ಡಾ. ವಿರೇನ್ ಶೆಟ್ಟಿ ಮತ್ತು ಡಾ. ಸನ್ಯಾ ರೂಪನಿ ಅವರು ಹೋಮಿಯೋಪತಿಯಲ್ಲಿ ಸ್ಪರ್ಧಾತ್ಮಕ ಆನ್ ಲೈನ್ ಪರೀಕ್ಷೆ ಬರೆಯುವ ಮಾನ್ಯತೆ ಪಡೆದ MAGNUM OPUS HOMOEOPATHY ರಾಷ್ಟ್ರೀಯ ತರಬೇತಿ ಸಂಸ್ಥೆ ಇದರ ಸಹ ಸಂಸ್ಥಾಪಕರಾಗಿದ್ದಾರೆ. ಡಾ. ವಿರೇನ್ ಶೆಟ್ಟಿಯವರು ಪುಣೆಯ ಮಕ್ಕಳ ತಜ್ಞ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ್ ಶೆಟ್ಟಿಯವರ ಸುಪುತ್ರರಾಗಿದ್ದಾರೆ.
AIAPGET ವೆಂಬುವುದು ಎಂ.ಡಿ. ವೈದ್ಯಕೀಯ ಹೋಮಿಯೋಪತಿಗಾಗಿ ಇರುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಇದರಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರವೇಶ ಪರೀಕ್ಷೆ ಬರೆಯುತ್ತಾರೆ. 1 ರಿಂದ 100 ರ ತನಕ ರ್ಯಾಂಕ್ ಗಳಿರುತ್ತವೆ. MAGNUM OPUS ಮೂಲಕ ತರಬೇತಿ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು AIAPET ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ನಿಂದ 100 ರ್ಯಾಂಕ್ ಗಳಲ್ಲಿ ಒಟ್ಟು 20 ರ್ಯಾಂಕ್ಗಳನ್ನು ಪಡೆದಿದ್ದು, MAGNUM OPUS ನ ಬಹು ದೊಡ್ಡ ಸಾಧನೆಯಾಗಿದೆ. ಡಾ. ಫಝಲ್ ಅಖ್ತರ್ ಮೊದಲ ರ್ಯಾಂಕ್, ಡಾ. ವೈಷ್ಣವಿ ಬೈರಾಗಿ 18ನೇ ರ್ಯಾಂಕ್, ಡಾ.ಈಸ್ ಲಾವತ್ ಮೌನಿಕಾ 23 ನೇ ರ್ಯಾಂಕ್, ಡಾ. ಶಭಾನ್ ಶಾ 26 ನೇ ರ್ಯಾಂಕ್ ಪಡೆದಿರುತ್ತಾರೆ. ಹೀಗೇ MAGNUM OPUS ನ ಒಟ್ಟು 20 ಮಂದಿ ರ್ಯಾಂಕ್ ಗಳಿಸಿರುವುದು ಹೆಮ್ಮೆಯ ಸಂಗತಿ ಮತ್ತು ಸಂಸ್ಥೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದು ಕೊಟ್ಟಿದೆ. ಡಾ.ವಿರೇನ್ ಶೆಟ್ಟಿ, ಎಂ.ಡಿ (ಮಕ್ಕಳ ವೈದ್ಯಕಿಯ ವಿಭಾಗದಲ್ಲಿ ಹೊಮಿಯೋಪತಿ) ಇವರನ್ನು ಸಂಪರ್ಕಿಸಲು ಇಚ್ಚಿಸುವವರು 8975966156 ಮೊಬೈಲ್ ನಂಬರ್ ನ್ನು ಸಂಪರ್ಕಿಸಬಹುದಾಗಿದೆ.