Author: admin
ಪುಣೆಯ ಪ್ರತಿಷ್ಠಿತ ರೋಯಲ್ ಕಾನೊಟ್ ಬೋಟ್ ಕ್ಲಬ್ “ನ ಅಧ್ಯಕ್ಷ , ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ, ಯಶಸ್ವಿ ಉದ್ಯಮಿ, ಸಮಾಜ ಸೇವಕ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ನಿಧನರಾಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ದೊಡ್ಡಬೀಡು ಗಣಪಯ್ಯ ಹೆಗ್ಡೆ ಹಾಗೂ ಮೊಳಹಳ್ಳಿ ಶ್ರೀಮತಿ ಮುತ್ತಕ್ಕ ಹೆಗ್ಡೆ ದಂಪತಿಗಳ ಸುಪುತ್ರನಾಗಿ ಜನಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು ನಂತರ ಮಹಾರಾಷ್ಟ್ರದ ಪುಣೆಗೆ ಆಗಮಿಸಿ ಪುಣೆಯ ಐ ಎಲ್ ಎಸ್ ಲಾ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದರು. ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದ ಇವರ ದೂರದರ್ಶಿತ್ವದ ಗುಣದಿಂದ ಕೆಮಿಕಲ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಕಾರ್ಯಪ್ರವೃತ್ತರಾಗಿ ಸತತ ಪರಿಶ್ರಮ ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆದು ಬಿ ಕೆ ಬೆಂಝಿಲ್ ಪ್ರೈವೆಟ್ ಲಿಮಿಟೆಡ್ ಹಾಗೂ ಅಕ್ಷಯ್ ಆರ್ಗಾನಿಕ್ ಪ್ರ . ಲಿ ಎನ್ನುವ ಕಂಪೆನಿಗಳ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿನ್ನು ಪಡೆದುಕೊಂಡು ಪ್ರಸಿದ್ಧಿಯನ್ನು ಗಳಿಸಿದ್ದರು. ಉದ್ಯಮದ ಪ್ರಗತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಯಾವುದೇ ಪ್ರಸಿದ್ಧಿಯನ್ನು…
ಮೂಡುಬಿದಿರೆ: ವಿಜ್ಞಾನವನ್ನು ಕೇವಲ ಪುಸ್ತಕದ ಮೂಲಕ ಅರಿತರೆ ಸಾಲದು ನಮ್ಮ ಸುತ್ತಮುತ್ತಲಿನ ಪರಿಸರದಿಂದಲೂ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದು ಆತ್ಮಾ ಸಂಶೋಧನ ಕೇಂದ್ರದ ಮುಖ್ಯ ವೈಜ್ಞಾನಿಕ ಅಧಿಕಾರಿ ಹಾಗೂ ಆಳ್ವಾಸ್ ದ್ರವ್ಯಗುಣ ವಿಭಾಗದ ಪ್ರಾಧ್ಯಪಕ ಡಾ. ಫರ್ಹಾನ್ ಜಮೀರ್ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್‍ವತಿಯಿಂದ ಡಾ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘’ಶೈಕ್ಷಣಿಕ ಪರಿಧಿಯಾಚೆಗಿನ ಬದುಕಿನ ಅನ್ವೇಷಣೆ’’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು . ಶಿಕ್ಷಣದ ಮೂಲ ಉದ್ದೇಶ ಅಂಕಗಳಿಸುದಷ್ಟೆ ಅಲ್ಲ. ತನ್ನಲ್ಲಿ ಹುದುಗಿರುವ ಕೌಶಲಗಳ ವೃದ್ಧಿ ಮುಖ್ಯವಾಗಿರುತ್ತದೆ. ಯಾವುದೇ ವಿಷಯವನ್ನು ಗ್ರಹಿಸಿ ಅರ್ಥಮಾಡಿಕೊಳ್ಳಬೇಕೆ ವಿನಃ ಕಂಠಪಾಠ ಮಾಡುವುದು ಒಳಿತಲ್ಲ. ವಿಜ್ಞಾನದ ವಿಷಯಗಳನ್ನು ನಿಜ ಜೀವನದಲ್ಲಿ ಸಹಸಂಬಂಧಿಸಿ ಗ್ರಹಿಸುವುದು ಮುಖ್ಯ. ಹೆಣ್ಣು ಮಕ್ಕಳು ವಿಷಯವನ್ನು ಇದ್ದ ಹಾಗೆ ಬರೆದರೆ ಗಂಡು ಮಕ್ಕಳು ಅದೇ ವಿಷಯನ್ನು ವಿಭಿನ್ನ ರೀತಿಯಲ್ಲಿ ಬರೆಯುತ್ತಾರೆ. ಇದಕ್ಕೆ ಕಾರಣ ಹುಡುಗರ ಮೆದುಳು ತಾರ್ಕಿಕ ಸ್ಮರಣೆಗೆ ಹೆಚ್ಚಿನ ಒತ್ತು ನೀಡಿದರೆ (ಲಾಜಿಕಲ್ ಮೆಮೊರಿ) ಹಾಗೂ ಹುಡುಗಿಯರ ಮೆದುಳು…
ಮೂಡುಬಿದಿರೆ: ತುಮಕೂರಿನ ಕ್ರಿಯೇಟಿವ್ ಈವೆಂಟ್ಸ್ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಆಹ್ವಾನಿತ ಪುರುಷರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ ಆಗಿದೆ. ಫೈನಲ್ ಮುಖಾಮುಖಿಯಲ್ಲಿ ಆಳ್ವಾಸ್ ಕಾಲೇಜು ತಂಡವು ಸಹ್ಯಾದ್ರಿ ತಂಡವನ್ನು 35-19 ಹಾಗೂ 35- 24ರ ನೇರ ಸೆಟ್‍ಗಳಿಂದ ಸೋಲಿಸಿತು. ಇದಕ್ಕೂ ಮೊದಲು ಸೆಮಿಫೈನಲ್‍ನಲ್ಲಿ ಬೆಂಗಳೂರಿನ ಚಿನ್ಮಯಿ ತಂಡವನ್ನು 35-17 ಮತ್ತು 35-19 ಅಂಕಗಳಿಂದ ಸೋಲಿಸಿತ್ತು. ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಆಳ್ವಾಸ್ ನಾಕೌಟ್ ಹಂತದ ಸೆಮಿಫೈನಲ್ ಪ್ರವೇಶಿಸಿತ್ತು.
ಮಾನವನಾಗಿ ಹುಟ್ಟಿದ ಮೇಲೆ ಯಾವುದೇ ಕಷ್ಟಗಳು ಬಂದರೂ ಅದನ್ನು ಎದುರಿಸಿ ಬದುಕಬೇಕು. ಸಾಯುವವರೆಗೆ ಬದುಕಬೇಕಾದುದು ಧರ್ಮ. ಯಾರ ಬಳಿಯಲ್ಲಿ ದೇವರು ಕರುಣಿಸಿದ ಎರಡು ಕೈಗಳಿವೆಯೇ ಅವರೇ ಪುಣ್ಯಾತ್ಮರು. ಅಂಥವರು ಏನನ್ನೂ ಸಾಧಿಸಬಹುದು. ಕೈಗಳಿಂದ ದುಡಿದು ಬದುಕಬಹುದು. ಕೈಗಳನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ದುಡಿಯಲು ಬಳಸಬೇಕು. ಯಾರೂ ದೀನರೂ ಅಲ್ಲ, ದುರ್ಬಲರೂ ಅಲ್ಲ. ಇಂದ್ರಿಯಗಳೇ ಎಲ್ಲ ಬಯಕೆಗಳಿಗೂ ಕರ್ಮ ಗಳಿಗೂ ಮೂಲವಾಗಿದೆ. ಆದರೆ ಮನಸನ್ನು ಹತೋಟಿಗೆ ತಂದು ಧರ್ಮದಲ್ಲಿ ನಡೆದರೆ ನಮ್ಮನ್ನು ಜುಗುಪ್ಸೆ ಕಾಡಲಾರದು. ಯಾವುದೇ ಸಮಸ್ಯೆ, ಜಂಜಾಟಗಳಿಗೆ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ. ನಮ್ಮ ಜೀವನದ ಯಾವುದಾದರೊಂದು ಕಾಲಘಟ್ಟದಲ್ಲಿ ನಿರಾಸೆ ಕಾಡಿದಾಗ ದೇವರನ್ನು ಧ್ಯಾನಿಸಿ. ಕಷ್ಟಗಳು ಮನುಷ್ಯರಿಗೆ ಬಾರದೆ ಇನ್ಯಾರಿಗೆ ಬರುತ್ತದೆ. ನಮ್ಮ ಜೀವನ ಸಂಜೀವನವಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ. ಸಂಜೀವನ ಆಗಬೇಕಾದರೆ ಜೀವನವನ್ನು ಸರಿಯಾದ ರೀತಿಯಲ್ಲಿ ನೋಡಬೇಕು. “ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆ ಸುಳ್ಳಲ್ಲ. ಹೆಚ್ಚು ಸಂಪಾದನೆ ಮಾಡಿದರೆ ಸ್ವಲ್ಪ ಕೂಡಿಸಿಡಿ. ಮುಂದೆ ಕಷ್ಟ ಕಾಲಕ್ಕೆ ಅದು ನೆರವಾಗಬಹುದು.…
ಪೌರಾಣಿಕ ಜಾನಪದ ಕಲೆ ಯಕ್ಷಗಾನವನ್ನು ಕಲಿಸುವ ಮೂಲಕ ಮಕ್ಕಳು ಸಂಸ್ಕಾರ, ಸಂಪ್ರದಾಯದೊಂದಿಗೆ ಬೆಳೆಯಲು ಸಾಧ್ಯ. ಯಕ್ಷಗಾನ ಕಲೆಗೆ ಮಕ್ಕಳು ಸ್ಪಂದಿಸಿದ್ದಲ್ಲಿ ಮುಂದೆ ರಾಷ್ಟೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಕಲೆ ರಾರಾಜಿಸಲಿದೆ. ದಿ. ಕರ್ನಿರೆ ಶ್ರೀಧರ ಶೆಟ್ಟಿಯವರ ಯಕ್ಷಗಾನ ಕಲೆಯ ಮೇಲಿನ ಅಭಿಮಾನವನ್ನು ಮಕ್ಕಳ ಯಕ್ಷಗಾನದ ಮೂಲಕ ಆಯೋಜಿಸುತ್ತಾ ಬಂದಿದ್ದೇವೆ. ಅಲ್ಲದೆ ಪರಿಸರದ ದಾನಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ ಎಂದು ಕಟೀಲು ಶ್ರೀ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಧ್ಯಕ್ಷ ಪಾಂಡು ಎಲ್. ಶೆಟ್ಟಿ ಅಭಿಪ್ರಾಯಪಟ್ಟರು. ವಸಾಯಿ ಪಶ್ಚಿಮದ ದತ್ತಾನಿ ಮಾಲ್ ನ ಆರ್ನಸ್ವರ್ಣ ಬ್ಯಾಂಕ್ವೆಟ್ ಹಾಲ್ ನಲ್ಲಿ ಶ್ರೀ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ನ.26 ರಂದು ಆಯೋಜಿಸಿದ್ದ ಐದನೇ ವಾರ್ಷಿಕೋತ್ಸವ ಯಕ್ಷ ಸಂಭ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಸಲು ಹುಟ್ಟಿಕೊಂಡ ಈ ಸಂಸ್ಥೆಗೆ ಮಕ್ಕಳ ಪಾಲಕರು, ಪೋಷಕರು ಸಹಕರಿಸಬೇಕು. ಆ ಮೂಲಕ ಹೊರನಾಡಿನಲ್ಲಿ ಯಕ್ಷಗಾನವನ್ನು ವಿಶ್ವಗಾನವಾನ್ನಾಗಿ…
ಭಾಸ್ಕರ್ ಶೆಟ್ಟಿ (ಅಧ್ಯಕ್ಷ)-ಸವಿತಾ ಸುರೇಶ್ ಶೆಟ್ಟಿ (ಮಹಿಳಾಧ್ಯಕ್ಷೆ) ಮುಂಬಯಿ (ಆರ್ ಬಿ ಐ), ಆ.28: ಕರ್ನಾಟಕ ಕರಾವಳಿಯ ಮುಲ್ಕಿ ಸಮೀಪದ ಕುಬೆವೂರು ಶ್ರೀ ಜಾರಂದಾಯ ಸೇವಾ ಸಮಿತಿ ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಮುಲುಂಡ್ ಪಶ್ಚಿಮದ ಹೊಟೇಲ್ ಸ್ವಾದ್ ಇದರ ಸಭಾಗೃಹದಲ್ಲಿ ಅಡ್ವಕೇಟ್ ರಾಮಣ್ಣ ಎಂ.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿತು. ಗತವರ್ಷದ ಲೆಕ್ಕಪರಿಶೋಧನೆ ಹಾಗೂ ಅನುಮೋದನೆ, ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ, ಮಹಿಳಾ ವಿಭಾಗದ ರಚನೆ ಇನ್ನಿತರ ವಿಷಯಗಳೊಂದಿಗೆ ಸಭೆಯು ನಡೆಸಲ್ಪಟ್ಟಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು ಭಾಸ್ಕರ ಎಸ್.ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಸಭೆಯು ಪುನಾರಾಯ್ಕೆಗೊಳಿಸಿತು. ಇತರ ಪದಾಧಿಕಾರಿಗಳಾಗಿ ಜಗದೀಶ್ ಎಂ. ಶೆಟ್ಟಿ (ಉಪಾಧ್ಯಕ್ಷ), ಸಂತೋಷ್ ಜೆ.ಭಂಡಾರಿ (ಕಾರ್ಯದರ್ಶಿ), ದಿವಾಕರ ಎಸ್. ಶೆಟ್ಟಿ (ಕೋಶಾಧಿಕಾರಿ), ಶಂಕರ ಎನ್.ಶೆಟ್ಟಿ (ಉಪ ಕಾರ್ಯದರ್ಶಿ), ಶ್ರೀಧರ ಪೂಜಾರಿ ( ಉಪ ಕೋಶಾಧಿಕಾರಿ) ಮತ್ತು ನ್ಯಾಯವಾದಿ ರಾಮಣ್ಣ ಎಂ.ಭಂಡಾರಿ ಅವರನ್ನು ಸಲಹೆಗಾರರಾಗಿ ಸಭೆಯು ಸರ್ವಾನುಮತದಿಂದ ನೇಮಿಸಿತು. ಸಭೆಯಲ್ಲಿ ಮಹಿಳಾ ವಿಭಾಗದ ಆಯ್ಕೆ ನಡೆದಿದ್ದು,…
ಸೋತಾಗ ಕುಗ್ಗಲಿಲ್ಲ ಗೆದ್ದಾಗ ಹಿಗ್ಗಲಿಲ್ಲ. ಸದಾ ಒಂದಿಲ್ಲೊಂದು ಪ್ರಯೋಗಗಳ ಮೂಲಕ ತುಳು ರಂಗಭೂಮಿ, ತುಳು ಚಿತ್ರರಂಗವನ್ನು ಜೀವಂತವಾಗಿರಿಸುವಲ್ಲಿ ವಿಶೇಷ ಕೊಡುಗೆ ನೀಡುತ್ತಿರುವವರು ಕಲಾಸಾಮ್ರಾಟ್, ಅಕ್ಷರಬ್ರಹ್ಮ ವಿಜಯಕುಮಾರ್ ಕೊಡಿಯಾಲ್‌ಬೈಲ್. ತಾನು ಬೆಳೆಯುವ ಜತೆ ಬೇರೆ ತಂಡದ ಕಲಾವಿದರನ್ನೂ ಪ್ರೋತ್ಸಾಹಿಸುತ್ತಾ, ಬೆಳೆಸುತ್ತಿರುವ ಕಲಾವಿದರ ‘ಮಾಣಿಕ್ಯ’ ಎಂದರೆ ಅತಿಶಯೋಕ್ತಿಯಿಲ್ಲ. ಬಾಲ್ಯದಲ್ಲಿ ಮಾಡಿದ ಮಲ್ಲಪ್ಪ ನಾಯಕನ ಪಾತ್ರದಿಂದ ಹಿಡಿದು ಇತ್ತೀಚಿನ ‘ಶಿವದೂತ ಗುಳಿಗೆ’ ನಾಟಕದ ತನಕವೂ ಸದಾ ಹೊಸತನ, ಹೊಸ ಪ್ರಯೋಗಗಳೊಂದಿಗೆ ನಾಡಿನ ಜೀವಂತ ಸಮಸ್ಯೆಗಳ ಸುತ್ತ ಬೆಳಕು ಚೆಲ್ಲಿ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದವರಿವರು. ಏಕತಾನತೆಯಲ್ಲೇ ಸಾಗುತ್ತಿದ್ದ ತುಳು ರಂಗಭೂಮಿಗೆ, ನಿಂತ ನೀರಾಗಿದ್ದ ತುಳು ಚಲನಚಿತ್ರರಂಗಕ್ಕೆ ಹೊಸ ಪ್ರಯೋಗಗಳ ಮೂಲಕ ಜೀವಂತಿಕೆ ತುಂಬಿದವರು. ಸದಾ ಹೊಸತನಗಳಿಗೆ ತೆರೆದುಕೊಳ್ಳುವ, ಬದಲಾವಣೆಗೆ ತುಡಿತ ಹೊಂದಿರುವ ಪ್ರಯೋಗಶೀಲ ಕಲೆಗಾರ ವಿಜಯ ಕುಮಾರ್ ಕೊಡಿಯಾಲ್‌ಬೈಲ್. 8, 9ನೇ ತರಗತಿಯಲ್ಲಿದ್ದಾಗಲೇ ಮನೆ ಮನೆಗೆ ಪೇಪರ್ ಹಾಕುವ ಕೆಲಸ ಮಾಡಿ, ನವಭಾರತ ಪತ್ರಿಕೆಯಲ್ಲಿ ಪಾಳಿಯಲ್ಲಿ ದುಡಿದು ಕಷ್ಟದ ದಿನಗಳಲ್ಲಿ ಬೆಳೆದ ಹುಡುಗ ಇಂದು ಒಬ್ಬ…
ಬೆಂಗಳೂರು ಕಂಬಳದ ತರುವಾಯ ತುಳು – ಕುಂದಕನ್ನಡ ಎನ್ನುವ ವಿಷಯದಲ್ಲಿ ನಾವು ತೌಳವರಲ್ಲ, ನೀವು ತುಳುವರಲ್ಲ, ನಿಮ್ಮ ಭಾಷೆಗೆ ಲಿಪಿ ಇಲ್ಲ, ನಮ್ಮ ಭಾಷೆ, ನಿಮ್ಮ ಸಂಸ್ಕೃತಿ ಎನ್ನುವ ಅರ್ಥದಲ್ಲಿ ಅನಗತ್ಯ ಚರ್ಚೆಗಳು ಆರಂಭಗೊಂಡಿದೆ. ಅಲ್ಲಿ ಎರಡೂ ಕಡೆಯಲ್ಲಿಯೂ ಸೂಕ್ಷ್ಮತೆಯನ್ನ ಅರಿಯದೆ ವಾದ ತನ್ನ ಸ್ವಾದ ಕಳೆದುಕೊಂಡು ಹೊಸ ವಿವಾದ ಸೃಷ್ಠಿಯಾಗುವ ಹಂತವನ್ನ ತಲುಪುತ್ತಿರುವುದನ್ನ ಗಮನಿಸುತ್ತಿದ್ದೇವೆ. ಅದು ಚರ್ಚೆಯ ವಸ್ತುವೂ, ವಿಷಯವೂ ಅಲ್ಲ. ತೌಳವ ಸೀಮೆ ಎನ್ನುವುದು ಕಲ್ಯಾಣಪುರದ ಹೊಳೆಯ ಆಚೆಗೆ ಮಾತ್ರವೇ ಸೀಮಿತವಲ್ಲ ಎನ್ನುವುದು ವಾದಕ್ಕೆ ಬಿದ್ದವರೆಲ್ಲರಿಗೂ ಗೊತ್ತಿಲ್ಲದೆಯೂ ಇರಬಹುದು! ಗೇರುಸೊಪ್ಪೆಯ ಶರಾವತಿ ನದಿಯಿಂದಲೂ ನೀಲೇಶ್ವರದ ಪಯಸ್ವಿನಿ ನದಿಯ ತನಕವೂ ತೌಳವ ಸೀಮೆ ಹಬ್ಬಿರುವ ಐತಿಹಾಸಿಕ ಉಲ್ಲೆಖಗಳಿವೆ. ಇತಿಹಾಸ ಸಂಶೋಧಕ ಬಾರ್ಕೂರು ಡಾ.ವಸಂತ ಶೆಟ್ಟರು ತೌಳವ ಸಂಸ್ಕೃತಿಯ ಬಗ್ಗೆ ಬಹಳ ಸ್ಪಷ್ಟವಾಗಿ ಉಲ್ಲೆಖಿಸುತ್ತಾ ’ತುಳು ಸಂಸ್ಕೃತಿ ಕೇವಲ ಆ ಭಾಷೆಗೆ ಮೀಸಲಾದದ್ದು ಅಲ್ಲವೇ ಅಲ್ಲ” ಎನ್ನುವುದನ್ನ ಸ್ಪಷ್ಟಪಡಿಸುತ್ತಾರೆ. ನಮ್ಮ ಭಾಗದ ಪಾಣಾರಾಟದ ಆರಂಭದಲ್ಲಿ ವಂಡ್ಸೆ ಹೋಬಳಿಯ ಕೆರಾಡಿಯ ದುರ್ಗಪ್ಪ ಪಾಣಾರರು…
ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ “ಕುದ್ರು” ಚಿತ್ರ ಅಕ್ಟೋಬರ್ 13 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಾಯಕ ನಟ ಹರ್ಷಿತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಕುದ್ರು’ ಎಂದರೆ ನೀರಿನಿಂದ ಸುತ್ತುವರೆದ ದ್ವೀಪ. ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಚಿತ್ರದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕುತೂಹಲ ಮೂಡಿಸುವ ಕಥಾಹಂದರವಿದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಉಡುಪಿ, ಮಲೆನಾಡು, ಗೋವಾ ಹಾಗೂ ಆಯಿಲ್ ರಿಗ್ ನಲ್ಲಿ ಚಿತ್ರೀಕರಣವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನಪ್ರಿಯವಾಗಿದೆ ಎಂದರು. ಈ ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯಾಗಿ ನಟಿ ಡೈನ ಡಿಸೋಜ, ಮುಸ್ಲಿಂ ಹುಡುಗನಾಗಿ ನಟ ಫರ್ಹಾನ್, ಮಂಗಳೂರಿನ ನಮಿತಾ, ಪ್ರವೀಣ್ ಬಂಗೇರ, ಕಾಂತಾರ ಸತೀಶ್ ಆಚಾರ್ಯ ನಟಿಸಿದ್ದಾರೆ.…
ನಾಟಕ, ಚಲನಚಿತ್ರಗಳಿಗೆ ಜನರ ಮನ ಪರಿವರ್ತನೆ ಮಾಡುವ ಅದ್ಭುತ ಶಕ್ತಿ ಇದೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಶಿವದೂತೆ ಗುಳಿಗೆ ನಾಟಕದ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ್ದು ಇನ್ನಷ್ಟು ಹೊಸ ಪ್ರಯೋಗ ಮಾಡಿ ಭಾಷೆ ನುಡಿಯ ಪ್ರಾತಿನಿಧ್ಯವನ್ನು ಜಗತ್ತಿಗೆ ತೋರಿಸುವಂತಾಗಲಿ ಎಂದು ಕೊಪ್ಪ ಹರಿಹರಪುರ ದತ್ತಾಶ್ರಮ ಸ್ವರ್ಣ ಪೀಠಿಕಾಪುರ ಗೌರಿಗದ್ದೆಯ ಅವಧೂತರಾದ ಶ್ರೀ ವಿನಯ ಗುರೂಜಿ ಹೇಳಿದರು. ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರ ಅಭಿನಯದ “ಶಿವದೂತೆ ಗುಳಿಗೆ” ನಾಟಕದ 555 ನೇ ಪ್ರದರ್ಶನದ ಕಲಾ ಸಂಗಮ ಕಾರ್ಯಕ್ರಮವನ್ನು ಅಡ್ಯಾರ್ ಗಾರ್ಡನ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನಾಟಕ ಬರೆಯುವುದು ನಿಲ್ಲಿಸುತ್ತೇನೆ ಎಂದವರಿಗೆ ಗುರುಗಳ ಪ್ರೇರಣೆಯಂತೆ ಎರಡು ಪೆನ್ನು ನೀಡಿದ್ದೆ. ಅದರಿಂದ ಬರೆದ “ಶಿವದೂತೆ ಗುಳಿಗೆ” ಇಂದು ಲೋಕ ಪ್ರಸಿದ್ಧವಾಗಿದೆ. ದ.ಕ. ಜಿಲ್ಲೆ ದಿವ್ಯ ಕ್ಷೇತ್ರ. ತುಳುನಾಡಿನ ಮಣ್ಣು ಕಾಶಿಯ ಮಣ್ಣು. ಕೋಟಿ ಚೆನ್ನಯ, ಗುಳಿಗ ಕೊಡಮಣಿತ್ತಾಯ, ಅಣ್ಣಪ್ಪ, ಶಿವ, ದುರ್ಗಾ ಕ್ಷೇತ್ರಗಳು…