Author: admin
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಗೆ ಕಡೆಂಜ ಅಶೋಕ್ ಕುಮಾರ್ ಚೌಟ ಚಾಲನೆ ನೀಡಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದ.ಕ. ಜಿಲ್ಲಾ ಸಂಚಾಲಕ ಬಿ.ನಾಗರಾಜ್ ಶೆಟ್ಟಿ, ಕಾಸರಗೋಡು ಜಿಲ್ಲಾ ಸಂಚಾಲಕ ಸಂಜೀವ ಶೆಟ್ಟಿ, ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ಸಿ.ಎ. ರಾಮ ಮೋಹನ್ ರೈ, ಸಂಜೀವ ಶೆಟ್ಟಿ ಸಂಪಿಗೇಡಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಮಿಥುನ್ ರೈ, ಸಿಎ ಶಾಂತಾರಾಮ ಶೆಟ್ಟಿ, ವಸಂತ ಶೆಟ್ಟಿ, ಕೃಷ್ಣಪ್ರಸಾದ್ ರೈ, ಸುಧಾಕರ ಎಸ್ ಪೂಂಜ, ಬಿ ಶೇಖರ ಶೆಟ್ಟಿ, ಉಲ್ಲಾಸ್ ಶೆಟ್ಟಿ,…
ಕರ್ತವ್ಯವನ್ನು ಮಾಡುವವರನ್ನು ದೇವರು ಯಾವಾಗಲು ಹರಸುತ್ತಾನೆ ಅದರಂತೆ ಐಕಳ ಹರಿಶ್ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದುಕೊಂಡು ಅತ್ಯುತ್ತಮ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇಂತಹ ಕೆಲಸಕ್ಕೆ ದೇವರ ಆಶೀರ್ವಾದ ಇದೆ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಹೇಳಿದರು. ಅವರು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ಆಕ್ಟೋಬರ್ 28 ಮತ್ತು 29 ರಂದು ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ನಡೆಯಲಿರುವ ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ಕೊಡುವ ಕೆಲಸ ನಡೆಯುತ್ತಿದ್ದು ಇದು ನಿರಂತರವಾಗಿರಲಿ, ಸತ್ಕರ್ಮಗಳ ಮೂಲಕ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಜಾಗತಿಕ ಬಂಟರ ಸಂಘ…
ಮಾಧ್ಯಮದಲ್ಲಿ ಧನಾತ್ಮಕ ಚಿಂತನೆ ಅವಶ್ಯ ವಿದ್ಯಾಗಿರಿ: ‘ಮಾಧ್ಯಮ ಕ್ಷೇತ್ರದಲ್ಲಿ ಧನಾತ್ಮಕ ಚಿಂತನೆಯು ಇಂದಿನ ಅವಶ್ಯವಾಗಿದೆ. ನೀವು ಸಮಾಜಕ್ಕೆ ಕೊಡುಗೆ ನೀಡುವಂತವರಾಗಬೇಕು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಗುರುವಾರ ಪಿ.ಜಿ ಸೆಮಿನಾರ್‍ಹಾಲ್ ನಲ್ಲಿ ಹಮ್ಮಿಕೊಳ್ಳಲಾದ ‘ಫೀರ್ ಮಿಲೇಂಗೆ’ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವೃತ್ತಿ ಜೀವನದಲ್ಲಿ ನೈತಿಕತೆ ಮುಖ್ಯ. ಯಾವುದೇ ಸಂಬಂಧ ಅಥವಾ ಕೆಲಸ ನಿರ್ವಹಿಸುವಾಗ ನಿರೀಕ್ಷೆ ರಹಿತ ಮನೋಭಾವ ಹೊಂದಿರಬೇಕು. ಆಗ ಯಶಸ್ಸು ಸಾಧ್ಯ ಎಂದರು. ಎಲ್ಲರನ್ನೂ ಪ್ರೀತಿಸಿ ಗೌರವಿಸುವ ಡಾ. ಎಂ. ಮೋಹನ ಆಳ್ವರ ಗುಣವು ಅವರ ಯಶಸ್ವಿಗೆ ಮೂಲ. ಪ್ರತಿಯೊಬ್ಬರು ಅನನ್ಯ ವ್ಯಕ್ತಿತ್ವದೊಂದಿಗೆ ಸಮಾಜದಲ್ಲಿ ಒಗ್ಗಟ್ಟಿನಿಂದ ಬದುಕುವ ಮನಸ್ಥಿತಿ ಹೊಂದಿರಬೇಕು. ಪತ್ರಿಕೋದ್ಯಮ ವಿಭಾಗದಲ್ಲಿರುವ ‘ಜೀವಕಳೆ’ ನನಗೆ ಇಷ್ಟ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರೀತಿ, ವಿಶ್ವಾಸದಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಖುಷಿ ನೀಡಿದೆ.…
ಇತ್ತೀಚಿನ ದಿನಗಳಲ್ಲಿ ನಾಲ್ಕು ತಲೆಮಾರು ಕಾಣುವಂತದ್ದೇ ವಿಶೇಷವಾಗಿದ್ದರೆ, ನಮ್ಮ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಪ್ರತಿಷ್ಠಿತ ಕೂಕನಾಡು ಮನೆಯ ಅವಿಭಕ್ತ ಕುಟುಂಬವು ಐದು ತಲೆಮಾರು ಕಂಡಿದೆ. ಕೂಕನಾಡು ಕೃಷಿ ಕುಟುಂಬದಲ್ಲಿ ಕೊಣ್ಕೆ ನಾಗಯ್ಯ ಶೆಟ್ಟಿ ಮತ್ತು ತುಂಗಮ್ಮ ಶೆಡ್ತಿಯವರ ಮಗಳಾಗಿ ಪುಟ್ಟಮ್ಮ ಶೆಡ್ತಿಯವರು 1931 ರಲ್ಲಿ ಜನಿಸಿರುತ್ತಾರೆ. ಇವರು ತನ್ನ 12ನೇ ವಯಸ್ಸಿಗೆ ಸಾಲಗೆದ್ದೆ ಶಿವರಾಮ ಶೆಟ್ಟಿಯವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇವರಿಬ್ಬರಿಗೆ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ಶ್ರೀಮತಿ ಜಲಜಾಕ್ಷಿ ಶೆಟ್ಟಿ 1947 ರಲ್ಲಿ ಜನಿಸಿದ್ದು, 1964 ರಲ್ಲಿ ಹರ್ಕೂರು ಪಟೇಲರ ಮನೆ ಚಂದ್ರಶೇಖರ ಶೆಟ್ಟಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಶ್ರೀ ಚಂದ್ರಶೇಖರ ಶೆಟ್ಟಿಯವರು ಉತ್ತಮ ಅದ್ಯಾಪಕರು ಅಲ್ಲದೇ ಉತ್ತಮ ನಾಟಕ ಮತ್ತು ಯಕ್ಷಗಾನ ಪಾತ್ರದಾರಿಯಾಗಿದ್ದು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು, ಜನಾನುರಾಗಿಯಾಗಿದ್ದರು. ನಂತರ ಮುಖ್ಯೋಪಾಧ್ಯಾಯರಾಗಿ ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗಳಿಗೆ ಎರಡು ಹೆಣ್ಣು ಮತ್ತು ಒಬ್ಬ ಮಗ. ಹಿರಿಯ ಮಗಳು…
ಭಾರತೀಯರು ಆಚರಿಸುವ ಹಬ್ಬ ಹರಿದಿನಗಳು ಇಹ-ಪರ ಉನ್ನತಿಯ ಹಿನ್ನಲೆಯುಳ್ಳವು. ಹಿಂದೂ ಹಬ್ಬಗಳಲ್ಲಿ ಉಪವಾಸ, ಸಂಯಮ, ಮನೋನಿಯಂತ್ರ ಣ ನಿಷ್ಠೆಯಿಂದ ಆಚರಿಸುವುದನ್ನು ಕಾಣಬಹುದು. ಶಿವಭಕ್ತಿಯೊಂದಿಗೆ ವಿಷಕಂಠನ ಜಪಕ್ಕೆ ವೈಜ್ಞಾನಿಕ ಆಯಾಮವು ಇದ್ದು ಭಕ್ತರ ಇಷ್ಟಕೋರಿಕೆಯನ್ನು ನೆರವೇರಿಸುವ ಮಂಗಳ ಸ್ವರೂಪಿ ಶಿವಧ್ಯಾನ ಮಹಾಶಿವರಾತ್ರಿ ಆಚರಣೆಯ ಹಿಂದಿನ ಪ್ರತೀತಿ. ಪ್ರಕೃತಿ ಪುರುಷ ಲೀಲಾ ಫಲಶೃತಿಯಿಂದಲೆ ಈ ಜಗತ್ತು ನಿರ್ಮಾಣವಾಗಿ ಜಗತ್ತಿನ ಮಾತಾಪಿತರೆನಿಸಿದ ಶಿವ – ಪಾವರ್ತಿಯರ ಆರಾಧನಾ ದಿನವೆ ಮಹಾಶಿವರಾತ್ರಿ. ಈ ದಿನದಂದು ಮಹಾಶಿವನಿಗೆ ಒಂದುದಳ ಬಿಲ್ವಪತ್ರೆ ಅರ್ಪಿಸಿದರೆ ತೃಪ್ತನಾದ ಶಿವನ ಪೂರ್ಣಾನುಗೃಹ ಸಿಗುತ್ತದೆ ಎಂಬ ನಂಬಿಕೆ. ತನ್ನ ದೇಹದ ಅರ್ಧಭಾಗವನ್ನೆ ಹೆಂಡತಿಗೆ ಬಿಟ್ಟು ಕೊಡುವಷ್ಟು ಸಮಾನತೆ ಪ್ರತಿಪಾದಕ ಶಿವ ಪಾರ್ವತಿದೇವಿಯನ್ನು ವಿವಾಹವಾದ ದಿನವಿದು. ಕೈಲಾಸದಿಂದ ಭೂಮಿಗೆ ಶಿವನು ಆಗಮಿಸಿ ಸಕಲ ಇಷ್ಟಾರ್ಥ ಪೂರೈಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ನಾಲ್ಕು ವೇದಗಳನ್ನು ಕದ್ದು ಸಮುದ್ರದಲ್ಲಿ ಅಡಗಿ ಕುಳಿತ ಸೋಮಾಕಾಸುರನನ್ನು ವಧಿಸಲು ವಿಷ್ಣುವು ಮತ್ಸ್ಯ ವತಾರತಳೆದು ನಾಲ್ಕು ವೇದಗಳನ್ನು ನಾಲ್ಕು ಮಕ್ಕಳಂತೆ ಮಾಡಿ ಹಿಡಿದು ಕೊಂಡು ಮೇಲೆ ಬರುವಾಗ…
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀಮನ್ಮಹಾರಥೋತ್ಸವ ಸಂಭ್ರಮದಿಂದ ಜರಗಿತು. ಮಧ್ಯಾಹ್ನ ರಥಾರೋಹಣ, ಅನ್ನಸಂತರ್ಪಣೆ, ಸಂಜೆ ರಥೋತ್ಸವ, ಸುಡುಮದ್ದು ಪ್ರದರ್ಶನ ನೆರವೇರಿತು. ವಿಭಿನ್ನ ವೇಷಭೂಷಣ, ಬ್ಯಾಂಡ್ ಮನಸೂರೆಗೊಂಡಿತು. ಸಹಸ್ರಾರು ಭಕ್ತರು ಪಾಲ್ಗೊಂಡರು. ಇದಕ್ಕೂ ಮೊದಲು ಕುಂಭ ಸಂಕ್ರಮಣ ದಂದು ಸೋಮವಾರ ರಾತ್ರಿ ಕೆಂಡಸೇವೆ ಜರಗಿತು. ಫೆ.15ರ ರಾತ್ರಿ ದೀಪೋತ್ಸವ, ಐದೂ ಮೇಳದವರಿಂದ ಯಕ್ಷಗಾನ ಸೇವೆ ಆಟ ನಡೆಯಲಿದೆ.
ಕರ್ನಾಟಕ ಸ್ಟೈಲ್ ಐಕಾನ್-2022 ಮಿಸ್ಟರ್-ಮಿಸ್-ಮಿಸ್ಸೆಸ್ ; ಸೀಸನ್-3 ಮಿಸ್ಟರ್ ವಿಭಾಗದಲ್ಲಿ ಕೃತೇಶ್ ಅಮೀನ್ ಮುಂಬಯಿ ಪ್ರಥಮ `ಮಿಸ್’ ರಿನಿ ವಿಶ್ವಾಸ್ ಮೈಸೂರು-`ಮಿಸೆಸ್’ ಶ್ರೀನಿಧಿ ಶೆಟ್ಟಿ ಮಂಗಳೂರು ಪ್ರಥಮ
ಮುಂಬಯಿ (ಆರ್‌ಬಿಐ), ಡಿ.09: ಈಗಾಗಲೇ ಮಂಗಳೂರು, ಮುಂಬಯಿ ಮಹಾನಗರಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದ `ಮಿಸ್ಟರ್-ಮಿಸ್-ಮಿಸ್ಸೆಸ್ ಕರ್ನಾಟಕ ಸ್ಟೈಲ್ ಐಕಾನ್’ ಈ ಬಾರಿ ಕರ್ನಾಟಕ ರಾಜ್ಯದ ಮೈಸೂರು ನಾರ್ತ್ ಅವೆನ್ಯೂ ಸಭಾಗೃಹದಲ್ಲಿ 2022ರ ಸೀಸನ್-3 ಸ್ಪರ್ಧೆಯನ್ನು ಕಳೆದ ಡಿ. 6ರಂದು ಆಯೋಜಿಸಿದ್ದು ಫ್ಯಾಷನ್ ಜಗತ್ತಿನಲ್ಲಿ ಮತ್ತೊಂದು ಸಾರ್ಥಕ ಹೆಜ್ಜೆಯನ್ನಿಟ್ಟಿತು. `ನಿಜವಾದ ಸೌಂದರ್ಯವು ನಮ್ಮ ಬುದ್ಧಿವಂತಿಕೆಯಲ್ಲಿದೆ ಹಾಗೂ ನೋಡುಗರ ದೃಷ್ಟಿಯಲ್ಲಿದೆ’ ಎಂದು ಸಾಬೀತು ಪಡಿಸುವ ಇಂಥ ಪ್ರದರ್ಶನಗಳು ಹಲವಾರು ಮೌಲ್ಯಯುತ ವಿಚಾರಗಳನ್ನು ತಿಳಿಯಪಡಿಸುತ್ತವೆ. ಕರ್ನಾಟಕ ಕರಾವಳಿಯ ಮಂಗಳೂರು ಮೂಲತಃ ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿ ಅಲ್ಲಿನ ಪ್ರತಿಷ್ಠಿತ ಮತ್ತು ನಾಮಾಂಕಿತ ಫ್ಯಾಷನ್ ಪರಿಣಿತೆ ನಿಶಿತ ಸೂರ್ಯ ಸುವರ್ಣ (ಬಿಲ್ಲವ ಕುಲ ಶಿರೋಮಣಿ ಸ್ವರ್ಗೀಯ ಜಯ ಸಿ. ಸುವರ್ಣ ಅವರ ಹಿರಿಯ ಸೊಸೆ ಹಾಗೂ ಸೂರ್ಯಕಾಂತ್ ಜೆ.ಸುವರ್ಣ ಅವರ ಪತ್ನಿ) ಕರ್ನಾಟಕ ಕರಾವಳಿಯಲ್ಲಿರುವ ಪ್ರತಿಭಾವಂತರನ್ನು ಮುನ್ನೆಲೆಗೆ ತರಬೇಕೆಂದು ನಿಶಿತಾ ಸೂರ್ಯ ಬಯಸಿ ಸಾಧಿಸಿದ ಪ್ರತಿಭಾನ್ವಿತ ಗೃಹಿಣಿ, ಮಹಿಳಾ ಯುವೋದ್ಯಮಿ ಈ ಕಾರ್ಯಕ್ರಮದ ಸಂಘಟಿಸಿ ಸಾಧಕರೆಣಿಸಿದ್ದಾರೆ. ಫ್ಯಾಷನ್…
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದ.ಕ.-ಉಡುಪಿ. ಜಿಲ್ಲೆ, (ಕುಂದಾಪುರ- ಬೈಂದೂರು ವಲಯ) ಇವರ ಆಶ್ರಯದಲ್ಲಿ ಮುದ್ದು ಕಂದ ಸ್ಪರ್ಧೆ
“ಮುದ್ದು ಕಂದ” ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಮಕ್ಕಳ ದಿನಾಚರಣೆ ಅಂಗವಾಗಿ ದಿನಾಂಕ 14.11.22 ರಂದು ಕುಂದಾಪುರದ ಹೋಟೆಲ್ ಹರಿಪ್ರಸಾದ್ ನ ಅಕ್ಷತಾ ಹಾಲ್ ನಲ್ಲಿ ಜರಗಿತು. ಸಂಸ್ಥೆಯ ಅಧ್ಯಕ್ಷರಾದ ದೊಟ್ಟಯ್ಯ ಪೂಜಾರಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಮುದ್ದುಕಂದ ಸ್ಪರ್ಧೆಯ ಪುಟಾಣಿಗಳಿಗೆ ಬಹುಮಾನ ವಿತರಿಸಿ “ಫೋಟೋಗ್ರಾಫರ್ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು. ಫೋಟೋಗ್ರಾಫರ್ ಗಳು ಯಾವಾಗಲೂ ಶುಭ ವನ್ನು ಬಯಸುತ್ತಾರೆ, ಎಲ್ಲರ ಮನೆಯಲ್ಲೂ ಶುಭ ಕಾರ್ಯಗಳು ನಡೆಯಲಿ ಎಂದು ಹಾರೈಸುತ್ತಾರೆ” ಎಂದು ಹೇಳಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಸುರೇಶ್ ಜಮದಗ್ನಿ, ಸಲಹಾ ಸಮಿತಿಯ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿ ವಿಠ್ಠಲ ನಾಗೂರು, ನಿಕಟ ಪೂರ್ವ ಅಧ್ಯಕ್ಷ ರಾಜಾ ಮಠದ ಬೆಟ್ಟು, ಉಪಾಧ್ಯಕ್ಷರಾದ ಪ್ರಕಾಶ್ ಹೆಗ್ಡೆ, ಶೀನ ದೇವಾಡಿಗ, ಉಪಸ್ಥಿತರಿದ್ದರು. ಛಾಯಾ ಕಾರ್ಯದರ್ಶಿ ಪ್ರಮೋದ್ ಚಂದನ್ ಸ್ವಾಗತಿಸಿದರು. ಸುರೇಶ್ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಆಗೋಸ್ಟ್ 26 ರಂದು ಶನಿವಾರ ಸಾಯಂಕಾಲ 4 ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ನಡೆಯಲಿದೆ ಎಂದು ಡಾ ಎ ಸದಾನಂದ ಶೆಟ್ಟಿ ಸಾರ್ವಜನಿಕ ಅಭಿನಂದನಾ ಸಮಿತಿಯ ಅಧ್ಯಕ್ಷ ರವೀಂದ್ರನಾಥ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ನಿಟ್ಟೆ ವಿ.ವಿ.ಯ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ, ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್…
‘500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು’ ವಿದ್ಯಾಗಿರಿ: ‘ಆಳ್ವಾಸ್ ಪದವಿ ಪೂರ್ವಕಾಲೇಜಿನ 500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಸರ್ಕಾರಿ ಕೋಟಾದ ಅಡಿಯಲ್ಲಿ ವೈದ್ಯಕೀಯ ಸೀಟು ಪಡೆಯುವ ಭರವಸೆ ಇದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಪದವಿ ಪೂರ್ವಕಾಲೇಜು ಶುಕ್ರವಾರ ಹಮ್ಮಿಕೊಂಡ ಪೋಷಕ- ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳಿಗೆ ಗುರಿ ಸಾಧಿಸಲು ನಿರೀಕ್ಷೆ ಮತ್ತು ಕನಸು ಬೇಕು. ಆಗ ಮಾತ್ರ ಕನಸು ನನಸಾಗಲು ಸಾಧ್ಯ. ಆದರೆ, ಇನ್ನೊಬ್ಬರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ವ್ಯಕ್ತಿಯೂ ಅನನ್ಯ. ಅದಕ್ಕಾಗಿ ಗುರಿಯೆಡೆಗಿನ ನಡೆಗೆ ನಿಮ್ಮ ಸಮಯ ಮೀಸಲಿಡಿ’ಎಂದು ಹಿತವಚನ ಹೇಳಿದರು. ‘ವಿದ್ಯಾರ್ಥಿ ಜೀವನವು ಅತ್ಯಮೂಲ್ಯ ಸಮಯವಾಗಿದ್ದು, ಗಾಸಿಪ್ ಆಲಿಸಿಕೊಂಡು ವ್ಯರ್ಥ ಮಾಡಬೇಡಿ. ನಿಮಗೆ ಮಾರ್ಗದರ್ಶನ ಮಾಡಲು, ಸಂಯೋಜಕರು, ಉಪನ್ಯಾಸಕರು ಇದ್ದಾರೆ. ಅವರ ಮಾತು ಕೇಳಿ’ಎಂದು ಸಲಹೆ ನೀಡಿದರು. ‘ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುವ ಬದಲಾಗಿ ಪ್ರೋತ್ಸಾಹಿಸಬೇಕು. ಪ್ರೋತ್ಸಾಹವು ಮಕ್ಕಳಿಗೆ ಹುರುಪು ನೀಡುತ್ತದೆ.…