳಿ ಇಂದು ಹತ್ತಾರು ಕ್ಷೇತ್ರಗಳಲ್ಲಿ ಶಾಶ್ವತ ಕೀರ್ತಿ ಪಡೆದ ಮಹನೀಯರಲ್ಲಿ ಆದರಣೀಯ ಕಡಂದಲೆ ಪರಾರಿ ಪ್ರಕಾಶ್ ಎಲ್ ಶೆಟ್ಟರು ಕೂಡಾ ಒಬ್ಬರು. ಬೊಡಂತಿಲ ಪಡು ದಿವಂಗತ ಲೋಕಯ್ಯ ಶೆಟ್ಟಿ ಹಾಗೂ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀಮತಿ ಜಲಜಾ ಎಲ್ ಶೆಟ್ಟಿ ದಂಪತಿಯರ ಕೀರ್ತಿ ವರ್ಧನ ಸಂತಾನವಾಗಿ ಜನಿಸಿದ ಶೆಟ್ಟರು ಬಾಲ್ಯದ ದಿನಗಳಿಂದಲೇ ಆಳ ಚಿಂತನೆಯ ಹೊಳೆವ ಕಂಗಳ ಪ್ರತಿಭಾವಂತ ಬಾಲಕರಾಗಿದ್ದರು. ಪ್ರಕಾಶ್…
ಜೀವನ ಒಂದು ಸುಂದರವಾದ ಉದ್ಯಾನವನದಂತೆ. ಅದರಲ್ಲಿ ನಮ್ಮೆಲ್ಲರ ಪಾತ್ರ ಬಹುಮುಖ್ಯ. ಅಲ್ಲಿ ಮೊಳೆವ ಕಳೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದು ಹಾಕದಿದ್ದರೆ ಜೀವನ ಸೌಂದರ್ಯ ಹಾಳಾಗುತ್ತದೆ. ಮಾನವನ ಯೋಚನೆ, ಯೋಜನೆಯು ವಿಚಿತ್ರವಾದದು. ಸಾಕೆನಿಸದ ಸ್ವಪ್ರತಿಷ್ಠೆ, ಸ್ವಾರ್ಥ, ದುರಾಸೆಯನ್ನು ನಿಯಂತ್ರಿಸಲಾಗದೆ ಸುಲಭದಲ್ಲಿ ಸುಖ ಸೌಕರ್ಯ ಪಡೆಯುವ ಹಪಾಹಪಿಯಲ್ಲಿ ಕಿರುದಾರಿ, ಅಡ್ಡದಾರಿಯ ಓಟದಲ್ಲಿ ಅಮೂಲ್ಯವಾದುದು ಕಳೆದು ಹೋದದ್ದು ಗೊತ್ತೇ ಆಗುವುದಿಲ್ಲ. ಸುಖ, ಶಾಂತಿ ಮತ್ತೆಲ್ಲೋ ಯಾವುದರಲ್ಲೋ ಇರುವುದಿಲ್ಲ. ಅವರವರ ಮನಸ್ಸಿನಲ್ಲಿ ಅಡಗಿರುತ್ತದೆ. ಕೆಲವರಂತೂ ನಿರ್ದಾಕ್ಷಿಣ್ಯವಾಗಿ ನಕಾಲರಾತ್ಮಕ ಆಲೋಚನೆಗಳಿಂದ ತುಂಬಿರುತ್ತಾರೆ. ಸಂತೋಷಕರ ಜೀವನಕ್ಕಾಗಿ ಒಳ್ಳೆಯ ಆಲೋಚನೆಗಳನ್ನು ಮಾಡಿ ನಿರಂತರ ಆಶಾವಾದಿಗಳಾಗಿರೋಣ. ಕರ್ತವ್ಯದ ಬಗ್ಗೆ ಆಲೋಚಿಸಿ ಫಲಿತಾಂಶಗಳ ಮೇಲೆ ಆಧಾರವಾಗಿರಬೇಡಿ. ಯಾವುದೇ ಕೆಲಸದಲ್ಲಿ ಏಕಾಗ್ರತೆ ಎಷ್ಟು ಮುಖ್ಯವೋ ಕರ್ತವ್ಯ ನಿರ್ವಹಣೆ ಕೂಡ ಅಷ್ಟೇ ಮುಖ್ಯ. ಈ ಪ್ರಪಂಚಕ್ಕೆ ಒಡೆಯನಾದರೂ ಕೆಲವರು ಸಂತೋಷದಿಂದ ಇರುತ್ತಾರೆ ಅನ್ನೋ ಗ್ಯಾರಂಟಿ ಏನು ಇಲ್ಲ . ಸಂತೋಷ ಅಂತರಂಗದಲ್ಲಿ ಅಡಗಿದ ಒಂದು ಭಾವನೆ. ಅದರ ಇರುವಿಕೆಯನ್ನು ತಿಳಿದುಕೊಂಡು ವಿಶಾಲ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು. ಸಣ್ಣ ಪುಟ್ಟ…
ಶಿವಮೊಗ್ಗ ಕುವೆಂಪು ವಿ. ವಿ. ಯಿಂದ ಗೌರವ ಡಾಕ್ಟರೇಟ್ ಪಡೆದ ಇಂಟರ್ ನ್ಯಾಷನಲ್ ಬಂಟ್ಸ್ ಟ್ರಸ್ಟ್ ಸ್ಥಾಪಕಾಧ್ಯಕ್ಷರಾದ ಡಾ. ಅತ್ತೂರು ಸದಾನಂದ ಶೆಟ್ಟಿ ಅವರಿಗೆ ಅಭಿನಂದನೆ ಸಮಾರಂಭ ಕಾರ್ಯಕ್ರಮ ಬಂಟರ ಸಂಘ ಜಪ್ಪು ಮಾರ್ನಮಿಕಟ್ಟೆ ವತಿಯಿಂದ ನಗರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸುನಿಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ನಯನಾ ಪಿ. ಶೆಟ್ಟಿ ಸ್ವಾಗತಿಸಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪೂರ್ಣಿಮಾ ಎನ್. ಶೆಟ್ಟಿ, ರೇಖಾ ಆರ್. ನಾಯರ್ ಅವರ ಮಾರ್ಗದರ್ಶನದಲ್ಲಿ ನೃತ್ಯ ಕಾರ್ಯಕ್ರಮ ಜರುಗಿತು. ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷ ದೇವಿಚರಣ್ ಶೆಟ್ಟಿ ಉದ್ಯಮಿ, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ರೂವಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಕದ್ರಿ ನವನೀತ್ ಶೆಟ್ಟಿ ತುಳು ವಿದ್ವಾಂಸ, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸರಿತಾ ಎಸ್. ಶೆಟ್ಟಿ , ಕೋಶಾಧಿಕಾರಿ ಕೆ. ಗೋಪಿನಾಥ್ ಶೆಟ್ಟಿ ಉಪಸ್ಥಿತರಿದ್ದರು. ನಿಖಿಲ್ ಶೆಟ್ಟಿ ವಂದಿಸಿ, ಸಾಹಿಲ್ ರೈ ಕಾರ್ಯಕ್ರಮ ನಿರ್ವಹಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಅಕ್ಟೋಬರ್ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆಯುವ ವಿಶ್ವ ಬಂಟರ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ವಿಶ್ವ ಬಂಟರ ಸಮ್ಮೇಳನದಲ್ಲಿ ನಡೆಯುವ ವಿಶ್ವ ಬಂಟರ ಕ್ರೀಡೋತ್ಸವ ಮತ್ತು ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಿಶ್ವದಲ್ಲಿರುವ ಬಂಟರನ್ನು ಒಂದೇ ಚಪ್ಪರದಡಿಯಲ್ಲಿ ಸೇರಿಸುವ ಪ್ರಯತ್ನದಲ್ಲಿ ವಿಶ್ವ ಬಂಟರ ಸಮ್ಮಿಲನ ನಡೆಯಲಿದೆ. ಸಮ್ಮೇಳನದಲ್ಲಿ ಸ್ವಾಮೀಜಿಗಳು, ರಾಜಕೀಯ ನೇತಾರರು, ಸಿನಿಮಾ ತಾರೆಯರು, ಧಾರ್ಮಿಕ ಮುಖಂಡರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ…
ನಮ್ಮ ಹಿರಿಯರ ಆಚರಣೆಗಳು ಅರ್ಥಪೂರ್ಣವಾಗಿದ್ದವು. ಪ್ರಕೃತಿ ಪೂಜೆಗೆ ವಿಶೇಷ ಮಹತ್ವ ಇದ್ದು ಕಲ್ಲು, ಮಣ್ಣು,ಗಿಡ ಮರಗಳ ಪೂಜೆ ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯ ಅವುಗಳಲ್ಲಿ ದೈವತ್ವವನ್ನು ಕಂಡು ಆರಾಧಿಸುವುದು ಕೃಷಿಕರಿಗೆ ಸಂತಸದ ಕಾಯಕವಾಗಿತ್ತು. ಹಾಗೆ ಕೃಷಿ ಪ್ರಧಾನವಾದ ಕುಟುಂಬಗಳು ಮೇಟಿಕಂಬವನ್ನು ವಿಶೇಷ ದಿನಗಳಲ್ಲಿ ಮೇಟಿ ಕಂಬಕ್ಕೆ ಹೂ ಹಾಕುವುದು, ಮೇಟಕಂಬಕ್ಕೆ ಹೊದಳು ಹಾಕುವ ಕ್ರಮ, ಮೇಟಿಕಂಬಕ್ಕೆ ಭಕ್ತಿಯಿಂದ ಪೂಜಿಸುತ್ತಿದ್ದರು. ಮೇಟಿಕಂಬ ಎಂಬ ಹೆಸರಿನಿಂದ ಬೇಸಾಯಕ್ಕೆ ಮೇಟಿವಿದ್ಯೆ ಎಂಬ ಹೆಸರು ಬಂತು ಎನ್ನುವವರು ಇದ್ದಾರೆ. ಶ್ರಿ ಕೃಷ್ಣಜನ್ಮಾಷ್ಟಮಿಯಂದು, ಕದಿರು ಕಟ್ಟುವ ದಿನ, ಕೃಷಿ ಪ್ರಧಾನ ಮನೆಯ ಎದುರು ಇರುವ ಮರದ ಮೇಟಿಕಂಬದ ಸೊಬಗೆ ಬೇರೆ ಇತ್ತು. ಮೇಟಿಕಂಬವನ್ನು ಒದ್ದೆ ಬಟ್ಟೆಯಲ್ಲಿ ಚೆನ್ನಾಗಿ ಒರಸಿ ಕಂಬದ ಸುತ್ತಾ ರಂಗೋಲಿ ಬರೆದು ಹೊದಲು ಹೂ ಇಟ್ಟು ಮನೆಯ ಯಜಮಾನ ಪಂಚೆ ಉಟ್ಟು ತಿಲಕ ಹಚ್ಚಿ, ದೀಪದ ಆರತಿ ಎತ್ತಿ ಮೇಟಿಕಂಬಕ್ಕೆ ತೆಂಗಿನಕಾಯಿ ಒಡೆದು, ಕೊಡಿ ಬಾಳೆಎಲೆಯಲ್ಲಿ ಹೊದಳು ಪಂಚಕಜ್ಜಾಯ ಮಾಡಿ ಇಟ್ಟು, ಸಳ್ಳೆ ಎಲೆ ಅಥವಾ…
ಸ್ಥಳೀಯ ಹಾಗೂ ದೇಶದ ಅಭಿವೃದ್ಧಿ ದೃಷ್ಟಿಯಿಂದ ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಕೆಎಸ್ಸಿಎಸ್ಟಿ ಪ್ರೋತ್ಸಾಹಿಸುತ್ತಿದೆ. ಮಂಡಳಿಯು 45 ವರ್ಷಗಳಲ್ಲಿ 15,300ಕ್ಕೂ ಅಧಿಕ ವಿದ್ಯಾರ್ಥಿ ಯೋಜನೆಗಳನ್ನು ಗುರುತಿಸಿ ನೆರವು ನೀಡಿದೆ. ಪ್ರಸಕ್ತ 46ನೇ ಸರಣಿಯಲ್ಲಿ ಮಂಡಳಿಯು ರಾಜ್ಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ವಿವಿಧ ವಿಭಾಗಗಳ 5,961 ಯೋಜನೆಗಳನ್ನು ಸ್ವೀಕರಿಸಿದ್ದು 197 ಎಂಜಿನಿಯರಿಂಗ್ ಕಾಲೇಜುಗಳ 1,494 ಯೋಜನ ಪ್ರಸ್ತಾವನೆಗಳಿಗೆ ಧನಸಹಾಯ ಮತ್ತು ತಾಂತ್ರಿಕ ನೆರವು ನೀಡಿರುವುದು ಶ್ಲಾಘನೀಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಮಿಜಾರಿನಲ್ಲಿರುವ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ಸಿಎಸ್ಟಿ) ಸಹಯೋಗದಲ್ಲಿ ಆ.11, 12ರಂದು ನಡೆಯುವ “46ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ ಗಳ ವಿಚಾರ ಸಂಕಿರಣ ಮತ್ತು ಪ್ರದರ್ಶನ’ದಲ್ಲಿ ಅವರು ಮಾತನಾಡಿ, ಪರಿಣತರ ಮೌಲ್ಯಮಾಪನದ ಮೂಲಕ 433 ಅತ್ಯುತ್ತಮ ಯೋಜನೆಗಳು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂಬುದು ಉತ್ತಮ ಬೆಳವಣಿಗೆ ಎಂದರು. ದೇಶಕ್ಕೆ ಕೊಡುಗೆ…
ಕಾಪುವಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ನಡೆಯುವ ತುಳುನಾಡಿನ ಏಳು ಜಾತ್ರೆಗಳಲ್ಲಿ ಒಂದಾದ ಕಾಪುವಿನ ಕಾಲಾವಧಿ ಸುಗ್ಗಿಮಾರಿ ಪೂಜೆಯು ಮಾ. 21 ಮತ್ತು 22ರಂದು ನಡೆಯಲಿದೆ ಎಂದು ಮಾರಿಗುಡಿಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಕಾಪು ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ ಈ ಬಗ್ಗೆ ಮಾಹಿತಿ ನೀಡಿ, ಐತಿಹಾಸಿಕ ಹಿನ್ನೆಲೆ ಮತ್ತು ಪ್ರಸಿದ್ಧಿ ಪಡೆದಿರುವ ಮೂರು ಮಾರಿಗುಡಿಗಳಲ್ಲಿ 2023 ನೇ ಸಾಲಿನ ಸುಗ್ಗಿ ಮಾರಿಪೂಜೆಗೆ ಪೂರ್ವಭಾವಿಯಾಗಿ ಮಾ. 14 ಮೀನ ಸಂಕ್ರಮಣದಂದು ಕುರಿ ಬಿಡುವ ಸಂಪ್ರದಾಯ ನಡೆಯಲಿದೆ. ಬಳಿಕ ಅದರ ಮುಂದಿನ ಮಂಗಳವಾರ ಮತ್ತು ಬುಧವಾರ (ಮಾ. 21 ಮತ್ತು 22) ದಂದು ಸುಗ್ಗಿ ಮಾರಿಪೂಜೆ ನಡೆಯಲಿದೆ ಎಂದು ತಿಳಿಸಿದರು. ಕಾಪುವಿನ ಮೂರು ಮಾರಿಗುಡಿಗಳಲ್ಲಿ ವರ್ಷಕ್ಕೆ ಮೂರು ಬಾರಿ ಸುಗ್ಗಿ, ಆಟಿ ಮತ್ತು ಜಾರ್ದೆ ಮಾರಿಪೂಜೆ ನಡೆಯುತ್ತದೆ. ಇದರಲ್ಲಿ ಸುಗ್ಗಿ…
ಪದ್ಮಾವತಿ ಪಿ ಶೆಟ್ಟಿ ಗುರ್ಮೆ ಅವರ 4 ನೇಯ ಪುಣ್ಯತಿಥಿಯ ಸ್ಮರಣಾರ್ಥ ಗುರ್ಮೆ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಗುರ್ಮೆ ಗೋ ವಿಹಾರ ಕೇಂದ್ರದ ಲೋಕಾರ್ಪಣೆ ಯನ್ನು ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರ್ಮೆಯಲ್ಲಿ ಉದ್ಘಾಟಿಸಿದರು. ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಗೌರಿಗದ್ದೆ ಸ್ವರ್ಣ ಪೀಠಿಕಾಪುರದ ಅವದೂತ ವಿನಯ್ ಗುರೂಜಿ ಅವರು ಆಶೀರ್ವಚಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್ ಈಶ್ವರಪ್ಪ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಸಂಸದರಾದ ಬಿ.ವೈ ರಾಘವೇಂದ್ರ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಘುಪತಿ ಭಟ್, ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ, ಬೆಂಗಳೂರು ಎಂ.ಆರ್.ಜಿ ಗ್ರೂಪ್ಸ್ ಚೇರ್ಮನ್…