Author: admin
ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲದೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನೂ ಕಲಿಸುವ ಮೂಲಕ ಸಮಾಜದ ಅಶಕ್ತರು ಹಾಗೂ ಮನುಕುಲದ ಒಳಿತಿಗಾಗಿ ಕೆಲಸ ಮಾಡಲು ಪ್ರೇರೇಪಿಸಬೇಕು ಎಂದು ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್ ನ ನಿರ್ದೇಶಕಿ ಪ್ರೊ.ಡಾ. ರಮಾದೇವಿ ನಂದಿನೇನಿ ಹೇಳಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ ಕಂಪನಿ ಮಂಗಳೂರು ಪ್ರಾಯೋಜಕತ್ವದಲ್ಲಿ ಕುಂತಳನಗರ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ನಡೆಯುತ್ತಿರುವ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ 14ನೇ ಬ್ಯಾಚ್ ನ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣೆ ಹಾಗೂ 15 ನೇ ಬ್ಯಾಚ್ ನ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೆಂಕನಿಡಿಯೂರು ಸರಕಾರಿ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಿನ್ಸಿಪಾಲ್ ಡಾ. ಸುರೇಶ್ ರೈ ಕೆ. ಮಾತನಾಡಿ, ಮಹಿಳೆಯರು, ಯುವಕರು ಮತ್ತು ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗಾಗಿ ನಿರಂತರ ಕಾರ್ಯಕ್ರಮ ಆಯೋಜಿಸುತ್ತಿರುವ ಉಡುಪಿ ಗ್ರಾಮೀಣ ಬಂಟರ ಸಂಘ ಯಾವ ಜಾತಿ ಸಂಘಗಳೂ ಮಾಡದ ಕೆಲಸ ಮಾಡುತ್ತಿದೆ ಎಂದರು.…
ನಾಟಕಗಳು ಜನಮಾನಸ ತಲುಪುವಲ್ಲಿ ಕಲಾವಿದರ ಪಾತ್ರ ಅತೀ ಮುಖ್ಯವಾಗಿದ್ದು, ರಂಗಭೂಮಿ ಬೆಳೆಯಲು ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 4 ದಶಕಗಳ ಹಿಂದೆ ರಂಗ ಚಟುವಟಿಕೆಗಳಲ್ಲಿ ಮಹಿಳೆಯರು ಅತೀ ವಿರಳ ಸಂಖ್ಯೆಯಲ್ಲಿದ್ದ ಸಂದರ್ಭದಲ್ಲಿ ಡಾ. ಮಾಧವಿ ಭಂಡಾರಿಯವರು ನಾಟಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಇಂದಿನ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು. ಕಮಲಾಬಾಯಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸುದರ್ಶನ ನಾಯಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ, ಪಿಪಿಸಿ ನಿವೃತ್ತ ಪ್ರಾಂಶುಪಾಲೆ ಡಾ. ಮಾಧವಿ ಎಸ್. ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ರಾಘವೇಂದ್ರ ರಾವ್, ರಂಗಭೂಮಿ ಉಪಾಧ್ಯಕ್ಷ ರಾಜ್ ಗೋಪಾಲ್ ಉಪಸ್ಥಿತರಿದ್ದರು. ವಿವೇಕಾನಂದ ಎನ್. ರಂಗಭೂಮಿ ಸಂದೇಶ ವಾಚಿಸಿದರು.…
ಮಾ. 28 ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು. ಮಣಿಪಾಲ ಎಜುಕೇರ್ ಅಕಾಡೆಮಿಯ ಪ್ರಾಂಶುಪಾಲೆ ಶ್ರೀಮತಿ ಗ್ಲಾಡಿಯಸ್ ಶಿರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕಾದರೆ ಬಾಲ್ಯದ ದಿನಗಳಲ್ಲಿ ಕಲಿತಿರುವ ಉತ್ತಮ ಸಂಸ್ಕಾರ, ಮೌಲ್ಯಗಳು ಮುಖ್ಯವಾಗುತ್ತದೆ. ಹಾಗಾಗಿ ಉತ್ತಮ ಮೌಲ್ಯಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪೋಷಕರು ಪ್ರೇರೇಪಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ ಪೆÇೀಷಕರು ಪ್ರೋತ್ಸಾಹಿಸುವುದರ ಜೊತೆಗೆ ಹೆಚ್ಚಿನ ಸಮಯವನ್ನು ಮಕ್ಕಳಿಗಾಗಿ ಮೀಸಲಿಡಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆ, ಶಿಕ್ಷಕರ ಜೊತೆ ಪೋಷಕರ ಪಾತ್ರ ಬಹುಮುಖ್ಯವಾದದ್ದು ಎಂದರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್ 28ರಿಂದ ಮಾ.31 ರವರೆಗೆ ನಡೆಯಲಿದೆ. ಮಾ.28 ರಂದು ಅರಸು ಕುಂಜಿರಾಯರ ಭಂಡಾರ ಆಗಮನ. 10.30ಕ್ಕೆ ಶ್ರೀ ಅರಸು ಕುಂಜಿರಾಯರಿಗೆ ನವಕ ಪ್ರಧಾನ ಕಲಶಾಭಿಷೇಕ ಬೆಳಿಗ್ಗೆ 11 ಗಂಟೆಗೆ ಧ್ವಜರೋಹಣ, ಸಂಜೆ 6.00 ಗಂಟೆಗೆ ದೇಲಂತಬೆಟ್ಟು ಗ್ರಾಮದ ಶಿಬರೂರು ಶ್ರೀ ಉಳ್ಳಾಯ ಹಾಗೂ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, 6.30 ಕಿಲೆಂಜೂರು ಶ್ರೀ ಸರಳ ಧೂಮಾವತಿ ದೈವದ ಭಂಡಾರ ಆಗಮನ, 7.00 ಗಂಟೆಗೆ ಮೂಡ್ರಗುತ್ತು ಶ್ರೀ ಕಾಂತೇರಿ ಧೂಮಾವತಿ – ಬಂಟ ದೈವಗಳ ಭಂಡಾರ ಆಗಮನ, 7.30 ಕ್ಕೆ ಕೊಯಿಕುಡೆ ಶ್ರೀ ಜಾರಂದಾಯ ದೈವದ ಬಂಟ ದೈವದ ಭಂಡಾರ ಆಗಮನ, ರಾತ್ರಿ 11.00 ಗಂಟೆಗೆ ಶ್ರೀ ಅರಸು ಕುಂಜಿರಾಯರ ನೇಮೋತ್ಸವ. ಮಾ.29 ರಂದು ಬೆಳಿಗ್ಗೆ 5.00 ಗಂಟೆಗೆ ಶ್ರೀ ಉಳ್ಳಾಯ ದೈವದ ನೇಮೋತ್ಸವ, ರಾತ್ರಿ 8.00 ಗಂಟೆಗೆ ಕೊಡಮಣಿತ್ತಾಯ ದೈವದ ನೇಮೋತ್ಸವ, ರಾತ್ರಿ 11.00 ಗಂಟೆಗೆ ಶ್ರೀ…
ಎಪ್ರಿಲ್ 7 ರಂದು ಥಾಣೆ ಯಲ್ಲಿ ದಕ್ಷಿಣ ಕನ್ನಡ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗಳೊಂದಿಗೆ ತುಳು ಕನ್ನಡಿಗರ ಸಭೆ.
ಮುಂಬೈ, ಥಾಣೆ ಜಿಲ್ಲೆ ಮತ್ತು ನವಿ ಮುಂಬಯಿಯ ತುಳು ಕನ್ನಡಿಗರ ಒಗ್ಗೂಡುವಿಕೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಚಿಕ್ಕಮಗಳೂರಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯವರೊಂದಿಗೆ ವಿಶೇಷ ಸಭೆಯೊಂದನ್ನು ಎಪ್ರಿಲ್ 7ರಂದು ಥಾಣೆಯಲ್ಲಿ ಆಯೋಜಿಸಿಕೊಂಡಿದ್ದು ಈ ಬಗ್ಗೆ ಮಾ 27 ರಂದು ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ ಶೆಟ್ಟಿ ಅವರನ್ನು ಅವರ ನಿವಾಸದಲ್ಲಿ ಪನ್ವೇಲ್ ಮಹಾನಗರ ಪಾಲಿಕೆಯ ನಗರ ಸೇವಕ ಸಂತೋಷ್ ಜಿ ಶೆಟ್ಟಿ ಭೇಟಿಯಾಗಿ ಎಪ್ರಿಲ್ 7 ರಂದು ಥಾಣೆಯಲ್ಲಿ ನಡೆಯಲಿರುವ ತುಳು ಕನ್ನಡಿಗರ ಸಭೆಯ ಅಧ್ಯಕ್ಷತೆಯನ್ನು ವಹಿಸುವಂತೆ ವಿನಂತಿಸಿ, ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಎರ್ಮಾಳ್ ಹರೀಶ್ ಶೆಟ್ಟಿ, ಪನ್ವೇಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಪದ್ಮ ಹಾಗೂ ಪನ್ವೆಲ್ ಥಾಣೆ ಪರಿಸರದ ತುಳು ಕನ್ನಡಿಗರು ಪಾಲ್ಗೊಂಡಿದ್ದರು.
ನಾವು ಕಾಣುವ ಜೀವಸಂಕುಲದಲ್ಲಿ ಪ್ರಾಣಿ ಮತ್ತು ಪಕ್ಷಿಗಳೆಂಬ ಎರಡು ಪ್ರಭೇದಗಳಿವೆ. ಜೀವನ ಕ್ರಮ ಹಾಗೂ ವೈವಿಧ್ಯಗಳಲ್ಲಿ ಎರಡೂ ಅನನ್ಯತೆಯನ್ನು ಹೊಂದಿವೆ. ಪ್ರಾಣಿಗಳಲ್ಲಿ ಸಿಂಹ ಬಲಿಷ್ಠವೆನಿಸಿದರೆ, ಪಕ್ಷಿ ಸಂಕುಲದಲ್ಲಿ ಹದ್ದು ತನ್ನ ಮೇರು ಸ್ಥಾನವನ್ನು ಪಡೆದುಕೊಂಡಿದೆ. ನಾವು ಹದ್ದಿನ ಮನಃಸ್ಥಿತಿಯಿಂದ ಅಮೂಲ್ಯವಾದ ಪಾಠಗಳನ್ನು ಕಲಿಯಬಹುದು ಮತ್ತು ಯಶಸ್ಸನ್ನು ಸಾಧಿಸಲು ನಮ್ಮ ಸ್ವಂತ ಜೀವನಕ್ಕೆ ಅನ್ವಯಿಸಿಕೊಳ್ಳಬಹುದು. ಆಕಾಶವನ್ನು ಮುಟ್ಟಬಲ್ಲ ಸಾಮರ್ಥ್ಯ ಇರುವ ಪಕ್ಷಿ ಒಂದಿದೆ ಎಂದಾದರೆ ಅದು ಹದ್ದು. ಹದ್ದು ಒಬ್ಬಂಟಿಯಾಗಿ ಬಾನೆತ್ತರಕ್ಕೆ ಹಾರುತ್ತದೆ. ಯಾವುದೇ ಕಾರಣಕ್ಕೂ ಪಾರಿವಾಳ, ಗಿಳಿ, ಕಾಗೆಗಳ ಜತೆಗಲ್ಲ. ಇದೇ ರೀತಿ ಯಾವುದೇ ಯಶಸ್ಸನ್ನು ಗಳಿಸಬೇಕಾದರೆ ಮೊದಲು ನಮ್ಮ ಮನಃಸ್ಥಿತಿ ಗಟ್ಟಿಯಾಗಿರಬೇಕು. ಸ್ವ-ಪ್ರಯತ್ನ, ಪರಿಶ್ರಮ ಮುಖ್ಯ. ಕಾಲೆಳೆಯುವವರಿಂದ ದೂರವಿದ್ದು, ನಕಾರಾತ್ಮಕ ಮನಃಸ್ಥಿತಿಯವರಿಂದ ಆದಷ್ಟು ಅಂತರವನ್ನು ಕಾಪಾಡಿಕೊಳ್ಳುವುದು ಉತ್ತಮ. ಆತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಬಲ್ಲೆ ಎನ್ನುವ ಛಾತಿ ನಮ್ಮದಾಗಬೇಕು. ಹದ್ದು ನಿಖರ ದೃಷ್ಟಿ ಹಾಗೂ ಗುರಿಯನ್ನು ಹೊಂದಿರುತ್ತದೆ. ಸುಮಾರು ಮೂರು ಕಿಲೋ ಮೀಟರ್ ದೂರದ ತನ್ನ ಬೇಟೆಯನ್ನು ನಿಖರವಾಗಿ ಗುರುತಿಸುತ್ತದೆ. ಅದರ ಲೇಸರ್‌ನಂತಹ…
ನಾಗರಿಕ ಸೇವೆ ಸ್ಪರ್ಧಾತ್ಮಕ ಪರೀಕ್ಷೆ: ಆಳ್ವಾಸ್ನಲ್ಲಿ ಕೋಚಿಂಗ್ ಆಳ್ವಾಸ್ ಜತೆ ಸಾಧನಾ ಕೋಚಿಂಗ್ ಕೇಂದ್ರ ಒಡಂಬಡಿಕೆ
ಮೂಡುಬಿದಿರೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ವಿಜಯನಗರದ ಸಾಧನಾ ಕೋಚಿಂಗ್ ಕೇಂದ್ರದ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಗುರುವಾರ ಇಲ್ಲಿ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ. ಒಡಂಬಡಿಕೆಗೆ ಸಹಿ ಮಾಡಿದ ಬಳಿಕ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ‘ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್‍ಸಿ, ಐಎಎಸ್, ಐಪಿಎಸ್, ಕೆಪಿಎಸ್‍ಸಿ ಸೇರಿದಂತೆ ಪ್ರಮುಖ ನಾಗರಿಕ ಸೇವೆಗಳ ಪರೀಕ್ಷೆಗೆ ನಮ್ಮ ಕ್ಯಾಂಪಸ್‍ನಲ್ಲೇ ಗುಣಮಟ್ಟದ ಕೋಚಿಂಗ್ ನೀಡಲಾಗುವುದು’ ಎಂದರು. ‘ವಿವಿಧ ಹಂತದ ಪರೀಕ್ಷೆಗಳಿಗೆ ತರಬೇತಿ ನೀಡಲು ತರಬೇತುದಾರರನ್ನು ನೇಮಕ ಮಾಡಲಾಗುವುದು ಹಾಗೂ ಅಧ್ಯಯನಕ್ಕೆ ಪೂರಕವಾಗಿ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಲಾಗುವುದು. ಗ್ರಾಮೀಣ ಭಾಗದ, ಆರ್ಥಿಕವಾಗಿ ಹಿಂದುಳಿದ ಸೇರಿದಂತೆ ತಳಸ್ತರದ ವಿದ್ಯಾರ್ಥಿಗಳು ಉನ್ನತ ಆಡಳಿತಾತ್ಮಕ ಹುದ್ದೆಗಳಿಗೆ ತೆರಳಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಒಡಂಬಡಿಕೆ ಮಾಡಲಾಗಿದೆ’ ಎಂದು ವಿವರಿಸಿದರು. 2011ರಲ್ಲಿ ಡಾ. ಜ್ಯೋತಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಸಾಧನಾ ಕೋಚಿಂಗ್ ಈಗಾಗಲೇ ರಾಜ್ಯದ…
ವಿದ್ಯಾಗಿರಿ: ಉಚಿತ ವೈದ್ಯಕೀಯ ಶಿಬಿರಗಳು ಸಾಮಾನ್ಯ ಜನರಿಗೆ ಸಹಕಾರಿ. ಮೂಡುಬಿದಿರೆಯಲ್ಲಿ ಇಂತಹ ಅನೇಕ ಶಿಬಿರಗಳನ್ನು ಆಯೋಜಿಸುವ ಡಾ.ಎಂ ಮೋಹನ ಆಳ್ವ ಅವರ ಕಾರ್ಯವೈಖರಿಗೆ ಅವರೇ ಸಾಟಿ ಎಂದು ಎಸ್‍ಕೆಎಫ್ಎ ಲಿಕ್ಸರ್ ಇಂಡಿಯಾ ಆಡಳಿತ ನಿರ್ದೇಶಕ ರಾಮಕೃಷ್ಣ ಜಿ. ಆಚಾರ್ ಹೇಳಿದರು. ಇಲ್ಲಿನ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್, ಶ್ರೀ ಕಾಳಿಕಾಂಬ ಸೇವಾ ಸಮಿತಿ, ಶ್ರೀ ಕಾಳಿಕಾಂಬ ಮಹಿಳಾ ಸಮಿತಿ, ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆ, ಶ್ರೀಗುರು ಕಾಷ್ಠಶಿಲ್ಪ ಸಮಿತಿ ಹಾಗೂ ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮತ್ತು ನೇತ್ರಾಜ್ಯೋತಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ‘ಉಚಿತ ನೇತ್ರ ತಪಾಸಣಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಸಮಾಜ ಸೇವೆಯನ್ನು ಮಾಡುವ ಬಗೆಯಲ್ಲಿ ಆಳ್ವರು ಅನೇಕ ಜನರಿಗೆ ಆದರ್ಶವಾಗಿದ್ದಾರೆ’ ಎಂದು ಅವರು ಶ್ಲಾಘಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮಾತನಾಡಿ, ‘’ ಇದು ಈ ತಿಂಗಳಿನ…
ಐಕಳಬಾವ ವಿಕಾಸ್ ಎಚ್ ಶೆಟ್ಟಿ ಅವರು ನೆರೂಲ್ ಜಿಮ್ಖಾನಾ ನೆರೂಲ್ ನವಿ ಮುಂಬೈನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ 2024ರಿಂದ 2027ರವರೆಗೆ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಮೊದಲು ಅವರನ್ನು 2021ರಿಂದ 2024 ರ ಅವಧಿಗೆ ನೇಮಕ ಮಾಡಲಾಗಿತ್ತು. ಫೆಬ್ರವರಿ 24 ರಂದು ಚುನಾವಣೆ ನಡೆದಿತ್ತು. ವಿಕಾಸ್ ಎಚ್ ಶೆಟ್ಟಿಯವರು ಈ ಹಿಂದೆ ನೆರೂಲ್ ಜಿಮ್ಖಾನಾದ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಉಪಾಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನು ಅಲಕರಿಸಿದ್ದರು. ನೆರೂಲ್ ಜಿಮ್ಖಾನಾ ನೆರೂಲ್ ಪಶ್ಚಿಮ ನವಿ ಮುಂಬೈನಲ್ಲಿ ನೋಂದಾಯಿತ ಚಾರಿಟೇಬಲ್ ಟ್ರಸ್ಟ್ ಆಗಿದ್ದು, ಕ್ರೀಡೆ, ಅರೋಗ್ಯ ಮತ್ತು ಮನರಂಜನೆಯನ್ನು ಉತ್ತೇಜಸುತ್ತಿದೆ ಮತ್ತು ನವಿ ಮುಂಬೈನಲ್ಲಿ ಸಾಮಾಜಿಕ ಚಟುವಟಿಕೆಗಳಿಗೆ ಅಪಾರವಾದ ಕೊಡುಗೆ ನೀಡುತ್ತಾ ಬಂದಿದೆ. ನೆರೂಲ್ ಜಿಮ್ಖಾನ 4,000ಕ್ಕೂ ಹೆಚ್ಚು ಪ್ರಾಥಮಿಕ ಸದಸ್ಯರನ್ನು ಹೊಂದಿದ್ದು ಮತ್ತು ಸುಮಾರು 13,500 ಕುಟುಂಬ ಸದಸ್ಯರನ್ನು ಒಳಗೊಂಡಿದೆ. ವಿಕಾಸ್ ಶೆಟ್ಟಿ ಅವರು ದಿವಂಗತ ಐಕಳಬಾವ ಶ್ರೀಮತಿ ಸರ್ವಾಣಿ ಶೆಟ್ಟಿ ಮತ್ತು ಕೆಂಜೂರು ಉಪ್ಪರಿಗೆ ಮನೆ ಹಿರಿಯಣ್ಣ ಎಸ್. ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ.…
ಬಂಟರ ಯಾನೆ ನಾಡವರ ಮಾತೃ ಸಂಘ (ರಿ), ಕುಂದಾಪುರ ತಾಲೂಕು ಸಮಿತಿ ಮತ್ತು ಕುಂದಾಪುರ ತಾಲೂಕು ಮಹಿಳಾ ವಿಭಾಗ ಇದರ ಸಹಭಾಗಿತ್ವದಲ್ಲಿ ಸಾಮೂಹಿಕ ‘ಸತ್ಯನಾರಾಯಣ ಪೂಜೆ’ಯು ಬಂಟರ ಯಾನೆ ನಾಡವರ ಸಂಕೀರ್ಣದಲ್ಲಿರುವ ಎಸ್. ಎಸ್. ಹೆಗ್ಡೆ ಸಭಾಭವನದಲ್ಲಿ ನಡೆಯಿತು. ಸಾಮೂಹಿಕ ‘ಸತ್ಯನಾರಾಯಣ ಪೂಜೆ’ ಯನ್ನು ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಮತ್ತು ರೆಡ್ ಕ್ರಾಸ್ ಕುಂದಾಪುರ ಇದರ ಕಾರ್ಯದರ್ಶಿ ಶಿವರಾಮ ಶೆಟ್ಟಿ ಮತ್ತು ಶ್ರೀಮತಿ ಆಶಾ ಎಸ್. ಶೆಟ್ಟಿ ಕುಂದಾಪುರ ದಂಪತಿಯವರಿಂದ ನೆರವೇರಿಸಲಾಯಿತು. ಸೇವಾಕರ್ತರನ್ನು ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ದ.ಕ. ಮಂಗಳೂರು ಇದರ ಜೊತೆ ಕಾರ್ಯದರ್ಶಿಗಳಾದ ಸಂಪಿಗೇಡಿ ಸಂಜೀವ ಶೆಟ್ಟಿ ಸನ್ಮಾನಿಸಿದರು. ತಾಲೂಕು ಸಮಿತಿಯ ಸಂಚಾಲಕರಾದ ಆವರ್ಸೆ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಕುಂದಾಪುರ ತಾಲೂಕು ಸಂಘ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ಹೆಗ್ಡೆ ಮತ್ತು ತಾಲೂಕು ಸಮಿತಿ ಸದಸ್ಯರಾದ ಕಾವ್ರಾಡಿ ಸಂಪತ್ ಕುಮಾರ್ ಶೆಟ್ಟಿ, ಸೀತಾರಾಮ ಶೆಟ್ಟಿ ಕೆದೂರು, ಕಿರಣ ಹೆಗ್ಡೆ ಅಂಪಾರು, ನಿವೃತ್ತ ಮುಖ್ಯೋಪಾಧ್ಯಾಯರಾದ…














