ಆಗಸ್ಟ್ ೦೫: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನಲ್ಲಿ ಜಿ ಎಮ್ ಸಮೂಹ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಪ್ರಕಾಶ್ಚಂದ್ರ ಶೆಟ್ಟಿಯವರ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನನ್ನ ಕನಸು ಸಾಕಾರಗೊಳ್ಳಲು ಮುಖ್ಯ ಕಾರಣ ನನ್ನ ತಂದೆ-ತಾಯಿಯರ ಆಶೀರ್ವಾದ, ಸ್ನೇಹಿತರ, ಶಿಕ್ಷಕರ ಹಾಗೂ ಪೋಷಕರ ಸಹಕಾರವೆಂದರು.
ನಮಗೆ ನಮ್ಮ ತಂದೆ ತಾಯಿಯರೆ ನಿಜವಾದ ದೇವರು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ನಡೆದಂತೆ ನುಡಿಯಬೇಕು. ನನ್ನ ಉಸಿರಿರುವವರೆಗೂ ಮಕ್ಕಳ ಮೇಲಿರುವ ಪ್ರೀತಿ ಹೀಗೆಯೇ ಇರುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ದಿನವಿರುತ್ತದೆ. ಅದೇ ರೀತಿ ಜಿ ಎಮ್ನಲ್ಲಿ ಅಧ್ಯಕ್ಷರ ಹುಟ್ಟು ಹಬ್ಬವೂ ನಮಗೆಲ್ಲರಿಗೂ ವಿಶೇಷವಾದದ್ದು.
ಅವರ ಚಿಂತನಾ ಶಕ್ತಿ, ಕ್ರಿಯಾಶೀಲತೆ ನಮಗೆಲ್ಲರಿಗೂ ಸ್ಫೂರ್ತಿ ಎಂದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೃತ್ಯ, ಗಾಯನ ಮತ್ತು ಗ್ರೀಟಿಂಗ್ಸ್ ಕಾರ್ಡ್ ನೀಡುವುದರ ಮೂಲಕ ಹುಟ್ಟುಹಬ್ಬಕ್ಕೆ ಶುಭಕೋರಿದರು. ಅಧ್ಯಕ್ಷರು ತಮ್ಮ ಅಮೃತ ಹಸ್ತದಿಂದ ಜಿ ಎಮ್ ಕ್ಯಾಲೆಂಡರ್ನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಗ್ಲೋಬಲ್ ಸ್ಕೂಲ್ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ, ತ್ಯಾಗೀಶ್ಚಂದ್ರ ಶೆಟ್ಟಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.