ಬಂಟರು ಸ್ವಾಭಿಮಾನಿಗಳು. ನಮ್ಮಲ್ಲಿ ಕೆಲವರು ಆರ್ಥಿಕವಾಗಿ ಮಾತ್ರ ಬಡವರು ಹೃದಯ ವೈಶಾಲ್ಯರು. ನಾವೆಲ್ಲಾ ಒಟ್ಟಾಗಿ ಒಂದೇ ಮನಸ್ಸಿನಿಂದ ಇದ್ದರೆ ಇಡೀ ಸಮಾಜವೇ ಸದೃಢವಾಗುವುದು ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು. ತಾನು ಅಧ್ಯಕ್ಷನಾಗಿ ಆಯ್ಕೆಗೊಂಡ ಕೂಡಲೇ ತಾಲೂಕಿನ ಎಲ್ಲಾ ಗ್ರಾಮದಲ್ಲಿ ಇರುವ ಬಂಟರ ಮಾಹಿತಿ ಸಂಗ್ರಹ ಕಾರ್ಯ ನಡೆಸಲು ತೀರ್ಮಾನಿಸಿದೆ. ಇದು ನನ್ನ ಬಹು ಸಮಯದ ಕನಸು. ಅದಕ್ಕೆ ಎಲ್ಲಾ ಬಂಟರು ಪೂರ್ಣ ಸಹಕಾರ ನೀಡಬೇಕು ಎಂದರು. ಆರ್ಥಿಕವಾಗಿ ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಲು ಇದು ಸಹಕಾರಿಯಾಗಲಿದೆ. ತಾಲೂಕಿನಾದ್ಯಂತ ಗ್ರಾಮ ಸಮಿತಿ ರಚಿಸಲು ತೀರ್ಮಾನಿಸಿದ್ದು ಅದರಂತೆ ಬಡಗನ್ನೂರು ಗ್ರಾಮದ ಬಂಟ ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿದ ಇವರು ಗ್ರಾಮ ಮಟ್ಟದಲ್ಲಿ ಸಮಿತಿಗಳು ಸಕ್ರೀಯಗೊಂಡರೆ ಮಾತ್ರ ಸಂಘಟನೆಯು ಬಲಿಷ್ಠವಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಟರ ಬಡಗನ್ನೂರು ಗ್ರಾಮ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಸುಧಾಕರ್ ಶೆಟ್ಟಿ
ಮಂಗಳಾದೇವಿ, ಕಾರ್ಯದರ್ಶಿಯಾಗಿ ಪ್ರಕಾಶ್ ರೈ ಕೊಯಿಲ, ಕೋಶಾಧಿಕಾರಿಯಾಗಿ ಕಿರಣ್ ಕುಮಾರ್ ರೈ, ಉಪಾಧ್ಯಕ್ಷರುಗಳಾಗಿ ಸಂತೋಷ್ ಶೆಟ್ಟಿ, ದೇವಿಪ್ರಭ, ಆಶಾ ರೈ ಕೊಯಿಲ, ಪ್ರಭಾಕರ ರೈ, ನವೀನ್ ಪಕ್ಕಳ, ಹರಿಪ್ರಸಾದ್ ರೈ, ಸಲಹೆಗಾರರಾಗಿ ಸುಬ್ಬಯ್ಯ ರೈ, ಭಾಸ್ಕರ ರೈ, ಪ್ರಸನ್ನ ರೈ, ಜಯರಾಜ ಶೆಟ್ಟಿ ಅಣಿಲೆ, ಅಮರನಾಥ ರೈ ಸರ್ವಾನುಮತದಿಂದ ಆಯ್ಕೆಯಾದರು. ಮಹಿಳಾ ವಿಭಾಗದ ಅಧ್ಯಕ್ಷರಾದ ಗೀತಾ ಮೋಹನ್ ರೈ ನರಿಮೊಗರು, ಯುವ ವಿಭಾಗದ ಅಧ್ಯಕ್ಷ ಡಾ| ಹರ್ಷಕುಮಾರ್ ರೈ ಮಾಡಾವು, ಬಂಟರ ಸಂಘದ ಮಾಜಿ ಕಾರ್ಯದರ್ಶಿ ಮೋಹನ್ ರೈ ನರಿಮೊಗರು, ಅನಿತಾ ಹೇಮನಾಥ್ ಶೆಟ್ಟಿ, ಸುಧಾಕರ ಶೆಟ್ಟಿ ಮಂಗಳಾದೇವಿ ದಂಪತಿ, ಮಾತೃ ಸಂಘದ ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು ಉಪಸ್ಥಿತರಿದ್ದರು. ಬಂಟರ ಸಂಘದ ನಿರ್ದೇಶಕ ಸತೀಶ್ ರೈ ಕಟ್ಟಾವು ಸ್ವಾಗತಿಸಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಶಾರ್ವಿ ರೈ ಕಟ್ಟಾವು ಪ್ರಾರ್ಥನೆಗೈದರು. ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.