Author: admin

ಮುಂಬಯಿ ಬಂಟರ ಸಂಘದ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ಸದಸ್ಯರು ಇತ್ತೀಚೆಗೆ ಅಧ್ಯಕ್ಷ ಸೂರಜ್ ಎನ್ ಶೆಟ್ಟಿ ಅವರ ನೇತೃತ್ವದಲ್ಲಿ ಶಿರಡಿ ಶ್ರೀ ಸಾಯಿಬಾಬಾ ಮಂದಿರಕ್ಕೆ ತೀರ್ಥಯಾತ್ರೆಗೈದರು. ಈ ಯಾತ್ರೆಯಲ್ಲಿ ಸಂಚಾಲಕ ರವೀಂದ್ರ ಶೆಟ್ಟಿ, ಉಪಾಧ್ಯಕ್ಷ ಯಶವಂತ ಶೆಟ್ಟಿ ಮತ್ತು ಜಂಟಿ ಕಾರ್ಯದರ್ಶಿ ಅಮರ ಶೆಟ್ಟಿ ಅವರುಗಳಲ್ಲದೇ ಮಾಜಿ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ವಿಶ್ವನಾಥ ಶೆಟ್ಟಿ ಪೇತ್ರಿ, ಕೃಷ್ಣ ಶೆಟ್ಟಿ, ಅಶೋಕ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಅಮರ್ ಶೆಟ್ಟಿ ಮತ್ತು ಎಲ್ಲಾ ಮಹಿಳಾ ಸಮಿತಿ ಸದಸ್ಯರು ಸೇರಿದಂತೆ ಒಟ್ಟು 36 ಸದಸ್ಯರು ಮತ್ತು ಸಂಚಾಲಕ ವಜ್ರ ಪೂಂಜಾ ಮತ್ತು ಸುಜಾತಾ ಗುಣಪಾಲ್ ಶೆಟ್ಟಿ ಪಾಲ್ಗೊಂಡಿದ್ದರು.

Read More

ಮಹಾರಾಷ್ಟ್ರದ ಬಹು ಪ್ರತಿಷ್ಠಿತ ಬಂಟರ ಸಂಘ ಮುಂಬಯಿ ಇದರ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಉತ್ಸಾಹಿ ಕ್ರಿಯಾಶೀಲ ಯುವಕ ಸವಿನ್ ಶೆಟ್ಟಿ ಈ ಮೊದಲೇ ಯುವ ವಿಭಾಗದ ಹಲವು ಜವಾಬ್ಧಾರಿಯುತ ಸ್ಥಾನವನ್ನು ಅಲಂಕರಿಸಿದವರು. ಜೊತೆ ಕೋಶಾಧಿಕಾರಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸಮರ್ಥ ರೀತಿಯ ಪದ ನಿರ್ವಹಣೆ ಮಾಡಿದ ಸವಿನ್ ಈಗ ಸಮಿತಿಯ ಹಿರಿಯರ ಹಾಗೂ ಯುವ ವಿಭಾಗದ ಸರ್ವ ಸಮ್ಮತಿಯೊಂದಿಗೆ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ. ಕಡಂದಲೆ ಉಲನಡ್ಕ ಪುತ್ತಿಗೆ ಗುತ್ತು ಜಗನ್ನಾಥ ಶೆಟ್ಟಿ ಮತ್ತು ಮೂಡುಬೆಳ್ಳೆ ಮೇಲ್ಮನೆ ಶೋಭಾ ಶೆಟ್ಟಿ ದಂಪತಿಗೆ ಸುಪುತ್ರರಾಗಿ ಜನಿಸಿದರು. ಸವಿನ್ ಶೆಟ್ಟಿ ತನ್ನ ಎಂ.ಬಿ.ಎ. ವ್ಯಾಸಂಗದ ಸಮಯದಿಂದಲೇ ಬಂಟರ ಸಂಘದ ಸಂಪರ್ಕದಲ್ಲಿದ್ದು, ಸಂಘದ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಇವರು ಉಮಾಕೃಷ್ಣ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಎಂಡ್ ರಿಸರ್ಚ್ ಮೂಲಕ 2014 ರಲ್ಲಿ ಎಂ.ಬಿ.ಎ ಪದವಿ ಸಂಪಾದಿಸಿದ್ದರು. ತನ್ನ ವೃತ್ತಿ ಜೀವನವನ್ನು ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಮೂಲಕ ಪ್ರಾರಂಭಿಸಿದರು. ಇದೀಗ ಬಹು ಪ್ರತಿಷ್ಠಿತ…

Read More

ಮುಂಬಯಿ (ಆರ್ ಬಿ ಐ ), ಅ.01: ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಹುಟ್ಟೂರು ಬೆಳ್ತಂಗಡಿ ಪಣಕಜೆಗೆ ಭೇಟಿಯನ್ನಿತ್ತ ವಿಜಯ್ ಎಸ್.ಶೆಟ್ಟಿ ಪಣಕಜೆ ಇವರಿಗೆ ತವರೂರ ಜನತೆ ಸನ್ಮಾನಿಸಿ ಗೌರವಿಸಿದರು. ಕಳೆದ ಸುಮಾರು ನಾಲ್ಕು ದಶಕಗಳಿಂದ ಮುಂಬಯಿಯಲ್ಲಿದ್ದು, ಇದೀಗ ಪ್ರತಿಷ್ಠಿತ ಉದ್ಯಮಿಯಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡು, ಯುವ ರಾಜಕೀಯ ನೇತಾರರಾಗಿ ಪದೋನ್ನತ ವಿಜಯ್ ಶೆಟ್ಟಿ ಪಣಕಜೆ ಕಳೆದ ಗುರುವಾರ ಸಂಜೆ ತವರೂರ ಬೆಳ್ತಂಗಡಿಗೆ ಆಗಮಿಸುತ್ತಿದ್ದಂತೆಯೇ ಸೋಣಂದೂರು ಗ್ರಾಮಸ್ಥರು ಭವ್ಯವಾಗಿ ಸ್ವಾಗತಿಸಿ ಆತ್ಮೀಯವಾಗಿ ಬರ ಮಾಡಿಕೊಂಡರು. ಬಳಿಕ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಸಲಾದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಕಾಂತ್ ಶೆಟ್ಟಿ ಮುಂಡಾಡಿ ಅಧ್ಯಕ್ಷತೆಯಲ್ಲಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಲ್ಪಸಂಖ್ಯಾತರ ಮೋರ್ಚಾದ ದ.ಕ ಜಿಲ್ಲಾಧ್ಯಕ್ಷ ಜೋಯಲ್ ಮೆಂಡೋನ್ಸಾ , ಬಿಜೆಪಿ ಬೆಳ್ತಂಗಡಿ ಕಾರ್ಯದರ್ಶಿ ಪ್ರಶಾಂತ್ ಮಡಂತ್ಯಾರು, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬೇಬಿ ಸುಸಾನ, ಉಪಾಧ್ಯಕ್ಷ ದಿನೇಶ್ ಕರ್ಕೇರ, ಓಡೀಲು…

Read More

ವೈದ್ಯಕೀಯ ಉಪಕರಣಗಳು ದುಬಾರಿಯಾಗಿರುವ ಇಂದಿನ ಕಾಲಘಟ್ಟದಲ್ಲಿ ಹಣಕಾಸು ಮಾಹಿತಿಯ ಅಗತ್ಯವೂ ವೈದ್ಯರಿಗೆ ಬೇಕಿರುತ್ತದೆ. ಗ್ರಾಮೀಣ ಭಾಗಗಳಲ್ಲಿ ರುವ ಶೇ. 70ರಷ್ಟು ಮಂದಿಗೆ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಸೇವೆ ಸಿಗುವಂತಾಗಬೇಕು ಎಂದು ಮಾಹೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಹೇಳಿದರು. ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣ ಸಮೀಪದ ಗ್ರಾಸ್‌ಲ್ಯಾಂಡ್‌ ಕಮರ್ಶಿಯಲ್‌ ಕಾಂಪ್ಲೆಕ್ಸ್‌ ನಲ್ಲಿ ರವಿವಾರ ಡಾಕ್ಟರ್ ಆ್ಯಂಡ್‌ ಅಲೈಡ್‌ ಪ್ರೊಫೆಶನಲ್ಸ್‌ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಶಾಸಕ ಯಶ್‌ಪಾಲ್‌ ಎ. ಸುವರ್ಣ ಮಾತನಾಡಿ, ದೇಶದ ಆರ್ಥಿಕತೆಗೆ ಬ್ಯಾಂಕ್‌ಗಳಂತೆ ಸಹಕಾರ ಕ್ಷೇತ್ರವೂ ಬಹುದೊಡ್ಡ ಕೊಡುಗೆ ನೀಡಿದೆ. ವೈದ್ಯರಂತೆ ಇತರ ಕ್ಷೇತ್ರಗಳಲ್ಲಿರುವವರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ವೈದ್ಯರಲ್ಲಿ ಬಹಳಷ್ಟು ಹಣವಿದೆ ಎಂಬ ಭಾವನೆ ತಪ್ಪು. ದೇಶದಲ್ಲಿ ಶೇ. 70ರಷ್ಟು ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡುತ್ತಿದ್ದು, ಹಲವರ ಸ್ಥಿತಿ ಹೀನಾಯವಾಗಿದೆ. ಆದರೂ ಸೇವೆಯ ಮೂಲಕ ಘನತೆ ಮೆರೆಯುತ್ತಿದ್ದಾರೆ ಎಂದು ಆದರ್ಶ ಆಸ್ಪತ್ರೆಯ ಮ್ಯಾನೇಜಿಂಗ್‌ ಡೈರೆಕ್ಟರ್‌…

Read More

ಡ್ಯಾನ್ಸ್ ಇಂಡಿಯಾ ಡಾನ್ಸ್ (ಡಿ.ಐ.ಡಿ) ಖ್ಯಾತಿಯ ಕೊರಿಯೋಗ್ರಾಫರ್ ರಾಹುಲ್ ಶೆಟ್ಟಿ ಅವರು ‘ಡ್ಯಾನ್ಸ್ ಪ್ಲಸ್ ಪ್ರೊ’ ಶೋದ ಮೂಲಕ ಡಿ.16 ರಿಂದ ಪ್ರತಿ ಸೋಮವಾರ – ಗುರುವಾರ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಹಾಗೂ ಪ್ರತಿ ಶನಿವಾರ ಮತ್ತು ರವಿವಾರ ಸಂಜೆ 6 ಗಂಟೆಗೆ ಸ್ಟಾರ್ ಪ್ಲಸ್ ಚಾನೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಮೊದಲು ಚಾನೆಲ್ ನಲ್ಲಿ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದ ರಾಹುಲ್ ಶೆಟ್ಟಿ ಈ ಬಾರಿ ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ (ಕ್ಯಾಪ್ಟನ್ ) ಕಾಣಿಸಿಕೊಳ್ಳಲಿದ್ದಾರೆ. ಕಳೆದ 12 ವರ್ಷಗಳಿಂದ ರಿಯಾಲಿಟಿ ಶೋ ಉದ್ಯಮದಲ್ಲಿರುವ ಅವರು ಸಿನೆಮಾದಲ್ಲೂ ಕಾಣಿಸಿಕೊಂಡಿದ್ದು,100 ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿ ಉತ್ತಮ ಕೊರಿಯೋಗ್ರಾಫರ್ ಆಗಿ ಗುರುತಿಕೊಂಡಿದ್ದಾರೆ. ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಟೈಗರ್ ಶ್ರಾಫ್, ಹೃತಿಕ್ ರೋಶನ್ ಸಹಿತ ಹಲವರ ಜತೆಗೆ ಕೆಲಸ ಮಾಡಿರುವ ಅವರು ಹಲವು ನಟರಿಗೆ ನೃತ್ಯ ಅಭ್ಯಾಸ ಕೂಡ ನಡೆಸಿದ್ದಾರೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್…

Read More

ಮುಂಬಯಿ (ಆರ್ ಬಿ ಐ ), ಅ.02: ಉಪನಗರ ಕಾಂದಿವಿಲಿ ಪಶ್ಚಿಮದಲ್ಲಿನ ಚಾರ್‍ಕೋಪ್ ಕನ್ನಡಿಗರ ಬಳಗದ ಉಪಾಧ್ಯಕ್ಷ, ಹಾಗೂ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸಕ್ರಿಯ ಕಾರ್ಯಕರ್ತ ಚಂದ್ರಶೇಖರ ಎಸ್.ಶೆಟ್ಟಿ ಅವರ ಮಾತೃಶೀ ಸುಶೀಲಾ ಶುಭಕರ ಶೆಟ್ಟಿ (86.) ಅಲ್ಪಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ ಉಡುಪಿ ಕೆಮ್ತೂರು ಅಲ್ಲಿನ ಸ್ವಗೃಹ ಶುಭ ನಿಲಯದಲ್ಲಿ ನಿಧನ ಹೊಂದಿದರು. ಮೃತರು ಚಂದ್ರಶೇಖರ ಶೆಟ್ಟಿ ಸಹಿತ ಮೂವರು ಪುತ್ರರು, ಓರ್ವ ಸುಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿರುತ್ತಾರೆ. ಸುಶೀಲಾ ಅವರ ಅಗಲುವಿಕೆಗೆ ಚಾರ್‍ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷ ಎಂ.ಕೃಷ್ಣ ಶೆಟ್ಟಿ, ಕಾರ್ಯದರ್ಶಿ ರಘುನಾಥ ಎನ್.ಶೆಟ್ಟಿ ಹಾಗೂ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ನಿಟ್ಟೆ ಎಂ.ಜಿ ಶೆಟ್ಟಿ ಮತ್ತು ಉಭಯ ಸಂಸ್ಥೆಗಳ ಪಧಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು ವಿಶ್ವಸ್ಥರು ಸಂತಾಪ ಸೂಚಿಸಿದ್ದಾರೆ.

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಸಮಾಜ ಕಲ್ಯಾಣ ಸೇವಾ ಕಾರ್ಯಗಳನ್ನು ಗುರುತಿಸಿ, ಮತ್ತವರ ವಿಶೇಷ ಮನವಿಗೆ ಸ್ಪಂದಿಸಿ ಮೀರಾ ಭಾಯಂದರ್ ಮಹಾ ನಗರ ಪಾಲಿಕೆಯ ಮಾಜಿ ನಗರಸೇವಕ, ಅಲಯನ್ಸ್ ಇನ್ಫ್ರಾಸ್ಟ್ರಕ್ಚರ್ & ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಅರವಿಂದ್ ಆನಂದ್ ಶೆಟ್ಟಿಯವರು ಒಕ್ಕೂಟದ ಮಹಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ನೂತನ ಮಹಾ ನಿರ್ದೇಶಕ ಅರವಿಂದ್ ಶೆಟ್ಟಿ,ಪಲ್ಲವಿ ಅರವಿಂದ್ ಶೆಟ್ಟಿ ಮತ್ತು ಮಕ್ಕಳನ್ನು ಐಕಳ ಹರೀಶ್ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಗೌರವಿಸಿದರು. ಪ್ರಸ್ತುತ ಒಕ್ಕೂಟದ ನಿರ್ದೇಶಕರಾಗಿ ಕಾರ್ಯ ಸೇವೆಗಳನ್ನು ಮಾಡುತ್ತಿರುವ ಅರವಿಂದ್ ಆನಂದ್ ಶೆಟ್ಟಿಯವರು ಇನ್ನು ಮುಂದೆ ಒಕ್ಕೂಟದ ಮಹಾ ನಿರ್ದೇಶಕರಾಗಿ ಬಂಟ ಸಮಾಜದ ಕುಟುಂಬಗಳ ಸೇವಾ ಕಾರ್ಯಗಳನ್ನು ಮಾಡಲಿದ್ದಾರೆ. ಅರವಿಂದ್ ಶೆಟ್ಟಿಯವರಿಗೆ ಒಕ್ಕೂಟದ ಮಹಾದಾನಿ, ಮಹಾ ನಿರ್ದೇಶಕರು, ನಿರ್ದೇಶಕರು, ಆಡಳಿತ ಪದಾಧಿಕಾರಿಗಳು, ಮಹಾಪೋಷಕರು, ಪೋಷಕರು, ದಾನಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸರ್ವ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Read More

ಆಳ್ವಾಸ್: ದೇಶ, ಧರ್ಮ, ಸಂಸ್ಕøತಿಯ ಹಿರಿಮೆ ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದೇಶ, ಧರ್ಮ, ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾಘಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವಿರಾಸತ್ ಅನ್ನು ಗುರುವಾರ ಸಂಜೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿರಾಸತ್ ಉದ್ಘಾಟನೆ ಬಹಳ ಖುಷಿ ನೀಡಿದೆ. ಸಂಸ್ಕಾರಯುತ ಶಿಕ್ಷಣ ನೀಡುವುದು ಆಳ್ವಾಸ್ ಶ್ರೇಯ. ಸಾಂಸ್ಕೃತಿಕ ಶಿಕ್ಷಣವು ವ್ಯಕ್ತಿತ್ವ ವಿಕಸನಕ್ಕೆ ಸ್ಫೂರ್ತಿ ಯಾಗಿದೆ. ಸಂಗೀತ ಹಾಗೂ ಕಲೆ ಎಲ್ಲರಗೂ ಖುಷಿ ನೀಡುತ್ತದೆ ಎಂದು ಅವರು ಅಭಿನಂದಿಸಿದರು. ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ ಶಿಕ್ಷಣವನ್ನು ಶ್ಲಾಘಿಸಿದ ಅವರು, ಇದನ್ನು ಸರ್ವಶ್ರೇಷ್ಠ ಶಾಲೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಜಗತ್ತಿನ ಪ್ರಮುಖ ಐದು ಅಭಿವೃದ್ಧಿಶೀಲ ರಾಷ್ಟ್ರ ಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ಆಳ್ವಾಸ್ ಮಾತೃಭಾಷಾ ವೃದ್ಧಿಗೆ ಇನ್ನಷ್ಟು ಕೊಡುಗೆ…

Read More

ಈ ಚಿತ್ರವನ್ನು ಯಾವುದರ ಜೊತೆ ಹೋಲಿಕೆ ಮಾಡ್ಬೇಕು ಅಂದ್ರೂ ಒಂದೇ ಒಂದು ಚಿತ್ರನೂ ನೆನಪಾಗಲ್ಲ. ಅಲ್ಲಿವರೆಗೆ ಈ ಸಿನೆಮಾ ಮನಸ್ಸನ್ನು ಆವರಿಸಿಕೊಂಡಿದೆ. ಸಿನಿಮಾ ಮುಗಿದು ಆದ್ರೂ ಕಾಂತಾರದ ಗಗ್ಗರದ ಶಬ್ಧ ಇನ್ನೂ ಹಾಗೆ ಬಡಿತಾ‌ನೇ ಇದೆ. ನಾವು ತುಳುವರು ನಮಗೆ ಈ ಮಣ್ಣಿನ ಕಾರ್ಣಿಕದ ಅನುಭವ ಇದೆ. ನಾವು ನಮ್ಮ ಎಲ್ಲಾ ಕಾರ್ಯಗಳ ಆರಂಭದಲ್ಲಿ ಮೊದಲು ನೆನೆಸಿ ನಮಿಸುವುದೇ ದೈವಗಳನ್ನು ನಂತರ ದೇವರು. ಕಾರಣ ಈ ಮಣ್ಣಿನಲ್ಲಿರೋ ಪ್ರತಿಮನೆತನದಲ್ಲೂ ದೈವಗಳಿಗೇ ಆರಾಧ್ಯ ಸ್ಥಾನ, ಕಾರಣ ಈ ಮಣ್ಣೆ ದೈವಗಳ ಭೂಮಿ ಹಾಗಾಗಿ ದೈವಗಳ ಕೋಲಗಳನ್ನು ತೀರ ಹತ್ತಿರದಿಂದ ನೋಡಿದವರಿಗೆ, ಅಥವಾ ನಮ್ಮ ನಂಬಿಕೆಗಳ ಬಗ್ಗೆ ಅಧ್ಯಯನ ಮಾಡಿದವರಿಗೆ ನಮ್ಮ ದೈವಗಳ ಹಿನ್ನೆಳೆ ಬಗ್ಗೆ ಚೆನ್ನಾಗೇ ಗೊತ್ತಿರುತ್ತದೆ. ನಡೆಯಲ್ಲಿ ನಿಂತು ತನ್ನ ಮಕ್ಕಳಿಗೆ ಅಭಯ ನೀಡಿ ಜೊತೆಗೆ ಬರುವ ಹಾಗೆ ದೈವದ ಮುಂದೆ ನಿಂತು ಕೊಟ್ಟ ಮಾತಿಗೆ ತಪ್ಪಿ ನಡೆದರೆ ತಲತಲಾಂತರದ ವರೆಗೆ ಶಿಕ್ಷೆ ನೀಡುವ ದೈವಗಳು ತುಳುನಾಡಿನ ನಮ್ಮ ಜೀವನದ ಒಂದು…

Read More

ಕಳೆದ ಹದಿನಾಲ್ಕು ವರ್ಷಗಳಿಂದ ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಗಣೇಶ್ ಪುರಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶ್ರೀ ನಿತ್ಯಾನಂದ ಸೇವಾ ಸಂಸ್ಥೆಯು 15 ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಪಾದಯಾತ್ರೆಯನ್ನು ಫೆಬ್ರವರಿ 3ರಂದು ಹಮ್ಮಿಕೊಂಡಿದೆ. ಅಂದು ಸಾಯಂಕಾಲ 6 ಗಂಟೆಯಿಂದ ಮೀರಾ ಭಾಯಂದರ್ ರಸ್ತೆಯಲ್ಲಿರುವ ಶ್ರೀ ಗಣೇಶ್ ಜೈ ಅಂಬಿ ಮಾತಾ ಮಂದಿರದಿಂದ (ಶುಭಂ ಹೋಟೆಲ್ ಸಮೀಪ) ಧಾರ್ಮಿಕ ವಿಧಿ ವಿಧಾನ, ಭಜನೆ ಹಾಗೂ ಮಂಗಳಾರತಿಯೊಂದಿಗೆ ‘ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ (ಶ್ರೀ ಕ್ಷೇತ್ರ ಗಣೇಶಪುರಿ)ಪಾದಯಾತ್ರೆ ಹೊರಡಲಿದೆ. ಈ ಪಾದಯಾತ್ರೆ ಕಾರ್ಯಕ್ರಮದಲ್ಲಿ ಬೇವಿನಕೊಪ್ಪ ಶ್ರೀ ವಿಜಯಾನಂದ ಸ್ವಾಮೀಜಿ ಹಾಗೂ ಸಾಣೂರು ಸಾಂತಿಂಜ ಜನಾರ್ಧನ ಭಟ್ ಉಪಸ್ಥಿತರಿದ್ದು, ಆಶೀರ್ವದಿಸಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಜನವರಿ 31ರ ಒಳಗೆ ಮೊಬೈಲ್ ಕ್ರಮಾಂಕ 9869703998, 9833850224, 9588111177, 9702368777 ಅಥವಾ 8369544002 ರಲ್ಲಿ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ. ಹಿರಿಯ ನಾಗರಿಕರಿಗೆ ವಾಹನದ ವ್ಯವಸ್ಥೆ ಮಾಡಲಾಗುವುದು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ…

Read More