Author: admin

ಮೊಬೈಲ್ ಹಾಗೂ ಇತರ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಲು ಯತ್ನಿಸಿದ ಅರೋಪಿಗಳನ್ನು ಮಂಗಳೂರು ಪೊಲೀಸ್ ಕಮೀಷನರ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ವರುಣ್ ಆಳ್ವ ARSI ಇವರು ಬೆನ್ನಟ್ಟಿ, ಆರೋಪಿಗಳನ್ನು ಪತ್ತೆ ಹಚ್ಚಿ ಅವರಲ್ಲಿದ್ದ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಶ್ಲಾಘನೀಯ ಕರ್ತವ್ಯವನ್ನು ನಿರ್ವಹಿಸಿರುವ ನಿಮಗೆ ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳು.

Read More

ಸ್ತ್ರೀ ಶಕ್ತಿಯೇ ಪ್ರಧಾನವಾಗಿರುವ ಈ ಸೃಷ್ಟಿಯ ಮೇಲಿನ ವೈಭವಗಳು ,ಕಾರ್ಯ ಸಿದ್ದಿಗಳು ಶ್ರೀ ದುರ್ಗಾ ದೇವಿಯ ಕೃಪೆಯಿಂದ ಸೃಷ್ಟಿಯಾಗಿವೆ ,ತಾಯಿಯ ಆರಾಧನೆ ಹಾಗೂ ಭಕ್ತಿಯನ್ನು ಹೊಂದಿ ಪೂಜಿಸಿದರೆ ಜೀವನದಲ್ಲಿ ಧರ್ಮದ ಹಾದಿಯಲ್ಲಿ ಮನ ಶಾಂತಿಯಿಂದ ಸಂತೃಪ್ತಿ ದೊರೆಯಲು ಸಾದ್ಯ, ಉತ್ತಮ ಕಾರ್ಯಕ್ಕೆ ಪುಣ್ಯ ಪ್ರಾಪ್ತಿಯಾಗುವಂತೆ ,ದುಷ್ಟ ಸಂಹಾರಕ್ಕಾಗಿಯೇ ಅವತರಿಸಿದ ದುರ್ಗಾ ಮಾತೆಯ ಪೂಜನೀಯ ಪುಣ್ಯ ಪರ್ವವಿದು ನವರಾತ್ರಿ ಉತ್ಸವ . ನಮ್ಮ ಭಾರತೀಯ ಸಂಸ್ಕ್ರತಿಯಂತೆ ಧಾರ್ಮಿಕ ಆಚರಣೆಗಳು ಬಹಳ ವೈಭಯುತವಾಗಿ ನಡೆಯುತ್ತವೆ ಇದರಲ್ಲಿ ನವರಾತ್ರಿ ಉತ್ಸವ ಸ್ತ್ರೀ ಶಕ್ತಿ ಪ್ರಧಾನವಾಗಿ ನಡೆಯುವ ಹಬ್ಬ ,ಶಕ್ತಿಯ ಸೆಳೆತವಿರುವ ಈ ವೈಭಯುತ ಬಂಟರ ಭವನದಲ್ಲಿ ಮಹಿಳಾ ವಿಭಾಗದ ಸ್ತ್ರೀ ಶಕ್ತಿ ಒಂದಾಗಿ ನಮ್ಮ ತುಳುನಾಡ ಅಚಾರ ವಿಚಾರಗಳನ್ನು ತಿಳಿಸುವ ಈ ಅರ್ಥ ಗರ್ಭಿತ ಕಾರ್ಯಕ್ರಮ ಮಾದರಿಯಾಗಿ ನಡೆದಿದೆ ಎಂದು ಪಡುಬಿದ್ರಿ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಲಯನ್ಸ್ ಗವರ್ನರ್ ಸುರೇಶ್ ಶೆಟ್ಟಿ ನುಡಿದರು . ಪುಣೆ ಬಂಟರ ಸಂಘದ  ವತಿಯಿಂದ ನವರಾತ್ರಿ ಉತ್ಸವವು ವಿವಿದ ಧಾರ್ಮಿಕ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಅವರಿಂದ ತೆರವಾದ ಸ್ಥಾನಕ್ಕೆ ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಮೂಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಕಛೇರಿಯಲ್ಲಿ ನಡೆದ ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಚಂದ್ರಹಾಸ ಶೆಟ್ಟಿ ಅವರು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾಗಿರುತ್ತಾರೆ. ಸಭೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.

Read More

ವಿದ್ಯಾಗಿರಿ: ‘ಮಾಧ್ಯಮದಲ್ಲಿ ವೃತಿ ಬದುಕು ಕಂಡುಕೊಳ್ಳುವವರಿಗೆ ಸ್ವಚ್ಛ ಮನಸ್ಸು ಮುಖ್ಯ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಶಿಕ್ಷಕ- ರಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ. ನಿರ್ಮಲ ಮನಸ್ಸಿನಿಂದ ಸಮಾಜದ ಸ್ವಾಸ್ಥ್ಯತೆ ಕಾಪಾಡುವ ಜವಾಬ್ದಾರಿಯನ್ನು ಪತ್ರಕರ್ತ ಹೊಂದಿರಬೇಕು. ಪತ್ರಕರ್ತನ ಕರ್ತವ್ಯದಲ್ಲಿ ಒಳಿತು- ಕೆಡುಕುಗಳೆರಡೂ ಅಡಕವಾಗಿದೆ ಎಂದರು. ವಿದ್ಯಾರ್ಥಿ ಮೇಲೆ ಶಿಕ್ಷಕರು ತೋರಿಸುವ ವಿಶ್ವಾಸವು, ಆ ವಿದ್ಯಾರ್ಥಿ ಮೇಲಿನ ನಂಬಿಕೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ವಿಶ್ವಾಸಾರ್ಹತೆ ಗಳಿಸುವುದು ಮುಖ್ಯ ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಳ್ವಾಸ್ ಎಂದರೆ ವಿದ್ಯಾಸಾಗರ. ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶವೂ ಅಧಿಕ. ತಮ್ಮ ಮನೆಯ ಮಕ್ಕಳು ಆಳ್ವಾಸ್‍ನಲ್ಲಿ ಕಲಿಯಬೇಕು ಎಂಬ ಹಂಬಲ ಹಲವರದ್ದು ಎಂದರು. ಪತ್ರಿಕೋದ್ಯಮ ವಿಭಾಗ ಹಾಗೂ ವಿದ್ಯಾರ್ಥಿಗಳ ಕಾರ್ಯನಿರ್ವಹಿಸುವ ರೀತಿ ನಿಜಕ್ಕೂ ಪ್ರಶಂಸಾರ್ಹ. ಮಕ್ಕಳನ್ನು ಉತ್ತಮ ವಿದ್ಯಾಸಂಸ್ಥೆಗೆ ಕಳುಹಿಸಿದ ಪೋಷಕರಾದ ನೀವೆಲ್ಲರೂ ಧನ್ಯರು…

Read More

ಹಿರಿಯರು ಹೇಳಿದ್ದನ್ನು ಕಿರಿಯರು ಕೇಳಬೇಕು, ಅದನ್ನು ಪರಿಪಾಲಿಸಬೇಕು ಎನ್ನುವ ಪಾಠ ನಮ್ಮಲ್ಲಿದೆ. ಆದರೆ ಅವರೂ ಕೆಲವೊಮ್ಮೆ ತಪ್ಪು ಹೇಳಬಹುದು ಅಥವಾ ನಮ್ಮ ಬದುಕಿಗೆ, ಜೀವನಶೈಲಿಗೆ ಅನ್ವಯವಾಗದೇ ಇರಬಹುದು. ಆಗ ನಾವು ಅದನ್ನು ಸುಮ್ಮನೆ ಪಾಲಿಸಬೇಕೇ ಅಥವಾ ಪರಾಮರ್ಶಿಸಬೇಕೇ ಎನ್ನುವ ಪ್ರಶ್ನೆ ಮನದೊಳಗೆ ಉದ್ಭವವಾಗುವುದು ಸಹಜ. ಕೆಲವರು ಹಿರಿಯರು ಹೇಳಿದ್ದಾರೆ ಎಂದು ತಮಗಿಷ್ಟವಿಲ್ಲದಿದ್ದರೂ ಪಾಲಿಸುತ್ತಾರೆ. ಇನ್ನು ಕೆಲವರು ತಮ್ಮಿಂದ ಸಾಧ್ಯವಿಲ್ಲ ಎಂದುಕೊಂಡು ಇನ್ನೊಬ್ಬರಿಗೆ ದಾಟಿಸಿ ಬಿಡುತ್ತಾರೆ. ಮತ್ತೆ ಕೆಲವರು ಅದ್ಯಾಕೆ ಪಾಲಿಸಬೇಕು ಎಂದು ಚರ್ಚೆ, ವಾಗ್ವಾದಕ್ಕೇ ಇಳಿದು ಬಿಡುತ್ತಾರೆ. ಇದರ ಪರಿಣಾಮಗಳು ಏನಾಗಬಹುದು ಎನ್ನುವ ಕುತೂಹಲ ತಣಿಸುವ ಬಯಕೆಯಷ್ಟೇ ನನ್ನದು. ಪ್ರತಿಯೊಂದೂ ವಿಷಯಕ್ಕೂ ಹೇಳುವವರು ಯಾರೋ ಇರ್ತಾರೆ. ಆದರೆ ಹೇಳುವವರು ಹೇಳುತ್ತಾರೆ ಎಂದರಷ್ಟೇ ಸಾಲದು, ಅದನ್ನು ಕೇಳುವವರೂ ಇರಬೇಕು. ಹೇಳಿದ್ದನ್ನು ಕೇಳುವುದು ಪಾಲಿಸಿದಂತೆ ಅಷ್ಟೇ, ಆದರೆ ಅದನ್ನು ಪರಾಮರ್ಶಿಸಿ ಪಾಲಿಸುವುದು ಉತ್ತಮ. ಕೆಲವೊಮ್ಮೆ ಸುಮ್ಮನೆ ಪಾಲಿಸಬೇಕು, ಪರಾಮರ್ಶೆ ಹೆಸರಿನಲ್ಲಿ ಇತ್ತಂಡವಾದ ಸಲ್ಲದು. ಈ ಮಾತುಗಳು ಎಂದೆಂದಿಗೂ ಸಲ್ಲುತ್ತದೆ ಎಂಬುದೇ ಸತ್ಯ. ಕಾಲ ಒಂದಿತ್ತು,…

Read More

ಆಗ ನಾನು ಒಂದನೇ ತರಗತಿಯಲ್ಲಿದ್ದರಬಹುದು. ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಏನಾದರೊಂದು ವಿಷಯ ಹೇಳುವ ಪರಿಪಾಠವಿತ್ತು. ಆಗ ಮುಖ್ಯಶಿಕ್ಷಕರು ಮುಂದೆ ಬಂದು ವಿದ್ಯಾರ್ಥಿಗಳೆಲ್ಲ ಶಾಲೆಯಲ್ಲಿ ವಾರದ ಪ್ರತಿದಿನ ಸಮವಸ್ತ್ರ ಧರಿಸಬೇಕು ಎಂಬ ನಿಯಮ ಏಕೆ ಇದೆ ಎಂದು ಪ್ರಶ್ನಿಸಿದರು. ಯಾವ ವಿದ್ಯಾರ್ಥಿಯು ಉತ್ತರ ಕೊಡಲಿಲ್ಲ. ಅವರು ತಮ್ಮ ಮಾತು ಮುಂದುವರಿಸುತ್ತಾ, ನಾವೆಲ್ಲರೂ ಒಂದೇ ಎಂಬ ಭಾವನೆ ಸಣ್ಣ ವಯಸ್ಸಿನಲ್ಲೇ ನಮ್ಮ ಮನದಲ್ಲಿ ಬಿತ್ತಬೇಕು. ಜಾತಿ, ಮತ, ಬಡವ, ಶ್ರೀಮಂತ, ಜಾಣ, ದಡ್ಡ, ಹೆಣ್ಣು, ಗಂಡು ಎಂಬ ಬೇಧಭಾವ ತೋರದೆ ನಾವೆಲ್ಲರೂ ಒಂದೇ ತಾಯಿ ಭಾರತಾಂಬೆಯ ಮಕ್ಕಳು ಎನ್ನುವುದನ್ನು ಅರಿಯಬೇಕು. ಈ ಉದ್ದೇಶದಿಂದಲೇ ಶಾಲೆಯಲ್ಲಿ ಕಡ್ಡಾಯವಾಗಿ ಎಲ್ಲರೂ ಸಮವಸ್ತ್ರ ಧರಿಸಬೇಕು ಎಂದರು. ಸಮಾನತೆಯ ಪಾಠವನ್ನು ನಾವು ಸಣ್ಣ ವಯಸ್ಸಿನಲ್ಲೇ ಕಲಿತಿದ್ದರೂ ಬೆಳೆದು ದೊಡ್ಡವರಾದಂತೆ ಅದನ್ನು ಮರೆತುಬಿಡುತ್ತೇವೆ. ಅದು ಯಾವಾಗ ನಮ್ಮ ಮನದೊಳಗೆ ಬೇರು ಬಿಟ್ಟು ವೃಕ್ಷವಾಗಿರುತ್ತದೋ ಎಂಬುದು ಅರಿವೇ ಆಗಿರುವುದಿಲ್ಲ. ಆದರೆ ಮೇಲು, ಕೀಳು , ಹೆಣ್ಣು, ಗಂಡು , ಜಾತಿ, ಧರ್ಮ,…

Read More

ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಉನ್ನತ ಮತ್ತು ಪೂಜ್ಯ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜೀ ಅವರ ಪ್ರೇರಣೆಯಂತೆ ಗೋವುಗಳ ರಕ್ಷಣೆಗೆ ವಿಶೇಷ ಆಸಕ್ತಿ ವಹಿಸಿದ್ದು ಜನರು ಆಶೀರ್ವಾದ ನೀಡಿ ಶಾಸಕನನ್ನಾಗಿ ಚುನಾಯಿಸಿದರೆ ಕಾಪು ಕ್ಷೇತ್ರದಲ್ಲಿ ಕರ್ನಾಟಕದ ಮೊದಲ ಸುಸಜ್ಜಿತ ಗೋ ರುದ್ರಭೂಮಿ ಸ್ಥಾಪಿಸುವುದಾಗಿ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಮತದಾರರಿಗೆ ಭರವಸೆ ನೀಡಿದ್ದಾರೆ. ಕಳತ್ತೂರು, ಮುದರಂಗಡಿ, ಕುತ್ಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಿವಿಧೆಢೆ ಮನೆ ಮನೆ ಭೇಟಿ, ಕಾರ್ಯಕರ್ತರ ಜತೆಗೆ ಸಮಾಲೋಚನೆ ಮತ್ತು ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಸಮಾಜ ಸೇವಾ ಕಾರ್ಯಗಳಿಗೆ ತಾಯಿಯ ಪ್ರೇರಣೆಯೇ ಪೂರಕವಾಗಿದೆ. ಅವರ ಇಚ್ಛೆಯಂತೆ ನಾವು ಮನೆಯಲ್ಲೇ ಗೋವುಗಳನ್ನು ಸಾಕುತ್ತಿದ್ದು ಗುರ್ಮೆ ಗೋ ವಿಹಾರಧಾಮ ಸ್ಥಾಪಿಸಿ ಅನಾಥ ಗೋವುಗಳೂ ಸೇರಿದಂತೆ ನೂರಾರು ಗೋವುಗಳಿಗೆ ರಕ್ಷಣೆ ನೀಡುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿಯೂ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡುವುಕ್ಕಾಗಿ ಸುಸಜ್ಜಿತ ಗೋ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ…

Read More

ಮುಂಬಯಿ, ಮಾ. 18 :    ಕಳೆದ ಒಂದೂವರೆ ದಶಕಗಳಿಂದ ಮುಂಬೈ ವಿಶ್ಕವಿದ್ಯಾನಿಲಯದ  ಕನ್ನಡ  ವಿಭಾಗಕ್ಕೆ ಸುವರ್ಣ ಯುಗ ಎಂದೇ  ಹೇಳಬಹುದು . ಮಹತ್ತರ ಬೃಹತ್ ಪಿಎಚ್ ಡಿ ಗ್ರಂಥಗಳು ಹೊರಬಂದಿರುವುದು ನಮ್ಮ  ಕನ್ನಡ ವಿಭಾಗದಲ್ಲಿ ಎನ್ನುವುದು ಹೆಮ್ಮೆಯ ವಿಷಯ.  ಇದಕ್ಕೆಲ್ಲ ಮುಖ್ಯ ಕಾರಣ ಕನ್ನಡವನ್ನೇ ಉಸಿರಾಗಿಸಿಕೊಂಡ ಮುಖ್ಯಸ್ಥರ ಸಾರಥ್ಯ.  ತನ್ನ  ಜೀವನವನ್ನೇ ವರ್ಷದ 365 ದಿನಗಳ ಕಾಲ ತನ್ನ ಉಸಿರಿನಲ್ಲಿ ಬೆರೆತು ಹೋಗಿರುವ ಕನ್ನಡ ವಿಭಾಗಕ್ಕಾಗಿ, ಕನ್ನಡಕ್ಕಾಗಿ ,ಕನ್ನಡದ ವಿದ್ಯಾರ್ಥಿಗಳ ಸೇವೆಗಾಗಿ ಮುಡಿಪಾಗಿಟ್ಟಿದ್ದು ಇದಕ್ಕೆ ಪ್ರಸಿದ್ಧ ಸಾಹಿತಿಗಳಾದ ಡಾ   ಎಸ್ ಎಲ್ ಭೈರಪ್ಪನವರು ,  ಡಾ.ಕಂಬಾರರು,  ಪ್ರೊ.ಹಂಪನಾ, ಡಾ.ಕಮಲಾ ಹಂಪನಾ, ಡಾ.ವಿವೇಕ್ ರೈ ಮೊದಲಾದ ಸಾಹಿತ್ಯ ದಿಗ್ಗಜರು   ವಿಭಾಗದ ಬಗ್ಗೆ  ವ್ಯಕ್ತಪಡಿಸಿದ ಅಭಿನಂದನೀಯ ನುಡಿಗಳೇ ಸಾಕ್ಷಿಯಾಗಿವೆ.  ತಾನು ಬೆಳೆದು ತನ್ನ ವಿದ್ಯಾರ್ಥಿಗಳನ್ನು ಬೆಳೆಸುವವರು ನಿಜವಾದ ಗುರುಗಳು. ಈ ಸಾಲಿನಲ್ಲಿ ಡಾ. ಜಿ .ಎನ್. ಉಪಾಧ್ಯ ಅವರು ನಿಲ್ಲುತ್ತಾರೆ. ಮುಂಬೈ ವಿವಿ ಕನ್ನಡ ವಿಭಾಗದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ …

Read More

ಬಂಟರಿಗೆ ನಿಗಮ ಒದಗಿಸುವ ಕುರಿತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಮಹಾ ನಿರ್ದೇಶಕರು ಹಾಗೂ ಜೊತೆ ಕಾರ್ಯದರ್ಶಿ ಶ್ರೀ ಪ್ರವೀಣ್ ಭೋಜ ಶೆಟ್ಟಿ, ನಿರ್ದೇಶಕರಾದ ಶ್ರೀ ಅರವಿಂದ್ ಎ ಶೆಟ್ಟಿ, ಮಹಾ ಪೋಷಕರಾದ ಶ್ರೀ ಶಶಿಧರ್ ಶೆಟ್ಟಿ ಇನ್ನಂಜೆ ಮತ್ತು ಕೋಶಾಧಿಕಾರಿ ಶ್ರೀ ಮೋಹನದಾಸ್ ಶೆಟ್ಟಿಯವರನ್ನು ಒಳಗೊಂಡ ಒಕ್ಕೂಟದ ತಂಡವು ಮಹಾರಾಷ್ಟ್ರದ ಸಂಸದ ಶ್ರೀ ಗೋಪಾಲ್ ಶೆಟ್ಟಿಯವರನ್ನು ಭೇಟಿಯಾಗಿ ಬಂಟರಿಗೆ ನಿಗಮ ಒದಗಿಸುವ ಬಗ್ಗೆ ಮನವಿ ಮಾಡಿದರು. ಈ ಸಂದರ್ಭ ಸಂಸದರು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಕರ್ನಾಟಕ ಸರಕಾರದ ಇಂಧನ ಸಚಿವರಾದ ಶ್ರೀ ಸುನೀಲ್ ಕುಮಾರ್ ರವರಲ್ಲಿ ಈ ಕುರಿತು ಮಾತನಾಡುವುದಾಗಿ ಭರವಸೆ ನೀಡಿದರು.

Read More

ಬೆಳಗ್ಗಿನ ತಿಂಡಿ ಮಾಡುವುದು ಎಲ್ಲರಿಗೂ ಒಂದು ಟಾಸ್ಕ್. ಪ್ರತಿ ಬಾರಿ ನೀವು ಡಿಫರೆಂಟ್ ಆಗಿ ಏನಾದರೂ ಟ್ರೈ ಮಾಡಬೇಕು ಎಂದುಕೊಂಡರೆ ಇಲ್ಲಿದೆ ಒಂದು ಹೊಸ ರುಚಿ. ನೀವು ಸಾಮಾನ್ಯವಾಗಿ ಇಡ್ಲಿ ಮಾಡುವಾಗ ಒಂದು ಹೆಚ್ಚಿನ ಸಾಮಾಗ್ರಿಯನ್ನು ಹಾಕಿದರೆ ಇಡ್ಲಿಯ ಸ್ವಾದವನ್ನೇ ಬದಲಿಸಬಹುದು. ಹೌದು ನೀವೊಮ್ಮೆ ಸಬ್ಬಕ್ಕಿ ಇಡ್ಲಿ (Sago Idli) ಮಾಡಿ ಡಿಫರೆಂಟ್ ರುಚಿಯನ್ನು ಆನಂದಿಸಿ. ಬೇಕಾಗುವ ಪದಾರ್ಥಗಳು: ಇಡ್ಲಿ ರವೆ/ ಅಕ್ಕಿ ರವೆ – 1 ಕಪ್ ಸಬ್ಬಕ್ಕಿ – ಮುಕ್ಕಾಲು ಕಪ್ ಹುಳಿ ಮೊಸರು – ಒಂದೂವರೆ ಕಪ್ ನೀರು – 1 ಕಪ್ ತುರಿದ ತೆಂಗಿನಕಾಯಿ – ಕಾಲು ಕಪ್ ಅಡುಗೆ ಸೋಡಾ – ಕಾಲು ಟೀಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ಒಗ್ಗರಣೆಗೆ: ಸಾಸಿವೆ – ಅರ್ಧ ಟೀಸ್ಪೂನ್ ಮುರಿದ ಗೋಡಂಬಿ – 10 ಹಸಿರು ಮೆಣಸಿನಕಾಯಿ – 2 ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ…

Read More