Author: admin

ಆಳ್ವಾಸ್ ಸಹಕಾರ ಸಂಘವು 2022-23 ನೇ ಸಾಲಿನಲ್ಲಿ 2.87 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ 17 ಲಾಭಾಂಶ (ಡಿವಿಡೆಂಟ್) ಘೋಷಿಸಿದೆ. ಆಳ್ವಾಸ್ ಕಾಲೇಜು ಸುಂದರಿ ಆಳ್ವ ಆವರಣದಲ್ಲಿನ ಮುಂಡ್ರುದೆಗುತ್ತು ಕೆ ಅಮರನಾಥ ಶೆಟ್ಟಿ ವೇದಿಕೆಯಲ್ಲಿ ನಡೆದ ಸಂಘದ 2022-23 ನೇ ಸಾಲಿನ 7ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಕಟಿಸಲಾಯಿತು. ವಾರ್ಷಿಕ ವರದಿ ವಾಚಿಸಿದ ಸಂಘದ ಕಾರ್ಯ ನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ, ಸಂಘವು ಈ ಸಾಲಿನಲ್ಲಿ 150 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಕಳೆದ ವಿತ್ತೀಯ ವರ್ಷಕ್ಕಿಂತ ಶೇ 28 ಹೆಚ್ಚುವರಿ ಲಾಭ ಗಳಿಸಿದೆ. ಶೇ 99.74 ಸಾಲ ವಸೂಲಾತಿ ಮಾಡಿದೆ. 2016ರ ಜುಲೈ 10 ರಂದು ಸಂಘ ಆರಂಭಗೊಂಡಿದ್ದು, ಪ್ರಸ್ತುತ 2033 ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಸಂಘದ ಅಧ್ಯಕ್ಷರೂ ಆಗಿರುವ ಡಾ. ಮೋಹನ ಆಳ್ವ ಅವರು ಸಮಾಜಮುಖಿ ಚಿಂತನೆಯಲ್ಲಿ ಆಳ್ವಾಸ್ ಸಮೂಹ ಸಂಸ್ಥೆಗಳನ್ನು ಕಟ್ಟಿದ್ದಾರೆ.…

Read More

ಹೆತ್ತವರಿಗೆ ತಮ್ಮ ಕಂದಮ್ಮಗಳಿಗಿಂತ ದೊಡ್ಡ ಆಸ್ತಿ ಇನೊಂದಿಲ್ಲ. ಯಾವ ತಂದೆ, ತಾಯಿಯಾದರು ಅವರ ಮಕ್ಕಳ ಭವಿಷ್ಯ ತಮಗಿಂತ ಉತ್ತಮವಾಗಿರಲಿ ಎಂದೇ ಬಯಸುತ್ತಾರೆ. ತಾವು ಕಂಡ ಕಷ್ಟ, ನೋವು, ಏರಿಳಿತಗಳನ್ನು ಮಕ್ಕಳು ಅನುಭವಿಸಬಾರದೆಂದು ದೇವರಲ್ಲಿ ಸದಾ ಪ್ರಾರ್ಥಿಸುತ್ತಾರೆ. ಅವರ ಉತ್ತಮ ಭವಿಷ್ಯಕ್ಕಾಗಿ ತಮ್ಮ ಕೈಲಾದಷ್ಟು ಶ್ರಮ ಪಡುತ್ತಾರೆ. ಆದರೆ ಇವೆಲ್ಲದರಿಂದ ಕೇವಲ ಮನುಷ್ಯನ ಬಾಹ್ಯ ಜೀವನವನ್ನು ರೂಪಿಸಬಹುದೇ ವಿನಃ ಒಬ್ಬ ವ್ಯಕ್ತಿಯನ್ನು ಅಂತರಂಗದಿಂದ ಶ್ರೀಮಂತನನ್ನಾಗಿ ಮಾಡಲು ಸಾಧ್ಯವಿಲ್ಲ. ಆಂತರಿಕವಾಗಿ ಬೆಳೆಯಲು, ಉತ್ತಮ ವ್ಯಕ್ತಿತ್ವ ಹೊಂದಲು ಸನ್ಮಾರ್ಗದ ಶಿಕ್ಷಣ ಅತ್ಯಗತ್ಯ. ಇದನ್ನು ಯಾವ ಶಾಲೆ ಕಾಲೇಜುಗಳೂ ಕಲಿಸುವುದಿಲ್ಲ. ಅದಕ್ಕಾಗಿ ಮನೆಯೆ ಮೊದಲ ಪಾಠ ಶಾಲೆ ತಾಯಿಯೆ ಮೊದಲ ಗುರು ಎಂದು ಹೇಳುವುದು. ತಂದೆ, ತಾಯಿ ಮಗುವಿಗೆ ಲೋಕದ ಅರಿವು ಆರಂಭವಾದಾಗಲೇ ನೈತಿಕ ಶಿಕ್ಷಣವನ್ನು, ಮನುಷ್ಯತ್ವದ ಮೌಲ್ಯಗಳನ್ನು, ಆದರ್ಶ ವ್ಯಕ್ತಿಗಳ ಚರಿತ್ರೆಯನ್ನು ಬೋಧಿಸಬೇಕು. ಮಕ್ಕಳು ಬೆಳೆದು ದೊಡ್ಡವರಾಗುವ ಮುನ್ನವೇ ಅವರಲ್ಲಿ ಉತ್ತಮ ಆಲೋಚನೆಗಳನ್ನು ಮೂಡಿಸುವುದು ಅಗತ್ಯ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ಎಂಬ ಗಾದೆಯಂತೆ ಸಣ್ಣ…

Read More

ಮುಂಬಯಿ ಬಂಟರ ಸಂಘವು ಸುಮಾರು 2 ವರ್ಷಗಳ ಹಿಂದೆ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ರಕ್ತ ಸಂಗ್ರಹಿಸುವ ಯೋಜನೆಯಲ್ಲಿ ಕೊರತೆಯು ಉಂಟಾದಾಗ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರುಗಳ ಸಹಾಯದಿಂದ 5000 ಬಾಟಲ್ ರಕ್ತವನ್ನು ಸಂಗ್ರಹಿಸಲಾಗಿತ್ತು. ಸಂಘದ 9 ಪ್ರಾದೇಶಿಕ ಸಮಿತಿಗಳಲ್ಲಿ ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಶಿಬಿರಗಳನ್ನು ಆಯೋಜಿಸುವ ಬಗ್ಗೆ ನಿರ್ಧರಿಸಲು ಯೋಚಿಸಿದಾಗ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಮೊತ್ತ ಮೊದಲಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷರಾದ ರತ್ನಾಕರ್ ಶೆಟ್ಟಿ ಮುಂಡ್ಕೂರುರವರು ಹೇಳಿದರು. ಅವರು ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರು ಆಯೋಜಿಸಿದ ಸೇವ್ ದಿ ಬ್ರೆಸ್ಟ್ ಫೌಂಡೇಶನ್ ಹಾಗೂ ವಸಂತ್ ಚಾರಿಟೇಬಲ್ ಟ್ರಸ್ಟ್ ರವರ ಸೌಜನ್ಯದಲ್ಲಿ ಕ್ಯಾನ್ಸರ್ ತಡೆಗಟ್ಟುವ ಶಿಬಿರ ತುಂಗಾ ಹಾಸ್ಪಿಟಲ್ ಸಹಕಾರದೊಂದಿಗೆ ಹಾಸ್ಪಿಟಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪವನ್ನು ಪ್ರಜ್ವಲಿಸಿ ಮಾತನಾಡುತ್ತಾ ಸಾಮಾನ್ಯವಾಗಿ ಮಹಿಳೆಯರಲ್ಲಿ ಮೂರು ಹಂತದಲ್ಲಿ ಎದುರಾಗುವ ಕ್ಯಾನ್ಸರ್ ಸಮಸ್ಯೆಯನ್ನು…

Read More

ಸಮಾಜ ಮುಖೀ ಚಿಂತನೆ ಹಾಗೂ ಸೇವೆಗೆ ಸಹಕಾರ ಕ್ಷೇತ್ರ ಹೆಸರಾಗಿದ್ದು ರಾಷ್ಟ್ರೀಯ ಬ್ಯಾಂಕ್‌ಗಳ ವಿಲೀನದಿಂದ ಗ್ರಾಹಕರಿಗೆ ತೊಂದರೆಯಾದಾಗ ಸಹಕಾರಿ ಬ್ಯಾಂಕ್‌ಗಳು ಮನೆ ಮನೆಗೆ ತಲುಪಿ ಉನ್ನತ ಸೇವೆ ನೀಡಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು. ಅವರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನವೀಕೃತ “ಸಮೃದ್ಧಿ ಸಹಕಾರಿ ಸೌಧ’ದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಡ್ಕೂರು ಶ್ರೀ ದುರ್ಗಾಪರ ಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ರಾಮದಾಸ ಆಚಾರ್ಯ ಶುಭಾಶಂಸನೆಗೈದರು. ಸಹಕಾರಿ ಸೌಧವನ್ನು ಸಚಿವ ವಿ. ಸುನಿಲ್‌ ಕುಮಾರ್‌, ನವೋದಯ ಸಹಕಾರಿ ಭವನವನ್ನು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ, ಭದ್ರತಾ ಕೊಠಡಿಯನ್ನು ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಐಕಳಬಾವ ಡಾ| ದೇವಿಪ್ರಸಾದ್‌ ಶೆಟ್ಟಿ…

Read More

ಮುಂಬೈ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್‌ಗಳ ವೇದಿಕೆಯು ಫೆಬ್ರವರಿ 4 ರಂದು ಸಂಜೆ ಬಂಟ್ಸ್ ಸಂಘ ಮುಂಬೈ, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಹಯೋಗದಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಕೇಂದ್ರ ಬಜೆಟ್ – 2023 ರ ವಿಶ್ಲೇಷಣೆಯನ್ನು ನಡೆಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಫ್‌ಎಂಬಿಸಿಎ ಕಾರ್ಯಾಧ್ಯಕ್ಷ ಸಿಎ ಹರೀಶ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಲಿಮಿಟೆಡ್ ಅಧ್ಯಕ್ಷ ಕೆ.ಸಿ.ಶೆಟ್ಟಿ, ಇಂಡಿಯನ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಸುಕೇಶ್ ಶೆಟ್ಟಿ, ಎಫ್‌ಎಂಬಿಸಿಎ ಉಪಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಸಿಎ ಜಗದೀಶ್ ಬಿ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಿಎ ರಾಜೇಶ್ ಸಾಗ್ವಿ ಮತ್ತು ವಕೀಲ ಪ್ರಭಾಕರ ಶೆಟ್ಟಿ ಕ್ರಮವಾಗಿ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳನ್ನು ವಿಶ್ಲೇಷಿಸಿದರು. ಈ ಸಂದರ್ಭದಲ್ಲಿ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಸಿಎ ಎನ್‌ಬಿ ಶೆಟ್ಟಿ, ಸಿಎ ಪ್ರಭಾಕರ್ ಬಿ…

Read More

ಕಣ್ಣು ಹಾಯಿಸಿದಷ್ಟು ದೂರಕ್ಕೂ ಆವೃತಗೊಂಡ ದಟ್ಟ ಹಸಿರು, ಬೆಟ್ಟಗುಡ್ಡ ಅಪರೂಪದ ಮರಗಳು ಹೇರಳವಾಗಿ ಬೆಳೆದು ನಿಂತು ತಂಪನ್ನೆರೆವ ಕಾಡು, ಪಕ್ಷಿಗಳ ಇಂಚರ, ಸರೀಸೃಪಗಳ ಸರಪರ ಸದ್ದು, ವಿಶಿಷ್ಟವಾದ ಪಕ್ಷಿಗಳು ಕಾಣಸಿಗುವ ಸಸ್ಯಸಂಪತ್ತು ಹಾಗೂ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಬಹುದಾದ ಅರಣ್ಯ ಸುತ್ತಾಡಿ ಪ್ರಾಣಿ, ಪಕ್ಷಿ, ಅರಣ್ಯ ಸಂಪತ್ತನ್ನು ನೋಡಲು ಯಾರ ‌ಮನ‌ಬಯಸುವುದಿಲ್ಲ. ಆದರೆ ಕೆಲ ದಿನಗಳ ಹಿಂದೆ ಹಾಸನ ಜಿಲ್ಲೆಯ ಸಕಲೇಶ್ವರಪುರ ತಾಲೂಕಿನಲ್ಲಿ ಪಶ್ಚಿಮ ಘಟ್ಟ ರಕ್ಷಿತಾರಣ್ಯದಲ್ಲಿ ಸಂಭವಿಸಿದ ಅಗ್ನಿ ದುರಂತ, ಕಾಡ್ಗಿಚ್ಚು ನಂದಿಸಲು ಹೋಗಿ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಗಾರ್ಡ ಮೃತ ಪಟ್ಟು ಕೆಲವರು ಗಾಯಗೊಂಡಿರುವ ಸುದ್ದಿ ನಿಜಕ್ಕೂ ಆಘಾತಕಾರಿ. ಸಮೃದ್ದ ಅರಣ್ಯ ಸಂಪತ್ತಿನ ಕಾರಣ ತಂಪಾದ ವಾತಾವರಣ ಹೊಂದಿದ ದಟ್ಟಾರಣ್ಯ ಕಾಡ್ಗಿಚ್ಚಿಗೆ ಆಹುತಿಯಾಗಿ ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿದು ಅಪಾರ ಸಂಖ್ಯೆಯಲ್ಲಿ ಪ್ರಾಣಿ ಪಕ್ಷಿಗಳ ಜೀವಹಾನಿಗೆ ಕಾರಣವಾಗಿರುವುದು ದಾಖಲಾಗಿದೆ. ಕಾಡ್ಗಿಚ್ಚು ಕೆಲವೊಮ್ಮೆ ಉದ್ದೇಶ ಪೂರ್ವಕವಾಗಿ ಹಚ್ಚಿದ್ದು ಎಂಬ ಆರೋಪ ಪಡೆದಿದ್ದು ಮಾನವ ನಿರ್ಮಿತ ಕಾಡ್ಗಿಚ್ಚು ಅಕ್ಷಮ್ಯ ಅಪರಾಧ. ಅರಣ್ಯಕ್ಕೆ ಬೆಂಕಿ ಬೀಳುವ…

Read More

ಜಗತ್ತಿನಾದ್ಯಂತ ಇರುವ ಬಂಟ ಸಮಾಜವು ಇಂದು ಪ್ರತಿಯೊಂದು ವಿಭಾಗದಲ್ಲೂ ಮುಂದುವರಿಯುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬಂಟರಲ್ಲಿ ಅಡಗಿರುವ ರಕ್ತ ಶಕ್ತಿಯ ಗುಣ. ನಮ್ಮವರು ಸಾಹಸಿಗರು ಮಾತ್ರವಲ್ಲದೆ ಧೀರರು. ವಿಶ್ವದಲ್ಲಿರುವ ನಾವೆಲ್ಲಾ ಒಂದೇ ಮನೆತನದವರು. ನಮ್ಮಲ್ಲಿ ಭಿನ್ನಾಭ್ರಿಪ್ರಾಯ ಸಲ್ಲದು. ದೇಶ ವಿದೇಶದಲ್ಲೂ ಇಂದು ಅದೆಷ್ಟೋ ಮಂದಿ ಕ್ರೀಡಾ ಕೌಶಲ್ಯತೆಯಲ್ಲಿ ಮೆರೆಯುತ್ತಿದ್ದಾರೆ ಎಂದು ನುಡಿದರು. ಅವರು ಮೀರಾಡಹಣೂ ಬಂಟ್ಸ್ ವತಿಯಿಂದ ವಿರಾರ್ ಹಳೇ ವಿವಾ ಕಾಲೇಜಿನ ಮೈದಾನದಲ್ಲಿ ನಡೆದ ಸಂಸ್ಥೆಯ ಪ್ರಥಮ ವರ್ಷದ ಕ್ರೀಡೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಇಂದು ಆಯೋಜಿಸುತ್ತಿರುವ ಮೀರಾಡಹಣೂ ಬಂಟ್ಸ್ ನ ಕ್ರೀಡೋತ್ಸವ ಅತ್ಯಂತ ವಿಶೇಷ ಮೆರಗನ್ನು ನೀಡುತ್ತಿದೆ. ಆಕರ್ಷಕ ಶೈಲಿಯ ಉಡುಪುಗಳು ಕಾರಣವಾಗಿದೆ. ನಾವು ಬಂಟರು, ಉತ್ತಮ ಜನಾಂಗದವರು. ನಮ್ಮಲ್ಲಿ ಎಲ್ಲಾ ರೀತಿಯ ಕ್ರೀಯಾ ಶಕ್ತಿಗಳು ಅಡಕವಾಗಿದೆ ಅದನ್ನು ನಾವು ಸದುಪಯೋಗಿಸಬೇಕಾಗಿದೆ ಎಂದರು. ಇಂದಿನ ಕ್ರೀಡಾ ಆಯೋಜನೆಯನ್ನು ಪ್ರಶಂಸಿಸುತ್ತಾ ಕ್ರೀಡಾಳುಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮೀರಾಡಹಣೂ ಬಂಟ್ಸ್ ನ ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರು ಮಾತನಾಡುತ್ತಾ ಇದು…

Read More

ಬಂಟ ಸಮಾಜದ ಸಂಘಟನೆಯ ಮೂಲಕ ಇತರ ಸಮಾಜದ ವರ್ಗಕ್ಕೂ ಮುಕ್ತ ನೆರವು ನೀಡುವ ಮೂಲಕ ಸಮಾಜದಲ್ಲಿ ಮೇಲ್ಪಂಕ್ತಿಗೆ ಕಾರಣವಾಗಿರುವ ಒಕ್ಕೂಟಕ್ಕೆ ಸಮಾಜ ಬಾಂಧವರಿಂದ ನೀಡುತ್ತಿರುವ ಸ್ಪಂದನೆಯೇ ಮೂಲ ಕಾರಣವಾಗಿದೆ. ಸಮಾಜದಲ್ಲಿ ಎಲ್ಲಾ ಸಮಾಜದ ಸಂಘಟನೆಯೂ ಇದೇ ರೀತಿಯ ಯೋಚನೆಯಲ್ಲಿ ಯೋಜನೆ ರೂಪಿಸಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಅವರು ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಡುಬೈಲ್ ನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಜಮೀನಿಗೆ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ನಾಮಕರಣ ಮಾಡುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯ ಯೋಜನೆಗಳಿಗೆ ದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಮೂರುವರೆ ಕೋಟಿ ರೂ.ಗೂ ಮಿಕ್ಕಿದ ಮೊತ್ತವನ್ನು ಒಕ್ಕೂಟದ ಯೋಜನೆಗಳಿಗೆ ಒದಗಿಸಿ ಸೂಕ್ತ ನಿವೇಶನ ಪಡೆಯುವಲ್ಲಿ ಹಾಗೂ ನೆರವು ನೀಡುವ ಯೋಜನೆಗಳಿಗೆ ಸಹಕರಿದ್ದಾರೆ ಎಂದರು. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ನಿರ್ಮಾಣಗೊಂಡ ಬಳಿಕ ಬಿಪಿಲ್ ಕಾರ್ಡುದಾರರಿಗೆ ಮದುವೆಗೆ ಹಾಲ್…

Read More

ಮುಂಬಯಿ: ಜ.6: ಕರ್ನಾಟಕದ ಜಾನಪದ ಸಂಪತ್ತುಗಳಾದ ವೈವಿಧ್ಯಮ ಕಲೆ , ಸಂಸ್ಕಾರ , ಸಂಸ್ಕ್ರತಿ , ಆಚಾರ , ವಿಚಾರಗನ್ನು  ಕರ್ನಾಟಕದ  ಹೊರರಾಜ್ಯಗಳಲ್ಲಿ  ಅದರಲ್ಲೂ ವಿಶೇಷವಾಗಿ ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಮಹಾರಾಷ್ಟ್ರದ ಮಣ್ಣಿನಲ್ಲಿ ಉಳಿಸಿ , ಬೆಳೆಸುವ ನಿಟ್ಟಿನಲ್ಲಿ   ಈಗಾಗಲೇ ಕಾರ್ಯನಿರತವಾಗಿರುವ ಕರ್ನಾಟ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಇದರ  ಸಭೆಯು ಜ.5 ರ ಬುಧವಾರದಂದು ದಾದರ್ ಪಶ್ವಿಮದ ಶಿವಸೇನಾ ಮುಖ್ಯ ಕಚೇರಿಯ ಎದುರುಗಡೆಯ ಕೊಹಿನೂರು ಸ್ಕ್ಯಾರ್ ನ ಅಧ್ಯಕ್ಷ  ಕಚೇರಿಯಲ್ಲಿ ಜರಗಿತು. ಈ  ಸಭೆಯಲ್ಲಿ ಕರ್ನಾಟಕ ಜನಪದ ಪರಿಷತ್ತು ,ಜಾನಪದ ಲೋಕ ,ಇದರ ಪ್ರಧಾನ ಅಧ್ಯಕ್ಷ ,ಟಿ .ತಿಮ್ಮೇಗೌಡ ಐ ಎ ಎಸ್(ನಿ)ಯವರ ಅನುಮೋದನೆಯ ಮೇರೆಗೆ  ನೂತನ ಪದಾಧಿಕಾರಿಗಳ ನೇಮಕಾತಿಯ ಬಗ್ಗೆ  ಕರ್ನಾಟಕ ಸರಕಾರದ ಮಾನ್ಯತೆಯನ್ನು  ನೀಡಿದ ಅಧಿಕೃತ ಪತ್ರವನ್ನು ಮಂಡಿಸುವುದರ  ಮುಖಾಂತರ ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ತಿಳಿಯ ಪಡಿಸಲಾಯಿತು . ಅದರಂತೆ ನೂತನ  ಅಧ್ಯಕ್ಷರನ್ನಾಗಿ ಜೀವವಿಮಾ ಕ್ಷೇತ್ರದಲ್ಲಿ  ರಾಷ್ಟ್ರೀಯ ಮತ್ತು…

Read More

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಮೊದಲ ಡಾಕ್ಟರೇಟ್ ಪದವೀಧರೆಯಾಗಿ ಗಗನ ಬಿ ಪಿಎಚ್‍ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಗಗನ ಬಿ ಮಂಡಿಸಿದ ‘’ಸ್ಕ್ರೀನಿಂಗ್ ಆಫ್ ಪೈಟೋಕೆಮಿಕಲ್ ಕಾನ್ಟ್ಟಿಟ್ಯೂಯೆಂಟ್ಸ್ ಆ್ಯಂಡ್ ಇವ್ಯಾಲ್ಯೇವೇಷನ್ ಆಫ್ ಆ್ಯಂಟಿಕ್ಯಾನ್ಸ್‍ರಸ್ ಪ್ರೋರ್ಪಾಟೀಸ್ ಆಫ್  ಜಿಮ್ನಾಕ್ರಾಂಥೆರಾ ಫರ್ಕೋಹೆರಿಯನಾ (ಹುಕ್. ಎಫ್ ಆ್ಯಂಡ್ ಥಾಮ್ಸ್) ವಾರ್ಬ್’’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ. ಮೂಲತಃ ತರೀಕೆರೆಯವರಾದ ಇವರು ಬಿವಿ ಬಸವರಾಜ್  ಹಾಗೂ ಹೆಚ್‍ಒ ಪ್ರಭಾವತಿ ದಂಪತಿಗಳ ಪುತ್ರಿ. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ ರಾಮ ಭಟ್ ಪಿ ಯವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಸಂಶೋಧನೆಯ ಹಂತದಲ್ಲಿ ಇವರು ಮೌಖಿಕವಾಗಿ ಪ್ರಸ್ತುತ ಪಡಿಸಿದ 6 ಅಂತರಾಷ್ಟ್ರೀಯ ಹಾಗೂ ಒಂದು ರಾಷ್ಟ್ರೀಯ ಪೇಪರ್‍ಗಳಿಗೆ ಅತ್ಯುತ್ತಮ ಪ್ರಸ್ತುತಿಯ ಗೌರವಕ್ಕೆ ಪಾತ್ರವಾಗಿದ್ದು, ಮೂರು ಸಂಶೋಧನಾ ಪೇಪರ್‍ಗಳು ಪ್ರಕಟಗೊಂಡಿವೆ.

Read More