ಮೂಡುಬಿದಿರೆ: ಜೂನ್ ೨೦೨೪ರಲ್ಲಿ ನಡೆದ ಎ.ಸಿ.ಸಿ.ಎ – ಯು. ಕೆ ಪರೀಕ್ಷೆಯ ವಿವಿಧ ಪತ್ರಿಕೆಗಳಲ್ಲಿ ಆಳ್ವಾಸ್ ಕಾಲೇಜಿನ ೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಹಸನ್ ಸುಹೈಲ್, ಶೇಖ್ ಮೊಹಮ್ಮದ್ ಸೈಮ್, ಲಿಯೋನಾ ವಿಯೋಲಾ ಡಿಸೋಜಾ, ಬಿಂದಿಯಾ ಎನ್ ಇವರು ಎ.ಸಿ.ಸಿ.ಎ – ಎಫ್-೮ ಆಡಿಟ್ ಆಂಡ್ ಅಶ್ಯೂರೆನ್ಸ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಮಾಝ್, ರಿಯಾ ಲಿಸಾ ರೆಬೆಲ್ಲೋ, ಸಂತೋಷ್ ನಾಯಕ್, ಸುವೈದ್ ಸುಲೈಮಾನ್, ಪ್ರತೀಕ್ ವಿ ಹೆಗ್ಡೆ, ಚೈತನ್ಯಾ ಎಮ್, ಪ್ರಶಾ ಜೈನ್ ಇವರು ಎ.ಸಿ.ಸಿ.ಎ – ಎಫ್-೭ ಫೈನಾನ್ಶಿಯಲ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಳ್ವಾಸ್ನ ದ್ವಿತೀಯ ಬಿ.ಕಾಂ. ಎ.ಸಿ.ಸಿ.ಎ.ಯ ವಿದ್ಯಾರ್ಥಿ ಹಸನ್ ಸುಹೈಲ್ ಆಡಿಟ್ ಆಂಡ್ ಅಶ್ಯೂರೆನ್ಸ್ (ಎ.ಸಿ.ಸಿ.ಎ – ಎಫ್-೮) ಪತ್ರಿಕೆಯಲ್ಲಿ ೭೭ ಅಂಕಗಳನ್ನು ಪಡೆದುಕೊಂಡಿದ್ದು, ಈ ಪತ್ರಿಕೆಯಲ್ಲಿ ವಿಶ್ವದ ೯ನೇ ಹಾಗೂ ಭಾರತದ ೩ನೇ ರ್ಯಾಂಕ್ ಗಳಿಸಿದ್ದಾರೆ. ಇವರು ಆಳ್ವಾಸ್ನಲ್ಲಿ ಈ ಸಾಧನೆ ಮಾಡಿದ ಪ್ರಥಮ ವಿದ್ಯಾರ್ಥಿಯಾಗಿದ್ದಾರೆ. ಇವರು ಮಾರ್ಚ್೨೦೨೪ರಲ್ಲಿ ನಡೆದ ಎ.ಸಿ.ಸಿ.ಎ – ಯು. ಕೆ ಎಫ್-೭ ಫೈನಾನ್ಶಿಯಲ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ ಅತ್ಯಧಿಕ ಶೇಕಡಾ ೯೧ ಪಡೆದುಕೊಂಡಿದ್ದರು. ಇವರಿಗೆ ಆಳ್ವಾಸ್ ಕಾಲೇಜಿನಲ್ಲಿ ಎ.ಸಿ.ಸಿ.ಎ ಕಲಿಯುತ್ತಿರುವುದರಿಂದ ಒಟ್ಟು ೧೩ ಪತ್ರಿಕೆಗಳಲ್ಲಿ ೫ ಪತ್ರಿಕೆಗಳಲ್ಲಿ ವಿನಾಯಿತಿ ದೊರೆಯುತ್ತಿದೆ. ಆಳ್ವಾಸ್ನ ಬಿ.ಕಾಂ. ಎ.ಸಿ.ಸಿ.ಎ.ಯ ಹಿರಿಯ ವಿದ್ಯಾರ್ಥಿ ಪ್ರಫುಲ್ಲ್ ರಾವ್ ಎ.ಸಿ.ಸಿ.ಎ. ಫೈನಲ್ ವಿಭಾಗದ ಸ್ಟ್ರೆಟೆಜಿಕ್ ಬಿಸಿನೆಸ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ ೬೭ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಮೇ ೨೦೨೪ರಲ್ಲಿ ನಡೆದ ಸಿ.ಎಂ.ಎ- ಯು.ಎಸ್. ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಲೋಯ್ಡ್ ಪ್ರೀತೇಶ್ ಡಿಸೋಜಾ ಸಿ.ಎಂ.ಎ- ಪಾರ್ಟ್-೧ ವಿಭಾಗದಲ್ಲಿ ಶೇಕಡಾ ೭೨ (೩೬೦/೫೦೦) ಅಂಕಗಳೊಂದಿಗೆ ಉತ್ತೀರ್ಣರಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಎ.ಸಿ.ಸಿ.ಎ – ಯು. ಕೆ ಸಂಯೋಜಕ ಅಶೋಕ್ಕೆ.ಜಿ. ಮತ್ತು ಸಿ.ಎಂ.ಎ- ಯು.ಎಸ್. ಸಂಯೋಜಕಿ ಶಿಲ್ಪಾ ಭಟ್ ಎನ್.ಹೆಚ್. ಅಭಿನಂದಿಸಿದ್ದಾರೆ.