Author: admin
ಕರ್ನಾಟಕ ಕುಸ್ತಿ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಪ್ರಸಾದ್ ಶೆಟ್ಟಿಯವರನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಶಾಸಕರಾದಂತಹ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಮತ್ತು ಅವರ ಶ್ರೀಮತಿಯಾದ ಶಿಲ್ಪ ಜಗದೀಶ್ ಶೆಟ್ಟರ್ ರವರು ಸನ್ಮಾನಿಸಿದರು. ಪ್ರಸಾದ್ ಶೆಟ್ಟಿಯವರು ಯುವ ಉದ್ಯಮಿಯಾಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ನೆಟ್ಟಾಳ ಮುತ್ತಪ್ಪ ರೈ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಶೆಟ್ಟರು ಪ್ರಸ್ತುತ ಗುಣರಂಜನ್ ಶೆಟ್ಟಿಯವರ ಜಯಕರ್ನಾಟಕ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ತನ್ನ ಬಳಿ ಕಷ್ಟ ಹೇಳಿಕೊಂಡು ಸಹಾಯ ಕೇಳಲು ಬಂದವರಿಗೆ ಯಾವುದೇ ಪ್ರಚಾರ ಬಯಸದೆ ಸಮಾಜಸೇವೆ ಮಾಡುತ್ತಾ ಬರುತ್ತಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕೈಲ್ ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಉಡುಪಿ ಜಿಲ್ಲಾಧಿಕಾರಿ ಕುಮಾರ್ ರಾವ್ ಎಂ .ಭೇಟಿ ನೀಡಿದರು. ಇತ್ತೀಚಿಗೆ ಜಿಲ್ಲಾಧಿಕಾರಿಯವರು ಜಿಲ್ಲಾಧಿಕಾರಿಗಳ ನಡೆಯ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಹಾರ್ದಳ್ಳಿ -ಮಂಡಳಿ ಗ್ರಾಮ ವಾಸ್ತವ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಕೈಲ್ ಕೆರೆ- ಮಾವಿನಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರ ವಿ. ಅಡಪ ಅವರ ಕ್ಷೇತ್ರಗಳಿಗೆ ಭೇಟಿ ನೀಡಿ ಹೈನು ಉದ್ಯಮ ಮತ್ತು ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧನೆಯನ್ನು ಪರಿಚಯಿಸಿಕೊಂಡರು. ಶ್ರೀಮತಿ ಚೈತ್ರ ವಿ.ಅಡಪ ಹೈನು ಉದ್ಯಮದ ಬಗ್ಗೆ ಹಾಗೂ ಹೈನು ಉದ್ಯಮದಲ್ಲಿ ಮಹಿಳೆಯಾಗಿ ಸಮಾಜ ಸೇವೆಯನ್ನ ಗುರುತಿಸಿಕೊಂಡು ತನ್ನದೇ ಆದಂತಹ ಕಾರ್ಯ ವ್ಯಾಪ್ತಿ ಗುರುತಿಸಿಕೊಂಡು, ಗ್ರಾಮದ ಮಹಿಳೆಯರಿಗೆ ಮಾದರಿಯಾದ ಬಗ್ಗೆ ಹಾಗೂ ಮಹಿಳೆಯಾಗಿ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿ ಇತರರಿಗೂ ಮಾದರಿಯಾಗಿದ್ದ ಬಗ್ಗೆ, ಜಿಲ್ಲಾಧಿಕಾರಿ ಕುಮಾರ್ ರಾವ್.ಎಂ ಅಭಿನಂದಿಸಿದರು. ತೋಟಗಾರಿಕೆ…
ಬಂಟರ ಸಂಘ ಮುಂಬಯಿ ಸಂಚಾಲಿತ ಎಸ್.ಎಮ್. ಶೆಟ್ಟಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಗೌರವ್ ಜಗನ್ನಾಥ ಶೆಟ್ಟಿ ಐ.ಪಿ.ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಉನ್ನತ ವಿದ್ಯಾಭ್ಯಾಸವನ್ನು ನೆರೂಲ್ ನ ಡಿ.ವೈ.ಪಾಟೀಲ್ ವಿದ್ಯಾ ಸಂಕುಲದಲ್ಲಿ ಪೂರೈಸಿದ್ದರು. ಈತ ಮೂಲತಃ ಪೆರ್ನ ದೊಡ್ಡಮನೆ ಸುಬ್ಬಯ್ಯ ಶೆಟ್ಟಿಯವರ ಮೊಮ್ಮಗ, ಎರ್ಮಾಳು ಲೋಕನಾಡು ಮನೆ ಸುರೇಶ ಚೌಟ ಅವರ ಅಳಿಯ, ಬಾಂಡುಪ್ ನ ಹನುಮಾನ್ ಹೊಟೇಲಿನ ಮಾಲೀಕ ಸಿದ್ಧಕಟ್ಟೆ ಕೊನರೆ ಗುತ್ತು ಜಗನ್ನಾಥ ಸೀತಾರಾಮ ಶೆಟ್ಟಿ ಹಾಗೂ ಎರ್ಮಾಳು ಲೋಕನಾಡು ಮನೆ ಆಶಾ ಜಗನ್ನಾಥ ಶೆಟ್ಟಿ ದಂಪತಿಯ ಪುತ್ರ ಹಾಗೂ ಸ್ವಾತಿ ಜೆ ಶೆಟ್ಟಿಯ ಸಹೋದರ. ಬಂಟ ಸಮುದಾಯದ ಕೀರ್ತಿ ಕಲಶಕ್ಕೆ ಗರಿಯ ತೊಡಿಸುವಂತಹ ಯಶಸ್ವೀ ವೃತ್ತಿ ಬದುಕು ತಮ್ಮದಾಗಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.
ಯಶಸ್ವಿ ಉದ್ಯಮಿ ಗಳಾಗಿರುವ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಮತ್ತು ಶಶಿ ಹೆಗ್ಡೆ ದಂಪತಿ ಹಾಗೂ ಲೈಫ್‌ಲೈನ್ ಫೀಡ್ಸ್ ಇಂಡಿಯಾ ಪೈ. ಲಿ.ಯ ಅಧ್ಯಕ್ಷರು. ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೈಲ್ಕೆರೆ ಕಿಶೋರ್ ಕುಮಾರ್ ಹೆಗ್ಡೆ ಮತ್ತು ಸುರೇಖಾ ಹೆಗ್ಡೆ ದಂಪತಿಗಳಿಗೆ ಹುಟ್ಟೂರ ಸಮಾನವು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ರವಿವಾರ ಮೊಳಹಳ್ಳಿಯ ಮಲ್ನಾಡ್ ಟೈಲ್ಸ್ ಆವರಣದಲ್ಲಿ ನಡೆಯಿತು. ಮೂಡಬಿದಿರೆಯ ಎಜುಕೇಶನ್ ಆಳ್ವಾಸ್ ಫೌಂಡೇಶನ್‌ನ ಪ್ರವರ್ತಕ ಡಾ. ಎಂ. ಮೋಹನ ಆಳ್ವ ಸನ್ಮಾನಿತರನ್ನು ಗೌರವಿಸಿದರು. ಅವರು ಮಾತನಾಡಿ ಸಾಧನೆ ಮಾಡಿದ ಸಾಧಕರಲ್ಲಿ ಎರಡು ಬಗೆಯ ಸಾಧಕರು ಇದ್ದಾರೆ. ಅವರಲ್ಲಿ ಮೊದಲನೇ ವರ್ಗ ಇತಿಹಾಸ ಫಲದಿಂದ ಸಾಧನೆ ಮಾಡಿಕೊಂಡು ಬಂದವರು. ಎರಡನೇ ವರ್ಗದವರು ಶೂನ್ಯದಿಂದ ಹೊರಟು ಸಾಧನೆಯ ಗೌರಿಶಂಕರ ಶಿಖರವನ್ನು ಏರಿದವರು. ಇಂದು ನಾವು ಮಾಡಿದ ಸನ್ಮಾನಿತರು ಈ ಎರಡನೇ ವರ್ಗಕ್ಕೆ ಸೇರಿದವರು ಎಂದರು. ಪ್ರಪಂಚದಲ್ಲಿ ಇಂದು ಇಂತಹ ಸಾಧಕರೇ ಜಾಸ್ತಿ ಇರುವುದನ್ನು…
ಸಣ್ಣ ಪ್ರಾಯದಲ್ಲೇ ಸಾಯಿ ಪ್ರೊಡಕ್ಷನ್ ಎಂಬ ಈವೆಂಟ್ ಸಂಸ್ಥೆಯನ್ನು ಹುಟ್ಟುಹಾಕಿ ಯಶಸ್ವಿಯಾಗಿ, ತನ್ನ ಸ್ವರ ಮಾಧುರ್ಯದಿಂದ ಕಾರ್ಯಕ್ರಮ ನಿರೂಪಕನಾಗಿ ದೇಶ ವಿದೇಶದಲ್ಲಿ ಪ್ರಸಿದ್ದಿ ಪಡೆದು, ಕನ್ನಡ ಚಲನಚಿತ್ರದಲ್ಲಿ ನಾಯಕನಾಗಿ ನಟಿಸಿದ ಸಾಹಿಲ್ ರೈ ಅವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ 28 – 29 ರಂದು ಜರಗುವ ವಿಶ್ವ ಬಂಟರ ಸಮ್ಮೇಳನ -2023 ಕ್ಕೆ ಪೂರ್ವಭಾವಿಯಾಗಿ ಹಸಿರು ಹೊರೆಕಾಣಿಕೆ ಸಮರ್ಪಣೆ ವಿಜೃಂಭಣೆಯಿಂದ ನಡೆಯಿತು. ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ 48 ಬಂಟರ ಸಂಘಟನೆಯ ಪ್ರತಿನಿಧಿಗಳು ಈ ಹಸಿರು ಹೊರೆಕಾಣಿಕೆಯಲ್ಲಿ ಭಾಗವಹಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉಡುಪಿಯ ಜೋಡುಕಟ್ಟೆಯಲ್ಲಿ ಹೊರೆಕಾಣಿಕೆ ಸಮರ್ಪಣೆಗೆ ಚಾಲನೆ ನೀಡಿದರು. ಜೋಡುಕಟ್ಟೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದವರೆಗೆ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಸಾಗಿತು. ಮೂರು ಜಿಲ್ಲೆಗಳಿಂದ ಸಾವಿರಾರು ಮಂದಿ ಬಂಟ ಸಮುದಾಯದ ಬಂಧುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ, ವಿಶ್ವ ಬಂಟರ ಕ್ರೀಡಾಕೂಟದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರು, ಸಹ ಸಂಚಾಲಕ ಡಾ. ರೋಶನ್ ಕುಮಾರ್ ಶೆಟ್ಟಿ,…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಉಡುಪಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ.), ಬೆಳ್ತಂಗಡಿ ಜಿಲ್ಲಾ ಜನಜಾಗೃತಿ ವೇದಿಕೆ ಉಡುಪಿ ಮತ್ತು ತಾಲೂಕು ಜನಜಾಗೃತಿ ವೇದಿಕೆ ಉಡುಪಿ, ಕಾಪು, ಬ್ರಹ್ಮಾವರ ಹಾಗೂ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ಇಂದು ದಿನಾಂಕ 02-10-2023 ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ “ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಯೋಜಿಸಲಾದ” ಜನಜಾಗೃತಿ ಜಾಥಾ ಮತ್ತು ಸಮಾವೇಶ – 2023″ ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಉಡುಪಿ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಸತ್ಯಾನಂದ ನಾಯಕ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪರ್ಯಾಯ ಶ್ರೀ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಭಟ್, ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ…
ಬಂಟರ ಸಂಘ (ರಿ) ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ) ಪಡುಬಿದ್ರಿ, ಬಂಟರ ಮಹಿಳಾ ವಿಭಾಗ ಪಡುಬಿದ್ರಿ ಇವರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ನಿವೃತ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ದಂಪತಿಗಳನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ನಿವೃತ ಶಿಕ್ಷಕ ನಾರಾಯಣ ಶೆಟ್ಟಿ ದಂಪತಿಗಳನ್ನು ಅವರ ಮನೆಗೆ ತೆರಳಿ ಗೌರವಿಸಲಾಯಿತು. ಈ ಸಂದರ್ಭ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಶಶಿಧರ ಶೆಟ್ಟಿ ಎರ್ಮಾಳು, ಸಂಘದ ಉಪಾಧ್ಯಕ್ಷೆ ಅನಿತಾ ವಿಶು ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಎರ್ಮಾಳು, ಕಾರ್ಯದರ್ಶಿ ವಾಣಿ ರವಿ ಶೆಟ್ಟಿ, ಕೋಶಾಧಿಕಾರಿ ರಶ್ಮಿ ಸುಧಾಕರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಮಾಜಿ ಅಧ್ಯಕ್ಷೆ ಶೋಭಾ ಜೆ ಶೆಟ್ಟಿ, ಉಪಾಧ್ಯಕ್ಷೆ ಭಾರತಿ ಬಿ ಶೆಟ್ಟಿ,…
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮವು ವೇಗ ಪಡೆದುಕೊಂಡಿದ್ದು, ಒಂದರ ಮೇಲೊಂದರಂತೆ ವಿವಿಧ ಅಭಿವೃದ್ಧಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಇತ್ತೀಚೆಗಷ್ಟೇ ದೇಶದ ಅತಿದೊಡ್ಡ ಸಭಾಂಗಣವಾದ ಭಾರತ ಮಂಠಪವನ್ನು ದೇಶಕ್ಕೆ ಸಮರ್ಪಿಸುವ ವೇಳೆ ಮತ್ತೊಂದು ಮಹತ್ತರ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದರು. ಅದುವೇ ‘ಯುಗೇ ಯುಗೀನ ಭಾರತ’. ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯ ನಿರ್ಮಾಣದ ಈ ಯೋಜನೆಗೆ ಸಂಬಂಧಿಸಿದ ಕೆಲ ವಿವರ ಹೀಗಿದೆ.. ರಾಷ್ಟ್ರಕಥೆ ಸಾರಲು ಸಾರಥ್ಯ : ಪ್ರಸಕ್ತ ವಸ್ತು ಸಂಗ್ರಹಾಲಯವು ದೆಹಲಿಯ ಕರ್ತವ್ಯ ಪಥದ ಸಮೀಪದಲ್ಲಿದ್ದು, ನಿರ್ಮಾಣಗೊಳ್ಳಲಿರುವ ನೂತನ ವಸ್ತು ಸಂಗ್ರಹಾಲಯವು ರಾಷ್ಟ್ರಪತಿ ಭವನಕ್ಕೆ ಸಮೀಪವಾಗಿರಲಿದೆ. ಭಾರತದ ತಲಾತಲಾಂತರದ ಕಥನವನ್ನು ಸಾರುವ ಸಾಕ್ಷ್ಯಗಳಿಗೆ ಸಾರಥಿಯಾಗಿರಲಿದೆ. ಅಂದರೆ, ಪ್ರಾಚೀನ ಭಾರತದಿಂದ, ಮಧ್ಯಕಾಲೀನ ಹಾಗೂ ಆಧುನಿಕ ಭಾರತದ ಸಂಪೂರ್ಣ ಇತಿಹಾಸ, ವೈಭವ ಮತ್ತು ವಾಸ್ತವವನ್ನು ಇಲ್ಲಿ ತೆರೆದಿಡಲಾಗುತ್ತಿದೆ. ವಿಶೇಷವಾಗಿ ಡಚ್, ಬ್ರಿಟಿಷ್, ಪೋರ್ಚುಗೀಸರು ಸೇರಿದಂತೆ ವಸಹಾತುಶಾಹಿಗಳ ಆಡಳಿತ ಹಾಗೂ ಆ ನಂತರದ ಸ್ವಾತಂತ್ರ್ಯ ಹೋರಾಟ ಮತ್ತು ನಂತರದ 100…
ಬಂಟ್ಸ್ ಅಸೋಸಿಯೇಷನ್ ಪುಣೆ ಅಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯೋಗ ನಮ್ಮ ಆರೋಗ್ಯಕ್ಕೆ ಪರಿಪೂರ್ಣ ಶಕ್ತಿಯನ್ನು ನೀಡುತ್ತದೆ -ಗಣೇಶ್ ಹೆಗ್ಡೆ ಪುಣ್ಚೂರು
ಪುಣೆ ; ಯೋಗ ಆಧ್ಯಾತ್ಮಿಕ ಚಿಕಿತ್ಸೆಯಾಗಿ ಮನುಷ್ಯನ ವಿಕಾಸದ ಪ್ರಕ್ರೀಯೆಗೆ ಸಾರ್ವರ್ತಿಕ ಪ್ರಾಯೋಗಿಕದ ಒಂದು ವಿಧಾನ ,ವ್ಯಕ್ತಿಯ ಶಕ್ತಿಯನ್ನು ಸಂತುಲಿತ ರೀತಿಯಲ್ಲಿ ಸುಧಾರಿಸಲು ಮತ್ತು ಸದೃಡಗೊಳಿಸುವಲ್ಲಿ ರಾಮ ಬಾಣವಾಗಿ ಯೋಗ ಇಂದು ನಮ್ಮ ದೇಶ ಮತ್ತು ವಿದೇಶದಲ್ಲಿ ಪ್ರಚಲಿತವಾಗಿದೆ .ಮಾನ್ಯ ಮೋದಿಯವರ ಸಂಕಲ್ಪದಂತೆ ಭಾರತದಲ್ಲಿ ಯೋಗ ದಿನಾಚರಣೆಯ ಪರ್ವ ಶುರುವಾಗಿ ಇಂದು ಪ್ರಪಂಚದ ಮೂಲೆ ಮೂಲೆಯಲ್ಲೂ ಯೋಗಕ್ಕೆ ಮಾನ್ಯತೆ ಸಿಕ್ಕೀದೆ ಯೋಗದಿಂದ ಆಗುವ ಅನುಕೂಲಗಳನ್ನು ಅರಿತಿದ್ದಾರೆ .ನಮ್ಮ ದೇಶದ ಪ್ರತಿ ಕಡೆಯೂ ಯೋಗದ ಮಹತ್ವವನ್ನು ಅರಿತವರು ಅರೋಗ್ಯ ಪೂರ್ಣ ಜೀವನ ನಡೆಸುತಿದ್ದಾರೆ . ಆರೋಗ್ಯದ ದೃಷ್ಟಿಯಲ್ಲಿ ಭಕ್ತಿ ,ಜಪ ,ಕರ್ಮ,ರಾಜ ,ನಾಡಿ ,ಕುಂಡಲಿನಿ ,ಮತ್ತು ಅಷ್ಟಾಂಗ ಯೋಗ ಮೊದಲಾದ ಯೋಗಗಳ ಹಾದಿಗಳ ಮೂಲಕ ಮನುಷ್ಯನ ಶಾರೀರಿಕ ಸಮತೋಲನ ಕಾಪಾಡುವಲ್ಲಿ ಯೋಗ ಮಹತ್ತರವಾದ ಸ್ಥಾನವನ್ನು ಪಡೆದಿದೆ . ನಮ್ಮ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ಯೋಗದ ಮಹತ್ವವನ್ನು ತಿಳಿಸುವ ಅಗತ್ಯತೆ ಇದೆ .ಒಟ್ಟಾರೆಯಾಗಿ ಯೋಗ ನಮ್ಮ ದೇಹದ ಆರೋಗ್ಯಕ್ಕೆ ಪರಿಪೂರ್ಣ ಶಕ್ತಿಯನ್ನು ನೀಡುವ ಪ್ರಕ್ರಿಯೆಯಂತೆ…