Author: admin
ಪೆರಾರ ಮುಂಡಬೆಟ್ಟು ಮೂಲದ ಅಕ್ಷಯಾ ತನ್ನ ಎಳವೆಯಿಂದಲೇ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದು ಬೆಳೆಯುತ್ತಿದ್ದಂತೆ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಪ್ರಸ್ತುತ ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹಾಯಕ ಪ್ರಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಈಕೆ ಬಹುಮುಖ ಪ್ರತಿಭೆಯ ಮೇಧಾವಿಯಾಗಿದ್ದು ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಛಾಪು ಮೂಡಿಸಿದ್ದು ಈಗಾಗಲೇ ನಾಡಿನ ಹೆಸರಾಂತ ಸಾಹಿತ್ಯ ವಿಮರ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಕ್ರೋ ಬಯಾಲಜಿಯಲ್ಲಿ ವಿಜ್ಞಾನ ಪದವಿ, ಕನ್ನಡ ಸಾಹಿತ್ಯದ ಎಂ.ಎ ಸ್ನಾತಕೋತ್ತರ ಶಿಕ್ಷಣ ಪಡೆದ ಧೀಮಂತೆ. ಅಷ್ಟಕ್ಕೇ ಸಾಲದೆಂಬಂತೆ ಮಾನವ ಸಂಪನ್ಮೂಲ ವಿಷಯ ಕುರಿತು ಎಂ.ಬಿ.ಎ ವ್ಯಾಸಂಗವನ್ನೂ ಪೂರ್ತಿಗೊಳಿಸಿದ್ದು ಪ್ರಾಧ್ಯಾಪಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಜನಮೆಚ್ಚಿದ ಸಾಹಿತಿಯಾಗಿ ಗಮನೀಯ ಸಾಧನೆಗೈದ ಅಕ್ಷಯಾ ಅವರ ಅರ್ಹತೆಯನ್ನು ಗುರುತಿಸಿ ಇದೀಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಗೌರವ ಸದಸ್ಯೆಯಾಗಿಯೂ ಆಯ್ಕೆ ಮಂಡಳಿ ಆರಿಸಿದ್ದು ಆಕೆಯ…
ಸಂಶೋಧನೆ ಮತ್ತು ಕಥನ ನಮ್ಮಲ್ಲಿ ಸದಾ ಜಿಜ್ಞಾಸೆ ಹುಟ್ಟಬೇಕು. ಜಿಜ್ಞಾಸೆ ಹುಟ್ಟಿದರೆ ಮಾತ್ರ ಕಥೆ ರಚನೆ ಸಾಧ್ಯ ಎಂದು ಸಾಹಿತಿ ರಾಜಶ್ರೀ ರೈ ಪೆರ್ಲ ಹೇಳಿದರು. ಉಜಿರೆ ಶ್ರೀಧ. ಮಂ. ಕಾಲೇಜಿನಲ್ಲಿ ಕನ್ನಡ ಸಂಘವು ಆಯೋಜಿಸಿದ್ದ ಕಥೆ ಕಟ್ಟುವ ಬಗೆ ಕಥಾ ರಚನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು. ಹೊಸತನ ಮತ್ತು ಅವಲೋಕನವಿದ್ದರೆ ಮಾತ್ರ ಕಥೆ ಪರಿಪೂರ್ಣವಾಗುತ್ತದೆ ಕಥೆಗಾರರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಥೆ ಯಾವುದೇ ಬರೆದರೂ ಅದನ್ನು ಓದುವ ವರ್ಗವು ಮುಖ್ಯವಾಗಿರುತ್ತದೆ. ಕಥೆಗಾರ ತನ್ನತನವನ್ನು ಹುಟ್ಟುಹಾಕಿ, ಬೆಳೆಸಿ, ತನ್ಮೂಲಕ ಓದುಗನಿಗೆ ತಲಪುವಂತೆ ಇರಬೇಕು ಎಂದರು. ನಾವು ಬರೆದ ಕಥೆಯನ್ನು ಓದುಗರು ಗುರುತಿಸಿದ್ದಾರೆ ಎಂದರೆ ಅದು ನಮ್ಮ ಪರಿಪೂರ್ಣತೆ ಅಲ್ಲ. ನಾವು ಕಥೆಯಲ್ಲಿ ಬರೆದ ಯಾವುದೋ ಒಂದು ಹೊಸ ವಿಷಯ ನಮ್ಮನ್ನು ಗುರುತಿಸುವಂತೆ ಮಾಡಿರಬಹುದು. ಆದ್ದರಿಂದ ಕಥೆ ಬರೆಯುವಾಗ ಹೊಸ ಸಂದರ್ಭ, ಹೊಸ ಸನ್ನಿವೇಶ, ಸಂದೇಶವನ್ನು ನೀಡುತ್ತ ಬರೆಯಬೇಕು.ಆ ಶಕ್ತಿ ಕಥೆಗಾರರಲ್ಲಿ ಇರಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ…
ಇತ್ತೀಚಿನ ದಿನಗಳಲ್ಲಿ ಯಕ್ಷಗಾನದತ್ತ ಯುವ ಸಮುದಾಯ ಆಕರ್ಷಿತಗೊಳ್ಳುತ್ತಿದೆ. ಆದರೆ ಇಂತಹ ಶ್ರೇಷ್ಠ ಎಲ್ಲರಿಗೂ ಒಲಿಯವುದಿಲ್ಲ. ನಿರಂತರ ಅಭ್ಯಾಸ, ಅಧ್ಯಯನ ಶೀಲತೆ, ಕಲೆಯ ಮೇಲಿನ ಒಲುಮೆ, ಪ್ರೀತಿ, ಅಭಿಮಾನ ಆ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಮಾಡುತ್ತದೆ. ಬಂಟ್ವಾಳದ ಎಂಜಿನಿಯರ್ ವಿದ್ಯಾರ್ಥಿಯೋರ್ವನಿಗೆ ಯಕ್ಷಗಾನ ಕಲೆ ಒಲಿದಿದೆ. ಬಾಲ್ಯದಿಂದಲೂ ಯಕ್ಷಗಾನ ಮೇಲಿನ ಆಸಕ್ತಿ ಇಂದು ಈ ಕಲಾವಿದನನ್ನು ಯಕ್ಷ ಲೋಕದಲ್ಲಿ ಸಾಧನೆ ಮಾಡುವಂತೆ ಮಾಡಿದೆ. ಯಕ್ಷಗಾನದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಬಾಚಿಕೊಳ್ಳುತ್ತಾ ವಿದ್ಯಾಭ್ಯಾಸದೊಂದಿಗೆ ಯಕ್ಷಗಾನ ಕ್ಷೇತ್ರದಲ್ಲೂ ಪರಿಣತಿಯನ್ನು ಪಡೆದುಕೊಳ್ಳುತ್ತಿದ್ದಾನೆ. ಆತನೇ ಅನ್ವೇಶ್ ಆರ್ ಶೆಟ್ಟಿ. ತಾಂತ್ರಿಕ ಪದವಿ (ಇಂಜಿನೀಯರಿಂಗ್) ಶಿಕ್ಷಣದ ಜತೆ ಕಲೋಪಾಸನೆಯಲ್ಲಿ ತೊಡಗಿಸಿಕೊಂಡಿರುವ ಕೆಲವೇ ಮಂದಿ ವಿದ್ಯಾರ್ಥಿಗಳಲ್ಲಿ ಅನ್ವೇಷ್ ಆರ್.ಶೆಟ್ಟಿ ಓರ್ವರು. ಯಕ್ಷಗಾನ ರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅನ್ವೇಷ್ ವಿದ್ಯಾರ್ಥಿ ಯಕ್ಷ ಸಾಧಕ. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ತನ್ನನ್ನು ಗುರುತಿಸಿಕೊಂಡು ಯಶಸ್ಸು ಪಡೆಯುತ್ತಿರುವುದು ಇವರ ಸಾಧನೆಯಾಗಿದೆ. ಮೂಲತ: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿ ಪತ್ರಕರ್ತ, ಕಲಾವಿದ ರತ್ನದೇವ್ ಶೆಟ್ಟಿ ಮತ್ತು ಶಿಕ್ಷಕಿ ಸುಜಾತಾ ದಂಪತಿಯ ಪುತ್ರ…
ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಸೈಸೆಕ್- ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್’ ಸಮಾರೋಪ ಸಮಾರಂಭ ‘ಗುಣಮಟ್ಟದ ಕಲಿಕೆಗೆ ಪರಿಶ್ರಮ ಪ್ರಾಮುಖ್ಯ’
ಮೂಡುಬಿದಿರೆ: ಕಲಿಕೆಯುವ ಮಾಹಿತಿ ಯಾವುದೇ ಇರಲಿ, ಗುಣಮಟ್ಟದ ಕಲಿಕೆಗೆ ಪರಿಶ್ರಮ ಪ್ರಾಮುಖ್ಯವಾಗುತ್ತದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್ಒ ಜಾಕ್ಸಿನ್ ಫೆನಾರ್ಂಡಿಸ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ತ್ರಿಶಾಕ ಫೌಂಡೇಶನ್, ಸೈಸೆಕ್ ಸಹಯೋಗದಲ್ಲಿ ಆಯೋಜಿಸಿದ್ದ ‘ಸೈಸೆಕ್- ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್’ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು. ಬದುಕಿನಲ್ಲಿ ಚಿಂತನೆಯ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಿ, ಕಲಿಕೆಯುವ ವಿಷಯವು ಸಣ್ಣ ಅಥವಾ ದೊಡ್ಡದಾಗಿರಲಿ. ನಿಮ್ಮ ಪರಿಶ್ರಮ ಇರಲೇ ಬೇಕು ಎಂದ ಅವರು, ಪ್ರತಿಯೊಬ್ಬರಿಗೂ ಜ್ಞಾನವಿದೆ, ಆದರೆ, ಕಲಿಯುವ ಹಂಬಲ ಇರಬೇಕು. ಈ ದಿನಗಳ ಕಲಿಕೆಯೇ ಮುಂದಿನ ದಿನಗಳ ಮಾರ್ಗದರ್ಶಿ ಎಂದು ಅವರು ವಿಶ್ಲೇಷಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಸಮಯ ಹಣಕ್ಕಿಂತ ಮುಖ್ಯ. ಸಕಾರಾತ್ಮಕ ಪರಿಸರ ಇದ್ದರೆ, ಪ್ರತಿಯೊಬ್ಬ ವ್ಯಕ್ತಿಯು ಉತ್ತಮವಾಗಿ ಬೆಳೆಯಲು ಸಾಧ್ಯ ಎಂದರು. ಯಾವುದೇ ವ್ಯಕ್ತಿಯನ್ನು ನಿರ್ದಿಷ್ಟತೆಗೆ ಬ್ರ್ಯಾಂಡ್…
ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ; ಮಾರ್ಚ್ 23ರಂದು ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಅರ್ಜಿ ವಿತರಣೆ
ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ್ ಶೆಟ್ಟಿಯವರ ನೇತೃತ್ವದಲ್ಲಿ ಪ್ರತೀ ವರ್ಷ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊಡಲ್ಪಡುವ ಧನ ಸಹಾಯ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ಬಂಟ ಬಂಧುಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವಾರ್ಷಿಕ ವಿಧವಾ ವೇತನ, ಮತ್ತು ಮಾನಸಿಕ ಅಸ್ವಸ್ಥೆಯಲ್ಲಿರುವ ಯಾ ವಿಕಲಾಂಗ ಚೇತನರಿಗೆ ಆರ್ಥಿಕ ಧನ ಸಹಾಯ ವಿತರಣೆಯು ಜೂನ್ ತಿಂಗಳಲ್ಲಿ ನಡೆಯಲಿದೆ. ಆ ಪ್ರಯುಕ್ತ ಅರ್ಜಿ ವಿತರಣೆಯು ಬಂಟರ ಸಂಘ ಮುಂಬಯಿ ಇದರ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿಯವರ ಸಮಕ್ಷಮದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದಗುತ್ತು ಇವರ ಮುಂದಾಳಾತ್ವದಲ್ಲಿ ಮಾರ್ಚ್ 23ರ ಶನಿವಾರದಂದು ಹೋಟೆಲ್ ಕ್ರೌನ್ ಬಿಸಿನೆಸ್, ಗೋಲ್ಡನ್ ನೆಸ್ಟ್ ಸರ್ಕಲ್ ಬಳಿ, ಮೀರಾ -ಭಾಯಂದರ್ ರೋಡ್ ಇಲ್ಲಿ ಸಂಜೆ 6:00 ರಿಂದ 7ರ ತನಕ…
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ “ಒಂದು ದೇಶ-ಒಂದು ಚುನಾವಣೆ’ ನೀತಿಯ ಜಾರಿಗೆ ಶಿಫಾರಸು ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಿ, ಮುಂದಿನ 100 ದಿನಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸಮಿತಿ ತನ್ನ ವರದಿಯಲ್ಲಿ ಸಲಹೆ ನೀಡಿದೆ. ಸುದೀರ್ಘ ಅಧ್ಯಯನ, ವಿಚಾರ-ವಿಮರ್ಶೆ ನಡೆಸಿ ಸಮಿತಿಯು “ಒಂದು ದೇಶ-ಒಂದು ಚುನಾವಣೆ’ಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಸಲ್ಲಿಸಿದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರದಲ್ಲಿನ ಹಾಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಈ ಬಗ್ಗೆ ಒಲವು ವ್ಯಕ್ತಪಡಿಸುತ್ತಲೇ ಬಂದಿತ್ತು. ಈ ವಿಷಯದ ಕುರಿತಂತೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಕೇಂದ್ರ ಸರಕಾರ ಈ ಸಂಬಂಧ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಈಗ ಈ ಸಮಿತಿಯೂ “ಒಂದು ದೇಶ-ಒಂದು ಚುನಾವಣೆ’ಗೆ ಶಿಫಾರಸು ಮಾಡಿದ್ದು, 2029ರಿಂದಲೇ ದೇಶದಲ್ಲಿ ಈ ನೀತಿಯನ್ನು…
ಮೈಸೂರಿನ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ (ನಿ.) ವತಿಯಿಂದ ರಜತ ಮಹೋತ್ಸವ ವರ್ಷದ ಪ್ರಯುಕ್ತ ಹಮ್ಮಿಕೊಂಡಿದ್ದ ಬೆಳ್ಳಿಚಪ್ಪರ, ಸಾಧಕರಿಗೆ ಸನ್ಮಾನ, ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ಸ್ಮರಣ ಸಂಚಿಕೆಗೆ ಜಾಹೀರಾತು ಮತ್ತು ಲೇಖನಗಳು ಹಾಗೂ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಮೈಸೂರಿನ ಜ್ಞಾನ ಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರನ್ನು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಪರವಾಗಿ ಅಧ್ಯಕ್ಷರಾದ ನಾರಾಯಣ ವಿ ಹೆಗ್ಡೆ ಅವರು ಅಭಿನಂದಿಸಿದರು.
ಹೀಗೆ ವಾಟ್ಸಾಪ್ ನೋಡುತ್ತಿದ್ದಾಗ ದಿಢೀರನೆ ಒಂದು ವಿಡಿಯೋ ನನ್ನ ಗಮನ ಸೆಳೆದಿತ್ತು. ಅದು ನೀರಿನ ಕುರಿತಾಗಿತ್ತು. ಮೊದಲು ನಮ್ಮ ಅಜ್ಜಂದಿರು ನೀರನ್ನು ನದಿಯಲ್ಲಿ ಕಾಣುತ್ತಿದ್ದರಂತೆ, ನಮ್ಮಪ್ಪಂದಿರು ಬಾವಿಯಲ್ಲಿ ಕಂಡರಂತೆ, ಮುಂದುವರಿಯುತ್ತಾ ನಮ್ಮ ಜನಾಂಗದವರು ನಳ್ಳಿಯಲ್ಲಿ ಕಂಡರಂತೆ, ಪ್ರಸ್ತುತ ಈಗಿನ ಮಕ್ಕಳು ಬಾಟಲಿಯಲ್ಲಿ ಕಂಡರೆ ಮುಂದಿನ ಜನಾಂಗದ ಮಕ್ಕಳು ಬಾಟಲಿಯಲ್ಲಿ ಕಾಣುವರೇ ಎಂಬ ಪ್ರಶ್ನಾರ್ಥಕ ಚಿಹ್ನೆ. ನಾವು ಇನ್ನೂ ಎಚ್ಚೆತ್ತು ಕೊಳ್ಳದಿದ್ದರೆ ಮನುಷ್ಯನ ಕಣ್ಣೀರಿನಲ್ಲಿ ಮಾತ್ರ ನೀರು ಕಾಣಲು ಸಾಧ್ಯ ಎಂಬುವುದು ಭಯಾನಕ ಸತ್ಯ. ಈಗಿನ ಪರಿಸ್ಥಿತಿ ನೋಡಿದರೆ ಇವೆಲ್ಲಾ ಮಾತುಗಳು ನಿಜ ಅನ್ಸುತ್ತೆ ಅಲ್ವಾ? ನೀರು ಪ್ರತಿಯೊಬ್ಬನಿಗೂ ಬೇಕಾದ ಅತ್ಯಮೂಲ್ಯ ದ್ರವ್ಯ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳು ಸರಿಯಾಗಿ ಕಾರ್ಯ ನಿರ್ವಹಿಸಲು ನೀರು ಅತ್ಯಗತ್ಯ ಎಂಬುದು ತಿಳಿದ ಸಂಗತಿ. ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಅಸ್ತಿತ್ವದ ಅಡಿಪಾಯವೇ ನೀರಾಗಿದೆ. ಹೀಗೆ ನಾನಾ ಉಪಯೋಗಗಳನ್ನು ಒಳಗೊಂಡ ನೀರು ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಸರಿಯಾಗಿ ದೊರೆಯುತ್ತಿಲ್ಲ. ನೀರಿನ ತಾಣವೇ ಆಗಿರುವ ಕರ್ನಾಟಕದಲ್ಲಿ ಇಂದು ನೀರಿನ ಅಭಾವ…
ಮೂಡುಬಿದಿರೆ: ಜೀವನದಲ್ಲಿ ಸಿಗುವ ಪ್ರತಿ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವುದು ನಮ್ಮ ಮೊದಲ ಆಯ್ಕೆ ಆಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯು ಶುಕ್ರವಾರ ಕನ್ನಡ ಮಾಧ್ಯಮ ಸಭಾಂಗಣದಲ್ಲಿ ಹಮ್ಮಿಕೊಂಡ ‘ಪ್ರಶಸ್ತಿ ದಿನ 2023 ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೆನ್ಸಿಲ್ ನಿಂದ ಗೀಚಲುಬಹುದು ಅಂತೆಯೇ ಅತ್ಯುತ್ತಮವಾಗಿ ಬರೆಯಬಹುದು. ಅದನ್ನು ಗೀಚುವ ಬದಲು ಬರವಣಿಗೆಯಲ್ಲಿ ಬಳಸಬೇಕಾದುದ್ದು ಮಾತ್ರ ನಮ್ಮ ಆಯ್ಕೆ ಎಂದರು. ಹುಟ್ಟುಹಬ್ಬದ ಸಂಭ್ರಮಕ್ಕೆ ಕೇಕ್ ಕತ್ತರಿಸುವ ಬದಲು, ಗಿಡಗಳನ್ನು ತರಿಸುವ ಮತ್ತು ಅದನ್ನು ಬೆಳೆಸಲು, ಗುರುತಿಸಲು ಕಲಿಯುವ ಎಂದು ಹೇಳಿದ ಅವರು ಮಕ್ಕಳನ್ನು ಪ್ರೋತ್ಸಾಹಿಸಿದರು. ಆಳ್ವಾಸ್ ಶಾಲೆಗಳ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಸಹಾಯಕ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ, ಆಳ್ವಾಸ್ ಕಿಂಡರ್ ಗಾರ್ಡನ್ ಆಡಳಿತಾಧಿಕಾರಿ ನಿತೇಶ್ ಮಾರ್ನಾಡ್, ಶಾಲೆಯ ಮುಖ್ಯಶಿಕ್ಷಕಿ ರಂಜಿಕಾ ರೈ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ…
ಆಳ್ವಾಸ್ ಕಾಲೇಜಿನಲ್ಲಿ ‘ಅನ್ನನಾಳ ರೋಗಕ್ಕೆ ಪೌಷ್ಟಿಕಾಂಶದ ನಿರ್ವಹಣಾ ಕಾರ್ಯಾಗಾರ’ ‘ಪೌಷ್ಟಿಕ ಆಹಾರದ ಮೂಲಕ ರೋಗ ನಿವಾರಣೆ ಸಾಧ್ಯ’
ಮೂಡುಬಿದಿರೆ: ‘ಪೌಷ್ಟಿಕ ಆಹಾರ ಸೇವನೆಯ ಮೂಲಕ ಅನ್ನನಾಳದ ರೋಗಗಳು (ಡಿಸ್ಪೇಜಿಯ) ನಿವಾರಿಸಲು ಸಾಧ್ಯ ಎಂದು ಆಹಾರ ಚಿಕಿತ್ಸಕಿ, ಬೆಂಗಳೂರಿನ ಟ್ರಸ್ಟ್ವೆಲ್ ಆಸ್ಪತ್ರೆಯ ಶ್ರೀಮತಿ ವೆಂಕಟರಮಣ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗ ಹಾಗೂ ಐಎಪಿಇಎನ್ ಇಂಡಿಯಾ ಮಂಗಳೂರು ಅಧ್ಯಾಯದ ಜಂಟಿ ಆಶ್ರಯದಲ್ಲಿ ನಡೆದ ಶುಕ್ರವಾರ ಕಾಲೇಜಿನಲ್ಲಿ ನಡೆದ ‘ಅನ್ನನಾಳದ ರೋಗಗಳಿಗೆ ಪೌಷ್ಟಿಕಾಂಶದ ನಿರ್ವಹಣಾ ಕಾರ್ಯಾಗಾರ’ ದಲ್ಲಿ ಅವರು ಮಾತನಾಡಿದರು. ಅನ್ನನಾಳದ ರೋಗ ಲಕ್ಷಣ ಕಂಡುಬಂದಾಗ ಎಚ್ಚೆತ್ತುಕೊಳ್ಳುವುದು ಬಹುಮುಖ್ಯ. ಒಂದು ರೋಗವು ನಾನಾ ರೋಗಕ್ಕೆ ಕಾರಣವಾಗಬಹುದು, ಪೌಷ್ಟಿಕ ಆಹಾರ ಸೇವನೆಯೂ ಒಂದು ನಿವಾರಕ ಅಂಶ ಎಂದು ಅವರು ಮಾಹಿತಿ ನೀಡಿದರು. ಪೌಷ್ಟಿಕಾಂಶ ಆಹಾರ ಎಲ್ಲವನ್ನೂ ಗುಣಪಡಿಸುವ ಶಕ್ತಿ ಹೊಂದಿದೆ. ಕೋವಿಡ್ ನಂತರ ಜನರು ತಮ್ಮ ರೋಗ ನಿವಾರಿಸಲು ಮಾತ್ರೆಗಳನ್ನು ಸೇವಿಸುವುದಕ್ಕಿಂತ ಪೌಷ್ಟಿಕ ಆಹಾರ ಸೇವಿಸುವಲ್ಲಿ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅದನ್ನು ಮುಂದುವರೆಸುವುದು ಅವಶ್ಯಕವಾಗಿದೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಹಾರವು ಎಲ್ಲಾ ಜೀವರಾಶಿಗೂ ಮುಖ್ಯವಾದುದು.…














