Author: admin
ಚಿಣ್ಣರ ಬಿಂಬ ಮುಂಬಯಿಯ ಇದರ ಮೀರಾರೋಡ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ವರ್ಧೆ ಆ. 13 ರಂದು ಅಪರಾಹ್ನ 1 ರಿಂದ ಭಾಯಂದರ್ ಪೂರ್ವ, ಶಕ್ತಿ ನಗರ ಎಸ್ ಎನ್ ಕಾಲೇಜಿನ ಸಮೀಪದ ನ್ಯೂ ಸೈಂಟ್ ಆಗ್ನೇಸ್ ಹೈಸ್ಕೂಲ್ ಸಭಾಗೃಹದಲ್ಲಿ ನಡೆಯಲಿದೆ. ಪ್ರತಿಭಾ ಸ್ವರ್ಧೆ ಕಾರ್ಯಕ್ರಮವನ್ನು ಸುಮತಿ ಎಜುಕೇಶನಲ್ ಟ್ರಸ್ಟ್, ಸೈಂಟ್ ಅಗ್ನೇಸ್ ಇಂಗ್ಲಿಷ್ ಹೈಸ್ಕೂಲ್, ಮೆಹ್ತಾ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಕಾರ್ಯಧ್ಯಕ್ಷ ಡಾ. ಅರುಣೋದಯ ರೈ ಬಿಳಿಯೂರು ಗುತ್ತು ಇವರು ಉದ್ಘಾಟಿಸಲಿದ್ದಾರೆ. ಬಂಟರ ಸಂಘ ಮುಂಬಯಿ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್ ಎಂ. ಶೆಟ್ಟಿ ಸಿದ್ಧಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೀರಾರೋಡ್ ಶುಭಂ ಹೊಟೇಲ್ ನ ಮಾಲಕ ಉದಯ್ ಎಂ ಶೆಟ್ಟಿ ಮಲಾರಬೀಡು, ಸಾಯಿ ಬಾಲಾಜಿ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಯೋಗೇಂದ್ರ ಎಸ್. ಗಾಣಿಗ ಹಾಗೂ ನಿತ್ಯಾನಂದ ಸೇವಾ ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ಜಯಶ್ರೀ ಬಾಲಕೃಷ್ಣ ಶೆಟ್ಟಿ…
ಬೆಂಗಳೂರು ಪ್ರಾದೇಶಿಕ ಕಛೇರಿ ವ್ಯಾಪ್ತಿಯ ತುಮಕೂರು ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯು ತುಮಕೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಈ ಸಭೆಯನ್ನು ಉಪಾಧ್ಯಕ್ಷರಾದ ಶ್ರೀ ಅಮರನಾಥ ಶೆಟ್ಟಿ ಕೆಂಜೂರು ಮನೆಯವರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಭೆಗೆ ಆಗಮಿಸಿದ ಎಲ್ಲಾ ಗಣ್ಯರನ್ನು ಜಿಲ್ಲಾ ನಿರ್ದೇಶಕರಾದ ಶ್ರೀಮತಿ ದಯಾಶೀಲ ಇವರು ಸ್ವಾಗತ ಮಾಡಿದರು. ಇದುವರೆಗೂ ತುಮಕೂರು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಇತ್ತೀಚಿಗೆ ನಿಧನರಾದ ಶ್ರೀ ಪ್ರೆಸ್ ರಾಜಣ್ಣ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶೀನಪ್ಪ ಸರ್ ಇವರು ಕ್ರಿಯಾ ಯೋಜನೆ ಅನುಷ್ಠಾನದ ಕುರಿತು ಜನಜಾಗೃತಿ ಕಾರ್ಯಕ್ರಮಗಳಾದ ಮಧ್ಯವರ್ಜನ ಶಿಬಿರ, ನವ ಜೀವನ ಸಮಿತಿ ಬಲಪಡಿಸುವಿಕೆ, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆ, ಗಾಂಧಿ ಜಯಂತಿ ಕಾರ್ಯಕ್ರಮ, ಇನ್ನಿತರ ಜನಜಾಗೃತಿ ಕಾರ್ಯಕ್ರಮವನ್ನು…
ಭಾರತದ ರಂಗಭೂಮಿಯಲ್ಲಿ ಯಕ್ಷಗಾನ ಒಂದು ಹೆಮ್ಮೆಯ ಕಲೆ, ಯಕ್ಷಗಾನ ಸಂಶೋಧನೆಯ ಮೂಲಕ ನೋಡಿದಾಗಲೂ ಯಕ್ಷಗಾನ ವಿಶ್ವಪ್ರಸಿದ್ದಿಯನ್ನು ಪಡೆದ ಕಲೆಯಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹೊಸ ಭಾಷ್ಯೆಯನ್ನು ಬರೆದಿದೆ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ ತಿಳಿಸಿದರು. ಅಡ್ಯಾರ್ ಗಾರ್ಡನ್ ನಲ್ಲಿ ಜರಗಿದ ಯಕ್ಷಧ್ರುವ ಪಟ್ಲ ಸಂಭ್ರಮ 2023 ರ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಲ ಭಾಗವತರ ಜನಪ್ರಿಯತೆ ಮತ್ತು ಜವಾಬ್ದಾರಿ ಏನು ಎಂಬುದನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನ ಮೂಲಕ ತಿಳಿಯಬಹುದು. ಪ್ರಸ್ತಾವಿಕವಾಗಿ ಮಾತನಾಡಿದ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮಾತನಾಡಿ ಯಕ್ಷಗಾನದ ಪಾರಂಪರಿಕೆ, ಸೊಗಡನ್ನು ಉಳಿಸುವ ಪ್ರಯತ್ನವೇ ಯಕ್ಷಗಾನ ಸ್ಪರ್ಧೆಯ ಉದ್ದೇಶವಾಗಿದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಹೇಶ್ ಮೋಟರ್ಸ್ ಸಂಸ್ಥೆಯ ಮಾಲಕ ಜಯರಾಮ ಶೇಖ, ಬಹರೈನ್ – ಸೌದಿ ಘಟಕದ ಅಧ್ಯಕ್ಷ ವಿ…
ಕೃಷಿ ಸಂಸ್ಕೃತಿಯ ತುಳುನಾಡಿನಲ್ಲಿ ಪಶು ಪಕ್ಷಿಗಳಿಗೆ ಆಚರಣೆ ಆರಾಧನೆಯಲ್ಲೂ ಮಹತ್ತರ ಸ್ಥಾನಮಾನ. ದೇವಸ್ಥಾನದ ಬಸವ ಎನ್ನುವ ಒಂದು ಗುರುತಿಸುವಿಕೆ ಕೂಡ ಇದೇ ರೀತಿಯದ್ದು. ಹೀಗೆ ಒಂದು ಹೋರಿ ಆಯ್ಕೆಯ ಪ್ರಕ್ರಿಯೆಗೆ ಹಲವು ಹಂತಗಳಿವೆ. ಹೋರಿಯ ಭುಜ, ಬಣ್ಣ, ನಿಲುವು, ತಳಿ ಇತ್ಯಾದಿಗಳಿಗೆ ವಿಶೇಷ ಮಹತ್ವ ಇದೆ. ಅವುಗಳನ್ನು ಸಾಕುವ ಜವಾಬ್ದಾರಿ ಕೂಡ ದೊಡ್ಡದು. ಹಿಂದೆ ಅವುಗಳನ್ನು ಸಾಕುವುದಕ್ಕಾಗಿ ಗದ್ದೆಗಳನ್ನು ನಿರ್ಧಿಷ್ಟ ಮನೆತನಕ್ಕೆ ಉಂಬಲಿಯಾಗಿ ನೀಡುತ್ತಿದ್ದರು. ಇತ್ತೀಚೆಗೆ ಆ ವಿಚಾರ ಬಹಳಷ್ಟು ಬದಲಾವಣೆಗಳನ್ನು ಕಂಡಿವೆ. ಕೇರಳ ದೇವಸ್ವಂ ಬೋರ್ಡಿನ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳಲ್ಲಿ ಬಸವನ ಆರೈಕೆ ಮಾಡುವ ವ್ಯಕ್ತಿಗೆ ಸರಕಾರ ಸಂಬಳವನ್ನು ನೀಡುತ್ತಿದೆ. ನಮ್ಮೂರಿನ ಕೆಲವು ಕಡೆ ದೈವಗಳಿಗೂ ಬಸವ ಇದೆ. ಇತ್ತೀಚೆಗೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನಕ್ಕೆ ಪುಟ್ಟ ಕರುವೊಂದನ್ನು ಬಸವನಾಗಿ ಆಯ್ಕೆ ಮಾಡಲಾಯಿತು. ಬಹಳಷ್ಟು ಕಡೆಯಲ್ಲಿ ಹಲವು ಭಕ್ತರು ತಮ್ಮ ಕರುಗಳನ್ನು ದೇವಸ್ಥಾನಕ್ಕೆ ಒಪ್ಪಿಸಲು ಆಸಕ್ತರಾಗಿದ್ದರೂ ಕೂಡಾ ಅಂತಿಮ ಆಯ್ಕೆಯಲ್ಲಿ ಭಾಗ್ಯ ಒಲಿದದ್ದು ‘ಶಂಭು’ ಎನ್ನುವ ಕರುವಿಗೆ ( ಸಂಜೀವ…
ಡಿಸೆಂಬರ್ 25 ರಂದು ಭಾನುವಾರ ಸಂಜೆ 3 ಗಂಟೆಗೆ ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಮೈದಾನದಲ್ಲಿ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ ಕಾರ್ಯಕ್ರಮ ನಡೆಯಲಿದ್ದು, ಸಹಾಯ ಹಸ್ತ ಯೋಜನೆಯಲ್ಲಿ ಸುಮಾರು 1,250 ಕುಟುಂಬಗಳಿಗೆ ಸುಮಾರು 2.50 ಕೋಟಿ ರೂಪಾಯಿ ಸಹಾಯ ಧನವನ್ನು ವಿತರಿಸಲಾಗುವುದು ಎಂದು ಎಂಆರ್ ಜಿ ಗ್ರೂಪ್ ನ ಚೇರ್ಮೆನ್ ಕೆ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. ಈ ಬಾರಿ ಸಹಾಯ ಹಸ್ತ ಯೋಜನೆಗೆ ಸಂಬಂಧಿಸಿ ಅರ್ಜಿಗಳನ್ನು ವಿತರಣೆ ಮಾಡಿ ಬಳಿಕ ಅವುಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಪರಿಶೀಲಿಸಿ, ಅವಶ್ಯವೆನಿಸಿದಲ್ಲಿ ಅರ್ಜಿದಾರರ ಮನೆಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ ಬಳಿಕ ಅವರನ್ನು ಆಯ್ಕೆ ಮಾಡಲಾಗಿದೆ. ತೀರಾ ಅವಶ್ಯಕತೆ ಇರುವವರನ್ನು ಗುರುತಿಸಿದ್ದೇವೆ ಎಂಬ ತೃಪ್ತಿ ನಮಗಿದೆ” ಎಂದು ಸಹಾಯ ಹಸ್ತ ಯೋಜನೆಯ ಕುರಿತಂತೆ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಪ್ರಕಾಶ್ ಶೆಟ್ಟಿ ವಿವರಿಸಿದರು. ಸಮಾಜ ಸೇವೆ, ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳನ್ನೂ ನೆರವಿಗೆ ಆಯ್ಕೆ ಮಾಡಲಾಗಿದೆ. ಜಾತಿ, ಧರ್ಮಗಳನ್ನು ಪರಿಗಣಿಸದೆ ಸಹಾಯವನ್ನು ವಿತರಿಸಲಾಗುತ್ತಿದೆ.…
ಬಂಟರ ಸಂಘ ಮುಂಬಯಿ ಪ್ರಾಯೋಜಿತ ಉನ್ನತ ಶಿಕ್ಷಣ ಸಂಸ್ಥೆಗಳಾದ ಅಣ್ಣಲೀಲಾ ಕಾಲೇಜು ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ಹಾಗೂ ಶೋಭಾ ಜಯರಾಮ್ ಶೆಟ್ಟಿ ಬಿಎಂಎಸ್ ಕಾಲೇಜು ಕುರ್ಲಾ ಇದಕ್ಕೆ ಶಿಕ್ಷಣ ಕ್ಷೇತ್ರದ ಪ್ರತಿಷ್ಠಿತ ನ್ಯಾಕ್ (NAAC) ಮಾನ್ಯತೆ ಯು ದೊರೆತಿದ್ದು ಇದರ ಅಂಗವಾಗಿ ಉನ್ನತ ಶಿಕ್ಷಣ ಸಮಿತಿಯ ಮಾಜಿ ಕಾರ್ಯಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿಯವರ ನೇತ್ರತ್ವದಲ್ಲಿ ಅಭಿನಂದನೆ ಹಾಗೂ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದದವರಿಗೆ ಸಂತೋಷಕೂಟವನ್ನು ನವಿ ಮುಂಬಯಿ ಪ್ರಸಿದ್ಧ ತಾರ ಹೋಟೆಲ್ ಕಂಟ್ರಿ ಇನ್ ಆಂಡ್ ಸೂಟ್ಸ್ ಬೈ ರೆಡಿಸನ್ ಇಲ್ಲಿ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಉದ್ದೇಶ ಒಂದು ಅತ್ತ್ಯುತ್ತಮ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಸಮಾಜಕ್ಕೆ ನೀಡಬೇಕು ಎಂಬುದಾಗಿದ್ದು ಹೊರತು ಹಣ ಮಾಡುವ ಉದ್ದೇಶವಿಲ್ಲ. ಕರ್ಮಭೂಮಿಯಾದ ಮುಂಬಯಿ ನಮಗೆ ತುಂಬಾ ಕೊಟ್ಟಿದೆ ನಾವು ಈ ನಾಡಿಗೆ ಏನನ್ನಾದರೂ ಕೊಡಬೇಕು…
ಸುರತ್ಕಲ್ ಬಂಟರ ಸಂಘದ ಕ್ರೀಡೊತ್ಸವ ಸುರತ್ಕಲ್ : ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಸಂಸ್ಥೆ ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಸುರತ್ಕಲ್ ಗೋವಿಂದ ದಾಸ ಕಾಲೇಜು ಮೈದಾನದಲ್ಲಿ ಬಂಟರ ಕ್ರೀಡೋತ್ಸವ ನಡೆಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಪಥಸಂಚಲನದಲ್ಲಿ ಭಾಗವಹಿಸಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಮಾಜ ಸೇವೆಯ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ರೀಡಾಳುಗಳಿಗೆ ಒಕ್ಕೂಟ ನಿರಂತರ ಸಹಾಯ ಮಾಡುತ್ತಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ವಹಿಸಿದ್ದರು. ಸುರತ್ಕಲ್ ಬಂಟರ ಸಂಘ ನಿರಂತರ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದು, ಇದಕ್ಕೆ ಜಾಗತಿಕ ಬಂಟರ ಸಂಘಗಳ…
ವಿಶ್ವದಲ್ಲೇ ದೊಡ್ಡ ಅನಿವಾಸಿ ಭಾರತೀಯ ಸಾಂಸ್ಕೃತಿಕ ಸಂಘಟನೆ ದುಬಾಯಿಯಲ್ಲಿ ಇರುವ ಇಂಡಿಯನ್ ಸೋಶಿಯಲ್ ಎಂಡ್ ಕಲ್ಚರಲ್ ಸೆಂಟರ್ ಇದರ ಉಪಾಧ್ಯಕ್ಷ ಪದದಲ್ಲಿ ಗಮನೀಯ ಸೇವೆ ಸಲ್ಲಿಸಿದ ತುಳುನಾಡಿನ ಪುತ್ತೂರು ಮೂಲದ ಪ್ರತಿಷ್ಠಿತ ಮಿತ್ರಂಪಾಡಿ ಮನೆತನದ ಶ್ರೀ ಜಯರಾಮ ರೈ ತನ್ನ ಸಂಘಟನಾ ಸಾಮರ್ಥ್ಯ ಜನಸಂಪರ್ಕ ಕಲಾಪ್ರೇಮ ಹಾಗೂ ನಿರ್ವ್ಯಾಜ್ಯ ಪರೋಪಕಾರ ಸ್ವಭಾವಕ್ಕೆ ಹೆಸರಾದವರು. ತುಳುನಾಡಿನ ಪುತ್ತೂರು ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧಿ ಪಡೆದ ಊರಾಗಿದ್ದು ಇಲ್ಲಿ ಜನ್ಮ ತಳೆದ ಅದೆಷ್ಟೋ ಮಂದಿ ತಮ್ಮ ಸಾಂಸ್ಕೃತಿಕ ಸಾಹಿತ್ಯದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ನಾಡಿಗೆ ಮಾದರಿಯಾಗಿದ್ದಾರೆ. ಪುತ್ತೂರಿನ ಕೆದಂಬಾಡಿ ಗ್ರಾಮ ಇಲ್ಲಿನ ಎಲ್ಲಾ ಹಿರಿಯರಿಂದ ಕಿರಿಯ ನಾಗರಿಕರು ಅತ್ಯಂತ ಪೂಜ್ಯ ಗೌರವ ಭಾವದಿಂದ ಕಾಣುವ ಹೆಸರಾಂತ ಕೃಷಿ ಪ್ರಧಾನ ಕುಟುಂಬದ ಪ್ರಗತಿ ಪರ ಕೃಷಿಕರಾಗಿದ್ದ ಕೆದಂಬಾಡಿ ಚೆನ್ನಪ್ಪ ರೈ ಹಾಗೂ ಸುಶೀಲೆ ಅನ್ನಪೂರ್ಣೆ ಎಂದೇ ಕರೆಸಿಕೊಳ್ಳುತ್ತಿದ್ದ ದಿವಂಗತ ಡಿಂಬ್ರಿಗುತ್ತು ಶ್ರೀಮತಿ ಸರಸ್ವತಿ ಸಿ ರೈ ದಂಪತಿಯರಿಗೆ ಪುತ್ರರಾಗಿ ಜನಿಸಿದ ರೈ…
ನ್ಯೂ ಪನ್ವೆಲ್ ನ ಶ್ರೀ ನೃತ್ಯಕಲಾ ಮಂದಿರದ ವತಿಯಿಂದ ನವೆಂಬರ್ 19 ರಂದು ಅಪರಾಹ್ನ 3 ಗಂಟೆಗೆ ಆದ್ಯ ಕ್ರಾಂತಿವೀರ ವಾಸುದೇವ ಬಲವಂತ ಪಡ್ಕೆ ನಾಟ್ಯಗೃಹ ಓಲ್ಡ್ ಪನ್ವೆಲ್ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನ್ಯೂ ಪನ್ವೆಲ್ ನಗರ ಸೇವಕ, ಜನಪ್ರಿಯ ಸಮಾಜ ಸೇವಕ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿಯವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಪನ್ವೆಲ್ ನ ಮಾಜಿ ಸಂಸದ ರಾಮ್ ಸೇಟ್ ಠಾಕೂರ್, ಮಾಜಿ ಕಾರ್ಪೊರೇಟರ್ ಪರೇಶ್ ರಾಮ್ ಸೇಟ್ ಠಾಕೂರ್, ಪನ್ವೆಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ (ಪದ್ಮ) ಆಗಮಿಸಲಿದ್ದು ಶ್ರೀ ನೃತ್ಯಕಲಾ ಮಂದಿರದ ಇತರ ಪ್ರತಿಭೆಗಳು ಭಾಗವಹಿಸಲಿದ್ದಾರೆ. ಶ್ವೇತಾ ಮತ್ತು ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿ ನ್ಯೂ ಪನ್ವೆಲ್ ನ ಡಿ. ಎ. ವಿ. ಪಬ್ಲಿಕ್ ಸ್ಕೂಲ್ ನಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಐದನೇ ವರ್ಷದಲ್ಲಿರುವಾಗ ಗುರು ಪದ್ಮಶ್ರೀ ಲಕ್ಷ್ಮಿನಾರಾಯಣನ್ ಇವರಿಂದ ಭರತನಾಟ್ಯ…
ಸಮಾಜಕ್ಕೆ ಅರ್ಪಣೆಯಾಗುವ ಸೇವಾ ಕಾರ್ಯ ಪ್ರಶಂಸನೀಯ-ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಪುಣೆ :ಪುಣೆ ಬಂಟರ ಸಂಘದ ಎಡಬಲ ಶಕ್ತಿಗಳಾಗಿ ಕಾರ್ಯ ಗೈಯುತಿರುವ ಉತ್ತರ ವಲಯ ಮತ್ತು ದಕ್ಷಿಣ ವಲಯ ಸಮಿತಿಗಳು ಸಂದರ್ಭಕ್ಕನುಗುಣವಾಗಿ ಉತ್ತಮ ಸಮಾಜ ಸೇವಾ ಕಾರ್ಯ ಮಾಡುತಿವೆ. ಇಂದು ಉತ್ತರ ವಲಯದ ಸಮಿತಿಯ ವತಿಯಿಂದ ರಕ್ತ ದಾನ ಮತ್ತು ಉಚಿತ ಅರೋಗ್ಯ ತಪಾಸಣೆಯ ಸೇವಾ ಕಾರ್ಯ ನಡೆಯುತಿದೆ. ಅರೋಗ್ಯ ತಪಾಸಣೆ ಜೊತೆಯಲ್ಲಿ ಮಣಿಪಾಲ್ ಆಸ್ಪತ್ರೆಯ ವೈದ್ಯರುಗಳು ಹೃದಯ ಸಂಬಂದಿತ ಆರೋಗ್ಯದ ಬಗ್ಗೆ ತಿಳುವಳಿಕೆಯ ವಿಚಾರ ಗೋಷ್ಠಿ ಕೂಡ ನಡೆಸಿಕೊಟ್ಟಿದ್ದಾರೆ. ಈಗಿನ ಕಾಲ ಘಟ್ಟದಲ್ಲಿ ಸಮಾಜ ಮುಖಿಯಾದ ಇಂತಹ ಸೇವಾ ಕಾರ್ಯಗಳು ಎಲ್ಲಾ ರೀತಿಯಲ್ಲೂ ಅಭಿನಂದನೀಯ ಮತ್ತು ಪ್ರಶಂಶೆಗೆ ಪಾತ್ರವಾಗಿರುವಂತಹದು ಉತ್ತರ ವಲಯದ ಈ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ನುಡಿದರು. ಪುಣೆ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿ ವತಿಯಿಂದ ಸಂಘದ ಸಮಾಜ…