Author: admin
ಮುಂಬಯಿ, (RBI) ಮೇ.26: ಗುಜರಾತ್ ರಾಜ್ಯದ ದಾದ್ರಾ ಮತ್ತು ನಗರ ಹವೇಲಿ ವ್ಯಾಪ್ತಿಯ ಸಿಲ್ವಾಸ ನಗರಪಾಲಿಕೆಯ ಅಧ್ಯಕ್ಷೆ (ಮೇಯರ್) ಆಗಿ ತುಳು ಕನ್ನಡತಿ ರಜನಿ ಗೋವಿಂದ ಶೆಟ್ಟಿ ಸರ್ವಾನುಮತದಿಂದ ಚುನಾಯಿತರಾಗಿದ್ದಾರೆ. ಚುನಾವಣಧಿಕಾರಿ ಕಲೆಕ್ಟರ್ ಭಾನುಪ್ರಭ, ಬಿಜೆಪಿ ಅಧ್ಯಕ್ಷ ದೀಪೇಶ್ ತಂದೆಲ್, ಮಾಜಿ ಮೇಯರ್ ರಾಕೇಶ್ ಚವಾಣ್, ಮಾಜಿ ಉಪ ಮೇಯರ್ ಅಜಯ್ ದೇಸಾಯಿ ಇವರ ಸಮ್ಮಖದಲ್ಲಿ ಆಯ್ಕೆ ಪ್ರಕ್ರಿಯೆ ನೇರವೇರಿತು. ದಕ್ಷಿಣ ಕನ್ನಡ ಮಂಗಳೂರು ಮಣ್ಣುಗುಡ್ಡೆ ಮೂಲತಃ ದಿ| ನಾರಾಯಣ ತಿಮ್ಮಪ್ಪ ಶೆಟ್ಟಿ ಅವರ ಸುಪುತ್ರಿ, ಕಾರ್ಕಳ ತಾಲೂಕಿನ ಕಾಂತವರ ಹೊಸಮನೆ ಹಾಗೂ ನಾಮಾಂಕಿತ ಸಮಾಜ ಸೇವಕ ಗೋವಿಂದ ಶೆಟ್ಟಿ ಅವರ ಪತ್ನಿ, ಮಕ್ಕಳಾದ ತರುಣ್ ಮತ್ತು ಪುಣ್ಯ ಅವರೊಂದಿಗೆ ಸುಖ ಸಂಸಾರ ನಡೆಸುತ್ತಿರುವ ಇವರು ಸುಮಾರು ಕಳೆದ ಐದು ವರ್ಷಗಳಿಂದ ಇಲ್ಲಿನ ಕಾನ್ವೆಲ್ ಪಂಚಾಯತ್ನಲ್ಲಿ ಪಂಚಾಯತಿ ಅಧ್ಯಕ್ಷೆ (ಸರ್ಪಂಚ್) ಆಗಿದ್ದು, ಕಳೆದ ಎರಡುವರೆ ವರ್ಷಗಳಿಂದ ದಾದ್ರಾ ನಗರ ಹವೇಲಿ ಮಹಾ ನಗರ ಪಾಲಿಕೆಯ ಮೇಲ್ವಿಚಾರಕಿಯಾಗಿ ಆಗಿ ಕಾರ್ಯನಿರ್ವಾಹಿಸುತ್ತಿದ್ದರು. ತನ್ನ ಕಾರ್ಯಾವದಿಯಲ್ಲಿ…
ತಮಿಳುನಾಡು ರಾಜ್ಯದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (ಪಿಸಿಎ) ಮಾಡಿರುವ ತಿದ್ದುಪಡಿಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಎತ್ತಿಹಿಡಿದಿದೆ. ಆ ಮೂಲಕ ಜಾನಪದ ಕ್ರೀಡೆ ಜಲ್ಲಿಕಟ್ಟುಗೆ ಅನುಮತಿ ನೀಡಿದೆ. ಇದೇ ವೇಳೆ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಸಾಂವಿಧಾನಿಕ ಪೀಠವು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಂಬಳ ಮತ್ತು ಎತ್ತಿಮ ಬಂಡಿ ಓಟವನ್ನು ಅನುಮತಿಸುವ ಕಾನೂನನ್ನು ಎತ್ತಿಹಿಡಿದಿದೆ. ಈ ಮೂಲಕ ಕರಾವಳಿ ಕರ್ನಾಟಕದ ಕ್ರೀಡೆ ಕಂಬಳ ಆಯೋಜನೆಗೆ ಇದ್ದ ಆತಂಕ ದೂರವಾಗಿದೆ. “ಎಲ್ಲಾ ಮೂರು ತಿದ್ದುಪಡಿ ಕಾಯಿದೆಗಳು ಮಾನ್ಯವಾದ ಶಾಸನಗಳಾಗಿವೆ. ಎಲ್ಲಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಕ್ಷಮ ಅಧಿಕಾರಿಗಳು ತಿದ್ದುಪಡಿ ಮಾಡಿದ ಕಾನೂನಿನ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ಜವಾಬ್ದಾರರಾಗಿರುತ್ತಾರೆ” ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಜಲ್ಲಿಕಟ್ಟುವಿನಲ್ಲಿ ಪ್ರಾಣಿಗಳ ಹಕ್ಕುಗಳು ಹಾಗೂ ಕ್ರೌರ್ಯ ತಡೆ (ಪಿಸಿಎ) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು 2014ರ ಮೇನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದಾದ ಬಳಿಕ ಕಂಬಳಕ್ಕೂ…
ಪ್ರಜ್ವಲ್ ಫಿಲಂಸ್ ನಿರ್ಮಾಣದ ಕೀರ್ತನ್ ಭಂಡಾರಿ ರಚಿಸಿ ನಿರ್ದೇಶಿಸುತ್ತಿರುವ “ಗಜಾನನ ಕ್ರಿಕೆಟರ್ಸ್” ತುಳು ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಸೋಮವಾರ ಸಂಜೆ ಲಾಲ್ ಭಾಗ್ ನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಂಡರ್ ಆರ್ಮ್ ಕ್ರಿಕೆಟ್ ಜಗತ್ತನ್ನು ತೆರೆದಿಡುವಂತಹ ಪ್ರಯತ್ನವನ್ನು ಈ ಚಿತ್ರತಂಡ ಮಾಡುತ್ತಿದ್ದು ಚಿತ್ರವು ಹಾಸ್ಯಮಯ ಕಥಾಹಂದರವನ್ನು ಹೊಂದಿದ್ದು ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿರುತ್ತದೆ, ಕ್ರಿಕೆಟ್ ಪ್ರೇಮಿಗಳಿಗೆ ಮನೋರಂಜನೆ ನೀಡುವಂತಹ ಹಲವಾರು ಸನ್ನಿವೇಶಗಳು ಚಿತ್ರದಲ್ಲಿದೆ ಎಂದು ಹಾಗೂ ಚಿತ್ರದ ಚಿತ್ರೀಕರಣವು ಮೇ 18ರಿಂದ ಮಂಗಳೂರಿನಾದ್ಯಂತ ನಡೆಯಲಿದ್ದು ಅತೀ ಶೀಘ್ರದಲ್ಲಿ ಬೆಳ್ಳಿತರೆಗೆ ಬರಲಿದೆ. ನಾನು ಚಿತ್ರದ ಕಥೆಯನ್ನು ಒಪ್ಪಿಕೊಂಡು ಅದರ ಭಾಗವಾಗಿದ್ದೇನೆ ಎಂದು ತುಳು ರಂಗಭೂಮಿಯ ಹಿರಿಯ ನಟ ಭೋಜರಾಜ್ ವಾಮಂಜೂರ್ ಹೇಳಿದರು. ಚಿತ್ರದ ನಾಯಕ ನಟನಾಗಿ ವಿನೀತ್ ಕುಮಾರ್ ನಟಿಸುತ್ತಿದ್ದು ಇವರಿಗೆ ನಾಯಕಿಯರಾಗಿ ಅನ್ವಿತಾ ಸಾಗರ್ ಹಾಗೂ ಸಮತ ಅಮೀನ್ ಜೊತೆಯಾಗಲಿದ್ದಾರೆ. ತಾರಾಗಣದಲ್ಲಿ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು,…
ಬಂಟರ ಸಂಘ ಅಹ್ಮದಾಬಾದ್ ಗುಜರಾತಿನ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಾರಾಯಣ ರೈ ಅವರು ಪುತ್ತೂರಿನಲ್ಲಿ ಕೊನೆಯುಸಿರೆಳೆದರು. ವಿಜಯಾ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿ ಹೊಂದಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಸದಾ ಹಸನ್ಮುಖಿಯಾಗಿ ನೇರ ನಡೆ ನುಡಿ ಹೊಂದಿದ್ದ ಸಮಾಜ ಸೇವಕ ನಾರಾಯಣ ರೈ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
1) 83ನೇ ಅಖಿಲ ಭಾರತ ಅಂತರ್ ವಿವಿ ಮಹಿಳಾ ಅಥ್ಲೆಟಿಕ್ಸ್ ಕ್ರೀಡಾಕೂಟ. 2) ಮಂಗಳೂರು ವಿವಿ ಗಳಿಸಿದ 7 ಪದಕಗಳು ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆ. 3) 7ನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್ಸ್. 4) ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಂಗಳೂರು ವಿವಿಯ 33 ಕ್ರೀಡಾಪಟುಗಳ ತಂಡದಲ್ಲಿ 26 ಕ್ರೀಡಾಪಟುಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು. ವಿದ್ಯಾಗಿರಿ: ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ಮುಕ್ತಾಯಗೊಂಡ 83ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಮಹಿಳಾ ಕ್ರೀಡಾಕೂಟದಲ್ಲಿ 56 ಅಂಕಗಳನ್ನು ಪಡೆದ ಮಂಗಳೂರು ವಿಶ್ವವಿದ್ಯಾಲಯವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಪದಕ ಪಡೆದ ಎಲ್ಲ ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. 2 ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟು ಏಳು ಪದಕಗಳನ್ನು ಆಳ್ವಾಸ್ ಕಾಲೇಜಿನ ಆರು ವಿದ್ಯಾರ್ಥಿನಿಯರು ಪಡೆದಿದ್ದಾರೆ. ಈ ಪೈಕಿ ಅಂಜಲಿ ಸಿ. ಎರಡು ಪದಕಗಳನ್ನು ಪಡೆದುಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಭವಾನಿ ಯಾದವ್ ಉದ್ದ ಜಿಗಿತದಲ್ಲಿ ಚಿನ್ನ,…
ಬಿಲ್ಲು ಹಾಗೂ ಬಾಣ ಒಂದಕ್ಕೊಂದು ಸಂಬಂಧ ಇದ್ದಂತೆ, ಭಗವಂತ ಬಿಲ್ಲಾದರೆ, ಭಕ್ತರು ಬಾಣದಂತೆ. ಬಿಲ್ಲನ್ನು ಹೇಗೆ ಬೇಕಾದರೂ ಭಾಗಿಸಬಹುದು. ಆದರೆ ಬಾಣವನ್ನು ಗುರಿಯ ಕಡೆಗೆ ಇಡಬೇಕು. ಭಕ್ತರಾದ ನಾವು ಭಗವಂತನ ಪುಣ್ಯ ಕಾರ್ಯಕ್ಕಾಗಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಬಾಣದ ಗುರಿಯಂತೆ, ದಾನಿಗಳ ನೆರವಿನಿಂದ ಹಾಗೂ ಭಕ್ತರ ಸಹೃದಯದಿಂದ ಸಹಕಾರವನ್ನು ನೀಡಿದಲ್ಲಿ ಕ್ಷೇತ್ರದ ಜೀರ್ಣೋದ್ದಾರ ಸಾಧ್ಯವೆಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ನಡೆದ ಶ್ರೀ ಪಾಡಾಂಗರೆ ಭಗವತೀ ಮಾತೆಯ ಹಾಗೂ ವೀರಪುತ್ರ ದೈವದ ಗರ್ಭಗುಡಿಗೆ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗೋಪಾಲ ಬಂದ್ಯೋಡು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯ, ಶ್ರೀ ಕೇಶವ ಕಾರ್ನವರು, ಶ್ರೀ ನಾರಾಯಣ ಭಗವತೀ ಪೂಜಾರಿ, ಜೀರ್ಣೋದ್ಧಾರ ಸಮಿತಿ…
ಚಿಣ್ಣರ ಬಿಂಬ ಮುಂಬಯಿ ಇದರ ಭಾಯಂದರ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ವರ್ಧೆಯು ಆ. 27 ರಂದು ಬೆಳಗ್ಗೆ 9.30 ರಿಂದ ಭಾಯಂದರ್ ಪೂರ್ವದ ಶಕ್ತಿನಗರ ಸೈಂಟ್ ಆಗ್ನೇಸ್ ಹೈಸ್ಕೂಲ್ ಸಭಾಗ್ರಹದಲ್ಲಿ ನಡೆಯಲಿದೆ. ಮಕ್ಕಳ ಪ್ರತಿಭಾ ಸ್ವರ್ಧೆ ಕಾರ್ಯಕ್ರಮವನ್ನು ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ನ ಕಾರ್ಯಧ್ಯಕ್ಷ ಅರುಣೋದಯ ಎಸ್.ರೈ ಬಿಳಿಯೂರುಗುತ್ತು ಉದ್ಘಾಟಿಸಲಿದ್ದಾರೆ. ಮೀರಾ- ಭಾಯಂದರ್ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿ ಮೀರಾ- ಭಾಯಂದರ್ ಜತೆ ಕೋಶಾಧಿಕಾರಿ ರಮೇಶ ಎಂ.ಶೆಟ್ಟಿ ಸಿದ್ದಕಟ್ಟೆ, ಎಂಬಿಆರ್ ಗ್ಲೋಬಲ್ ಸರ್ವಿಸಸ್ ಪೈ. ಲಿ. ಮೈಂಡ್ ಸ್ಪೇಸ್ ನ ಸ್ಥಾಪಕ ವಿಜಯ್ ಬಾಲಕೃಷ್ಣ ರಾವ್, ಕರ್ನಾಟಕ ಮಹಾಮಂಡಲ ಮೀರಾ – ಭಾಯಂದರ್ ಸ್ಥಾಪಕ ಚಂದ್ರಶೇಖರ ವಿ. ಶೆಟ್ಟಿ, ಅರುಣ್ ಕಾಮರ್ಸ್ ಕ್ಲಾಸಸ್ ಭಾಯಂದರ್ ಸ್ಥಾಪಕ ಅರುಣ್ ಟಿ. ಪಕ್ಕಳ, ಮಾಟುಂಗಾ ಲಯನ್ಸ್ ಪಯೋನಿಯರ್ ಇಂಗ್ಲಿಷ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ…
ಆಟಿ ತಿಂಗಳ ಮಹತ್ವವನ್ನು ಕೇವಲ ಸಂಪ್ರದಾಯಿಕವಾಗಿ ಆಚರಿಸುವುದಕ್ಕಿಂತ ವರ್ಷವಿಡೀ ಅನುಸರಿಸಿದರೆ ಜೀವನದಲ್ಲಿ ಸಂತೋಷ ಕಾಣಬಹುದು. ಇಂದು ನಾವು ಪ್ರಾಕೃತಿಕ ತಿಂಡಿ ತಿನಿಸುಗಳನ್ನು ಬದಿಗಿಟ್ಟು ರಾಸಾಯನಿಕ ಬೆರಕೆಯ ತಿನಿಸುಗಳನ್ನು ಬಯಸುತ್ತಿದ್ದೇವೆ. ಆದರಿಂದ ವಿವಿಧ ತರದ ರೋಗ ರುಜಿನಗಳನ್ನು ಆಹ್ವಾನಿಸುತ್ತಿದ್ದೇವೆ. ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಪ್ರಾಕೃತಿಕ ತಿಂಡಿ ತಿನಿಸುಗಳನ್ನು ಪರಿಚಯಿಸುವ ಕಾರ್ಯವನ್ನು ಪಾಲಕರು ಮಾಡಬೇಕು ಎಂದು ಬಂಟ್ಸ್ ಫೋರಮ್ ಮೀರಾ – ಭಯಂದರಿನ ಅಧ್ಯಕ್ಷ ಇನ್ನ ಚಂದ್ರಹಾಸ ಕೆ. ಶೆಟ್ಟಿ ನುಡಿದರು. ಅವರು ಬಂಟ್ಸ್ ಫೋರಮ್ ಮೀರಾ – ಭಾಯಂದರಿನ ಮಹಿಳಾ ವಿಭಾಗದ ಮುಂದಾಳತ್ವದಲ್ಲಿ ಆ.2 ರಂದು ಮೀರಾರೋಡ್ ಪೂರ್ವದ ಸುರಭಿ ಹೋಟೆಲಿನ ಸಭಾಗ್ರಹದಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಮಹಿಳಾ ವಿಭಾಗದ ಸದಸ್ಯೆಯರ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಂತೋಷ ವ್ಯಕ್ತಪಡಿಸಿ, ಮುಂದಿಗೂ ಇದೇ ರೀತಿಯಲ್ಲಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸಹಕರಿಸಬೇಕು. ಇಂತಹ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತಾಗಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರಮಿಸಬೇಕು ಎಂದರು.…
ದೇಶದಲ್ಲಿ ಕಳೆದೊಂದು ದಶಕದಿಂದೀಚೆಗೆ ತೀವ್ರ ಚರ್ಚೆಗೀಡಾಗಿರುವ ಸಮಾನ ನಾಗರಿಕ ಸಂಹಿತೆ(ಯುಸಿಸಿ) ಜಾರಿ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೇಂದ್ರದಲ್ಲಿನ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿ ಯುಸಿಸಿ ಜಾರಿಗೆ ಈ ಹಿಂದಿನಿಂದಲೂ ಒಲವು ತೋರುತ್ತಲೇ ಬಂದಿದೆ. ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಗಳಲ್ಲಿ ಯುಸಿಸಿ ಜಾರಿಯನ್ನು ಪ್ರಸ್ತಾವಿಸುತ್ತಲೇ ಬಂದಿದೆ. ಕಳೆದೆರಡೂ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಗಳಿಸಿ ಮೈತ್ರಿ ಸರಕಾರದ ನೇತೃತ್ವ ವಹಿಸಿರುವುದರಿಂದ ಯುಸಿಸಿ ಜಾರಿಯ ಪರವಾಗಿರುವವರು ಸರಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿರುವ ಹೊರತಾಗಿಯೂ ಕೇಂದ್ರ ಸರಕಾರ ಹೆಚ್ಚಿನ ಆತುರ ತೋರದೆ ಭಾರೀ ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತ ಬಂದಿದೆ. ಯುಸಿಸಿ ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕಳೆದ ವರ್ಷ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ದೇಶದಲ್ಲಿರುವ ಬೇರೆ ಬೇರೆ ಧರ್ಮ, ಪಂಗಡಗಳಿಗೆ ಸೇರಿದ ಜನರು ಆಸ್ತಿ, ವಿವಾಹಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನುಗಳನ್ನು ಅನುಸರಿಸುವುದು ದೇಶದ ಏಕತೆಗೆ…
ಅದು 20ನೇ ಶತಮಾನ!, ಚಿಗುರು ಮೀಸೆಯ ಯವ್ವನದ ದಿನ. ಕಾಲೇಜಿನ ಮೆಟ್ಟಿಲನ್ನು ಹತ್ತಿ ವಿದ್ಯಾಸರಸ್ವತಿಯನ್ನು ಒಲಿಸುವ ಸಂಧರ್ಭ, ಬಿಸಿ ರಕ್ತದ ಸಮಯ, ಎಲ್ಲದಕ್ಕೂ ಸಿದ್ದವಿದ್ದ ಹೊತ್ತು. ಹೀಗೆ ಕಾಲೇಜಿನ ದಿನಗಳಲ್ಲಿ ಪರಿಚಯವಾದ ಒಬ್ಬ ಅತೀ ಹತ್ತಿರದ ಗೆಳೆಯನ ಬಗ್ಗೆ ಇಂದಿನ ಲೇಖನ. ಸುದೃಡ ವ್ಯಕ್ತಿತ್ವ, ಮುಖದಲ್ಲಿ ಮಂದಹಾಸ, ಎಲ್ಲವನ್ನೂ ಗೆಲ್ಲುವ ಉತ್ಸಾಹ, ಹೀಗೆ ಮೊದಲ ಭೇಟಿಯಲ್ಲೇ ಡಿಫರೆಂಟ್ ಇಂಪ್ರೆಷನ್ ಮೂಡಿಸಿ ಪರಿಚಯವಾದ ಗೆಳೆಯನೇ ಮಿಥುನ್ ರೈ. ಹೌದು ! ನನ್ನ ಹಾಗೂ ಮಿಥುನ್ ರೈ ಗೆಳೆತನ ಇಂದು ನಿನ್ನೆಯದಲ್ಲ, ಕಾಲೇಜಿನ ದಿನಗಳಿಂದ ಮಿಥುನ್ ರೈಯ ಏಳು ಬೀಳುಗಳನ್ನು ಬಹಳ ಹತ್ತಿರದಿಂದ ನೋಡಿದವ ನಾನು. ಬಹಳ ಸರಳ ವ್ಯಕ್ತಿ, ಶ್ರೀಮಂತ ಮನೆತನದಿಂದ ಹುಟ್ಟಿ ಬಂದರೂ ಗೆಳೆತನ ಎಂಬ ವಿಚಾರ ಬಂದಾಗ ಎಲ್ಲರೊಂದಿಗೂ ಮೇಲು ಕೀಳು ಎಂಬ ಭೇಧ ಭಾವವಿಲ್ಲದೆ ಬೆರೆಯುವ ಗುಣ. ತನ್ನವರಿಗೊಂದು ಸಮಸ್ಯೆ ಎಂದರೆ ಮೊದಲು ನಿಲ್ಲುವ ಮನಸ್ಸು ! ಮಿಥುನ್ ರೈ ಎಲ್ಲಿಯ ಮಟ್ಟಿಗೆ ಡೌನ್ ಟು ಅರ್ಥ್ ವ್ಯಕ್ತಿಯೆಂದರೆ…