Author: admin
ಬಂಟರ ಸಂಘ ಮುಂಬೈಯ ಸಿಟಿ ಪ್ರಾದೇಶಿಕ ಸಮಿತಿಯ ತಂಡದವರಿಂದ ನೂತನ ಪರಿಕಲ್ಪನೆ ಮನೆಗೆ – ಮನಕ್ಕೆ ಭಜನ ಸತ್ಸಂಗವನ್ನು ಆರಂಭಿಸಿದೆ. ಸನಾತನ ಸoಸ್ಕೃತಿಯನ್ನು ಉಳಿಸುವ ಮುನ್ನಡೆಸುವ ಸಲುವಾಗಿ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಸಲುವಾಗಿ ಮನೆ ಮನ ಭಜನೆ ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ ಪಕ್ಕಳ ಅವರ ಮುತುವರ್ಜಿಯಲ್ಲಿ ಹೊಸ ಯೋಜನೆ ಯೋಚನೆಯೊಂದಿಗೆ ಆರಂಭಿಸಿದೆ. ಸುಮಾರು 25 ಮಂದಿಯ ಸಿಟಿ ಪ್ರಾದೇಶಿಕ ಸಮಿತಿಯ ಭಜನಾ ತಂಡ ಈಗಾಗಲೇ ಎರಡು ಮನೆ ಮನ ಭಜನೆ ಕಾರ್ಯಕ್ರಮ ಪೂರ್ತಿಗೊಳಿಸಿದೆ. ಇತ್ತೀಚೆಗೆ ಶ್ರೀ ದಿಲೀಪ್ ಶೆಟ್ಟಿ – ಶ್ರೀಮತಿ ವೃಂದ ಡಿ ಶೆಟ್ಟಿ ದಂಪತಿಗಳ ಸ್ವಗ್ರಹದಲ್ಲಿ ಭಜನ ಸತ್ಸಂಗ ನಡೆಸಲಾಯಿತು. ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಕೃಷ್ಣ ಶೆಟ್ಟಿ , ಸಂಚಾಲಕರಾದ ಶ್ರೀ ಶಿವರಾಮ ಶೆಟ್ಟಿ ಕಾರ್ಯನಗುತ್ತು, ಉಪ ಕಾರ್ಯಾಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ , ಕಾರ್ಯದರ್ಶಿ ಶ್ರೀ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ , ಮಾಜಿ ಕಾರ್ಯಾಧ್ಯಕ್ಷೆಯರು ಶ್ರೀಮತಿ ಕಲ್ಪನಾ ಕೃಷ್ಣ ಶೆಟ್ಟಿ, …
ಕನ್ನಡ ವಿಭಾಗ, ಮುಂಬಯಿ ವಿಶ್ವಾವಿದ್ಯಾಲಯದಲ್ಲಿ ಎಪ್ರಿಲ್ 13 ರ ಶನಿವಾರದಂದು ಮಧ್ಯಾಹ್ನ 2:00 ರಿಂದ ಮುಂಬಯಿ ವಿಶ್ವವಿದ್ಯಾಲಯ ಜೆ. ಪಿ. ನಾಯಕ್ ಭವನದಲ್ಲಿ ಕನ್ನಡ ವಿಭಾಗದ 46 ರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾಡಲಿದ್ದಾರೆ. ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅವರ ‘ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ – ಡಾ. ಸುಧಾಮೂರ್ತಿ’ ಹಾಗೂ ‘ರಸ ಋಷಿ ರಾಷ್ಟ್ರಕವಿ ಕುವೆಂಪು’, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ‘ನನ್ನ ಇತ್ತೀಚೆಗಿನ ಓದು’, ಕನ್ನಡ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅನುವಾದಿಸಿರುವ ‘ಫ್ರಮ್ ವರ್ಡ್ಸ್ ಟು ನೋಬಲ್ ಡೀಡ್ಸ್…
ಆಹಾರ ಕೇವಲ ದೇಹದ ಅಗತ್ಯ ಮಾತ್ರವಲ್ಲ ಮನಸ್ಸಿನ ಸಂತೋಷಕ್ಕೂ ಹೌದು. ಪ್ರತಿಯೊಂದು ಪ್ರಾಂತ್ಯಕ್ಕೂ ತನ್ನದೇ ಆದ ಆಹಾರ ತಾತ್ವಿಕತೆ ಇದ್ದು ಆಹಾರ ಪದ್ದತಿಯಲ್ಲಿ ಒಂದು ಪರಂಪರೆಯ ಅನುಭವ ಹೊಂದಿದ ಹಿರಿಯರು ಆಹಾರ ವಿಜ್ಞಾನವನ್ನು ಸುವ್ಯವಸ್ಥಿತವಾಗಿ ಅಳವಡಿಸಿಕೊಂಡಿದ್ದರು. ಆದರೆ ನಾಗರಿಕ ಸಮಾಜ ಬೆಳೆದು ಬರುತ್ತಲೇ ತನಗೊಂದು ಬೇರೆ ರೀತಿ ನೀತಿ ನಿಯಮ ನಿಬಂಧನೆ ಆಚಾರ ವಿಚಾರ ಎಂಬ ಧಾರೆಯನ್ನು ರೂಢಿಸಿಕೊಂಡು ಬರುತ್ತಾ ಕೆಲ ಆಹಾರ ಪದ್ದತಿಯನ್ನು ಗಾಳಿಗೆ ತೂರಿ ಬಿಟ್ಟಿದ್ದು ಹೌದಾದರೂ ಸರ್ವಕಾಲದಲ್ಲೂ ವಿಶೇಷವಾದ ಖಾದ್ಯವಾಗಿ ಉಳಿದುಕೊಂಡ ಕೋಳಿರೊಟ್ಟಿ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ. ಆ ನಿಟ್ಟಿನಲ್ಲಿಯಾದರೂ ಈ ರೊಟ್ಟಿಗೆ ಜಿಯಾಗ್ರಾಫಿಕಲ್ ಇಂಡಿಕೇಷನ್ (ಜಿ ಐ ಮಾನ್ಯತೆ) ದೊರಕಬೇಕಿತ್ತು. ಪ್ರಾಂತ್ಯವೊಂದಕ್ಕೆ ಸೇರಿದ ಉತ್ಪನ್ನ ಆಯಾ ಪಾಂತ್ಯದ ನಿರ್ದಿಷ್ಟ ಗುಣಮಟ್ಟ ಅಥವಾ ಆದ್ಯತೆಗೆ ಅವಲಂಭಿಸಿದ ವಿಶಿಷ್ಟ ರುಚಿ ಹೊಂದಿದ್ದರೆ ಅದಕ್ಕೆ ಭೌಗೋಳಿಕ ಸೂಚ್ಯಂಕ ಮಾನ್ಯತೆ ಪಡೆಯಬಹುದು. ವಸ್ತುವೊಂದಕ್ಕೆ ಭೌಗೋಳಿಕ ಮಾನ್ಯತೆ ಪಡೆಯಬೇಕಾದರೆ ಚೆನ್ನೈನ ಜಿಯೋಗ್ರಾಫಿಕಲ್ ಇಂಡಿಕೇಷನ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ವಸ್ತುವಿನ ಬಗೆಗಿನ ಸರಿಯಾದ ಮಾಹಿತಿ…
ನಾವು ನೀವೆಲ್ಲಾ ಮಾತಿನಲ್ಲಿ ಮಹಾ ಜಾಣರು. ಪುಂಖಾನು ಪುಂಖವಾಗಿ ಮಾತು ಹನಿ ಚೆಲ್ಲುತ್ತಲೇ ಇರುತ್ತೇವೆ. ಆದರೆ ವಾಸ್ತವ? ಮಾತು ಮಾತಿಗೆ ನಾವೇ ಶ್ರೇಷ್ಠ, ಇತರರು ಸಾಮಾನ್ಯರೆಂಬ ಭಾವವೇ ಮಾಧ್ಯಮಗಳಲ್ಲಿ ಅಲ್ಲಿ ಇಲ್ಲಿ ಹೆಚ್ಚು ಕೇಳಿ ಬರುವುದೇ ಒಂದು ವಿಪರ್ಯಾಸ. ನಾವು ಸರ್ವಧರ್ಮ ಸಮನ್ವಯದ ಸಹಬಾಳ್ವೆಯ ವಿಶ್ವ ಗುರುವೆನಿಸಿರುವ ಭಾರತ ಮಾತೆಯ ಮಕ್ಕಳು. ಆದರೆ ಮತ- ಧರ್ಮ- ಪಂಗಡಗಳ ಚೀ- ಮುಳ್ಳಿನೊಳಗೇ ಸಿಕ್ಕಿ, ತಪ್ಪಿಸಿಕೊಳ್ಳಲು ಅವರ-ಇವರ ಬೊಟ್ಟು ಮಾಡಿ ತೋರಿಸುವುದು. ಹೇಳಿಕೆ ಕೊಡುವುದು ಸರಿಯೇ? ನಮ್ಮ ಮುಂದೆ ನಮ್ಮ ಭವಿಷ್ಯದ ಮಕ್ಕಳು ಯುವಕರಿದ್ದಾರೆ. ಅವರ ಮನದಲ್ಲಿ ಸದ್ಭಾವ ಮೂಡಿಸುವ ನುಡಿಗಳು ಕೇಳಿಬರಬೇಕು. ಸಾಮಾಜಿಕ ನೆಮ್ಮದಿ ನೆಲೆಯಾಗಬೇಕು. “ನಾವು ನಡೆಯುವ ದಾರಿ ಮುಂದಿನ ಪೀಳಿಗೆಗೆ ಅನುಕರಣೀಯವಾಗಿಬೇಕು. ಸಂಸ್ಕಾರಯುತ ಭವಿಷ್ಯವನ್ನು ರೂಪಿಸಲು ಹದಿಹರೆಯ ಸೂಕ್ತ ಸಂದರ್ಭವಾಗಿದೆ” ಎಂದು ಹೇಳುವ ನಾವು ಆ ಹರೆಯದಲ್ಲಿದ್ದಾಗ ಏನು ಮಾಡಿರುವೆವು. ಈಗ ಏನು ಮಾಡ್ತಾ ಇದ್ದೇವೆ? ಈ ಪ್ರಶ್ನೆಗಳು ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿದು ಹೋಗಿವೆ. “ಈ ರಾಷ್ಟ್ರದ ಏಳ್ಗೆಗೆ…
ಸಮಾಜದಲ್ಲಿ ತೃತೀಯ ಲಿಂಗಿಗಳಾಗಿ ಗೌರವಯುತವಾಗಿ ಜೀವನ ನಡೆಸುತ್ತಿರುವ ಮಂಗಳೂರಿನ ಅಶೋಕನಗರ ದಂಬೇಲಿನ ಮಂಗಳಮುಖಿ ಐಶ್ವರ್ಯ ಪರಿವಾರದ ಸದಸ್ಯರು ಒಟ್ಟು ಸೇರಿ ಕೋಡಿಕಲ್ ಕಟ್ಟೆಯ ಬಳಿ ದ್ವಿತೀಯ ಬಾರಿಗೆ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕಲಾವಿದರ ಕಾಮಧೇನು ಪಟ್ಲ ಸತೀಶ್ ಶೆಟ್ಟಿಯವರು ಪಟ್ಲ ಫೌಂಡೇಶನ್ ಟ್ರಸ್ಟ್ ಮೂಲಕ ಕಲಾವಿದರಿಗೆ ಸಲ್ಲಿಸುತ್ತಿರುವ ಸೇವೆಗಾಗಿ ಅವರನ್ನು ಗೌರವಿಸಿ ಸನ್ಮಾನಿಸಿದರು. ಗೌರವವನ್ನು ಸ್ವೀಕರಿಸಿದ ಪಟ್ಲ ಸತೀಶ್ ಶೆಟ್ಟಿಯವರು ಐಶ್ವರ್ಯ ಪರಿವಾರದ ಸದಸ್ಯರು ಯಾರಲ್ಲಿಯೂ ಬಿಕ್ಷೆ ಬೇಡದೆ ತಮ್ಮ ಸಂಪಾದನೆಯ ಒಂದಂಶವನ್ನು ಒಟ್ಟು ಸೇರಿಸಿ ಭಕ್ತಿಪೂರ್ವಕ ಕಾರ್ಯಕ್ರಮವನ್ನು ಅನ್ನಸಂತರ್ಪಣೆಯೊಂದಿಗೆ ಸ್ಥಳೀಯ ಪರಿಸರದವರನ್ನು ಒಟ್ಟು ಸೇರಿಸಿ ಸಮಾಜದಲ್ಲಿ ಎಲ್ಲರೊಂದಿಗೆ ನಾವು ಇದ್ದೇವೆ ಎಂದು ತೋರಿಸಿಕೊಟ್ಟಿರುವುದು ಶ್ಲಾಘನೀಯ ಕಾರ್ಯ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಥಮವಾಗಿ ಯಕ್ಷಗಾನ ಕಲಾವಿದರ ನೋವುಗಳಿಗೆ ಸ್ಪಂದಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ನಾಟಕ ರಂಗಭೂಮಿ, ದೈವಾರಾದನೆಯ ಪರಿಚಾರಕರಿಗೆ ಮತ್ತು ವಾದ್ಯ ವೃಂದದವರಿಗೆ ಸಹಕರಿಸುತ್ತಿದ್ದು ಮುಂದಿನ ಹಂತದಲ್ಲಿ ಮಂಗಳಮುಖಿ…
ಮುಂಬಯಿ ಮಹಾನಗರದಲ್ಲಾಗಲೀ ಯಾ ಉಪನಗರಗಳಲ್ಲಾಗಲೀ ಸಂಘ ಸಂಸ್ಥೆಗಳ ಯಾವುದೇ ಸಮಾರಂಭವನ್ನು ನಡೆಸುವಾಗ ಅಂತಹ ಸಮಾರಂಭಗಳಲ್ಲಿ ನಾಟಕ ಯಾ ಸಾಂಸ್ಕೃತಿಕ ವೈಭವ ಇದ್ದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಲ್ಲಿ ಸಂದೇಹವಿಲ್ಲ. ಮಾರ್ಚ್ ತಿಂಗಳ 23 ರಂದು ತುಳು ಸಂಘ, ಬೊರಿವಲಿಯ 13ನೇ ವಾರ್ಷಿಕೋತ್ಸವ ಸಮಾರಂಭವು ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೊರಿವಲಿ ಸಂಸ್ಕೃತಿ ಕೇಂದ್ರ, ಬೊರಿವಲಿ (ಪ.) ಮುಂಬಯಿ ಇಲ್ಲಿ ತುಳು ಸಂಘ, ಬೊರಿವಲಿಯ ಗೌರವ ಅಧ್ಯಕ್ಷರೂ ಜನಪ್ರಿಯ ಉದ್ಯಮಿಯು ಆದ ಡಾ. ವಿರಾರ್ ಶಂಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ತುಳು ಸಂಘ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರ ಉಪಸ್ಥಿತಿಯಲ್ಲಿ ಜರಗಿದ್ದು ದಿ. ಯು ಆರ್ ಚಂದರ್ ರಚಿಸಿದ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕದಿಂದ “ಜಾನಪದ ವಿಭೂಷಣ” ಪ್ರಶಸ್ತಿ ಪುರಸ್ಕೃತ ಕರುಣಾಕರ ಕೆ ಕಾಪು ಇವರು ನಿರ್ದೇಶಸಿದ ನಾಟಕ “ಕಲ್ಕುಡ-ಕಲ್ಲುರ್ಟಿ” ಸಮಯದ ಅಭಾವವಿದ್ದರೂ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಪ್ರದರ್ಶನಗೊಂಡಿತು. ತೆರೆದ ತುಂಬಿದ ಸಭಾಂಗಣದಲ್ಲಿ ಮೌನವಾಗಿ ನಾಟಕವನ್ನು ವೀಕ್ಷಿಸುತ್ತಿದ್ದ ಕಲಾಭಿಮಾನಿಗಳು…
ಪ್ರತಿಯೊಬ್ಬ ಭಕ್ತನೂ ಅನಾದಿ ಕಾಲದಿಂದಲೂ ತನ್ನ ನಿತ್ಯ ಜೀವನದ ಜಂಜಾಟದ ತನುಮನ ನೆಮ್ಮದಿಗಾಗಿ ಆಶ್ರಯಿಸುವ ತಾಣವೇ ದೇವಾಲಯ. ಅಲ್ಲಿನ ಪ್ರಶಾಂತತೆ, ಗರ್ಭಗುಡಿಯಲ್ಲಿರುವ ಚೈತನ್ಯ ಮೂರ್ತಿಯನ್ನು ಕಾಣುವುದರಿಂದ ಧನ್ಯತಾಭಾವ ಸಿಗುತ್ತದೆ. ಅದಕ್ಕಾಗಿ ಎಷ್ಟೇ ಕಷ್ಟ, ನಷ್ಟ, ತ್ಯಾಗವನ್ನು ಸಹಿಸಿಕೊಂಡು ಜೀವನದಲ್ಲಿ ಒಮ್ಮೆಯಾದರೂ ಪ್ರಮುಖ ದೇಗುಲಗಳಿಗೆ ಹೋಗಬೇಕು ಎಂದು ಬಯಸುವುದು ಸಹಜ. ಇತ್ತೀಚೆಗೆ ಕೆಲವು ದೇವಾಲಯಗಳ ಸಂಪತ್ತು ಬೆಳೆದು ಶ್ರೀಮಂತಿಕೆಯ ಶಿಖರ ಏರುತ್ತಿರುವುದು ಸಂತೋಷ. ಆದರೆ ದೇವರು, ದೇವಾಲಯಗಳು ಅಭಿವೃದ್ಧಿಯಾದಂತೆ ಅಲ್ಲಿ ಬಡವ ಬಲ್ಲಿದ ತಾರತಮ್ಯವನ್ನು ಗಮನಿಸುವಾಗ ದೇವರು ಕೂಡ ಬಡ ಭಕ್ತನನ್ನು ಅವಾಗಣಿಸುತ್ತಿದ್ದಾನೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಕಾರಣ ಆ ಪುಣ್ಯ ಕ್ಷೇತ್ರಗಳಲ್ಲಿ ದೇವರನ್ನು ನೋಡಲು ಹಣ ಕೊಡಬೇಕಾಗಿದೆ. ಹಣವಂತಿಗೆ ವಿಐಪಿ ದರ್ಶನ ಎಂಬ ಹೆಸರಲ್ಲಿ ಶೀಘ್ರ ದರ್ಶನಕ್ಕಾಗಿ ಟಿಕೆಟ್ ವ್ಯವಸ್ಥೆ ಮಾಡಲಾಗುತ್ತಿದೆ. ದಾರಿ ಖರ್ಚಿಗೆ ಮಾತ್ರ ಹಣ ಇಟ್ಟುಕೊಂಡು ಇಂಥ ದೇಗುಲಕ್ಕೆ ಹೋಗುವ ಬಡ ಭಕ್ತರು ಧರ್ಮದರ್ಶನ ಮಾಡಲು 2-3 ದಿನ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ದೇವರು ಈ ಅಸಮಾನತೆಯನ್ನು…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ), ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಸಮಾರಂಭವು ಎಪ್ರಿಲ್ 14 ರಂದು ಭಾನುವಾರ ಸಂಜೆ 6.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸಮಾರಂಭವನ್ನು ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಫೌಂಡೇಶನ್ ನ ಟ್ರಸ್ಟಿ, ಉದ್ಯಮಿ ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಗೋವಿಂದ ದಾಸ ಕಾಲೇಜ್ ನ ನಿವೃತ್ತ ಉಪ ಪ್ರಾಂಶುಪಾಲ ಪ್ರೊ.ರಮೇಶ್ ಭಟ್ ಯಸ್ ಜಿ, ಲಲಿತಾ ಕಲಾ ಆರ್ಟ್ಸ್ ನ ಮಾಲಕ ಧನಪಾಲ್ ಶೆಟ್ಟಿಗಾರ್ ತಡಂಬೈಲ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್ ಅವರನ್ನು ಸನ್ಮಾನಿಸಲಾಗುವುದು. ಅದೇ ರೀತಿ ಯಕ್ಷಗಾನ…
45 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ, 682 ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಅಧಿಕ ಅಂಕ ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ
ವಿದ್ಯಾಗಿರಿ: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 682 ವಿದ್ಯಾರ್ಥಿಗಳು 95% ಶೇಕಡಾಕ್ಕಿಂತ ಅಧಿಕ ಅಂಕವನ್ನು ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಟಾಪ್ ಟೆನ್ ರ್ಯಾಂಕ್ನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಒಟ್ಟು 45 ವಿದ್ಯಾರ್ಥಿಗಳು ಸ್ಥಾನವನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ಸಾಧನೆ ಮೆರೆಯುವಂತೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ನೂತನ ಆರ್ ಗೌಡ, 600ರಲ್ಲಿ 595 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತರುಣ್ ಕುಮಾರ್ ಪಾಟೀಲ್ 594 ಅಂಕ ಪಡೆದು 4ನೇ ಸ್ಥಾನ ಪಡೆದಿದ್ದಾರೆ. ಆಕಾಶ್ ಪಿಎಸ್, ಅನಿರುದ್ಧ ಪಿ ಮೆನನ್, ಸುಮಿತ್ ಸುದೀಂದ್ರ 5ನೇ ರ್ಯಾಂಕ್ ಗಳಿಸಿದರೆ, ಸಹನಾ ಕೆ, ಶಿವಷೇಶ 6ನೇ ರ್ಯಾಂಕ್, ವಾಣಿ ಕೆ, ಮೇಧಾ ವಿ, ಜೀವಿಕಾ ಎಸ್, ಹರೀಶ್ ಉದಯ್, ಭೂಮಿ, ಷಾನ್ ಪಿಂಟೋ, ಅಶೋಕ್ ಸುತಾರ್, ಮಂಜುನಾಥ್ ಡಿ. 7ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.…
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕರಾವಳಿ ಪ್ರದೇಶದ ಅತ್ಯಂತ ಸೂಕ್ಷ್ಮವಾದ ವ್ಯಾಪಾರ ಪ್ರದೇಶವಾಗಿ ಅದು ‘ಬಂದರು’ ಎಂದೇ ಹೆಸರುವಾಸಿಯಾಗಿದೆ. ಇಲ್ಲಿನ ಬಂದರು ಪ್ರದೇಶದ ಕಠಿಣ ಪರಿಶ್ರಮಿಗಳಿಗೆ ‘ಕಡಲಿನ ಮಕ್ಕಳು’ ಎಂಬ ಹೆಸರೂ ದಾಖಲೆಯಲ್ಲಿದೆ. ಹಗಲು ಇರುಳು ಬಂದರು ಪ್ರದೇಶದ ಚಟುವಟಿಕೆಗಳೆಂದರೆ ಮೀನುಗಾರಿಕೆ. ಈ ಮೀನುಗಾರಿಕೆಯ ಹೆಸರಿನಲ್ಲಿ ಎಲ್ಲಾ ವರ್ಗದವರು ಶಾಮೀಲಾಗಿ ವ್ಯಾಪಾರದ ದೃಷ್ಟಿಯಲ್ಲಿ ಹಣ ಸಂಪಾದಿಸಲು ಟೊಂಕಕಟ್ಟಿ ನಿಂತವರು. ಬಂದರು ಪ್ರದೇಶದಲ್ಲಿ ಪ್ರತಿಯೊಬ್ಬನ ಬದುಕೂ ಅತ್ಯಂತ ಶ್ರಮದಾಯಕವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಜೀವನಕ್ಕೆ ಆಧಾರವಾದ ಪ್ರಮುಖ ಪ್ರದೇಶ ‘ಬಂದರು’ ಯಾವ ರೀತಿಯಲ್ಲಿ ಶುಚಿತ್ವದಿಂದ ಸೊರಗುತ್ತಿದೆಯೆಂದರೆ, ಬಂದರಿನ ಅತೀ ಸೂಕ್ಷ್ಮವಾದ ಸ್ಥಳಗಳೆಲ್ಲಾ ಗಬ್ಬೆದ್ದು ನಾರುತ್ತಿದೆ. ಮೂಗು ಮುಚ್ಚಿಕೊಂಡು ಉಸಿರು ಬಿಗಿ ಹಿಡಿದುಕೊಂಡೇ ಬಂದರು ಪ್ರದೇಶವನ್ನು ಸುತ್ತಾಡುವಷ್ಟರಲ್ಲಿ ನಿಜಕ್ಕೂ ಶುಚಿತ್ವದ ಕೊರತೆ ಕಣ್ಣಿಗೆ ರಾಚುತ್ತದೆ. ದುರ್ವಾಸನೆಯ ಬಂದರು ಪ್ರದೇಶದ ಅವ್ಯವಸ್ಥೆಯನ್ನು ಅವಲೋಕಿಸುವಾಗ, ಸರಕಾರಕ್ಕೆ ಕಡಲಿನ ಮಕ್ಕಳ ಅಥವಾ ಬಂದರು ಪ್ರದೇಶದವರ ಸಂಕಟ ಅರ್ಥವಾಗದಿರುವುದು ವಿಪರ್ಯಾಸವೇ ಸರಿ. ‘ನುಡಿದಂತೆ ನಡೆದಿದ್ದೇವೆ’ ಎಂದು ಹೇಳುತ್ತಿರುವುದು…















