Author: admin

ವಿದ್ಯಾಗಿರಿ: ಇಲ್ಲಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಪ್ರಿಲ್ 5 ಮತ್ತು 6ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಖೋ-ಖೋ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದಿದೆ. ಪುರುಷರ ಫೈನಲ್ ಪಂದ್ಯದಲ್ಲಿ ಆತಿಥೇಯ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಮಣಿಸಿದ ಆಳ್ವಾಸ್ ಕಾಲೇಜು ಸತತ 16ನೇ ಬಾರಿ ಚಾಂಪಿಯನ್ ಆಯಿತು. ಮಹಿಳೆಯರ ವಿಭಾಗದಲ್ಲೂ ಆತಿಥೇಯ ಕಾಲೇಜನ್ನು ಫೈನಲ್‍ನಲ್ಲಿ ಮಣಿಸಿದ ಆಳ್ವಾಸ್ ಕಾಲೇಜು ಮಹಿಳಾ ತಂಡವು 12ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಿತು. ಒಟ್ಟು ಪುರುಷರ ವಿಭಾಗದಲ್ಲಿ 20 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 18 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಚಾಂಪಿಯನ್ ಶಿಪ್ ರೌಂಡ್ ನ ಫೈನಲ್   ಪಂದ್ಯಾಟದಲ್ಲಿ ಆಳ್ವಾಸ್ ಪುರುಷರ ತಂಡವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡವನ್ನು ಮಣಿಸಿ ಸತತ 16ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು ವಿಜೇತ ತಂಡದ ಆಟಗಾರರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ…

Read More

ಮೂಡುಬಿದಿರೆ: ಶಿಕ್ಷಣದ ಜೊತೆಗೆ ಕೌಶಲ ವೃದ್ಧಿಯು ಬಹಳ ಮುಖ್ಯ ಎಂದು ನವದೆಹಲಿಯ ಎಐಸಿಟಿಇ ಅಧ್ಯಕ್ಷ ಪ್ರೊ.ಟಿ. ಜಿ. ಸೀತಾರಾಮ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಶನಿವಾರ ನಡೆದ ತಂತ್ರಜ್ಞಾನ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಈಗ ಅಮೃತ ಕಾಲದಲ್ಲಿ ಇದ್ದೇವೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಎಂಜಿನಿಯರಿಂಗ್ ಮತ್ತು ನಿರ್ವಹಣಾ ವಲಯದ ಪಾತ್ರ ಪ್ರಮುಖವಾದದ್ದು ಎಂದರು. ಸಂಶೋಧನೆ, ಆವಿಷ್ಕಾರ, ಉದ್ಯಮಶೀಲತೆ, ಸ್ಟಾರ್ಟ್‍ಅಪ್‍ಗಳ ಪ್ರಚುರತೆಯಿಂದ ವಿಕಸಿತ ಭಾರತದ ಹಾದಿ ಸುಲಭ. ಇವುಗಳ ಜೊತೆಯಲ್ಲಿ ತಂತ್ರಜ್ಞಾನ ಹಾಗೂ ನಿರ್ವಹಣೆಯಿಂದ ಭಾರತವು ವಿಶ್ವಗುರು ಆಗಲು ಸಾಧ್ಯ ಎಂದರು. ಭಾರತದಲ್ಲಿ 1.25 ಲಕ್ಷ ಸ್ಟಾರ್ಟ್ ಅಪ್‍ಗಳಿದ್ದು, ಪ್ರಪಂಚದಲ್ಲೆ ಮೂರನೇ ಅತೀ ದೊಡ್ಡ ಸ್ಟಾರ್ಟ್ ಅಪ್ ರಾಷ್ಟ್ರ ಎನಿಸಿಕೊಂಡಿದೆ. ಬಹುಶಿಸ್ತೀಯ ಸಂಶೋಧನಾ ಅನ್ವೇಷಣೆಯಿಂದಾಗಿ ನಮ್ಮ ದೇಶದ ಐಐಟಿಗಳು ಜಾಗತಿಕ ಮಟ್ಟದ ಗುಣಮಟ್ಟವನ್ನು ತಲುಪುವಂತಾಗಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 1.25 ಮಿಲಿಯನ್ ಇಂಜಿನಿಯರಿಂಗ್ ಪದವೀಧರರು ಶಿಕ್ಷಣ ಮುಗಿಸುತ್ತಾರೆ. ಕಾಲೇಜುಗಳು ಶಿಕ್ಷಣ ಹಂತದಲ್ಲಿ ಕೌಶಲ್ಯದ…

Read More

ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಕಾರಣೀಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.9 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದೃಢಕಲಶಾಭಿಷೇಕ ನಡೆಯಲಿದೆ. ದೇವಸ್ಥಾನದಲ್ಲಿ ಬೆಳಿಗ್ಗೆ 8.30ರಿಂದ ದೇವತಾ ಪ್ರಾರ್ಥನೆ ಮಹಾಗಣಪತಿ ಹೋಮ, ಕಲಶ ಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ದೃಢಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ದೇವಸ್ಥಾನದಲ್ಲಿ ಪ್ರತೀ ತಿಂಗಳ ಸಂಕಷ್ಠಿಯಂದು ಮಹಾಗಣಪತಿ ಹೋಮ, ಸಂಕ್ರಮಣದಂದು ರಾತ್ರಿ ವಿಶೇಷ ರಂಗಪೂಜೆ, ಪ್ರತೀ ತಿಂಗಳ ಷಷ್ಠಿಯಂದು ಮಧ್ಯಾಹ್ನ ಷಷ್ಠಿ ಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಅಲ್ಲದೇ ಭಕ್ತಾಧಿಗಳು ಇಚ್ಚಿಸಿದ ದಿನಗಳಲ್ಲಿ ಶ್ರೀ ದೇವರಿಗೆ ಕಾರ್ತಿಕ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಆಶ್ಲೇಷ ಬಲಿ, ಶ್ರೀ ಶನೀಶ್ವರ ಪೂಜೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿದೆ. ಭಕ್ತಾಧಿಗಳು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ತಿಳಿಸಿದ್ದಾರೆ.

Read More

ಕೆಲವು ವರ್ಷಗಳ ಹಿಂದೆ ಭಜನಾ ಮಂದಿರಗಳಾಗಲಿ, ಭಜನಾ ಸಂಘಗಳಾಗಲಿ ಇರಲಿಲ್ಲ. ದಾಸರೇಣ್ಯರು ಊರೂರು ಪರಿವ್ರಾಜಕರಾಗಿ (ನಿತ್ಯ ಸಂಚಾರಿ) ಗುಡಿಯ ದೇವರನ್ನು ತಮ್ಮ ಹೃದಯ ಮಂದಿರದಲ್ಲಿ ನೆಲೆಗೊಳಿಸಿ ಮಧುಕರ ವೃತ್ತಿ (ಜೇನುನೋಣಗಳಂತೆ) ಭಕ್ತಿ ಭಾವವನ್ನು ಪಸರಿಸಿದ್ದರು. ಇವರ ಭಕ್ತಿ ಶ್ರದ್ಧೆಗೆ ಗುಡಿಯ ಮುಂಭಾಗದಲ್ಲಿ ನಡೆಯುತ್ತಿದ್ದ ಯಾಗ, ಯಜ್ಞ, ಹೋಮ ಹವನಗಳೊಂದಿಗೆ ಹಾಲು ಜೇನಿನ ಅಭಿಷೇಕ ಸುರಿಯುತ್ತಿದ್ದರೂ ಹಿಂಭಾಗದಲ್ಲಿ ಮೈಮರೆತು ಹಾಡುತ್ತಿದ್ದ ಭಜನಾ ನೃತ್ಯಕ್ಕೆ ತುಳುನಾಡಿನಲ್ಲಿ ದೇವರ ವಿಗ್ರಹವೇ ತಿರುಗಿ ನಿಲ್ಲಲಿಲ್ಲವೇ? ಅದುವೇ ಭಜನೆಯ ಮಹತ್ವ. ಭಜನೆ ಹಾಗೂ ಭಜಕರಲ್ಲಿ ಮೇಲು ಕೀಲು, ಬಡವ ಬಲ್ಲಿದ, ಬ್ರಾಹ್ಮಣ ದಲಿತ, ಪಂಡಿತ ಪಾಮರ ಎಂಬ ತಾರತಮ್ಯವಿಲ್ಲ. ಒಟ್ಟಿಗೆ ಕುಳಿತು ಸರ್ವ ನಾಮದಲ್ಲಿ ಏಕ ದೇವರನ್ನು ಕಾಣುವುದು ಭಜನೆಯಲ್ಲಿ ಮಾತ್ರ. ದೇವಸ್ಥಾನದಲ್ಲಿ ದೇವರ ಸ್ಥಾನ ಗರ್ಭಗುಡಿಯಾದರೆ, ಭಜನಾ ಮಂದಿರದಲ್ಲಿ ದೇವರ ಸ್ಥಾನ ಭಜಕನ ಹೃದಯದಲ್ಲಿ ಎಂಬ ಭಾವ. ಸಾಕ್ಷಿಗಾಗಿ ಒಂದು ದೀಪ. ತುಳುನಾಡಿನಲ್ಲಿ ಭಜನಾ ಮಂದಿರದ ಉಗಮ 1970 ರ ನಂತರ ಆಗಿದೆ. ಕೃಷಿ ಕಾರ್ಮಿಕರು ಆ…

Read More

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು 2024ರ ಎಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಎಂದು ನಿಶ್ಚಯಿಸಿದ್ದು, ಆ ಪ್ರಯುಕ್ತ ಎಪ್ರಿಲ್ 9 ರ ಮಂಗಳವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಸರಿಯಾಗಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡುವುದೆಂದು ತೀರ್ಮಾನಿಸಲಾಗಿದೆ ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿಯವರು ಹೇಳಿದ್ದಾರೆ. ಅವರು ದೇವಳದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಪುವಿನ ಅಮ್ಮನ ದೇಗುಲದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು 2024ರ ಎಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಮಾಡಬಹುದೆಂದು ನಿಶ್ಚಯಿಸಿದ್ದರೂ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಹಾಗೂ ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಭಾಗವಹಿಸಲು ತೊಂದರೆಯಾಗುತ್ತದೆ ಎಂದು ತಿಳಿದು ಬಂದಿದೆ. ಅಲ್ಲದೇ ಜೂನ್ 12 ರಿಂದ ದಕ್ಷಿಣಾಯಣ ಪ್ರಾರಂಭವಾಗುವುದರಿಂದ ಪ್ರತಿಷ್ಠೆಗೆ ಸೂಕ್ತವಾದ ದಿನಗಳು ಲಭ್ಯವಾಗಿರುವುದಿಲ್ಲ. ಆದುದರಿಂದ ಅಭಿವೃದ್ಧಿ ಸಮಿತಿಯು ಕ್ಷೇತ್ರದ ಪ್ರಧಾನ ತಂತ್ರಿಗಳಾದ…

Read More

ಒರ ಜಡ್ಡ್ ದ ಕಂಡೊಲೆನ ಬರಿತ ತೋಡುಡು ಕುಂಟು ಅರ್ದೊಂದು ಇತ್ತೆರ್ ಎನ್ನಪ್ಪೆ. ಯಾನ್ ದಂಡೆಡ್ ಕುದೊಂದು ಪೊಲ್ಲೆ ಪಾತೆರೊಂದು ಇತ್ತೆ. ಅಪಗ ಮರಟೊಂಜಿ ಮಂಗೆ (ದಿ) ಬಂಜಿಗ್ ಅಮತ್ ಪತೊಂದಿ ಕಿನ್ನಿದೊಟ್ಟುಗು ಎಂಕಲೆನ್ ತೂದು ಕುಲ್ಯಾಟ್ಟದ್ ‘ಟೆರ್ರೆಂಕ್’ ಪಂಡ್. ಅಪಗ ಎನ್ನಪ್ಪೆಗ್ ಒಂಜಿ ಕತೆ ನಿನೆಪಾಂಡ್‌. ಸೀತೆ,‌ ಅವ್ವೆ ನಮ್ಮ ರಾಮನ ಕೈ ಪತಿನ ಬುಡೆದಿ. ಏರಾ ಮಡ್ಡೆಲೆ ದಾದನ ಪಂಡೆಗೆ, ಇಂಬೆ ತನ್ನ ಕಾರಡಿಯೇ ತನ್ಕ್ ತೋಜಂದಿನ, ಪೊರ್ತಿಂಗೊಲ್ದ ಬುಡೆದಿನಿ ಮಲ್ಲ ಕಾಡ್ ಡ್ ಬುಡಿಯೆ ಮೆಲ್ಲ, ಮಲ್ಲ ಮುರ್ಗೊಲೆನ ಬಾಯಿಗ್ ಬೂರಡ್ ಪಂದಾ ದಾನ್ಯ. ಆಲೆಗೊಂತೆ ಐಸ ಇತ್ಂಡ್, ವಾಲ್ ಮುಕಿ ರುಸಿಕುಲು ತೂದು, ಆರೆನ ಗುಡ್ಚಿಲ್ ಗ್ ಲೆಸೊಂದು ಪೋಯೆರ್‌‌. ದಿನ ದಿಂಜಿದ್, ಒರ್ಂಬ ತಿಂಗೊಲು ಪತ್ತ್ ದಿನ ಕರಿನಗ ಆನ್ ಬಾಲೆ ಪೆತ್ತೊಲು. ಬಾಲೆಗ್ ಲವೆ ಪಂದ್ ಪುದರ್ ದೀಯೆರ್. ಪೆತ್ತಿ ಪದಿನಾಜನೆ ಅಮೆ ಕಲೆವರೆ, ಸೀತೆ ಬಾಲೆದ ಮಡೆಕುಂಟು, ಪಜೆ ಪತೊಂದು ತೋಡುಗು…

Read More

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಸಹಿತ ಮಹಾ ಗಣಪತಿ ಗ್ರಾಮದ ಆರಾಧ್ಯ ದೇವರಾಗಿದ್ದರೂ ಗ್ರಾಮದ ಯಾವುದೇ ಮನೆಗಳಲ್ಲಿ ಗಣಪತಿ ಫೋಟೋ ಇಡುವಂತಿಲ್ಲ. ಗಣಹೋಮ ಮಾಡುವಂತಿಲ್ಲ. ಚೌತಿ ಹಬ್ಬ ಆಚರಿಸುವಂತಿಲ್ಲ. ಪೆರ್ಣಂಕಿಲ ಗ್ರಾಮದ ಗಡಿ ವ್ಯಾಪ್ತಿಯೊಳಗಿರುವ ಈ ವಿಶಿಷ್ಟ ಸಂಪ್ರದಾಯ ಇಂದಿಗೂ ಪಾಲನೆಯಾಗುತ್ತಿದೆ. ಬಡವನಿರಲಿ, ಶ್ರೀಮಂತನಿರಲಿ ಮನೆಗಳಲ್ಲಿ ಆಡಂಭರಕ್ಕೆ ಅವಕಾಶವಿಲ್ಲದೆ, ಕ್ಷೇತ್ರ ದೇವತೆಯನ್ನು ಮರೆಯದೆ ಎಲ್ಲರೂ ಭಕ್ತರ ನೆಲೆಯಲ್ಲಿ ದೇವಳಕ್ಕೆ ಬರಬೇಕು. ತಮ್ಮ ಕಷ್ಟ ನೋವು ಹೇಳಿಕೊಳ್ಳಬೇಕೆನ್ನುವುದೇ ಇದರ ಹಿಂದಿರುವ ತತ್ವವಾಗಿದೆ. ಪೆರ್ಣಂಕಿಲ ಗ್ರಾಮದ ಮನೆಗಳಲ್ಲಿ ಎಮ್ಮೆಯನ್ನೂ ಸಾಕುವಂತಿಲ್ಲ. ಭಕ್ತನೊಬ್ಬ ದನದ ಹಾಲೆಂದು ಹೇಳಿ ಎಮ್ಮೆ ಹಾಲು ತಂದು ಕೊಟ್ಟಿದ್ದನ್ನು ದೇವರಿಗೆ ಅಭಿಷೇಕ ಮಾಡಿದ್ದು ಮರುದಿನ ಎಮ್ಮೆ ಸತ್ತಿತು. ಆ ಬಳಿಕ ಪೆರ್ಣಂಕಿಲ ಗ್ರಾಮದಲ್ಲಿ ಎಮ್ಮೆ ಸಾಕುವಂತಿಲ್ಲ. ಕೊಡಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪೆರ್ಣಂಕಿಲ ಗ್ರಾಮದಲ್ಲಿ 400 ಮನೆ,1,841 ಜನರಿದ್ದಾರೆ. ದೇವಳದಲ್ಲಿ ಜಾತ್ರೆಗೆ ಕೊಡಿ ಏರಿದ ಮೇಲೆ ಪೆರ್ಣಂಕಿಲ ಗ್ರಾಮದಿಂದ ಯಾವುದೇ ದಿಬ್ಬಣ ಹೊರಡಬಾರದು (ಬೇರೆ ಊರಿಂದ ದಿಬ್ಬಣದಲ್ಲಿ ಹೊರಟು ಬರುತ್ತಾರೆ). ಮನೆಗಳಲ್ಲಿ…

Read More

ಜೀವನದ ಕೊನೆಯುಸಿರು ಇರುವವರೆಗೂ ಕ್ಯಾನ್ಸರ್ ರೋಗಿಗಳನ್ನು ಗೌರವದಿಂದ ಕಾಣುವುದೇ ಉಪಶಾಮಕ ಆರೈಕೆ ವಾರ್ಡಿನ ಉದ್ದೇಶವಾಗಿದೆ. ತಪಸ್ಯ ಫೌಂಡೇಷನ್ ಹಮ್ಮಿಕೊಂಡಿರುವ ಮಾನವೀಯತೆಯ ಕಾರ್ಯಕ್ಕೆ ಯೆನೆಪೋಯ ಸಂಸ್ಥೆ ಸದಾ ಬೆಂಬಲಿಸುತ್ತದೆ ಎಂದು ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಂ. ವಿಜಯ್ ಕುಮಾರ್ ಅಭಿಪ್ರಾಯಪಟ್ಟರು. ಅವರು ತಪಸ್ಯ ಫೌಂಡೇಷನ್, ಲಯನ್ಸ್ ಇಂಟರ್‌ನ್ಯಾಷನಲ್ ೩೧೭ಡಿ ಆಶ್ರಯದಲ್ಲಿ ನರಿಂಗಾನದ ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ತಾತ್ಕಾಲಿಕ ಉಪಶಾಮಕ ಆರೈಕೆ ವಾರ್ಡನ್ನು ಉದ್ಘಾಟಿಸಿ ಮಾತನಾಡಿದರು. ಕ್ಯಾನ್ಸರ್ ರೋಗದ ನೈಸರ್ಗಿಕ ಇತಿಹಾಸವನ್ನು ಬದಲಾಯಿಸದೇ ರೋಗ ಲಕ್ಷಣಗಳಿಗೆ ಕಂಡುಕೊಳ್ಳುವ ಪರಿಹಾರ, ತೊಡಕುಗಳ ನಿವಾರಣೆ ವಾರ್ಡಿನ ಮೂಲಕ ಸಾಧ್ಯ. ಕ್ಯಾನ್ಸರ್ ರೋಗಿಗಳು ಮನೆ ಮಂದಿಯಿಂದ ತಿರಸ್ಕರಿಸಲ್ಪಡುವಾಗ, ಸಲಹಲು ಅಸಾಧ್ಯವಾದಂತಹ ರೀತಿಯಲ್ಲಿ ಇರುತ್ತಾರೆ. ಅಂತಹವರನ್ನು ಗೌರವದಿಂದ ಕಾಣಲು ತಪಸ್ಯ ಫೌಂಡೇಷನ್ ಮುಡಿಪು ಭಾಗದಲ್ಲಿ ನಿರ್ಮಿಸುವ ಕೇಂದ್ರಕ್ಕೆ ಸಹಕಾರ ಅಗತ್ಯ . ಯೆನೆಪೋಯ ಸಂಸ್ಥೆ ತಪಸ್ಯ ಫೌಂಡೇಷನ್ ಸದಾ ಜತೆಗಿದೆ ಎಂದರು. ೩೧೭ಡಿ ಪಾಸ್ಟ್ ಮಲ್ಟಿಪಲ್ ಕೌನ್ಸಿಲ್ ಚೇರ್‌ಪರ್ಸನ್ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ,…

Read More

ಪಾಳುಬಿದ್ದ ಮೂಲ ತರವಾಡು ಮನೆಯನ್ನು ಜೀರ್ಣೋದ್ದಾರಗೊಳಿಸುವ ಮೊದಲು ಒಂದು ಜ್ಯೋತಿಷ್ಯ ಪ್ರಶ್ನೆ ಅಗತ್ಯವಿದೆ. ಕಾರಣ ಕುಟುಂಬದ ಧರ್ಮದೈವಗಳು, ನಾಗ ಸಾನಿಧ್ಯ, ಪ್ರೇತಾತ್ಮಗಳ ಸದ್ಗತಿಯ ಬಗ್ಗೆ ತಿಳಿಯಬೇಕಾಗಿದೆ. ಅದಕ್ಕಾಗಿ ಯೋಗ್ಯ ಜ್ಯೋತಿಷ್ಯರನ್ನು ಹುಡುಕಿ ಕುಟುಂಬದ ಹಿನ್ನಲೆಯನ್ನು ತಿಳಿದ ಹಿರಿಯರನ್ನು ಸೇರಿಸಿ, ಚರ್ಚಿಸಿ ದೈವಜ್ಞರು ನೀಡಿದ ಪರಿಹಾರದಂತೆ ಹೊಸ ತರವಾಡು ಮನೆ, ದೈವಸ್ಥಾನ ಭಂಡಾರ ಮತ್ತು ನಾಗ ಪ್ರತಿಷ್ಠೆಗಳನ್ನು ಕರ್ಮಜ್ಞಾನಿಗಳಾದ ಆಚಾರ್ಯ (ತಂತ್ರಿ)ರಿಂದ ಶುದ್ಧ ಕ್ರಿಯಾದಿ ಕರ್ಮಗಳನ್ನು ಮಾಡಿಸುವುದು, ದೈವಗಳಿಗೆ ನೇಮ ಕೊಟ್ಟು ವರ್ಷಂಪ್ರತಿ ಸೂಚಿಸಿದ ಪರ್ವಗಳನ್ನು ತಂಬಿಲಗಳನ್ನು ಮಾಡಿಸಿಕೊಂಡು ಬರುವುದು. ಇದು ನಮ್ಮ ಹಿರಿಯರು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಪದ್ಧತಿ ಆದರೆ ಈಗ ಕೆಲವು ಕುಟುಂಬಸ್ಥರು ಮೇಲೆ ಸೂಚಿಸಿದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಪೂರ್ತಿಗೊಳಿಸಿ, ಬ್ರಹ್ಮಕಲಶಾದಿಗಳನ್ನು ಮಾಡಿಸಿ, ಮಾಡಿದ್ದು ಸರಿಯಾಗಿದೆಯೇ ಎಂದು ತಿಳಿಯಲು ಮತ್ತೊಬ್ಬ ಜ್ಯೋತಿಷ್ಯರ ಮೊರೆ ಹೋಗಿ ಪ್ರಶ್ನೆ ಇರಿಸುವುದು ಸಾಮಾನ್ಯವಾಗಿದೆ. ಅಲ್ಲಿ ನೀವು ಮಾಡಿದ ಯಾವ ಕಾರ್ಯಗಳೂ ಸರಿಯಾಗಿಲ್ಲ. ದೈವಸ್ಥಾನ, ನಾಗಪ್ರತಿಷ್ಠೆಗಳಲ್ಲೂ ದೋಷವಿದೆ. ಪ್ರೇತಾತ್ಮಗಳಿಗೆ ಮೋಕ್ಷವಾಗಿಲ್ಲ ಕರ್ಮದೋಷವಿದೆ. ಕೂಡಲೇ ಅಷ್ಠಮಂಗಲ…

Read More

ಮುಂಬಯಿಯಲ್ಲಿ ನೆಲೆಸಿರುವ ತುಳು ಕನ್ನಡಿಗರ ಮಹಾ ಸಮಾವೇಶವು ಎಪ್ರಿಲ್ 7 ರಂದು ರಂದು ಸಂಜೆ 5 ರಿಂದ ಥಾಣೆ ಪಶ್ಚಿಮ ವರ್ತಕ್ ನಗರದ ಪೋಕ್ರಾಣ್ ರೋಡ್, ನಂಬರ್ -1ರ ಕ್ಯಾಡ್ ಬರಿ ಕಂಪೆನಿ ಎದುರಿನ ರೇಮಂಡ್ ಗಾರ್ಡನ್ ನಲ್ಲಿ ನಡೆಯಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪನ್ವೇಲ್ ಮಹಾನಗರ ಪಾಲಿಕೆಯ ಮಾಜಿ ಸಭಾಪತಿ, ಬಿಜೆಪಿ ನಾಯಕ, ಸಮಾಜ ಸೇವಕ, ಸಂಘಟಕ ಸಂತೋಷ್ ಜಿ. ಶೆಟ್ಟಿ ನೇತೃತ್ವದಲ್ಲಿ ಮುಂಬಯಿಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಹಾಗೂ ಕಾಸರಗೋಡು ಲೋಕಸಭಾ ಕ್ಷೇತ್ರದ ಬಂಧುಗಳನ್ನು ಒಂದುಗೂಡಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಮೂರು ಲೋಕಸಭಾ ಕ್ಷೇತ್ರಗಳ ವಿವಿಧ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು. ಸಮಾವೇಶದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್…

Read More