ಮೂಡುಬಿದಿರೆ:ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಂಗಳೂರಿನ ದಿ ಇಂಡಸ್ ಅನ್ಟ್ರಾಪ್ರೀನ್ಯೂವರ್ಸ್ ಘಟಕ(ಟಿಐಇ) ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಿವೆ. ಈ ಒಡಂಬಡಿಕೆಯ ಭಾಗವಾಗಿ ಇಂಡಸ್ ಅನ್ಟ್ರಾಪ್ರೀನ್ಯೂವರ್ಸ್ ಸಂಸ್ಥೆಯ ‘ಟಿಐಇ ಎಲೈಟ್’’ ಎಂಬ ವಿನೂತನ ಕಾರ್ಯಕ್ರಮವು ಆಳ್ವಾಸ್ನ ಸಂಸ್ಥೆಗಳಲ್ಲಿ 2024-25ನೇ ಶೈಕ್ಷಣಿಕ ಅವಧಿಯಲ್ಲಿ ಅನುಷ್ಠಾನಗೊಳ್ಳಲಿದೆ. ಟಿಐಇ ಜೊತೆಗಿನ ಒಡಂಬಡಿಕೆಯ ಮೂಲಕ ಆಳ್ವಾಸ್ ಸಂಸ್ಥೆಯು ಕರಾವಳಿ ಭಾಗದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶೈಕ್ಷಣಿಕ ವಲಯ ಹಾಗೂ ಉದ್ಯೋಗ ಮಾರುಕಟ್ಟೆಯ ನಡುವಿನ ಅಂತರವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳಿಗೆ ಔದ್ಯೋಗಿಕವಲಯದ ಸ್ಪಷ್ಟ ಚಿತ್ರಣವನ್ನು ವಿದ್ಯಾಭ್ಯಾಸದ ಅವಧಿಯಲ್ಲಿ ನೀಡಲು ಈ ಒಡಂಬಡಿಕೆ ಸಹಕಾರಿಯಾಗಲಿದೆ.
ಮಂಗಳೂರಿನ ಟಿಐಇ ಸಂಸ್ಥೆಯು 1960ರ ಕರ್ನಾಟಕ ಸೊಸೈಟಿ ನಿಬಂಧನೆಗಳ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಲಾಭರಯಿತ ಸಂಸ್ಥೆಯಾಗಿದ್ದು, ಕರಾವಳಿ ಭಾಗದಲ್ಲಿ ಹೆಚ್ಚಿನ ಉದ್ದಿಮೆಗಳು ಸ್ಥಾಪನೆಗೆ ಪ್ರೋತ್ಸಾಹ ನೀಡುವುದರ ಮೂಲಕ ಈ ಭಾಗವನ್ನು ಭಾರತದ ಸಿಲಿಕಾನ್ ಬೀಚ್ ಮಾಡುವ ಗುರಿಯನ್ನು ಹೊಂದಿದೆ. ಮಂಗಳೂರು ಹಾಗೂ ಉಡುಪಿ ಭಾಗದ 100ಕ್ಕೂ ಅಧಿಕ ಕಂಪೆನಿಗಳು ಈ ಘಟಕದ ಭಾಗವಾಗಿದ್ದು, ನ್ಯೂವಿಯಸ್ ಸೊಲೂಷನ್ಸ್, ನೋವಿಗೋ ಸೊಲೂಷನ್ಸ್, 99ಗೇಮ್ಸ್ ಹಾಗೂ ಗ್ಲೋ ಟಚ್ ಟೆಕ್ನಾಲಜಿಸ್ ಹಾಗೂ ಇನ್ನಿತರೆ ಕಂಪೆನಿಗಳು ಮೆಂಟರಿಂಗ್, ಶಿಕ್ಷಣ, ಜಾಗತಿಕ ಜಾಲ ಒದಗಿಸುವಿಕೆ, ಹೂಡಿಕೆ ಹಾಗೂ ಉದ್ಯಮಶೀಲತೆಗೆ ಒತ್ತನ್ನು ನೀಡುವ ಕಾರ್ಯಗಳಲ್ಲಿ ತೊಡಗಿವೆ.
ಈ ಶೈಕ್ಷಣಿಕ ಒಡಂಡಿಕೆಯ ಪ್ರಯೋಜನಗಳು
1. ಸ್ಟಾರ್ಟ್ಅಪ್ಗಳಲ್ಲಿ ಇಂಟರ್ನ್ಶಿಪ್ ಅವಕಾಶಗಳು:
ಈ ಒಡಂಬಡಿಕೆಯು ಸಂಸ್ಥೆಯ ವಿದ್ಯಾರ್ಥಿಗಳಿಗೆ ಒಂದು ಹಾಗೂ ಮೂರು ತಿಂಗಳುಗಳ ಕಾಲ ಇಂಟರ್ನ್ಶಿಪ್ ಅವಕಾಶವನ್ನು ಕಲ್ಪಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಪಡೆಯಲು ಸಹಕಾರಿಯಾಗಲಿವೆ.
2. ಬೋರ್ಡ್ಆಫ್ ಸ್ಟಡೀಸ್ನಲ್ಲಿ ಖಿiಇ ಭಾಗವಹಿಸುವಿಕೆ:
ಖಿiಇ ಸಂಸ್ಥೆಯು ತನ್ನ ಸಂಪನ್ಮೂಲ ವ್ಯಕ್ತಿಗಳನ್ನು ಆಳ್ವಾಸ್ ಸಂಸ್ಥೆಯ ವಿವಿಧ ಕಾಲೇಜುಗಳ ಅಧ್ಯಯನ ಮಂಡಳಿಯಲ್ಲಿ ನೇಮಿಸಲಿದ್ದು, ಅವರು ಉದ್ಯಮ, ಉದ್ಯಮಶೀಲತೆ ಹಾಗೂ ಔದ್ಯೋಗಿಕ ಕ್ಷೇತ್ರಕ್ಕೆ ಸಂಬಂಧಿತ ವಿಷಯಗಳು ಕುರಿತು ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ.
3. ಸಂದರ್ಶಕ ಪ್ರಾಧ್ಯಾಪಕರ ನೇಮಕ
ಖಿiಇ ಸಂಸ್ಥೆಯ ಸದಸ್ಯರು ಸಂದರ್ಶಕ ಅಧ್ಯಾಪಕರಾಗಿ ಕಾಲೇಜುಗಳಿಗೆ ಆಗಮಿಸಿ, ವಿದ್ಯಾರ್ಥಿಗಳಿಗೆ ಪಾಠ, ಭೋದನೆಯನ್ನು ನೆರವೇರಿಸಲಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷಕ್ಕೆ 20 ಗಂಟೆಗಳ ಕಾಲ ವಿಶ್ವವಿದ್ಯಾನಿಲಯದ ಅವಶ್ಯಕತೆಗಳನ್ನು ಆಧರಿಸಿ ವಿವಿಧ ವಿಭಾಗಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರ ನೇಮಕವಾಗಲಿದೆ.
4. ಸದಸ್ಯರ ಕಂಪನಿಗಳಲ್ಲಿ ಕೈಗಾರಿಕಾ ಭೇಟಿ
ಖಿiಇ ಸದಸ್ಯರ ಕಂಪೆನಿಗಳಿಗೆ ಆಳ್ವಾಸ್ ವಿದ್ಯಾರ್ಥಿಗಳು ಭೇಟಿ ನೀಡಲು ಅವಕಾಶ ದೊರೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸೂಕ್ತ ಮಾರ್ಗದರ್ಶಕರ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
5. ಕಲಿಕೆಯ ಅವಧಿಗಳು:
ಈ ಒಡಂಬಡಿಕೆಯ ಮೂಲಕ ಟಿಐಇ ಸಂಸ್ಥೆಯು ಆಳ್ವಾಸ್ನಲ್ಲಿ ವಾರ್ಷಿಕ ಎರಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದು, ಇದರ ಭಾಗವಾಗಿ ಟೆಕ್ನಿಕಲ್ ಸೆಷನ್ಸ್, ಚಿಂತನ ಮಂಥನ, ಚರ್ಚೆ ಹಾಗೂ ಕಾರ್ಯಗಾರಗಳು ನೆರವೇರಲಿವೆ. ವ್ಯಾಪಾರ ನಿರ್ವಹಣೆಯ ಮೂಲಭೂತ ಅಗತ್ಯತೆಗಳು, ಹಣಕಾಸಿನ ನಿರ್ವಹಣೆ, ಇವೇ ಮುಂತಾದ ವಿಷಯಗಳ ಮೇಲೆ ಚರ್ಚೆಗಳು ನಡೆಯಲಿವೆ. ಇವುಗಳ ಜೊತೆಗೆ ಯಶಸ್ವಿ ಉದ್ಯಮಿಗಳ ಜೊತೆ ವಿದ್ಯಾರ್ಥಿಗಳು “ನನ್ನ ಕಥೆ ನಿಮ್ಮ ಜೊತೆ” ಎಂಬ ಉದ್ಯಮಿಗಳ ಯಶೋಗಾಥೆಯ ಸರಣಿ ಕಾರ್ಯಕ್ರಮಗಳು ನಡೆಯಲಿವೆ.
6. ವಾಣಿಜ್ಯೋದ್ಯಮ ಸಂಸ್ಥೆಗಳನ್ನು ನಿರ್ಮಿಸುವ ಕುರಿತು ತರಬೇತಿ
ಖಿiಇ ಸಂಸ್ಥೆಯು ವರ್ಷದಲ್ಲಿ ಒಮ್ಮೆ ಕಾಲೇಜಿನ ಉಪನ್ಯಾಸಕರುಗಳಿಗೆ ಅವರ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸಲು ಸಹಕಾರಿಯಾಗುವ ತರಬೇತಿ ಹಾಗೂ ಕಾರ್ಯಗಾರವನ್ನು ಹಮ್ಮಿಕೊಳ್ಳಲಿದೆ.
7. ಕಾರ್ಪರೇಟ್ ಶಿಷ್ಟಾಚಾರದ ಕುರಿತು ತರಬೇತಿ
ಕಾರ್ಪರೇಟ್ ಶಿಷ್ಟಾಚಾರ ಮತ್ತು ಅಲ್ಲಿನ ಅಗತ್ಯೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತದೆ.
8. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಗೆ ಒತ್ತು
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಆಯ್ದ ವಿದ್ಯಾರ್ಥಿಗಳ ಸ್ಟಾರ್ಟಅಪ್ಗಳಿಗೆ ಸೂಕ್ತ ಮಾರ್ಗದರ್ಶನದ ಜೊತೆಗೆ ಸಂಪನ್ಮೂಲ ಒದಗಿಸುವಿಕೆ ಹಾಗೂ ಉದ್ಯಮದ ವೃದ್ಧಿಗೆ ಉತ್ತಮ ನೆಟ್ವರ್ಕಗಳನ್ನು ಒದಗಿಸಲಾಗುತ್ತದೆ.
9. ಉದ್ಯಮಶೀಲರ ಜಾಗತಿಕ ಜಾಲಕ್ಕೆ ಪ್ರವೇಶ:
ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಉದ್ಯಮಿಗಳು, ಹೂಡಿಕೆದಾರರು ಮತ್ತು ಯಶಸ್ವಿ ನಾಯಕರ ಪರಿಚಯವಾಗುವುದರ ಜೊತೆಗೆ ಜಾಗತಿಕ ಮಟ್ಟದ ನೆಟ್ವರ್ಕ್ ಸಾಧಿಸಲು ಅನುಕೂಲವಾಗುತ್ತದೆ.