Author: admin

ಯು.ಎ.ಇ ಬಂಟ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ಯುಎಇಯ ತುಳು ಕನ್ನಡಿಗರ ಜನಾನುರಾಗಿದ್ದ ದಿ. ದೇವೇಶ್ ಆಳ್ವರವರ ಸಂತಾಪ ಸೂಚಕ ಕಾರ್ಯಕ್ರಮವು ಜ.14 ರಂದು ನಗರದ ಬರ್ ದುಬೈಯ ಫಾರ್ಚೂನ್ ಅಟ್ರ್ಯೂಂ ಹೋಟೆಲ್ ರೂಫ್ ಟವರ್ ನಲ್ಲಿ ನಡೆಯಿತು. ಡಿ.30 ರಂದು ದುಬಾಯಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದೇವೇಶ್ ಆಳ್ವರವರ ಯುಎಇಯಲ್ಲಿ ಇರುವ ನೂರಾರು ಆತ್ಮೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತ್ಮೀಯ ಮಿತ್ರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಮೊದಲಿಗೆ ಯುಎಇಯ ಬಂಟ್ಸ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮಾತನಾಡುತ್ತಾ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿ ದೇವರ ಪಾದ ಸೇರಿದ ದೇವೇಶ್ ರವರು ನಮ್ಮ ಮುಂದೆ ಈಗಲೂ ಇದ್ದಾರೆ. 2001 ರಂದು ದುಬಾಯಿಗೆ ಬಂದು ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಊರಿನ ಯುವಕರಿಗೆ ಉದ್ಯೋಗದಾತರಾಗಿದ್ದರು. ಯುಎಇ ಬಂಟ್ಸ್ ಸಂಘದ ಪ್ರಧಾನ ಕಾರ್ಯದರ್ಶಿಯಾದ ಮೇಲೆ ‌ಹಲವಾರು ಕಾರ್ಯಕ್ರಮಗಳ ಯಶಸ್ವಿಗೆ ಕಾರಣಕರ್ತರಾಗಿದ್ದರು. ಬಂಟ ಕ್ರೀಡಾ ಅಭಿಮಾನಿಗಳಿಗೆ…

Read More

ಸುಳ್ಯ ತಾಲೂಕಿನ ಬೆಳ್ಳಾರೆಯ ಬಜನಿಗುತ್ತು ನಿವಾಸಿ ಜಗನ್ನಾಥ್ ರೈಯವರು ಸುಪರಿಂಡೆಂಟ್ ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿದ್ದಾರೆ. ಜಗನ್ನಾಥ ರೈಯವರು ಬಜನಿಗುತ್ತು ರಾಮಯ್ಯ ರೈ ಹಾಗೂ ಕುಸುಮಾವತಿ ದಂಪತಿಯ ಪುತ್ರ. ಬೆಳ್ಳಾರೆ ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ಎಸ್ಎಸ್ಎಲ್ ಸಿ ವಿದ್ಯಾಭ್ಯಾಸ ಮುಗಿಸಿ, ನಂತರ ಪಿಯುಸಿ ಹಾಗೂ ಡಿಗ್ರಿ ವಿದ್ಯಾಭ್ಯಾಸವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು. 1996 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇರ್ಪಡೆಗೊಂಡ ಜಗನ್ನಾಥ್ ರೈಯವರು, ನಂತರ ಇನ್ಸ್ ಪೆಕ್ಟರ್, ಸರ್ಕಲ್ ಇನ್ಸ್ ಪೆಕ್ಟರ್ ಆಗಿ ತದನಂತ ಡಿವೈಎಸ್ಪಿ ಯಾಗಿ ಸಿಸಿಬಿ ಎಸಿಪಿಯಾಗಿ, ಇದೀಗ ಬೆಂಗಳೂರಿನ ಗುಪ್ತಚಾರ ವಿಭಾಗದ ಎಸ್ಪಿಯಾಗಿ ಪದೋನ್ನತಿ ಹೊಂದಿದ್ದಾರೆ.

Read More

ಮುಂಬಯಿ (ಆರ್ ಬಿ ಐ), ಸೆ.08: `ಮನಸ್ಸಿಗೆ ವಯಸ್ಸಾಗಬಾರದು, ದೇಹಕ್ಕೆ ವಯಸ್ಸಾಗೋದು ಸಹಜ, ಚಿಂತನ ಮಂಥನದಿಂದ ಮನಸ್ಸನ್ನು ಸದಾ ಯೌವನವಾಗಿಡಲು ಸಾದ್ಯವಿದೆ. ಕವನಗಳು, ಸುಲಭ ತುತ್ತಿನಲ್ಲಿ ಜೀರ್ಣವಾಗಬೇಕೆಂದೇನಿಲ್ಲ, ಕವನವನ್ನು ಅರ್ಥೈಸಿ ಕೊಳ್ಳುವುದಕೊಸ್ಕರ, ಅದನ್ನ ಮತ್ತೆಮತ್ತೆ ಓದಬೇಕೆನ್ನುವ ಮನೋಭಿಲಾಷೆ ಹುಟ್ಟು ಹಾಕಿದರೆ, ಕವನದ ಮಂಥನ ಸಾಧ್ಯವಾಗುತ್ತದೆ. ಕಾವ್ಯ ಬರೇ ಕನ್ನಡಿಯಲ್ಲಿರುವ ಪ್ರತಿಬಿಂಬವಷ್ಟೆ ಆಗದೆ, ಅದು ಸಮಾಜಕ್ಕೆ ಬೆಳಕನ್ನು ಚೆಲ್ಲುವ ಸಾಧನವಾದರೆ ಅದೇ ಕಾವ್ಯದ ಸಾರ್ಥಕತೆ’ ಎಂದು ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ನಾಡಿನ ಶ್ರೇಷ್ಠ ಕವಿ ಸುಬ್ರಾಯ ಚೊಕ್ಕಾಡಿ ನುಡಿದರು. ಐಲೇಸಾ-ದಿ ವಾಯ್ಸ್ ಆಫ್ ಓಷನ್ (ರಿ). ಡಿಜಿಟಲ್ ಸಂಸ್ಥೆ ತನ್ನ ಎರಡನೇ ಹುಟ್ಟುಹಬ್ಬದ ಶುಭಾವಸರದಲ್ಲಿ ಕಳೆದ ಭಾನುವಾರ ಸುಳ್ಯ ಹಳೇ ಗೇಟು ಅಲ್ಲಿನ ಚೊಕ್ಕಾಡಿ ಅವರ `ಪ್ರಕೃತಿ’ ನಿವಾಸ, ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ಇಲ್ಲಿ ಆಯೋಜಿಸಿದ್ದ `ವಯೋ ಸಮ್ಮಾನ್’ ವಿಶಿಷ್ಟ ಗೌರವ ಸ್ವೀಕರಿಸಿ ಚೊಕ್ಕಾಡಿ ಮಾತನಾಡಿದರು. ಐಲೇಸಾ ತಂಡವು ಸುಬ್ರಾಯ ಚೊಕ್ಕಾಡಿ ಅವರ 83ನೆ ವಯೋನಡಿಗೆಯ ಸ್ಮರಣಾರ್ಥ, ಕಾವ್ಯ…

Read More

ಬಂಟ್ವಾಳದ ಬಂಟರ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಂಟರ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಸ್ವರ್ಧಿಸಿ ಮಹಿಳೆಯರ ವಿಭಾಗದ ತ್ರೋಬಾಲ್ ಸ್ವರ್ಧೆಯಲ್ಲಿ ಅತ್ತ್ಯುತ್ತಮವಾಗಿ ಆಟವಾಡಿ ಹಲವು ಬಲಿಷ್ಠ 14 ತಂಡಗಳು ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಸ್ವರ್ಧೆ ನೀಡಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ. ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ಭಂಡಾರಿ ನೇತೃತ್ವದ ಪುತ್ತೂರು ಬಂಟರ ಸಂಘದ ಮಹಿಳಾ ವಿಭಾಗದ ತಂಡದಲ್ಲಿ ನಾಯಕತ್ವವನ್ನು ದೀಕ್ಷಾ ರೈ ಪಟ್ಟೆಯವರು ವಹಿಸಿಕೊಂಡಿದ್ದರು. ಅವನಿ ರೈ, ಖುಷಿ ರೈ, ವೈಷ್ಣವಿ ರೈ, ಸಾಕ್ಷಿ ರೈ, ರೇಖಾ ರೈ, ಶಾಂಭವಿ ರೈ, ಶ್ವೇತ ರೈ, ಧನ್ವಿ ರೈಯವರು ಭಾಗವಹಿಸಿದ್ದರು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಪದಾಧಿಕಾರಿಗಳು ಸಹಕಾರ ನೀಡಿದರು. ರಾಷ್ಟ್ರೀಯ ಕ್ರೀಡಾಪಟು, ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮನಾಥ ಶೆಟ್ಟಿ ಕಾವುರವರು ಕ್ರೀಡಾಪಟುಗಳಿಗೆ ತರಬೇತು ನೀಡಿದರು.

Read More

ವಿದ್ಯಾಗಿರಿ: ‘ನಮ್ಮನ್ನು ನಾವು ಮೊದಲು ಗಮನಿಸಬೇಕು. ಜೀವನವನ್ನು ಸಕಾರಾತ್ಮಕವಾಗಿ ಅನುಭವಿಸಬೇಕು’ಎಂದು ಉಡುಪಿ ಡಾ.ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಹಾಗೂ ಖ್ಯಾತ ಮಾನಸಿಕ ರೋಗತಜ್ಞ ಡಾ.ಪಿ.ವಿ. ಭಂಡಾರಿ ಹೇಳಿದರು. ಆಳ್ವಾಸ್ ಕಾಲೇಜು ಸಮಾಜಕಾರ್ಯ ವಿಭಾಗವು ಕುವೆಂಪು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ‘ಸ್ಪಟಿಕಾ ಫೋರಂ-2023-24’ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದ ಅವರು, ಸಮಾಜಕಾರ್ಯ ಪದವೀಧರರಿಗೆ ಸಮುದಾಯದ ಮಾನಸಿಕ ಆರೋಗ್ಯದ ಕುರಿತು ಕೆಲಸ ಮಾಡಲು ಹೆಚ್ಚಿನ ಅವಕಾಶಗಳಿವೆ. ಮಾನಸಿಕ ಆರೋಗ್ಯದ ಸಮಸ್ಯೆಗೆ ಒತ್ತಡ ಪ್ರಮುಖ ಕಾರಣ. ಇದನ್ನು ನಿವಾರಿಸಲು ನಾಲ್ಕು ಘಟ್ಟಗಳಿವೆ. ಮೊದಲಿಗೆ ನಿಮಗಿರುವ ಒತ್ತಡವನ್ನು ಅರಿತುಕೊಳ್ಳಿ. ನಿಮಗೆ ಒತ್ತಡ ಇದೆ ಎಂದು ಒಪ್ಪಿಕೊಳ್ಳಿ. ಆ ಒತ್ತಡ ಯಾಕೆ, ಹೇಗಿದೆ ಎಂಬುದನ್ನು ವಿಶ್ಲೇಷಿಸಿಕೊಳ್ಳಿ. ಬಳಿಕ ಅದನ್ನು ನಿವಾರಿಸಲು ನಿಮ್ಮ ಕಾರ್ಯ ಯೋಜನೆಯನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇಂದು ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಹಾಗೂ ತಿಳುವಳಿಕೆ ಅತೀ ಕಡಿಮೆ. ಸಾಮಾನ್ಯವಾಗಿ ಜನರು ತಮ್ಮ…

Read More

ಸುಂದರ ಬದುಕು ಪ್ರತಿಯೊಬ್ಬರ ಕನಸಾಗಿದೆ. ಅದನ್ನು ಸಾರ್ಥಕಗೊಳಿಸುವುದು ಅವರವರ ಕೈಯಲ್ಲಿದೆ. ಆ ಕನಸು ನನಸಾಗಬೇಕಾದರೆ ನಮ್ಮನ್ನು ಚಿಂತೆ, ಖೇದ, ದುಗುಡದಂತಹ ಋಣಾತ್ಮಕ ಭಾವಗಳು ಬಾಧಿಸಬಾರದು. ಪ್ರತಿಯೊಬ್ಬರಿಗೂ ಅವರದೇ ಆದ ಭಾವನಾ ಲೋಕವಿರುವುದರಿಂದ ಆಸೆಗಳು, ಆಚಾರ- ವಿಚಾರಗಳು, ಕಾರ್ಯ ವೈಖರಿಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತವೆ. ನಮ್ಮ ಖುಷಿ, ನೆಮ್ಮದಿ, ದುಃಖಗಳೆಲ್ಲವೂ ಸುತ್ತಲಿನ ಜನರು, ಪರಿಸ್ಥಿತಿಗಳನ್ನು ಅವಲಂಬಿಸಿರುತ್ತವೆ. ಹೀಗಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಕುಟುಂಬದ ಸದಸ್ಯರು, ಸಹಪಾಠಿಗಳು, ಸಹೋದ್ಯೋಗಿಗಳು ಮತ್ತು ನೆರೆಕರೆಯವರ ಜತೆ ಉತ್ತಮ ಒಡನಾಟ ಹೊಂದುವುದರಿಂದ ನಾವು ಸಂತೋಷವಾಗಿ ರುತ್ತೇವೆ. ಇವರೆಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೆ ಮನಸ್ಸು ನೆಮ್ಮದಿಯಿಂದ ಇರುವುದಿಲ್ಲ. ಪರಸ್ಪರರಲ್ಲಿ ಸಮಾನ ಹಿತಾಸಕ್ತಿಗಳು, ಆಲೋಚನೆಗಳು, ಭಾವನೆಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಹಾಗಾಗಬೇಕಾದರೆ ಇನ್ನೊಬ್ಬರ ಭಾವನೆಗಳಿಗೆ ಬೆಲೆ ನೀಡಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಬಾಂಧವ್ಯ ಗಟ್ಟಿಯಾದಂತೆ ಅವರ ಬಗ್ಗೆ ನಮ್ಮಲ್ಲಿ ನಂಬಿಕೆ ಮೂಡಿ ವಿಶ್ವಾಸ ಹೆಚ್ಚುತ್ತದೆ. ಇದರಿಂದ ನಮ್ಮಲ್ಲಿ ಸಹಜವಾಗಿ ಧೈರ್ಯದ ಮನೋಭಾವ ಮೂಡಿ ಎಂಥ ಪರಿಸ್ಥಿತಿಯನ್ನು ಎದುರಿಸಬಲ್ಲೆವು ಎಂಬ ಛಾತಿ…

Read More

ಬಂಟರ ಸಂಘ ಪುಣೆ ಇದರ ಯುವ ವಿಭಾಗದ ವತಿಯಿಂದ ಬಂಟ ಸಮಾಜ ಬಾಂಧವರಿಗಾಗಿ ಬಂಟ್ಸ್ ಬಾಕ್ಸ್ ಕ್ರಿಕೆಟ್ ಲೀಗ್ ಸೀಸನ್ 3 ರ ಬಾಕ್ಸ್ ಕ್ರಿಕೆಟ್ ಪಂದ್ಯಾಟವು ಜ 13 ರಂದು ಗ್ರೀನ್‌ ಬಾಕ್ಸ್ ಟರ್ಫ್, ಬಂಡಾರ್ಕರ್ ಇನ್ಸ್ಟಿಟ್ಯೂಟ್, ಲಾ ಕಾಲೇಜು ರೋಡ್ ಪುಣೆ ಇಲ್ಲಿ ಜರಗಿತು. ಪುಣೆ ಬಂಟರ ಸಂಘದ ಯುವ ವಿಬಾಗದ ಕಾರ್ಯಾಧ್ಯಕ್ಷ ಉದಯ್ ಜೆ ಶೆಟ್ಟಿ ಮತ್ತು ಯುವ ಸಮಿತಿಯ ನೇತೃತ್ವದಲ್ಲಿ ನಡೆದ ಈ ಬಾಕ್ಸ್ ಕ್ರಿಕೆಟ್ ಪಂದ್ಯಾಟಕ್ಕೆ ಮುಖ್ಯ ಅತಿಥಿಗಳಾಗಿ ಅಗಮೀಸಿದ್ದ ಪುಣೆ ಕನ್ನಡ ಸಂಘದ ಅಧ್ಯಕ್ಷ ಶ್ರೀ ಕುಶಾಲ್ ಹೆಗ್ಡೆ, ಗೌರವ ಅತಿಥಿಗಳಾದ ಪುಣೆ ಬಂಟರ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಉಪಸ್ಥಿತರಿದ್ದು ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಪ್ರಮುಖರಾದ ಚಂದ್ರಹಾಸ್ ಶೆಟ್ಟಿ ಎರ್ಮಾಳ್, ಪ್ರವೀಣ್ ಶೆಟ್ಟಿ ಪುತ್ತೂರು, ಅಜಿತ್ ಹೆಗ್ಡೆ, ಸುಲತಾ ಎಸ್.ಶೆಟ್ಟಿ, ಶಮ್ಮಿ ಎ ಹೆಗ್ಡೆ, ದಿನೇಶ್…

Read More

ಜೀವನದಲ್ಲಿ ಉನ್ನತ ಧ್ಯೇಯ, ಕಠಿಣ ಪರಿಶ್ರಮ, ಸಾಧನೆಯ ಛಲ, ನಡೆ ನುಡಿಯಲ್ಲಿ ಪ್ರಾಮಾಣಿಕತೆ ಇವುಗಳು ಜೀವನದ ಯಶಸ್ಸಿನ ಗುಟ್ಟು ಎನ್ನುವುದು ಸರ್ವೇಸಾಮಾನ್ಯವಾದ ಮಾತು. ಆದರೆ ಇದೆಲ್ಲವನ್ನೂ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು, ಮುನ್ನಡೆದು ಸಾಧಕರಾಗಿ ಕಾಣ ಸಿಗುವವರು ವಿರಳ. ಇಂತವರ ಸಾಲಿನಲ್ಲಿ ವಿಶೇಷವಾಗಿ ಕಂಡುಬರುವ ಭಿವಂಡಿ ಬದ್ಲಾಪುರ ಪರಿಸರದಲ್ಲಿ ವೃತ್ತಿಯಲ್ಲಿ ನಿಪುಣರಾಗಿ, ಸಮಾಜ ಸೇವಕರಾಗಿ, ಜನಾನುರಾಗಿಯಾಗಿ ತುಳು ಕನ್ನಡಿಗರಲ್ಲಿ ಅನ್ಯೋನ್ಯತೆಯೊಂದಿಗೆ ಬೆರೆತು ಬಾಳುವ, ಯಾವುದೇ ಪ್ರಚಾರವನ್ನು ಬಯಸದೇ, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ವ್ಯಕ್ತಿತ್ವವೆಂದರೆ ಅದು ಸುಭೋದ್ ಭಂಡಾರಿಯವರು. ಎಡಗೈಯಲ್ಲಿ ನೀಡಿದ್ದು ಬಲಗೈಗೆ ತಿಳಿಯಬಾರದು ಎನ್ನುವ ಮನೋಧರ್ಮವನ್ನು ರೂಢಿಸಿಕೊಂಡು ಯಾರೇ ನೆರವಿಗೆ ಬಂದರೂ ತನ್ನಿಂದಾದ ಸಹಾಯ ಮಾಡಿ ಪರೋಪಕಾರ ಧರ್ಮದಲ್ಲಿ ಧನ್ಯತೆಯನ್ನು ಕಾಣುವ ಇವರ ಮುಖದಲ್ಲಿ ಸದಾ ಮಂದಹಾಸ, ಮೃದು ಮಾತು ಎಲ್ಲರನ್ನೂ ಸ್ನೇಹಭಾವದಿಂದ ಕಾಣುವ ಇವರ ಸ್ವಭಾವ ಎಂತಹವರನ್ನೂ ಆಕರ್ಷಿಸದೆ ಇರದು. ಶ್ರೀ ಸುಭೋದ್ ಭಂಡಾರಿಯವರು ತಮ್ಮ ವೃತ್ತಿಯನ್ನು ಹೋಟೆಲಿನಲ್ಲಿ ಪ್ರಾರಂಭಿಸಿ, ಪ್ರಸ್ತುತ ಹೋಟೆಲು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬಯಿ ಬಂಟರ ಸಂಘದ ಭಿವಂಡಿ…

Read More

ಸೋಲಿನ ಮೂಲಕವೇ ಗೆಲುವಿನ ಮೆಟ್ಟಿಲು ಸುಲಭವಾಗುತ್ತದೆ. ನಾನು ಕೂಡ ಬಹಳಷ್ಟು ಸ್ಪರ್ಧೆಗಳಲ್ಲಿ ಸೋಲು ಕಂಡಿದ್ದೇನೆ. ಆದರೆ ಸೋಲಿಗೆ ಹೆದರಿ ನನ್ನ ಕನಸನ್ನು ಸಾಕಾರ ಮಾಡುವ ಬಗ್ಗೆಯೇ ಯೋಚಿಸುತ್ತಿದ್ದೆ. ಇದರ ಪರಿಣಾಮವೇ ಇಂದಿನ ಫಲಿತಾಂಶ ಎನ್ನುತ್ತಾರೆ ಮಿಸ್ ಇಂಡಿಯಾ ಯುನಿವರ್ಸ್ – 2022 ಆಗಿ ಆಯ್ಕೆಗೊಂಡ ಮಂಗಳೂರು ಮೂಲದ ದಿವಿತಾ ರೈ. ಮಿಸ್ ಯಿನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ದಿವಿತಾ ರೈ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ಬಂಟ್ಸ್ ಹಾಸ್ಟೆಲ್ ನ ಗೀತಾ ಎಸ್. ಎಂ ಶೆಟ್ಟಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಹುಟ್ಟೂರ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸೋಲು ಸಾಮಾನ್ಯ. ಇದಕ್ಕಾಗಿ ಭಯ ಬೇಡ. ಹಿಂದೆ ಸರಿಯಲೂ ಬಾರದು. ಕನಸುಗಳ ಸಾಕಾರಕ್ಕಾಗಿ ಧೈರ್ಯದಿಂದ ಮುನ್ನುಗ್ಗುವ ಹಾಗೂ ವಿಶ್ವಾಸದಿಂದ ಗುರಿ ಮುಟ್ಟುವ ಮನೋಭಾವ ಬೇಕು. ಬಂಟರ ಸಮಾಜ ಹೋರಾಟದ ಮನೋಭಾವವನ್ನು ಮೈಗೂಡಿಸಿದೆ, ಇದೇ ಸಮುದಾಯದಲ್ಲಿ ಹುಟ್ಟಿದ ನಾನು…

Read More

ಬಂಟರ ಸಂಘ ಮುಂಬಯಿ ಇದರ ನೂತನ ಟ್ರಸ್ಟಿಯಾಗಿ ಸರ್ವಾನುಮತದಿಂದ ನೇಮಕಗೊಂಡಿರುವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿಯವರನ್ನು ಸೊಸೈಟಿಯ ಮಾಸಿಕ ಸಭೆಯಲ್ಲಿ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಯ ಉಪ ಕಾರ್ಯಾಧ್ಯಕ್ಷ ಡಾ ಆರ್ ಕೆ ಶೆಟ್ಟಿ, ಗೌರವ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಗೌರವ ಕೋಶಾಧಿಕಾರಿ ಸಿಎ ಹರೀಶ್ ಶೆಟ್ಟಿಯವರು ಗೌರವಿಸಿದರು. ಈ ಸಂದರ್ಭದಲ್ಲಿ ಮಾತೃಭೂಮಿ ಸೊಸೈಟಿಯ ನಿರ್ದೇಶಕರಾದ ಮಹೇಶ್ ಶೆಟ್ಟಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More