ರಾಮಕೃಷ್ಣ ಮೋರ್ ನಾಟ್ಯ ಶಾಲೆ ಚಿಂಚ್ವಾಡ್ ಪುಣೆಯಲ್ಲಿ ಪ್ರದರ್ಶನಗೊಂಡ “ರಾತ್ರೆಗ್ ಈ ಪಗೆಲ್ ಗ್ ಯಾನ್” ತುಳು ನಾಟಕದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ್ ಶೆಟ್ಟಿಯವರು ಅತಿಥಿಯಾಗಿ ಭಾಗವಹಿಸಿದರು.

ಈ ಸಂಧರ್ಭದಲ್ಲಿ ಖ್ಯಾತ ಮಕ್ಕಳ ತಜ್ಞ ಮತ್ತು ‘ಹೊರನಾಡ ಕನ್ನಡ ರತ್ನ ‘ಡಾ. ಸುಧಾಕರ್ ಶೆಟ್ಟಿಯವರನ್ನು ಪುಣೆ ತುಳು ಸಂಘದ ಅಧ್ಯಕ್ಷ ಕುರ್ಕಾಲ್ ಹರೀಶ್ ಶೆಟ್ಟಿಯವರು ಸನ್ಮಾನಿಸಿದರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಹಾಗೂ ನಗರಸೇವಕ ಭೌ ಸಾಹೇಬ್ ಭೋಯ್ರ್ ಅವರು ಉಪಸ್ಥಿತರಿದ್ದರು.
		




































































































