Author: admin
ಶ್ರೀ ಮಂದಾರ್ತಿ ಕ್ಷೇತ್ರದ ಯಕ್ಷಗಾನ ಮೇಳವೊಂದು ಮೊದಲ್ಗೊಂಡು ಅಂದಿನಿಂದ ಇಂದಿನವರೆಗೂ ಕೇವಲ ಭಕ್ತಾದಿಗಳ ಹರಕೆ ಸೇವೆಗೆ ಮಾತ್ರ ಮೀಸಲಿದ್ದು,ಕಾಲಾನುಕಾಲಕ್ಕೆ ಶ್ರೀ ದೇವಳದ ಮೇಳಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿ, ಪ್ರಸ್ತುತ ಐದು ಯಕ್ಷಗಾನ ಮೇಳಗಳನ್ನು ಹೊಂದಿದ್ದೂ ವರ್ಷಕ್ಕೆ ಸುಮಾರು 900 ಆಟಗಳನ್ನು ಆಡಿಯೂ 2042 – 43 ರ ಸಾಲಿನವರೆಗೆ ಹರಕೆ ಯಕ್ಷಗಾನ ಬಯಲಾಟ ಬುಕ್ಕಿಂಗ್ ಇರುವ ಏಕಮಾತ್ರ (ಬಹುಶಃ) ಮೇಳ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳ, ಶ್ರೀ ಕ್ಷೇತ್ರ ಮಂದಾರ್ತಿ ಎಂದರೆ ತಪ್ಪಾಗಲಾರದು. ಹೀಗೊಂದು ಸೇವಾ ಮನೋಭಾವನೆಯನ್ನು ತಮ್ಮದಾಗಿಸಿಕೊಂಡು ತಲೆಮಾರುಗಳಿಂದ ಚಾಚೂ ತಪ್ಪದೆ ಮುನ್ನಡೆಸಿಕೊಂಡು ಬರುತ್ತಿರುವ ಮೊಕ್ತೇಸರ ಕುಟುಂಬದ ಹೆಸರು ಹೆಗ್ಗುಂಜೆ ನಾಲ್ಕು ಮನೆಯವರು. ಹಾಗೆಯೇ ಕುಟುಂಬದ ಹಿರಿಯರಿಂದ ಕಿರಿಯರಿಗೆ, ಮುಂದಿನ ತಲೆಮಾರಿಗೆ ವರ್ಗಾವಣೆಗೊಳ್ಳುತ್ತಾ ಬಂದು ಹೊಣೆಗಾರಿಕೆಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ಹೆಗ್ಗುಂಜೆ ಚಾವಡಿಮನೆ ಮಂದಾರ್ತಿ ಶ್ರೀ ಧನಂಜಯ ಶೆಟ್ಟಿ ಅವರು ಸೇವೆಯ ನೊಗಕ್ಕೆ ಹೆಗಲಾಗಿ ಮುನ್ನಡೆಸುತ್ತಿದ್ದಾರೆ. ಇವರು ಶ್ರೀ ದೇವಳದ ಮೊಕ್ತೇಸರರಾಗಿ ಅನುಪಮ…
ಬಂದರು, ವಿಮಾನಯಾನ, ರೈಲ್ವೇ, ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಧಾರ್ಮಿಕ, ಉದ್ಯಮ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದುವರಿದಿದ್ದು, ಈ ರೀತಿಯಾಗಿ ಸಮಗ್ರ ಅಭಿವೃದ್ಧಿ ಕಂಡ ನಗರ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ವಿಭಿನ್ನತೆಯಿಂದ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ನಗರದ ಓಷಿಯನ್ ಪರ್ಲ್ ಹೊಟೇಲ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜ.5 ರಿಂದ ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಕ್ಯಾ. ಪ್ರಾಂಜಲ್ ಗೌರವಾರ್ಥ ನಡೆಯಲಿರುವ ‘ಕೆಯುಡಬ್ಲ್ಯುಜೆ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ ಟ್ರೋಪಿ ಅನಾವರಣಗೊಳಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿಭಿನ್ನತೆಯೇನೆಂದರೆ ಸಾಂಸ್ಕೃತಿಕ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳು ಮುಂದುವರಿದಿದ್ದು, ದೇಶದಲ್ಲಿ ಇಂತಹ ಸ್ವಚ್ಛ, ಸೌಹಾರ್ದತೆಯ ಮತ್ತೊಂದು ನಗರವನ್ನು ಕಾಣಲು ಸಾಧ್ಯವಿಲ್ಲ. ಇಂತಹ ನಾಡಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವುದು ಬ್ರ್ಯಾಂಡ್ ಮಂಗಳೂರಿಗೆ ಮತ್ತಷ್ಟು…
ಈಚೆಗೆ ವಿಶ್ವ ಬಂಟ ಸಮ್ಮೇಳನದಲ್ಲಿ ನಿರುದ್ಯೋಗ ಸಮಸ್ಯೆ ಕೇಂದ್ರೀಕರಿಸಿ ಒಂದು ವಿಚಾರಗೋಷ್ಠಿ ನಡೆದಿತ್ತು. ಅದರಲ್ಲಿ ಖ್ಯಾತ ಉದ್ಯಮಿಗಳು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಅವರೆಲ್ಲರೂ ಮಂಡಿಸಿದ ಒಂದು ಸಮಾನ ವಿಚಾರವೆಂದರೆ – ಈಗಿನ ಸುಶಿಕ್ಷಿತ ಪದವೀಧರರಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲಗಳಿಲ್ಲ ಎಂಬುದು! ನಮ್ಮ ಮಕ್ಕಳು ಉನ್ನತ ಶಿಕ್ಷಣ ಮಾಡಿ ದೊಡ್ಡ ದೊಡ್ಡ ಪದವಿಗಳನ್ನು ಪಡೆದುಕೊಂಡಿರುತ್ತಾರೆ. ಉತ್ತಮ ಅಂಕ ಪಟ್ಟಿಯೂ ಅವರಲ್ಲಿದೆ. ಆದರೆ ಕಲಿತ ವಿಷಯದಲ್ಲಾಗಲೀ, ಉದ್ಯೋಗಕ್ಕೆ ಅಗತ್ಯವಿರುವ ವಿಷಯದಲ್ಲಾಗಲೀ ಅವರಲ್ಲಿ ಕೌಶಲ ಇರುವುದಿಲ್ಲ. ಆದ್ದರಿಂದಲೇ ಕಂಪೆನಿಗಳಲ್ಲಿ ಉದ್ಯೋಗ ಖಾಲಿ ಇದ್ದರೂ ಸೂಕ್ತ ಅಭ್ಯರ್ಥಿಗಳು ಸಿಗದೆ ಅವುಗಳನ್ನು ತುಂಬಿಸಲಾಗುತ್ತಿಲ್ಲ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಕೆಲವರನ್ನು ಉದ್ಯೋಗಕ್ಕೆ ಸೇರಿಸಿಕೊಂಡ ಬಳಿಕ ತಮಗೆ ಬೇಕಾದಷ್ಟು ತರಬೇತಿ ಕೊಟ್ಟು ಕೆಲಸ ಮಾಡಿಸುತ್ತೇವೆ ಎಂಬುದು ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯವಾಗಿತ್ತು. ಇಂದು ಎಂಜಿನಿಯರಿಂಗ್ ಸಹಿತ ಬೇರೆ ಬೇರೆ ಉನ್ನತ ಕೋರ್ಸ್ ಮಾಡಿದವರಿಗೆ ಕೊರತೆಯಿಲ್ಲ. ಜತೆಗೆ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗವೂ ಇದೆ. ಕೆಲವರು ತಾವು ಮಾಡಿರುವ ಕೋರ್ಸ್ ಬಿಟ್ಟು ಬೇರೆಯೇ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುತ್ತಾರೆ.…
ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳು, ಕೆಂಪುಕಲ್ಲು ಹಾಗೂ ಇತರೆ ಖನಿಜಗಳ ಗಣಿಗಾರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಅರುಣ್ .ಕೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಗಿರೀಶ್. ಆರ್ ಉಪಸ್ಥಿತರಿದ್ದರು.
ಉದ್ಯೋಗ ಅರಸಿ ದೂರದ ಮುಂಬಯಿಗೆ ತೆರಳಿ ಉದ್ಯೋಗದೊಂದಿಗೆ ಗಳಿಕೆಯ ಒಂದಂಶವನ್ನು ಸಮಾಜದ ಏಳಿಗೆಗಾಗಿ ಮೀಸಲಿಡುವ ಶಿವಾಯ ಫೌಂಡೇಶನ್ ಸದಸ್ಯರ ಕಾರ್ಯ ಅನುಕರಣೀಯ ಎಂದು ಆಸ್ಪೆನ್ ಎಸ್ಇಝಡ್ ಮಹಾ ಪ್ರಬಂಧಕ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು. ಪಡುಬಿದ್ರಿ ಬಂಟರ ಭವನದ ಕೃಷ್ಣ ಸುಧಾಮ ಸಭಾಂಗಣದಲ್ಲಿ ಮುಂಬಯಿ ಶಿವಾಯ ಫೌಂಡೇಶನ್ ವತಿಯಿಂದ ನಡೆಸಲಾದ ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ ಶೆಟ್ಟಿ ಮಾತನಾಡಿದರು. ವೇ. ಮೂ. ಹೆಜಮಾಡಿ ಹರಿದಾಸ ಭಟ್ ಆಶೀರ್ವಚನ ನೀಡಿದರು. ಪಡುಬಿದ್ರಿ ಪಿಎಸ್ಐ ಪ್ರಸನ್ನ ಎಂ. ಎಸ್. ಶುಭ ಹಾರೈಸಿದರು. ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ…
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮಪಂಚಾಯತ್ ನಲ್ಲಿ ಎರಡನೇ ಅವಧಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಭಾರತಿ ಸುರೇಶ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಕುವೆಟ್ಟು ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಜನಪ್ರಿಯರಾಗಿರುವ ಭಾರತಿ ಶೆಟ್ಟಿಯವರು ಮುಂಬೈಯ ಥಾಣೆ ಬಂಟ್ಸ್ ನ ಸದಸ್ಯರಾದ ಹೋಟೆಲ್ ಉದ್ಯಮಿ ಸುರೇಶ್ ಕೆ ಶೆಟ್ಟಿಯವರ ಧರ್ಮಪತ್ನಿಯಾಗಿರುತ್ತಾರೆ.
ತುಳುವರ ಆದಿಮೂಲದ ದೈವ ಬೆರ್ಮೆರ್ ಯಾರು? ದೇವರು ಹಾಗೂ ದೇವೆರ್ ಎಂಬ ಎರಡೂ ಪದಗಳೂ ಸಂಸ್ಕೃತ ಜನ್ಯ. ಹಾಗಿದ್ದರೆ ತುಳುವರು ದೇವ ಅಥವಾ ದೇವರು ಎಂಬ ಪದಕ್ಕೆ ಸಂವಾದಿಯಾಗಿ ಯಾವ ಪದವನ್ನು ಬಳಸುತ್ತಿದ್ದರು? ಮತ್ತು ಅದ್ಯಾಕೆ ದಿನಬಳಕೆಯಲ್ಲಿ ಇಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಎಂದರೆ ತುಳುನಾಡಿನ ಅದಿಮೂಲದ ದೈವ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದೇ ಆಗಿದೆ. ನನ್ನ ಊರು ಐವರ್ನಾಡಿನಲ್ಲಿ ಇರುವ ಎರಡು ಪ್ರದೇಶಗಳ ಹೆಸರು ಸ್ಥಳನಾಮೆಗಳ ಬಗ್ಗೆ ಓದುವಾಗ ಕುತೂಹಲವನ್ನು ಮೂಡಿಸಿದ್ದವು. ಬಿರ್ಮುಕಜೆ ಮತ್ತು ಬೆಮ್ಮಿತ್ತಿಕಂಡ. ಈ ಎರಡೂ ಪದಗಳನ್ನು ಸರಳವಾಗಿ ನಾವು ಬಿಡಿಸಬಹುದು. ಬಿರ್ಮುಕಜೆ – ಬಿರ್ಮರೆ ಕಜೆ ಬೆಮ್ಮಿತ್ತಿಕಂಡ – ಬೆರ್ಮೆರ್ ಇತ್ತಿ ಕಂಡ. ಈ ಎರಡೂ ಪ್ರದೇಶಗಳೂ ಬೆರ್ಮೆರ್ ಎಂಬ ದೈವದ ನೆಲೆಗಳೇ ಅಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಎರಡೂ ಪ್ರದೇಶಗಳಲ್ಲಿ ಈಗ ಬೆರ್ಮೆರ್ ಗೆ ಸಂಬಂಧಿಸಿದ ಆಚರಣೆಗಳು ನಡೆಯುತ್ತಿಲ್ಲ. ಹಾಗಾದರೆ ಈ ಬೆರ್ಮೆರ್ ಎಲ್ಲಿ ಹೋದರು? ಬೆರ್ಮೆರ್ ಅಥವಾ…
ಮುಂಬಯಿ (ಆರ್ಬಿಐ), ಮಾ.01: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡುತ್ತಿರುವ 2023ನೇ ಸಾಲಿನ ಮಲಬಾರ್ `ವಿಶ್ವರಂಗ’ ಪುರಸ್ಕಾರಕ್ಕೆ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ. ಮುಂಬಯಿ ಅಲ್ಲಿನ ಹಿರಿಯ ರಂಗನಟ ಮೋಹನ್ ಮಾರ್ನಾಡ್(ಹೊರ ರಾಜ್ಯ), ಮೂರ್ತಿ ದೇರಾಜೆ (ರಂಗ ನಿರ್ದೇಶಕರು), ಶೋಭಾ ವೆಂಕಟೇಶ್ , ಬೆಂಗಳೂರು (ಮಕ್ಕಳ ರಂಗಭೂಮಿ) , ಎಂ.ಎಸ್. ಭಟ್ ಉಡುಪಿ ( ರಂಗ ನಟ), ಪ್ರಕಾಶ್ ನೊರೋನ್ಹ ಪಾಂಬೂರು (ರಂಗ ಸಂಘಟಕರು) ಇವರು ಆಯ್ಕೆ ಆಗಿದ್ದಾರೆ. ಮಾರ್ಚ್ 26ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಸುತ್ತಿರುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ `ಮಲಬಾರ್ ವಿಶ್ವರಂಗ ಪುರಸ್ಕಾರ-2023′ ಪ್ರದಾನ ಮಾಡಿ ಗೌರವಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ದೈವರಾಧನೆ, ಆತ್ಮಗಳ ಆರಾಧನೆಗಳಿಗೆ ಸಂಬಂಧ ಪಟ್ಟ ಕುರುಹುಗಳನ್ನು ನಾವು ವೇದ ಪೂರ್ವ ಕಾಲದ ಸಿಂಧೂ ನಾಗರಿಕತೆಯಲ್ಲಿ ಕಾಣಬಹುದು. ಸಿಂಧು ಸಂಸ್ಕೃತಿಯ ಕಾಲ, ಸಿಂಧು ಸಂಸ್ಕೃತಿಗೆ ನಾಗರಿಕತೆ ಹರಡಿದ್ದು ದಕ್ಷಿಣದಿಂದ ಎಂಬ ಮಾತಿನ ಪ್ರಕಾರದಂತೆ ನೋಡುವಾಗ ದಕ್ಷಿಣದಿಂದ ಹರಡಿದ್ದ ಸಿಂಧು ಸಂಸ್ಕೃತಿಯು ದ್ರಾವಿಡ ಹಾಗು ಆರ್ಯ ಸಂಸ್ಕೃತಿಯಿಂದ ಪೂರ್ವದ್ದು. ಆನಂತರ ಭಾರತದಲ್ಲಿ ಹಲವಾರು ಬದಲಾವಣೆಗಳು ಆದವು. ಅವುಗಳಲ್ಲಿ ಧಾರ್ಮಿಕತೆಗೆ ಪ್ರಾಧಾನ್ಯತೆ ಉಳ್ಳ ಭಕ್ತಿ ಪಂಥಗಳು ಉದಯಿಸಿದವು. ಅದುವೆ “ಆಳುಪರ” ಕಾಲ, ಈ ಕಾಲದಲ್ಲಿ ರಾಜ ಕುಟುಂಬಗಳು ಧಾರ್ಮಿಕತೆಗೆ ಹಾಗೂ ದೈವಾರಾಧನ ಪದ್ಧತಿಗಳಿಗೆ ಒತ್ತು ನೀಡಿದ್ದವು. ಈ ಆಳುಪರು ತುಳುನಾಡನ್ನು ಕ್ರಿ.ಶ 2ನೆ ಶತಮಾನದಿಂದ ಕ್ರಿ.ಶ 7ನೆ ಶತಮಾನದವರೆಗೆ, ತುಳುನಾಡಿನ ಯಾವುದೇ ಆರಾಧನಾ ಪದ್ಧತಿಗಳಿಗೆ ಒಂದಿಷ್ಟು ಚ್ಯುತ್ತಿ ಬಾರದಂತೆ ಸ್ವತಂತ್ರವಾಗಿ ಆಳಿದರು. ನಂತರದ ಕ್ರಿ.ಶ 7 ರಿಂದ ಕ್ರಿ.ಶ 12 ನೇ ಶತಮಾನದ ತನಕ ಈ ಆಳುಪರು “ಕದಂಬರ” ಸಾಮಂತರಾಗಿ ತುಳುನಾಡನ್ನು ಆಳಿದರು. ಇವರೇ ತುಳುನಾಡಿನ ಬಂಗ, ಚೌಟ, ಅಜಿಲ, ಕಾಜವ, ಶೇನವ ಮುಂತಾದವರು.…
ಮೂಡುಬಿದಿರೆ: ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಮೂಲಕ ಅನನ್ಯವಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜು 2023-24ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಕಾಲೇಜಿಗೆ 2023-24ರಿಂದ ಮುಂದಿನ ಹತ್ತು ವರ್ಷಗಳಿಗೆ ಅನ್ವಯವಾಗುವಂತೆ ಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) 2023ರ ಮೇ 31ರಂದು ಮಂಗಳೂರು ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಅನ್ವಯ ಮಂಗಳೂರು ವಿಶ್ವವಿದ್ಯಾಲಯವು ವಿದ್ಯಾವಿಷಯಕ ಪರಿಷತ್ ಸಮಾಲೋಚನೆಯೊಂದಿಗೆ ಸಿಂಡಿಕೇಟ್ ಮಾಡಿರುವ ಶಿಫಾರಸ್ಸು ಅನುಸರಿಸಿ ಸ್ವಾಯತ್ತ ಸ್ಥಾನಮಾನವನ್ನು ನೀಡಲು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸಹಮತ ಸೂಚಿಸಿ ಆದೇಶಿಸಿದೆ ಎಂದು ತಿಳಿಸಿದರು. ಮೌಲ್ಯಾಧಾರಿತ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರೆಯುವ ಕಾರಣ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಪದವಿಗಳನ್ನು ಇನ್ನಷ್ಟು ಕಾಲಬದ್ಧ…