ಪುಣೆ ತುಳುಕೂಟವು ರಜತ ಮಹೋತ್ಸವ ಸಂಭ್ರಮದಲ್ಲಿದ್ದು ನಿರಂತರ ಕಾರ್ಯಕ್ರಮಗಳು ನಡೆಯಲಿದೆ. ಈ ನಿಟ್ಟಿನಲ್ಲಿ ರಜತ ಮಹೋತ್ಸವ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಜುಲೈ 11ರ ಗುರುವಾರದಂದು ಪುಣೆ ವಾರ್ಜೆಯಲ್ಲಿರುವ ಶಿವರ್ಶ್ ಹೋಟೆಲ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಪುಣೆ ತುಳುಕೂಟದ ಮತ್ತು ಮುಂದೆ ನಡೆಯಲಿರುವ ರಜತ ಮಹೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಸಭೆಗೆ ತಿಳಿಸಿದರು ಹಾಗೂ ರಜತ ಮಹೋತ್ಸವದ ಯಶಸ್ವಿಗೆ ಸಮಿತಿ ರಚನೆಯ ಬಗ್ಗೆ ತಿಳಿಸಿದರು.
ಅದೇ ಪ್ರಕಾರವಾಗಿ ಸಮಿತಿಯನ್ನು ರಚಿಸಲಾಗಿದ್ದು, ರಜತ ಮಹೋತ್ಸವ ಸಮಿತಿಗೆ ಉಪಾಧ್ಯಕ್ಷರುಗಳಾಗಿ ಸದಾನಂದ ನಾಯಕ್ ಮಾಳ, ಸಂತೋಷ್ ಶೆಟ್ಟಿ ಮಟ್ಟಾರು, ಸದಾಶಿವ್ ಸಾಲ್ಯಾನ್ ಖುಷ್ಬೂ, ಹರೀಶ್ ಶೆಟ್ಟಿ ಕುರ್ಕಾಲ್, ವಿಶ್ವನಾಥ್ ಪೂಜಾರಿ ಅಂಬಿಕಾ, ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್ ಶೆಟ್ಟಿ ನಗ್ರಿ ಗುತ್ತು, ಕೋಶಾಧಿಕಾರಿಯಾಗಿ ಸಿಎ. ಮನೋಹರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಶರತ್ ಭಟ್ ಅತ್ರಿವನ, ಸಚ್ಚಿದಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಹರೀಶ್ ಶೆಟ್ಟಿ ಕಸ್ಬಾ, ಸ್ಮರಣ ಸಂಚಿಕೆ ಸಂಪಾದಕ ಮಂಡಳಿಗೆ ಹರೀಶ್ ಮೂಡಬಿದ್ರಿ, ಸುಧಾಕರ ಶೆಟ್ಟಿ ಕೆಮ್ತೂರು, ವಿಕೇಶ್ ರೈ ಶೇಣಿ, ವಿಠಲ್ ಮೂಲ್ಯ, ಪದ್ಮಾಕ್ಷಿ ಎಸ್. ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.ಆಯ್ಕೆಯಾದ ನೂತನ ಸಮಿತಿಯ ಪದಾಧಿಕಾರಿಗಳಿಗೆ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ರಜತ ಮಹೋತ್ಸವದ ಮುಂದಿನ ಕಾರ್ಯ ರೂಪು ರೇಷೆಗಳ ಬಗ್ಗೆ ಕಾರ್ಯದರ್ಶಿ ರೋಹಿತ್ ಶೆಟ್ಟಿ ವಿವರಿಸಿದರು. ವಿವಿಧ ಸಮಿತಿಗೆ ನಿರ್ವಾಹಕರುಗಳು ಮತ್ತು ಮಹಿಳಾ ಸಮಿತಿಯನ್ನು ಮುಂದೆ ರಚಿಸಲಾಗುವುದೆಂದು ಸಭೆಯಲ್ಲಿ ತಿಳಿಸಿದರು.ಪ್ರವೀಣ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಜತ ಮಹೋತ್ಸವ ಸಮಿತಿಯ ಉದ್ಘಾಟನೆಯು ನಡೆಯಿತು. ದಿನೇಶ್ ಶೆಟ್ಟಿ ಕಳತ್ತೂರು, ಪ್ರವೀಣ್ ಶೆಟ್ಟಿ ಪುತ್ತೂರು, ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಸದಾನಂದ ನಾಯಕ್, ಸದಾಶಿವ ಸಾಲ್ಯಾನ್, ಹರೀಶ್ ಶೆಟ್ಟಿ ಕುರ್ಕಾಲ್, ವಿಶ್ವನಾಥ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ, ತುಳುಕೂಟ ಪುಣೆಯ ಉಪಾಧ್ಯಕ್ಷರುಗಳಾದ ಮಾಧವ ಶೆಟ್ಟಿ, ಉದಯ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ಜಯರಾಮ್ ಶೆಟ್ಟಿ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಗೌರವ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಕಾರ್ಯಾಧ್ಯಕ್ಷೆ, ಪ್ರಿಯಾ ಎಚ್. ದೇವಾಡಿಗ, ಉಪಾಧ್ಯಕ್ಷರುಗಳಾದ ಗೀತಾ ಪೂಜಾರಿ, ಶಶಿಕಲಾ ಶೆಟ್ಟಿ, ಕಾರ್ಯದರ್ಶಿ ನಯನ ಶೆಟ್ಟಿ ಉಪಸ್ಥಿತರಿದ್ದರು.ವೇದಿಕೆಯಲ್ಲಿದ್ದ ಪ್ರಮುಖರು ದೀಪ ಬೆಳಗಿಸಿ ಚಾಲನೆ ನೀಡಿದರು. ಗೀತಾ ಪೂಜಾರಿ ಪ್ರಾರ್ಥನೆಗೈದರು. ಸಭೆಯಲ್ಲಿ ಉಪಸ್ಥಿತರಿದ್ದ ಸಮಿತಿಯ ಪ್ರಮುಖರಿಗೆ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಸದಾನಂದ ನಾಯಕ್, ಸದಾಶಿವ ಸಾಲ್ಯಾನ್, ಉದಯ್ ಶೆಟ್ಟಿ ಕಳತ್ತೂರು, ರಾಮಣ್ಣ ರೈ ಮೊದಲಾದವರು ರಜತ ಮಹೋತ್ಸವ ಆಚರಣೆಯ ಬಗ್ಗೆ ಶುಭ ಹಾರೈಕೆಗಳನ್ನು ನೀಡಿದರು. ಸಭೆಯಲ್ಲಿ ತುಳುಕೂಟದ ಪದಾಧಿಕಾರಿಗಳು ತುಳು ಭಾಂದವರು ಉಪಸ್ಥಿತರಿದ್ದರು. ತುಳುಕೂಟದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಎಣ್ಣೆ ಹೊಳೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.