Author: admin
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಹೆಬ್ರಿ ಹಾಗೂ ಕಾರ್ಕಳ ಬಂಟರ ಸಂಘ ಹಾಗೂ ಕಾರ್ಕಳ ಮಹಿಳಾ ಬಂಟರ ಸಂಘ ಇವರುಗಳ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ ಮತ್ತು ಆಟಿಡೊಂಜಿ ಬಂಟ ಕೂಟ ಕಾರ್ಯಕ್ರಮವನ್ನು ದಿನಾಂಕ 13 -08-2023 ರಂದು ಆದಿತ್ಯವಾರ ಕಾರ್ಕಳದ ಬಂಟ್ಸ್ ಹಾಸ್ಟೆಲ್ ಅನಂತ ಶಯನ, ತೆಳ್ಳಾರು ರಸ್ತೆ ಇಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ಸಮಯಕ್ಕೆ ಸರಿಯಾಗಿ 9 ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಉದ್ಘಾಟನೆಯ ನಂತರ ಬಂಟರ ಸಾಂಸ್ಕೃತಿಕ ತರಬೇತುದಾರರಾದ ಸುಧೀಂದ್ರ ಜೆ. ಶಾಂತಿ ಇವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಇದೆ. ಬೆಳಗ್ಗಿನ ಉಪಹಾರದ ನಂತರ ಪುರುಷರಿಗೆ ವಾಲಿಬಾಲ್, ಹಗ್ಗ ಜಗ್ಗಾಟ ಹಾಗೂ ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ ಇತ್ಯಾದಿ ಹೊರಾಂಗಣ ಕ್ರೀಡೆಗಳು ಇವೆ. ಎಲ್ಲಾ ವಯೋಮಾನದ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಳಾಂಗಣ, ಮನೋರಂಜನ ಕ್ರೀಡೆಗಳಿವೆ. ಸ್ಥಳೀಯರಿಗೆ ಸಮುದಾಯ ಬಾಂಧವರಿಗೆ ಎಲ್ಲರಿಗೂ ಶ್ರೀ…
ಪ್ರಸ್ತುತ ಮಧುಮೇಹ ಹಾಗೂ ಅಧಿಕ, ಕಡಿಮೆ ರಕ್ತದೊ ತ್ತಡ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ದೈಹಿಕ ವ್ಯಾಯಮದ ಕೊರತೆ, ಅನಿಯಮಿತ ಆಹಾರ ಪದ್ಧತಿ, ಒತ್ತಡ, ಆತಂಕ, ಖನ್ನತೆ ಪ್ರಮುಖ ಕಾರಣಗಳಾಗಿವೆ. ಯೋಗ ಅಭ್ಯಾಸ ಮಾಡುವುದರಿಂದ ಖನ್ನತೆ, ಒತ್ತಡ ನಿವಾರಣೆಯಾಗಿ, ದೇಹದ ತೂಕ ಇಳಿಕೆಯಾಗುವುದರಿಂದ ಮಧುಮೇಹ ನಿಯಂತ್ರಣ ಬರುತ್ತದೆ. ಮಧುಮೇಹ ಹೊಂದಿರುವವರು ಯೋಗ ಮಾಡುವುದರಿಂದ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಯೋಗ ಒತ್ತಡವನ್ನು ನಿರ್ವಹಣೆ ಮಾಡುತ್ತದೆ. ಯೋಗ ಮಾಡುವುದರಿಂದ ಮೆದುಳಿನಲ್ಲಿ ನಿರ್ದಿಷ್ಟ ರಾಸಾಯನಿಕ ಸಮತೋಲನವನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. ಯೋಗ, ಪ್ರಾಣಾಯಾಮ, ಧ್ಯಾನ ಅಭ್ಯಾಸವನ್ನು ನಿರಂತರ ವಾಗಿ ಮಾಡುವುದರಿಂದ ಮಧುಮೇಹಿಗಳು ಮಾತ್ರೆಯಲ್ಲಿಯೇ ಸಕ್ಕರೆ ಮಟ್ಟ ನಿಯಂತ್ರಣ ಮಾಡಿಕೊಳ್ಳ ಬಹುದಾಗಿದ್ದು, ಕೃತಕ ಇನ್ಸುಲಿನ್ ಪಡೆದುಕೊಳ್ಳುವ ಆವಶ್ಯಕತೆ ಬರುವುದಿಲ್ಲ. ಮಾತ್ರೆಗಳ ಅತೀಯಾಗಿ ಸೇವಿ ಸುವ ಅಗತ್ಯವೂ ಇರುವುದಿಲ್ಲ. ಪ್ರಮುಖವಾಗಿ ಮಾನಸಿಕ ಒತ್ತಡ, ಖನ್ನತೆ, ತೂಕ ಇಳಿಯು ವಿಕೆ, ಬೊಜ್ಜು ಕರಗುವುದು, ಮೊಣಕಾಲು ನೋವು, ಮೊಣಕಾಲು ಚಿಪ್ಪು ಬದಲಾವಣೆಯಂತ ಸಮಸ್ಯೆಗಳು ನಿವಾರಣೆಯಾಗಲಿವೆ. ಮಧುಮೇಹಕ್ಕೆ ಸ್ಥೂಲಕಾಯ ಕೂಡ ಪ್ರಮುಖ…
ರಜತ ಮಹೋತ್ಸವದ ಸಂಭ್ರಮದಲ್ಲಿ ಮುಂಬಯಿಯಲ್ಲಿ ಶಿಕ್ಷಣಕ್ಕೊಂದು ಹೊಸ ಭಾಷ್ಯ ಬರೆದ ಬಂಟರ ಸಂಘದ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆ
ಹಚ್ಚ ಹಸುರಿನಿಂದ ಕಂಗೊಳಿಸುವ, ಕಣ್ಮನ ಸೆಳೆಯುವ ಪೆರುವಾಯಿಯ ನದಿಗೆ ಸಮೀಪವೇ ಇರುವ ಅರಮನೆಯಂತೆ ಕಂಗೊಳಿಸುವ ಸುಂದರ,ಸುಸಜ್ಜಿತ, ಕಣ್ಮನ ಸೆಳೆಯುವ ಬಂಟರ ಸಂಘ, ಮುಂಬಯಿ ಸಂಚಾಲಿತ ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆ ಬಂಟರ ಹೆಮ್ಮೆಯೂ ಹೌದು. ಈ ಶಿಕ್ಷಣ ಸಂಕುಲಕ್ಕೆ ಈಗ ಇಪ್ಪತ್ತೈದರ ಹರೆಯ. ದಿನಾಂಕ 22/1/23ರ ಆದಿತ್ಯವಾರ ಸಂಜೆ 5.30ರಿಂದ ಎಸ್.ಎಂ.ಶ್ಟ್ಟಿ ಶಿಕ್ಷಣ ಸಂಸ್ಥೆ ರಜತ ಸಂಭ್ರಮವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾಣಿ ಅಬ್ಬಕ್ಕನ ಕುರಿತ ಬ್ಯಾಲೆಟ್, ಕಿರು ಚಿತ್ರ, ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಹೀಗೆ ಭಿನ್ನ ರೀತಿಯ ಕಾರ್ಯಕ್ರಮದೊಂದಿಗೆ ಈ ಸಮಾರಂಭ ಅರ್ಥಪೂರ್ಣವಾಗಿ ನಡೆಯಲಿದೆ. ಆ ಪ್ರಯುಕ್ತ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆಯು ನಡೆದು ಬಂದ ಹಾದಿಯ ಅವಲೋಕನ ಈ ಕಿರು ಲೇಖನದಲ್ಲಿದೆ. ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಮಿನಿ ಭಾರತವೆಂದೇ ಜನಜನಿತವಾಗಿರುವ ಮುಂಬಯಿ ಮಹಾನಗರ ಭಾರತದ ಭಾಗ್ಯ ನಗರಿ ಎಂದರೆ ಉತ್ಪ್ರೇಕ್ಷೆಯಾಗಲಾರದು. ಮುಂಬೈ ನಮ್ಮ ದೇಶದ ಆರ್ಥಿಕ ರಾಜಧಾನಿ. ಈ ಮಹಾನಗರದಲ್ಲಿ ಜನರ…
ಗುರುಪುರ ಬಂಟರ ಮಾತೃ ಸಂಘ (ರಿ.) ವಾರ್ಷಿಕ ಮಹಾಸಭೆ-ಸಮಾವೇಶ-ಸನ್ಮಾನ ಕಾರ್ಯಕ್ರಮ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಸಂಘದಿಂದ ಉತ್ತೇಜನ : ಶ್ರೀ ವಜ್ರದೇಹಿ ಸ್ವಾಮೀಜಿ
ಮುಂಬಯಿ (RBI), ಜು.26: ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಉನ್ನತ ವ್ಯಾಸಂಗದ ಬಳಿಕ ಈ ಮಕ್ಕಳು ಕುಟುಂಬ, ಬಂಟ ಸಮಾಜ ಮತ್ತು ಸಂಘದ ಆಶೋತ್ತರಗಳೊಂದಿಗೆ ಕೈಮಿಲಾಯಿಸಬೇಕು. ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಇಂತಹ ಸಂಘಗಳ ವ್ಯವಸ್ಥೆ ಹಾಳು ಮಾಡುವ ಮಂದಿಯ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಶ್ರೀ ವಜ್ರದೇಹಿ ಮಠ ಗುರುಪುರ ಇದರ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ವಾಮಂಜೂರು ಇಲ್ಲಿನ ಚರ್ಚ್ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾದ ಗುರುಪುರ ಬಂಟರ ಮಾತೃ ಸಂಘ (ರಿ.) ಇದರ ವಾರ್ಷಿಕ ಮಹಾಸಭೆ, ವಾರ್ಷಿಕ ಸಮಾವೇಶ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿದರು. ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ದೀಪ ಪ್ರಜ್ವಲನೆಗೈದು ಮಾತನಾಡಿ ಎಲ್ಲ ಸ್ಥಳೀಯ ಬಂಟ ಸಂಘಗಳಿಗೆ ಮೂಲ ಮಂಗಳೂರಿನ ಮಾತೃ ಸಂಘ. ಮಾತೃ ಸಂಘಕ್ಕೆ…
ಯಕ್ಷಗಾನವನ್ನು ದೂರದಿಂದ ನೋಡುವಾಗ ಸುಲಭ ಎನಿಸುತ್ತದೆ. ಆದರೆ ಅದನ್ನು ಆರಾಧಿಸಿಕೊಂಡು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಚಾರ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು. ಅವರು ಶನಿವಾರ ಯಕ್ಷಧ್ರವ ಪಟ್ಲ ಫೌಂಡೆಶನ್ ಟ್ರಸ್ಟ್ ವತಿಯಿಂದ ನಡೆದ ಟ್ರಸ್ಟ್ಗೆ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾನು ಘಟ್ಟ ಪ್ರದೇಶದವನಾಗಿದ್ದರೂ ನಮ್ಮ ಪ್ರದೇಶದಲ್ಲಿ ಯಕ್ಷಗಾನವನ್ನು ದೈವಗಳಿಗೆ ಹರಿಕೆಯನ್ನು ಹೊತ್ತು ಅದನ್ನು ತೀರಿಸಲು ನಡೆಸಲಾಗುತ್ತದೆ. ಅದನ್ನು ಕೇವಲ ದೈವಾರಾಧನೆಗೆ ಎಂಬುವುದನ್ನು ಬಯಸುವ ಬದಲು ಅದರಲ್ಲಿನ ಕಲೆಯನ್ನು ಗುರುತಿಸಿ, ಅದರಲ್ಲಿನ ಶ್ರಮವನ್ನು ನಾವು ಗೌರವಿಸಬೇಕು ಎಂದರು. ದೇಶದಲ್ಲಿ ಕರ್ನಾಟಕವನ್ನು ಗುರುತಿಸುವಾಗ ಕಲೆಯಲ್ಲಿ ಮೊದಲು ಬರುವುದು ಯಕ್ಷಗಾನ ಎಂದ ಅವರು ತನ್ನ ಐಎಎಸ್ ತರಬೇತಿಯ ಸಂದರ್ಭದಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿದ್ದನ್ನು ನೆನೆಸಿಕೊಂಡರು. ಪಟ್ಲ ಯಕ್ಷಗಾನದ ಲಿಟಲ್ ಮಾಸ್ಟರ್ : ಸದಾಶಿವ ಶೆಟ್ಟಿ ಕನ್ಯಾನ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ತಮ್ಮ…
ಆಕೆ ಮನೆ ನಿರ್ಮಾಣ ಆರಂಭಿಸಿದ ನಂತರ ಒಂದಲ್ಲ ಒಂದು ತೊಂದರೆ ಆಗುತ್ತಲೇ ಇತ್ತು. 6 ತಿಂಗಳು ಆಗುವಾಗ ಅಪಘಾತ ಒಂದರಲ್ಲಿ ಗಂಡ ತೀರಿಕೊಂಡ. 3 ತಿಂಗಳಿರುವಾಗ ಹಾರ್ಟ್ ಅಟ್ಯಾಕ್ ಆಗಿ ತಂದೆ ತೀರಿಕೊಂಡರು. ಆಕೆ ಒಳ್ಳೆಯ ಉದ್ಯೋಗದಲ್ಲಿದ್ದರೂ ಮನೆ ನಿರ್ಮಾಣ ಮುಂದುವರಿಸುವುದು ಕಷ್ಟವಾದಾಗ ನಾದಿನಿ, ಸೊಸೆ, ಅತ್ತೆ, ಭಾವoದಿರು ಮನೆ ಕೆಲಸ ಸದ್ಯ ಸ್ಥಗಿತಗೊಳಿಸಲು ಹೇಳಿದ್ದರು. ನಿನ್ನ ಮನೆ ಅನಿಷ್ಟ ಆ ಕೆಲಸ ನಿಲ್ಲಿಸು ಎಂದು ಪದೇ ಪದೇ ಹೇಳುತ್ತಿದ್ದರು. ಆಕೆಗೂ ಮಾನಸಿಕವಾಗಿ ಕಿರಿ ಕಿರಿ ಅನ್ನಿಸುತ್ತಿತ್ತು. ಯಾರೋ ಹೇಳಿದ್ದು ಕೇಳಿ ಊರ ಹೊರವಲಯಕ್ಕೆ ಬಂದಿದ್ದ ಆ ಮಹಾತ್ಮರನ್ನು ಭೇಟಿ ಮಾಡಲು ಬಂದಳು ತನ್ನ ನಾದಿನಿ, ಸೊಸೆ, ಅತ್ತೆ, ಭಾವಂದಿರೊಂದಿಗೆ. ಕಾರು ಅವರ ಆಶ್ರಮದ ಸಮೀಪ ನಿಂತಿತು. ಭಾವ ಹೇಳಿಯೇ ಬಿಟ್ಟರು “ನಿನಗೆ ಹುಚ್ಚು ಇವರೆಲ್ಲ ಕಳ್ಳ ಸನ್ಯಾಸಿಗಳು ಇವರಿಂದ ಏನು ನಿರೀಕ್ಷಿಸುತ್ತಿ?” ಎಂದು. “ಇರ್ಲಿ ಭಾವ ನೋಡೋಣ” ಎಂದು ಆಶ್ರಮ ಪ್ರವೇಶಿಸಿದರು. ಅಲ್ಲಿ ಮಹಾತ್ಮರ ಬಳಿ ತನ್ನ ಎಲ್ಲಾ ನೋವನ್ನೂ…
ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ ‘ಪ್ರಜಾಸತ್ತಾತ್ಮಕ ಜವಾಬ್ದಾರಿಯ ಕಲಿಕೆ: ಕೋಟ್ಯಾನ್
ವಿದ್ಯಾಗಿರಿ: ‘ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಜವಾಬ್ದಾರಿ ಮೂಡಿಸುವುದು ಯುವ ಸಂಸತ್ತಿನ ಆಶಯ’ ಎಂದು ಶಾಸಕ ಉಮಾನಾಥ್.ಏ.ಕೋಟ್ಯಾನ್ ಹೇಳಿದರು. ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಇಲ್ಲಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ‘ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಸಮಾಜದ ಅಭಿವೃದ್ಧಿ ನಿಟ್ಟಿನಲ್ಲಿ ಶಾಸನಗಳನ್ನು ಅನುμÁ್ಠನಗೊಳಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಮುಖ್ಯವಾಗಿ ಮಾಡಬೇಕು’ ಎಂದರು ‘ಸದ್ಯದ ಸ್ಥಿತಿಗತಿಯಲ್ಲಿ ನೋಟಿನ ಮೂಲಕ ವೋಟನ್ನು ವಿನಿಮಯ ಮಾಡಿಕೊಳ್ಳುವ ತರಾತುರಿಯಲ್ಲಿ ಜನಪ್ರತಿನಿಧಿಗಳಿದ್ದಾರೆ. ಆದರೆ, ಜನಪ್ರತಿನಿಧಿಗಳು ಸಮಾಜಕ್ಕೆ ಮಾದರಿ ಕೆಲಸ ಮಾಡಬೇಕು ಎಂಬ ಆಶಯದಲ್ಲಿ ಮತದಾರರು ಮತ ಹಾಕಿರುತ್ತಾರೆ’ ಎಂದರು. ಜನಪ್ರತಿನಿಧಿ ತಮ್ಮ ಮತಕ್ಷೇತ್ರಕ್ಕೆ, ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದನ್ನು ಮಾಡಲಿ ಎಂಬುದು ಜನರ ಆಶಯ. ಅದಕ್ಕೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಈ ಈ ನಿಟ್ಟಿನಲ್ಲಿ ಯುವಜನತೆಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಅಧ್ಯಕ್ಷ ಡಾ.ಎಂ. ಮೋಹನ…
ಲೆಬನಾನ್ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಕೆಡೆಟ್ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ, ಸತಾರಾದ ಟೇಕ್ವಾಂಡೋ ಆಟಗಾರ್ತಿ ಪ್ರಿಶಾ ಶೆಟ್ಟಿ ಐತಿಹಾಸಿಕ ಪ್ರದರ್ಶನವನ್ನು ದಾಖಲಿಸಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಹೆಣ್ಣು ಮಕ್ಕಳ ವಿಭಾಗದಲ್ಲಿ ಮಹಾರಾಷ್ಟ್ರಕ್ಕೆ ಅಂತಾರಾಷ್ಟ್ರೀಯ ಪದಕ ಗೆದ್ದ ಮೊದಲ ಅಥ್ಲೀಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪ್ರಿಶಾ ಪಾತ್ರರಾಗಿದ್ದಾರೆ. ಪ್ರಿಶಾ ಶೆಟ್ಟಿ ಕಳೆದ 8-9 ವರ್ಷಗಳಿಂದ ಕರಾಡಿನ ಎ. ಅಗಶಿವನಗರ ಕ್ರೀಡಾ ಅಕಾಡೆಮಿಯಲ್ಲಿ ಪಿ.ಟೇಕ್ವಾಂಡೋ ತರಬೇತಿ ಪಡೆಯುತ್ತಿದ್ದು ಪ್ರಿಶಾಗೆ ಕೋಚ್ಗಳಾದ ಅಕ್ಷಯ್ ಖೇತ್ಮಾರ್ ಮತ್ತು ಅಮೋಲ್ ಪಾಲೇಕರ್ ಮಾರ್ಗದರ್ಶನ ನೀಡುತ್ತಿದ್ದಾರೆ. ಅಂತರಾಷ್ಟ್ರೀಯ ಸ್ಪರ್ಧೆ ಮುಗಿದ ನಂತರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ರಾಜ್ಯದ ಅನೇಕ ಟೇಕ್ವಾಂಡೋ ತರಬೇತುದಾರರು ಮತ್ತು ಕ್ರೀಡಾಪಟುಗಳು ಪ್ರಿಶಾ ಅವರನ್ನು ಅಭಿನಂದಿಸಿ ಸ್ವಾಗತಿಸಿದರು. ಮುಂಬೈನಿಂದ ಸತಾರಾಗೆ ಪ್ರಯಾಣ ಬೆಳೆಸಿದ ಪ್ರಿಶಾ ಶೆಟ್ಟಿ ಅವರನ್ನು ಮುಂಬೈ, ರಾಯಗಡ, ಪನ್ವೇಲ್, ಪುಣೆ, ಲೋನಾವಾಲ, ಕರಾಡ್, ಸತಾರಾದಲ್ಲಿ ಸ್ವಾಗತಿಸಿ ಗೌರವಿಸಲಾಯಿತು. ಭಾರತದ ಟೇಕ್ವಾಂಡೋ ಅಧ್ಯಕ್ಷ ನಾಮದೇವ್ ಶಿರಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ಭಾರತ…
ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯ ಅರಿವನ್ನು ಮೂಡಿಸುವುದರೊಂದಿಗೆ ಆಟಿ ತಿಂಗಳಲ್ಲಿ ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಹೇಗೆ ಬದುಕುತ್ತಿದ್ದರು ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ತುಳುನಾಡಿನ ಮಹಿಳೆಯರು ಎಲ್ಲ ಕಷ್ಟಗಳನ್ನು ನಿಭಾಯಿಸಿ ಸಂಸಾರವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು ಎಂದು ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಮಾಜಿ ಉಪ ಕಾರ್ಯಧ್ಯಕ್ಷೆ ಮನೋರಮಾ ಎನ್. ಬಿ. ಶೆಟ್ಟಿ ಅವರು ನುಡಿದರು. ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ ಕೋಪರ್ ಇದರ ಮಹಿಳಾ ವಿಭಾಗದ ವತಿಯಿಂದ ಸಂಘದ ಮಹೇಶ್ ಶೆಟ್ಟಿ ಬಾಬಾಸ್ ಗ್ರೂಪ್ ಸಭಾಗೃಹದಲ್ಲಿ ಜರಗಿದ ಜನ್ಮಭೂಮಿಡ್ ಆನಿದ ಆಟಿ ಕರ್ಮ ಭೂಮಿಡ್ ಇನಿ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ ಕೋಪರ್ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಜಲಾ ಎ. ಶೆಟ್ಟಿ ಅವರ ನೇತೃತ್ವದಲ್ಲಿ ಇಂತಹ ವಿಶಿಷ್ಟವಾದ ಕಾರ್ಯಕ್ರಮಗಳೊಂದಿಗೆ ಮಹಿಳೆಯರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು. ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದ ಉಪ…
ಬೇಸಗೆ ರಜೆ ಮುಗಿದು ಶಾಲೆಗಳು ಪುನರಾರಂಭಗೊಂಡು ತಿಂಗಳು ಕಳೆದಿವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ವಿದ್ಯಾರ್ಥಿಗಳು ಹೇಗೆ ಹೆಚ್ಚಿನ ಅಂಕಗಳನ್ನು ಗಳಿಸುವುದು ಎಂದು ಮನದಲ್ಲಿಯೇ ಯೋಚಿಸುತ್ತಿದ್ದರೆ, ತಮ್ಮ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸುವಂತೆ ಮಾಡುವುದು ಹೇಗೆ? ಎಂಬ ಚಿಂತನೆಯಲ್ಲಿ ಮುಳುಗಿದ್ದಾರೆ ಶಿಕ್ಷಕರು. ಅಂತೂ ಇಂದಿನ ಶಿಕ್ಷಣ ಪದ್ಧತಿ ಅಂಕ ಆಧಾರಿತವಾಗಿದ್ದು ಹೆಚ್ಚು ಅಂಕ ಗಳಿಸುವವನು ತ್ರಿವಿಕ್ರಮ, ಗಳಿಸದವನು ಮಂಕುತಿಮ್ಮ ಎನ್ನುವಂತಾಗಿದೆ. ಅಂಕಪಟ್ಟಿಯೇ ವಿದ್ಯಾರ್ಥಿಯೋರ್ವನ ಬುದ್ಧಿಮತ್ತೆ, ಸೃಜನಶೀಲತೆ, ಸೌಜನ್ಯ, ಕೌಶಲಗಳ ಪುರಾವೆಯೆಂದು ಪರಿಗಣಿಸಲ್ಪಟ್ಟಿದೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಚಟುವಟಿಕೆಗಳು ಅಂಕ ಕೇಂದ್ರಿತವಾಗಿರುತ್ತವೆ. ಅಂಕ ವ್ಯವಸ್ಥೆ ಇರಬೇಕು ನಿಜ. ಆದರೆ ಎಲ್ಲವನ್ನೂ ಅಂಕಗಳಿಂದಲೇ ಅಳೆಯಲಾಗದು. ಅಷ್ಟೇ ಅಲ್ಲದೆ ನಿರ್ದಿಷ್ಟ ಅಂಕಗಳನ್ನು ಕೊಡಲಾಗದ ಕೆಲವು ವಿದ್ಯೆಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಸ್ವಾವಲಂಬನೆ, ಸ್ವೋದ್ಯೋಗಗಳ ಬಗ್ಗೆ ಆಸಕ್ತಿ ಕಡಿಮೆಯಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರಿದರೆ ಸಮಾಜಕ್ಕೆ ಮಂಕುಕವಿದೇ ಕವಿಯುತ್ತದೆ. ಹಾಗಾದರೆ ಇದನ್ನು ಪರಿಹರಿಸುವ ಮಾರ್ಗವೇನು? ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು…