Author: admin

ಭಾರತ್‌ ಫೌಂಡೇಶನ್‌ ವತಿಯಿಂದ ಐದನೇ ಆವೃತ್ತಿಯ ಮಂಗಳೂರು ಲಿಟ್‌ಫೆಸ್ಟ್‌ ನ ಎರಡನೇ ದಿನದ ಕಾರ್ಯಕ್ರಮಗಳು ರವಿವಾರ ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಭವನದಲ್ಲಿ ನಡೆಯಿತು. ಬೆಳಗ್ಗಿನಿಂದ ಸಂಜೆಯ ವರಗೆ ವಿವಿಧ ಗೋಷ್ಠಿಗಳು ಆಯೋಜನೆಗೊಂಡು ಎರಡು ದಿನಗಳ ಕಾರ್ಯಕ್ರಮ ಸಂಪನ್ನಗೊಂಡಿತು. ರಜಾ ದಿನವಾದ್ದ ರಿಂದ ಹೆಚ್ಚಿನ ಸಂಖ್ಯೆಯ ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕಂಡು ಬಂತು. ಆದಿಜಾಂಬವ ಮೂಲ ಪುರುಷರಾಗಿದ್ದು, ಭೂಮಿ ಹುಟ್ಟುವ 6 ತಿಂಗಳು ಮೊದಲೇ ಆತನ ಜನನ. ಆಗ ಎಲ್ಲ ಕಡೆಗಳಲ್ಲಿ ಸಮುದ್ರವಿತ್ತು. ಕಡಲಿನಲ್ಲಿ ಹುಟ್ಟಿದ ಕಾರಣ ಆತನಿಗೆ ಜಾಂಬವ ಎನ್ನುವ ಹೆಸರು ಬಂತು. ಅನಂತರದಲ್ಲಿ ಆದಿಮಾಯೆ, ಬ್ರಹ್ಮ,ವಿಷ್ಣು ಮಹೇಶ್ವರರ ಜನನವಾಗುತ್ತದೆ ಹೀಗೆಂದು ದಕ್ಕಲ ಜಾಂಬವ ಪುರಾಣದ 18 ಯುಗಗಳ ಕತೆಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟವರು ದಕ್ಕಲ ಮುನಿಸ್ವಾಮಿ. ಹರಟೆ ಕಟ್ಟೆಯಲ್ಲಿ ತಮ್ಮ ದಕ್ಕಲ ಜಾಂಬವ ಪುರಾಣದ ಕುರಿತು ಮಾತನಾಡಿದರು. ದಕ್ಕಲ ಮುನಿಸ್ವಾಮಿ ಅವರ ಒಡನಾಡಿಯಾಗಿರುವ ಘನಶ್ಯಾಮ್‌ ಅವರು ವಿವರಣೆ ನೀಡಿ, ಊರಿಂದ ಊರಿಗೆ ಹೋಗಿ ದಕ್ಕಲ ಜಾಂಬವ ಪುರಾಣವನ್ನು ಜನರಿಗೆ…

Read More

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಸುನಿಲ್‌ ಆರ್‌. ಶೆಟ್ಟಿ ಅವರಿಂದ ಕೊಡಮಾಡಿದ ನೂತನ ಬ್ರಹ್ಮರಥದ ಪುರಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಫೆ. 15 ಹಾಗೂ 16 ರಂದು ನಡೆಯಲಿದೆ. ಫೆ.15 ರಂದು ಕುಂಭಾಶಿ. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು ವಂಡ್ಸೆ, ಚಿತ್ತೂರು, ಈಡೂರು, ಜಡ್ಕಲ್‌ ಹಾಲ್ಕಲ್‌ ಮಾರ್ಗವಾಗಿ ಪುರಮೆರವಣಿಗೆಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ರಥ ಸಾಗುವ ಮಾರ್ಗದಲ್ಲಿ ಅಲ್ಲಿನ ಮುಖ್ಯ ದೇಗುಲ‌ಗಳ ವತಿಯಿಂದ ನೂತನ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Read More

ಮುಂಬಯಿ ಮಹಾನಗರ ಪಾಲಿಕೆಯ ರಾಜಾವಾಡಿ ಆಸ್ಪತ್ರೆಯಲ್ಲಿ ನಿಯಮಿತವಾಗಿ ‘ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ’ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪರಿಣಾಮ ಜನ್ಮ ಜಾತ ಶ್ರವಣ ದೋಷ ಇರುವ ಮಕ್ಕಳಿಗೆ ಶಾಶ್ವತವಾಗಿ ಪರಿಹಾರ ಸಿಗಲಿದೆ. ದೋಷವಿರುವ ಮಕ್ಕಳಲ್ಲಿ ಐದು ವರ್ಷಗಳವರೆಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ಮಕ್ಕಳಲ್ಲಿ ಶ್ರವಣ ದೋಷದ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ವಿಶೇಷವೇನೆಂದರೆ ಡಾ. ಅದೀಪ್ ಶೆಟ್ಟಿ ನೇತೃತ್ವದಲ್ಲಿ ಈ ಯೋಜನೆ ಕಾರ್ಯನಿರತಗೊಳ್ಳಲಿದೆ. ಮೂಲತ: ಮಂಗಳೂರು ಸುರತ್ಕಲ್ ನ ಡಾ. ಅದೀಪ್ ಶೆಟ್ಟಿಯವರು ರಾಜಾವಾಡಿಯ ಕಿವಿ- ಮೂಗು – ಗಂಟಲು ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪಾಲಿಕೆಯ ಕೆಇಎಂ ಮತ್ತು ನಾಯರ್ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲಾಗುತಿತ್ತು. ದೇಶದ ಅತ್ಯಂತ ಕಿರಿಯ ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಆದ ಡಾ. ಅದೀಪ್ ಶೆಟ್ಟಿ ಅವರ ಪರಿಶ್ರಮದ ಫಲವೇ ಉಪನಗರದ ರಾಜಾವಾಡಿ ಆಸ್ಪತ್ರೆಯಲ್ಲಿ ಈ ಶಸ್ತ್ರ ಚಿಕಿತ್ಸೆ ಆರಂಭಗೊಳ್ಳಲಿದೆ. ಮುಂಬಯಿಯಲ್ಲಿರುವ ಅಲಿ ಯಾವರ್ ಜಂಗ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್…

Read More

ಜೈನ್ ಟ್ಯೂಬ್ಸ್ ಉದ್ದಿಮೆ ಕರಾವಳಿಯಲ್ಲಿ ಉತ್ತಮ ವ್ಯವಹಾರ ನಡೆಸಿ ಅಭಿವೃದ್ಧಿ ಹೊಂದಲಿ ಎಂದು ಸಿಎ ನಿತಿನ್ ಶೆಟ್ಟಿ ಹಾರೈಸಿದರು. ಅವರು ಮಾ.30 ರಂದು ಪಡುಬಿದ್ರಿ ಹೆಜಮಾಡಿ ಭಾಗದಲ್ಲಿ ನೂತನವಾಗಿ ಆರಂಭವಾಗಿರುವ ಜೈನ್ ಟ್ಯೂಬ್ಸ್ ಉದ್ದಿಮೆಯ ಮೊದಲನೇ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜೈನ್ ಗ್ರೂಪ್ ಆಫ್ ಕಂಪನೀಸ್ ನ ಸಂಸ್ಥಾಪಕ ಮಹೇಂದ್ರ ಕುಮಾರ್ ಜೈನ್ ಮಾತನಾಡಿ, ಎಲ್ಲರ ಮಾರ್ಗದರ್ಶನ, ದೂರದರ್ಶಿತ್ವ, ಸಲಹೆ ಹಾಗೂ ವಿಚಾರಗಳಿಂದಲೇ ನಾವು ಬೆಳೆದಿದ್ದೇವೆ. ನಿಮ್ಮೆಲ್ಲರ ಸಹಕಾರ ಜೈನ್ ಗ್ರೂಪ್ ನೊಂದಿಗಿರಲಿ ಎಂದರು. ಜೈ ಹಿಂದ್ ಗ್ರೂಪ್ ನ ಚೇರ್ಮನ್ ಹಾಗೂ ಆಡಳಿತ ನಿರ್ದೇಶಕ ದಿವ್ಯ ಕುಮಾರ್ ಜೈನ್ ಮಾತನಾಡಿ, ಯಾವುದೇ ಉತ್ಪಾದನ ಘಟಕ ಸ್ಥಾಪನೆಗೆ ಉಡುಪಿ ಜಿಲ್ಲೆಯ ಜನರ ಮನೋಭಾವನೆ ಮತ್ತು ಜೈವಿಕ ಪರಿಸರ ವ್ಯವಸ್ಥೆ ಪೂರಕವಾಗಿವೆ. ಭಾರತ ವಿಶ್ವದ ಅಗ್ರಮಾನ್ಯ ಉತ್ಪಾದನ ಹಬ್ ಎನಿಸಲಿದೆ. ಜೈ ಹಿಂದ್ ಗ್ರೂಪ್ ಕೂಡ ನಿಮ್ಮೆಲ್ಲರ ಸಹಕಾರದೊಂದಿಗೆ ಅಗ್ರಪಂಕ್ತಿಯಲ್ಲಿ ಮುಂದುವರಿಯಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಆಸ್ಪೆನ್ ಇನ್ಫ್ರಾ ಎಸ್ಇಝೆಡ್ ನ ಹಿರಿಯ…

Read More

ಕರಾವಳಿ ಭಾಗದಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆಯ ಸಂದೇಶವನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಮುನ್ಸೂಚನೆಯಂತೆ ಮಾ. 10ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಬೀಸಲಿದ್ದು, ಗರಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವಾರ ಮಾ. 4ರಂದು ಉಷ್ಣ ಅಲೆ ಮತ್ತು ಮಾ. 8ರಂದು ಕಡಲಿನ ಅಬ್ಬರದ ಎಚ್ಚರಿಕೆಯನ್ನು ಐಎಂಡಿ ನೀಡಿತ್ತು. ಅದರಂತೆ ಕರಾವಳಿಯ ಹಲವು ಕಡೆಗಳಲ್ಲಿ ಉರಿ ಸೆಕೆ ಮತ್ತು ಉಷ್ಣತೆಯಿಂದ ಕೂಡಿದ ಗಾಳಿ ಬೀಸಿತ್ತು. ಈಗ ಮತ್ತೆ ಎಚ್ಚರಿಕೆ ನೀಡಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವ ಅಗತ್ಯ ಇದೆ. ಮಾರ್ಚ್‌ನಲ್ಲಿ ಅತ್ಯಧಿಕ ತಾಪಮಾನ : ‌ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಲ್ಲಿ ಉಷ್ಣ ಅಲೆ ಬರುವುದಿಲ್ಲ. ಈ ವರ್ಷ ಉತ್ತರ ಭಾರತದ ಹಲವು ಕಡೆಗಳಲ್ಲಿ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ ಹೆಚ್ಚು ಇತ್ತು. ಉತ್ತರ ದಿಕ್ಕಿನಿಂದ ಸುಳಿಗಾಳಿ ಬೀಸುತ್ತಿದ್ದು, ಉಷ್ಣ ಅಲೆಯನ್ನು ತರುತ್ತಿದೆ. ಪರಿಣಾಮವಾಗಿ ಕರಾವಳಿಯಲ್ಲಿ ಈಗಿರುವ ಉಷ್ಣಾಂಶ ಮತ್ತಷ್ಟು…

Read More

ಮುಂಬಯಿಯಲ್ಲಿ ನಗರದ ಹೃದಯ ಭಾಗವಾಗಿರುವ ವರ್ಲಿಯಲ್ಲಿ ಮಧುಸೂದನ್ ಮಿಲ್ ಕಂಪೌಂಡಿನಲ್ಲಿ ಇರುವ ಅಪ್ಪಾಜಿ ಬೀಡು ಫೌಂಡೇಶನ್‌[ರಿ] ಮತ್ತು ಐ ಲೇಸಾ ದಿ ವಾಯ್ಸ್‌ ಆಫ್‌ ಓಷನ್‌ [ರಿ] ಸಂಸ್ಥೆಯು ಜಂಟಿಯಾಗಿ ಕಲಾವಿದ ಸೂರಿ ಮಾರ್ನಾಡ್‌ ಸಾಹಿತ್ಯದ ಹಸಿರು ಬೆಟ್ಟದ ಒಡೆಯ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಟೀಂ ಐಲೇಸಾದ ಕವಿ ಸಾಹಿತಿ ಶಾಂತರಾಮ ಶೆಟ್ಟಿಯವರು ಮಾತನಾಡುತ್ತಾ ಕೊರೋನ ಸಂದರ್ಭದಲ್ಲಿ ಕವಿತೆ ಒಂದನ್ನು ಬರೆದಿದ್ದೆ ಅದನ್ನು ಕಂಡು ನನ್ನ ಆತ್ಮೀಯರಾಗಿದ್ದ ಕೆಲವರು ಅದಕ್ಕೊಂದು ಗಟ್ಟಿತನದ ಶಕ್ತಿ ನೀಡಿದರು, ವಿದೇಶದ ಗೆಳೆಯರು ಕೂಡ ಅದಕ್ಕೆ ಸಹಕಾರ ಆ ಶಕ್ತಿಯೇ  ಐ ಲೇಸಾ ತಂಡವಾಗಿ ಬೆಳೆದು ಬಂತು. ಸೂರಿ ಮಾರ್ನಾಡ್ ಓರ್ವ ಅದ್ಭುತ ಕಲಾವಿದ ಅಯ್ಯಪ್ಪ ಸ್ವಾಮಿ ಭಕ್ತರಾಗಿರುವ ಅವರು ಭಕ್ತಿಯ ಅನುಭವಗಳನ್ನು ಸಾಹಿತ್ಯದಲ್ಲಿ ಹಂಚಿಕೊಂಡಿದ್ದಾರೆ. ಭಕ್ತಿಗೀತೆ ಜನಸಾಮಾನ್ಯರಿಗೆ ತಲುಪುವ ಕೆಲಸ ನಮ್ಮೆಲ್ಲರಿಗೂ ಆಗಿದೆ ಅದು ಅವರಿಗೆ ನೀಡುವ ಕೊಡುಗೆಯಾಗಿದೆ ಎಂದು ನುಡಿದರು. ಅಂದೇರಿ ಅಯ್ಯಪ್ಪ ಭಕ್ತಬಂಧದ ಸಂಸ್ಥಾಪಕ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಆಶೀರ್ವಚನ…

Read More

ಮುಂಬಯಿ (ಆರ್‍ಬಿಐ), ಜ.25: ಬೃಹನ್ಮುಂಬಯಿ ಚೆಂಬೂರು ಛೆಡ್ಡಾ ನಗರದಲ್ಲಿನ ಶ್ರೀನಾಗ ಸುಬ್ರಹ್ಮಣ್ಯ ಪ್ರತಿಷ್ಠಾಪಿತ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಜರುಗುತ್ತಿರುವ ಬ್ರಹ್ಮಕಲಶಾಭಿಷೇಕ ಸಮಾರಂಭದಲ್ಲಿ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ಗೋಪಾಲ್ ಶೆಟ್ಟಿ ಮತ್ತು ಉಷಾ ಜಿ.ಶೆಟ್ಟಿ ದಂಪತಿ ಹಾಗೂ ಅತಿಥಿüಯಾಗಿದ್ದ ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ, ಮಹಾನಗರದಲ್ಲಿನ ಹೆಸರಾಂತ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ, ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ಉಪಸ್ಥಿತರಿದ್ದು ಗಣ್ಯರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಗಳನ್ನೀಡಿ ಸನ್ಮಾನಿಸಿ ಶುಭಾರೈಸಿ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು. ಅರುಣಾ ನಾಗೇಂದ್ರ ಆಚಾರ್ಯ ದಂಪತಿ ಸಂಸದರನ್ನು ಬರಮಾಡಿ ಕೊಂಡರು. ವಿದ್ವಾನ್ ಹೆರ್ಗ ರವೀಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಪ್ರಸಾದ್ ಭಟ್ ಉಪಸ್ಥಿತರಿದ್ದು ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯ…

Read More

ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ದಿ.ಕೋಟ ವೈಕುಂಠ ದತ್ತಿ ಪುರಸ್ಕಾರಕ್ಕೆ ಯಕ್ಷಗಾನ ನಿರ್ದೇಶಕ ಕೊೈಕೂರು ಸೀತಾರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ, ಸ್ತ್ರೀ-ಪುರುಷ ಯಕ್ಷಗಾನ ವೇಷಗಳ ಮೂಲಕ ಪ್ರಸಿದ್ಧಿ ಪಡೆದು ಹಲವಾರು ಸಂಘ ಸಂಸ್ಥೆಗಳ ಮೂಲಕ ಯಕ್ಷಗಾನವನ್ನು ನಿರ್ದೇಶಿಸಿ ಹಲವಾರು ಶಿಷ್ಯರಿಗೆ ಯಕ್ಷಗಾನ ಕಲಿಸಿ, ಬಹುಮುಖ ಕಲಾವಿದರಾಗಿರುವ ಕೊೈಕೂರು ಸೀತಾರಾಮ ಶೆಟ್ಟಿ ಅವರನ್ನು ದಿ.ಕೋಟ ವೈಕುಂಠ ದತ್ತಿ ಪುರಸ್ಕಾರ ಆಯ್ಕೆ ಮಾಡಲಾಗಿದ್ದು ಫೆ. 25 ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು, ನಂತರ ನೆಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಅವರಿಂದ ನಗೆ ಹಲವು ಬಗೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಡಾ|| ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕೆ ಅಶ್ವಿನಿ ದಿನೇಶ್, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ…

Read More

ನಮ್ಮ ಜೀವನದ ತೇರನ್ನು ಎಳೆಯಲು ಈ ಮಾಯ ನಗರಿಗೆ ಬಂದಿದ್ದು, ಇಲ್ಲಿ ನಾವು ನಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಿದ್ದು ನಮ್ಮ ಜನ್ಮ ಭೂಮಿಯನ್ನು ನೆನಪಿಸುತ್ತ ಹಳೆ ಬೇರು ಜೊತೆ ಹೊಸ ಬೇರನ್ನು ಸೇರಿಸಿ ಜಾತಿ ಮತ, ಬಡವ ಶ್ರೀಮಂತ ನೆಂಬ ಬೇದವಿಲ್ಲದೆ, 6,000 ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ತಿಳಿಯಪಡಿಸುವುದಕ್ಕೆ ಚಿಣ್ಣರ ಬಿಂಬ ಮಕ್ಕಳ ಸಂಸ್ಥೆಯನ್ನು ಕಟ್ಟಿದ ಪೊಲೀಸ ಅಧಿಕಾರಿ ಪ್ರಕಾಶ್ ಬಂಡಾರಿ ಅವರು ಈ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ ಅವರಿಗೆ ಮತ್ತು ಅವರ ತಂಡಕ್ಕೆ ಅಭಿನಂದನೀಯ. ಚಿನ್ನರ ಬಿಂಬದ ಕಲಾವಿದರು ಭವಿಷ್ಯವಿದೆ ಮುಂದೆ ಖ್ಯಾತ ಕಲಾವಿದರಾಗುತ್ತಾರೆ ಎಂಬುದು ಇಂದು ನಡೆದ ಕಲಾಪ್ರಕಾರಗಳೇ ಸಾಕ್ಷಿಯಾಗಿದೆ . ಚಿನ್ನರಲ್ಲಿ ಕನ್ನಡವನ್ನು ಬೆಳಿಸಿ ಉಳಿಸುವ ಈ ಸಂಸ್ಥೆಗೆ ಕರ್ನಾಟಕ ಸರಕಾರ ಅನುದಾನ ನೀಡದೇ ಇರುವುದು ತುಂಬಾ ಖೇದಕರ ಸಂಗತಿ, ಸರಕಾರ ಮುಂದಿನ ದಿನಗಳಲ್ಲಿ ಚಿಣ್ಣರ ಬಿಂಬ ವನ್ನು ಗುರುತಿಸಿ ಅನುದಾನ ದೊಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು, ಈ ಸಂಸ್ಥೆಯು 25ನೇ ವರ್ಷವನ್ನು…

Read More

ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿನ ಬಹುಮುಖ ಪ್ರತಿಭಾನ್ವಿತ ಕಲಾವಿದ ಕಂಠದಾನ ಸ್ಟಾರ್ ಸುರೇಂದ್ರ ಕುಮಾರ್ ಮಾರ್ನಾಡ್ (ಸ್ವೀಟ್ ಸೂರಿ) ಇವರ ಭಕ್ತಿಪ್ರಧಾನ ಸಾಹಿತ್ಯದೊಂದಿಗೆ ಮೂಡಿ ಬಂದ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಿಯಾಧಾರಿತ `ಹಸಿರು ಬೆಟ್ಟದ ಒಡೆಯ’ ಭಕ್ತಿಗೀತೆಯು ಇದೇ ಫೆ.18ರ ಶನಿವಾರ ರಾತ್ರಿ 8.00 ಗಂಟೆಗೆ ಶಿವರಾತ್ರಿಯ ಶುಭ ಸಂಧರ್ಭದಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನ, ಅಪ್ಪಾಜಿ ಬೀಡು, ಮಧುಸೂಧನ ಮಿಲ್ಸ್ ಆವರಣ, ಪಿ.ಬಿ ಮಾರ್ಗ, ವರ್ಲಿ, ಮುಂಬಯಿ ಇಲ್ಲಿ ನಗರದ ಹಿರಿಯ ಮೂವರು ಗುರುಸ್ವಾಮಿಗಳ ದಿವ್ಯೋಪಸ್ಥಿತಿ ಹಾಗೂ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ಭಕ್ತಿ ಕುಸುಮದ ಲೋಕಾರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಪ್ಪಾಜಿ ಬೀಡು ಇದರ ಸಂಸ್ಥಾಪಕ ರಮೇಶ್ ಗುರುಸ್ವಾಮಿ ವಹಿಸಲಿದ್ದು ಮುಖ್ಯ ಅತಿಥಿಯಾಗಿ ತುಳು-ಕನ್ನಡ ಕವಿ ಹಾಗೂ ಸಾಹಿತಿ ಶಾಂತಾರಾಮ್ ವಿ.ಶೆಟ್ಟಿ, ಗೌರವ ಅತಿಥಿಯಾಗಿ ಜಿಯೋ ಸಮೂಹ ಸಂಸ್ಥೆಗಳು ಬೆಂಗಳೂರು ಇದರ ಪ್ರಬಂಧಕ ಗೋಪಾಲ್ ಪಟ್ಟೆ ಉಪಸ್ಥಿತಿ ಹಾಗೂ ಲಂಡನ್ (ಯು.ಕೆ) ಅಲ್ಲಿನ ಐಲೇಸಾದ ರೂವಾರಿ ವಿವೇಕಾನಂದ…

Read More