Author: admin
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಕುಶಾಲನಗರ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಉದ್ಯಮಿ, ಪೂರ್ಣಶ್ರೀ ಫರ್ನಿಚರ್ಸ್ ಮಾಲೀಕ ರವೀಂದ್ರ ವಿ. ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಅಮೃತರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆ ನಡೆಯಿತು. ಕಾರ್ಯದರ್ಶಿಯಾಗಿ ಕೆ. ಎಸ್. ನಾಗೇಶ್ ಆಯ್ಕೆಯಾಗಿದ್ದಾರೆ. ರವೀಂದ್ರ ರೈ ಅವರು ಈ ಮೊದಲು ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ವತಿಯಿಂದ ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಗೌರವಾಭಿನಂದನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಸ್ಥಾಪಕಾಧ್ಯಕ್ಷರಾದ ಕೆ. ಸದಾನಂದ ಶೆಟ್ಟಿ, ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೋಹನ್ ಆಳ್ವ, ಡಾ. ಭಾಸ್ಕರ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಶೆಟ್ಟಿ, ಕೆ.ಎಂ.ಎಫ್ ಅಧ್ಯಕ್ಷರಾದ ಸುಚರಿತ ಶೆಟ್ಟಿ, ವೇಣುಗೋಪಾಲ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮಿ ಶೆಟ್ಟಿ, ನಿತೀಶ್ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಕಾರ್ಯಾಧ್ಯಕ್ಷರಾದ ದೇವಿಚರಣ್ ಶೆಟ್ಟಿ, ರಾಜಗೋಪಾಲ್ ರೈ ಹಾಗೂ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣಗೊಂಡು, ಬೇಸಗೆ ರಜೆಯು ಮುಗಿಯುತ್ತಿದೆ. ಮೇ 29ರಿಂದ 2023-24ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿದ್ದು, ಇದಕ್ಕೆ ಬೇಕಾದ ಸಿದ್ಧತೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಯಿಂದ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಗತಿಗಳು ಆರಂಭದ ದಿನದಿಂದಲೇ ಪಠ್ಯಪುಸಕ್ತ ಹಾಗೂ ಸಮವಸ್ತ್ರ ವಿತರಣೆಗೂ ಬೇಕಾದ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕ ಹಾಗೂ ಸಮವಸ್ತ್ರದ ಬಟ್ಟೆಗಳನ್ನು ಬಿಇಒಗಳ ಮೂಲಕ ತಲುಪಿಸುವ ಕಾರ್ಯವೂ ಆಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ದಿನ ಸಂಭ್ರಮ ಮೇ 29ರಂದು ಶೈಕ್ಷಣಿಕ ತರಗತಿ ಆರಂಭವಾಗುವುದರಿಂದ ಅಂದು ಪಠ್ಯದ ಚಟುವಟಿಕೆಗಿಂತ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉಡುಪಿ ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಲ್ಲೂ ಅಂದು ಮಕ್ಕಳಿಗೆ ಬಿಸಿಯೂಟದ ಜತೆಗೆ ಸಿಹಿ ಹಂಚಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಾಯಸ ಅಥವಾ ಸ್ಥಳೀಯವಾಗಿ ಲಭ್ಯವಾಗುವ ಯಾವುದಾದರು ಒಂದು ಸ್ವೀಟ್ ಮಕ್ಕಳಿಗೆ ನೀಡಲಾಗುತ್ತದೆ. ಇದರ ಜತೆಗೆ ಮಕ್ಕಳನ್ನು ವಿನೂತನ ರೀತಿಯಲ್ಲಿ ಶಾಲೆಗೆ ಸ್ವಾಗತಿಸಲು, ಶಾಲೆಯ ಪ್ರವೇಶದ್ವಾರಕ್ಕೆ ತಳಿರು…
ಕೊಟ್ಟಾರ ಚೌಕಿಯ ಮಾಲೆಮಾರ್ ಬಳಿ ಭಾರ್ಗವಿ ಬಿಲ್ಡರ್ಸ್ನಿಂದ ನಿರ್ಮಾಣಗೊಂಡಿರುವ ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಒಳಗೊಂಡ “ಕೈಲಾಶ್’ ಪ್ರಾಜೆಕ್ಟ್ನಲ್ಲಿ ಗುಣನಾಥನ ಮೋಕ್ಅಪ್ ಫ್ಲ್ಯಾಟ್ನ ಉದ್ಘಾಟನೆ ನೆರವೇರಿತು. ಮುಂಬೈ ಮತ್ತು ಮಂಗಳೂರಿನ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಗಳ ಚೇರ್ವೆುನ್ ಮತ್ತು ಆಡಳಿತ ನಿರ್ದೇಶಕ ರವಿ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿ, ಗ್ರಾಹಕರ ಕನಸಿಗೆ ಅನುಗುಣವಾಗಿ ಗುಣಮಟ್ಟದ ಅಪಾರ್ಟ್ಮೆಂಟ್ಗಳ ನಿರ್ಮಾಣದಲ್ಲಿ ಹೆಸರು ಮಾಡಿರುವ ಭಾರ್ಗವಿ ಬಿಲ್ಡರ್ಸ್ನಿಂದ ನಿರ್ಮಾಣವಾಗಿರುವ ಕೈಲಾಶ್ ಪ್ರಾಜೆಕ್ಟ್ನಲ್ಲಿ ಗುಣನಾಥನ ಫ್ಲ್ಯಾಟ್ ಅತ್ಯಂತ ಆಕರ್ಷಕವಾಗಿ ಮೂಡಿಬಂದಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರು ಮಾತನಾಡಿ, ಐಷಾರಾಮಿ ಹಾಗೂ ಗುಣಮಟ್ಟದ ಫ್ಲಾಟ್ಗಳನ್ನು ನಿರ್ಮಿಸುವಲ್ಲಿ ಭಾರ್ಗವಿ ಬಿಲ್ಡರ್ಸ್ ಮುಂಚೂಣಿಯಲ್ಲಿದ್ದು, ಪ್ರತ್ಯೇಕ ಹಾಗೂ ಮನ ಸೆಳೆಯುವ ದೇವರ ಕೋಣೆ, ಡೈನಿಂಗ್ ಹಾಲ್ನೊಂದಿಗೆ ನಿರ್ಮಾಣವಾಗಿರುವ ಫ್ಲ್ಯಾಟ್ ವಿಶಾಲವಾಗಿದೆ ಎಂದರು. ಭಾರ್ಗವಿ ಬಿಲ್ಡರ್ಸ್ನ ಮಾಲಕರಾದ ಭಾಸ್ಕರ್ ಗಡಿಯಾರ್, ಭಾರ್ಗವಿ ಗಡಿಯಾರ್, ಪ್ರಾಜೆಕ್ಟ್ ಮುಖ್ಯಸ್ಥರಾದ ಮಂಗಳ್ದೀಪ್ ಮತ್ತು ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು. ನಟಿ ಸೌಜನ್ಯ ಹೆಗ್ಡೆ ಅವರು…
ಗೆಲ್ಲುವವರನ್ನು ಸೋಲಿಸುವ, ಸೋಲುವವರನ್ನು ಗೆಲ್ಲಿಸುವ ಶಕ್ತಿ ಬಂಟ ಸಮುದಾಯಕ್ಕೆ ಇದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಮತ್ತು ಉಡುಪಿ ಬಂಟರ ಸಂಘದ ಗೌರವಾಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದ್ದಾರೆ. ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಜಾಗತಿಕ ಬಂಟರ ಸಂಘದ ಮೂಲಕ ಬಂಟರ ಬಹು ಅಗತ್ಯದ ಎರಡು ಬೇಡಿಕೆಗಳಾದ ಮೀಸಲಾತಿ ಅಂದರೆ ಹಿಂದುಳಿದ ವರ್ಗದ 3ಬಿಯಲ್ಲಿದ್ದ ಮೀಸಲಾತಿಯನ್ನು 2ಎ.ವರ್ಗಕ್ಕೆ ಸೇರಿಸಬೇಕು. ಆದೇ ರೀತಿಯಲ್ಲಿ ಬಂಟ ಸಮುದಾಯದವರಿಗೆ ನಿಗಮ ರೂಪಿಸಿಕೊಡಬೇಕು ಅನ್ನುವ ನಮ್ಮ ಈ ಎರಡು ಬೇಡಿಕೆಗಳನ್ನು ಕರ್ನಾಟಕ ಸರ್ಕಾರಕ್ಕೆ ಬಹು ವರುಷಗಳ ಹಿಂದೆಯೇ ಮನವಿ ಸಲ್ಲಿಸಿದ್ದೇವೆ. ಆದರೆ ಸರ್ಕಾರ ಈ ಎರಡು ಬಹು ಮುಖ್ಯ ಬೇಡಿಕೆಗಳ ಬಗ್ಗೆ ಗಂಭೀರ ಮೌನ ವಹಿಸಿರುವುದು ಬಂಟರ ಬಡ ವರ್ಗದಿಂದ ಹಿಡಿದು ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಮೀಣ ಪ್ರದೇಶದಿಂದ ಹಿಡಿದು ದೇಶ ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವ ಬಂಟರಿಗೆ ಅತೀವ ಬೇಸರ ತಂದಿದೆ ಅನ್ನುವುದನ್ನು ನಮ್ಮ ರಾಜ್ಯದ ಬಿಜೆಪಿ ಘನ ಸರ್ಕಾರಕ್ಕೆ ನಮ್ಮೆಲ್ಲ…
ಬೆಂಗಳೂರಿನ ಕುಂದಲಹಳ್ಳಿ ಗೇಟ್ ನ ಬೇಕರಿಯ ಗಲಭೆ ಹಾಗೂ ಇಲೆಕ್ಟ್ರಾನಿಕ್ ಸಿಟಿಯ ವಿಲೇಜ್ ರೆಸ್ಟೊರೆಂಟ್ ಹತ್ತಿರ ಪುಡಿ ರೌಡಿಗಳು ಗಲಾಟೆ ಮಾಡಿ ದಾಂದಲೆ ನಡೆಸಿದ್ದರು. ಈ ಗಲಬೆಯನ್ನು ಉಲ್ಲೇಖಿಸಿ ಮಾನ್ಯ ಮುಖ್ಯಮಂತ್ರಿಯವರನ್ನು ಅವರ ಆರ್ ಟಿ ನಗರದ ನಿವಾಸದಲ್ಲಿ ಭೇಟಿ ಮಾಡಿ ಮಿತಿ ಮೀರಿದ ಪುಂಡರ ಹಾವಳಿಯನ್ನು ಹತ್ತಿಕ್ಕುವಲ್ಲಿ ಪೋಲಿಸ್ ಇಲಾಖೆಯಿಂದ ಕಠಿಣ ಕ್ರಮದ ಜಾರಿಗೆ ಒತ್ತಾಯಿಸಿ ಬೆಂಗಳೂರು ಬಂಟರ ಹೊಟೇಲು ಮಾಲಿಕರ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಧುಕರ ಎಂ ಶೆಟ್ಟಿ, ಗೌರವ ಕಾರ್ಯದರ್ಶಿ ಸಂತೋಷ ಕುಮಾರ ಶೆಟ್ಟಿ ಹಾಗೂ ಉಪಾದ್ಯಕ್ಷರಾದ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು.
ಪಿಂಪ್ರಿ – ಚಿಂಚ್ವಾಡ್ ಬಂಟರ ಸಂಘ ಪುಣೆಯಲ್ಲಿ ಮೊದಲ ಬಾರಿಗೆ ಕುಣಿತ ಭಜನೆಯನ್ನು ಆಯೋಜಿಸಿ ಒಂದು ಉತ್ತಮ ದೇವತಾ ಕಾರ್ಯಕ್ಕೆ ನಾಂದಿ ಹಾಡಿದೆ . ಭಜನೆ ಎಂದರೆ ಭಗವಂತನನ್ನು ತೃಪ್ತಿ ಪಡಿಸುವುದು .ನಾವು ದೈನಂದಿನ ಜೀವನದಲ್ಲಿ ಭಗವಂತನನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡಿದ್ದರೆ ನಮ್ಮ ಬದುಕು ಪಾವನವಾಗುತ್ತದೆ . ನಮಗೆ ಬದುಕಿನಲ್ಲಿ ಯೋಗ ಹಾಗೂ ಯೋಗ್ಯತೆಯನ್ನು ಕರುಣಿಸುವವನೂ ದೇವರೇ ಆಗಿದ್ದಾರೆ . ದೇವರ ಆಶೀರ್ವಾ ದವೊಂದಿದ್ದರೆ ಆಯುರಾರೋಗ್ಯ ಸುಖ ಸಮೃದ್ಧಿ ಸಾಧ್ಯವಾಗುತ್ತದೆ . ಕನಕದಾಸರು ಕೃಷ್ಣನನ್ನು ಭಕ್ತಿಯಿಂದ ಭಜಿಸಿ ಕೃಷ್ಣ ದೇವರನ್ನು ಪ್ರತ್ಯಕ್ಷಗೊಳಿಸಿ ಸಾಕ್ಷಾತ್ಕಾರಗೊಳಿಸಿಕೊಂಡಿದ್ದಾರೆ .ನಾವು ಯಾವುದೇ ಭಾಷೆಯಿಂದಲೂ ಭಗವಂತನ ಭಜನೆಯನ್ನು ಮಾಡಿ ದೇವರನ್ನು ಸಂತೃಪ್ತಿಗೊಳಿಸಬಹುದಾಗಿದೆ. ಹಾಡಿ ,ಕುಣಿದು ,ಕುಳಿತು ಯಾವುದೇ ರೀತಿಯಿಂದಲೂ ಭಜನೆ ಮಾಡಿದರೆ ದೇವರ ಅನುಗ್ರಹ ಖಂಡಿತಾ ಸಿಗುತ್ತದೆ .ಆದುದರಿಂದ ಭಜನೆ ಮೋಕ್ಷಕ್ಕೆ ಸುಲಭ ಸಾಧನವಾಗಿದೆ ಎಂದು ಪುಣೆಯ ಪ್ರಸಿದ್ಧ ಪುರೋಹಿತ ಹಾಗೂ ಜ್ಯೋತಿಷ್ಯರಾದ ವೇದಮೂರ್ತಿ ಹರೀಶ್ ಐತಾಳ್ ನುಡಿದರು . ಅವರು ಡಿ . 10 ರಂದು ಶ್ರೀ…
ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ದಶಮಾನೋತ್ಸವದ ಇಂದಿನ ಕಾರ್ಯಕ್ರಮ ನನ್ನ ಜೀವಮಾನದಲ್ಲಿ ಕಂಡ ಅತ್ಯಂತ ಸರ್ವಶ್ರೇಷ್ಠ ಕಾರ್ಯಕ್ರಮವಾಗಿದೆ. ಹೊರನಾಡಿನಲ್ಲಿದ್ದರೂ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಕಾರ್ಯಕ್ರಮವನ್ನು ಅಚ್ಚುಕಟ್ಟಾ ಗಿಸಿದ ರೀತಿ, ಪ್ರತಿಯೊಬ್ಬರನ್ನೂ ಗೌರವಿಸುವ ಸಂಪ್ರದಾಯ ಅನನ್ಯವಾಗಿದ್ದು ಇದನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ಸಂಘ ದೇಶದಾದ್ಯಂತ ಇರುವ ಅನ್ಯ ಸಂಘಗಳಿಗೆ ಮಾದರಿಯಾಗಿದೆ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು. ಅವರು ಡಿ .4 ರಂದು ಚಿಂಚ್ವಾಡ್ ನ ರಾಮಕೃಷ್ಣ ಮೋರೆ ಸಭಾಗೃಹದಲ್ಲಿ ನಡೆದ ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ದಶಮಾನೋತ್ಸವ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ನಾವೆಲ್ಲ ತುಳುವರೆಂಬ ಹೆಮ್ಮೆ ನಮಗಿದೆ. ನಮ್ಮ ಅವಳಿ ಜಿಲ್ಲೆಗಳು ಹತ್ತು ಹಲವು ವೈಶಿಷ್ಟ್ಯವನ್ನು ಹೊಂದಿದ ಜಿಲ್ಲೆಗಳಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದೆ. ದೇಶಕ್ಕೆ ೪ ರಾಷ್ಟ್ರೀಕೃತ ಬ್ಯಾಂಕ್ ಗಳನ್ನೂ ನೀಡಿದ ಹೆಗ್ಗಳಿಕೆ ನಮ್ಮ ಜಿಲ್ಲೆಗಳಿಗಿದೆ. ದೇಶದಲ್ಲಿಯೇ ಅಭಿವೃದ್ಧಿ ಹೊಂದಿದ ಜಿಲ್ಲೆಗಳಲ್ಲಿ ಮೊದಲ ಸ್ಥಾನ ನಮ್ಮ ಜಿಲ್ಲೆಗಳಿಗಿದೆ. ನಾವೆಲ್ಲ ತುಳುವರಾಗಿರುವುದರಿಂದಲೇ…
ಪುಣೆ ಬಂಟರ ಸಂಘದ ವತಿಯಿಂದ ಸಂಘದ ಕಾರ್ಯಕಾರಿ ಸಮಿತಿಯ ಸಮಾಲೋಚನಾ ವಿಶೇಷ ಸಭೆಯೊಂದು ಜೂನ್ 15 ರಂದು ನಗರದ ಕೊರೊನೇಟ್ ಹೋಟೆಲ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು . ಈ ಸಭೆಯಲ್ಲಿ ಸಂಘದ ಮೂಲಕ ಭವಿಷ್ಯದಲ್ಲಿ ಸಮಾಜಬಾಂಧವರಿಗೆ ಉಪಯೋಗವಾಗುವಂತಹ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು . ಈ ಸಂದರ್ಭ ಸಂತೋಷ್ ಶೆಟ್ಟಿಯವರು ಮಾತನಾಡಿ ಸಂಘದ ಮೂಲಕ ಸಮಾಜಕ್ಕೆ ನೆರವಾಗುವಂತಹ ವಿವಿಧ ಕಾರ್ಯಯೋಜನೆಗಳನ್ನು ಸದ್ಯೋಭವಿಷ್ಯದಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು . ಶಿಕ್ಷಣ ,ಆರೋಗ್ಯ ,ಸಾಂಸ್ಕೃತಿಕ ,ಧಾರ್ಮಿಕ ,ಸಾಮಾಜಿಕ ಕಾರ್ಯಗಳು ಸಂಘದ ಆದ್ಯತೆಯಾಗಿದ್ದು ಸಂಘದಿಂದ ಹಮ್ಮಿಕೊಳ್ಳುವ ಯಾವುದೇ ಯೋಜನೆಗಳು ಸಮಾಜಬಾಂಧವರ ಹಿತದೃಷ್ಟಿಯಿಂದ ರೂಪಿಸಲು ನಾವು ಚಿಂತನೆ ನಡೆಸುತ್ತಿದ್ದೇವೆ . ಇದರ ಅಂಗವೆಂಬಂತೆ ಆಗಸ್ಟ್ ಮೊದಲ ವಾರದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು . ಈ ಸಂದರ್ಭ ಸಾಂಸ್ಕೃತಿಕ ಸಮಿತಿಯ ಆಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ,ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು…
ಮುಲುಂಡ್ ಬಂಟ್ಸ್ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ವಿಭಾಗದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಮಹಿಳೆಯರು ಭಾಗವಹಿಸಿದರು
ಮುಲುಂಡ್ ಬಂಟ್ಸ್ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ವಿಭಾಗದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಮಹಿಳೆಯರು ಭಾಗವಹಿಸಿದರು. ಈ ಸಂಧರ್ಭದಲ್ಲಿ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಮುಲುಂಡ್ ಬಂಟ್ಸ್ ನ ಅಧ್ಯಕ್ಷ ವಸಂತ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಮೋಹನ್ ದಾಸ್ ಶೆಟ್ಟಿ, ಗಿರೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. Bunts Institute of Heritage and Culture BUNTS WELFARE SOCIETY BANGALORE